Tag: Grama One

  • ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ – ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ರದ್ದು

    ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ – ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ರದ್ದು

    ಚಿಕ್ಕೋಡಿ: ಗೃಹಲಕ್ಷ್ಮಿ  (GruhaLakshmi) ಯೋಜನೆ ಅರ್ಜಿ ನೋಂದಣಿಗೆ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಗ್ರಾಮ ಒನ್ (Grama One) ಕೇಂದ್ರದ ಲಾಗ್‍ಇನ್ ಐಡಿ ರದ್ದು ಪಡಿಸಿದ ಪ್ರಕರಣ ರಾಯಬಾಗದ ಚಿಂಚಲಿಯಲ್ಲಿ ನಡೆದಿದೆ. ಅಲ್ಲದೇ ಕೇಂದ್ರವನ್ನು ಸೀಜ್ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

    ಸುಶೀಲಾ ಕಾಂಬಳೆ ಎಂಬುವವರ ಬಳಿ ಸಿಬ್ಬಂದಿ 100 ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕುಡುಚಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ (FIR) ದಾಖಲಾಗಿದೆ. ಗ್ರಾಮ ಒನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ಅಜೀತ್ ಇದ್ಲಿ ವಿರುದ್ಧ ಐಪಿಸಿ ಸೆಕ್ಷನ್ 1860 (406 ಹಾಗೂ 420) ರ ಅಡಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: Instagram ಪ್ರಿಯಕರನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 16ರ ಹುಡುಗಿ ಅರೆಸ್ಟ್‌‌

    ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ದೂರುಗಳು ಬಂದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಇತರ ಸಿಬ್ಬಂದಿ ಭೇಟಿ ನೀಡಿದ್ದರು. ರಾಯಬಾಗ ಸಿಡಿಪಿಒ ಸಂತೋಷ ಕಾಂಬಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

    ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅದರಂತೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಂದ ಯಾವುದೇ ಹಣ ಸ್ವೀಕರಿಸುವಂತಿಲ್ಲ ಎಂದು ಸರ್ಕಾರ ತಾಕೀತು ಮಾಡಿತ್ತು. ಆದರೆ ಕೆಲವು ಗ್ರಾಮ ಒನ್ ಕೇಂದ್ರಗಳಲ್ಲಿ ಹಣ ಪಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು ಸರ್ಕಾರ ಪರಿಶೀಲನೆಗೆ ಕ್ರಮಕೈಗೊಂಡಿದೆ. ಇದನ್ನೂ ಓದಿ: ಬೆಂಗ್ಳೂರಿನ 2 ಮನೆಗಳಲ್ಲಿ ಕೆಜಿಗಟ್ಟಲೆ ಸ್ಫೋಟಕ ಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ – ಸೈಬರ್ ಕೇಂದ್ರಗಳಿಗೆ ಬೀಗ ಜಡಿದ ಅಧಿಕಾರಿಗಳು

    ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ – ಸೈಬರ್ ಕೇಂದ್ರಗಳಿಗೆ ಬೀಗ ಜಡಿದ ಅಧಿಕಾರಿಗಳು

    ರಾಯಚೂರು: ಗೃಹಲಕ್ಷ್ಮಿ ಯೋಜನೆ (Gruhalakshmi Scheme) ನೋಂದಣಿಗೆ 200ರಿಂದ 300 ರೂ. ಶುಲ್ಕ ವಸೂಲಿ ಮಾಡುತ್ತಿದ್ದ 3 ಸೈಬರ್ (Cyber) ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.

    ಸ್ಥಳೀಯ ಸೈಬರ್‌ಗಳು ಗ್ರಾಮ ಒನ್ (Grama One) ಕೇಂದ್ರದ ಐಡಿ, ಪಾಸ್‌ವರ್ಡ್ ಬಳಸಿಕೊಂಡು ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದರು. ಮೊಬೈಲ್‌ಗೆ ಮೆಸೇಜ್ ಬಂದಿರದಿದ್ದರೂ ನೋಂದಣಿ ಮಾಡುವುದಾಗಿ ಹೇಳಿ ಹಣ ವಸೂಲಿ ನಡೆಸಿದ್ದರು. ನೋಂದಣಿ ಮಾಡಿ ರಸೀದಿಯನ್ನು ಕೊಡಲಾಗುತ್ತಿತ್ತು. ಮಾನ್ವಿ ತಹಶಿಲ್ದಾರ್ ಎಲ್.ಡಿ.ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪಟ್ಟಣದ ಎಕ್ಸೆಲ್ ಕಂಪ್ಯೂಟರ್ಸ್, ಲಕ್ಷ್ಮಿ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್ ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಧಾರಾಕಾರ ಮಳೆ – ಸೋರುತ್ತಿದ್ದ ಬಸ್‌ನಲ್ಲೂ ಕೊಡೆ ಹಿಡಿದು ಕುಳಿತ ಪ್ರಯಾಣಿಕ

    ಮಾನ್ವಿ (Manvi) ಪಟ್ಟಣದ ಸಾದಾಪುರ ಗ್ರಾಮ ಒನ್ ಕೇಂದ್ರದ ಐಡಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಸೈಬರ್ ಕೇಂದ್ರದ ಮಾಲೀಕರ ವಿರುದ್ಧ ಅಧಿಕಾರಿಗಳು ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಯುವಕರ ಹುಚ್ಚಾಟ – ಪೊಲೀಸರಿಂದ ತಕ್ಕ ಪಾಠ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಬೆಂಗಳೂರು: ಸದ್ಯ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ (Gruhajyothi Scheme) ಅಡಿಯಲ್ಲಿ ಷರತ್ತುಗಳೊಂದಿಗೆ ಉಚಿತ ವಿದ್ಯುತ್ (Free Electricity) ನೀಡಲು ಅರ್ಜಿ ಆಹ್ವಾನಿಸುತ್ತಿದೆ. ಉಚಿತ ವಿದ್ಯುತ್ ಪ್ರಯೋಜನ ಪಡೆಯಲು 50 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ವಿದ್ಯುತ್ ಶುಲ್ಕ ಹೆಚ್ಚಾಗಿದ್ದು ಏಪ್ರಿಲ್‌ನಿಂದಲೇ ಏರಿಕೆಯಾದ ದರವನ್ನು ಈ ಬಾರಿ ಹಾಕಿದ ಪರಿಣಾಮ ಬಿಲ್ ಜಾಸ್ತಿ ಎಂಬ ಉತ್ತರವನ್ನ ಬೆಸ್ಕಾಂ (Bescom) ಹೇಳಿಯೂ ಆಗಿದೆ. ಆದ್ರೆ ಬೆಸ್ಕಾಂನವರು ಮಾತ್ರ ಬಿಲ್ (Electricity Bill) ಹಾಕುವಾಗ ಮಾಡಿರುವ ಎಡವಟ್ಟುಗಳು ಈಗ ಬೆಳಕಿಗೆ ಬರ್ತಿದೆ.

    ಹೌದು. ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆ ಅಡಿಯಲ್ಲಿ ಷರತ್ತುಗಳೊಂದಿಗೆ 200 ಯುನಿಟ್ ವಿದ್ಯುತ್ ಉಚಿತ ಯೋಜನೆಯನ್ನ ಜಾರಿಗೊಳಿಸಲು ಅರ್ಜಿ ಸಲ್ಲಿಕೆಯೂ ಆರಂಭವಾಗಿದೆ. ಈ ನಡುವೆ ಜೂನ್ ತಿಂಗಳಲ್ಲಿ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಕೂಡದೇ ಮೇ ನಲ್ಲೇ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿ ಜನರಿಗೆ ಶಾಕ್ ಕೊಟ್ಟಿತು. ಆದ್ರೆ ಕಾಂಗ್ರೆಸ್ ಸರ್ಕಾರ ಇದು ಕೆಇಆರ್‌ಸಿ ಹೆಚ್ಚಳ ಮಾಡಿರೋದು, ಸರ್ಕಾರದ ನಿರ್ಧಾರವಲ್ಲ. ಅದೊಂದು ಸ್ವಾಯತ್ತ ಸಂಸ್ಥೆ. ಜೊತೆಗೆ ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಏರಿಕೆಯಾಗಿದೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದೆ.

    ಈ ನಡುವೆ ಬೆಸ್ಕಾಂ ಹಗಲು ದರೋಡೆಗೆ ಇಳಿದಿರುವುದು ಕಂಡುಬಂದಿದೆ. ಮೇ ನಲ್ಲಿ ದರ ಜಾಸ್ತಿಯಾಗಿದೆ. ಮೊದಲ 100 ಸ್ಲಾಬ್ ಬಳಕೆಯಾಗುವ ಯೂನಿಟ್‌ಗೆ 4.65 ರೂ. ನಿಗದಿ ಮಾಡಿದ್ದು, 100ರ ಮೇಲೆ ಬಳಿಕೆಯಾಗುವ ವಿದ್ಯುತ್‌ಗೆ 7 ರೂ. ಮಾಡಿದೆ. ಇದರಿಂದ 100ಕ್ಕಿಂತ ಅಧಿಕ ಯೂನಿಟ್ ಬಳಕೆ ಮಾಡಿದರೆ ಪ್ರತಿ ಯೂನಿಟ್‌ಗೆ 7 ರೂ. ನೀಡಬೇಕಾಗುತ್ತೆ. ಇದನ್ನೂ ಓದಿ: ನಾನು ಸಾವರ್ಕರ್‌ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ – ಎಂಬಿಪಿಗೆ ಸೂಲಿಬೆಲೆ ಪ್ರಶ್ನೆ

    ಅದೇ ರೀತಿ ನಂದಿನಿ ಲೇಔಟ್ ಬೆಸ್ಕಾಂ ಕಚೇರಿಗೆ ವ್ಯಾಪ್ತಿಗೆ ಸೇರಿದ ವ್ಯಕ್ತಿಯೊಬ್ಬರ ಮನೆಗೆ ಬಂದಿರೋ ಬಿಲ್‌ನಲ್ಲಿ ಒಟ್ಟು ಬಳಕೆಯಾಗಿರುವ ಯೂನಿಟ್ 104 ಎಂದು ನಮೂದಿಸಿದೆ. ಅದರೆ ಮೇ ತಿಂಗಳಿನಿಂದ ಮೀಟರ್ ರಿಡೀಂಗ್ ಮಾಡಿದ ದಿನದವರೆಗೆ 104 ಯೂನಿಟ್ ಬಳಕೆ ಮಾಡಿದ್ದು ಬೇರೆ ಎಲ್ಲ ರೀತಿಯ ಟ್ಯಾಕ್ಸ್ ಸೇರಿ ಒಟ್ಟು ಬಿಲ್ 1,300 ರೂ. ಬಂದಿದೆ. ಕಳೆದ ತಿಂಗಳು ಕೂಡ 101 ಯೂನಿಟ್ ವಿದ್ಯುತ್ ಬಳಸಿದ್ದಾರೆ. 900ರೂ.ಗಿಂತ ಹೆಚ್ಚು ಹಣವನ್ನ ಶುಲ್ಕವಾಗಿ ವಿಧಿಸಿದ್ದಾರೆ. ಆದ್ರೆ ಈ ಬಿಲ್‌ನಲ್ಲಿ ಮಿಟರ್ ರೀಡಿಂಗ್‌ಗಿಂತ ಹೆಚ್ಚು ಯೂನಿಟ್ ಬಳಕೆ ಮಾಡಿದ್ದೀರಾ ಅಂತಾ ಮನೆಯವರಿಗೆ ಬಿಲ್ ಕೊಟ್ಟಿರೋದು ನಂತರ ಬೆಳಕಿಗೆ ಬಂದಿದೆ.

    ಮನೆ ಮಾಲೀಕರು ಮೀಟರ್ ಚೆಕ್ ಮಾಡಿದಾಗ 50 ರಿಂದ 70 ಯೂನಿಟ್ ಅಷ್ಟೇ ಬಳೆಕೆಯಾಗಿರುವುದನ್ನ ಕಂಡು ಶಾಕ್ ಆಗಿದ್ದಾರೆ. ಆದ್ರೆ ಬಿಲ್‌ನಲ್ಲಿ 1,535ಕ್ಕೆ ರೀಡಿಂಗ್ ಎಂಡ್ ಮಾಡಿದ್ದಾರೆ. ನಿಜವಾಗಿಯೂ ಮೀಟರ್ ರೀಡಿಂಗ್ ಇದ್ದದ್ದು 1,504ಕ್ಕೆ, ಅದರೆ ಅಗತ್ಯಕ್ಕಿಂತ 30 ಹೆಚ್ಚುವರಿ ಯೂನಿಟ್‌ಗೆ ಶುಲ್ಕ ವಿಧಿಸಿದ್ದಾರೆ. ಇದರಿಂದ ಗ್ರಾಹಕರಿಗೆ 250 ರಿಂದ 300 ರೂ. ಬಿಲ್ ಹೆಚ್ಚಾಗ್ತಿದೆ. ಈ ಬಗ್ಗೆ ಬೆಸ್ಕಾಂಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸೋಲಿಗೆ ಗ್ಯಾರಂಟಿ ಅಲ್ಲ, ನೀವೇ ಕಾರಣ – ಬಿಜೆಪಿ ನಾಯಕರ ವಿರುದ್ಧ ಸಿಡಿದ ಕಾರ್ಯಕರ್ತರು

  • ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

    ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

    – ಕಾದು ಕಾದು ಹೈರಾಣಾದ ಜನ

    ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಷರತ್ತುಗಳೊಂದಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ (Gruhajyothi Scheme)ನೋಂದಣಿ ಕಾರ್ಯ 5ನೇ ದಿನಕ್ಕೆ ಕಾಲಿಟ್ಟಿದ್ದು, 5ನೇ ದಿನವೂ ಸರ್ವರ್‌ ಸಮಸ್ಯೆ (Server Down Problem) ಎದುರಿಸುವಂತಾಗಿದೆ.

    5ನೇ ದಿನವಾದ ಗುರುವಾರವೂ ರಾಜಾಜೀನಗರದ 4ನೇ ಬ್ಲಾಕ್‌, ಮಲ್ಲೇಶ್ವರಂ ಕಾಡುಮಲ್ಲೇಶ್ವರ ವಾರ್ಡ್, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ವೃಷಭಾವತಿ ನಗರ ಹಾಗೂ ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧೆಡೆ ಬೆಂಗಳೂರು ಒನ್‌ (Bengaluru One) ಕೇಂದ್ರಗಳಲ್ಲಿ ಬೆಳ್ಳಂ ಬೆಳಗ್ಗೆ ಸರ್ವರ್‌ ಸಮಸ್ಯೆ ಕಂಡುಬಂದಿದೆ. ಇದರಿಂದ ಅರ್ಜಿ ಸಲ್ಲಿಸಲು ಕಾದು ನಿಂತ ಜನರು ಹಾಗೂ ಬೆಂಗಳೂರು ಒನ್‌ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ

    ಬೆಳಗ್ಗಿನ ಜಾವ 5 ಗಂಟೆಯಿಂದಲೇ ಬೆಂಗಳೂರು ಒನ್‌ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಒಂದು ಅರ್ಜಿ ಸಲ್ಲಿಕೆಗೆ 30 ನಿಮಿಷಗಳ ಸಮಯ ಬೇಕಾಗುತ್ತಿದೆ. ಆದ್ರೆ ಸರ್ವರ್‌ ಸಮಸ್ಯೆಯಿಂದಾಗಿ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಿಂದ ಪರಿಷತ್ ಮೂರು ಸ್ಥಾನಗಳಿಗೆ ಉಪಚುನಾಚಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ

    ಅರ್ಜಿ ಸಲ್ಲಿಕೆ ಆರಂಭವಾದ ಮೊದಲ ದಿನವೇ ವಿವಿಧೆಡೆ ಸರ್ವರ್‌ ಸಮಸ್ಯೆಯ ಹೊರತಾಗಿಯೂ 1,61,958 ಗ್ರಾಹಕರು (ಸಂಜೆ 5 ಗಂಟೆವರೆಗೆ) ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ, ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.