Tag: Gowrishankar

  • ಹಳ್ಳಿ ಸೊಗಡಿನ ಹಿಮ್ಮೇಳದಲ್ಲಿ `ಕೆರೆಬೇಟೆ’ ಟೈಟಲ್ ಸಾಂಗ್ ಬಿಡುಗಡೆ

    ಹಳ್ಳಿ ಸೊಗಡಿನ ಹಿಮ್ಮೇಳದಲ್ಲಿ `ಕೆರೆಬೇಟೆ’ ಟೈಟಲ್ ಸಾಂಗ್ ಬಿಡುಗಡೆ

    ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ (Kerebete) ಚಿತ್ರ ಈಗ ಸಿನಿಮಾ ಪ್ರೇಮಿಗಳ ಗಮನ ಸೆಳೆದುಕೊಂಡಿದೆ. ಇದೇ ಮಾರ್ಚ್ 15ರಂದು ತೆರೆಗಾಣಲಿರುವ ಈ ಚಿತ್ರದ ಟೈಟಲ್ ಸಾಂಗ್ (Title Song) ಇದೀಗ ಬಿಡುಗಡೆಗೊಂಡಿದೆ. ಎಲ್ಲವನ್ನೂ ಈ ಸಿನಿಮಾದ ಆಂತರ್ಯಕ್ಕನುಗುಣವಾಗಿಯೇ ಮಾಡಲಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಪಕ್ಕಾ ಮಲೆನಾಡು ಸೀಮೆಯ ಹಳ್ಳಿ ಸೊಗಡಿನ ಹಿಮ್ಮೇಳದಲ್ಲಿ, ಸಂಸದರಾದ ಬಿ.ವೈ ರಾಘವೇಂದ್ರ ಅವರ ಸಮ್ಮುಖದಲ್ಲಿ ಕೆರೆಬೇಟೆಯ ಟೈಟಲ್ ಸಾಂಗ್ ಅನಾವರಣಗೊಂಡಿದೆ.

    ಆರಂಭಿಕವಾಗಿ ಶಿವಮೊಗ್ಗದ ನಗರದಾದ್ಯಂತ ಕುದುರೆ ಗಾಡಿ ಹಾಗೂ ಬೈಕ್ ರ್ಯಾಲಿಯನ್ನು ಸಾಂಕೇತಿಕವಾಗಿ ನಡೆಸಲಾಯ್ತು. ವಿಶೇಷವೆಂದರೆ ರಿಯಲ್ ಕೆರೆಬೇಟೆ ಪಟುಗಳೇ, ಆ ಉಡುಗೆ ತೊಡುಗೆಗಳೊಂದಿಗೆ ಪ್ರತೀ ಜಿಲ್ಲೆಗಳಿಗೂ ಪ್ರಚಾರ ಕಾರ್ಯಕ್ಕೆ ಹೊರಟು ನಿಂತಿದ್ದಾರೆ. ಆ ಕಾರ್ಯಕ್ಕೂ ಈ ಸಂದರ್ಭದಲ್ಲಿಯೇ ಚಾಲನೆ ಸಿಕ್ಕಿದೆ. ಇದಲ್ಲದೇ ಮಲೆನಾಡು ಭಾಗದ ಕಹಳೆ, ಕೋಲಾಟದಂಥಾ ಕಲೆಗಳೂ ಕೂಡಾ ಈ ಸಂದರ್ಭದಲ್ಲಿ ಮೇಳೈಸಿವೆ. ನಂತರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಬಿ ವೈ ರಾಘವೇಂದ್ರ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಗೀತೆ ಬಿಡುಗಡೆಗೊಂಡಿದೆ.

    ಮಳಿ ಆತು ಬೆಳಿ ಆತು ಬ್ಯಾಸಗೀನೂ ಬ್ಯಾಸರಾತು… ಎಂಬ ಹಾಡು ನಿಜಕ್ಕೂ ಮಲೆನಾಡು ಭಾಷೆಯನ್ನು ಶಶಕ್ತವಾಗಿ ಹಿಡಿದಿಟ್ಟುಕೊಂಡಂತೆ ರೂಪುಗೊಂಡಿದೆ. ಈವರೆಗೂ ಮಲೆನಾಡು ಸೀಮೆಯ ಚಿತ್ರಣ ಸಿನಿಮಾವಾದರೂ ಕೂಡಾ ಅಲ್ಲಿನ ಭಾಷೆ ಪೂರ್ಣಪ್ರಮಾಣದಲ್ಲಿ ಬಳಕೆಯಾದದ್ದಿಲ್ಲ. ಆದರೆ, ಈ ಸಿನಿಮಾದುದ್ದಕ್ಕೂ ಅದರದ್ದೇ ಮೇಲುಗೈ. ಸದರಿ ಶೀರ್ಷಿಕೆ ಗೀತೆಯೂ ಕೂಡಾ ಮಲೆನಾಡು ಫ್ಲೇವರಿನಲ್ಲಿ ಅದ್ದಿ ತೆಗೆದಂತೆ ಮೂಡಿ ಬಂದಿದೆ. ಅದ್ಯಾವ ಸೀಮೆಯಲ್ಲೇ ಇದ್ದರೂ ಮಲೆನಾಡಿನ ನೆನಪನ್ನು ಎದೆಗಾನಿಸಿ ತಂಪಾಗಿಸುವಂಥಾ ಈ ಹಾಡು ಈ ದಿನಮಾನದ ಅತೀ ಅಪರೂಪದ ಗೀತೆಯಾಗಿ ದಾಖಲಾಗುವಂತಿದೆ.

    ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಈ ಹಾಡನ್ನು ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ಹಾಗೂ ಕರಿಬಸವ ಗಾಯನದೊಂದಿಗೆ ಈ ಹಾಡು ಮೂಡಿಬಂದಿದೆ. ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್, ಮಲೆನಾಡು ಗೊಂಬೆಯಂಥಾ ವೀಡಿಯೋಈ ಸಾಂಗ್ ಮೂಲಕ ಕೆರೆಬೇಟೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಇನ್ನೇನು ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಲಾಂಚ್ ಆಗಿರುವ ಈ ಟೈಟ್ ಸಾಂಗ್ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

     

    ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ.

  • ‘ಕೆರೆಬೇಟೆ’ ಟ್ರೈಲರ್ ತುಂಬಾ ಕಾಡ ಗರ್ಭದ ಕಥೆಯ ಗಾಢ ಛಾಯೆ

    ‘ಕೆರೆಬೇಟೆ’ ಟ್ರೈಲರ್ ತುಂಬಾ ಕಾಡ ಗರ್ಭದ ಕಥೆಯ ಗಾಢ ಛಾಯೆ

    ಗೌರಿಶಂಕರ್ ಅಭಿನಯದ `ಕೆರೆಬೇಟೆ’ (Kerebete) ಚಿತ್ರದ ಟ್ರೈಲರ್ (Trailer) ಲಾಂಚ್ ಆಗಿದೆ. ಹಾಗೆ ಬಿಡುಗಡೆಗೊಂಡಿರುವ ಈ ಟ್ರೈಲರ್ ದಿನಗಳು ಹೊರಳಿಕೊಳ್ಳುತ್ತಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಾ, ಟ್ರೆಂಡಿಂಗ್ ನತ್ತ ದಾಪುಗಾಲಿಡುತ್ತಿದೆ. ಸಾಮಾನ್ಯವಾಗಿ ಒಂದು ಜನಪ್ರಿಯ ಅಲೆಯ ಅಬ್ಬರದ ನಡುವೆ ಅದಕ್ಕೆ ಹೊರತಾದಂತೆ ಕಾಣಿಸುವ ಚಿತ್ರವೊಂದರ ಸುಳಿವು ಸಿಕ್ಕರೂ ಸಾಕು, ತಾನೇ ತಾನಾಗಿ ಅದರತ್ತ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಆ ರೀತಿಯಲ್ಲಿಯೇ ಕೆರೆಬೇಟೆ ಕೂಡಾ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಟ್ರೈಲರ್ ನೋಡಿದವರೆಲ್ಲ ರೋಮಾಂಚಿತರಾಗಿದ್ದಾರೆ. ಅದರ ಸುತ್ತ ಗರಿಗೆದರಿಕೊಂಡಿರುವ ನಿರೀಕ್ಷೆಗಳನ್ನು ಕಂಡು ಚಿತ್ರತಂಡ ಅಕ್ಷರಶಃ ಥ್ರಿಲ್ ಆಗಿದೆ.

    ಹಳ್ಳಿ ವಾತಾವರಣದ ಕಥೆ ಎಂದಾಕ್ಷಣ ಒಂದಷ್ಟು ಭಾಗಗಳ ಭಾಷಾ ಶೈಲಿಯನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಲೆನಾಡಿನಲ್ಲಿ ಘಟಿಸುವ ಒಂದಷ್ಟು ಕಥಾನಕಗಳು ಬಂದಿದ್ದರೂ ಕೂಡಾ, ಆ ಭಾಗದ ಭಾಷೆಯನ್ನು ಪರಿಪೂರ್ಣವಾಗಿ ಬಳಸಿಕೊಂಡಿದ್ದು ವಿರಳ. ಆದರೆ, ಕೆರೆಬೇಟೆ ಚಿತ್ರವಿಡೀ ಅಂತಹ ಮಲೆನಾಡು ಭಾಷೆಗಳ ಗಂಧ ತುಂಬಿಕೊಂಡಂತಿದೆ. ಅದು ಕರುನಾಡಿನ ಎಲ್ಲ ಭಾಗಗಳ ಪ್ರೇಕ್ಷಕರಿಗೂ ಹೊಸತನದೊಂದಿಗೆ ಸೋಕುವ ಸೂಚನೆಗಳೂ ಕಾಣಿಸುತ್ತಿವೆ. ಇದೇ ಟ್ರೈಲರ್ ಮೂಲಕ ಒಟ್ಟಾರೆ ಕೆರೆಬೇಟೆ ಕಥನದ ನಾನಾ ಮಜಲುಗಳು ಅನಾವರಣಗೊಂಡಿವೆ. ಇದು ಎಲ್ಲ ಅಭಿರುಚಿಯ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಫುಲ್ ಮೀಲ್ಸ್ ಅನ್ನೋದು ಕೂಡಾ ಸದರಿ ಟ್ರೈಲರ್ ನೊಂದಿಗೆ ಸಾಬೀತಾಗಿದೆ.

    ಕೆರೆಬೇಟೆಯ ಸುತ್ತಾ ಪ್ರೀತಿ, ಜಾತಿ, ಮೇಲು ಕೀಳು, ಬಡತನ ಮುಂತಾದ ಅಂಶಗಳೊಂದಿಗೆ ರಗಡ್ ಕಥಾನಕದ ಝಲಕ್ಕುಗಳು ಈ ಟ್ರೈಲರ್ ಮೂಲಕ ತೆರೆದುಕೊಂಡಿದೆ. ಕಾಡ ಗರ್ಭದ ಸಹಜ ಛಾಯೆಯಲ್ಲಿ ಚಲಿಸೋ ಕಥೆಯೆಂದರೇನೇ ಥ್ರಿಲ್ ಆಗಿ ಕಾಯೋ ಬಹುದೊಡ್ಡ ಪ್ರೇಕ್ಷಕ ವರ್ಗವಿದೆ. ಅದರಲ್ಲಿಯೂ ಕ್ಲಾಸ್, ಮಾಸ್ ಕಂಟೆಂಟಿನ ಸಮಾಗಮದಂಥಾ ಚಿತ್ರವೆಂದಮೇಲೆ ಸಂಚಲನ ಸೃಷ್ಟಿಯಾಗೋದುಜಜ ಸಹಜ. ಈ ನಿಟ್ಟಿನಲ್ಲಿ ನೋಡಹೋದರೆ, ಕೆರೆಬೇಟೆ ಕಟ್ಟುಮಸ್ತಾದ ಕಥೆಯ ಮೂಲಕ ಮೈಕೈ ತುಂಬಿಕೊಂಡಿರೋದನ್ನು ಈ ಟ್ರೈಲರ್ ಸಾಕ್ಷೀಕರಿಸಿದೆ.

    ಜೋಕಾಲಿ, ರಾಜಹಂಸ ಮುಂತಾದ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ಗೌರಿಶಂಕರ್ (Gowrishankar) ಕೆರೆಬೇಟೆ ನಾಯಕನಾಗಿ ಮರಳಿದ್ದಾರೆ. ಅವರ ಪಾತ್ರದ ರಗಡ್ ಲುಕ್ ನೋಡುಗರನ್ನೆಲ್ಲ ಸೆಳೆಯುವಂತಿದೆ. ಜೈಶಂಕರ್ ಪಟೇಲ್ ಜನಮನ ಸಿನಿಮಾ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಕೆರೆಬೇಟೆ, ರಾಜ್ ಗುರು ನಿರ್ದೇಶನದಲ್ಲಿ ರೂಪುಗೊಂಡಿದೆ. ಇದರ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯನ್ನು ಗೌರಿಶಂಕರ್ ಮತ್ತು ನಿರ್ದೇಶಕರು ಒಟ್ಟುಗೂಡಿ ರೂಪಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ರಾಜ್ ಗುರು ವಿಶಿಷ್ಟವಾದ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆಂಬುದಕ್ಕೂ ಈ ಟ್ರೈಲರಿನಲ್ಲಿ ಸಾಕ್ಷಿಗಳಿದ್ದಾವೆ.

    ನಿಖರವಾಗಿ ಹೇಳಬೇಕೆಂದರೆ, ಕೆರೆಬೇಟೆ ಟ್ರೈಲರ್ ಈ ವರ್ಷದ ಪ್ರಾಮಿಸಿಂಗ್ ಟ್ರೈಲರ್ ಆಗಿ ದಾಖಲಾಗುತ್ತದೆ. ಈ ವರ್ಷದ ಆರಂಭದಿಂದಲೇ ಭಿನ್ನ ಪ್ರಯೋಗಗಳ, ಹೊಸಾ ಹಾದಿಯ ಒಂದಷ್ಟು ಸಿನಿಮಾಗಳು ತೆರೆಗಾಣುತ್ತಿವೆ. ಅದರಲ್ಲಿ ಬಹುತೇಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡ ಚಿತ್ರರಂಗದ ಪಾಲಿಗೆ ಭಿನ್ನವಾದೊಂದು ಪಥ ತೆರೆದುಕೊಂಡಿರುವ ಈ ಘಳಿಗೆಯಲ್ಲಿ ಕೆರೆಬೇಟೆ ಟ್ರೈಲರ್ ಮತ್ತಷ್ಟು ನಿರೀಕ್ಷೆ ಮೂಡಿಸುವಂತಿದೆ. ಇದೀಗ ಟ್ರೈಲರ್ ನೋಡಿದವರೆಲ್ಲರೊಳಗೂ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕೌತುಕ ಮೂಡಿಕೊಂಡಿದೆ. ಅದು ಕೆರೆಬೇಟೆ ಟ್ರೈಲರಿನ ನಿಜವಾದ ಸಾರ್ಥಕತೆ.

     

    ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ವಲ್ಲಭ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆಗೊಳ್ಳಲಿದೆ.

  • ವಿಶಿಷ್ಟ ರೀತಿಯಲ್ಲಿ `ಕೆರೆಬೇಟೆ’ ಟ್ರೈಲರ್ ಲಾಂಚ್: ಬೆಂಗಳೂರಿನಲ್ಲಿ ಮಲೆನಾಡ ಸಂಪ್ರದಾಯ

    ವಿಶಿಷ್ಟ ರೀತಿಯಲ್ಲಿ `ಕೆರೆಬೇಟೆ’ ಟ್ರೈಲರ್ ಲಾಂಚ್: ಬೆಂಗಳೂರಿನಲ್ಲಿ ಮಲೆನಾಡ ಸಂಪ್ರದಾಯ

    ಕೇವಲ ಸಿನಿಮಾ ರೂಪಿಸುವ ವಿಚಾರದಲ್ಲಿ ಮಾತ್ರವಲ್ಲ; ಆ ಸಿನಿಮಾವನ್ನು ಪ್ರೇಕ್ಷಕರನ್ನು ತಲುಪಿಸುವಲ್ಲಿಯೂ ಹೊಸತನದ ಹಾದಿ ಹಿಡಿಯೋ ನಡೆಯೊಂದು ಇತ್ತೀಚೆಗೆ ಶುರುವಾಗಿದೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕೆರೆಬೇಟೆ (Kerebete) ಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಅತ್ಯಂತ ವಿಶೇಷವಾಗಿ ನೆರವೇರಿಸಿದೆ. ಈ ಈವೆಂಟಿನ ರೂಪುರೇಷೆ, ಅದು ನಡೆದ ರೀತಿಗಳೆಲ್ಲವೂ ಭಿನ್ನವಾಗಿವೆ. ಈ ಮೂಲಕ ಹಲವು ಸಂಸ್ಕೃತಿಗಳ ಸಂಗಮದಂಥಾ ಬೆಂಗಳೂರಿನ ಒಡಲಲ್ಲಿ ಅಪ್ಪಟ ಮಲೆನಾಡಿನ ಸಂಸ್ಕೃತಿಯೊಂದು ಮಿಂಚಿದೆ.

    ಆರಂಭದಲ್ಲಿ ಕಿಚ್ಚ ಸುದೀಪ್ ಅವರ ಕಡೆಯಿಂದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಿಕ್ಕಿಯಾಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹಾಗಂತ ಕೆರೆಬೇಟೆಗೆ ಕಿಚ್ಚನ ಸಾಥ್ ಇದ್ದೇ ಇದೆ. ಬಿಡುಗಡೆಗೂ ಮುನ್ನವೇ ಸುದೀಪ್ ಸಮ್ಮುಖದಲ್ಲಿ ಅರ್ಥಪೂರ್ಣವಾದೊಂದು ಈವೆಂಟು ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಇದೇ ಹೊತ್ತಿನಲ್ಲಿ ಟ್ರೈಲರ್ ಲಾಂಚ್ ಗೆ ಭಿನ್ನ ಹಾದಿಯಲ್ಲಿ ಹೆಜ್ಜೆಯೂರಿರುವ ಚಿತ್ರತಂಡ, ಒಟ್ಟಾರೆ ಸಿನಿಮಾದ ಆಂತರ್ಯಕ್ಕನುಗುಣವಾಗಿ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳಿ, ಎಣ್ಣೆ ಎರೆಸಿಕೊಂಡು ಆಶೀರ್ವಾದ ಪಡೆದು ನಂತರ ಪುಟ್ಟ ಮಗುವಿನ ಕೈಯಲ್ಲಿ ಟ್ರೈಲರ್ ಬಿಡುಗಡೆ ಮಾಡಿಸಲಾಗಿದೆ.

    ಅಂದಹಾಗೆ, ಈ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳೋ ಕ್ರಮಕ್ಕೆ ಮಲೆನಾಡು ಭಾಗದಲ್ಲಿ ಅಂಟಿಗೆಪಿಂಟಿಗೆ ಅನ್ನೋ ಹೆಸರಿದೆ. ಅದು ದೀಪಾವಳಿಯ ಸಂದರ್ಭದಲ್ಲಿ ಕಳೆಗಟ್ಟಿಕೊಳ್ಳುವ ಜನಪದೀಯ ಆಚರಣೆ. ಅದಕ್ಕೆ ಹೊಸೆದುಕೊಂಡಂಥಾ ಜನಪದ ಶೈಲಿಯ ಚೆಂದದ ಹಾಡುಗಳಿವೆ. ಮಲೆನಾಡಲ್ಲಿಯೇ ಮರೆಗೆ ಸರಿಯುತ್ತಿರುವ ಈ ಸಂಪ್ರದಾಯವನ್ನು ಬೆಂಗಳೂರಿಗೆ ಪರಿಚಯಿಸಿದ ಖುಷಿ ಚಿತ್ರತಂಡಕ್ಕಿದೆ. ಇಂಥಾ ಆಚರಣೆಯ ತರುವಾಯ, ನಾಯಕ ನಟ ಗೌರಿಶಂಕರ್ ಅವರ ಪುಟ್ಟ ಮಗಳು ಈಶ್ವರಿ ತನು ಮೂಲಕ ಕೆರೆಬೇಟೆ ಟ್ರೈಲರ್ ಅನಾವರಣಗೊಂಡಿದೆ.

    ಕೆರೆಬೇಟೆ ಎಂಬುದು ಮಲೆನಾಡು ಭಾಗದ ಒಂದು ಸಂಪ್ರದಾಯ. ಅದರ ಸುತ್ತ ಚಲಿಸುತ್ತಲೇ ಮಲೆನಾಡಿನ ಕಟ್ಟುಪಾಡುಗಳು, ಆಚರಣೆ, ರೀತಿ ರಿವಾಜುಗಳ ಸುತ್ತ ಪಕ್ಕಾ ರಗಡ್ ಶೈಲಿಯ ಕಥಾನಕವನ್ನೊಳಗೊಂಡಿರುವ ಚಿತ್ರ ಕೆರೆಬೇಟೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದಲ್ಲಿ ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಜೀಕಾಲಿ ಮತ್ತು ರಾಜಹಂಸ ಚಿತ್ರದಲ್ಲಿಯೂ ಇವರು ನಾಯಕನಾಗಿ ನಟಿಸಿದ್ದರು. ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

     

    ಈಗಾಗಲೇ ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿದ್ದ ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆ ಗೊಳ್ಳಲಿದೆ.

  • ‌’ಕೆರೆಬೇಟೆʼ ನಾಗನಾಗಿ ಅಬ್ಬರಿಸಿದ ಗೌರಿ ಶಂಕರ್- ಟೀಸರ್‌ಗೆ ಪ್ರೇಕ್ಷಕರ ಮೆಚ್ಚುಗೆ

    ‌’ಕೆರೆಬೇಟೆʼ ನಾಗನಾಗಿ ಅಬ್ಬರಿಸಿದ ಗೌರಿ ಶಂಕರ್- ಟೀಸರ್‌ಗೆ ಪ್ರೇಕ್ಷಕರ ಮೆಚ್ಚುಗೆ

    ಪ್ಪಟ ಕನ್ನಡ ಮಣ್ಣಿನ ಕಥೆಯನ್ನು ಹೊತ್ತು ತಂದಿದ್ದಾರೆ ‘ರಾಜಹಂಸ’ (Rajahamsa) ಹೀರೋ ಗೌರಿ ಶಂಕರ್. ‘ಕೆರೆಬೇಟೆ’ (Kerebete) ಚಿತ್ರದ ಮೂಲಕ ಮತ್ತೆ ಮಲೆನಾಡಿನ ಹುಡುಗ ಗೌರಿ ಶಂಕರ್ (Gowrishankar) ಸೌಂಡ್ ಮಾಡುತ್ತಿದ್ದಾರೆ. ರಿಲೀಸ್ ಆಗಿರೋ ‘ಕೆರೆಬೇಟೆ’ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದ ಟೀಸರ್ ಅನ್ನು ಡಾಲಿ, ದಿನಕರ್ ತೂಗುದೀಪ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

    ವಿಭಿನ್ನ ಕಥೆಯಾಗಿರೋ ‘ಕೆರೆಬೇಟೆ’ ಚಿತ್ರದಲ್ಲಿ ನಾಗನಾಗಿ ಒರಟನ ಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲಾ ರೀತಿಯ ಶೇಡ್‌ನಲ್ಲಿಯೂ ರಗಡ್ ಆಗಿ ನಟಿಸಿದ್ದಾರೆ. ಕೆರೆಬೇಟೆ ವಿಚಾರಕ್ಕೆ ಬಂದರೆ ನಾಗನ ಮುಂದೆ ಯಾರ ಆಟನೂ ಆಡಲ್ಲ ಎಂಬುದರ ಎಳೆ ಟೀಸರ್‌ನಲ್ಲಿ ತೋರಿಸಲಾಗಿದೆ. ಇದನ್ನೂ ಓದಿ: ಸಂಗೀತಾಗೆ ನಂಬಿಕೆ ದ್ರೋಹ- ಗುರೂಜಿ ಸ್ಫೋಟಕ ಭವಿಷ್ಯ

    ಟೀಸರ್‌ನಲ್ಲಿ ಭಯಂಕರವಾಗಿ ಕಾಣಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಈತನ ಅಟ್ಟಹಾಸ ಜಾಸ್ತಿಯೇ ಇದೆ. ಅಷ್ಟರ ಮಟ್ಟಿಗೆ ಗೌರಿ ಶಂಕರ್ ನಟನೆಯಲ್ಲಿ ಪರಕಾಯ ಪ್ರವೇಶ ಮಾಡಿರೋದು ಕಾಣುತ್ತಿದೆ. ಗೌರಿ ಶಂಕರ್‌ಗೆ ನಾಯಕಿಯಾಗಿ ಬಿಂದು ನಟಿಸಿದ್ದಾರೆ.

    ಚಿತ್ರಕಥೆ ಮತ್ತು ನಿರ್ಮಾಣದ ಹೊಣೆಯನ್ನು ಕೂಡ ಗೌರಿಶಂಕರ್ ಹೊತ್ತಿದ್ದಾರೆ. ಒಟ್ನಲ್ಲಿ ವಿಭಿನ್ನ ಕಥೆಗೆ ಕೆರೆಬೇಟೆ ಸಾಕ್ಷಿಯಾಗಿರೋದು ನಿಜ. ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

  • ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ

    ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ

    ತುಮಕೂರು: ಗ್ರಾಮಾಂತರ ಶಾಸಕರಿಗೆ ವಿದೇಶಿ ಪ್ರವಾಸ ಅಂದ್ರೆ ಬಹಳ ಪ್ರೀತಿ ಥೈಲ್ಯಾಂಡ್ (Thailand) ಅಂದರೆ ಬಲು ಪ್ರೀತಿ, ಗೋವಾ (Goa) ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಹಾಲಿ ಶಾಸಕ ಗೌರಿಶಂಕರ್ (Gowrishankar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರು (Tumakuru) ಗ್ರಾಮಾಂತರದ ಬೆಳಗುಂಬದಲ್ಲಿ ಸಿದ್ದರಾಮ ದೇವಸ್ಥಾನದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸುರೇಶ್ ಗೌಡ, ಶಾಸಕರಿಗೆ ಥೈಲ್ಯಾಂಡ್‌ಗೆ ಹೋಗೋದಕ್ಕೆ ಸಮಯ ಇರುತ್ತದೆ. ಶಾಸಕರಿಗೆ ಗೋವಾಗೆ ಹೋಗೋದಕ್ಕೆ ಸಮಯ ಇರುತ್ತದೆ. ಅಸೆಂಬ್ಲಿಗೆ ಹೋಗೋದಕ್ಕೆ ಸಮಯ ಇರಲ್ಲ. ಅಸೆಂಬ್ಲಿಗೆ ಹೋಗುವ ಸಮಯದಲ್ಲಿ ಗೋವಾದಲ್ಲಿ ಇರುತ್ತಾರೆ. ಇಲ್ಲದಿದ್ದರೆ ಥೈಲಾಂಡ್‍ನಲ್ಲಿ ಇರುತ್ತಾರೆ. ಶಾಸಕರಾಗಿ ನಾಲ್ಕು ವರ್ಷ ಆಗಿದೆ. ಶಾಸಕರ ಪಾಸ್‍ಪೋರ್ಟ್‌ ತೆಗೆದರೆ ಗೊತ್ತಾಗುತ್ತದೆ. ಶಾಸಕರು ಎಷ್ಟು ಸಾರಿ ದುಬೈಗೆ ಹಾರಿದ್ದಾರೆ, ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ ಎಂದು ಸ್ಪಷ್ಟವಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕೆಲ ಮುಸ್ಲಿಂ ನಾಯಕರಿಗೆ ದಿನನಿತ್ಯ ಊಟ ತಿಂಡಿ ತಿಂದಂತೆ ಬ್ಲಾಸ್ಟ್ ಮಾಡೋದು ರೂಢಿ: ಚಕ್ರವರ್ತಿ ಸೂಲಿಬೆಲೆ

    ನನ್ನ ಪಾಸ್‍ಪೋರ್ಟ್‌ ತೆಗೆದು ನೋಡಿ ಎಷ್ಟು ವಿದೇಶಿ ಪ್ರವಾಸ ಮಾಡ್ತೇನೆ ಅಂತ. ಶಾಸಕನಾಗಿದ್ದ 10 ವರ್ಷದಲ್ಲಿ ಮನೆ ದೇವರಲ್ಲಿಗೆ ಬಿಟ್ರೆ ಎಲ್ಲೂ ಹೋಗಿಲ್ಲ ನಾನು. ಎಂತೆಂತಹ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸೋಲಿಸಿರೋದನ್ನು ನೋಡಿದ್ದೇವೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು, ಯಡಿಯೂರಪ್ಪ, ಇಂದಿರಾಗಾಂಧಿ, ವಾಜಪೇಯಿ, ದೇವೇಗೌಡರು ಎಲ್ಲರನ್ನೂ ಸೋಲಿಸಿರೋದನ್ನು ಪ್ರಪಂಚದಲ್ಲಿ ನೋಡಿದ್ದೇವೆ ಎಂದು ಅಭಿಪ್ರಾಪಟ್ಟಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ- 15ರ ಬಾಲಕಿ ಸಾವು

    ಸೋತೆ ಅಂತಾ ಯಾರೂ ಸುಮ್ಮನೆ ಕೂರಲ್ಲ ರಾಜಕಾರಣಿಗಳು. ಸೋಲು ಅನಿರೀಕ್ಷಿತ. ನನ್ನನ್ನು ಕೆಲಸ ಮಾಡಿಲ್ಲ ಅಂತಾ ಸೋಲಿಸಲಿಲ್ಲ. ಕುತಂತ್ರದಿಂದ ನನ್ನನ್ನು ಸೋಲಿಸಿದ್ದು, ವಂಚನೆ, ಮೋಸ, ಕುತಂತ್ರ ಮಾಡಿ. ಈ ಶಾಸಕರು ನಕಲಿ ಬಾಂಡ್ ಹಂಚಿ ಗೆದ್ದಿದ್ದಾರೆ. ನ್ಯಾಯ ಅನ್ನೋದು ಇದ್ರೆ, ಸಿದ್ದರಾಮೇಶ್ವರನ ಮುಂದೆ ಹೇಳ್ತೇನೆ. ಸಿದ್ದರಾಮೇಶ್ವರ ನಿನ್ನನ್ನು ನಂಬಿದ್ದೇನೆ. ಇನ್ನೊಂದು ತಿಂಗಳಲ್ಲಿ ತೀರ್ಪು ಬರಬೇಕು. ಸಿದ್ದರಾಮೇಶ್ವರನಲ್ಲಿ ಪ್ರಾರ್ಥನೆ ಮಾಡ್ತೇನೆ. ಈ ಮಣ್ಣಲ್ಲಿ ನ್ಯಾಯ ಇದ್ರೆ ಮೋಸಕ್ಕೆ ಶಿಕ್ಷೆ ಆಗ್ಲಿ ಎಂದು ದೇವರ ಮೊರೆ ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

    ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

    – ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಗೌರಿಶಂಕರ್‌ಗೆ ಸಂಕಷ್ಟ
    – ಖುದ್ದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ಸಮನ್ಸ್‌

    ಬೆಂಗಳೂರು: ನಕಲಿ ವಿಮಾ ಬಾಂಡ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ಗೆ ಸಂಕಷ್ಟ ಎದುರಾಗಿದೆ.

    ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗೌರಿಶಂಕರ್‌ ಅವರಿಗೆ ಅಕ್ಟೋಬರ್ 22 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಈ ಮೂಲಕ ಶಾಸಕ ಗೌರಿ ಶಂಕರ್ ವಿರುದ್ಧದ ಹೋರಾಟ ತೀವ್ರ ಕುತೂಹಲ ಮೂಡಿಸಿದೆ.

    ಏನಿದು ಪ್ರಕರಣ?
    ಗೌರಿ ಶಂಕರ್‌ 2018ರ ವಿಧಾನ ಸಭಾ ಚುನಾವಣೆ ವೇಳೆ ಸರ್ಕಾರಿ ಶಾಲಾ ಮಕ್ಕಳ ಹೆಸರಲ್ಲಿ ವಿಮಾ ಬಾಂಡ್ ಹಂಚಿಕೆ ಮಾಡಿದ್ದರು. ಚುನಾವಣೆಯಲ್ಲಿ ಪೋಷಕರ ಮತಗಳನ್ನು ಪಡೆಯುವ ಉದ್ದೇಶದಿಂದ ಮಕ್ಕಳಿಗೆ ವಿಮಾ ಪಾಲಿಸಿಯ ನಕಲಿ ಬಾಂಡುಗಳನ್ನು ವಿತರಿಸಲಾಗಿದೆ ಎಂದು ರಮೇಶ್‌ ಬೆಟ್ಟಯ್ಯ ಆರೋಪಿಸಿದ್ದರು. ಅಲ್ಲದೆ, ಈ ಸಂಬಂಧ ತನಿಖೆ ನಡೆಸುವಂತೆ ಮುಖ್ಯ ಚುನಾವಣಾ ಅಧಿಕಾರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ರಮೇಶ್‌ ಅವರ ಆರೋಪದ ಅಡಿಯಲ್ಲಿ ತುಮಕೂರು ಗ್ರಾಮಾಂತರದ ಪೊಲೀಸ್‌ ಠಾಣೆಯಲ್ಲಿ ಐಆರ್‌ಡಿಎಐ ಕಾಯ್ದೆಯಡಿ ಶಾಸಕ ಡಿ.ಸಿ. ಗೌರಿಶಂಕರ್‌, ದಿ.ನ್ಯೂ ಇಂಡಿಯಾ ಇನ್ಸೂರೆನ್ಸ್‌ ಕಂಪನಿಯ ವ್ಯವಸ್ಥಾಪಕ ಮತ್ತು ಅಧಿಕಾರಿಗಳು ಸೇರಿದಂತೆ, ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಸಂಸ್ಥೆ ಮತ್ತು ಪದಾಧಿಕಾರಿಗಳು, ಒನ್‌ ರೂಪಿ ಚಾರಿಟೆಬಲ್‌ ಟ್ರಸ್ಟ್‌ನ ಪದಾಧಿಕಾರಿ ಹಾಗೂ ಅಸಿಸ್ಟೈನ್ಸ್‌ ಕಂಪನಿ ಅಧಿಕಾರಿಗಳ ಮೇಲೆ 2020ರ ಜುಲೈನಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಪ್ರಕರಣ ರದ್ದು ಮಾಡುವಂತೆ ಗೌರಿಶಂಕರ್‌ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಆದರೆ ಕೋರ್ಟ್‌ಗಳು ಪ್ರಕರಣದ ರದ್ದು ಮಾಡಲು ನಿರಾಕರಿಸಿದ್ದವು. ಪ್ರಕರಣದ ವಿಚಾರಣೆ ನಡೆಸಿದ ಸಿಐಡಿ ಗೌರಿಶಂಕರ್, ಕಿಶೋರ್ ವರದಾಚಾರ್, ಗೌರಮ್ಮ ಹಾಗೂ ಆನಂತು ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.

    16,386 ವಿದ್ಯಾರ್ಥಿಗಳಿಗೆ ನಕಲಿ ಆರೋಗ್ಯ ವಿಮೆಯ ಬಾಂಡ್ ಹಂಚಿಕೆ ಮಾಡಲಾಗಿದೆ. ಚೆನ್ನಿಗಪ್ಪ ಅಧ್ಯಕ್ಷರಾಗಿದ್ದ ಮಾರುತಿ ಸೇವಾ ಟ್ರಸ್ಟ್‌ನಿಂದ ನ್ಯೂ ಇಂಡಿಯ ಇನ್ಶುರೆನ್ಸ್‌ ಕಂಪನಿ ಮೂಲಕ ಮೆಡಿ ಅಸಿಸ್ಟ್ ಬಾಂಡ್ ಹಂಚಿಕೆ ಮಾಡಲಾಗಿದೆ. ವಿಮಾ ಕಾರ್ಡ್ ಜೊತೆಗೆ ಜೆಡಿಎಸ್ ನಾಯಕರ ಪೋಟೋ ಇರುವ ದಾಖಲೆಗಳ ಹಂಚಲಾಗಿದೆ. ತನಿಖೆಯ ವೇಳೆ ಅಕ್ರಮ ಎಸಗಿರುವುದು ಪತ್ತೆಯಾಗಿದೆ ಎಂದು ಸಿಐಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.

  • ನಿಖಿಲ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿ: ಶಾಸಕ ಗೌರಿಶಂಕರ್

    ನಿಖಿಲ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿ: ಶಾಸಕ ಗೌರಿಶಂಕರ್

    ತುಮಕೂರು: ಹೆಚ್ ಡಿ ಕುಮಾರಸ್ವಾಮಿ ಎವರ್ ಗ್ರೀನ್ ಮುಖ್ಯಮಂತ್ರಿ ಆದರೆ ನಿಖಿಲ್ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.

    ತುಮಕೂರು ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಕನ್ನಡ ಸಂಘಟನೆಯವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರಿಶಂಕರ್ ಈ ಹೇಳಿಕೆ ನೀಡಿದ್ದಾರೆ. ಇಂದಿನ ರಾಜಕೀಯ ಪರಿಸ್ಥಿತಿಗಳನ್ನು ಗಮನಿಸಿದಾಗ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನು ಓದಿ: ‘ಅಭಿಮನ್ಯು’ವಿಗೆ ಹಿಂದಿನಿಂದ ತಿವಿದರು – ಮಂಡ್ಯದಲ್ಲಿ ಸೋತ ಕಥೆಯನ್ನು ವಿವರಿಸಿದ ನಿಖಿಲ್

    ಕುಮಾರಸ್ವಾಮಿ ಯಾವತ್ತೂ ಮುಖ್ಯಮಂತ್ರಿ ಆಗಿರುತ್ತಾರೆ. ಆದರೆ ನಿಖಿಲ್ ಮುಂದಿನ ಮುಖ್ಯಮಂತ್ರಿ ಅಂದರು. ಟೀ ಮಾರಿದವರು ಈ ದೇಶದ ಪ್ರಧಾನಿಯಾಗಬೇಕಾದರೆ ಸಾವಿರಾರು ರೈತರ ಸಾಲ ಮನ್ನಾ ಮಾಡಿದ ಕುಮಾರಣ್ಣನ ಏಕಚಕ್ರಾಧಿಪತಿ ಮಾಡಲು ಸಾಧ್ಯ ಇಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ. ಕುಮಾರಣ್ಣನ ಒಳ್ಳೆತನ ಕರ್ನಾಟಕ ರಾಜ್ಯದಲ್ಲಿ ಒಂದು ದಿನ ಗೆದ್ದೆ ಗೆಲ್ಲುತ್ತದೆ ಎಂದು ಗೌರಿಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.