Tag: Grammy Awards

  • ಬೆಂಗಳೂರು ಕಸ್ಟಮ್ಸ್‌ನಲ್ಲಿ ಸಿಲುಕಿ, ರಿಕಿ ಕೇಜ್ ಕೈಗೆ ಸಿಕ್ಕಿರಲಿಲ್ಲ ಗ್ರ್ಯಾಮಿ ಪದಕ : 2 ತಿಂಗಳ ನಿರಂತರ ಪರದಾಟ

    ಬೆಂಗಳೂರು ಕಸ್ಟಮ್ಸ್‌ನಲ್ಲಿ ಸಿಲುಕಿ, ರಿಕಿ ಕೇಜ್ ಕೈಗೆ ಸಿಕ್ಕಿರಲಿಲ್ಲ ಗ್ರ್ಯಾಮಿ ಪದಕ : 2 ತಿಂಗಳ ನಿರಂತರ ಪರದಾಟ

    ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದು ಬೀಗುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ನಾಡಿನ ಸಾಕಷ್ಟು ದಿಗ್ಗಜರು ರಿಕಿ ಕೇಜ್‌ಗೆ ಅಭಿನಂದಿಸಿದ್ದರು. ಅದರಲ್ಲೂ ಕನ್ನಡದ ನೆಲೆ ರಿಕಿ ಕೇಜ್ ಬಗ್ಗೆ ಗುಣಗಾನ ಕೂಡ ಮಾಡಿತ್ತು. ಆದರೆ ಎರಡು ತಿಂಗಳಿಂದ ಗ್ರ್ಯಾಮಿ ಅವಾರ್ಡ್ ಅವರ ಕೈಗೆ ಬಂದಿರಲಿಲ್ಲ ಎನ್ನುವುದು ಅಚ್ಚರಿ ಸಂಗತಿ.  ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್

    ಗ್ರ್ಯಾಮಿ ಪ್ರಶಸ್ತಿ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕರ್ನಾಟಕದ ಸಾಕಷ್ಟು ಗಣ್ಯರು ರಿಕಿಯನ್ನು ಅಭಿನಂದಿಸಿದ್ದರು. ಆದರೆ ಎರಡು ತಿಂಗಳುಗಳ ಕಾಲ ಗ್ರ್ಯಾಮಿ ಪದಕವು ಬೆಂಗಳೂರಿನ ಕಸ್ಟಮ್ಸ್ ಇಲಾಖೆಯಲ್ಲಿ ಸಿಲುಕಿಕೊಂಡಿತ್ತು ಎನ್ನುವುದು ನೋವಿನ ಸಂಗತಿಯಾಗಿತ್ತು. ಹಾಗಾಗಿ ಅವರು ಇಂದು ಈ ಕುರಿತು ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲೇ ಆಗಿರುವ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಅವರು ಮತ್ತೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

    ಮುಂಜಾನೆ ಟ್ವೀಟ್‌ ಮಾಡಿದ್ದ ರಿಕಿ, ‘ನನಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಆದರೆ, ಮೆಡಲ್ 2 ತಿಂಗಳ ಕಾಲದಿಂದ ಬೆಂಗಳೂರು ಕಸ್ಟಮ್ಸ್‌ನಲ್ಲಿದೆ. ಸಂಬಂಧಪಟ್ಟವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ’ ಎಂದು ಬರೆದು, ಸಂಬಂಧಪಟ್ಟ ಸಂಸ್ಥೆಗಳಿಗೆ ಟ್ಯಾಗ್ ಮಾಡಿದ್ದರು. ಟ್ವೀಟ್ ಮಾಡುತ್ತಿದ್ದಂತೆಯೇ ಕಸ್ಟಮ್ಸ್‌ ಅಧಿಕಾರಿಗಳನ್ನು ನೆಟ್ಟಿಗರು ತರಾಟೆಗೆ ತಗೆದುಕೊಂಡರು. ಆನಂತರ ಸಮಸ್ಯೆ ಸರಿ ಹೋಗಿದೆ ಎಂದು ರಿಕಿ ಮರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

    ಕಸ್ಟಮ್ಸ್ ಅಧಿಕಾರಿಗಳಿಗೆ ಅದರಲ್ಲಿ ಗ್ರ್ಯಾಮಿ ಅವಾರ್ಡ್ ಇರುವುದು ಗೊತ್ತಿರದೇ ಇರುವ ಕಾರಣಕ್ಕಾಗಿ ತಮ್ಮ ನಿಯಮಗಳನ್ನು ಅನುಸರಿಸಿದ್ದಾರೆ. ಈಗ ಪ್ರಕ್ರಿಯೆ ಎಲ್ಲ ಮುಗಿದಿದೆ. ಹಾಗಾಗಿ ಶೀಘ್ರದಲ್ಲೇ ಪದಕಗಳು ಕೈ ಸೇರಲಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

  • ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಬೆಂಗಳೂರು: ಏಪ್ರಿಲ್ 4 ರಂದು ಗ್ರ್ಯಾಮಿ ಪ್ರಶಸ್ತಿ ಗೆದ್ದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‍ರನ್ನು ಲಹರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯ್ತು. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಲಹರಿ ಸಂಸ್ಥೆ ಮುಖ್ಯಸ್ಥ ಮನೋಹರ್ ನಾಯ್ಡು, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್, ಸಿಇಓ ಅರುಣ್ ಸಿಂಗ್, ನಟರಾದ ಶಿವಣ್ಣ, ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮನೋಹರ್ ಅವರು ನಾವು ಒಟ್ಟಿಗೆ ಬೆಳೆದವರು. ಅಕ್ಕ ಪಕ್ಕದ ಮನೆಯವರು. ಮನೋಹರ್ ಹಾರ್ಡ್ ವರ್ಕ್ ಮಾಡ್ತಾರೆ. ಓನ್ಲಿ ಹಾರ್ಡ್ ವರ್ಕ್ ಮಾಡ್ತಾರೆ. ಬಟ್ ವೇಲು ಹಾರ್ಡ್ ವರ್ಕಿಂಗ್ & ಫನ್ ಲೀವಿಂಗ್ ಮನುಷ್ಯ ಎಂದರು. ಹೀಗೆ ಇಂಗ್ಲೀಷ್‍ನಲ್ಲಿ ಮಾತು ಶುರು ಮಾಡಿದ ಸಿಎಂಗೆ ಮುಂದೆ ಕುಳಿತಿರುವ ಒಬ್ಬರು ಕನ್ನಡ ಸರ್ ಅಂದ್ರು. ಕೂಡಲೇ ಉತ್ತರಿಸಿದ ಸಿಎಂ, ತಡಿಯಪ್ಪ ನಮ್ಮದು ಉತ್ತರ ಕರ್ನಾಟಕದ ಕನ್ನಡ. ನಿಮ್ಮದೆಲ್ಲಾ ಅರ್ಧಂಬಂರ್ಧ ಕನ್ನಡ ನಮ್ಮದು ಅಪ್ಪಟ ಕನ್ನಡ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ನನಗೆ ಗ್ರ್ಯಾಮಿ ಅವಾರ್ಡ್ ಅಂದ್ರೆ ಗೊತ್ತಿರಲಿಲ್ಲ. ನಾನು ಗ್ರ್ಯಾಮಿ ಅವಾರ್ಡ್ ಅಂದ್ರೆ ಜಿಂಗ್ ಚಾಂಗ್ ಇರುತ್ತೆ ಅನ್ಕೊಂಡು ಬಂದಿದ್ದೆ. ಇಲ್ಲಿ ಬಂದು ಆ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಖುಷಿ ಆಯ್ತು. ಸಾರ್ಥಕ ಅನ್ನಿಸ್ತು ಎಂದರು. ಇದನ್ನೂ ಓದಿ: ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: 400 ಕೋಟಿಯತ್ತ `ಕೆಜಿಎಫ್ 2′

    ಇದೇ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಮಾತನಾಡಿ, ರಿಕ್ಕಿ ಕೇಜ್‍ರನ್ನು 12-13 ವರ್ಷದ ಹಿಂದೆ ನಮ್ಮದೊಂದು ಸಣ್ಣ ಕೆಲಸಕ್ಕೆ ಸಂಪರ್ಕಿಸಿದ್ದೆ. ಅವರ ಪ್ಯಾಶನ್ ನೋಡಿ ಅನ್ನಿಸ್ತು. ಇವರು ನಮಗೆ ವರ್ಕೌಟ್ ಆಗಲ್ಲ ಎಂದು. ಹಾಗಿತ್ತು ಅವರ ಕೆಲಸ. ಕನ್ನಡಿಗರು ಎದ್ದು ನಿಂತ್ರೆ ಹೀಗೆ ಗ್ರ್ಯಾಮಿ ಅವಾರ್ಡ್ ಬರುತ್ತೆ. ಕೆಜಿಎಫ್ ನಂತಹ ಸಿನಿಮಾವೂ ಬರುತ್ತೆ ಎಂದು ಹಾಡಿ ಹೊಗಳಿದರು.

    ಈ ಮೊದಲು ವೇದಿಕೆಯಲ್ಲಿ ಮಾತು ಪ್ರಾರಂಭಿಸೋದಕ್ಕೂ ಮುನ್ನ ಸಿಎಂ ಜೊತೆ ರಂಗನಾಥ್ ಮಾತಿನ ಕೌಂಟರ್ ನೀಡಿದರು. ರಂಗನಾಥ್ ವೇದಿಕೆ ಏರುತ್ತಿದ್ದಂತೆ ತಾವು ಕುಳಿತಲ್ಲಿಯೇ ಪ್ರೈಮ್ ಟೈಂ ಆಯ್ತು ಎಂದು ಸಿಎಂ ಕಾಲೆಳೆದರು. ಈ ವೇಳೆ ರಂಗನಾಥ್, ನಾನು ಇಲ್ಲಿರೋದು ಬಿಟ್ಟು ಅಲ್ಲಿದ್ರೆ ನಿಮಗೇ ಡೇಂಜರ್ ಎಂದು ನಗುತ್ತಾ ಉತ್ತರಿಸಿದ್ರು.

    ಈ ಮೊದಲು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‍ರನ್ನು ಸನ್ಮಾನಿಸಿದ್ರು. ಗ್ರ್ಯಾಮಿ ಪ್ರಶಸ್ತಿ ಪಡೆದ ಡಿವೈನ್ ಟೈಡ್ಸ್ ಆಲ್ಬಂ ಅನ್ನು ಲಹರಿ ಸಂಸ್ಥೆಯೇ ನಿರ್ಮಿಸಿತ್ತು.