Tag: grand son

  • ಅಪಘಾತಕ್ಕೀಡಾಗಿ ಮೃತಪಟ್ಟ ಅಜ್ಜಿ ಪ್ರಕರಣಕ್ಕೆ ಟ್ವಿಸ್ಟ್- ಮೊಮ್ಮಗನಿಂದಲೇ ಕೊಲೆ!

    ಅಪಘಾತಕ್ಕೀಡಾಗಿ ಮೃತಪಟ್ಟ ಅಜ್ಜಿ ಪ್ರಕರಣಕ್ಕೆ ಟ್ವಿಸ್ಟ್- ಮೊಮ್ಮಗನಿಂದಲೇ ಕೊಲೆ!

    ಬಾಗಲಕೋಟೆ: ಆಗಸ್ಟ್ 20 ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಕ್ಕೂರು ಕ್ರಾಸ್ ಬಳಿ ಬೈಕಿಗೆ, ಕಾರು ಡಿಕ್ಕಿಯಾಗಿ ಬೈಕ್‍ನಲ್ಲಿದ್ದ ಅಜ್ಜಿ ಸಾವನ್ನಪ್ಪಿದ್ದು ಸುದ್ದಿಯಾಗಿತ್ತು. ಆದರೆ ಆ ಅಪಘಾತ ಪ್ರಕರಣಕ್ಕಿಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಬಾಗಲಕೋಟೆ (Bagalkote) ಜಿಲ್ಲೆಯ ಮುಧೋಳ ತಾಲೂಕಿನ ಜಕ್ಕೂರು ಕ್ರಾಸ್ ಬಳಿ ನಡೆದಿದ್ದ ಅಪಘಾತ ಉದ್ದೇಶ ಪೂರ್ವಕವಾಗಿ ನಡೆದ ಕೊಲೆ ಎಂದು ಗೊತ್ತಾಗಿದೆ.

    ಹೌದು. ಆಗಸ್ಟ್ 20ರ ರಾತ್ರಿ 8 ಗಂಟೆ ಸುಮಾರಿಗೆ ಜಕ್ಕೂರು ಕ್ರಾಸ್ ಬಳಿ ಬೈಕಿಗೆ ಕಾರು (Bike- Car Accident) ಡಿಕ್ಕಿಯಾಗಿ ಬೈಕ್ ಹಿಂಬದಿ ಕೂತಿದ್ದ ತಾಯವ್ವ ಅರಕೇರಿ (68) ಎಂಬ ವೃದ್ಧೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೇ ತಾಯವ್ವ ಆಗಸ್ಟ್ 28ರಂದು ಸಾವನ್ನಪ್ಪಿದ್ರು. ಆದರೆ ಅದು ಸಹಜ ಆಕ್ಸಿಡೆಂಟ್ ಅಲ್ಲ, ಉದ್ದೇಶ ಪೂರ್ವಕವಾಗಿ ನಡೆದ ಕೊಲೆ ಎಂದು ಮೃತ ಅಜ್ಜಿಯ ಸಂಬಂಧಿಕ ಮಂಜುನಾಥ್ ಉದಗಟ್ಟಿ ಎಂಬವರು ಲೋಕಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ರು.

    ಅಜ್ಜಿಯ ಕೊಲೆಗೆ ಮೊಮ್ಮಗನೇ ಸ್ಕೆಚ್ ರೂಪಿಸಿದ್ದ ಎಂದು ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಲೋಕಾಪುರ ಪೊಲೀಸರು, ಮೃತ ಅಜ್ಜಿಯ ಮೊಮ್ಮಗ (ಮಗನ ಮಗ) ದುಂಡಪ್ಪ ಅರಕೇರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ವಿಚಾರಣೆ ವೇಳೆ ದುಂಡಪ್ಪ ಅರಕೇರಿ, ಅಜ್ಜಿಯ ಸಾವಿಗೆ ನಾನೇ ಕಾರಣ ಎಂದು ಒಪ್ಪಿಕೊಂಡಿದ್ದಾನೆ. ಇದ್ರಿಂದ ಅಜ್ಜಿಯ ಸಾವಿಗೆ ಮೊಮ್ಮಗನೇ ಕಾರಣ ಎಂದು ಲೋಕಾಪುರ ಪೊಲೀಸರು ಆರೋಪಿ ದುಂಡಪ್ಪ ಹಾಗೂ ಈತನ ಸಹಚರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಕೊಲೆಗೆ ಕಾರಣವೇನು..?; ತಾಯವ್ವ ಹಾಗೂ ಆರೋಪಿ ಮೊಮ್ಮಗ ದುಂಡಪ್ಪ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಖಜ್ಜಿಡೋಣಿ ಗ್ರಾಮದವರಾಗಿದ್ದಾರೆ. ಅಜ್ಜಿ ಹಾಗೂ ಮೊಮ್ಮಗನ ನಡುವೆ ಆಸ್ತಿ ಹಾಗೂ ಬೋರ್ ವೆಲ್ ಮೋಟಾರ್ ವಿವಾದವಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೋರ್ಟ್ ನಲ್ಲಿ ತಾಯವ್ವ ಪರ ತೀರ್ಪು ಬಂದಿತ್ತು, ಆದರೆ ಮೊಮ್ಮಗ ದುಂಡಪ್ಪ, ಅಜ್ಜಿ ತಾಯವ್ವಗೆ ಬೋರ್ ವೆಲ್ ಮೋಟಾರು ವೈರ್ ಕೊಡಲು ನಿರಾಕರಿಸಿದ್ದ. ಆಗ ಮೃತ ಅಜ್ಜಿ ತಾಯವ್ವ ಕೆಲ ದಿನಗಳ ಹಿಂದೆ ಲೋಕಾಪುರ ಠಾಣೆಯಲ್ಲಿ ದೂರು ನೀಡಿದ್ದಳು. ಇದನ್ನೂ ಓದಿ: ಒಂಟಿ ಮನೆ ಟಾರ್ಗೆಟ್ ಮಾಡಿ ಗೃಹಿಣಿ ಮೇಲೆ ಹಲ್ಲೆ – ಮಗುವಿನ ಚಿಕಿತ್ಸೆಗಿಟ್ಟಿದ್ದ ಹಣದೊಂದಿಗೆ ದರೋಡೆಕೋರ ಪರಾರಿ

    ಆಗ ಪೊಲೀಸರು ಕೊಲೆ ಆರೋಪಿ ಗುಂಡಪ್ಪನನ್ನು ಕರೆದು ಮೋಟಾರ್ ವೈರ್ ಕೊಡಲು ಹೇಳಿದ್ದರು. ಪೊಲೀಸರ ಎದುರು ಮೋಟಾರ್ ವೈರ್ ಕೊಡಲು ಒಪ್ಪಿಕೊಂಡಿದ್ದ ದುಂಡಪ್ಪ, ನಂತರ ತಾಯವ್ವ ಹಾಗೂ ಆಕೆಯ ಮಗ ಶ್ರೀಧರ ಬೈಕಿನಲ್ಲಿ ಹೋಗುವಾಗ ಕಾರನ್ನ ಬೈಕಿಗೆ ಜೋರಾಗಿ ಡಿಕ್ಕಿ ಹೊಡೆಸಿದ್ದ. ಅಪಘಾತದಲ್ಲಿ ವೃದ್ದೆ ತಾಯವ್ವಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೃದ್ಧೆ ತಾಯವ್ವ ಸಾವನ್ನಪ್ಪಿದ್ದರು.

    ಅಪಘಾತದಲ್ಲಿ ಸಂಶಯವಿದೆ ಎಂದು ಸೆಪ್ಟೆಂಬರ್ 5 ರಂದು ತಾಯವ್ವಳ ಸಂಬಂಧಿಕ ಮಂಜುನಾಥ ಉದಗಟ್ಟಿ ದೂರು ನೀಡಿದ್ರು. ದೂರಿನ ಮೇರೆಗೆ ಲೋಕಾಪುರ ಠಾಣಾ ಪೊಲೀಸರು ಆರೋಪಿ ದುಂಡಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಸದ್ಯ ಕೊಲೆ ಆರೋಪಿ ದುಂಡಪ್ಪ ನನ್ನು ಬಂಧಿಸಿರುವ ಲೋಕಾಪುರ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!

    ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!

    ತುಮಕೂರು: ಅಜ್ಜಿಯ ಆಸ್ತಿ (Grand Mother Property) ಯನ್ನು ಲಪಟಾಯಿಸಲು ಹೊಂಚು ಹಾಕಿದ ಮೊಮ್ಮಗನೋರ್ವ ಸ್ವಂತ ಅಜ್ಜಿಯನ್ನು ಮನೆಯಿಂದ ಹೊರಹಾಕಿದ ಪರಿಣಾಮ ಇದೀಗ ತಾನೇ ಮನೆಯಿಂದ ಹೊರಬಿದ್ದ ಪ್ರಸಂಗವೊಂದು ನಡೆದಿದೆ.

    ತುಮಕೂರು ಕೊರಟಗೆರೆ ಪಟ್ಟಣದ 3 ನೇ ವಾರ್ಡ್ ನಲ್ಲಿ ಘಟನೆ ನಡೆದಿದೆ. 80 ವರ್ಷದ ವೃದ್ಧೆ ಕಾವಲಮ್ಮಳನ್ನು ಮೊಮ್ಮಗ ಮಾರುತಿ ಮನೆಯಿಂದ ಹೊರಹಾಕಿದ್ದಾನೆ. ಮಾರುತಿ ಹಾಗೂ ಆತನ ತಾಯಿ ಲಕ್ಷ್ಮಮ್ಮ ಅಜ್ಜಿ ಕಾವಲಮ್ಮ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್‌ರಿಂದ 5ನೇ ಬಾರಿಯ ಬಜೆಟ್ – ಭಾರೀ ನಿರೀಕ್ಷೆಯಲ್ಲಿ ನಾಗರಿಕರು

    ಕಳೆದ 8 ತಿಂಗಳ ಹಿಂದೆ ಲಕ್ಷ್ಮಮ್ಮ ಕ್ಯಾನ್ಸರ್ (Cancer) ನಿಂದ ಸಾವನಪ್ಪಿದ್ದಳು. ಲಕ್ಷ್ಮಮ್ಮ ಮೃತಪಟ್ಟ ಬಳಿಕ ಮೊಮ್ಮಗ ಮಾರುತಿ, ಅಜ್ಜಿ ಕಾವಲಮ್ಮಳನ್ನು ಹೊರಹಾಕಿದ್ದಾನೆ. ಕಳೆದ 8 ತಿಂಗಳಿಂದ ವೃದ್ಧೆ ಕಾವಲಮ್ಮ ಪರರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಇತ್ತ ಸಂಬಂಧಿಕರು ಮಾರುತಿ ವಿರುದ್ಧ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಎಸಿ ರಿಶಿ ಆನಂದ್ (Madhugiri AC), ಬಳಿಕ ಪಾಪಿ ಮೊಮ್ಮಗನಿಂದ ವೃದ್ಧೆಗೆ ಮನೆ ಬಿಡಿಸಿಕೊಡುವಂತೆ ಎಸಿ ಆದೇಶ ಹೊರಡಿಸಿದ್ದಾರೆ.

    ಎಸಿ ಆದೇಶದಂತೆ ಅಧಿಕಾರಿಗಳು ಮಾರುತಿಯನ್ನ ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇದೀಗ ತಹಶೀಲ್ದಾರ್ ಹಾಗೂ ಪೊಲೀಸರ ಸಮಕ್ಷಮದಲ್ಲಿ ವೃದ್ಧೆ ಕಾವಲಮ್ಮ ತನ್ನ ಮನೆ ಸೇರಿದ್ದಾರೆ. ಇದೀಗ ಎಸಿ ಆದೇಶಕ್ಕೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕತ್ತು ಸೀಳಿ ಕೊಲೆಗೈದು ಅಜ್ಜಿಯ ಅಂಗಾಂಗಗಳನ್ನು ರೂಮಿನಲ್ಲಿ ಹರಡಿದ ಪಾಪಿ!

    ಕತ್ತು ಸೀಳಿ ಕೊಲೆಗೈದು ಅಜ್ಜಿಯ ಅಂಗಾಂಗಗಳನ್ನು ರೂಮಿನಲ್ಲಿ ಹರಡಿದ ಪಾಪಿ!

    – ತಂದೆ-ತಾಯಿಗೆ ಕರೆ ಮಾಡಿ ತಿಳಿಸಿದ
    – ಮನೆಯಲ್ಲೇ ರಕ್ತದ ಮಡುವಿನಲ್ಲಿ ಕುಳಿತಿದ್ದ

    ಮುಂಬೈ: 25 ವರ್ಷದ ಪಾಪಿ ಮೊಮ್ಮಗನೊಬ್ಬ ತನ್ನ ಅಜ್ಜಿಯ ಕತ್ತು ಸೀಳಿ ಕೊಲೆ ಮಾಡಿದ್ದಲ್ಲದೇ ಆಕೆಯ ದೇಹದ ಅಂಗಾಂಗಗಳನ್ನು ಕೋಣೆಯ ತುಂಬಾ ಹರಡಿ ವಿಕೃತಿ ಮೆರೆದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

    ಆರೋಪಿಯನ್ನು ಕ್ರಿಸ್ಟೋಫರ್ ಡಯಾಸ್ ಎಂದು ಗುರುತಿಸಲಾಗಿದೆ. ಈತ ಸೋಮವಾರ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಬಳಿಕ ತನ್ನ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರಿಸ್ಟೋಫರ್ ಪೋಷಕರು ಇಸ್ರೆಲ್ ನಲ್ಲಿ ನೆಲೆಸಿದ್ದಾರೆ. ಈತ ಪುನರ್ವಸತಿ ಕೇಂದ್ರದಿಂದ ವಾಪಸ್ಸಾದ ಬಳಿಕ ಅಜ್ಜಿ ಜೊತೆ ವಾಸವಾಗಿದ್ದನು ಎಂಬುದಾಗಿ ವರದಿಯಾಗಿದೆ.

    80 ವರ್ಷದ ರೋಸಿ, ಊಟಕ್ಕೆ ಬಂದಿದ್ದ ತನ್ನ ಸಂಬಂಧಿಕರಲ್ಲಿ ಡಯಾಸ್ ಜೊತೆ ಮಾತನಾಡಬಾರದೆಂದು ಹೇಳಿದ್ದಾರೆ. ಬಹುಶಃ ಡಯಾಸ್ ಡ್ರಗ್ಸ್ ವ್ಯಸನಿಯಾಗಿದ್ದರಿಂದ ರೋಸಿ ಈ ರೀತಿ ಹೇಳಿರಬಹುದು. ಊಟ ಮುಗಿಸಿ ಮಲಗಿದ್ದ ವೇಳೆ ಮಧ್ಯರಾತ್ರಿ ಸುಮಾರಿಗೆ ಡಯಾಸ್ ಚಾಕುವಿನಿಂದ ಅಜ್ಜಿಯ ಶಿರಚ್ಚೇದ ಮಾಡಿದ್ದಾನೆ. ಆಕೆಯ ದೇಹ ಅಂಗಾಂಗಗಳನ್ನು ಕೋಣೆಯಾದ್ಯಂತ ಹರಡಿದ್ದಾನೆ. ನಂತರ ಗೋವಾ ಭೇಟಿಯಲ್ಲಿದ್ದ ತನ್ನ ಪೋಷಕರಿಗೆ ಕರೆ ಮಾಡಿ ಅಜ್ಜಿಯನ್ನು ಹತ್ಯೆ ಮಾಡಿರುವ ಬಗ್ಗೆ ತಿಳಿಸಿದ್ದಾನೆ.

    ಕೂಡಲೇ ಆತನ ತಂದೆ ಮುಂಬೈಗೆ ದೌಡಾಯಿಸಿದ್ದಾರೆ. ಈ ವೇಳೆ ಮನೆಯಲ್ಲಿಯೇ ಆರೋಪಿ ಡಯಾಸ್ ರಕ್ತದ ಮಡುವಿನಲ್ಲಿ ಕುಳಿತಿದ್ದನು. ಕೂಡಲೇ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಂತೆಯೇ ವಿಚಾರ ಅರಿತ ಕೂಡಲೇ ಪೊಲೀಸರು ಕೂಡ 10.15ರ ಸುಮಾರಿಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

    ಘಟನೆ ಸಂಬಂಧ ಕ್ರಸ್ಟೋಫರ್ ಡಯಾಸ್ ವಿರುದ್ಧ ಕೊಲೆ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

  • ಅಜ್ಜಿಯ ಎದುರೇ ಮೃತಪಟ್ಟ ಮೊಮ್ಮಗ

    ಅಜ್ಜಿಯ ಎದುರೇ ಮೃತಪಟ್ಟ ಮೊಮ್ಮಗ

    ಯಾದಗಿರಿ: ಅಜ್ಜಿಯ ಮುಂದೆಯೇ ಮೊಮ್ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಯಾದಗಿರಿಯಲ್ಲಿ ಮಂಗಳವಾರ ನಡೆದಿದೆ.

    ಮಹಮ್ಮದ್ ಮುಬಾರಕ್(5) ಮೃತಪಟ್ಟ ಬಾಲಕ. ಜಿಲ್ಲೆಯ ಶಹಾಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ನೂರಬೇಗಂ ಎಂಬವರು ತಮ್ಮ 5 ವರ್ಷದ ಮೊಮ್ಮಗ ಮಹಮ್ಮದ್ ಮುಬಾರಕ್ ಜೊತೆ ರಸ್ತೆ ದಾಟುತ್ತಿದ್ದರು.

    ಅದೇ ರಸ್ತೆ ಪಕ್ಕದಲ್ಲಿ ಕೆಎಸ್‍ಆರ್ ಟಿಸಿ ಬಸ್ಸೊಂದು ನಿಂತಿತ್ತು. ಅಜ್ಜಿ ಮತ್ತು ಮೊಮ್ಮಗ ರಸ್ತೆ ದಾಟುತ್ತಿರುವುದನ್ನು ಗಮನಿಸದ ಚಾಲಕ ಏಕಾಏಕಿ ಬಸ್ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಿಸಿದ್ದಾನೆ. ಇದರಿಂದ ಮೊಮ್ಮಗ ಮತ್ತು ಅಜ್ಜಿ ಬಸ್ ಚಕ್ರಕ್ಕೆ ಸಿಲುಕಿದ್ದಾರೆ.

    ಬಾಲಕ ಮಹಮ್ಮದ್ ಮುಬಾರಕ್ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದು, ನೂರಬೇಗಂಗೆ ಗಂಭೀರ ಗಾಯಾಗಳಾಗಿದೆ. ಸದ್ಯ ನೂರಬೇಗಂರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಬೋರ್ಡ್ ನಲ್ಲಿ ಅಜ್ಜಿಯ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಕಬೋರ್ಡ್ ನಲ್ಲಿ ಅಜ್ಜಿಯ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಬೆಂಗಳೂರು: ಯುವಕನೊಬ್ಬ ತನ್ನ ಅಜ್ಜಿಯನ್ನ ಕೊಲೆಗೈದು ಹೆಣವನ್ನ ಕಬೋರ್ಡ್ ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ.

    ತಂದುಕೊಟ್ಟ ಊಟ ತಿಂದಿಲ್ಲ ಅಂತ ಮೊಮ್ಮಗ ಅಜ್ಜಿಯನ್ನ ಕೊಂದಿದ್ದ ಎಂಬ ವಿಷಯ ಬಹಿರಂಗವಾಗಿದೆ. ತಂದು ಕೊಟ್ಟ ಊಟ ಬಿಸಾಡಿದಕ್ಕೆ ಮೊಮ್ಮಗ ರಾಡಿನಿಂದ ಹೊಡೆದು ಅಜ್ಜಿಯನ್ನ ಕೊಲೆಗೈದಿದ್ದ. ಏಳು ತಿಂಗಳ ಕಾಲ ಶವ ಇದ್ದ ರೂಂನಲ್ಲೇ ಮಲಗುತ್ತಿದ್ದ. ನಂತರ ವಾಸನೆ ಬಂದಿದ್ದಕ್ಕೆ ಮನೆ ಖಾಲಿ ಮಾಡಿದ್ದ ಎಂದು ತಿಳಿದುಬಂದಿದೆ.

    ಆಗಸ್ಟ್ ನಲ್ಲಿ ಅಜ್ಜಿಯನ್ನ ಕೊಲೆ ಮಾಡಿ ಕಬೋರ್ಡ್‍ನಲ್ಲಿ ಇಟ್ಟಿದ್ದ. ಫೆಬ್ರವರಿಯಲ್ಲಿ ವಾಸನೆ ಬಂದ ಬಳಿಕ ಮನೆ ಬಿಡೋ ಚಿಂತನೆ ಮಾಡಿದ್ದ. ಕೊಲೆ ಮಾಡಿದ ಸಂಜಯ್ ಸ್ನೇಹಿತನಿಂದ ಈ ಮಾಹಿತಿ ಬಹಿರಂಗವಾಗಿದೆ. ಸದ್ಯ ಸಂಜಯ್ ಮತ್ತು ಆತನ ತಾಯಿ ಶಶಿಕಲಾಗಾಗಿ ಕೆಂಗೇರಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

    ಕೆಂಗೇರಿಯಲ್ಲಿ ನವೀನ್ ಎಂಬವರ ಬಾಡಿಗೆ ಮನೆಯಲ್ಲಿ ಸಂಜಯ್ ವಾಸವಿದ್ದ. ಮನೆಯಲ್ಲಿ ತಾಯಿ, ಮಗ ಹಾಗೂ ಅಜ್ಜಿ ಮೂರು ಜನ ವಾಸವಿದ್ರು. ಆದ್ರೆ ಫೆಬ್ರವರಿಯಲ್ಲಿ ಸಂಜಯ್ ನವೀನ್‍ರಿಂದಲೇ 50 ಸಾವಿರ ರೂ. ಸಾಲ ಪಡೆದು ಊರಿಗೆ ಹೋಗ್ತಿದ್ದೇನೆಂದು ಹೇಳಿ ತನ್ನ ತಾಯಿ ಶಶಿಕಲಾ ಜೊತೆ ತಲೆಮರೆಸಿಕೊಂಡಿದ್ದ. ಪರಾರಿಯಾದ ಬಳಿಕ ಮತ್ತೆ ಮನೆಯ ಕಡೆ ಸಂಜಯ್ ಕುಟುಂಬ ಹಿಂತಿರುಗಿರಲಿಲ್ಲ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮನೆಯ ಅಗ್ರಿಮೆಂಟ್ ಮುಗಿದ ಬಳಿಕ ಮಾಲೀಕ ನವೀನ್ ಮನೆಯೊಳಗೆ ಹೋಗಿದ್ರು. ನಂತರ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ರು. ನಂತರ ಪೊಲೀಸರು ಪರಿಶೀಲನೆ ನಡೆಸಿದಾಗ ರೂಮಿನಲ್ಲಿದ್ದ ಡ್ರಂನ ಒಳಗಿದ್ದ ಮತ್ತೊಂದು ಡ್ರಂನಲ್ಲಿ ರಕ್ತದ ಕಲೆಯ ಬಟ್ಟೆಗಳು ಪತ್ತೆಯಾಗಿತ್ತು. ಕಬೋರ್ಡ್ ಒಳಗಿನ ಕೆಳಗಿನ ಭಾಗದಲ್ಲಿ ಕೊಳೆತ ದೇಹ ಪತ್ತೆಯಾಗಿತ್ತು. ಕಬೋರ್ಡ್ ತೆಗೆದು ನೋಡಿದಾಗ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಶವ ಅಜ್ಜಿಯದೇ ಎಂಬುದು ದೃಢವಾಗಿತ್ತು. ಶಿವಮೊಗ್ಗದಲ್ಲಿ ಇರುವ ಅಜ್ಜಿಯ ಸಂಬಂಧಿಕರಿಗೆ ಪೊಲೀಸರು ಈ ಬಗ್ಗೆ ವಿಷಯ ಮುಟ್ಟಿಸಿದ್ರು. ಆದ್ರೆ ಶವ ಸಂಸ್ಕಾರಕ್ಕೂ ಅಜ್ಜಿಯ ಶವ ಬೇಡ ಎಂದು ಸಂಬಂಧಿಕರು ಹೇಳಿದ್ರು.

    ಕೊಲೆ ಮಾಡಿದ ಬಳಿಕ ಕಾಲೇಜು, ಕೆಲಸ ಯಾವುದೇ ಪ್ರದೇಶದಲ್ಲೂ ಸಂಜಯ್ ಪತ್ತೆಯಾಗಿಲ್ಲವಾದ್ದರಿಂದ ಸಂಜಯ್‍ನೇ ಕೊಲೆ ಮಾಡಿ ನಾಪತ್ತೆಯಾಗಿರೋದು ದೃಢವಾಗಿತ್ತು. ಓದುತ್ತಿದ್ದ ಕಾಲೇಜಿನಲ್ಲೂ ಸಂಜಯ್ ಎರಡೆರಡು ವಿಳಾಸ ಬದಲು ಮಾಡಿದ್ದ. ಕುಟುಂಬದ ಕಷ್ಟ ಹೇಳಿ ಹಣ ಪಡೆದು ಮೋಸ ಮಾಡೋದು ಇವನ ಖಯಾಲಿಯಾಗಿತ್ತು. ಮನೆಯ ಮಾಲೀಕ ನವೀನ್‍ಗೆ ಐವತ್ತು ಸಾವಿರ ರೂ. ಮೋಸ ಮಾಡಿದ್ದು, ಕೆಲಸ ಮಾಡುವ ಜಾಗದಲ್ಲಿಯೂ ಮೋಸ ಮಾಡಿದ್ದ. ಮನೆಯಲ್ಲಿ ಕಷ್ಟ ಅಂತ ಹೇಳಿ ಗಿರಿನಗರದ ಕೃಷ್ಣಮೂರ್ತಿ ಎಂಬವರಿಂದ ಒಂದೂವರೆ ಲಕ್ಷ ರೂ. ಹಣ ಪಡೆದು ಪರಾರಿಯಾಗಿದಾನೆ. ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ಕೃಷ್ಣಮೂರ್ತಿ ಠಾಣೆಗೆ ಬಂದಾಗ ಸಂಜಯ್‍ನ ಮೋಸ ಬಯಲಾಗಿದೆ.