Tag: grand father

  • ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಪುಣೆ: ಪೋರ್ಶೆ ಕಾರು ಅಪಘಾತ (Pune Porsche crash) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಅಪ್ರಾಪ್ತನ ಅಜ್ಜನನ್ನು ಪುಣೆ ಪೊಲೀಸರು (Pune Police) ಇಂದು ಬಂಧಿಸಿದ್ದಾರೆ.

    ಸುರೇಂದ್ರ ಅಗರ್ವಾಲ್ ಬಂಧಿತ ಅಜ್ಜ. ಕಾರು ಅಪಘಾತ ಸಂದರ್ಭದಲ್ಲಿ ತಾನೇ ಪೋರ್ಶೆಯನ್ನು ಚಲಾಯಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಬೇಕು ಎಂದು ಚಾಲಕನಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುರೇಂದ್ರರನ್ನು ಬಂಧನ ಮಾಡಲಾಗಿದೆ.

    ಪುಣೆ ಕ್ರೈಂ ಬ್ರಾಂಚ್ ದಾಖಲಿಸಿದ ಹೊಸ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ಅವರನ್ನು ಅವರ ನಿವಾಸದಿಂದ ಮುಂಜಾನೆ 3 ಗಂಟೆಗೆ ಬಂಧಿಸಲಾಯಿತು. ಈ ಮೂಲಕ ಪುಣೆ ಪೋರ್ಶೆ ಅಪಘಾತ ಪ್ರಕರಣದಲ್ಲಿ ಇದು ಮೂರನೇ ಎಫ್‌ಐಆರ್ ಆಗಿದೆ.

    ಇದಕ್ಕೂ ಮೊದಲು ಸುರೇಂದ್ರ ಅಗರ್ವಾಲ್ ಅವರ ಮಗ ಮತ್ತು ಮೊಮ್ಮಗನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅಪಘಾತದ ದಿನದಂದು ನಡೆಸಿದ ಸಂಭಾಷಣೆಯನ್ನು ಬಯಲಿಗೆಳೆಯಲು ಪ್ರಶ್ನಿಸಿದ್ದರು. ಅಗರ್ವಾಲ್ ಮಾಲೀಕರಾಗಿದ್ದ ರಿಯಾಲ್ಟಿ ಸಂಸ್ಥೆಯ ಹೆಸರಿನಲ್ಲಿ ಪೋರ್ಶೆ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಹಣ ಪಾವತಿಸಿದ ಆರೋಪದ ಮೇಲೆ ಶೂಟೌಟ್ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

    ಏನಿದು ಪ್ರಕರಣ: ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು ಬೈಕ್‍ಗೆ ಡಿಕ್ಕಿಯಾಗಿ ಮಧ್ಯಪ್ರದೇಶ ಮೂಲದ ವರ್ಷದ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ (24) ಮತ್ತು ಅಶ್ವಿನಿ ಕೋಷ್ಟಾ ಅವರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಅಪ್ರಾಪ್ತನ ಬಳಿ ಪ್ರಬಂಧ ಬರೆಯುವಂತೆ ಸೂಚಿಸಿ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಪೋಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿದ್ದರು.

    ಸದ್ಯ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು, ಬಾಲಾಪರಾಧಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ಮತ್ತು ರಿಮಾಂಡ್ ಹೋಮ್ಗೆ ಕಳುಹಿಸಲು ಬಾಲನ್ಯಾಯ ಮಂಡಳಿಯ ಮುಂದೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.

  • ಅಜ್ಜ ಮೊಬೈಲ್ ಕೊಡಿಸಿಲ್ಲವೆಂದು ಯುವಕ ಆತ್ಮಹತ್ಯೆ

    ಅಜ್ಜ ಮೊಬೈಲ್ ಕೊಡಿಸಿಲ್ಲವೆಂದು ಯುವಕ ಆತ್ಮಹತ್ಯೆ

    ಚಿತ್ರದುರ್ಗ: ಅಜ್ಜ ಮೊಬೈಲ್ ಕೊಡಿಸದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ. ಕೊಳಾಳ್ ಗ್ರಾಮದ ಯಶವಂತ್ (20) ಮೃತ ಯುವಕ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಅಕ್ಟೋಬರ್ 8ರಂದು ಮಹಾಗಣಪತಿ ಶೋಭಾಯಾತ್ರೆ ನಡೆದಿತ್ತು. ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ಯಶವಂತ್ ಮೊಬೈಲ್ ಕಳೆದುಕೊಂಡಿದ್ದನು. ಹೀಗಾಗಿ ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಹಠ ಹಿಡಿದಿದ್ದನು. ಈ ವೇಳೆ ಅಜ್ಜ, ಈರುಳ್ಳಿ ಬೆಳೆ ಬಂದ ಬಳಿಕ ಮೊಬೈಲ್ ಕೊಡಿಸುವುದಾಗಿ ಹೇಳಿದ್ದರು. ಇದನ್ನೂ ಓದಿ: ಹಮಾಸ್‌ ಉಗ್ರರ ಕೃತ್ಯ ಖಂಡಿಸಿದ್ದಕ್ಕೆ ಬಹರೇನ್‌ನಲ್ಲಿ ಮಂಗಳೂರು ಮೂಲದ ವೈದ್ಯ ಅರೆಸ್ಟ್‌

    ಇದೀಗ ಅಜ್ಜ ಮೊಬೈಲ್ ಕೊಡಿಸಿಲ್ಲವೆಂದು ಯುವಕ ಅಕ್ಟೋಬರ್ 18ರಂದು ಮನೆಯಲ್ಲಿ ರಾಸಾಯನಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ವಿಷಯ ತಿಳಿದು ಸಂಬಂಧಿಕರು ಕೂಡಲೇ ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದರು. ಇದನ್ನೂ ಓದಿ: ಲೋಕ ಸಮರಕ್ಕೆ ತಿಹಾರ್ ಜೈಲ್ ವಾರ್- ಡಿಕೆ ಬ್ರದರ್ಸ್‍ನಿಂದ ತಿರುಗುಬಾಣ ಅಸ್ತ್ರ ಪ್ರಯೋಗ

    ಗುರುವಾರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಸಾಗಿಸುವ ಮಾರ್ಗಮಧ್ಯೆ ಯುವಕ ಸಾವನ್ನಪ್ಪಿದ್ದಾನೆ. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಳಿಯನಿಗೆ ಕೊಟ್ಟ ಹಣ ವಾಪಸ್ ಪಡೆಯಲು ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್

    ಅಳಿಯನಿಗೆ ಕೊಟ್ಟ ಹಣ ವಾಪಸ್ ಪಡೆಯಲು ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್

    ಕಾರವಾರ: ಅಳಿಯನಿಗೆ ಕೊಟ್ಟ ಹಣವನ್ನು ವಾಪಸ್ ಪಡೆಯಲು ಅಜ್ಜನೇ ಮೊಮ್ಮಗನನ್ನು ಅಪಹರಣ ಮಾಡಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಜಾದ್ ನಗರದಲ್ಲಿ ನಡೆದಿದೆ.

    ಇದೇ ತಿಂಗಳ 20ರಂದು 8 ವರ್ಷದ ಬಾಲಕನು ರಾತ್ರಿ ಬ್ರೆಡ್ ತರಲು ಹೋಗಿದ್ದ. ಈ ಸಂದರ್ಭದಲ್ಲಿ ಮಾರುತಿ ಇಕೋ ವ್ಯಾನ್‍ನಲ್ಲಿ ಬಂದ ಅಪರಿಚಿತರು ಬಂದು ಬಾಲಕನನ್ನು ಅಪಹರಣ ಮಾಡಿ ಪರಾರಿಯಾಗಿದ್ದರು.

    ಬಾಲಕನ ತಂದೆ ದುಬೈನಲ್ಲಿ ವ್ಯಾಪಾರ ಮಾಡುತ್ತಿದ್ದು, ತಾಯಿಯೊಂದಿಗೆ ಬಾಲಕ ವಾಸವಾಗಿದ್ದ. ಅಪಹರಣದ ವಿಷಯ ತಿಳುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಭಟ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಪೊಲೀಸರು ಬಾಲಕನನ್ನು ಹುಡುಕಲು ಕಾರ್ಯಪವೃತರಾಗಿ ಅನೇಕ ಸ್ಥಳಗಳನ್ನು ಶೋಧಿಸಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಗೋವಾದ ಕಲ್ಲಂಗುಟ್ ಬೀಚ್ ಸಮೀಪದಲ್ಲಿ ಭಟ್ಕಳ ಪೊಲೀಸರಿಗೆ ಬಾಲಕ ಪತ್ತೆಯಾಗಿದ್ದಾನೆ. ಆತನನ್ನು ರಕ್ಷಿಸಿ ಘಟನೆ ಸಂಬಂಧಿಸಿ ಅನೀಸ್ ಭಾಷಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

    ಗೋವಾದಲ್ಲಿ ಪೊಲೀಸರ ಅಥಿತಿಯಾದ ಆರೋಪಿ ಅನೀಸ್ ಭಾಷಾನನ್ನು ಪೊಲೀಸರು ತನಿಖೆ ನಡೆಸಿದಾಗ ಬಾಲಕನ ಅಜ್ಜನೇ ಅಪಹರಣ ಮಾಡಲು ಸೂಚಿಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್

    ಅಪಹರಣಕ್ಕೆ ಕಾರಣ: ಸೌದಿ ಅರೇಬಿಯಾದಲ್ಲಿ ವ್ಯವಹಾರ ಮಾಡಿಕೊಂಡಿರುವ ಬಾಲಕನ ಅಜ್ಜ ಇನಾಯತುಲ್ಲಾ ಬಾಲಕನ ತಂದೆಗೆ ವ್ಯವಹಾರ ನಡೆಸಲು ಸಾಲವಾಗಿ ಹಣ ನೀಡಿದ್ದನು. ಆದರೆ ಕೊಟ್ಟ ಹಣ ಮರಳಿ ಕೇಳಿದಾಗ ಅಳಿಯ ನೀಡರಲಿಲ್ಲ. ಹೀಗಾಗಿ ಕೊಟ್ಟ ಹಣ ವಾಪಸ್ ಪಡೆಯಲು ಮೊಮ್ಮಗನನ್ನು ಕಿಡ್ನ್ಯಾಪ್ ಮಾಡಿಸಲು ಸೌದಿಯಿಂದಲೇ ಸ್ಕೆಚ್ ಹಾಕಿದ್ದನು. ಇದಕ್ಕಾಗಿ ಭಟ್ಕಳ ಬದ್ರಿಯಾ ನಗರದ ನಿವಾಸಿ ಹಾಗೂ ಕೋಳಿ ಅಂಗಡಿ ನಡೆಸುತ್ತಿದ್ದ ಅನೀಸ್ ಭಾಷಾ ಎಂಬುವವನಿಗೆ ಬಾಲಕನನ್ನು ಅಪಹರಣ ಮಾಡಲು ಸೂಚಿಸಿದ್ದ.

    POLICE JEEP

    ಬಾಲಕನ ಅಜ್ಜನ ಸೂಚನೆ ಮೇರೆಗೆ ಆ.20ರಂದು ರಾತ್ರಿ ಒಟ್ಟು ನಾಲ್ವರು ಕಾರಿನಲ್ಲಿ ಬಂದು ಬಾಲಕನನ್ನು ಅಪಹರಣ ಮಾಡಿದ್ದರು. ನಂತರ ಬಾಲಕನನ್ನು ಗೋವಾಕ್ಕೆ ಕರೆದೊಯ್ದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗೋವಾಕ್ಕೆ ತೆರಳಿ ಓರ್ವನನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಇದನ್ನೂ ಓದಿ: ಪಕ್ಷ ಸೇರಿದರೆ ಪ್ರಕರಣ ಖುಲಾಸೆ – ಬಿಜೆಪಿಯಿಂದ ಆಫರ್‌ ಬಂದಿತ್ತು ಎಂದ ಸಿಸೋಡಿಯಾ

    Live Tv
    [brid partner=56869869 player=32851 video=960834 autoplay=true]

  • 75 ವರ್ಷಗಳಿಂದ ಮರದ ಕೆಳಗೆ ಉಚಿತ ಶಿಕ್ಷಣ ನೀಡ್ತಿದ್ದಾರೆ ಅಜ್ಜ

    75 ವರ್ಷಗಳಿಂದ ಮರದ ಕೆಳಗೆ ಉಚಿತ ಶಿಕ್ಷಣ ನೀಡ್ತಿದ್ದಾರೆ ಅಜ್ಜ

    – ಮಕ್ಕಳು ಮಾತ್ರವಲ್ಲದೆ ದೊಡ್ಡವರಿಗೂ ಪಾಠ
    – ರಾತ್ರಿ- ಹಗಲೆನ್ನದೆ ದಣಿವರಿಯದೆ ಕಾಯಕ

    ಭುವನೇಶ್ವರ್: ಕಳೆದ 75 ವರ್ಷಗಳಿಂದ ವೃದ್ಧರೊಬ್ಬರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ.

    ವೃದ್ಧನನ್ನು ನಂದ ಪ್ರಾಸ್ತಿ ಎಂದು ಗುರುತಿಸಲಾಗಿದೆ. ಇವರು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ದೊಡ್ಡವರಿಗೆ ಮಾತ್ರ ರಾತ್ರಿ ಸಮಯದಲ್ಲಿ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.

    ತಮ್ಮ ಶಿಕ್ಷಣ ಪೂರ್ಣಗೊಳಿಸಲು 4 ನೇ ತರಗತಿ ಬಳಿಕ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ. ಬೋಧನೆ ಮೇಲಿನ ಉತ್ಸಾಹ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ. ಹೀಗಾಗಿ ಅವರು ಬರೋಬ್ಬರಿ 75 ವರ್ಷಗಳಿಂದ ನಿರಂತರವಾಗಿ ದಣಿವರಿಯದೇ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಜೊತೆಗೆ ಜಜ್ಪುರ್ ಜಿಲ್ಲೆಯ ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು.

    ವೃದ್ಧ ಬರ್ತಂಡ ಗ್ರಾಮದವರಾಗಿದ್ದು, ಇವರ ಸೇವೆಯನ್ನು ಗುರುತಿಸಿ ಸರ್ಕಾರ ನೆರವು ನೀಡಲು ಮುಂದಾಗಿತ್ತು. ಆದರೆ ನಂದಾ ಅವರು ಮಾತ್ರ ಸರ್ಕಾರದ ನೆರವನ್ನು ಪಡೆಯಲು ನಿರಾಕರಿಸಿದ್ದಾರೆ. ಅಲ್ಲದೆ ಹಳೆಯ ಮರದ ಕೆಳಗೆಯೇ ಕುಳಿತು ತನ್ನ ಕೆಲಸವನ್ನು ಮುಂದುವರಿಸಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯಿಸಿರುವ ನಂದಾ, ನಾನು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಹಳ್ಳಿಯನ್ನು ಹಲವಾರು ಮಂದಿ ಅನಕ್ಷರಸ್ಥರು ಇರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಹಳ್ಳಿಯ ಜನ ಹೆಬ್ಬೆಟ್ಟು ಒತ್ತುತ್ತಾರೆಯೇ ಹೊರತು ಯಾರಿಗೂ ತಮ್ಮ ಹೆಸರಿನ ಸಹಿ ಹಾಕಲು ಬರುತ್ತಿರಲಿಲ್ಲ. ಹೀಗಾಗಿ ಒಂದು ದಿನ ಅವರನ್ನೆಲ್ಲ ಕರೆದು ಸಹಿ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟೆ. ಈ ವೇಳೆ ಅನೇಕರು ಆಸಕ್ತಿಯಿಂದ ಬಂದು ಸಹಿ ಹಾಕುವುದನ್ನು ಕಲಿತುಕೊಂಡರು. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಭಗವದ್ಗೀತೆಯನ್ನು ಓದಲು ಪ್ರಾರಂಭಿಸಿದರು. ಸದ್ಯ ನನ್ನ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ನಾನು ಪಾಠ ಹೇಳಿಕೊಡುತ್ತಿದ್ದೇನೆ ಎಂದು ಹೇಳಿದರು.

    ಇನ್ನು ಈ ಸಂಬಂಧ ಬರ್ತಂಡಾ ಪಂಚಾಯತ್ ಅಧ್ಯಕ್ಷ ಮಾತನಾಡಿ, ಕಳೆದ 75 ವರ್ಷಗಳಿಂದ ವೃದ್ಧ ನಿರಂತರವಾಗಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ಹೇಳಿಕೊಡುತ್ತಿರುವುದು ಇವರಿಗೆ ತುಂಬಾನೇ ಇಷ್ಟವಾಗಿದ್ದು, ಇದಕ್ಕಾಗಿ ಅವರು ಸರ್ಕಾರದಿಂದ ಯಾವುದೇ ಸಹಾಯ ಪಡೆದುಕೊಳ್ಳುತ್ತಿಲ್ಲ. ಆದರೆ ಅವರು ಮಕ್ಕಳಿಗೆ ಆರಾಮಾಗಿ ಕಲಿಸುವ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

    ಇವರು ಮಳೆ, ಚಳಿ ಹಾಗೂ ಬಿಸಿಲು ಎನ್ನದೇ ಮಕ್ಕಳಿಗೆ ಅತ್ಯಂತ ಉತ್ಸಾಹದಿಂದ ಪಾಠ ಹೇಳಿಕೊಡುತ್ತಿದ್ದಾರೆ. ಅವರ ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡಲು ಅವರಿಗೆ ಬೇಕಾದ ಸೌಲಭ್ಯವನ್ನು ಕಲ್ಪಿಸಿಕೊಡಲು ಗ್ರಾಮ ಪಂಚಾಯತ್ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

  • ಮೊಮ್ಮಕ್ಕಳ ಪಾಲಿಗೆ ವಿಲನ್ ಆದ ಅಜ್ಜ!

    ಮೊಮ್ಮಕ್ಕಳ ಪಾಲಿಗೆ ವಿಲನ್ ಆದ ಅಜ್ಜ!

    ಯಾದಗಿರಿ: ತಂದೆಗೆ ಬರುವ ಆಸ್ತಿ ಪಾಲು ಕೇಳಿದ ಮೊಮ್ಮಕ್ಕಳ ಪಾಲಿಗೆ ಅಜ್ಜ ವಿಲನ್ ಆಗಿದ್ದಾನೆ. ಖಳನಾಯಕನಂತೆ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಮೊಮ್ಮಕ್ಕಳಿಗೆ ಥಳಿಸಿದ್ದಾನೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೊಮ್ಮಕ್ಕಳಾದ ಗೋವಿಂದ ಹಾಗೂ ವಿಜಯಲಕ್ಷ್ಮಿ, ಸೊಸೆಯಾದ ಹುಲಿಗೆಮ್ಮ ಆಸ್ತಿ ಹಾಗೂ ರಾಶಿ ಮಾಡಿರುವ ತಮ್ಮ ಪಾಲಿನ ಭತ್ತ ಕೇಳಿದ್ದಾರೆ. ಆದ್ರೆ ಅಜ್ಜ ಯಂಕಣ್ಣ ದೊಣ್ಣೆ ಹಿಡಿದುಕೊಂಡು ಹೊಡೆದಿದ್ದಾರೆ.

    ತಾತ ಹಾಗೂ 8 ಜನ ಸೇರಿ ಹಲ್ಲೆ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಈ ಘಟನೆ ಜರುಗಿದೆ. ಘಟನೆಯಲ್ಲಿ ಮೊಮ್ಮಕಳು ಹಾಗೂ ಸೊಸೆಗೆ ಗಾಯವಾಗಿದ್ದು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆಯಾದ ನಿನ್ನ ಮಗ ಅನೈತಿಕ ಸಂಬಂಧ ಹೊಂದಿದ್ದಾನೆ. ನೀನಾದರೂ ಆಸ್ತಿಯಲ್ಲಿ ಪಾಲು ನೀಡೆಂದು ಮೊಮ್ಮಕ್ಕಳು ಅಜ್ಜನ ದುಂಬಾಲು ಬಿದ್ದಿದ್ದಾರೆ.

    ಅಜ್ಜನ ವಿರುದ್ಧ ಈಗ ಮೊಮ್ಮಗ ಗೋವಿಂದ ದೂರು ನೀಡಿದ್ದಾನೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ತಿಗಾಗಿ ಅತ್ತೆಯನ್ನೇ ಮನೆಯಿಂದ ಹೊರದಬ್ಬಿದ ಸೊಸೆ – ಮಗನ ಹೆಂಡ್ತಿಯಿಂದಾಗಿ ಬೀದಿಗೆ ಬಿದ್ದ ವೃದ್ಧರು

    ಆಸ್ತಿಗಾಗಿ ಅತ್ತೆಯನ್ನೇ ಮನೆಯಿಂದ ಹೊರದಬ್ಬಿದ ಸೊಸೆ – ಮಗನ ಹೆಂಡ್ತಿಯಿಂದಾಗಿ ಬೀದಿಗೆ ಬಿದ್ದ ವೃದ್ಧರು

    ಬೆಂಗಳೂರು: ಆಸ್ತಿಗಾಗಿ ಅತ್ತೆ ಮಾವನನ್ನ ಸೊಸೆಯೇ ಮನೆಯಿಂದ ಹೊರದಬ್ಬಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸರಘಟ್ಟ ಗ್ರಾಮದಲ್ಲಿ ನಡೆದಿದೆ.

    ಇಲ್ಲಿನ ನಿವಾಸಿಗಳಾದ ವೃದ್ದ ದಂಪತಿ ನಂಜಪ್ಪ ಮತ್ತು ಚಿಕ್ಕಮ್ಮ, ಆಸ್ತಿಗಾಗಿ ತನ್ನ ಎರಡನೇ ಮಗ ಸುರೇಶ್‍ಕುಮಾರ್ ಹೆಂಡತಿ ಮಂಗಳಾ ತಮ್ಮನ್ನು ಮನೆಯಿಂದ ಹೊರ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ವೃದ್ಧೆ ಚಿಕ್ಕಮ್ಮ ತನ್ನ ಕೈನಲ್ಲಿರುವ ಬೆರಳುಗಳನ್ನು ಕಳೆದುಕೊಂಡಿದ್ದು, ಕೈಲಾಗದ ಪರಿಸ್ಥಿತಿಯಲಿದ್ದಾರೆ. ವೃದ್ಧ ನಂಜಪ್ಪನ ಹೆಸರಿನಲ್ಲಿ 1 ಎಕರೆ 7 ಗುಂಟೆ ಜಮೀನಿದೆ. ಈ ಜಮೀನನ್ನು ಸೊಸೆ ಮಂಗಳ ಮಾರಾಟ ಮಾಡಲು ಇಂತಹ ಹೀನ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ. ಹೀಗಾಗಿ ಕಟ್ಟಿಕೊಂಡ ಗಂಡ ಹಾಗೂ ಅತ್ತೆ ಮಾವರನ್ನು ಸಹ ಮನೆಯಿಂದ ಹೊರಗೆ ಹಾಕಿದ್ದಲ್ಲದೆ ಥಳಿಸಿದ್ದಾಳೆ ಎಂದು ದಂಪತಿಗಳು ಬೀದಿ ಬದಿಯಲ್ಲಿ ಕಣ್ಣೀರಿಡುತ್ತಿದ್ದಾರೆ.

    ವೃದ್ಧ ದಂಪತಿ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ಪೊಲೀಸರು ವೃದ್ಧ ದಂಪತಿಯನ್ನೆ ಹೀಯಾಳಿಸಿ, ನಿಮ್ಮ ಸಮಸ್ಯೆಯನ್ನ ನಾವು ಬಗೆಹರಿಸಲು ಆಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಅಲ್ಲದೇ ಸೊಸೆ ಮಂಗಳಾ ಅತ್ತೆ ಮಾವ ಹಾಗೂ ಗಂಡನಿಗೆ ತನ್ನ ಸಹೋದರರಿಂದ ಕೊಲೆ ಮಾಡುವುದಾಗಿ ಧಮ್ಕಿ ಹಾಕಿಸುತ್ತಾರಂತೆ ಎಂದು ತಿಳಿಸಿದ್ದಾರೆ.

    ಸೊಸೆಯ ಈ ಕೃತ್ಯದಿಂದ ಬೀದಿ ಪಾಲಾಗಿರುವ ವೃದ್ಧೆ ಸದ್ಯ ಮತ್ತೊಬ್ಬ ಮಗನ ಆಶ್ರಯ ಪಡೆದಿದ್ದು, ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲಾಗದ ಇವರು ತಮ್ಮ ಜೀವನಕ್ಕಾಗಿ ಕೃಷಿ ಮಾಡಲು ಅವಕಾಶ ಕೊಡಬೇಕು ಹಾಗೂ ವಾಸಿಸಲು ಮನೆಯಲ್ಲಿ ಜಾಗ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನೂತನ ವಧು-ವರರಾದ ಅಜ್ಜ-ಅಜ್ಜಿ – 50 ವರ್ಷ ಪೂರೈಸಿದ 25 ಜೋಡಿಗೆ ಮರು ವಿವಾಹ!

    ನೂತನ ವಧು-ವರರಾದ ಅಜ್ಜ-ಅಜ್ಜಿ – 50 ವರ್ಷ ಪೂರೈಸಿದ 25 ಜೋಡಿಗೆ ಮರು ವಿವಾಹ!

    ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಶಾಸ್ತ್ರೋಕ್ತವಾಗಿ ಆದ ಮದುವೆ ಸಂಬಂಧಗಳು ಮುರಿದು ಬಿದ್ದು ವಿಚ್ಚೇದನಗಳು ಹೆಚ್ಚಾಗ್ತಿವೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಗಡಿನಾಡಿನ ಅಪೂರ್ವ ಜೋಡಿಗಳು ನಮ್ಮ ಮುಂದಿದಿದ್ದಾರೆ. 50 ವರ್ಷ ಸಂಸಾರ ನಡೆಸಿರೋ 25ಕ್ಕೂ ಹೆಚ್ಚಿನ ಜೋಡಿಗಳು ಇಳಿ ವಯಸ್ಸಲ್ಲಿ ಮರು ಮದುವೆಯಾಗಿ ಸಂಭ್ರಮಿಸಿದ್ದಾರೆ.

    ದು ಬೆಳಗಾವಿಯ ಬೈಲಹೊಂಗಲದ ಮದನಬಾವಿ ಗ್ರಾಮದಲ್ಲಿ ನಡೆದ ವಿಶಿಷ್ಟ ವಿವಾಹ ಸಂಭ್ರಮ. ಗ್ರಾಮದ ಶರಣೆ ನೀಲಗಂಗಮ್ಮ ತಾಯಿಯ ಹೆಸ್ರಲ್ಲಿ, 50 ವರ್ಷ ಸಂಸಾರ ಪೂರೈಸಿದ 25ಕ್ಕೂ ಹೆಚ್ಚು ಜೋಡಿಗೆ ಮರು ವಿವಾಹ ಮದುವೆ ಮಾಡಿಸಲಾಯ್ತು. ಈ ವೇಳೆ ಮೇಕಪ್ ಮಾಡಿಕೊಂಡು ಅಜ್ಜಂದಿರು ನವ ವಧು-ವರರರಂತೆ ಕಂಗೊಳಿಸುತ್ತಿದ್ರು. ಮರು ವಿವಾಹಕ್ಕೂ ಮುನ್ನ ಗ್ರಾಮದಲ್ಲಿ ಈ ಆದರ್ಶ ದಂಪತಿಗಳ ಅದ್ಧೂರಿ ಮೆರವಣಿಗೆ ನಡೀತು. ಬಳಿಕ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಸಮ್ಮುಖದಲ್ಲಿ 70-75 ವರ್ಷದ ಅಜ್ಜ ಅಜ್ಜಿಯಂದಿರು ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದ್ರು.

    ತಮ್ಮ ಹೆತ್ತವರ ಮದುವೆಯನ್ನ ಕಣ್ತುಂಬಿಕೊಂಡ ಮಕ್ಕಳು ಹಾಗೂ ಮೊಮ್ಮಕ್ಕಳು ಖುಷಿಗೆ ಪಾರವೇ ಇರಲಿಲ್ಲ. 50 ವರ್ಷ ದಾಂಪತ್ಯ ನಡೆಸಿದ ಅಜ್ಜ ಅಜ್ಜಿಯಂದಿರೂ ಸಹ ಅಡ್ಡಾಡಿ ಫೋಟೋಗೆ ಪೋಸ್ ಕೊಟ್ರು. ಒಟ್ಟಿನಲ್ಲಿ ಇಲ್ಲಿ ಸಿಹಿ ಇತ್ತು. ನಾಚಿಕೆ ಜೊತೆಗೆ ಪ್ರೀತಿ ಪ್ರೇಮ ಮೇಳೈಸಿತ್ತು. ನಗುನಗುತಾ ಬಾಳೋಣ ಅನ್ನೋ ಸಂದೇಶ ಇತ್ತು. ನೂರು ವರ್ಷ ಈ ಜೋಡಿ ಹೀಗೆ ಬಾಳಲಿ ಅನ್ನೋದು ನಮ್ಮ ಹಾರೈಕೆ.