Tag: graduate

  • ಸೈಕಲ್‍ನಲ್ಲಿ ಬಟ್ಟೆ ಮಾರುವ ವ್ಯಾಪಾರಿ ಪುತ್ರ UPSC ಪರೀಕ್ಷೆಯಲ್ಲಿ 45ನೇ ರ್‍ಯಾಂಕ್

    ಸೈಕಲ್‍ನಲ್ಲಿ ಬಟ್ಟೆ ಮಾರುವ ವ್ಯಾಪಾರಿ ಪುತ್ರ UPSC ಪರೀಕ್ಷೆಯಲ್ಲಿ 45ನೇ ರ್‍ಯಾಂಕ್

    ಪಾಟ್ನಾ: ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದು ಸಾಬೀತಾಗಿದೆ. ಸೈಕಲ್ ಮೇಲೆ ಬಟ್ಟೆ ಮಾರುವ ಬಡ ವ್ಯಾಪಾರಿಯ ಪುತ್ರನೋರ್ವ ಇದೀಗ ಯುಪಿಎಸ್‍ಸಿ( UNION PUBLIC SERVICE COMMISSION) ಪಾಸ್ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ.

    ಸೈಕಲ್‍ನಲ್ಲಿ ಬಟ್ಟೆಯ ಮೂಟೆ ಹೊತ್ತುಕೊಂಡು, ಊರೂರು ತಿರುಗಿ ಬಟ್ಟೆ ಮಾರಿ ಬದುಕುತ್ತಿರುವ ಬಿಹಾರದ ವ್ಯಾಪಾರಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಈ ವ್ಯಾಪಾರಿಯ ಮಗ ಯುಪಿಎಸ್‍ಸಿ ಪರೀಕ್ಷೆಯಲ್ಲಿ 45ನೇ ರ್‍ಯಾಂಕ್ ಪಡೆದಿದ್ದಾರೆ . 2018ರಲ್ಲಿ ದೆಹಲಿ ಐಐಟಿ ಪದವಿ ಪಡೆದಿರುವ ಅನಿಲ್ ಬೋಸಕ್ ತಮ್ಮ 3ನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ರ್‍ಯಾಂಕ್ ಪಡೆದಿದ್ದಾರೆ . ಇದನ್ನೂ ಓದಿ:  ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ತಮ್ಮ ಪುತ್ರನ ಸಾಧನೆ ಕುರಿತು ಮಾತನಾಡಿರುವ ಬಿನೋದ್ ಬೋಸಕ್, ನಾನೇನೂ ಕಲಿತಿಲ್ಲ. ಆದರೆ ಈ ಪರೀಕ್ಷೆ ನನ್ನ ಮಗನ ಕನಸಾಗಿತ್ತು. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತೇಜನ ಕೊಟ್ಟರೆ ಅವರೂ ಈ ರೀತಿಯ ಸಾಧನೆ ಮಾಡುತ್ತಾರೆ ಎಂದಿದ್ದಾರೆ.

    ಐಐಟಿ ಮುಗಿಸಿ ಕೆಲಸಕ್ಕೆ ಸೇರಬಹುದೆಂದು ನಾವು ಅಂದುಕೊಂಡಿದ್ದೇವು. ಆದರೆ ಆತ ಯುಪಿಎಸ್‍ಸಿಗೆ ತಯಾರಿ ನಡೆಸುವುದಾಗಿ ಹೇಳಿದ. ಅವನ ಕನಸಿಗೆ ನಾವು ಅಡ್ಡಿಯಾಗಲಿಲ್ಲ. ಆತನ ಶಿಕ್ಷಕರು ಅವನಿಗೆ ಆರ್ಥಿಕವಾಗಿ ಸಹಾಯ ಮಾಡಿದರು. ಎಲ್ಲರ ಬೆಂಬಲ ಹಾಗೂ ಆತನ ಶ್ರಮದಿಂದ ಯುಪಿಎಸ್‍ಸಿ ಪಾಸ್ ಆಗಿದ್ದಾನೆ. ಇಡೀ ಊರಿನ ಜನ ಮನೆಗೆ ಬಂದು ಶುಭಾಶಯ ಕೋರುತ್ತಿರುವುದು ನೋಡಿದರೆ ನನಗೆ ಖುಷಿಯಾಗುತ್ತಿದೆ ಎಂದು ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಬಿನೋದ್ ಬೋಸಕ್ ಹೇಳಿಕೊಂಡಿದ್ದಾರೆ.

  • ಪದವಿ, ಡಿಪ್ಲೂಮಾ, ವಿದ್ಯಾರ್ಥಿಗಳಿಗೆ KSRTC ಗುಡ್ ನ್ಯೂಸ್- ಬಸ್ ಪಾಸ್ ವಿಸ್ತರಣೆ

    ಪದವಿ, ಡಿಪ್ಲೂಮಾ, ವಿದ್ಯಾರ್ಥಿಗಳಿಗೆ KSRTC ಗುಡ್ ನ್ಯೂಸ್- ಬಸ್ ಪಾಸ್ ವಿಸ್ತರಣೆ

    ಬೆಂಗಳೂರು : ಪದವಿ, ಡಿಪ್ಲೂಮಾ, ಬಿಇಡಿ ವಿದ್ಯಾರ್ಥಿಗಳಿಗೆ ಕೆಎಸ್ಆರ್‌ಟಿಸಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಕಳೆದ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ಈ ಬಾರಿಯ ಪರೀಕ್ಷಾ ಅವಧಿವರೆಗೆ ವಿಸ್ತರಿಸಿದೆ.

    ಅಕ್ಟೋಬರ್​ನಲ್ಲಿ ಡಿಪ್ಲೂಮಾ, ಬಿಇಡಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇರುವುದರಿಂದ ಕೆಎಸ್ಆರ್‌ಟಿಸಿ ಕಳೆದ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ನವೆಂಬರ್ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ!

    ಈ ಮೂರು ಕೋರ್ಸ್‍ಗಳ ಪರೀಕ್ಷೆಗಳು ನವೆಂಬರ್‌ಗೆ ಮುಂಚಿತವಾಗಿ ಮುಗಿದರೆ ಪರೀಕ್ಷಾ ಅವಧಿವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಹೀಗಾಗಿ ವಿದ್ಯಾರ್ಥಿಗಳು ಪಾಸ್ ಕೌಂಟರ್ ನಲ್ಲಿ ಅವಧಿ ವಿಸ್ತರಣೆಯ ಸಹಿ ಹಾಗೂ ಮೊಹರು ಪಡೆಯುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಏರಿಕೆ ಆಯ್ತು ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳು

  • ಬಿಜೆಪಿ ಟಿಕೆಟ್ ನಿರಾಕರಿಸಿದ ಎಂಬಿಎ ಪದವೀಧರ

    ಬಿಜೆಪಿ ಟಿಕೆಟ್ ನಿರಾಕರಿಸಿದ ಎಂಬಿಎ ಪದವೀಧರ

    ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಬಂದಿರುವ ಟಿಕೆಟ್‍ನ್ನು ಯುವಕ ನಿರಾಕರಿಸಿದ್ದಾನೆ.

    ಮಣಿಕುಟ್ಟನ್‍ಪಣಿಯಣ್ (31) ಎಂಬಿಎ ಪದವೀಧರನಿಗೆ ಬಿಜೆಪಿ ಕಡೆಯಿಂದ ಟಿಕೆಟ್ ಕೊಟ್ಟಿದ್ದು, ಇದನ್ನು ಯುವಕ ನಿರಾಕರಿಸಿದ್ದಾನೆ. ಯುವಕ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವ ಮೂಲಕವಾಗಿ ಹೈಕಮಾಂಡ್‍ಗೆ ಶಾಕ್ ನೀಡಿದ್ದಾನೆ.

    ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಸಮುದಾಯಕ್ಕೆ ಮೀಸಲಾಗಿದ್ದ ಮನಂತವಾಡಿ ಕ್ಷೇತ್ರದಿಂದ ಮಣಿಕುಟ್ಟನ್‍ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಮಣಿಕುಟ್ಟನ್ ಕೇರಳದ ಪಣಿಯಾ ಬುಡಕಟ್ಟು ಸಮುದಾಯದಲ್ಲಿ ಎಂಬಿಎ ಪದವಿಗಳಿಸಿದ ಮೊದಲ ವ್ಯಕ್ತಿ ಎಂದು ಬಿಜೆಪಿ ಹೇಳಿತ್ತು. ಆದರೆ ಅಭ್ಯರ್ಥಿ ಪಟ್ಟಿಯಲ್ಲಿರುವ ಮಣಿಕುಟ್ಟನ್ ಟಿಕೆಟ್ ನಿರಾಕರಿಸಿದ್ದಾನೆ.

    ಕೇಂದ್ರದ ನಾಯಕರು ನನ್ನನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ ನಾನು ಒಂದು ಉದ್ಯೋಗ ಪಡೆದು, ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ಬಿಜೆಪಿ ನನಗೆ ನೀಡಿರುವ ಅವಕಾಶವನ್ನು ನಾನು ಸಂತೋಷದಿಂದ ನಿರಾಕರಿಸುತ್ತೇನೆ ಎಂದು ಮಣಿಕುಟ್ಟನ್ ಹೇಳಿದ್ದಾನೆ.

    ನಾನು ಸಾಮಾನ್ಯ ಪ್ರಜೆಯಾಗಿದ್ದು, ನನಗೆ ಟಿಕೆಟ್ ಘೋಷಣೆ ಮಾಡಿರುವುದು ಅಚ್ಚರಿಯಾಗಿದೆ. ನನಗೆ ಬಿಜೆಪಿ ಅಭ್ಯರ್ಥಿಯಾಗುವುದು ಇಷ್ಟವಿಲ್ಲ. ಆದರೆ ನಮ್ಮ ಸಮುದಾಯದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಈಗಾಗಲೇ ನಾಯಕರಿಗೆ ಫೋನ್ ಮೂಲಕ ಈ ಕುರಿತಾಗಿ ಹೇಳಿದ್ದೇನೆ ಎಂದು ಯುವಕ ಸ್ಪಷ್ಟಪಡಿಸಿದ್ದಾರೆ.

  • ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಚಿಕ್ಕಮಗಳೂರು: ಕಳೆದ ನಾಲ್ಕೈದು ವರ್ಷದಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿರೋ 24 ವರ್ಷದ ಪದವೀಧರ ಯುವಕನೊಬ್ಬ ನಾನು ಮೃತಪಡುವ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಹಿರೇಗರ್ಜೆ ಗ್ರಾಮದ ಜಗದೀಶ್ ಕಳೆದ ನಾಲ್ಕೈದು ವರ್ಷಗಳಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿದ್ದಾರೆ. 80 ಕೆ.ಜಿ. ಇದ್ದ ಈ ಯುವಕ ಇಂದು ಇರೋದು 15-16 ಕೆ.ಜಿ. ಮಲಗಿದ್ದಲ್ಲೇ ಎಲ್ಲಾ. ಸದಾ ಇವರ ಸೇವೆಗೆ ಮನೆಯಲ್ಲಿ ಒಬ್ಬರು ಇರಲೇಬೇಕು.

    ಕೂಲಿ ಮಾಡುವ ಹೆತ್ತವರು ನಾಲ್ಕೈದು ಲಕ್ಷ ಖರ್ಚು ಮಾಡಿದ್ದರೂ ಮಗನನನ್ನ ಹುಷಾರು ಮಾಡಲು ಸರಿಯಾಗದೆ ಕೈಚೆಲ್ಲಿ ಕೂತಿದ್ದಾರೆ. ದಿನದಿಂದ ದಿನಕ್ಕೆ ಆರೋಗ್ಯದ ಸ್ಥಿತಿ ಹದಗೆಡ್ತಿರೋ ಜಗದೀಶ್‍ಗೆ ಸಾಯುವ ಮುನ್ನ ಕುಮಾರಸ್ವಾಮಿಯನ್ನ ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ.

    ನಾನು ಸಾಯುವ ಮುನ್ನ ಶಾಸಕ ವೈ.ಎಸ್.ವಿ ದತ್ತ ಹಾಗೂ ಕುಮಾರಸ್ವಾಮಿಯನ್ನ ನೋಡಬೇಕೆಂಬ ಆಸೆ ಹೊಂದಿದ್ದೇನೆ. ಆದ್ರೆ, ಶಾಸಕ ದತ್ತ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಇದೀಗ ಕೊನೆ ಬಾರಿ ಕುಮಾರಸ್ವಾಮಿಯನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

  • 16 ವರ್ಷದ ಈಕೆ ಈಗ ಏಷ್ಯಾದಲ್ಲೇ ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀಧರೆ

    16 ವರ್ಷದ ಈಕೆ ಈಗ ಏಷ್ಯಾದಲ್ಲೇ ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀಧರೆ

    ಹೈದರಾಬಾದ್: ಸಾಧನೆಗೆ ವಯಸ್ಸಿನ ಹಂಗಿಲ್ಲ ಅಂತಾರೆ. ಈ ಮಾತನ್ನು ನಿಜವಾಗಿಸಿದ್ದಾಳೆ ಹೈದರಾಬಾದ್‍ನ ಈ ಯುವತಿ. ಹೌದು. ನೈನಾ ಜೈಸ್ವಾಲ್(16) ಎಂಬ ಈ ಯುವತಿ ಅತೀ ಕಿರಿಯ ವಯಸ್ಸಿನಲ್ಲಿಯೇ ಏಷ್ಯಾದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾಳೆ.

    ಈಕೆ ತನ್ನ 15ನೇ ವಯಸ್ಸಿನಲ್ಲಿ ಏಷ್ಯಾದ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದವಿ ಪಡೆದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಇಷ್ಟು ಮಾತ್ರವಲ್ಲದೇ ನೈನಾ ತನ್ನ 13ನೇ ವಯಸ್ಸಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದು, ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದವಿ ಪಡೆದ ಮೊದಲ ವಿದ್ಯಾರ್ಥಿನಿ ಎಂಬ ಶ್ರೇಯಸ್ಸು ಈಕೆಯದ್ದು.

    ಕೇವಲ ಓದಿನಲ್ಲಿ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಈಕೆ ವೃತ್ತಿಪರ ಟೇಬಲ್ ಟೆನ್ನಿಸ್ ಆಟಗಾರ್ತಿಯೂ ಹೌದು. ಟೇಬಲ್ ಟೆನ್ನಿಸ್‍ನಲ್ಲಿ ನೈನಾ ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾಳೆ.

    ನೈನಾ ಜೇಸ್ವಾಲ್ ಕುಟುಂಬದಲ್ಲಿ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿರುವುದು ಇದು ಮೊದಲೇನಲ್ಲ. ಇತ್ತೀಚೆಗಷ್ಟೇ ಈಕೆಯ ತಮ್ಮ ಅಗಸ್ತ್ಯ ಜೈಸ್ವಾಲ್ 11 ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಸುದ್ದಿಯಾಗಿದ್ದ. ಈ ಬೆನ್ನಲ್ಲೇ ಇದೀಗ ನೈನಾ ಕೂಡ ತನ್ನ ಸಾಧನೆಯ ಮೂಲಕ ಸುದ್ದಿಯಾಗಿದ್ದಾಳೆ. ಇವರ ತಂದೆ ಜಸ್ವಾಲ್ ಕೂಡಾ 15 ವರ್ಷ ವಯಸ್ಸಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.