Tag: Graduation

  • ಹಾಸನ | 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ

    ಹಾಸನ | 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ

    ಹಾಸನ: 22 ವರ್ಷದ ಯುವತಿ ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ, ಕಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ಯುವತಿ ಸುಪ್ರಿಯಾ (22) ಕಟ್ಟಳ್ಳಿ ಗ್ರಾಮದ ಕೃಷ್ಣಮೂರ್ತಿ-ರೂಪ ದಂಪತಿಯ ಪುತ್ರಿ. ಕುಟುಂಬಸ್ಥರು ಬೆಂಗಳೂರಿನ (Bengaluru) ಬ್ಯಾಟರಾಯನಪುರದಲ್ಲಿ ವಾಸವಿದ್ದರು. ಇದನ್ನೂ ಓದಿ: ಮೈಸೂರು| ಜಾನುವಾರು ರಕ್ಷಣೆ ಹೆಸರಿನಲ್ಲಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

    ಮುಕ್ತ ವಿವಿಯಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದ ಸುಪ್ರಿಯಾ ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡುತ್ತಿದ್ದಳು. ನಿನ್ನೆ (ಜೂ.25) ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಪೋಷಕರಿಗೆ ಹೇಳಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಪೋಷಕರು ಸುಪ್ರಿಯಾಳನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಸುಪ್ರಿಯಾ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಅಲಕಾನಂದ ನದಿಗೆ ಉರುಳಿದ 18 ಪ್ರಯಾಣಿಕರಿದ್ದ ಬಸ್‌ – ಇಬ್ಬರು ಸಾವು, 10 ಮಂದಿ ನಾಪತ್ತೆ

    ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ 15 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿ ಶಾಕ್‌ ಕೊಟ್ಟ ಯುವತಿ; ಬೆಂಗಳೂರು-ಹೈದರಾಬಾದ್‌ ರೈಲು ಸೇವೆ ಸ್ಥಗಿತ

  • ಕೃಷಿ ವಿಜ್ಞಾನಗಳ ವಿವಿ 11ನೇ ಘಟಿಕೋತ್ಸವ- ರಾಜ್ಯಪಾಲರಿಂದ ಪದವಿ ಪ್ರದಾನ

    ಕೃಷಿ ವಿಜ್ಞಾನಗಳ ವಿವಿ 11ನೇ ಘಟಿಕೋತ್ಸವ- ರಾಜ್ಯಪಾಲರಿಂದ ಪದವಿ ಪ್ರದಾನ

    ರಾಯಚೂರು: ಜಿಲ್ಲೆಯ ಕೃಷಿ ವಿಜ್ಞಾನಗಳ ವಿವಿ 11 ನೇ ಘಟಿಕೋತ್ಸವ ವಿಶ್ವ ವಿದ್ಯಾಲಯದ(ವಿವಿ) ಪ್ರೇಕ್ಷಾಗೃಹದಲ್ಲಿ ನಡೆಯಿತು. ರಾಜ್ಯಪಾಲರು ಹಾಗೂ ವಿವಿ ಕುಲಾಪತಿ ಡಾ.ಥಾವರಚಂದ್ ಗೆಹ್ಲೋಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿಗಳನ್ನ ಪ್ರದಾನ ಮಾಡಿದರು.

    ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾನಿರ್ದೇಶಕ ಡಾ.ಎ.ಕೆ.ಸಿಂಗ್ ಘಟಿಕೋತ್ಸವ ಭಾಷಣ ಮಾಡಿದರು. ಘಟಿಕೋತ್ಸವದಲ್ಲಿ ಕೃಷಿ ಬಿಎಸ್‍ಇ ಪದವಿಯಲ್ಲಿ ಗೀತಿಕಾ ಟಿ.ವಿ ಆರು ಚಿನ್ನದ ಪದಕ ಪಡೆದರು. ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಬಿಟೆಕ್‍ನಲ್ಲಿ ಕೇಸರಿ ಸುಂದರ್ ವರ್ಮಾ ಐದು ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನ ಪಡೆದರು. ಇದನ್ನೂ ಓದಿ:  ಮನ್‌ ಕಿ ಬಾತ್‌: ಕೋವಿಡ್‌ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ

    ಉಳಿದಂತೆ ಒಟ್ಟು 303 ಸ್ನಾತಕ, 107 ಸ್ನಾತಕೋತ್ತರ, 26 ಡಾಕ್ಟರೇಟ್ ಪದವಿಗಳನ್ನ ಹಾಗೂ 45 ಚಿನ್ನದ ಪದಕಗಳನ್ನ ಪ್ರದಾನ ಮಾಡಲಾಯಿತು. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ

  • ಪದವಿ ಪಡೆದ ಶಾರೂಕ್ ಪುತ್ರ ಆರ್ಯನ್ – ಫೋಟೋ ವೈರಲ್

    ಪದವಿ ಪಡೆದ ಶಾರೂಕ್ ಪುತ್ರ ಆರ್ಯನ್ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬಾದ್ ಶಾ ನಟ ಶಾರೂಕ್ ಖಾನ್‍ರವರ ಪುತ್ರ ಆರ್ಯನ್ ಖಾನ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆರ್ಯನ್ ಖಾನ್‍ರವರು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಸಮಾರಂಭದ ಉಡುಪು ಧರಿಸಿ ಕೈನಲ್ಲಿ ಸರ್ಟಿಫಿಕೇಟ್ ಹಿಡಿದುಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಆರ್ಯನ್ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಆದರೆ ಅವರ ಅಭಿಮಾನಿಗಳು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪ್ರಧಾನ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿಗಳನ್ನು ದೂರ ದೂರ ಕೂರಿಸಿ ಪದವಿ ಪ್ರಧಾನ ಸಮಾರಂಭ ನಡೆಸಲಾಗಿದೆ. ಈ ಸಮಾರಂಭದಲ್ಲಿ ಶಾರೂಕ್ ಪುತ್ರ ಆರ್ಯನ್ ಕೂಡ ಭಾಗಿಯಾಗಿದ್ದರು.

     

    View this post on Instagram

     

    A post shared by ???????????????? (@devoted2srk65)

    ಆರ್ಯನ್ ಖಾನ್ 2020ರ ಬ್ಯಾಚ್‍ನ ಬ್ಯಾಚುಲರ್ ಆಫ್ ಫೈನ್ ಆಟ್ರ್ಸ್, ಸಿನಿಮ್ಯಾಟಿಕ್ ಆಟ್ರ್ಸ್, ಫಿಲ್ಮ್ ಅಂಡ್ ಟೆಲಿವಿಷನ್ ಪ್ರೊಡಕ್ಷನ್, ಸ್ಕೂಲ್ ಆಫ್ ಸಿನಿಮ್ಯಾಟಿಕ್ ಆಟ್ರ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಆರ್ಯನ್‍ನ ಈ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ.

     

    View this post on Instagram

     

    A post shared by kiara ♡ (@aryankhanforever)

    ಆರ್ಯನ್ ಖಾನ್ ಹಾಗೂ ಗೌರಿ ಖಾನ್ ಏಪ್ರಿಲ್‍ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ತಾಯಿ-ಮಗ ವಿದೇಶಕ್ಕೆ ಹಾರಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದರು. ಆದರೆ ಗೌರಿ ಖಾನ್ ಮಗನ ಪದವಿ ಪ್ರಧಾನ ಕಾರ್ಯಕ್ರಮಕ್ಕೆ ತೆರಳಿದ್ದರು. ಶಾರೂಖ್ ಪುತ್ರಿ ಸುಹಾನಖಾನ್ ಕೂಡ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

  • `ಪುತ್ರಿಯ ಸಾಧನೆ ನನಗೆ ಹೆಮ್ಮೆ ತಂದಿದೆ’- ಸಚಿನ್, ಪುತ್ರಿಯ ಫೋಟೋ ವೈರಲ್

    `ಪುತ್ರಿಯ ಸಾಧನೆ ನನಗೆ ಹೆಮ್ಮೆ ತಂದಿದೆ’- ಸಚಿನ್, ಪುತ್ರಿಯ ಫೋಟೋ ವೈರಲ್

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ದಂತಕತೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಲಂಡನ್ ವಿವಿಯಿಂದ ವೈದ್ಯಕೀಯ ಪದವಿ ಪಡೆದಿದ್ದಾರೆ.

    ಪದವಿ ಪಡೆದ ಸಂತಸ ಕ್ಷಣಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಸಾರಾ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿನ್ ಕೂಡ ತಮ್ಮ ಪುತ್ರಿಯ ಜೊತೆಗಿನ ಫೋಟೋಗಳನ್ನು ಟ್ವೀಟ್ ಮಾಡಿ ಶುಭಕೋರಿದ್ದು, ಪುತ್ರಿಯ ಸಾಧನೆ ನನಗೆ ಹೆಮ್ಮೆ ತಂದಿದೆ ಎಂದು ಬರೆದುಕೊಂಡಿದ್ದಾರೆ.

    ಮುಂಬೈ ಧೀರೂಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಓದಿದ್ದ ಸಾರಾ ಬಳಿಕ ಯುನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಲ್) ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿಗೆ ಪ್ರವೇಶ ಪಡೆದಿದ್ದರು. ಅಂದಹಾಗೇ ಅಂಜಲಿ ಅವರು ಕೂಡ ಡಾಕ್ಟರ್ ಆಗಿದ್ದು, ಸದ್ಯ 20 ವರ್ಷದ ಸಾರಾ ಕೂಡ ವೈದ್ಯಕೀಯ ಪದವಿ ಪಡೆದು ತಮ್ಮ ತಾಯಿಯಂತೆ ಡಾಕ್ಟರ್ ಆಗಿದ್ದಾರೆ.

    ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಚಿನ್ ಹಾಗೂ ಪತ್ನಿ ಅಂಜಲಿ ಕೂಡ ಸಾರಾ ಗೆ ಸಾಥ್ ನೀಡಿದ್ದಾರೆ. ಸಚಿನ್ ಟ್ವೀಟ್‍ಗೆ ಹರ್ಭಜನ್ ಹಾಗೂ ಪಾಕ್ ಮಾಜಿ ಆಟಗಾರ ಮುಷ್ತಾಕ್ ಸೇರಿದಂತೆ ಹಲವು ದಿಗ್ಗಜರು ಪ್ರತಿಕ್ರಿಯೆ ನೀಡಿ ಶುಭಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BnZMH55HUOE/?taken-by=saratendulkar