Tag: gparameshwar

  • ಅಮಿತ್ ಶಾ ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರ್ತಾರೆ: ಜಿ.ಪರಮೇಶ್ವರ್

    ಅಮಿತ್ ಶಾ ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರ್ತಾರೆ: ಜಿ.ಪರಮೇಶ್ವರ್

    ಬೆಂಗಳೂರು: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit shah) ಅವರು ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Parameshwara) ವ್ಯಂಗ್ಯವಾಡಿದ್ದಾರೆ.

    ಅಮಿತ್ ಶಾ ಅವರ ಮೈಸೂರು (Mysuru) ಪ್ರವಾಸ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ ಚುನಾವಣೆ ಇದ್ದಾಗ ಬಂದೇ ಬರ್ತಾರೆ. ಪ್ರಧಾನಿಯದ್ದು ಇಷ್ಟರಲ್ಲೇ ಟಿಪಿ ಬರುತ್ತೆ. ಅವರು ಏನ್ ಮಾಡಬೇಕೋ ಮಾಡಲಿ, ನಾವೇನ್ ಮಾಡಬೇಕೋ ಮಾಡ್ತೀವಿ. ಸಂದರ್ಭ ಬಂದಾಗ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಯೂ ಟರ್ನ್ ಹೊಡೆಯುವ ಗಿರಾಕಿ ಅಲ್ಲ: ನಿಖಿಲ್ ಕುಮಾರಸ್ವಾಮಿ

    ನೂರು ನೋಟಿಸ್ ಕೊಟ್ಟರೂ ಹೆದರುವುದಿಲ್ಲ ಎಂಬ ಈಶ್ವರಪ್ಪ (Eshwarappa) ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರನ್ನು ಹೆದರಿಸಲು ಯಾರೂ ಹೋಗಿಲ್ಲ. ಕಾನೂನಿನ ಪ್ರಕಾರ, ನೋಟೀಸ್ ಕೊಟ್ಟಿದ್ದೀವಿ. ಮೊದಲು ಅದಕ್ಕೆ ಸಮಜಾಯಿಷಿ ಕೊಡಲಿ. ಈಶ್ವರಪ್ಪ ಅವರು ಬಹಳ ದೊಡ್ಡವರು, ಹೆದರಿಸೋಕೆ ಆಗುತ್ತಾ? ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಳಿಯ-ಮಗಳ ಜಗಳದಲ್ಲಿ ಹತ್ಯೆಯಾದ ಅತ್ತೆ

    ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆ ವಿಳಂಬ ವಿಚಾರದ ಬಗ್ಗೆ ಮಾತನಾಡಿ, ಆದಷ್ಟು ಬೇಗ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾವು ಬೇಸರ ಪಟ್ಟಿದ್ದೆಲ್ಲ ಮುಗಿದು ಹೋಯ್ತು. ಸಿಎಂ ಮತ್ತು ಡಿಸಿಎಂ ಚರ್ಚೆ ಮಾಡಿದ್ದಾರೆ. ಅಂತಿಮಗೊಳಿಸಿದ್ದೀವಿ ಅಂತಾ ಸಹ ಹೇಳಿದ್ದಾರೆ. ನಾವು ಯಾರದ್ದೋ ಮನೆಯಲ್ಲಿ ತಿಂಡಿ ತಿನ್ನೋದೇ ತಪ್ಪಾ? ನಾವೆಲ್ಲ ಮುನಿಯಪ್ಪ ಮನೆಗೆ ಹೋಗಿ ತಿಂಡಿ ತಿಂದಿದ್ದೀವಿ. ಅವರ ಮನೆಗೆ ಹೋಗಿ ಲಗ್ನ, ಸಂಬಂಧ ಮಾಡೋಕೆ ಮಾತಾಡ್ತೀವಾ? ನಾಲ್ಕು ಜನ ಸೇರಿದ ಮೇಲೆ ರಾಜಕೀಯ ಮಾತಾಡ್ತೀವಿ. ಹೆಚ್ಚು ಸೀಟು ಗೆಲ್ಲೋಕೆ ನಾವು ಏನ್ ಮಾಡಬಹುದು ಅಂತಾ ಚರ್ಚೆ ಮಾಡಿದ್ದೀವಿ. ಅದಕ್ಕೆ ಬೇರೆ ಬಣ್ಣ ಬಳಿಯೋದು ಬೇಡ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?

    ಇದೇ ವೇಳೆ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಟ್ಟಿರೋದು ವೈಯಕ್ತಿಕ ಎಂದು ಅವರು ಹೇಳಿದ್ದಾರೆ. ರಾಜೀನಾಮೆಯಲ್ಲಿ ಯಾವ ಆರೋಪ ಮಾಡಿಲ್ಲ. ಹೀಗಾಗಿ ರಾಜೀನಾಮೆ ಸ್ವೀಕರಿಸಬೇಕಲ್ವಾ?. ಪ್ರತಾಪ್ ಅವರ ರಾಜೀನಾಮೆ ಸ್ವೀಕಾರ ಆಗಿದೆ ಎಂದು ತಿಳಿಸಿದ್ದಾರೆ. ಕಮಿಷನ್ ಆರೋಪಕ್ಕೆ ಸಿಬಿಐ ತನಿಖೆಗೆ ಆರ್.ಅಶೋಕ್  (R.Ashok) ಆಗ್ರಹ ವಿಚಾರಕ್ಕೆ, ಅವರು ಇದ್ದಾಗ ನಾವು ಕೇಳಿದ್ದೀವಿ, ಅವರು ಕೊಟ್ಟಿರಲಿಲ್ಲ. ಅವರ ಕಾಲದಲ್ಲಿ ಪ್ರಧಾನಿಗೇ ಪತ್ರ ಬರೆದಿದ್ರು. ಆದರೂ ಸಿಬಿಐ ತನಿಖೆಗೆ ನೀಡಲಿಲ್ಲ. ಈಗ ಆಗ್ರಹ ಮಾಡುತ್ತಿದ್ದಾರೆ ಎಂದು ಆರ್. ಆಶೋಕ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ- ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ?

  • ಡಿಸಿಎಂಗೆ ಇನ್ನೂ ಹೋಗಿಲ್ಲ ಝೀರೋ ಟ್ರಾಫಿಕ್ ಮೋಹ

    ಡಿಸಿಎಂಗೆ ಇನ್ನೂ ಹೋಗಿಲ್ಲ ಝೀರೋ ಟ್ರಾಫಿಕ್ ಮೋಹ

    ಬೆಂಗಳೂರು: ಮೈತ್ರಿ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದ್ದರೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಮಾತ್ರ ಝೀರೋ ಟ್ರಾಫಿಕ್ ವ್ಯಾಮೋಹ ಕಡಿಮೆ ಆಗಿಲ್ಲ.

    ಹೌದು. ಪರಮೇಶ್ವರ್ ಅವರು ಯಶವಂತಪುರ ತಾಜ್ ವಿವಾಂತ ಹೋಟೆಲ್ ನಿಂದ ಹೊರಡುತ್ತಿದ್ದಂತೆಯೇ ಟ್ರಾಫಿಕ್ ಪೊಲೀಸರು ಅವರಿಗೆ ಸಿಗ್ನಲ್ ಫ್ರೀ ಮಾಡಿಕೊಟ್ಟರು. ಹೀಗಾಗಿ ಝೀರೋ ಟ್ರಾಫಿಕ್‍ನಲ್ಲಿ ಡಿಸಿಎಂ ತೆರಳಿದರು. ತಾಜ್ ವಿವಾಂತ್‍ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರ ಜೊತೆ ಚರ್ಚೆ ಮಾಡಲು ಡಾ.ಜಿ ಪರಮೇಶ್ವರ್ ಬಂದಿದ್ದರು.

    ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ನೋಡಿ ಜನರು ಬೇಸತ್ತಿದ್ದಾರೆ. ಇಷ್ಟು ದಿನ ಅತೃಪ್ತ ಶಾಸಕರು ಮಾತ್ರ ರೆಸಾರ್ಟ್ ಸೇರಿದ್ದರು. ಆದರೆ ಈಗ ರಾಜ್ಯದ ಆಡಳಿಕ ಪಕ್ಷ ಹಾಗೂ ವಿರೋಧ ಪಕ್ಷದ ಕೆಲ ನಾಯಕರು ರೆಸಾರ್ಟ್ ರಾಜಕೀಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಒಂದೆಡೆ ಜೆಡಿಎಸ್ ಶಾಸಕರು ನಂದಿಬೆಟ್ಟದ ಬಳಿಯಿರೋ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಸೇರಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ತಾಜ್ ವಿವಾಂತ ರೆಸಾರ್ಟಿನಲ್ಲಿದ್ದಾರೆ. ಅಲ್ಲದೆ ಬಿಜೆಪಿ ಶಾಸಕರು ರಮಡ ಮತ್ತು ಸಾಯಿಲೀಲಾ ರೆಸಾರ್ಟ್ ನಲ್ಲಿ ತಂಗಿದ್ದಾರೆ. ಇತ್ತ ದೋಸ್ತಿ ಸರ್ಕಾರವನ್ನು ಉಳಿಸಲು ವಿಶ್ವಾಸಮತ ಸಾಬೀತುಪಡಿಸಲು ಸಿಎಂ ಸರ್ಕಸ್ ಮುಂದುವರಿಸಿದ್ದಾರೆ.