ಮಿಣಸಂದ್ರ ಗ್ರಾಮದವರಾದ ಹಾಲಿ ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಮೃತ ಅನಿಲ್ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಾಗಿದ್ದರು. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಸಾಧ್ಯತೆ ಇದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.
ಮೀಣಸಂದ್ರ ಗ್ರಾಮದ ಅನಿಲ್ ಕುಮಾರ್ ದ್ವಿಚಕ್ರ ವಾಹನದಲ್ಲಿ ಲಕ್ಕೂರು ಗೇಟ್‌ಗೆ ಬರುತ್ತಿದ್ದಾಗ ಮದ್ಯ ದಾರಿಯಲ್ಲಿ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕ ಆಯುಧದಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬೆಲೆ ಬೀಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ – ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
ಚಿಕ್ಕಮಗಳೂರು: ಒತ್ತುವರಿ (Encroachment) ತೆರವುಗೊಳಿಸುವಂತೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಬಿ.ಕಣಬೂರು ಗ್ರಾಮ ಪಂಚಾಯಿತಿ ಸದಸ್ಯನೊಬ್ಬ (Grama Panchayat Member) 36 ಕಿಮೀ ಪಾದಯಾತ್ರೆ ನಡೆಸಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಒತ್ತುವರಿ ಜಾಗವನ್ನ ತೆರವು ಮಾಡಿಸಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. 36 ಕಿಮೀ ವರೆಗೂ ಏಕಾಂಗಿಯಾಗೇ ಪಾದಯಾತ್ರೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿಯನ್ನ ಶೀಘ್ರವೇ ಬಂಧನ ಮಾಡ್ತೀವಿ – ಆರಗ ಜ್ಞಾನೇಂದ್ರ
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಸರ್ವೇ ನಂ. 136ರಲ್ಲಿ 2.30 ಎಕರೆ ಗೋಮಾಳವನ್ನ ಪ್ರಭಾವಿಯೊಬ್ಬರು ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಅಸಮಾಧಾನ ಹೊರಹಾಕಿ ಪ್ರತಿಭಟನೆ ಕೂಡ ನಡೆಸಿದ್ದರು. ಈ ಬಗ್ಗೆ ಎನ್.ಆರ್.ಪುರ ತಹಶೀಲ್ದಾರ್ ಜಂಟಿ ಸರ್ವೇಗೆ ಸೂಚಿಸಿದ್ದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಗೋಮಾಳವೆಂದು ವರದಿ ನೀಡಿದ್ದಾರೆ.
ಆದರೆ ಈವರೆಗೂ ಅಧಿಕಾರಿಗಳು ಒತ್ತುವರಿ ತೆರವು ಮಾಡಿಲ್ಲ. ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಜನ ನಿವೇಶನ ರಹಿತರಿದ್ದು, ಹಲವರಿಗೆ ವಸತಿ ಸೌಲಭ್ಯಗಳಿಲ್ಲ. ಅಧಿಕಾರಿಗಳು ಕೂಡಲೇ ಒತ್ತುವರಿ ಜಾಗವನ್ನ ತೆರವು ಮಾಡಿ ಸರ್ಕಾರಿ ಬಳಕೆಗೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!
Live Tv
[brid partner=56869869 player=32851 video=960834 autoplay=true]
– ಸೇತುವೆ ಮೇಲಿಂದ ತಳ್ಳಿ, ಬಿದ್ದಲ್ಲಿಂದ ಎಳೆದೊಯ್ದು ರೇಪ್ ಮಾಡಿ ಕೊಲೆ
– ಗ್ರಾಮಪಂಚಾಯ್ತಿ ಸದಸ್ಯೆಯ ಭೀಕರ ಮರ್ಡರ್
ಮಡಿಕೇರಿ: ಆಕೆ ಪಂಚಾಯ್ತಿ ಸದಸ್ಯೆ. ಹೊಳೆಯಿಂದ ಆಚೆಯಲ್ಲಿರುವ ಸಂಬಂಧಿಯೊಬ್ಬರ ಮಗುವಿನ ಹುಟ್ಟಿದ ಹಬ್ಬದ ಆಚರಣೆಗೆಂದು ಸಂಜೆ ಮಬ್ಬುಗತ್ತಲಲ್ಲಿ ಹೊರಟಿದ್ದಳು. ಅಷ್ಟರಲ್ಲೇ ಹೊಳೆಯ ಸೇತುವೆ ಮೇಲೆ ಬಂದಿದ್ದ ಕಿರಾತಕ ಆಕೆಯನ್ನು ಹಿಡಿದು ಎಳೆದಾಡಿ ಹೊಳೆಗೆ ದೂಡಿದ್ದ. ಬೆಳಗೆದ್ದು ನೋಡುವಷ್ಟರಲ್ಲಿ ಮಹಾಬೆಟ್ಟದ ತುತ್ತ ತುದಿಯಲ್ಲಿ ಮಹಿಳೆ ಜೊತೆಗೆ ಆ ಕಿರಾತಕನೂ ಮರವೊಂದರಲ್ಲಿ ಶವವಾಗಿ ನೇತಾಡಿದ್ದ.
ಹೌದು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯ್ತಿ ರಾಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಂಬಂಧಿಕರ ಮಗುವಿನ ಹುಟ್ಟುಹಬ್ಬಕ್ಕೆ ಅಂತ ಹೋದ ಪತ್ನಿ ಹೆಣವಾಗಿ ಮರದಲ್ಲಿ ನೇತಾಡುತ್ತಿರುವುದನ್ನು ನೋಡಿ ಪತಿ ಕೇಶವ ಕಣ್ಣೀರಾಕಿದ್ದಾರೆ. ಪತಿಯ ಗೋಳಾಟ ಕಂಡು ಅಯ್ಯೋ ಪಾಪ, ಹೇಗೋ ಗಾರೆ ಕೆಲಸ ಮಾಡಿಕೊಂಡು, ಇದ್ದ ಒಂದಷ್ಟು ಭೂಮಿಯಲ್ಲಿ ದುಡಿದು ತಿನ್ನುತ್ತಿದ್ದ ಈತನಿಗೆ ಹೀಗಾಗಬಾರದಿತ್ತು ಎಂದು ಜನ ಮರುಗಿದ್ದಾರೆ. ಆದರೆ ಈ ಪಾಪಿ ಇಂತಹ ಕೆಲಸ ಮಾಡಿದನಲ್ಲ ಎಂದು ಸತ್ತು ಹೆಣವಾಗಿ ನೇತಾಡುತ್ತಿರುವವನಿಗೂ ಅಲ್ಲಿ ನೆರೆದಿದ್ದ ಜನರು ಹಿಡಿ ಶಾಪ ಹಾಕಿದ್ದಾರೆ.
ಅಷ್ಟಕ್ಕೂ ಗ್ರಾಮ ಪಂಚಾಯ್ತಿ ಸದಸ್ಯೆ ಕಮಲಳನ್ನು ಕೊಂದಿದ್ದಾರೂ ಯಾಕೆ ಎಂದು ಪ್ರಶ್ನಿಸಿದರೆ ಒಂದೊಂದೇ ಸುಳಿವು ಬಿಚ್ಚಿಕೊಳ್ಳುತ್ತವೆ. ಅಷ್ಟಕ್ಕೂ ಕಮಲಳನ್ನು ಹೀಗೆ ಹೀನಾಯವಾಗಿ ಸಾಯಿಸಿ ತಾನೂ ನೇಣಿಗೆ ಕೊರಳೊಡ್ಡಿರೋ ಈ ಪಾಪಿ ಬೇರ್ಯಾರು ಅಲ್ಲ, ವರಸೆಯಿಂದ ಮೃತ ಕಮಲಗೆ ಚಿಕ್ಕಪ್ಪನೇ ಆಗಬೇಕಾಗಿರುವ 52 ವರ್ಷದ ಮುತ್ತು. ಇದನ್ನೂ ಓದಿ: ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ
ಬುಧವಾರ ಸಂಜೆ 7 ಗಂಟೆ ವೇಳೆಗೆ ಕಮಲ ತನ್ನ 9 ವರ್ಷದ ಮಗಳನ್ನು ಕರೆದುಕೊಂಡು ರಾಮನಹಳ್ಳಿಯ ಹೊಳೆಯಿಂದ ಆಚೆಗೆ ಇರುವ ಸಂಬಂಧಿಕರ ಮನೆಗೆ ಹೋಗೋದಕ್ಕೆ ಸೇತುವೆಯನ್ನು ದಾಟಿದ್ದಾರೆ. ಆದರೆ ಹೊಳೆಯ ಮತ್ತೊಂದು ದಂಡೆಯಲ್ಲೇ ಇರುವ ಮನೆಯಿಂದ ಬಂದ ಈ ಪಾಪಿ ಮುತ್ತು, ನೀನು ಇಲ್ಲಿ ಬರಲೇಬಾರದು. ನಿನ್ನನ್ನು ಸುಮ್ಮನೇ ಬಿಡೋದಿಲ್ಲ ಎಂದು ಹಿಡಿದು ಎಳೆದಾಡಿ ಹೊಳೆಗೆ ನೂಕೇ ಬಿಟ್ಟಿದ್ದಾನೆ. ಕಾರಣ ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದು, ಮುತ್ತು ಆಗಾಗ ಆಕೆಯ ಮನೆಗೆ ಹೋಗಿ ಬರುತ್ತಿದ್ದ. ಕೆಲ ಸಮಯದಿಂದ ಅಕೆಯ ಗಂಡನೊಂದಿಗೆ ಜಗಳ ಅಗಿರುವುದಿಂದ ಮನೆಗೆ ಹೋಗಿ ಬರುವುದು ಕಡಿಮೆ ಅಗಿದೆ. ಹೀಗಾಗಿ ನಿನ್ನೆ ಆಕೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುವ ಸಂದರ್ಭ ಅಕೆಯನ್ನು ಎಳೆದಾಡಿದ್ದಾನೆ. ಆಕೆಯೊಂದಿಗೆ ಇದ್ದ ಕುಟುಂಬಸ್ಥರಿಗೂ ಮುತ್ತು ಕೊಲೆ ಬೆದರಿಕೆ ಹಾಕಿ, ಅಲ್ಲಿಂದ ಜೊತೆಯಲ್ಲಿ ಇರುವವರನ್ನು ಕಳುಹಿಸಿದ್ದಾನೆ.
ಸಂಜೆ ಸೇತುವೆ ಬಳಿ ಕಮಲ ಹಾಗೂ ಮುತ್ತು ಜಗಳ ಆಡಿದ್ದಾರೆ. ಕೋಪದಿಂದ ಮುತ್ತು ಆಕೆಯನ್ನು ಸೇತುವೆ ಕೆಳಗೆ ಹಾಕಿದ್ದಾನೆ. ಗ್ರಾಮದಲ್ಲಿ ಕತ್ತಲು ಆಗಿರುವುದರಿಂದ ಯಾರಿಗೂ ಆಕೆ ಸೇತುವೆ ಬಳಿ ಜಗಳ ಆಡಿರುವುದು ಅಷ್ಟು ಗೊತ್ತಾಗಿಲ್ಲ. ಇತ್ತ ಸೇತುವೆಗೆ ಬಿದ್ದ ಕಮಲಳನ್ನು ಎಳೆದುಕೊಂಡು ಹೋಗಿ, ಕತ್ತಿ ತೋರಿಸಿ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಬೆಳಗ್ಗೆ ಗ್ರಾಮಸ್ಥರಿಗೆ ಈ ವಿಚಾರ ಗೊತ್ತಾಗುತ್ತದೆ ಎಂಬ ಭಯದಿಂದ ಆಕೆಯನ್ನು ಬೆಟ್ಟದ ಮೇಲೆ ಹತ್ಯೆ ಮಾಡಿ ನೇಣು ಹಾಕಿದ್ದಾನೆ. ಇಷ್ಟು ಮಾತ್ರವಲ್ಲದೆ ಕಮಲಳನ್ನು ಕೊಲೆಗೈದ ಬಳಿಕ ಆಕೆಯನ್ನು ಬಿಟ್ಟು ಬದುಕುವ ಶಕ್ತಿ ಇಲ್ಲ ಎಂದು ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ರಾಮನಗರ ಗ್ರಾಮಕ್ಕೆ ತೆರಳಿ ರಸ್ತೆ ಪರಿಶೀಲಿಸಿದ ದಾವಣಗೆರೆ ಡಿಸಿ
ಒಟ್ಟಿನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ತೆರಳುತ್ತಿದ್ದ ಕಮಲ, ಮುತ್ತು ಕೋಪಕ್ಕೆ ಬಲಿಯಾಗಿದ್ದಾಳೆ. ಒಂದು ಮಗುವಿನ ತಾಯಿಯಾಗಿರುವ ಕಮಲ ಹಾಗೂ ಸಂಬಂಧಿಯ ಅನೈತಿಕ ಸಂಬಂಧದಿಂದ ಇದೀಗ ಹೆಣ್ಣು ಮಗುಯೊಂದು ತಾಯಿ ಇಲ್ಲದೆ ಕಂಗಾಲಾಗಿದೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಕೊರೊನಾದಿಂದ ನಿಧನವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಹುಟ್ಟುಹಬ್ಬದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಫುಡ್ ಕಿಟ್ ವಿತರಿಸಿದ್ದಾರೆ.
ಕಳೆದ ತಿಂಗಳು ಕೊರೊನಾದಿಂದ ನಿಧನರಾದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕಾಂತರಾಜು ಅವರ ಜನ್ಮದಿನದ ಅಂಗವಾಗಿ ಮಾಗಡಿ ವಿಧಾನಸಭೆ ಕ್ಷೇತ್ರದ ಬಿಡದಿಯ ಹೆಜ್ಜಾಲದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: 10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ನಿಖಿಲ್ ಕುಮಾರಸ್ವಾಮಿ ಚಾಲನೆ
ಬಳಿಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್ ಗಳನ್ನು ವಿತರಿಸಿದರು. ಸಂಸದ ಡಿ.ಕೆ.ಸುರೇಶ್, ಮಾಜಿ ಶಾಸಕ ಬಾಲಕೃಷ್ಣ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಮಂಡ್ಯ: ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಹಾಗೂ ಮಾಂಸದಂಗಡಿಗಳ ತೆರವಿಗೆ ಮುಂದಾಗಿದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮೇಲೆ ಗ್ರಾಮ ಪಂಚಾಯತಿ ಸದಸ್ಯ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆಯಲ್ಲಿ ನಡೆದಿದೆ.
ಪರವಾನಗಿ ಇಲ್ಲದೆ ಕೋಳಿ ಹಾಗೂ ಮಾಂಸದಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹರೀಶ್‍ಗೌಡ ಅಂಗಡಿಗಳ ತೆರವಿಗೆ ಮುಂದಾಗಿದ್ದಾರೆ. ಈ ವೇಳೆ ಮಂಗರವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಅಂಗಡಿಗಳನ್ನು ತೆರವು ಮಾಡದಂತೆ ತಡೆಯುತ್ತಾರೆ.
ನಂತರ ಬಿಂಡಿಗನವಿಲೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿ, ಹರೀಶ್‍ಗೌಡರ ಮೇಲೆ ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಪ್ರಕಾಶ್ ಹರೀಶ್‍ಗೌಡರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ನಂತರ ಸ್ಥಳದಲ್ಲಿದ್ದವರು ಪ್ರಕಾಶ್ ಅವರನ್ನು ತಡೆದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಕುರಿತು ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.