Tag: Grand Finale

  • ವೀಕೆಂಡ್ ವಿತ್ ರಮೇಶ್ ಮುಕ್ತಾಯ : ಡಿಕೆಶಿ ಎಪಿಸೋಡ್ ಲಾಸ್ಟ್

    ವೀಕೆಂಡ್ ವಿತ್ ರಮೇಶ್ ಮುಕ್ತಾಯ : ಡಿಕೆಶಿ ಎಪಿಸೋಡ್ ಲಾಸ್ಟ್

    ಶನಿವಾರ- ಭಾನುವಾರ ಪ್ರಸಾರವಾದರೆ ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ (Weekend with Ramesh) ಮುಕ್ತಾಯವಾಗಲಿದೆ. ಈ ಬಾರಿ ಅತೀ ವೇಗದಲ್ಲಿ ಈ ಕಾರ್ಯಕ್ರಮವನ್ನು ಮುಗಿಸಿದೆ ಜೀ ಕನ್ನಡ ವಾಹಿನಿ. ಮೊದಲ ಸೀಸನ್ ನಿಂದ ಈ ಸೀಸನ್ ವರೆಗೂ ಒಟ್ಟು 100 ಸಾಧಕರು ವೀಕೆಂಡ್ ಕುರ್ಚಿ ಮೇಲೆ ಕೂತು ತಮ್ಮ ಸಾಧನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ವೀಕೆಂಡ್ ಟೆಂಟ್ ನಲ್ಲಿ ಕೂತು ತಮ್ಮ ಬದುಕನ್ನು ರಿವೈಂಡ್ ಮಾಡಿ ನೋಡಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಪಿಸೋಡ್ ಮೂಲಕ  ಈ ಸೀಸನ್ ಮುಗಿಯಲಿದೆ.

    ಈಗಾಗಲೇ ಡಿಕೆಶಿ ಅವರ ಎಪಿಸೋಡ್ ನ ಪ್ರೊಮೋ ಕೂಡ ರಿಲೀಸ್ ಆಗಿದ್ದು, ಪ್ರೊಮೋನಲ್ಲೇ ‘ಗ್ರ್ಯಾಂಡ್ ಫಿನಾಲೆ’ (Grand Finale)ಎಂದು ಹಾಕಲಾಗಿದೆ.  ಸಾಧಕರ ಸೀಟಿನಲ್ಲಿ ಕುಳಿತಿರುವ ಡಿ.ಕೆ. ಶಿವಕುಮಾರ್ (D.K. Shivakumar) ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹಿರಣ್ಯ ಚಿತ್ರಕ್ಕೆ ನಾಯಕಿಯಾದ ಖಾಸಗಿ ಕಂಪೆನಿ ಉದ್ಯೋಗಿ ರಿಹಾನಾ

    ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ. ಈ ಕುರಿತ ಪ್ರೋಮೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ನಟ ರಮೇಶ್ ಅರವಿಂದ್ (Ramesh Aravind) ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್ ಮೇಲೆ ಕೂರಿಸಿಕೊಂಡು ಅವರ ಕಥೆ ಕೇಳಿದ್ದಾರೆ. ಡಿಕೆಶಿ ಕಥೆಯನ್ನು ಆಪ್ತರಿಂದ ಹೇಳಿಸಿದ್ದಾರೆ.

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್ ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಅವರ ಸಾಲಿಗೆ ಡಿ.ಕೆ ಶಿವಕುಮಾರ್ ಸೇರಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.

     

    ಈ ವಾರಾಂತ್ಯದಲ್ಲಿ ಡಿಕೆಶಿ ಅವರ ಎಪಿಸೋಡ್ ಅನ್ನು ಪ್ರಸಾರ ಮಾಡಲಾಗುತ್ತದೆ ಎಂಬ ಮಾಹಿತಿ ಇದ್ದು, ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಡಿಕೆಶಿ ಕಂತುಗಳನ್ನು ನೋಡಬಹುದಾಗಿದೆ. ಒಟ್ನಲ್ಲಿ ಡಿಕೆಶಿ ಅವರ ರಾಜಕೀಯ ಸಾಧನೆಯ ಕಥೆ ಕೇಳೋದ್ದಕ್ಕೆ ಡಿಕೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ದಿನಾಂಕ ಬಹಿರಂಗಪಡಿಸಿದ ಸುದೀಪ್

    ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ದಿನಾಂಕ ಬಹಿರಂಗಪಡಿಸಿದ ಸುದೀಪ್

    ಬಿಗ್ ಬಾಸ್ ಕನ್ನಡ 8ನೇ ಸೀಸನ್ ಕೊನೆಗೂ ಅಂತಿಮ ಹಂತ ತಲುಪಿದ್ದು, ಯಾರು ವಿನ್ನರ್ ಎಂಬ ಕಾತರ, ಕೌತುಕ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಇದಕ್ಕೆ ಹೆಚ್ಚು ದಿನ ಬಾಕಿ ಉಳಿದಿಲ್ಲ, ಇನ್ನು ಕೇವಲ 15 ದಿನಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರೆಂದು ತಿಳಿಯಬಹುದು.

    ಹೌದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ದಿನಾಂಕ ಪಕ್ಕಾ ಆಗಿದ್ದು, ಈ ಕುರಿತು ಸ್ವತಃ ಕಿಚ್ಚ ಸುದೀಪ್ ಅವರು ಖಚಿತಪಡಿಸಿದ್ದಾರೆ. ಇಂದು ವಾರದ ಕತೆ ಕಿಚ್ಚ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಫಿನಾಲೆ ದಿನಾಂಕವನ್ನು ಬಹಿರಂಗಪಡಿಸಿದ್ದು, ಇವತ್ತಿಗೆ ಅಂದರೆ ಶನಿವಾರದಿಂದ 15ನೇ ದಿನಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ. ಅಂದರೆ ಪರೋಕ್ಷವಾಗಿ ಆಗಸ್ಟ್ 8ರಂದು ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ.

    ಇವತ್ತಿನಿಂದ 15ನೇ ದಿನಕ್ಕೆ ಫಿನಾಲೆ ನಡೆಯಲಿದೆ, 9 ಜನ ಕಂಟೆಸ್ಟೆಂಟ್ಸ್ ಇನ್ನೂ ಮನೆಯಲ್ಲಿ ಇದ್ದಾರೆ. ಅದರಲ್ಲಿ 5 ಜನ ನಾಮಿನೇಟ್ ಆಗಿದ್ದಾರೆ. ಇವತ್ತು ಉಳಿದುಕೊಂಡವರು ಫಿನಾಲೆ ವೇದಿಕೆಯ ಮೆಟ್ಟಿಲಿನವೆರೆಗೆ ಆಲ್‍ಮೋಸ್ಟ್ ಹೋದ ಹಾಗೆ ಎಂದು ಹೇಳಿದ್ದಾರೆ. ಈ ಮೂಲಕ ಫಿನಾಲೆ ಮುಹೂರ್ತವನ್ನು ಬಹಿರಂಗಪಡಿಸಿದ್ದಾರೆ. ಫಿನಾಲೆ ಸುಳಿವು ನೀಡಿ ಮತ್ತಷ್ಟು ಕಾತರತೆಯನ್ನು ಹೆಚ್ಚಿಸಿದ್ದಾರೆ.

    ಕಿಚ್ಚ ಸುದೀಪ್ ಹೀಗೆ ಹೇಳುತ್ತಿದ್ದಂತೆ ಬಿಗ್ ಬಾಸ್ ಫಿನಾಲೆ ಹೇಗೆ ನಡೆಯಲಿದೆ, ಸ್ವರೂಪ ಹೇಗಿರಲಿದೆ? ಯಾರ್ಯಾರು ಭಾಗವಹಿಸುತ್ತಾರೆ. ಎನ್ನೆಲ್ಲ ವಿಶೇಷತೆ ಇರುತ್ತೆ. ವಿನ್ನರ್ ಯಾರು, ರನ್ನರ್ ಯಾರು ಎಂಬೆಲ್ಲ ಕುತೂಹಲ ಅಭಿಮಾನಿಗಳಲ್ಲಿ ಮೂಡುತ್ತಿದೆ. ಆದರೆ ಕಾರ್ಯಕ್ರಮದ ಕುರಿತು ಸಂಪೂರ್ಣ ಚಿತ್ರಣ ಸಿಗಲು ಇನ್ನೂ ಕೆಲ ದಿನಗಳ ಕಾಲ ಕಾಯಲೇ ಬೇಕಿದೆ. ಆಗ ಮಾತ್ರ ಪಕ್ಕಾ ಮಾಹಿತಿ ಸಿಗಲಿದೆ.

    ಬಿಗ್ ಬಾಸ್ ಕನ್ನಡ 8ರ ಈ ಸೀಸನ್‍ನಲ್ಲಿ ತುಂಬಾ ವಿಶೇಷಗಳಿವೆ. ಇದರಲ್ಲಿ ಮೊದಲೆಯದು ಇದೇ ಮೊದಲ ಬಾರಿಗೆ ಸ್ಪರ್ಧಿಳು ಎರಡು ಇನ್ನಿಂಗ್ಸ್ ಆಡಿದ್ದಾರೆ. ಆರಂಭದಲ್ಲಿ ಕೊರೊನಾ ಕಾರಣದಿಂದ ಬಿಗ್ ಬಾಸ್ ಮೊಟಕುಗೊಂಡಿತ್ತು, ಬಳಿಕ ಮನೆಗೆ ತೆರಳಿದ್ದರು. ಮತ್ತೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೂಲಕ ಕಿಕ್ಕೇರಿಸುತ್ತಿದೆ. ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಸ್ಪರ್ಧಿಗಳು ಫುಲ್ ರೊಚ್ಚಿಗೆದ್ದು ಆಟವಾಡಿದ್ದಾರೆ. ಹೀಗಾಗಿ ಗೆಲ್ಲುವರ್ಯಾರು, ಟ್ರೋಫಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಹೆಚ್ಚಿದೆ. ಇದು ತಿಳಿಯಬೇಕಾದಲ್ಲಿ ಇನ್ನೂ ಕೆಲ ದಿನಗಳ ಕಾಲ ಕಾಯಲೇಬೇಕಿದೆ.

  • ಆಲ್‍ರೌಂಡರ್ ಶೈನ್ ಬಿಗ್ ಮನೆಯ ವಿನ್ನರ್

    ಆಲ್‍ರೌಂಡರ್ ಶೈನ್ ಬಿಗ್ ಮನೆಯ ವಿನ್ನರ್

    ಬೆಂಗಳೂರು: ಬಿಗ್‍ಬಾಸ್ ಕನ್ನಡ 7ರ ವಿನ್ನರ್ ಆಗಿ ಶೈನ್ ಶೆಟ್ಟಿ ಹೊರ ಹೊಮ್ಮಿದ್ದು, ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.

    ಬಿಗ್‍ಬಾಸ್ ವೇದಿಕೆಯಲ್ಲಿ ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಅವರ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದರು. ಇದೇ ವೇಳೆ ಸುದೀಪ್ ಬಲಕ್ಕೆ ನಿಂತಿದ್ದ ಪ್ರಬಲ ಸ್ಪರ್ಧಿ ಕುರಿ ಪ್ರತಾಪ್  ರನ್ನರ್ ಅಪ್ ಆದರು.

    18 ಬಿಗ್ ಸ್ಪರ್ಧಿಗಳಿಂದ ಆರಂಭವಾಗಿದ್ದ ಬಿಗ್ ಬಾಸ್ ಸೀಸನ್ 7ನಲ್ಲಿ ಅಂತಿಮ ವಾರದಲ್ಲಿ 5 ಸ್ಪರ್ಧಿಗಳು ಉಳಿದುಕೊಂಡಿದ್ದರು. 113 ದಿನಗಳನ್ನು ಕಳೆದಿರುವ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನಿಗದಿ ಪಡಿಸಿದ್ದ 50 ಲಕ್ಷ ರೂ. ಹಾಗೂ ಸಂಭಾವನಿ ಮೊತ್ತವಾಗಿ 11 ಸೇರಿ ಒಟ್ಟು 61 ಲಕ್ಷ ರೂ. ನೀಡಲಾಗಿದೆ. ಅದರೊಂದಿಗೆ ಬಿಗ್ ಬಾಸ್ ಸೀಸನ್ 7 ವಿನ್ನರ್ ಪಟ್ಟ ದೊರೆತಿದೆ. ಕುರಿ ಪ್ರತಾಪ್ ಅವರಿಗೆ ರನ್ನರ್ ಕಿರೀಟ ದೊರೆಯಲಿದೆ.

    ಶೈನ್, ವಾಸುಕಿ ಮತ್ತು ಕುರಿ ಪ್ರತಾಪ್ ಮಧ್ಯೆ ಭರ್ಜರಿ ಸ್ಪರ್ಧೆ ನಡೆದಿತ್ತು. ಟಾಪ್ 2ನಲ್ಲಿ ವಾಸುಕಿ ವೈಭವ್ ಇರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಭೂಮಿ, ದೀಪಿಕಾ ದಾಸ್ ಬಳಿಕ ಭಾನುವಾರದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಹೀಗಾಗಿ ವಾಸುಕಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

    ಕುರಿ ಪ್ರತಾಪ್ ಅವರು ತಮ್ಮ ಕಾಮಿಡಿ ಮೂಲಕ ಬಿಗ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಈ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡಿದ್ದಾರೆ. ಇತ್ತ ಶೈನ್ ಶೆಟ್ಟಿ ಅವರಿಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಬಿಗ್ ಪೈಟ್ ನಡೆದಿತ್ತು. ಕೊನೆಗೆ ಆಲ್‍ರೌಂಡರ್ ಶೈನ್ ಶೆಟ್ಟಿ ಬಿಗ್ ಬಾಸ್ ಕನ್ನಡ 7ರ ವಿನ್ನರ್ ಆಗಿ ಶೈನ್ ಶೆಟ್ಟಿ ಹೊರ ಹೊಮ್ಮಿದ್ದಾರೆ.

  • ಗ್ರ್ಯಾಂಡ್ ಫಿನಾಲೆಯಲ್ಲಿ ಭೂಮಿ ಔಟ್ – 1 ಲಕ್ಷ ಬಹುಮಾನ

    ಗ್ರ್ಯಾಂಡ್ ಫಿನಾಲೆಯಲ್ಲಿ ಭೂಮಿ ಔಟ್ – 1 ಲಕ್ಷ ಬಹುಮಾನ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಗ್ಯ್ರಾಂಡ್ ಫಿನಾಲೆಯಲ್ಲಿ ಮೊದಲನೆಯದಾಗಿ ಭೂಮಿ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ.

    ಶನಿವಾರ ಗ್ರ್ಯಾಂಡ್ ಫಿನಾಲೆಯಲ್ಲಿದ್ದ ಐವರಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಎಲಿಮಿನೇಟ್ ಆಗಿದ್ದಾರೆ. ಭೂಮಿ ಬಿಗ್‍ಬಾಸ್ ಮನೆಯಲ್ಲಿ ಕಿರಿಯ ಸದಸ್ಯರಾಗಿದ್ದರೂ ಒಳ್ಳೆಯ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಬಿಗ್‍ಬಾಸ್ ಯಾವುದೇ ಫಿಸಿಕಲ್ ಟಾಸ್ಕ್ ನೀಡಿದರೂ ಮನೆಯ ಗಂಡುಮಕ್ಕಳಿಗೂ ಕೂಡ ಕಾಂಪಿಟೇಶನ್ ಕೊಟ್ಟಿದ್ದರು.

    ಭೂಮಿ ಶೆಟ್ಟಿ ಕೊನೆಯ ಹಂತದವರೆಗೂ ಎಲ್ಲರ ಮನಗೆದ್ದು, ವೀಕ್ಷಕರಿಂದ ವೋಟ್ ಪಡೆದು ಫಿನಾಲೆ ತಲುಪಿದ್ದರು. ಗ್ಯ್ರಾಂಡ್ ಫಿನಾಲೆಯಲ್ಲಿ ಮೊದಲನೆಯದಾಗಿ ಎಲಿಮಿನೇಟ್ ಆಗಿದ್ದಾರೆ. ಭೂಮಿ ಶೆಟ್ಟಿ ಕೆಲವು ವಾರಗಳು ತುಂಬಾ ಸೈಲೆಂಟ್ ಆಗಿ ಇದ್ದರು. ಹೀಗಾಗಿ ಅವರು ಗೆಲ್ಲುವ ಅವಕಾಶ ಕಳೆದುಕೊಂಡರು ಎನ್ನಲಾಗಿದೆ.

    ಭೂಮಿ ಶೆಟ್ಟಿ ಎಲಿಮಿನೇಟ್ ಆಗಿ ಬಿಗ್‍ಬಾಸ್ ವೇದಿಕೆಯ ಮೇಲೆ ಬಂದು ಬಿಗ್‍ಬಾಸ್ ಮನೆಯಲ್ಲಿದ್ದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಭೂಮಿಗೆ ಅಯ್ಯಂಗಾರ್ ಪುಳಿಯೋಗರೆ ಮಾಲೀಕರು ಬಂದು ಒಂದು ಲಕ್ಷ ಬಹುಮಾನ ಕೊಟ್ಟಿದ್ದಾರೆ. ಇನ್ನೂ ವಾಸುಕಿ ವೈಭವ್, ಶೈನ್ ಶೆಟ್ಟಿ ಮತ್ತು ಕುರಿ ಪ್ರತಾಪ್ ಟಾಪ್ ಮೂರು ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಅವರ ಪೈಕಿ ಭಾನುವಾರದ ಫಿನಾಲೆ ಎಪಿಸೋಡ್‍ನ ಆರಂಭದಲ್ಲಿಯೇ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಆ ಇಬ್ಬರಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.