Tag: Gram Panchayath

  • ಉಡುಪಿಯಲ್ಲಿ ದಲಿತ್ Vs ಎಸ್‌ಡಿಪಿಐ ಜಟಾಪಟಿ

    ಉಡುಪಿಯಲ್ಲಿ ದಲಿತ್ Vs ಎಸ್‌ಡಿಪಿಐ ಜಟಾಪಟಿ

    ಉಡುಪಿ: ದಲಿತ ಸಮುದಾಯಕ್ಕೆ ಸೇರಿದ ಆರಾಧನಾ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಮುಸ್ಲಿಂ ಸಮುದಾಯದವರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ದಲಿತ್ ವರ್ಸಸ್ SDPI ಜಟಾಪಟಿ ನಡೆಯುತ್ತಿದೆ.

    2

    ದಲಿತ ಸಮುದಾಯಕ್ಕೆ ಸೇರಿದ ಆರಾಧನಾ ಕ್ಷೇತ್ರವಾದ ಬಬ್ಬುಸ್ವಾಮಿ ಮೂಲ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಸರ್ಕಾರಿ ಸ್ಥಳ ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ನೆಪವೊಡ್ಡಿ ಮುಸ್ಲಿಂ ಸಮುದಾಯದವರು ತಡೆಯೊಡ್ಡಿದ್ದಾರೆ. ಕಂಚಿನಡ್ಕ ಕ್ಷೇತ್ರಕ್ಕೆ ಮೇಲ್ಚಾವಣಿ ಅಳವಡಿಸಲು ವಿರೋಧ ವ್ಯಕ್ತಪಿಸಿದ್ದಾರೆ. ಇದರಿಂದಾಗಿ ನೂರಾರು ದಲಿತ ಕಾರ್ಯಕರ್ತರು ಎಸ್‌ಡಿಪಿಐಗೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ

    UDP

    ತುಳುನಾಡಿನ ಕಾರಣಿಕದ ಬಬ್ಬುಸ್ವಾಮಿ ಕ್ಷೇತ್ರಕ್ಕೆ ಕಬ್ಬಿಣದ ಚಪ್ಪರ ಅಳವಡಿಸಿದರೆ ವಾಹನ ಸಂಚಾರಕ್ಕೆ ತೊಡಕಾಗುತ್ತದೆ ಎಂದು ಮುಸ್ಲಿಂ ಸಮುದಾಯದ ಜನರು ಅಡ್ಡಿಪಡಿಸಿದ್ದಾರೆ. ಇಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಎಸ್‌ಡಿಪಿಐ ಸಂಘಟನೆ ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇದರಿಂದ ಬೇಸತ್ತ ದಲಿತ ಮುಖಂಡರು ಪಕ್ಷದಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ

    ಹಿಂದೂ ಸಂಘಟನೆಗಳು ಮೇಲ್ಛಾವಣಿ ಅಳವಡಿಸಲು ಬಿಜೆಪಿ ಅಧಿಕಾರದಲ್ಲಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿಗೆ ಒಂದು ವಾರದ ಗಡುವು ನೀಡಿವೆ. ಈ ಪ್ರಕರಣವನ್ನು ಇತ್ಯರ್ಥಗೊಳಿಸದೇ ಇದ್ದರೆ ದೊಡ್ಡ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

  • ಫ್ರಾನ್ಸ್ ಮೂಲದ ತಾಯಿಯ ಮಗಳು ಕೊಪ್ಪಳದ ಗ್ರಾಮ ಪಂಚಾಯತ್ ಅಧ್ಯಕ್ಷೆ!

    ಫ್ರಾನ್ಸ್ ಮೂಲದ ತಾಯಿಯ ಮಗಳು ಕೊಪ್ಪಳದ ಗ್ರಾಮ ಪಂಚಾಯತ್ ಅಧ್ಯಕ್ಷೆ!

    ಕೊಪ್ಪಳ: ಫ್ರಾನ್ಸ್ ಮೂಲದ ತಾಯಿಯೊಬ್ಬರ ಮಗಳು ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಹೌದು, ಪ್ರವಾಸಕ್ಕೆಂದು ಭಾರತಕ್ಕೆ ಬಂದ ಫ್ರಾನ್ಸ್ ಮಹಿಳೆ ಆ ಸ್ಥಳದ ಐತಿಹಾಸಿಕ ಹಿನ್ನೆಲೆ ಕೇಳಿ ಅಲ್ಲೇ ವಾಸವಾದರು. ಬಳಿಕ ಸ್ಥಳೀಯರೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಹುಟ್ಟಿದ ಮಗಳು ಇಂದು ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

    ಅಂಜನಾದೇವಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ. ಮೂಲತಃ ಆನೆಗೊಂದಿಯಲ್ಲಿ ಹುಟ್ಟಿ ಬೆಳದ ಅಂಜನಾದೇವಿಯವರು ಕನ್ನಡ ಸೇರಿದಂತೆ ನಾಲ್ಕೈದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಇವರ ಕುಟುಂಬ ಸದಸ್ಯರು ಇಂದಿಗೂ ಫ್ರಾನ್ಸ್ ನಲ್ಲಿ ವಾಸವಿದ್ದಾರೆ. ವಿದೇಶಿ ಮೂಲದ ಮಹಿಳೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನಿಜಕ್ಕೂ ವಿಶೇಷವಾಗಿದೆ.

    ಮೊದಲಿನಿಂದಲೂ ಸಾಮಾಜಿಕ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದ ಅಂಜನಾದೇವಿಯವರು, 2015ರಲ್ಲಿ ಗ್ರಾಮ ಪಂಚಾಯಿತಿಯ 2ನೇ ವಾರ್ಡಿನಲ್ಲಿ ಸಾಮಾನ್ಯ ಮಹಿಳಾ ಖೋಟಾದಡಿ ಸ್ಪರ್ಧಿಸಿ ಗೆದ್ದಿದ್ದರು. ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ ಕಾರಣ ಆನೆಗೊಂದಿಯ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಹೀಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಸರ್ವ ಸದಸ್ಯರು ಅವಿರೋಧವಾಗಿ ಅಂಜನಾದೇವಿಯನ್ನು ಆಯ್ಕೆ ಮಾಡಿದ್ದಾರೆ. 14 ಜನ ಸಂಖ್ಯಾಬಲ ಹೊಂದಿದ ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ಆನೆಗೊಂದಿ, ಕಡೇಬಾಗಿಲು, ಚಿಕ್ಕರಾಂಪುರ್ ಹಾಗೂ ಬಸವನದುರ್ಗ ಗ್ರಾಮಗಳು ಸೇರುತ್ತವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಂಜನಾದೇವಿ, ನಮ್ಮ ತಾಯಿ ಶಾರದಾ(ಫ್ರಾನ್ಸುವಾ) ಮೂಲತಃ ಫ್ರಾನ್ಸ್ ಮೂಲದವರಾಗಿದ್ದು, 1965ರಲ್ಲಿ ಭಾರತದ ಪ್ರವಾಸಕ್ಕೆಂದು ಬಂದು ಇಲ್ಲಿಯೇ ನೆಲೆಸಿದ್ದರು. ನಂತರ ಸ್ಥಳೀಯರಾದ ಶಾಂತಮೂರ್ತಿ ಎಂಬವರನ್ನು ವಿವಾಹವಾಗಿದ್ದರು. ತಂದೆ-ತಾಯಿ ಅಂಜನಾದ್ರಿ ಬೆಟ್ಟದ ಸಮೀಪವೇ ವಾಸವಾಗಿದ್ದರು. ಹೀಗಾಗಿ ನನಗೆ ಅಂಜನಾದೇವಿ ಎಂದೇ ಹೆಸರನ್ನು ಇಟ್ಟಿದ್ದರು. ನಾನು ಹುಟ್ಟಿ, ಬೆಳೆದಿದ್ದು ಎಲ್ಲಾ ಆನೆಗೊಂದಿಯಲ್ಲಿಯೇ. ಈಗಲೂ ನನ್ನ ಅಜ್ಜಿ ಫ್ರಾನ್ಸ್ ನಲ್ಲಿ ಇದ್ದಾರೆ. ಅವರನ್ನು ಸಹ ನೋಡಿಕೊಂಡು ಬಂದಿದ್ದೇನೆ. ಆದರೆ ನನಗೆ ನನ್ನ ಭಾರತವೇ ತುಂಬಾ ಇಷ್ಟ. ಅಲ್ಲಿನ ವಾತಾವರಣ ನನಗೆ ಹಿಡಿಸಲಿಲ್ಲ. ಇಲ್ಲಿಯೇ ನೆಮ್ಮದಿಯಾಗಿದ್ದೇನೆಂದು ಹೇಳಿದರು.

    ಮೊದಲಿನಿಂದಲೂ ನಾನು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ, ಅಲ್ಲದೇ ನನ್ನ ಹಳ್ಳಿಗೆ ಏನಾದರೂ ಮಾಡಬೇಕೆಂದು ಪ್ರಯತ್ನಪಡುತ್ತಲೇ ಇದ್ದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ನಿಂತು ಜಯ ಸಾಧಿಸಿದ್ದೆ. ಈಗ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ. ನನ್ನ ಮೇಲಿಟ್ಟುರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ನನ್ನ ಅವಧಿಯಲ್ಲಿ ಗ್ರಾಮದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

    ಗ್ರಾಮಸ್ಥರಾದ ಷಣ್ಮುಖರವರು ಮಾತನಾಡಿ, ಅಂಜನಾದೇವಿಯವರನ್ನು ಹುಟ್ಟಿನಿಂದಲೂ ನಾವು ನೋಡಿಕೊಂಡು ಬಂದಿದ್ದೇವೆ. ಗ್ರಾಮ ಅಭಿವೃದ್ದಿಯಾಗಬೇಕು ಎನ್ನುವ ಉದ್ದೇಶದಿಂದ ವಿದ್ಯಾವಂತ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದೇವೆಂದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪಂಚಾಯ್ತಿಯತ್ತ ಸುಳಿಯದ ಪಿಡಿಓಗಾಗಿ ಗ್ರಾಮಸ್ಥರಿಂದ ಹುಡುಕಾಟ!

    ಪಂಚಾಯ್ತಿಯತ್ತ ಸುಳಿಯದ ಪಿಡಿಓಗಾಗಿ ಗ್ರಾಮಸ್ಥರಿಂದ ಹುಡುಕಾಟ!

    ಕಲಬುರಗಿ: ಜಿಲ್ಲೆಯ ಸೇಂಡ ತಾಲೂಕಿನ ರಂಜೋಳ ಗ್ರಾಮದ ಗ್ರಾಮಸ್ಥರು ಪಂಚಾಯ್ತಿ ಕಡೆಗೆ ಸುಳಿಯದ ಪಿಡಿಓಗಾಗಿ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ.

    ರಂಜೋಳ ಗ್ರಾಮ ಪಂಚಾಯ್ತಿ ಪಿಡಿಓ ವಿದ್ಯಾಶ್ರೀಯವರು ಹಲವು ತಿಂಗಳುಗಳಿಂದ ಗ್ರಾಮದತ್ತ ಸುಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಿಡಿಓ ನಾಪತ್ತೆಯಾಗಿದ್ದರೆಂದು ಭಿತ್ತಿ ಪತ್ರ ಹಂಚಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

    ಪಿಡಿಓ ನಾಪತ್ತೆಯಾಗಿದ್ದಾರೆಂದು ಭಿತ್ತಿ ಪತ್ರ ಸಿದ್ಧಪಡಿಸಿ ರಂಜೋಳ ಗ್ರಾಮ ಪಂಚಾಯ್ತಿ ಸೇರಿದಂತೆ, ಸೇಡಂ ತಾಲೂಕು ಪಂಚಾಯ್ತಿ ಹಾಗೂ ಹಲವು ಕಡೆ ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್ ನಲ್ಲಿ ರಂಜೋಳ ಗ್ರಾಮ ಗಬ್ಬೆದ್ದು ಹೋದರು ಪಿಡಿಓ ನಾಪತ್ತೆ ಎಂದು ನಮೂದು ಮಾಡಿದ್ದಾರೆ. ಅಲ್ಲದೇ ಪಿಡಿಓ ಅವರನ್ನು ಎಲ್ಲಾದ್ರೂ ಕಂಡರೆ ರಂಜೋಳ ಗ್ರಾಮಸ್ಥರಿಗೆ, ಇಲ್ಲವೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ ಎಂದು ತಮ್ಮ ಆಕ್ರೊಶ ವ್ಯಕ್ತಪಡಿಸಿದ್ದಾರೆ.