Tag: Gram flour dosa

  • ಫಟಾಫಟ್ ಆಗಿ ಮಾಡಿ ಗರಿಗರಿಯಾದ ಕಡಲೆ ಹಿಟ್ಟಿನ ದೋಸೆ

    ಫಟಾಫಟ್ ಆಗಿ ಮಾಡಿ ಗರಿಗರಿಯಾದ ಕಡಲೆ ಹಿಟ್ಟಿನ ದೋಸೆ

    ರಾಗಿ ದೋಸೆ, ಗೋಧಿ ದೋಸೆ, ಅಕ್ಕಿ ದೋಸೆ ತಿಂದಿದ್ದೇವೆ. ಆದೆರೆ ಕಡಲೆ ಹಿಟ್ಟಿನಿಂದ ಗರಿಗರಿಯಾದ ಪಕೋಡ, ಪೋಡಿ ಮಾಡಬಹುದೆಂದು ಮಾತ್ರ ಎಲ್ಲರಿಗೂ ಗೊತ್ತು. ಆದರೆ ಇದೇ ಕಡಲೆ ಹಿಟ್ಟಿನಿಂದ ದೋಸೆಯನ್ನು ಎಂದಾದರೂ ಟ್ರೈ ಮಾಡಿದ್ದೀರಾ. ಕಡಲೆ ಹಿಟ್ಟಿನಿಂದ ಬೆಳಗ್ಗಿನ ಉಪಹಾರಕ್ಕೆ ಗರಿಗರಿಯಾದ ರುಚಿಯಾದ ದೋಸೆಯನ್ನು ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು – 2 ಕಪ್
    * ರವೆ – ಅರ್ಧ ಕಪ್
    * ಅಕ್ಕಿ ಹಿಟ್ಟು- ಅರ್ಧ ಕಪ್
    * ಓಂಕಾಳು – ಅರ್ಧ ಸ್ಪೂನ್
    * ಅರಿಶಿಣ – ಅರ್ಧ ಸ್ಪೂನ್
    * ಮೆಣಸಿನ ಪುಡಿ- ಅರ್ಧ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ನೀರು
    * ಎಣ್ಣೆ- ಅರ್ಧ ಕಪ್ ಇದನ್ನೂ ಓದಿ:  BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

    ಮಾಡುವ ವಿಧಾನ:
    * ಒಂದು ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ರವೆ ಮತ್ತು ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಿ.
    * ಓಂಕಾಳು ,ಅರಿಶಿಣ, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

    * ಈಗ ಅದಕ್ಕೆ 2 ಕಪ್ ನೀರು ಸೇರಿಸಿ, ಯಾವುದೇ ಉಂಡೆಯಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ಇದು ನೀರು ದೋಸೆ ಹಿಟ್ಟಿನಂತೆ ಆಗಲು, ಈಗ ಅಗತ್ಯವಿರುವಷ್ಟು ನೀರನ್ನು ಸೇರಿಸಿ.

    * ದೋಸೆ ಹಂಚಿಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ. ಕಾದ ನಂತರ ಹಿಟ್ಟು ಹಾಕಿ ದೋಸೆ ಮಾಡಿ ಗರಿಗರಿಯಾಗುವವರೆಗೆ ಬೇಯಲು ಬಿಡಿ. ನಂತರ ಮತ್ತೊಂದು ಬದಿಗೆ ತಿರುಗಿಸಿ ಮತ್ತು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಬೇಯಿಸಿದ್ರೆ ಕಡಲೆ ಹಿಟ್ಟಿನ ದೋಸೆ ಸವಿಯಲು ಸಿದ್ಧವಾಗುತ್ತದೆ.