Tag: grama vasthavya

  • ಛಬ್ಬಿಯಲ್ಲಿ ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ

    ಛಬ್ಬಿಯಲ್ಲಿ ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ

    ಹುಬ್ಬಳ್ಳಿ: ಹುಬ್ಬಳ್ಳಿ ಛಬ್ಬಿ ಗ್ರಾಮದಲ್ಲಿ ಬೆಳಗ್ಗಿನಿಂದ ಅಧಿಕಾರಿಗಳ ದಂಡು ಕಟ್ಟಿಕೊಂಡು ಗ್ರಾಮದ ಬೀದಿ ಸುತ್ತಿ ಜನರ ಅಹವಾಲುಗಳನ್ನು ಸ್ವೀಕರಿಸಿ ಪರಿಷ್ಕರಣೆ ಮಾರ್ಗ ತೋರಿದ ಕಂದಾಯ ಸಚಿವ ಆರ್.ಅಶೋಕ್ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಾಸ್ತವ್ಯ ಹೂಡಿದರು.

    ನಿನ್ನೆ ಮಧ್ಯಾಹ್ನ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿದ ಸಚಿವರಿಗೆ ತುಸು ಖಾರ ಎನಿಸಿತು. ರಾತ್ರಿ ಲಘು ಆಹಾರವಾಗಿ ಮೊಸರನ್ನ ಸೇವಿಸಿದರು.

    ಸರ್ಕಾರ ಶಾಲೆಯ ಕೊಠಡಿಯಲ್ಲಿ ಸಚಿವರಿಗಾಗಿ ಕೊಠಡಿಯಲ್ಲಿ ಚಾಪೆ, ದಿಂಬು, ಏರ್ ಕೂಲರ್, ಪ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಮಲಗುವ ಮುನ್ನ ಗ್ರಾಮದ ಬೀದಿಯಲ್ಲಿ ವಿಹರಿಸಿದ ಸಚಿವರು ದಾರಿಯಲ್ಲಿ ಸಿಕ್ಕವರ ಅಹವಾಲುಗಳನ್ನು ಸ್ವೀಕರಿದರು. ನಂತರ ಕೊಠಡಿಯಲ್ಲಿ ವಸ್ತ್ರ ಬದಲಿಸಿ ದಿನದ ಗ್ರಾಮ ವಾಸ್ತವ್ಯದ ಸಾರ್ಥಕ ಭಾವದೊಂದಿಗೆ ನಿದ್ರೆಗೆ ಜಾರಿದರು.

    ಸಚಿವರೊಂದಿಗೆ ಕಂದಾಯ ಇಲಾಖೆಯ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ತಹಶೀಲ್ದಾರ್‍ಗಳು ಪಕ್ಕದ ಕೊಠಡಿಯಲ್ಲಿ ಮಲಗಿದರು.

  • ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ

    ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ

    ಬೀದರ್: ಮುಖ್ಯಮಂತ್ರಿ ಇಂದು ರಾತ್ರಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದಿಚುಂಚನಗಿರಿ ಮಠದ ಶಂಕುಸ್ಥಾಪನೆಗಾಗಿ ಸಿಎಂ 9 ದಿನ ಪ್ರವಾಸ ಕೈಗೊಳ್ಳುತ್ತಿದ್ದು, ಹೀಗಾಗಿ ಸಿಎಂ ಅವರು ಸ್ವಲ್ಪ ದಿನ ರಾಜ್ಯದಲ್ಲಿ ಇರಲ್ಲ.

    ಈ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಸಿಎಂ, ಆದಿಚುಂಚನಗಿರಿಯ ಶ್ರೀಗಳು ನ್ಯೂಜೆರ್ಸಿಯಲ್ಲಿ ಮಠವೊಂದನ್ನ ಕಟ್ಟಿಸುತ್ತಿದ್ದಾರೆ. ಅದರ ಶಂಕು ಸ್ಥಾಪನೆಗಾಗಿ ನಾನು ಬರಲೇಬೇಕೆಂದು ಶ್ರೀಗಳು ಒತ್ತಾಯ ಮಾಡುತ್ತಿದ್ದಾರೆ. ನಾನೇನೂ ಸರ್ಕಾರದ ವೆಚ್ಚದಲ್ಲಿ ಹೋಗುತ್ತಿಲ್ಲ. ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಬೀದರ್‍ನ ಬಸವಕಲ್ಯಾಣದ ಉಜಳಂಬದಲ್ಲಿ ಮುಖ್ಯಮಂತ್ರಿಗಳು ತಮ್ಮ ಗ್ರಾಮ ವಾಸ್ತವ್ಯ ಮುಗಿಸಿದ್ದಾರೆ. ಗುರುವಾರ ರಾತ್ರಿ 9 ಗಂಟೆವರೆಗೂ ಜನತಾ ದರ್ಶನ ನಡೆಸಿದ ಸಿಎಂ, 4 ಸಾವಿರಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿದರು. ಇಂದು ಬೀದರ್ ವಾಯುನೆಲೆಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣಿಸಲಿದ್ದು, ಮಧ್ಯಾಹ್ನ 12.30ಕ್ಕೆ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.

    ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಾಧಕ-ಬಾಧಕ ಕುರಿತು ವರದಿ ನೀಡಲು ಸಮಿತಿ ರಚಿಸುವ ಸಾಧ್ಯತೆ ಇದೆ. ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ಈ ನಡ್ವೆ ಇಂದು ರಾತ್ರಿ ಸಿಎಂ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.

  • ಗ್ರಾಮವಾಸ್ತವ್ಯ ಸಂಪರ್ಕ ಸಭೆಯಾಗಿ ಪರಿವರ್ತನೆಯಾಗಲಿ: ಡಾ. ವೀರೇಂದ್ರ ಹೆಗ್ಗಡೆ

    ಗ್ರಾಮವಾಸ್ತವ್ಯ ಸಂಪರ್ಕ ಸಭೆಯಾಗಿ ಪರಿವರ್ತನೆಯಾಗಲಿ: ಡಾ. ವೀರೇಂದ್ರ ಹೆಗ್ಗಡೆ

    ಮಂಗಳೂರು: ಗ್ರಾಮ ವಾಸ್ತವ್ಯದಲ್ಲಿ ಇರುವ ಸಿಎಂ ಕನಿಷ್ಠ ಒಂದು ಗಂಟೆ ಕಾಲ ಜನರ ಸಮಸ್ಯೆ ಆಲಿಸಬೇಕು. ಸಾಧ್ಯವಾದರೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಕೆಲವು ಬಾರಿ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡುತ್ತಾರೆ. ಆದರೆ ಬಹುತೇಕರಿಗೆ ಸಮಸ್ಯೆಗಳ ಬಗ್ಗೆ ಗೊತ್ತಿರಲ್ಲ. ಗ್ರಾಮ ವಾಸ್ತವ್ಯ ಸಂಪರ್ಕ ಸಭೆಯಾಗಿಯೂ ಪರಿವರ್ತನೆಯಾದರೆ ಹಳ್ಳಿಗಳ ಸಮಸ್ಯೆ ತಿಳಿಯುತ್ತೆ. ಗ್ರಾಮ ವಾಸ್ತವ್ಯದ ಮೂಲಕ ಈ ರೀತಿ ಮಾಹಿತಿ ಸಂಗ್ರಹಿಸುವುದು ಒಂದು ಉತ್ತಮ ನಡೆ ಎಂದರು.

    ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಇಂತಹ ಜನಸಂಪರ್ಕವನ್ನು ಆರಂಭಿಸಿದ್ದರು. ಅಲ್ಲದೆ ಆತ್ಮಹತ್ಯೆಯಂತಹ ಪ್ರಕರಣಗಳು ನಡೆದ ಬಳಿಕ ಪರಿಹಾರ ನೀಡುವ ಬದಲು ಮೊದಲೇ ಸಮಸ್ಯೆ ತಿಳಿದುಕೊಳ್ಳಬೇಕು. ಅಲ್ಲದೆ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಅಧಿಕಾರಿಗಳು ಸಿಎಂ ಅವರನ್ನು ಸುತ್ತುವರಿಯಬಾರದು. ಜನರೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಡಬೇಕು. ಜನರೊಂದಿಗೆ ನೇರವಾಗಿ ಮಾತುಕತೆ ನಡೆಸಿದರೆ ಜ್ವಲಂತ ಸಮಸ್ಯೆ ಅರಿವಿಗೆ ಬರುತ್ತೆ ಎಂದು ಸಲಹೆ ನೀಡಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಿಎಂ ತೆರಳ್ತಿದ್ದ ಬಸ್ ಹಿಂದೆ ಓಡೋಡಿ ಬಂದ ಅಜ್ಜಿಯಿಂದ ಮನವಿ

    ಸಿಎಂ ತೆರಳ್ತಿದ್ದ ಬಸ್ ಹಿಂದೆ ಓಡೋಡಿ ಬಂದ ಅಜ್ಜಿಯಿಂದ ಮನವಿ

    ಯಾದಗಿರಿ: ಮುಖ್ಯಮಂತ್ರಿಗಳು ಇಂದಿನಿಂದ ಯಾದಗಿರಿ ಜಿಲ್ಲೆಯ ಚಂಡರಕಿಯಲ್ಲಿ ಗ್ರಾಮವಾಸ್ತವ್ಯವನ್ನು ಕೈಗೊಂಡಿದ್ದು, ಹೀಗಾಗಿ ಸಿಎಂ ಅವರು ಇಂದು ಬಸ್ ನಲ್ಲಿ ಗ್ರಾಮದತ್ತ ಪ್ರಯಾಣ ಬೆಳೆಸಿದ್ದರು.

    ಮುಖ್ಯಮಂತ್ರಿಗಳು ಬಸ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಜ್ಜಿಯೊಬ್ಬರು ಹಿಂದಿನಿಂದ ಓಡಿಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಸಿಎಂ ಅವರು ಬಸ್ ನಿಧಾನಗೊಳಿಸುವಂತೆ ಚಾಲಕರಲ್ಲಿ ಹೇಳಿ ಅಜ್ಜಿಯ ಮನವಿಯನ್ನು ಆಲಿಸಿದ್ದಾರೆ.

    ಅಜ್ಜಿಯ ಮನವಿಯೇನು?
    ಬಸ್ ಬಳಿ ಓಡಿ ಬಂದ ಅಜ್ಜಿ, ನಮಸ್ಕಾರ ಸಿಎಂ ಸಾಹೇಬರೇ.. ನೋಡಿ ನಮಗೆ ಎರಡೂವರೆ ಸಾವಿರ ಪಗಾರ(ಸಂಬಳ) ಹೆಚ್ಚಿಗೆ ಆಗಿಲ್ಲ. ಹೀಗಾಗಿ ಜಾಸ್ತಿ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸಿಎಂ ಅವರು ಆಯ್ತು ಜಾಸ್ತಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಅಲ್ಲದೆ ಅಜ್ಜಿ 600 ಮಕ್ಕಳಿಗೆ ಅಡುಗೆ ಮಾಡಬೇಕು. ದಯಮಾಡಿ ಜಾಸ್ತಿ ಮಾಡಿಸಿಕೊಡಿ ಎಂದು ಹೇಳಿದ್ದಕ್ಕೆ, ಇಲ್ಲಿ ಅಡುಗೆ ಕೆಲಸ ಮಾಡುತೀರಾ. ಸರಿ ಮಾಡಿಸಿಕೊಡುತ್ತೇನೆ ಎಂದು ಸಿಎಂ ಅವರು ಅಜ್ಜಿಗೆ ಭರವಸೆ ಮಾತುಗಳನ್ನಾಡಿದ ಪ್ರಸಂಗ ನಡೆಯಿತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕಲಬುರಗಿಯ ಹೇರೂರಿನಲ್ಲಿ ರಸ್ತೆ, ಡಾಂಬರ್ ಭಾಗ್ಯ- ಸಿಎಂ ಗ್ರಾಮ ವಾಸ್ತವ್ಯಕ್ಕೆ ಅದ್ಧೂರಿ ತಯಾರಿ

    ಕಲಬುರಗಿಯ ಹೇರೂರಿನಲ್ಲಿ ರಸ್ತೆ, ಡಾಂಬರ್ ಭಾಗ್ಯ- ಸಿಎಂ ಗ್ರಾಮ ವಾಸ್ತವ್ಯಕ್ಕೆ ಅದ್ಧೂರಿ ತಯಾರಿ

    ಕಲಬುರಗಿ: ಜೂನ್ 22ರಂದು ಕಲಬುರಗಿಯ ಹೇರೂರ ಗ್ರಾಮದಲ್ಲಿ ಸಿಎಂ ವಾಸ್ತವ್ಯ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ಇಡೀ ಜಿಲ್ಲಾಡಳಿತವೇ ಆ ಗ್ರಾಮದಲ್ಲಿ ಠಿಕಾಣಿ ಹೂಡಿದೆ. ಇನ್ನೂ ಡಾಂಬರಿಕರಣವೇ ಕಾಣದ ರಸ್ತೆಗಗಳಿಗೆ ಇದೀಗ ಡಾಂಬರ್ ಭಾಗ್ಯ ಕೂಡಿ ಬಂದಂತಾಗಿದೆ.

    ಹೌದು. ದಶಕಗಳಿಂದ ಡಾಂಬರೀಕರಣ ಕಾಣದ ಕಲಬುರಗಿ ಜಿಲ್ಲೆ ಅಫಜಲ್ಪುರ ಮತಕ್ಷೇತ್ರದ ಹೇರೂರ(ಬಿ) ಗ್ರಾಮದಲ್ಲಿ ಸಿಎಂ ಬರುತ್ತಾರೆ ಎಂದು ಹೊಸ ರಸ್ತೆಯನ್ನೇ ನಿರ್ಮಿಸುತ್ತಿದ್ದಾರೆ. ಈ ಮೂಲಕ ಜೂನ್ 22ರಂದು ಗ್ರಾಮ ವಾಸ್ತವ್ಯಕ್ಕೆ ಬರುವ ಸಿಎಂಗೆ ಅದ್ಧೂರಿ ಸ್ವಾಗತ ನೀಡಲು ತಯಾರಿ ನಡೆದಿದೆ.

    ಇದನ್ನೇ ಅಸ್ತ್ರ ಮಾಡಿಕೊಂಡ ಇಲ್ಲಿನ ಗ್ರಾಮಸ್ಥರು, ರಸ್ತೆ ನಿರ್ಮಿಸಿದಂತೆ ಒಂದು ಬಸ್ ಸೌಕರ್ಯ ನೀಡಿದ್ದರೆ, ಈ ಕುಗ್ರಾಮದ ವಿದ್ಯಾರ್ಥಿಗಳು ಮತ್ತು ರೈತರು ಕಲಬುರಗಿ ನಗರಕ್ಕೆ ಸಲೀಸಾಗಿ ಹೋಗಬಹುದು. ಹೀಗಾಗಿ ಸಿಎಂ ಇತ್ತ ಗಮನಹರಿಸಲಿ ಎಂದು ವಿದ್ಯಾರ್ಥಿಗಳಾದ ರಾಜೇಶ್, ವಿವೇಕ್ ಹೇಳಿದ್ದಾರೆ.

    ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಫರ್ತಾಬಾದ್ ಹೋಬಳಿಯಿಂದ ಹೇರೂರ ಗ್ರಾಮ 25 ಕಿಮೀ ದೂರವಿದ್ದು, ಈ ಗ್ರಾಮಕ್ಕೆ ಫರ್ತಾಬಾದ್‍ನಿಂದ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ಆದರೆ ಇದೀಗ ಸಿಎಂ ಆಗಮನದ ಹಿನ್ನೆಲೆಯಲ್ಲಿ ಫರ್ತಾಬಾದ ಹೋಬಳಿಯಿಂದ ಹೇರೂರ(ಬಿ)ಗ್ರಾಮದವರೆಗೆ ರಸ್ತೆ ನಿರ್ಮಿಸಲಾಗುತ್ತಿದೆ. ಇದೆಲ್ಲ ಓಕೆ ಆದರೆ ಈ ಹಿಂದೆ ನೀವು ಇದೇ ಅಫಜಲ್ಪುರ ಕ್ಷೇತ್ರದ ಮಣ್ಣೂರಿನಲ್ಲಿ ಸಹ 2006ರಲ್ಲಿ ಸಿಎಂ ಆಗಿದ್ದಾಗ ವಾಸ್ತವ್ಯ ಮಾಡಿದ್ದೀರಿ. ಅಲ್ಲಿ ನೀವು ನೀಡಿದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿವೆ. ಹೀಗಾಗಿ ಹೇರೂರ(ಬಿ)ಗ್ರಾಮದ ಜೊತೆ ಮಣ್ಣುರ ಗ್ರಾಮಕ್ಕೆ ನೀಡಿದ ಭರವಸೆ ಪೂರೈಸಿ ಎಂದು ಅಫಜಲ್ಪುರ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಆಗ್ರಹಿಸಿದ್ದಾರೆ.

    ಸದ್ಯ ಮುಖ್ಯಮಂತ್ರಿಯವರ ಆಗಮನಕ್ಕಾಗಿ ಹೇರೂರ(ಬಿ) ಗ್ರಾಮದ ಜನ ಅಪಾರ ನೀರಿಕ್ಷೆಯಿಟ್ಟು ಕಾದು ಕುಳಿತಿದ್ದಾರೆ. ಆದರೆ ಈ ಹಿಂದೆ ವಾಸ್ತವ್ಯ ಮಾಡಿದಂತೆ ಆಶ್ವಾಸನೆ ನೀಡಿ ಸಿಎಂ ಮಲಗಿ ಹೋಗಬಾರದು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

  • ಹೈಟೆಕ್ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ದಿಢೀರ್ ಗ್ರಾಮ ವಾಸ್ತವ್ಯ- ಚಾಪೆ ಮೇಲೆ ಮಲಗಿ ಹೈಟೆಕ್ ನಡುವೆ ಸರಳತೆ

    ಹೈಟೆಕ್ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ದಿಢೀರ್ ಗ್ರಾಮ ವಾಸ್ತವ್ಯ- ಚಾಪೆ ಮೇಲೆ ಮಲಗಿ ಹೈಟೆಕ್ ನಡುವೆ ಸರಳತೆ

    ತುಮಕೂರು: ಹೈಟೆಕ್ ರಾಜಕಾರಣಿ ಎಂದೇ ಆರೋಪ ಹೊತ್ತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಇದೀಗ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ.

    ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿನ ಗ್ರಾಮ ವಾಸ್ತವ್ಯಕ್ಕೆ ಹೈಟೆಕ್ ಮನೆಯೊಂದನ್ನ ಆಯ್ಕೆ ಮಾಡಿ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ. ಮಂಗಳವಾರ ರಾತ್ರಿ ಪರಮೇಶ್ವರ್ ಅವರು ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿ ಎರಡನೇ ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಕೊರಟಗೆರೆ ತಾಲೂಕಿನ ದೊಗ್ಗನಹಳ್ಳಿಯ ನಾಗರಾಜು ಎನ್ನುವ ರೈತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಬಾರಿ ಪರಮೇಶ್ವರ್ ದಲಿತರೊಬ್ಬರ ಚಿಕ್ಕ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಆದರೆ ಈ ಬಾರಿಯ ವಾಸ್ತವ್ಯಕ್ಕೆ ಗ್ರಾಮದ ಹೈಟೆಕ್ ಮನೆಯನ್ನೇ ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

    ಮನೆಯಲ್ಲಿ ಗ್ರಾನೈಟ್, ಹೈಟೆಕ್ ಟಿವಿ, ಮಂಚ, ಐಷಾರಾಮಿ ಕೋಣೆಗಳು ಹಾಗೂ ಎಲ್ಲಾ ಸೌಕರ್ಯವೂ ಇದ್ದು, ಪರಮೇಶ್ವರ್ ಗೆ ಸಕಲ ಸೌಕರ್ಯ ಒದಗಿಸಿದ್ದಾರೆ. ಇದರ ಮಧ್ಯೆ ಕೋಣೆಯೊಂದರಲ್ಲಿ ಚಾಪೆ ಮೇಲೆಯೇ ಮಲಗಿದ ಪರಮೇಶ್ವರ್ ಹೈಟೆಕ್ ನಡುವೆಯೇ ಸರಳತೆ ಪ್ರದರ್ಶಿಸಿದ್ದಾರೆ.

  • ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ಚಿಕ್ಕಮಗಳೂರು: ತಮಟೆ ಬಾರಿಸಿದ್ದೇನು, ಡ್ಯಾನ್ಸ್ ಮಾಡಿದ್ದೇನು. ನೆಲದ ಮೇಲೆ ಮಲಗಿ ಪೋಸ್ ಕೊಟ್ಟಿದ್ದೇನು. ಅಬ್ಬಬ್ಬಾ ನಮ್ಮ ಸಮಾಜ ಕಲ್ಯಾಣ ಸಚಿವರ ಹಾಡಿ ವಾಸ್ತವ್ಯ ನೋಡೋಕೆ ಎರಡು ಕಣ್ಣು ಸಾಲದಾಗಿತ್ತು. ಇವರು ಬಂದಾಗ ನಮ್ಮ ಸಮಸ್ಯೆ ದೂರವಾಗುತ್ತೆ ಅಂತ ಜನ ಕನಸು ಕಂಡಿದ್ರು. ಆದ್ರೆ ಆಗಿದ್ದೇ ಬೇರೆ. ಊರು ಉದ್ದಾರ ಆಗ್ಲಿಲ್ಲ. ಸಚಿವ ಆಂಜನೇಯ ಬರುವಾಗ ಹಾಕಿದ್ದ ರಸ್ತೆ, ಲೈಟ್ ಉಳಿದಿದ್ದು ಎರಡೇ ದಿನ.

    ಇಷ್ಟೇ ಆಗಿದ್ರೆ ಈ ರಾಜಕಾರಣಿಗಳ ಹಣೆಬರಹನೇ ಇಷ್ಟು ಅನ್ಕೊಂಡು ಸುಮ್ಮನಿರಬಹುದಿತ್ತು. ಆದ್ರೆ ಈ ಒಂದು ರಾತ್ರಿಯ ವಾಸ್ತವ್ಯಕ್ಕೆ ಖರ್ಚು ಮಾಡಿದ್ದು ಬರೋಬ್ಬರಿ ಮೂರು ಲಕ್ಷ.

    ಹೌದು. ಬೋಗಸ್ ಬಿಲ್ ಮಾಡಿ ಸಚಿವರ ಹೆಸರಲ್ಲಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಭ್ರಷ್ಟರು. ಅವರ ಬಿಲ್‍ನಲ್ಲಿ ಯಾವುದಕ್ಕೆ ಎಷ್ಟೆಲ್ಲಾ ಖರ್ಚಾಗಿದೆ ಅಂತಾ ನೋಡೋದಾದ್ರೆ: ಕುಡಿಯೋ ನೀರಿಗೆ 4,800 ರೂಪಾಯಿ, ಪ್ಲಾಸ್ಟಿಕ್ ಗ್ಲಾಸ್‍ಗೆ 4,400 ರೂಪಾಯಿ, ಫ್ಲೆಕ್ಸ್‍ಗೆ 56,000 ರೂಪಾಯಿ, ಊಟ-ತಿಂಡಿಗೆ 1.20 ಲಕ್ಷ ರೂಪಾಯಿ, ಶಾಮಿಯಾನ ಹಾಗೂ ಲೈಟಿಂಗ್ಸ್‍ಗೆ 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ.

    ರಸ್ತೆ, ಅಂಗನವಾಡಿ, ಸಮುದಾಯ ಭವನ ಎಲ್ಲವೂ ಆಗ್ಬೇಕಿತ್ತು. ಆದ್ರೆ ಯಾವುದೂ ಮಾಡಿಕೊಟ್ಟಿಲ್ಲ. ಇಲ್ಲಿ ಬಂದು ಹೋಗಿ ಆಶ್ವಾಸನೆ ಕೊಟ್ಟಿದ್ದು ಯಾವುದೂ ಆಗಿಲ್ಲ. 3 ಸ್ಟ್ರೀಟ್ ಲೈಟ್, 2 ಹೋಮ್ ಲೈಟ್ ಹಾಕಿದ್ರು. ಎರಡು ತಿಂಗಳು ಉರಿಯಿತು. ಆಮೇಲೆ ಯಾವುದೂ ಉರೀತಿಲ್ಲ ಎಂದು ಸ್ಥಳೀಯರಾದ ಮಹೇಶ್ ಹೇಳಿದ್ದಾರೆ.

    ಮನೆ ಮಾಡಿಕೊಡ್ತೀನಿ ಎಂದು ಹೇಳಿದ್ರು. 32 ಮನೆ ಕೊಡ್ತೀವಿ ಎಂದಿದ್ರು. ಯಾರಿಗೂ ಮನೆ ಕೊಟ್ಟಿಲ್ಲ. ನಿಮ್ಮಲ್ಲಿ ಯಾರಾದ್ರೂ ಅಂಗನವಾಡಿ ಟೀಚರ್ ಆಗ್ಬೇಕು ಎಂದಿದ್ರು. ಟೀಚರ್ ಬಿಡಿ, ಮಕ್ಕಳಿಗೆ ಅಂಗನವಾಡಿ ಮಾಡಿಕೊಟ್ಟಿದ್ರೆ ಎಷ್ಟೋ ಸಹಾಯವಾಗ್ತಿತ್ತು ಅಂತ ಮತ್ತೊಬ್ಬ ಸ್ಥಳೀಯರು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    ಒಟ್ನಲ್ಲಿ ಸಚಿವರು ಗ್ರಾಮವಾಸ್ತವ್ಯದ ವೇಳೆ ಕ್ಯಾಮೆರಾ ಮುಂದೆ ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಬುರುಡೆ ಬಿಟ್ರೆ, ಅಧಿಕಾರಿಗಳು ಸಚಿವರ ಹೆಸರಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕಿದ್ದಾರೆ. ಇದನ್ನೆಲ್ಲಾ ನೋಡಿ ಹಾಡಿ ಜನ ತಲೆ ಚಚ್ಚಿಕೊಳ್ತಿದ್ದಾರೆ.

  • ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್

    ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್

    ಬೆಂಗಳೂರು: ಚುನಾವಣಾ ತಂತ್ರವಾಗಿ ಹೊಸ ಪ್ಲಾನ್ ಮಾಡಿರೋ ಜೆಡಿಎಸ್, ಬಿಜೆಪಿ-ಕಾಂಗ್ರೆಸ್‍ಗೆ ಸೆಡ್ಡು ಹೊಡೆಯಲು ಮತ್ತೆ ಹಳ್ಳಿಗೆ ಕಡೆ ಹೊರಟಿದೆ.

    ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟಿರೋ ಜೆಡಿಎಸ್ ಒಂದೂವರೆ ತಿಂಗಳು ಉತ್ತರ ಕರ್ನಾಟಕ, ಹೈದರಬಾದ್ ಕರ್ನಾಟಕ ಭಾಗಗಳ ಹಳ್ಳಿಗಳಲ್ಲಿ ಬೀಡಾರ ಹೂಡಲಿದ್ದಾರಂತೆ. ಯಾದಗಿರಿಯಿಂದ ಪಾದ ಯಾತ್ರೆ, ಬಿಜಾಪುರ ಭಾಗದಲ್ಲಿ ಬಹೃತ್ ರೈತ ಸಮಾವೇಶ ಮಾಡೋ ಉದ್ದೇಶವೂ ಇದೆ.

    ಕೃಷ್ಣೆಯ ಭಾಗದ ರಾಜಕೀಯವನ್ನ ಹೆಚ್‍ಡಿ ಕುಮಾರಸ್ವಾಮಿ ನೋಡಿಕೊಂಡ್ರೆ, ಕಾವೇರಿ ಭಾಗದ ರಾಜಕೀಯವನ್ನ ಅನಿತಾ ಕುಮಾರಸ್ವಾಮಿ ಅವರ ಹೆಗಲಿಗೆ ಹೊರಿಸೋ ಪ್ಲಾನ್ ಕೂಡ ರೆಡಿ ಇದೆ ಎಂದು ಹೇಳಲಾಗಿದೆ.