Tag: grand daughter

  • 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ತಾತ – ತಂದೆ ಅರೆಸ್ಟ್

    – ಯಾರಿಗೂ ವಿಷಯ ಹೇಳದಂತೆ ತಾಯಿಗೆ ಆಮಿಷ

    ಬೆಂಗಳೂರು: 6 ವರ್ಷದ ಮೊಮ್ಮಗಳ (Grand Daughter) ಮೇಲೆ ಆಕೆಯ ತಾತನೇ (Grandfather) ಅತ್ಯಾಚಾರವೆಸಗಿರುವ (Rape) ಘಟನೆ ಹುಳಿಮಾವು (Hulimavu) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಈ ಬಗ್ಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ತಂದೆ ರಂಜಿತ್ ಕುಮಾರ್‌ನನ್ನು (35) ಬಂಧಿಸಲಾಗಿದೆ. ಆರೋಪಿಗಳು ಮೂಲತಃ ತಮಿಳುನಾಡು ಮೂಲದವರಾಗಿದ್ದು, ಪ್ರಸ್ತುತ ಹುಳಿಮಾವು ಸಮೀಪ ವೇಣುಗೋಪಾಲ್ ನಗರದ ನಿವಾಸಿಯಾಗಿದ್ದರು. ರಂಜಿತ್ ಕುಮಾರ್ ತಂದೆ ಚಕ್ರವರ್ತಿ (60), ಅತ್ತೆ ವಿಜಯಮ್ಮ (50) ಹಾಗೂ ಇಬ್ಬರು ಸಹೋದರರು ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್‌ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

    ತಂದೆ ರಂಜಿತ್ ಕುಮಾರ್ ಅಜ್ಜಿ, ಚಿಕ್ಕಂಪ್ಪದಿರು ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ್ದ ಎನ್ನಲಾಗಿದೆ. ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಯಾರಿಗೂ ಹೇಳಿದಂತೆ ತಾಯಿಯ ಬಳಿ ತಂದೆ, ಅತ್ತೆ, ಮಾವ ಹಾಗೂ ಚಿಕ್ಕಪ್ಪಂದಿರು ಆಮಿಷವೊಡ್ಡಿದ್ದಾರೆ. ಮನೆಯನ್ನು ಮೊಮ್ಮಗಳ ಹೆಸರಿಗೆ ಬರೆಯುತ್ತೇವೆ, ಚಿನ್ನದ ಒಡವೆ ಕೊಡಿಸುತ್ತೇವೆ, ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಧಮ್ಕಿ ಕೂಡ ಹಾಕಿದ್ದಾರೆ. ಬಳಿಕ ತಾಯಿ ಕೆಲಸಕ್ಕೆ ಹೊರಡುತ್ತೇನೆ ಎಂದು ಸಬೂಬು ಹೇಳಿ ಮನೆಯಿಂದ ಆಚೆಗೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಹುಳಿಮಾವು ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸುಳ್ಳು ಅತ್ಯಾಚಾರ ಕೇಸ್ – ದೂರುದಾರೆ ಸೇರಿ 13 ಜನರಿಗೆ ಜೈಲು

    ದೂರಿನ ಆಧಾರದಲ್ಲಿ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ. ಅತ್ಯಾಚಾರ ಆರೋಪಿ ಚಕ್ರವರ್ತಿ, ಅತ್ತೆ ವಿಜಯಮ್ಮ ಹಾಗೂ ಇಬ್ಬರು ಸಹೋದರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತ ಬಾಲಕಿ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಹಾಲನ್ನು ಹಾಲಾಹಲ ಮಾಡಿದೆ: ಆರ್.ಅಶೋಕ್

  • ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರ ದಾರುಣ ಸಾವು

    ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರ ದಾರುಣ ಸಾವು

    ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ (Electrocuted) ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಶಾಹುನಗರದಲ್ಲಿ (Shahunagar) ಶನಿವಾರ ಮುಂಜಾನೆ ನಡೆದಿದೆ.

    ಮೃತರು ಮೂತಃ ರಾಮದುರ್ಗ (Ramadurga) ತಾಲೂಕಿನ ಅರಬೆಂಚಿ ತಾಂಡಾದವರಾಗಿದ್ದು, ಅಜ್ಜ ಈರಪ್ಪಾ ಗಂಗಪ್ಪಾ ಲಮಾಣಿ (50), ಅಜ್ಜಿ ಶಾಂತವ್ವ ಈರಪ್ಪಾ ಲಮಾಣಿ (45) ಹಾಗೂ ಮೊಮ್ಮಗಳು ಅನ್ನಪೂರ್ಣ ಹುನ್ನಪ್ಪ ಲಮಾಣಿ (8) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಿದ ವೇಳೆ ಮೊಮ್ಮಗಳಿಗೆ (Grand Daughter) ವಿದ್ಯುತ್ ತಗುಲಿದ್ದು, ಮೊಮ್ಮಗಳನ್ನು ಕಾಪಾಡುವ ಸಲುವಾಗಿ ಅಜ್ಜ (Grandfather), ಅಜ್ಜಿ (Grandmother) ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ – ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

    ಬೆಳಗಾವಿಯ ಶಾಹುನಗರ 7ನೇ ಕ್ರಾಸ್‌ನ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಮತ್ತು ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

    15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಈಕೆ 15 ದಿನಗಳ ಹಿಂದೆಯಷ್ಟೇ ತನ್ನ ಹಳೆಯ ಸ್ನೇಹಿತರನ್ನು ಮಾತನಾಡಿಸಿಕೊಂಡು ಬಂದಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು 15 ದಿನದ ಹಿಂದೆ ಸೌಂದರ್ಯ ಅವರು ತಮ್ಮ ಜೊತೆಗೆ ಈ ಹಿಂದೆ ತಾನು ಓದಿದ್ದ ಕಾಲೇಜಿಗೆ ಭೇಟಿ ಕೊಟ್ಟು ಸ್ನೇಹಿತರನ್ನು ಮಾತಾನಾಡಿಸಿಕೊಂಡು ಬಂದಿದ್ದರು. ಮದುವೆ ಬಳಿಕ ಸೌಂದರ್ಯ ಅವರು ತಲೆನೋವು ಹಾಗೂ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಂಬಂಧ ಶಿವಮೊಗ್ಗ ಹಾಗೂ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು.

    ಸದ್ಯ ಸೌಂದರ್ಯ ಅವರಿಗೆ 9 ತಿಂಗಳ ಗಂಡು ಮಗುವಿದ್ದು, ಮಗುವಾದ ಬಳಿಕ ಹಳೆ ಸ್ನೇಹಿತರನ್ನು ಭೇಟಿಯಾಗಿ ಮಾತನಾಡಿಸಿಕೊಂಡು ಬಂದಿದ್ದರು. ಆದರೆ ಇದೀಗ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಸ್ನೇಹಿತರು ಕೂಡ ಕಣ್ಣೀರಾಕುತ್ತಿದ್ದಾರೆ. ಇದನ್ನೂ ಓದಿ: ಮೋದಿ, ದೇವೇಗೌಡ, ಸೇರಿ ಗಣ್ಯರಿಂದ ಬಿಎಸ್‍ವೈ ಮೊಮ್ಮಗಳ ಸಾವಿಗೆ ಸಂತಾಪ

    ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‍ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ಇದನ್ನೂ ಓದಿ: ದಂಪತಿ ನಡುವೆ ಯಾವತ್ತೂ ಜಗಳವಾಗಿಲ್ಲ- ಬಿಲ್ಡಿಂಗ್ ಕನ್‌ಸ್ಟ್ರಕ್ಟರ್‌ ಖ್ವಾಜಾ ಹುಸೇನ್

    ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಆದರೆ ಇಂದು ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್‍ ಫ್ಲಾಟ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗುವನ್ನು ಪಕ್ಕದ ರೂಮ್‍ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

  • ತಾತನ ಅಂತ್ಯಕ್ರಿಯೆ ನೆರವೇರಿಸಿದ ಸಾಕು ಮೊಮ್ಮಗಳು

    ತಾತನ ಅಂತ್ಯಕ್ರಿಯೆ ನೆರವೇರಿಸಿದ ಸಾಕು ಮೊಮ್ಮಗಳು

    ಶಿವಮೊಗ್ಗ: ವಯೋಸಹಜವಾಗಿ ಮೃತಪಟ್ಟ ತನ್ನ ತಾತನ ಅಂತ್ಯಕ್ರಿಯೆಯನ್ನು ಸಾಕು ಮೊಮ್ಮಗಳು ನೆರವೇರಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಸಮೀಪದ ಬಸವನಗುಡಿ ಗ್ರಾಮದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ ಬಸವನಗುಡಿ ಗ್ರಾಮದ ನಂಜುಂಡಪ್ಪ(104) ಮೃತಪಟ್ಟಿದ್ದರು. ಮೃತ ನಂಜುಂಡಪ್ಪ ಅವರ ಇಬ್ಬರು ಗಂಡು ಮಕ್ಕಳು ಈ ಹಿಂದೆಯೇ ಮೃತಪಟ್ಟಿದ್ದರು. ಹಾಗೂ ಇದ್ದ ಒಬ್ಬಳೇ ಹೆಣ್ಣು ಮಗಳು ಬೇರೊಂದು ಗ್ರಾಮದಲ್ಲಿ ವಾಸವಿದ್ದು, ಆಕೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದನ್ನೂ ಓದಿ: ಡಾ. ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಶೋಕ

    ಆದರೆ ಮೃತ ವೃದ್ಧನ ಶವ ಸಂಸ್ಕಾರಕ್ಕೆ ಆತನ ಮೊಮ್ಮಕ್ಕಳು ಬಾರದೇ ಇದ್ದಿದ್ದರಿಂದ, ತಾನು ದತ್ತು ತೆಗದುಕೊಂಡು ಸಾಕಿದ್ದ ಮೊಮ್ಮಗಳು ಅಶ್ವಿನಿ ಎಂಬ ಯುವತಿಯೇ ಮುಂದೆ ನಿಂತು ತನ್ನ ತಾತನ ಅಂತಿಮ ವಿಧಿ-ವಿಧಾನಗಳನ್ನು ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಿಸಿದ್ದಾರೆ.

  • ಮೊಮ್ಮಗಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಟ್ಟ ಇಳಯರಾಜ

    ಮೊಮ್ಮಗಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಟ್ಟ ಇಳಯರಾಜ

    ಚೆನ್ನೈ: ಯುವನ್ ಶಂಕರ್ ರಾಜಾ ಇತ್ತೀಚೆಗೆ ತಮ್ಮ ತಂದೆ ಇಳಯರಾಜ ಮತ್ತು ಮಗಳು ಜಿಯಾ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಇಳಯರಾಜ ಪಿಯಾನೋವನ್ನು ಜಿಯಾಗೆ ಹೇಗೆ ನುಡಿಸಬೇಕೆಂದು ಕಲಿಸಿಕೊಡುತ್ತಿರುತ್ತಾರೆ. ಈ ವೇಳೆ ಪಿಯಾನೋ ನುಡಿಸುತ್ತಿದ್ದಂತೆಯೇ ಜಿಯಾ ಬೇರೆ ಕಡೆಗೆ ಬೇಗ ಗಮನ ಹರಿಸುತ್ತಾಳೆ. ಈ ವೀಡಿಯೋಗೆ ಶ್ರುತಿ ಹಾಸನ್, ವಿಜಯ್ ಯೇಸುದಾಸ್ ಸೇರಿದಂತೆ ಅನೇಕ ಮಂದಿ ಕಾಮೆಂಟ್ ಮಾಡುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ಯುವನ್ ಶಂಕರ್ ಇಳಯರಾಜಾ ಮೊಮ್ಮಗಳು ಜಿಯಾ ಜೊತೆ ಕಾಲಕಳೆಯುತ್ತಿರುವ ಮುದ್ದಾದ ವೀಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಇಳಯಾರಾಜ ಜಿಯಾ ಅವರೊಟ್ಟಿಗೆ ಟ್ಯೂನ್‍ವೊಂದನ್ನು ನುಡಿಸಿದ್ದಾರೆ. ಈ ಸುಂದರವಾದ ಕ್ಷಣವನ್ನು ಯುವನ್ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ವೀಡಿಯೋದಲ್ಲಿ ಜಿಯಾ ಪಿಯಾನೊ ನುಡಿಸಲು ಪ್ರಯತ್ನಿಸುತ್ತಿದ್ದ ವೇಳೆ ಇಳಯರಾಜ ಅವರು, ಅವಳನ್ನು ಮೇಜಿನ ಮೇಲೆ ನಿಲ್ಲಲು ಸಹಾಯ ಮಾಡುತ್ತಾರೆ. ಬಳಿಕ ಅವಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಡಲು ಮುಂದಾದಾಗ ಜಿಯಾ ಮೇಜಿನ ಮೇಲೆ ಇಟ್ಟಿರುವ ಕಲಾಕೃತಿಯೊಂದಿಗೆ ಆಟ ಆಡುವುದನ್ನು ಕಾಣಬಹುದಾಗಿದೆ.

     

    View this post on Instagram

     

    A post shared by U1 (@itsyuvan)

  • ಬಿಜೆಪಿ ಸಂಸದೆಯ ಮೊಮ್ಮಗಳು ಪಟಾಕಿಗೆ ಬಲಿ!

    ಬಿಜೆಪಿ ಸಂಸದೆಯ ಮೊಮ್ಮಗಳು ಪಟಾಕಿಗೆ ಬಲಿ!

    – ಆಟವಾಡಲು ಹೋದಾಗ ಅವಘಡ
    – ಶೇ.60 ರಷ್ಟು ಸುಟ್ಟಿತ್ತು ದೇಹ
    – ಮಾರ್ಗಮಧ್ಯೆಯೇ ಬಾಲಕಿ ಸಾವು

    ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಈ ಬಾರಿ ಕೆಲವೆಡೆ ಪಟಾಕಿಗೆ ನಿಷೇಧ ಹೇರಲಾಗಿತ್ತು. ಆದರೂ ಹಲವೆಡೆ ಪಟಾಕಿ ಸಿಡಿಸಿ ಅನಾಹುತಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಂತೆಯೇ ಬಿಜೆಪಿ ಸಂಸದೆಯೊಬ್ಬರ ಮೊಮ್ಮಗಳು ಪಟಾಕಿಗೆ ಬಲಿಯಾದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಹೌದು. ಬಿಜೆಪಿ ಸಂಸದೆ ರಿಟಾ ಬಹುಗುಣ ಜೋಶಿ ಅವರ 6 ವರ್ಷದ ಮೊಮ್ಮಗಳು ದೀಪಾವಳಿ ಹಬ್ಬದ ರಾತ್ರಿಯೇ ಪಟಾಕಿಗೆ ಬಲಿಯಾಗಿದ್ದಾಳೆ. ಬಾಲಕಿ ತನ್ನ ಗೆಳೆಯರೊಂದಿಗೆ ಆಟವಾಡಲು ಮನೆಯ ಟೆರೇಸ್ ಗೆ ಹೋಗಿದ್ದಾಳೆ. ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಪಟಾಕಿಯ ಬೆಂಕಿ ಆಕೆಯ ಡ್ರೆಸ್ ಗೆ ಹೊತ್ತಿಕೊಂಡಿದೆ.

    ಹುಡುಗರೆಲ್ಲ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರಬೇಕಾದರೆ ಬಾಲಕಿಯ ಕೂಗು ಯಾರಿಗೂ ಕೇಳಿಸಿರಲಿಲ್ಲ. ಹೀಗಾಗಿ ಆಕೆಯ ಮೈಮೇಲೆ ಬೆಂಕಿ ಹೊತ್ತಿಕೊಂಡು ಬೆಂದಿದ್ದಾಳೆ. ಕೊನೆಗೆ ಯಾರೋ ಒಬ್ಬರು ನೋಡಿ ಮನೆಯವರಿಗೆ ತಿಳಿಸಿದ್ದಾರೆ.

    ಬಾಲಕಿಯನ್ನು ಕುಟುಂಬಸ್ಥರು ಗಮನಿಸಿದಾಗ ಆಕೆಯ ದೇಹ ಅದಾಗಲೇ ಶೇ.60ರಷ್ಟು ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಹೀಗಾಗಿ ದೆಹಲಿಯ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬಾಲಕಿ ಮಾರ್ಗಮಧ್ಯೆ ಅಂಬುಲೆನ್ಸ್ ನಲ್ಲಿಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

  • ಮೊಮ್ಮಗಳು ಹಠ ಹಿಡಿದಿದ್ದಕ್ಕೆ, ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ

    ಮೊಮ್ಮಗಳು ಹಠ ಹಿಡಿದಿದ್ದಕ್ಕೆ, ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ

    ಜೈಪುರ: ಮೊಮ್ಮಗಳು ಹಠ ಹಿಡಿದಿದ್ದಕ್ಕೆ ಸಿಟ್ಟಿಗೆದ್ದ ಅಜ್ಜಿಯೊಬ್ಬಳು ತನ್ನ ಮೊಮ್ಮಗಳನ್ನೇ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಹನುಮಗೃಹ ಪಟ್ಟಣದಲ್ಲಿ ನಡೆದಿದೆ.

    ಬುಧವಾರ ಮಗುವೊಂದು ಆಕಸ್ಮಿಕವಾಗಿ ನೀರಿನ ಟ್ಯಾಂಕ್‍ನಲ್ಲಿ ಬಿದ್ದು ಮೃತಪಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಗು ಸಾವಿನ ಅನುಮಾನದ ಮೇರೆಗೆ ಆಕೆಯ ಅಜ್ಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

    ವಿಚಾರಣೆಗೆ ಒಳಪಡಿಸಿದಾಗ, ಮಗುವಿನ ಅಜ್ಜಿಯು ಸ್ವತಃ ತನ್ನ ಮೊಮ್ಮಗಳನ್ನು ನೀರಿನ ಟ್ಯಾಂಕರ್‍ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಅಲ್ಲದೇ 4 ವರ್ಷದ ಮಗು ತುಂಬಾ ಹಠಮಾರಿ ಹಾಗೂ ಮೊಂಡುತನದಿಂದ ವರ್ತಿಸಿತ್ತಿತ್ತು. ಎಷ್ಟೇ ಬಾರಿ ಹೇಳಿದರೂ, ಯಾರ ಮಾತನ್ನು ಕೇಳುತ್ತಿರಲಿಲ್ಲ. ಇದರಿಂದ ಸಿಟ್ಟಿಗೆಂದು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಅಧಿಕಾರಿ ವೈಷ್ಣೋಯಿ ತಿಳಿಸಿದರು.

    ಘಟನೆ ಸಂಬಂಧ ಅಜ್ಜಿಯ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    ತಿರುವನಂತಪುರಂ: ನಿರ್ದಯಿ ಮೊಮ್ಮಗಳೊಬ್ಬಳು 90 ವರ್ಷದ ಅಜ್ಜಿಗೆ ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾಗಿ ಥಳಿಸಿ ಹಲ್ಲೆಗೈದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಅಯಿಕ್ಕೆರ ಎಂಬಲ್ಲಿ ನಡೆದಿದೆ.

    30 ವರ್ಷದ ದೀಪಾ ತನ್ನ ತಾಯಿಯ ತಾಯಿ ಕಲ್ಯಾಣಿ ಅವರಿಗೆ ಹಲ್ಲೆ ನಡೆಸಿದ್ದಾಳೆ. ಅಜ್ಜಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಪ್ರಕರಣ ಸಂಬಂಧಿಸಿದಂತೆ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ.

    ವಿಡಿಯೊದಲ್ಲೇನಿದೆ?: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಅಜ್ಜಿ ಕಲ್ಯಾಣಿ ಅಮ್ಮ ಮನೆಯ ಮುಂದೆ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ದೀಪಾ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾಳೆ. ಅಲ್ಲದೇ ಅಜ್ಜಿ ಮೈಮೇಲಿದ್ದ ಬಟ್ಟೆಯನ್ನು ಎಳೆದಾಡಿ, ಅದರಲ್ಲೇ ಥಳಿಸಿದ್ದಾಳೆ. ಬಳಿಕ  ಅಜ್ಜಿಯನ್ನು ಮಲಗಿದ್ದಲ್ಲಿಂದ ಎಬ್ಬಿಸಿ, ಕುಳಿತುಕೊಳ್ಳಿಸಿ ಮತ್ತೆ ಹಲವಾರು ಬಾರಿ ಥಳಿಸುವ ಮೂಲಕ ಕ್ರೂರ ವರ್ತನೆ ತೋರಿದ್ದಾಳೆ. ಹೀಗೆ 5 ನಿಮಿಷಗಳ ಕಾಲ ಚೆನ್ನಾಗಿ ಥಳಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದ ಸಾರ್ವಜನಿಕರು ಹಲ್ಲೆ ನಡೆಸದಂತೆ ಪರಿಪರಿಯಾಗಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ವೃದ್ಧೆಯ ಸಹಾಯಕ್ಕೆ ನಿಂತ ಸಾರ್ವಜನಿಕರ ಮೇಲೆಯೇ ದೀಪಾ ರೇಗಾಡಿರುವುದು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.

    ಹಲ್ಲೆ ಮಾಡಲು ಕಾರಣವೇನು?: ಹಲ್ಲೆ ನಡೆಸಿದ ದೀಪಾ ತನ್ನ ಇಬ್ಬರು ಮಕ್ಕಳೊಂದಿಗೆ ಅಮ್ಮ ಹಾಗೂ ಅಜ್ಜಿಯೊಂದಿಗೆ ವಾಸವಿದ್ದರು. ಕೆಲ ತಿಂಗಳ ಹಿಂದೆ ದೀಪಾ ಕೆಲಸ ಕಳೆದುಕೊಂಡಿದ್ದಳು. ಹೀಗಾಗಿ ಹಣದ ಸಮಸ್ಯೆ ಎದುರಿಸುತ್ತಿದ್ದಳು. ಈ ಮಧ್ಯೆ ಅಜ್ಜಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುತ್ತಿತ್ತು. ಇದರಿಂದ ದೀಪಾ ಕಿರಿಕಿರಿ ಅನುಭವಿಸುತ್ತಿದ್ದು, ಅಜ್ಜಿ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 323ರ (ಸ್ವಯಂಪ್ರೇರಿತ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೂ ಆರೋಪಿ ಅಮ್ಮ ಹಾಗೂ ಅಜ್ಜಿಯನ್ನು ರಕ್ಷಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    https://www.facebook.com/kayalfriends/videos/2021498344530524/