Tag: Gram Panchayat

  • ಗ್ರಾಮ ಸ್ವರಾಜ್ಯದ ಕನಸು-ಸರ್ಕಾರಕ್ಕಿಲ್ಲ ಪಂಚಾಯ್ತಿಗಳ ಹಿಡಿತ-ಕೋಟ್ಯಾಂತರ ರೂಪಾಯಿ ತೆರಿಗೆ ಬಂದೇಯಿಲ್ಲ

    ಗ್ರಾಮ ಸ್ವರಾಜ್ಯದ ಕನಸು-ಸರ್ಕಾರಕ್ಕಿಲ್ಲ ಪಂಚಾಯ್ತಿಗಳ ಹಿಡಿತ-ಕೋಟ್ಯಾಂತರ ರೂಪಾಯಿ ತೆರಿಗೆ ಬಂದೇಯಿಲ್ಲ

    ಬೆಂಗಳೂರು: ಗ್ರಾಮ ಸ್ವರಾಜ್ಯದ ಕನಸು ಕಾಣುತ್ತಿರುವ ಸರ್ಕಾರ ಸ್ವರಾಜ್ಯದ ಬದಲು ದಿವಾಳಿ ಆಗೋಕೆ ಹೊರಟಿದೆ. ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಅಗತ್ಯವಾದ ಹಣ ಸಂಗ್ರಹ ಮಾಡೋದ್ರಲ್ಲಿ ಕಳೆದ 3 ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಂದೆ ಬಿದ್ದಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

    ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಅಗತ್ಯವಾದ ಹಣ ಸಂಗ್ರಹ ಮಾಡೋದ್ರಲ್ಲಿ ಕಳೆದ 3 ವರ್ಷಗಳಿಂದ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಕಿ ಅಂಶದ ಪ್ರಕಾರ ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 2 ಸಾವಿರ ಕೋಟಿಗಳಷ್ಟು ಸರ್ಕಾರ ಟ್ಯಾಕ್ಸ್ ಸಂಗ್ರಹ ಮಾಡಬೇಕು.

    2014-15ನೇ ಸಾಲಿನಲ್ಲಿ 837 ಕೋಟಿ ರೂ. ಟ್ಯಾಕ್ಸ್ ಬೇಡಿಕೆ ಇತ್ತು. ಆದರೆ 228 ಕೋಟಿ ರೂ. ಮಾತ ಸಂಗ್ರಹವಾಗಿದೆ. 608 ಕೋಟಿ ರೂ. ಗಳಷ್ಟು ತೆರಿಗೆ ಹಣ ಇನ್ನೂ ಬಾಕಿಯಿದೆ. 2015-16ನೇ ಸಾಲಿನಲ್ಲಿ 877 ಕೋಟಿ ಸಂಗ್ರಹ ಮಾಡಬೇಕಿತ್ತು. ಆದ್ರೆ ಸಂಗ್ರಹ ಮಾಡಿದ್ದು ಕೇವಲ 216 ಕೋಟಿ. ಬಾಕಿ 660 ಕೋಟಿ ಉಳಿಸಿಕೊಂಡಿದೆ. 2016-17ನೇ ಸಾಲಿನಲ್ಲಿ ಟ್ಯಾಕ್ಸ್ ಬೇಡಿಕೆ 957 ಕೋಟಿ ಇತ್ತು ಆದ್ರೆ ವಸೂಲಿ ಮಾಡಿರೋದು 151 ಕೋಟಿ. ಬಾಕಿ ಇರೋದು 805 ಕೋಟಿ. ಒಟ್ಟಾರೆ 2671 ಕೋಟಿ ಟ್ಯಾಕ್ಸ್ ಕಲೆಕ್ಟ್ ಮಾಡಬೇಕಿದ್ದ ಸರ್ಕಾರ ಮಾಡಿದ್ದು ಮಾತ್ರ 595 ಕೋಟಿ. 3 ವರ್ಷಗಳಿಂದ 2073 ಕೋಟಿ ಟ್ಯಾಕ್ಸ್ ಸಂಗ್ರಹ ಬಾಕಿ ಇದೆ.

    ಕರ್ನಾಟಕ ಗ್ರಾಮ ಸ್ವರಾಜ್ & ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ವಾಸದ ಕಟ್ಟಡ, ವಾಣಿಜ್ಯ ಕಟ್ಟಡಗಳು, ಕಾರ್ಖಾನೆ, ಐಟಿ ಪಾರ್ಕ್, ವಿಂಡ್ ಮಿಲ್, ಮನರಂಜನಾ ತೆರಿಗೆ, ಮೊಬೈಲ್ ಟವರ್ ಇದೆಲ್ಲದಕ್ಕೂ ಟ್ಯಾಕ್ಸ್ ವಿಧಿಸಬೇಕು. ಆದ್ರೆ ಸರ್ಕಾರ ಇವರಿಂದ ಒಂದೇ ಒಂದು ರೂಪಾಯಿ ಟ್ಯಾಕ್ಸ್ ಸಂಗ್ರಹ ಮಾಡಿಲ್ಲ. ಇನ್ನು ಗ್ರಾಮ ಪಂಚಾಯ್ತಿಗಳು ಸಂಗ್ರಹ ಮಾಡಿರೋ 595 ಕೋಟಿ ಹಣವನ್ನು ಇಲಾಖೆಯ ಬೊಕ್ಕಸಕ್ಕೆ ನೀಡಿಲ್ಲ. ಇನ್ನೂ ತೆರಿಗೆ ಸಂಗ್ರಹ ಮಾಡಿಲ್ಲದನ್ನು ಒಪ್ಪಿಕೊಂಡ ಗ್ರಾಮೀಣಾಭಿವೃದ್ಧಿ ಸಚಿವರು ಬರದ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಟಾಕ್ಸ್ ಸಂಗ್ರಹ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

  • ಸಿಇಓ ಎದುರಲ್ಲೇ ಗ್ರಾ.ಪಂ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಜಿ.ಪಂ ಸದಸ್ಯ!

    ಸಿಇಓ ಎದುರಲ್ಲೇ ಗ್ರಾ.ಪಂ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಜಿ.ಪಂ ಸದಸ್ಯ!

    ಬೀದರ್: ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರು ಸಿಇಓ ಎದುರಲ್ಲೇ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಸವಕಲ್ಯಾಣ ತಾಲೂಕಿನ ಹುಲಸೂರ ಜಿಪಂ ಸದಸ್ಯ ಸುಧೀರ್ ಕಾಡಾದಿ ರೋಷಾವೇಶದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ದೆಟನೆ ಎಂಬವರ ಮುಖಕ್ಕೆ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಶನಿವಾರ ಪಂಚಾಯತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ಡಾ. ಆರ್ ಸೇಲ್ವಮಣಿ ಎದುರಲ್ಲೇ ಈ ಘಟನೆ ನಡೆದಿದ್ದು, ಸಿಇಓ ಸಾಹೇಬ್ರು ಜನ ಪ್ರತಿನಿಧಿಗಳ ರಂಪಾಟ ನೋಡಿ ದಂಗಾಗಿ ಹೊಗಿದ್ದರು.

    ಕುಡಿಯುವ ನೀರಿನ ಯೋಜನೆಯಡಿಯಲ್ಲಿ 32 ಲಕ್ಷದ ಕಾಮಗಾರಿ ಪೂರ್ಣಗೊಂಡಿದ್ದು ಅದರ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಗ್ರಾಪಂ ಅಧ್ಯಕ್ಷರು ಮನವಿ ಮಾಡಿದ್ದರು. ಆದ್ರೆ ಇದಕ್ಕೆ ವಿರೋಧಿಸಿದ ಜಿ.ಪಂ ಸದಸ್ಯ ಸುಧೀರ್ ಕಾಡಾದಿ ಮತ್ತು ಅವರ ಟೀಂ ಅಶ್ಲೀಲವಾಗಿ ಮಾತನಾಡುತ್ತಾ ಗ್ರಾಪಂ ಅಧ್ಯಕ್ಷರ ಮತ್ತು ಮುಖಂಡರ ಮೇಲೆ ಹಲ್ಲೆಗೆ ಮುಂದಾದರು ಎನ್ನಲಾಗಿದೆ.

    ಈ ಕುರಿತು ಹುಲಸೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/jPubjLqjr0A

  • ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಕಗ್ಗೊಲೆ

    ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಕಗ್ಗೊಲೆ

    ಮಂಗಳೂರು: ಗ್ರಾಮ ಪಂಚಾಯತ್ ಉಪಾಧ್ಯಕ್ಷರೊಬ್ಬರನ್ನು ಪಂಚಾಯತ್ ಒಳಗಡೆ ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕರೋಪಾಡಿಯಲ್ಲಿ ನಡೆದಿದೆ.

    ಅಬ್ದುಲ್ ಜಲೀಲ್ ಕೊಲೆಯಾದ ಉಪಾಧ್ಯಕ್ಷ. ಮುಸುಕುಧಾರಿಗಳಾಗಿ ಎರಡು ಬೈಕ್‍ನಲ್ಲಿ ಬಂದ ನಾಲ್ವರು ಅಬ್ದುಲ್ ಜಲೀಲ್ ಅವರ ಮೇಲೆ ಮೆಣಸಿನ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಪಂಚಾಯತ್ ಒಳಗಿದ್ದ ಸಿಬ್ಬಂದಿಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ ಪರಾರಿಯಾಗಿದ್ದಾರೆ.

    ಹಲ್ಲೆಗೊಳಗಾದ ಜಲೀಲ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿಂದೆ ಕರೋಪಾಡಿಯಲ್ಲಿ ನಿಧಿಶೋಧ ಪ್ರಕರಣ ನಡೆದ ಸಂಧರ್ಭದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಜಲೀಲ್ ನೆರವಾಗಿದ್ದು, ಜೈಲಿನಿಂದ ಬಿಡುಗಡೆಗೊಂಡ ಆರೋಪಿಗಳೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

    ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಸೇರಿದಂತೆ ಹಿರಿಯ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞ ರು ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಜಲೀಲ್ ಹತ್ಯೆಯ ಹಿಂದೆ ಹಲವು ಅನುಮಾನಗಳು ಕವಲೊಡೆದಿವೆ.