Tag: gowri naidu

  • ‘ಮನಸಾರೆ ನಿನ್ನ’ ಎನ್ನುತ್ತಾ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ ನಿವೇದಿತಾ ಗೌಡ

    ‘ಮನಸಾರೆ ನಿನ್ನ’ ಎನ್ನುತ್ತಾ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ ನಿವೇದಿತಾ ಗೌಡ

    ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರು ಚಂದನ್‌ ಶೆಟ್ಟಿ (Chandan Shetty) ಜೊತೆ ಡಿವೋರ್ಸ್‌ (Divorce) ಪಡೆದ್ಮೇಲೆ ಹೆಚ್ಚು ಆಕ್ಟೀವ್‌ ಆಗಿದ್ದಾರೆ. ಸಿನಿಮಾ ಕೆರಿಯರ್‌ನತ್ತ ಹೆಚ್ಚು ಗಮನ ವಹಿಸುತ್ತಿದ್ದಾರೆ. ಇದೀಗ ‘ಮನಸಾರೆ ನಿನ್ನ’ ಎನ್ನುತ್ತಾ ಮೈ ಚಳಿ ಬಿಟ್ಟು ಹೀರೋ ಗೌರಿ ನಾಯ್ಡು ಜೊತೆ ಹೆಜ್ಜೆ ಹಾಕಿದ್ದಾರೆ. ತೆಲುಗಿನಲ್ಲಿ ಮೊದಲ ಬಾರಿಗೆ ಆಲ್ಬಂ ಸಾಂಗ್‌ನಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದಾರೆ.

    ‘ಮನಸಾರೆ ನಿನ್ನ’ ಎಂಬ ಸಾಂಗ್ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬಂದಿದೆ. ಹೀರೋ ಜೊತೆ ಮಳೆಯಲಿ ಮೈ ಚಳಿ ಬಿಟ್ಟು ಸಖತ್ ನಿವೇದಿತಾ ಡ್ಯಾನ್ಸ್ ಮಾಡಿದ್ದಾರೆ. ರೊಮ್ಯಾಂಟಿಕ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಸಾಂಗ್ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿವೆ.

    ತೆಲುಗಿನಲ್ಲಿ ನಟ, ಬರಹಗಾರ, ಸಂಕಲನಕಾರ, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿರುವ ಗೌರಿ ನಾಯ್ಡು ಜೊತೆ ಹಾಡಿನಲ್ಲಿ ನಿವೇದಿತಾ ರೊಮ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಅಥಿಯಾ ಶೆಟ್ಟಿ, ಕೆ.ಎಲ್‌ ರಾಹುಲ್

    ಇನ್ನೂ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ‘ಮುದ್ದು ರಾಕ್ಷಸಿ’ ಸಿನಿಮಾದಲ್ಲಿ ನಿವೇದಿತಾ ನಾಯಕಿಯಾಗಿ ನಟಿಸಿದ್ದಾರೆ. ಸೃಜನ್ ಲೋಕೇಶ್ ನಟನೆಯ ‘ಜಿಎಸ್‌ಟಿ’ ಸಿನಿಮಾದಲ್ಲಿ ನಿವೇದಿತಾ ನಟಿಸಿದ್ದಾರೆ.

  • ‘ಮನಸಾರೆ ನಿನ್ನ’ ಎನ್ನುತ್ತಾ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ನಿವೇದಿತಾ ಗೌಡ

    ‘ಮನಸಾರೆ ನಿನ್ನ’ ಎನ್ನುತ್ತಾ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ನಿವೇದಿತಾ ಗೌಡ

    ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರು ಚಂದನ್ ಶೆಟ್ಟಿ (Chandan Shetty) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗಿನತ್ತ ಮುಖ ಮಾಡಿರುವ ನಿವೇದಿತಾ ಸಿನಿಮಾ ಬದಲು ಆಲ್ಬಂ ಸಾಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ.

    ತೆಲುಗಿನ ‘ವಾಲು ಕಳ್ಳತಾ’ ಎಂಬ ಆಲ್ಬಂ ಸಾಂಗ್‌ನಲ್ಲಿ ಗೌರಿ ನಾಯ್ಡು ಜೊತೆ ನಿವೇದಿತಾ ನಟಿಸಿದ್ದು, ಇದು ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ‘ಮನಸಾರೆ ನಿನ್ನ’ ಎಂದು ಕನ್ನಡದಲ್ಲೂ ಸಾಂಗ್ ಮಾಡಲಾಗಿದೆ. ಆದರೆ ಸಾಂಗ್ ರಿಲೀಸ್ ಆಗೋದು ಯಾವಾಗ? ಎಂದು ಕಾದುನೋಡಬೇಕಿದೆ. ಇದನ್ನೂ ಓದಿ:ಕಿಶನ್ ಜೊತೆ ಹಸೆಮಣೆ ಮೇಲೆ ಕುಳಿತ ದಿವ್ಯಾ ಉರುಡುಗ

    ತೆಲುಗಿನಲ್ಲಿ ನಟ, ಬರಹಗಾರ, ಸಂಕಲನಕಾರ, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿರುವ ಗೌರಿ ನಾಯ್ಡು ಜೊತೆ ಹಾಡಿನಲ್ಲಿ ನಿವೇದಿತಾ ರೊಮ್ಯಾನ್ಸ್ ಮಾಡಿದ್ದಾರೆ. ಸದ್ಯ ರಿಲೀಸ್ ಮಾಡಿರುವ ಪೋಸ್ಟರ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಬರುತ್ತಿವೆ.

    ಇನ್ನೂ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾದಲ್ಲಿ ನಿವೇದಿತಾ ನಾಯಕಿಯಾಗಿ ನಟಿಸಿದ್ದಾರೆ. ಸೃಜನ್ ಲೋಕೇಶ್ ನಟನೆಯ ‘ಜಿಎಸ್‌ಟಿ’ ಸಿನಿಮಾದಲ್ಲಿ ನಿವೇದಿತಾ ನಟಿಸಿದ್ದಾರೆ.