Tag: grammy award

  • ಗ್ರ್ಯಾಮಿ ಪ್ರಶಸ್ತಿ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ

    ಗ್ರ್ಯಾಮಿ ಪ್ರಶಸ್ತಿ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ

    ನಿನ್ನೆ ಗ್ರ್ಯಾಮಿ ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತದ ಸಂಗೀತಗಾರರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಸಾಧಕರ ಸಾಧನೆಯನ್ನು ಪ್ರಧಾನಿ ಸ್ಮರಿಸಿದ್ದಾರೆ. ಕಳೆದ ವರ್ಷವೂ ಪ್ರಶಸ್ತಿ ಪಡೆದಿದ್ದ ರಿಕ್ಕಿ ಕೇಜ್ ಗೂ ಪ್ರಧಾನ ಅಭಿನಂದನೆ (congratulations) ಸಲ್ಲಿಸಿದ್ದರು.

    ನಿನ್ನೆಯಷ್ಟೇ 66ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Award) ಪ್ರಶಸ್ತಿ ಪ್ರಕಟವಾಗಿದ್ದು, ಭಾರತಕ್ಕೆ ಮೂರು ಪ್ರಶಸ್ತಿಗಳು ಸಂದಿವೆ. ದಿ ಮೂಮೆಂಟ್ ಆಲ್ಬಂಗಾಗಿ ಖ್ಯಾತ ಸಂಗೀತಗಾರ ಜಾಕಿರ್ ಹುಸೇನ್ (Zakir Hussain) ಅವರ ಬ್ಯಾಂಡ್ ಶಕ್ತಿಗೆ ಪ್ರಶಸ್ತಿ ಬಂದಿದ್ದು, ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂನಲ್ಲಿ ಈ ಪ್ರಶಸ್ತಿ ಸಂದಿದೆ.

    ರಾಕೇಶ್ ಚೌರಾಸಿಯಾಗೆ (Rakesh Chaurasi) ಎರಡು ಗ್ರ್ಯಾಮಿ ಅವಾರ್ಡ್ ದೊರಕಿದ್ದು, ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ವಾದ್ಯಗಳ ವಿಭಾಗದಲ್ಲಿ ಈ ಎರಡು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಬೇರೆ ಬೇರೆ ಸಂಗೀತಗಾರರು ಪಡೆದುಕೊಂಡಿದ್ದಾರೆ.

     

    ಭಾರತಕ್ಕೆ ಈ ಬಾರಿ ಮೂರು ಗ್ರ್ಯಾಮಿ ಪ್ರಶಸ್ತಿಗಳು ಬಂದಿರುವುದಕ್ಕೆ ರಿಕಿ ಕೇಜ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.

  • ಭಾರತಕ್ಕೆ ಮೂರು ಗ್ರ್ಯಾಮಿ ಪ್ರಶಸ್ತಿ: ಜೈ ಹೋ ಎಂದ ಸಂಗೀತ ಪ್ರೇಮಿಗಳು

    ಭಾರತಕ್ಕೆ ಮೂರು ಗ್ರ್ಯಾಮಿ ಪ್ರಶಸ್ತಿ: ಜೈ ಹೋ ಎಂದ ಸಂಗೀತ ಪ್ರೇಮಿಗಳು

    ಇಂದು 66ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Award) ಪ್ರಶಸ್ತಿ ಪ್ರಕಟವಾಗಿದ್ದು, ಭಾರತಕ್ಕೆ ಮೂರು ಪ್ರಶಸ್ತಿಗಳು ಸಂದಿವೆ. ದಿ ಮೂಮೆಂಟ್ ಆಲ್ಬಂಗಾಗಿ ಖ್ಯಾತ ಸಂಗೀತಗಾರ ಜಾಕಿರ್ ಹುಸೇನ್ (Zakir Hussain) ಅವರ ಬ್ಯಾಂಡ್ ಶಕ್ತಿಗೆ ಪ್ರಶಸ್ತಿ ಬಂದಿದ್ದು, ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂನಲ್ಲಿ ಈ ಪ್ರಶಸ್ತಿ ಸಂದಿದೆ.

    ರಾಕೇಶ್ ಚೌರಾಸಿಯಾಗೆ (Rakesh Chaurasi) ಎರಡು ಗ್ರ್ಯಾಮಿ ಅವಾರ್ಡ್ ದೊರಕಿದ್ದು, ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ವಾದ್ಯಗಳ ವಿಭಾಗದಲ್ಲಿ ಈ ಎರಡು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಬೇರೆ ಬೇರೆ ಸಂಗೀತಗಾರರು ಪಡೆದುಕೊಂಡಿದ್ದಾರೆ.

    ಭಾರತಕ್ಕೆ ಈ ಬಾರಿ ಮೂರು ಗ್ರ್ಯಾಮಿ ಪ್ರಶಸ್ತಿಗಳು ಬಂದಿರುವುದಕ್ಕೆ ರಿಕಿ ಕೇಜ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.

  • ಗ್ರ್ಯಾಮಿ ಪ್ರಶಸ್ತಿಗಾಗಿ ಪಿಎಂ ಮೋದಿ ವಿಡಿಯೋ ನಾಮ ನಿರ್ದೇಶನ

    ಗ್ರ್ಯಾಮಿ ಪ್ರಶಸ್ತಿಗಾಗಿ ಪಿಎಂ ಮೋದಿ ವಿಡಿಯೋ ನಾಮ ನಿರ್ದೇಶನ

    ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಾಗಿ (Grammy Award) ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯೂ ಭಾರತದಿಂದ ಕೆಲ ವಿಡಿಯೋಗಳು ಪ್ರಶಸ್ತಿಗಾಗಿ ಕಳುಹಿಸಲಾಗಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೊದಿ (Narendra Modi) ಅವರು ಕಾಣಿಸಿಕೊಂಡಿದ್ದ ಸಿರಿಧಾನ್ಯಗಳ ಮೇಲಿನ ಹಾಡನ್ನು ಗ್ರ್ಯಾಮಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ.

    ಪೌಷ್ಠಿಕ ಆಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳನ್ನು ಈ ಹಾಡಿನಲ್ಲಿ ಬಿಂಬಿಸಲಾಗಿತ್ತು. ಅಬಂಡನ್ಸ್ ಆಫ್ ಮಿಲೆಟ್ಸ್ಹೆ (Abundance of Millets) ಸರಿನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿತ್ತು. ಈಗಾಗಲೇ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿರುವ ಗಾಯಕ ಫಾಲು ಮತ್ತು ಅವರ ಪತಿ ಗೌರವ್ ಶಾ ಈ ಹಾಡಿಗೆ ದನಿಯಾಗಿದ್ದರು.

    ಈ ಹಾಡಿನ ವಿಶೇಷ ಅಂದರೆ, ಮೋದಿ ಅವರು ಕೂಡ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗಾಯಕಿ ಫಲ್ಗುಣಿ ಕಳೆದ ವರ್ಷ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಈ ಹಾಡಿನ ಪರಿಕಲ್ಪನೆ ಮೂಡಿ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

  • ರಿಕ್ಕಿ ಕೇಜ್ ಗೆ ಮೂರನೇ ಬಾರಿ ಗ್ರ್ಯಾಮಿ ಅವಾರ್ಡ್ : ಅಭಿನಂದನೆಯ ಮಹಾಪುರ

    ರಿಕ್ಕಿ ಕೇಜ್ ಗೆ ಮೂರನೇ ಬಾರಿ ಗ್ರ್ಯಾಮಿ ಅವಾರ್ಡ್ : ಅಭಿನಂದನೆಯ ಮಹಾಪುರ

    ಅಮೆರಿಕಾದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ವಾಸವಿರುವ ರಿಕ್ಕಿ ಕೇಜ್ ಮೂರನೇ ಬಾರಿ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ. ಗ್ರ್ಯಾಮಿ ಅವಾರ್ಡ್ ಘೋಷಣೆ ಆಗುತ್ತಿದ್ದಂತೆಯೇ ರಿಕ್ಕಿ ಅಭಿಮಾನಿಗಳು ಅಭಿನಂದನೆಗಳ ಮಹಾಪುರವನ್ನೇ ಹರಿಸಿದ್ದಾರೆ. 2015ರಲ್ಲಿ ಇವರ ‘ವಿಂಡ್ಸ್ ಆಫ್ ಸಂಸಾರ’ ಹೆಸರಿನ ಆಲ್ಬಂಗೆ ಮೊದಲ ಬಾರಿಗೆ ಗ್ರ್ಯಾಮಿ ಅವಾರ್ಡ್ ದೊರೆತಿತ್ತು.  ಅಲ್ಲದೇ, ಕಳೆದ ವರ್ಷವಷ್ಟೇ ಎರಡನೇ ಬಾರಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು.

    ಈ ಬಾರಿ ಅವರ ‘ಡಿವೈನ್ ಟೈಡ್ಸ್’ ಹೆಸರಿನ ಆಲ್ಬಂಗೆ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಘೋಷಣೆಯಾಗಿದ್ದು, ಸ್ವೀವರ್ಟ್ ಕೋಪ್ ಲ್ಯಾಂಡ್ ಜೊತೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ ರಿಕ್ಕಿ ಕೇಜ್. ಡಿವೈನ್ ಟೈಡ್ಸ್ ಎರಡನೇ ಬಾರಿಗೆ ನಾಮಿನೇಟ್ ಆಗಿರೋದನ್ನು ಅವರು ಖುಷಿಯನ್ನು ಹಂಚಿಕೊಂಡಿದ್ದರು. ಅಲ್ಲದೇ, ಪ್ರಶಸ್ತಿ ಬಂದಷ್ಟೇ ಖುಷಿಯಾಗಿದೆ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಪ್ರಶಸ್ತಿಯೂ ಬಂದಿದೆ.

    ಒಟ್ಟು ಮೂರು ಬಾರಿ, ಸತತ ಎರಡು ಬಾರಿ ಪ್ರಶಸ್ತಿ ಪಡೆದ ಭಾರತೀಯ ಎನ್ನುವ ಹೆಗ್ಗಳಿಕೆ ರಿಕಿ ಕೇಸ್ ಅವರದ್ದು. ಕಳೆದ ವರ್ಷವೂ ಅವರಿಗೆ ಗ್ರ್ಯಾಮಿ ಅವಾರ್ಡ್ ದೊರೆತಿತ್ತು. ಈ ಬಾರಿಯೂ ಅವರಿಗೆ ಗೌರವ ದೊರೆತಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ನೂರಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಿಕಿ ಕೇಜ್ ಒಂದೇ ಟ್ವೀಟ್‌ಗೆ ಕೈ ಸೇರಿದ ಗ್ರ್ಯಾಮಿ ಪದಕ : ಎರಡು ತಿಂಗಳಿಂದ ಕಸ್ಟಮ್ ಗೂಡಿನಲ್ಲಿತ್ತು ಗ್ರ್ಯಾಮಿ

    ರಿಕಿ ಕೇಜ್ ಒಂದೇ ಟ್ವೀಟ್‌ಗೆ ಕೈ ಸೇರಿದ ಗ್ರ್ಯಾಮಿ ಪದಕ : ಎರಡು ತಿಂಗಳಿಂದ ಕಸ್ಟಮ್ ಗೂಡಿನಲ್ಲಿತ್ತು ಗ್ರ್ಯಾಮಿ

    ನಿನ್ನೆಯಷ್ಟೇ ತಮ್ಮ ಗ್ರ್ಯಾಮಿ ಪ್ರಶಸ್ತಿ ಪದಕವು ಎರಡು ತಿಂಗಳಿಂದ ಕಸ್ಟಮ್‌ನಲ್ಲಿದೆ. ಕೊರಿಯರ್ ಮತ್ತು ಕಸ್ಟಮ್ ಅಧಿಕಾರಿಗಳ ಅಸಹಕಾರದಿಂದಾಗಿ ಇನ್ನೂ ನನ್ನ ಕೈಗೆ ಪದಕ ಸಿಕ್ಕಿಲ್ಲವೆಂದು ರಿಕಿ ಟ್ವೀಟ್‌ ಮಾಡಿದ್ದರು. ಟ್ವೀಟ್ ಮಾಡುತ್ತಿದ್ದಂತೆಯೇ ರಿಕಿ ಅಭಿಮಾನಿಗಳು ಕಸ್ಟಮ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದರು. ರಿಕಿ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕಸ್ಟಮ್ ಅಧಿಕಾರಿಗಳು, ಆಗಿರುವ ಸಮಸ್ಯೆಯನ್ನು ಬೇಗ ಸರಿಪಡಿಸಿ ಪದಕ ತಲುಪಿಸಲಾಗುವುದು ಎಂದಿದ್ದರು.

    ಕಸ್ಟಮ್ಸ್ ಅಧಿಕಾರಿಗಳಿಗೆ ಅದರಲ್ಲಿ ಗ್ರ್ಯಾಮಿ ಅವಾರ್ಡ್ ಇರುವುದು ಗೊತ್ತಿರದೇ ಇರುವ ಕಾರಣಕ್ಕಾಗಿ ತಮ್ಮ ನಿಯಮಗಳನ್ನು ಅನುಸರಿಸಿದ್ದಾರೆ. ಈಗ ಪ್ರಕ್ರಿಯೆ ಎಲ್ಲ ಮುಗಿದಿದೆ. ಹಾಗಾಗಿ ಶೀಘ್ರದಲ್ಲೇ ಪದಕಗಳು ಕೈ ಸೇರಲಿವೆ ಎಂದು ಸಂಜೆ ಮತ್ತೆ ರಿಕಿ ಟ್ವಿಟ್ಟರ್‌ ಮೂಲಕ ಸ್ಪಷ್ಟನೆ ನೀಡಿದ್ದರು. ಕಸ್ಟಮ್ ಅಧಿಕಾರಿಗಳು ಅಂದುಕೊಂಡಂತೆ ನಡೆದುಕೊಂಡಿದ್ದಾರೆ. ಆಗಿದ್ದ ಸಮಸ್ಯೆಯನ್ನು ಸರಿಪಡಿಸಿ ಇಂದು ಗ್ರ್ಯಾಮಿ ಪದಕವನ್ನು ರಿಕಿ ಕೇಜ್ ಅವರಿಗೆ ಮುಟ್ಟಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿ, ಧನ್ಯವಾದಗಳನ್ನು ಕೂಡ ಹೇಳಿದ್ದಾರೆ.  ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್

    ರಿಕಿ ಕೇಜ್ ಅವರಿಗೆ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ನಾಡಿನ ಸಾಕಷ್ಟು ದಿಗ್ಗಜರು ರಿಕಿ ಕೇಜ್‌ಗೆ ಅಭಿನಂದಿಸಿದ್ದಾರೆ. ಅದರಲ್ಲೂ ಕನ್ನಡದ ನೆಲೆ ರಿಕಿ ಕೇಜ್ ಬಗ್ಗೆ ಗುಣಗಾನ ಕೂಡ ಮಾಡಿದೆ. ಗ್ರ್ಯಾಮಿ ಪ್ರಶಸ್ತಿ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕರ್ನಾಟಕದ ಸಾಕಷ್ಟು ಗಣ್ಯರು ರಿಕಿಯನ್ನು ಅಭಿನಂದಿಸಿದ್ದಾರೆ.

  • ಗ್ರ್ಯಾಮಿ ಅವಾರ್ಡ್ ಸ್ವೀಕರಿಸುವಾಗ ಹಾಕಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ನಲ್ಲೂ ಧರಿಸಿದ ರಿಕ್ಕಿ – ಹೇಳಿದ್ದೇನು ಗೊತ್ತಾ?

    ಗ್ರ್ಯಾಮಿ ಅವಾರ್ಡ್ ಸ್ವೀಕರಿಸುವಾಗ ಹಾಕಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ನಲ್ಲೂ ಧರಿಸಿದ ರಿಕ್ಕಿ – ಹೇಳಿದ್ದೇನು ಗೊತ್ತಾ?

    ವಿಶ್ವದ ಅತ್ಯಂತ ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಈಗಾಗಲೇ ಶುರುವಾಗಿದೆ. ಈ ಕಾನ್ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್‌ನ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಕೂಡ ಭಾಗಿಯಾಗಿದ್ದು, ಗ್ರ್ಯಾಮಿ ಪ್ರಶಸ್ತಿ ಸಮಾರಂಭಕ್ಕೆ ಧರಿಸಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ಗೆ ಧರಿಸಿರುವ ಕುರಿತು ವಿಶೇಷ ಪೋಸ್ಟ್‌ವೊಂದನ್ನು ರಿಕ್ಕಿ ಕೇಜ್ ಶೇರ್ ಮಾಡಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾನ್ ಸಿನಿಮೋತ್ಸವಕ್ಕೆ ಭರ್ಜರಿ ಚಾಲನೆ ನೀಡಿದ್ದು, ಎಲ್ಲಾ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮೋತ್ಸವಕ್ಕೆ ಸಾಥ್ ನೀಡಿದ್ದಾರೆ. ಜತೆಗೆ ಕಾನ್ ಫೆಸ್ಟಿವಲ್‌ನಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಭಾಗಿಯಾಗಿದ್ದಾರೆ. ಕಾನ್‌ ಸಿನಿಮೋತ್ಸವದಲ್ಲಿ ವಿಭಿನ್ನ ಧ್ವನಿ ಎತ್ತಿದ ರಿಕ್ಕಿ ಕೇಜ್.‌ ಭೂಮಿ ಉಳಿಸುವುದಕ್ಕಾಗಿ ಗ್ರ್ಯಾಮಿ ಮತ್ತು ಕಾನ್‌ ಚಿತ್ರೋತ್ಸವಕ್ಕೆ ಒಂದೇ ಬಟ್ಟೆ ಹಾಕಿದ್ದೀನಿ ಎಂದು ರಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದಾರೆ.

    ಗ್ರ್ಯಾಮಿ ಮತ್ತು ಕಾನ್ ಫೆಸ್ಟಿವಲ್ ಎರಡು ಸಮಾರಂಭಕ್ಕೆ ಒಂದೇ ಬಟ್ಟೆ ಧರಿಸಿರುವ ಫೋಟೊ ಶೇರ್ ಮಾಡಿ, ಈ ವರ್ಷ ನಾನು ವಿಶ್ವದ ದೊಡ್ಡ ವೇದಿಕೆಯಲ್ಲಿ ಗ್ರ್ಯಾಮಿ ಮತ್ತು ಕಾನ್ ಸಿನಿಮೋತ್ಸವದಲ್ಲಿ ಎರಡು ಕಡೆ ಒಂದೇ ಬಟ್ಟೆ ಧರಿಸಿದ್ದೆ, ವೇಗದ ಫ್ಯಾಶನ್ ಯಾವಗಲೂ ಫ್ಯಾಶನ್ ಅಲ್ಲ. ಫ್ಯಾಶನ್ ಕ್ಷೇತ್ರವು ಗ್ರಹದ ಮೇಲೆ ಅತ್ಯಂತ ಮಾಲಿನ್ಯ ಮಾಡುತ್ತದೆ. ನೀವು ಧರಿಸಿದ್ದನ್ನು ಭೂಮಿ ನೆನಪಿಸಿಕೊಳ್ಳುವುದಿಲ್ಲ ಎಂದು ಫ್ಯಾಶನ್ ಮತ್ತು ಮಾಲಿನ್ಯ ಕುರಿತು ರಿಕ್ಕಿ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    ಭೂಮಿ ಉಳಿಸುವುದಕ್ಕಾಗಿ ಗ್ರ್ಯಾಮಿ ಮತ್ತು ಕಾನ್‌ ಚಿತ್ರೋತ್ಸವಕ್ಕೆ ಒಂದೇ ಬಟ್ಟೆ ಹಾಕಿದ್ದೀನಿ ಮಾಲಿನ್ಯದ ಕುರಿತು  ಅರ್ಥಪೂರ್ಣ ಸಂದೇಶ ನೀಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.

  • ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ  ಕೇಜ್

    ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ಹೆಮ್ಮೆಯ ಕನ್ನಡಿಗ, ಭಾರತೀಯ ಸಂಗೀತ ಸಂಯೋಜಕ ರಿಕಿ  ಕೇಜ್ ಮೊನ್ನೆಯಷ್ಟೇ ಎರಡನೇ ಬಾರಿಗೆ ಗ್ರ್ಯಾಮಿ ಆವಾರ್ಡ್ ಪಡೆದುಕೊಂಡಿದ್ದಾರೆ. ಎಮ್.ಜಿ.ಎಂ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್ ನಲ್ಲಿ ನಡೆದ ಪ್ರತಿಷ್ಠಿತ 2022 ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದ ರಿಕಿ  ಕೇಜ್ ನಂತರ ಭಾರತಕ್ಕೆ ಆಗಮಿಸಿದ್ದರು. ಇದೀಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ರಿಕಿ ಕೇಜ್ ಅವರಿಗೆ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ರಿಕಿಗೆ ಶುಭಾಶಯ ಕೋರಿದ್ದರು. ಎರಡನೇ ಬಾರಿಯೂ ಟ್ವಿಟರ್ ಮೂಲಕ ವಿಶ್ ಮಾಡಿದ್ದರು. ಹೀಗಾಗಿ ಮೋದಿ ಅವರನ್ನು ರಿಕಿ ಭೇಟಿ ಮಾಡಿ, ಗ್ರ್ಯಾಮಿ ಅವಾರ್ಡ್ ಅನ್ನು ತೋರಿಸಿದ್ದಾರೆ.

     

    ರಿಕಿ  ಭೇಟಿ ನಂತರ ಪ್ರಧಾನಿಗಳು ಟ್ವಿಟ್ ಮಾಡಿದ್ದು’ಸಂಗೀತದ ಬಗೆಗಿನ ನಿಮ್ಮ ಒಲವು ಮತ್ತು ಬಲವು ಈ ಪ್ರತಿಷ್ಠಿತ ಪ್ರಶಸ್ತಿಯಿಂದಾಗಿ ಮತ್ತಷ್ಟು ಬಲಗೊಳ್ಳಲಿ. ನಿಮ್ಮನ್ನು ಭೇಟಿಯಾಗಿದ್ದು ಖುಷಿ ಆಯಿತು. ನಿಮ್ಮ ಮುಂದಿನ ಎಲ್ಲ ಕಾರ್ಯಗಳಿಗೂ ಯಶಸ್ಸು ದೊರೆಯಲಿ’ ಎಂದು ಟ್ವಿಟ್ ಮೂಲಕ ಹಾರೈಸಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಪ್ರತಿಯಾಗಿ ರಿಕಿ ಕೂಡ ಪ್ರಧಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ‘ಮೊದಲ ಬಾರಿಗೆ ನನಗೆ ಗ್ರ್ಯಾಮಿ ಅವಾರ್ಡ್ ಬಂದಾಗಲೂ ನೀವು ನನಗೆ ಹಾರೈಸಿದ್ದೀರಿ. ನಾನು ಆಗ ನಿಮ್ಮನ್ನು ಭೇಟಿ ಕೂಡ ಮಾಡಿದ್ದೆ. ಏಳು ವರ್ಷಗಳ ಹಿಂದಿನ ಭೇಟಿಯನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ನಾನು ಈ ಪ್ರಶಸ್ತಿಯನ್ನು ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಅರ್ಪಿಸುವೆ. ಭಾರತಕ್ಕಾಗಿ ಎರಡನೇ ಗ್ರ್ಯಾಮಿ ಅವಾರ್ಡ್ ಬಂದಾಗಲೂ ನೀವು ನನಗೆ ಹಾರೈಸಿದ್ದನ್ನು ಮರೆಯುವುದಿಲ್ಲ’ ಎಂದು ರಿಕಿ ಟ್ವೀಟ್ ಮಾಡಿದ್ದಾರೆ.

    ಲಹರಿ ಸಂಸ್ಥೆಯ ಮೂಲಕ ಹೊರ ಬಂದ ‘ಡಿವೈನ್ ಟೈಡ್ಸ್’ ಆಲ್ಬಂಗೆ ಈ ಬಾರಿ ರಿಕಿ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ. ಏಳು ವರ್ಷಗಳ ನಂತರ ಮತ್ತೊಂದು ಗ್ರ್ಯಾಮಿ ಕೈಯಲ್ಲಿ ಹಿಡಿದುಕೊಂಡು ಸಂಭ್ರಮಿಸಿದ್ದಾರೆ.

  • ಸದ್ಯವೇ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರ: ಲಹರಿ ವೇಲು

    ಸದ್ಯವೇ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರ: ಲಹರಿ ವೇಲು

    ಹರಿ ಮ್ಯೂಸಿಕ್ ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಸಹ ಬಂದಿದೆ. ರಿಕ್ಕಿ ಕೇಜ್ ಅವರಿಗೆ ಈ ಪ್ರಶಸ್ತಿ ಸಂದಿದೆ. ಈ ಎರಡು ಸಂತಸವನ್ನು ಹಂಚಿಕೊಳ್ಳಲು ಲಹರಿ ವೇಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು.

    ಕೇವಲ ಐನ್ನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ ಮನೋಹರ ನಾಯ್ಡು ಅವರು ಈ ಸಂಸ್ಥೆಯನ್ನು ಆರಂಭಿಸಿದರು. ಈಗ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬರಲು ನಿಮ್ಮೆಲ್ಲರ ಹಾರೈಕೆ ಕಾರಣ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ ‘ಡಿವೈನ್ ಟೈಡ್ಸ್’ ಆಲ್ಬಂಗೆ ಸಂಗೀತ ನೀಡಿದ್ದಕ್ಕಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಈ ಗೌರವಕ್ಕೆ ಪಾತ್ರರಾದ ರಿಕ್ಕಿಕೇಜ್ ಅವರನ್ನು ಅಭಿನಂದಿಸುತ್ತೇನೆ. ಈ ಪ್ರಶಸ್ತಿ ಸಮಾರಂಭಕ್ಕೆ ನಾನು ವೀಸಾ ಸಿಗದ ಕಾರಣದಿಂದ ಹೋಗಿರಲಿಲ್ಲ. ನನ್ನ ಅಣ್ಣನ ಮಗ ಚಂದ್ರು, ರಿಕ್ಕಿಕೇಜ್ ಅವರ ಜೊತೆಗೆ ಹೋಗಿದ್ದರು. ನಾವೆಲ್ಲರೂ ಮನೆಯಿಂದಲೇ ನೋಡಿ ಸಂತಸಪಟ್ಟೆವು. ಸದ್ಯದಲ್ಲೇ ರಿಕ್ಕಿಕೇಜ್ ಅವರ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರವೊಂದನ್ನು ನಮ್ಮ ಸಂಸ್ಥೆ ಮೂಲಕ ನಿರ್ಮಿಸುವ ತಯಾರಿ ನಡೆಯುತ್ತಿದೆ ಎಂದು ಲಹರಿ ವೇಲು ತಿಳಿಸಿದರು.

    ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಪ್ಯಾಂಡಮಿಕ್ ಸಮಯದಲ್ಲಿ ಈ ಆಲ್ಬಂ ನಿರ್ಮಾಣವಾಯಿತು. ಅನೇಕ ಕಲಾವಿದರನ್ನು ಜೂಮ್ ಕಾಲ್ ಹಾಗೂ ಮೆಸೇಜ್‍ಗಳ ಮೂಲಕ ಸಂಪರ್ಕ ಮಾಡಿದ್ದೆ. ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ಅರವತ್ತಕ್ಕೂ ಅಧಿಕರು ಭಾರತದವರು. ಮಿಕ್ಕವರು ಹೊರ ದೇಶದವರು. ಇಲ್ಲಿನ ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರ ಮುಂತಾದ ಕಲಾವಿದರು ಈ ಆಲ್ಬಂ ನಲ್ಲಿದ್ದಾರೆ. ನಾನು ಕನ್ನಡದಲ್ಲಿ ಆಕ್ಸಿಡೆಂಟ್, ವೆಂಕಟ ಇನ್ ಸಂಕಟ ಹಾಗೂ ಕ್ರೇಜಿ ಕುಟುಂಬ ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಆ ಮೂರು ಸಿನಿಮಾಗಳ ನಾಯಕ ರಮೇಶ್ ಅರವಿಂದ್ ಅವರೆ. ರಮೇಶ್ ನನ್ನ ಆತ್ಮೀಯ ಸ್ನೇಹಿತರು. ನನಗೆ ಸಿನಿಮಾಗಿಂತ ವಿಭಿನ್ನ ಆಲ್ಬಂಗಳನ್ನು ಮಾಡುವುದರಲ್ಲೇ ಆಸಕ್ತಿ ಹೆಚ್ಚು ಎಂದು ರಿಕ್ಕಿಕೇಜ್ ತಿಳಿಸಿದ್ದಾರೆ.

    ಪ್ರಶಸ್ತಿ ಪಡೆಯಲು ಲಹರಿ ಸಂಸ್ಥೆಯ ಚಂದ್ರು ಅವರೊಂದಿಗೆ ಹೋದ ಸಂದರ್ಭವನ್ನು ನೆನಪಿಸಿಕೊಂಡರು. ಹಾಗೂ ಮುಂದೆ ಸಹ ಲಹರಿ ಸಂಸ್ಥೆಯವರೊಂದಿಗೆ ಇರುವುದಾಗಿ ಹೇಳಿದರು.

    ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ರಿಕ್ಕಿಕೇಜ್, ನಮ್ಮ ಸಂಸ್ಥೆಯ ಕಾರ್ಯಗಳಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆ. ಅವರು ನಮ್ಮೊಂದಿಗೆ ಯಾವುದೇ ಅಗ್ರಿಮೆಂಟ್ ಸಹ ಮಾಡಿಕೊಂಡಿಲ್ಲ. ಲಹರಿ ಸಂಸ್ಥೆಯ ಚಂದ್ರು ಅವರು ಮಾತನಾಡಿ, ಇದೇ ಅವರ ಪ್ರೀತಿಗೆ ಸಾಕ್ಷಿ ಎಂದರು. ರಿಕ್ಕಿಕೇಜ್ ಅವರೊಂದಿಗೆ ಹದಿನೈದು ವರ್ಷಗಳಿಂದ ಜೊತೆಗಿರುವ ವಾಡಿಯಲ್ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ತಾಕತ್ತಿದ್ರೆ ಪ್ರಿಯಾಂಕಾರಂತೆ ಬಟ್ಟೆ ಧರಿಸಿ – ನೆಟ್ಟಿಗರಿಗೆ ನಟಿ ಹೀನಾ ಸವಾಲ್

    ತಾಕತ್ತಿದ್ರೆ ಪ್ರಿಯಾಂಕಾರಂತೆ ಬಟ್ಟೆ ಧರಿಸಿ – ನೆಟ್ಟಿಗರಿಗೆ ನಟಿ ಹೀನಾ ಸವಾಲ್

    ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬೋಲ್ಡ್ ಡ್ರೆಸ್ ಧರಿಸಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗಷ್ಟೇ ಪ್ರಿಯಾಂಕಾ ಅವರ ತಾಯಿ ಟ್ರೋಲಿಗರ ಚಳಿ ಬಿಡಿಸಿದ್ದರು. ಇದರ ಬೆನ್ನಲೇ ನಟಿ ಹೀನಾ ಖಾನ್ ಪ್ರಿಯಾಂಕಾ ಅವರ ಪರ ಬ್ಯಾಟ್ ಬೀಸುವ ಮೂಲಕ ನೆಟ್ಟಿಗರಿಗೆ ಸವಾಲ್ ಹಾಕಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ ಗ್ರ್ಯಾಮಿ ಅವಾರ್ಡ್ 2020 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗ್ಲಾಮರಸ್ ಡ್ರೆಸ್ ಹಾಕಿದ್ದ ಕಾರಣ ಸಿಕ್ಕಪಟ್ಟೆ ಟ್ರೋಲ್ ಆಗುತ್ತಿದ್ದರು. ಈ ಬಗ್ಗೆ ಕಿರುತೆರೆ ನಟಿ ಹೀನಾ ಖಾನ್ ಪ್ರತಿಕ್ರಿಯಿಸಿ, ತಾಕತ್ ಇದ್ರೆ ಪ್ರಿಯಾಂಕಾರಂತೆ ಬಟ್ಟೆ ಧರಿಸಿ ಎಂದು ಚಾಲೆಂಜ್ ಮಾಡಿದ್ದಾರೆ.

     

    View this post on Instagram

     

    This guy. #Grammys2020

    A post shared by Priyanka Chopra Jonas (@priyankachopra) on

    ಸಂದರ್ಶನದಲ್ಲಿ ಮಾತನಾಡಿದ ಹೀನಾ, ಇಂತಹ ಉಡುಪು ಧರಿಸಲು ಧೈರ್ಯ ಬೇಕಾಗುತ್ತದೆ. ತಾಕತ್ ಇದ್ದರೆ ಪ್ರಿಯಾಂಕಾ ಚೋಪ್ರಾ ಅವರಂತೆ ಬಟ್ಟೆ ಧರಿಸಿ ಎಂದು ಚಾಲೆಂಜ್ ಮಾಡಿದ್ದಾರೆ. ಅಲ್ಲದೆ ಪ್ರಿಯಾಂಕಾ ಅವರು ಟ್ರೋಲ್‍ಗಳಿಗೆ ತಲೆ ಕಡಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಮೊದಲು ಪ್ರಿಯಾಂಕಾ ಅವರ ತಾಯಿ ಮಧು ಅವರು, ಪ್ರಿಯಾಂಕಾ ಯಾರಿಗೂ ನೋವು ಮಾಡದಂತೆ ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುತ್ತಾಳೆ. ಅದು ಅವಳ ದೇಹ. ಅವಳಿಗೆ ಹೇಗೆ ಇಷ್ಟ ಇದೆಯೋ ಹಾಗೇ ಇರಲಿ ಎಂದು ಟ್ರೋಲ್ ಮಾಡಿದವರಿಗೆ ಚಾಟಿ ಬೀಸಿದ್ದರು.