Tag: Gram Panchyat

  • ಗ್ರಾಮಪಂಚಾಯ್ತಿ ಕಾರ್ಯದರ್ಶಿಯ ಪ್ರೇಮಪಲ್ಲಂಗಕ್ಕೆ ಅಮಾಯಕ ಮಹಿಳೆ ಆತ್ಮಹತ್ಯೆ

    ಗ್ರಾಮಪಂಚಾಯ್ತಿ ಕಾರ್ಯದರ್ಶಿಯ ಪ್ರೇಮಪಲ್ಲಂಗಕ್ಕೆ ಅಮಾಯಕ ಮಹಿಳೆ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮನೆಯಲ್ಲೇ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿಮ್ಮಘಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಧಾ(27) ಆತ್ಮಹತ್ಯೆಗೆ ಶರಣಾದ ಮಹಿಳೆ. 2010ರಲ್ಲೇ ರಾಧಾಳಿಗೆ ಮದುವೆಯಾಗಿತ್ತು. ಮದುವೆಯಾದ ಹೊಸದರಲ್ಲೇ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ರಾಧಾ ತನ್ನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು. ಆದರೆ ಕಳೆದ 3-4 ವರ್ಷಗಳಿಂದ ಇಡಗೂರು ಗ್ರಾಮ ಪಂಚಾಯಯ್ತಿಯ ಕಾರ್ಯದರ್ಶಿ ಕಾರ್ತಿಕ್ ಜೊತೆ ಪ್ರೀತಿ-ಪ್ರೇಮ ಸಂಬಂಧ ಬೆಳೆಸಿದ್ದಳು.

    ಜಮೀನು ಅಳತೆ ದಾಖಲೆ ವಿಚಾರವಾಗಿ ಗ್ರಾಮಕ್ಕೆ ಬಂದಿದ್ದ ಕಾರ್ತಿಕ್, ರಾಧಾಳಿಗೆ ಪತಿಯಿಲ್ಲ ಎನ್ನುವ ಅಸಹಾಯಕತೆಯನ್ನಿ ಬಂಡವಾಳ ಮಾಡಿಕೊಂಡು ಆಕೆಯ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದನು. ಹೀಗಾಗಿ ತನ್ನನ್ನು ಕಾರ್ತಿಕ್ ಮದುವೆಯಾಗ್ತಾನೆ ಎಂದು ರಾಧಾ ನಂಬಿದ್ದಳು. ಆದರೆ ಕಳೆದ ಒಂದು ವರ್ಷದ ಹಿಂದೆಯೇ ಕಾರ್ತಿಕ್ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.

    ಆ ವಿಷಯ ಸಹ ಇತ್ತೀಚೆಗೆ ರಾಧಾಳಿಗೆ ಗೊತ್ತಾಗಿದೆ. ಜೋರಾಗಿ ದಬಾಯಿಸಿ ಕೇಳಿದ್ದಕ್ಕೆ ನಾನು ನಿನ್ನನ್ನು ಮದುವೆ ಆಗುವುದಿಲ್ಲ ಏನ್ ಮಾಡ್ಕೋತಿಯಾ ಮಾಡ್ಕೋ ಹೋಗು ಎಂದು ಆವಾಜ್ ಹಾಕಿದ್ದನು. ಈ ನಡುವೆ ಕಾರ್ತಿಕ್‍ನ ಸಂಬಂಧದ ಬಗ್ಗೆ ಪತ್ನಿಗೂ ಸಹ ಗೊತ್ತಾಗಿ ಎರಡು ಮನೆಯವರು ಸೇರಿ ರಾಜೀ ಪಂಚಾಯತಿ ಸಹ ಮಾಡಿದ್ದರು. ಕೊನೆಗೆ ಒಂದಷ್ಟು ಹಣ ಕೊಟ್ಟು ರಾಧಾಳ ಸಂಬಂಧ ಕಡಿದುಕೊಳ್ಳೋಕೆ ಕಾರ್ತಿಕ್ ಮುಂದಾಗಿದ್ದನು. ಇದೇ ನೋವಿನಲ್ಲಿದ್ದ ರಾಧಾ ತನ್ನ ಬಾಳು ಹಿಂಗಾಯತಲ್ಲಾ ಎಂದು ಇಂದು ಬೆಳಗ್ಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ರಾಧಾ ಆತ್ಮಹತ್ಯೆ ಸುದ್ದಿ ತಿಳಿದ ಕಾರ್ತಿಕ್ ನಾಪತ್ತೆಯಾಗಿದ್ದು, ಗೌರಿಬಿದನೂರು ಪೊಲೀಸರು ಹುಟುಕಾಟ ನಡೆಸಿದ್ದಾರೆ. ಸದ್ಯ ಮಗಳ ಸಾವಿನಿಂದ ಕಂಗಲಾಗಿರುವ ತಾಯಿ ನಾಗಮ್ಮ ಕಾರ್ತಿಕ್ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

  • ಹೊಸದಾಗಿ ನಿಯೋಜನೆಗೊಂಡ ಪಿಡಿಒಗೆ ಹಾಜರಾತಿ ನೀಡದ ಸಿಬ್ಬಂದಿ

    ಹೊಸದಾಗಿ ನಿಯೋಜನೆಗೊಂಡ ಪಿಡಿಒಗೆ ಹಾಜರಾತಿ ನೀಡದ ಸಿಬ್ಬಂದಿ

    – ಗೋಡೆ ಮೇಲೆಯೇ ಹಾಜರಾತಿ ಬರೆಯುತ್ತಿರುವ ಪಿಡಿಒ

    ದಾವಣಗೆರೆ: ಹೊಸದಾಗಿ ನಿಯೋಜನೆಗೊಂಡ ಗ್ರಾಮ ಪಂಚಾಯ್ತಿ ಪಿಡಿಒಗೆ ಅಧ್ಯಕ್ಷರು ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕ ನೀಡದ ಹಿನ್ನೆಲೆಯಲ್ಲಿ ಗೋಡೆಯ ಮೇಲೆಯೇ ಹಾಜರಾತಿ ಬರೆದು ಹೋದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮ ಪಂಚಾಯ್ತಿಗೆ ಗೋವರ್ಧನ್ ಎಂಬವರು ಪಿಡಿಒ ಇದ್ದು, ಈಗ ಹೆಚ್ಚುವರಿ ಪಿಡಿಒ ಆಗಿ ಗಾಯತ್ರಿ ಎಂಬವರನ್ನು ನೇಮಕ ಮಾಡಿದ್ದಾರೆ. ಇದರಿಂದ ಹೆಚ್ಚುವರಿಯಾಗಿ ನೇಮಕವಾದ ಪಿಡಿಒ ಅವರನ್ನು ವಿರೋಧಿಸಿ ದೇವಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

    ಗಾಯತ್ರಿ ಅವರನ್ನು ನೇಮಕ ಮಾಡಿರುವ ಇಒ ಆದೇಶ ಸರಿಯಲ್ಲ. ಕೆಲವೆಡೆ ಅಧಿಕಾರಿಗಳಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಅಂತಹ ಸ್ಥಳದ ಬದಲು ಪಿಡಿಒ ಇರುವಲ್ಲಿ ಮತ್ತೊಬ್ಬರನ್ನು ನಿಯೋಜಿಸಿರುವ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಸದಸ್ಯರು ಆರೋಪಿಸಿದರು.

    ಅಲ್ಲದೆ ಮೂರ್ನಾಲ್ಕು ವರ್ಷಗಳ ಹಿಂದೆ ಗಾಯತ್ರಿ ಅವರು ದೇವಿಕೆರೆ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸರಿಯಾಗಿ ಕಚೇರಿಗೆ ಬಾರದೆ ಜನರ ಕೈಗೂ ಸಿಗದ ಕಾರಣ ಇಲ್ಲಿಂದ ವರ್ಗಾವಣೆ ಮಾಡಲಾಗಿತ್ತು ಈಗ ಮತ್ತೆ ಪಿಡಿಒ ಆಗಿ ಬಂದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿದ್ದಾರೆ.

    ಹೊಸದಾಗಿ ನೇಮಕವಾದ ಪಿಡಿಒ ಗಾಯತ್ರಿ ಯವರು ಗ್ರಾಮ ಪಂಚಾಯತಿಗೆ ಬಂದು ಗೋಡೆಯ ಮೇಲೆ ತಮ್ಮ ಹಾಜರಾತಿ ಯನ್ನು ಬರೆದು ವಾಟ್ಸಾಪ್ ನಲ್ಲಿ ಇಒ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

  • ಮನೆ ದಾಖಲಾತಿ ಕೇಳಿದ್ದಕ್ಕೆ ಮಂಚಕ್ಕೆ ಕರೆದ ಗ್ರಾ.ಪಂ ಸದಸ್ಯ…!

    ಮನೆ ದಾಖಲಾತಿ ಕೇಳಿದ್ದಕ್ಕೆ ಮಂಚಕ್ಕೆ ಕರೆದ ಗ್ರಾ.ಪಂ ಸದಸ್ಯ…!

    ಮೈಸೂರು: ಮನೆಯ ಡಾಕ್ಯುಮೆಂಟ್ ಮಾಡಿಸಿಕೊಡಲು ಕೇಳಿದ್ದಕ್ಕೆ ಮಹಿಳೆಯನ್ನು ಮಂಚಕ್ಕೆ ಕರೆದಿರುವ ಆರೋಪವೊಂದು ಗ್ರಾಮ ಪಂಚಾಯ್ತಿ ಸದಸ್ಯನ ವಿರುದ್ಧ ಕೇಳಿಬಂದಿದೆ.

    ಮೈಸೂರಿನ ಧನಗಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಪಿ.ಲಿಂಗರಾಜು ವಿರುದ್ಧ ನೊಂದ ಮಹಿಳೆ ದೂರು ನೀಡಿದ್ದಾರೆ. ಮೈಸೂರಿನ ಧನಗಳ್ಳಿ ಪಂಚಾಯ್ತಿಯಲ್ಲಿ ಇಂತಹ ಹೆಣ್ಣುಬಾಕ ಸದಸ್ಯನಿದ್ದಾನೆ.

    ಮನೆಗೆ ಸಂಬಂಧಿಸಿದ 9/11 ದಾಖಲಾತಿ ಕೊಡಿಸಿ ಎಂದು ಮಹಿಳೆ ಕೇಳಿದ್ದಾರೆ. ನಾನು ದಾಖಲಾತಿ ಕೊಡಿಸುತ್ತೇನೆ ಇವತ್ತು ರಾತ್ರಿ ಬಾ ಮನೆಗೆ ಬಾ ಎಂದ ಕರೆದ ಲಿಂಗರಾಜು, ನೀನಾದ್ರೂ ಓಕೆ ಇಲ್ಲ ನಿನ್ ಫ್ರೆಂಡ್ಸ್ ಆದ್ರೂ ಓಕೆ ಎಂದಿದ್ದಾನೆ. ಈ ಬಗ್ಗೆ ಕಾಮುಕ ಲಿಂಗರಾಜುನನ್ನು ಮಹಿಳೆ ಪ್ರಶ್ನಿಸಿದ್ದಕ್ಕೆ ತನ್ನ ಸಹಚರರ ಜೊತೆ ಸೇರಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಹೀಗಾಗಿ ಗ್ರಾ.ಪಂ ಸದಸ್ಯ ಲಿಂಗರಾಜು ಸೇರಿ 5 ಮಂದಿ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv