Tag: gowri khan

  • ನಿರ್ದೇಶನದತ್ತ ಶಾರುಖ್ ಪುತ್ರ ಆರ್ಯನ್ ಖಾನ್

    ನಿರ್ದೇಶನದತ್ತ ಶಾರುಖ್ ಪುತ್ರ ಆರ್ಯನ್ ಖಾನ್

    ಬಾಲಿವುಡ್ ಬಾದಷಾ ಶಾರುಖ್ ಖಾನ್ ಪುತ್ರ ಚಿತ್ರರಂಗಕ್ಕೆ ಲಗ್ಗೆ ಇಡಲು ರೆಡಿಯಾಗಿದ್ದಾರೆ. ಆದರೆ ನಟನಾಗಿ ಅಲ್ಲ, ನಿರ್ದೇಶಕನಾಗಿ ಎಂಬುದು ವಿಶೇಷ. ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿರುವ ಆರ್ಯನ್ , ತಮ್ಮ ಸಿನಿಮಾ ಕುರಿತ ಅಪ್‌ಡೇಟ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ಶಾರುಖ್ ಖಾನ್ ಸಾಧನೆ ಅಪಾರ. ಸಾಕಷ್ಟು ಸಿನಿಮಾಗಳ ಮೂಲಕ ನಟ ಶಾರುಖ್ ಖಾನ್ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗೆ ಶಾರುಖ್ ಪುತ್ರಿ ಸುಹಾನಾ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮಗ ಆರ್ಯನ್ ಕೂಡ ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳಲು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ನಿರ್ದೇಶಕನಾಗಿ ಆರ್ಯನ್ ಖಾನ್ ಬರುತ್ತಿದ್ದಾರೆ. ಇದನ್ನೂ ಓದಿ: ಬೆಚ್ಚಿ ಬೀಳುವಂತಿದೆ ನಟ ಪ್ರೇಮ್‌ ಪುತ್ರಿಯ ಮೊದಲ ಚಿತ್ರದ ಸಂಭಾವನೆ

    ರೆಡ್ ಚಿಲ್ಲರ್ಸ್‌ ಎಂಟರ್‌ರ್ಟೈನ್‌ಮೆಂಟ್ ಸಂಸ್ಥೆಯ ನಿರ್ಮಾಣದ ಹೊಸ ಚಿತ್ರಕ್ಕೆ ಆರ್ಯನ್ ಖಾನ್ ಡೈರೆಕ್ಷನ್ ಮಾಡ್ತಿದ್ದಾರೆ. ಮಗನ ಮೊದಲ ಹೆಜ್ಜೆಗೆ ಶಾರುಖ್ ದಂಪತಿ ಕೂಡ ಶುಭ ಹಾರೈಸಿದ್ದಾರೆ. ಆ್ಯಕ್ಷನ್ ಕಟ್ ಹೇಳಲು ಕಾಯ್ತಿದ್ದೇನೆ ಎಂದು ಆರ್ಯನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ಯನ್ ಚೊಚ್ಚಲ ಸಿನಿಮಾ, ಯಾವ ನಟನಿಗೆ ನಿರ್ದೇಶನ ಮಾಡ್ತಿದ್ದಾರೆ ಎಂಬುದು ಅಧಿಕೃತವಾಗಿ ಹೊರಬಿದ್ದಿಲ್ಲ.

     

    View this post on Instagram

     

    A post shared by Aryan Khan (@___aryan___)

    ನಿರ್ದೇಶಕನಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿರುವ ಶಾರುಖ್ ಪುತ್ರನಿಗೆ ಫ್ಯಾನ್ಸ್, ಚಿತ್ರರಂಗದ ಸ್ನೇಹಿತರು ಶುಭಹಾರೈಸಿದ್ದಾರೆ. ನಿರ್ದೇಶಕನಾಗಿ ಅದೆಷ್ಟರ ಮಟ್ಟಿಗೆ ಆರ್ಯನ್ ಕಮಾಲ್‌ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 7(Coffe With Karan) ಶೋ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ತಾರೆಯರ ಬ್ರೇಕಪ್, ಗಾಸಿಪ್, ಸೆಕ್ಸ್, ಡೇಟಿಂಗ್, ವಿಚಾರ ಕೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಈ ಶೋನಲ್ಲಿ ಶಾರುಖ್ ಪತ್ನಿ ಗೌರಿ ಖಾನ್(Gowri Khan) ಕೂಡ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಮಗ ಆರ್ಯನ್ ಖಾನ್ (Aryan Khan) ಬಗ್ಗೆ ಮೌನ ಮುರಿದಿದ್ದಾರೆ.

    ಈಗಾಗಲೇ ಕಾಫಿ ವಿ ಕರಣ್ ಸೀಸನ್ 7ರಲ್ಲಿ ಸಾಕಷ್ಟು ಸಿನಿತಾರೆಯರು ಭಾಗವಹಿಸಿದ್ದಾರೆ.  ಕರಣ್ ನಿರೂಪಣೆಯ ಶೋ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇದೀಗ ಕಾರ್ಯಕ್ರಮದಲ್ಲಿ ಶಾರುಖ್ ಪತ್ನಿ ಗೌರಿ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್, ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ ಭಾಗವಹಿಸಿದ್ದಾರೆ. ಈ ಮೂವರು ತಮ್ಮ ಕುಟುಂಬ ಬಗ್ಗೆ ಸಾಕಷ್ಟು ವಿಚಾರವನ್ನ ರಿವೀಲ್ ಮಾಡಿದ್ದಾರೆ. ಜೊತೆಗೆ ಶಾರುಖ್ ಪತ್ನಿ ಗೌರಿ ಕೂಡ ಮೊದಲ ಬಾರಿಗೆ ಮಗನ ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

    ವೃತ್ತಿಪರವಾಗಿ ಮಾತ್ರವಲ್ಲದೇ ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ತುಂಬಾ ಕಠಿಣ ಸಮಯವನ್ನ ಎದುರಿಸಿದ್ದೀರಿ ಈ ಬಗ್ಗೆ ಹೇಳಿ ಎಂದು ಕರಣ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗೌರಿ ಖಾನ್ ತಾಯಿಯಾಗಿ, ಪೋಷಕರಾಗಿ ನಾವು ಆಗ ಅನುಭವಿಸಿದ್ದಕ್ಕಿಂತ ಮತ್ತೊಂದಿಲ್ಲ. ಕುಟುಂಬವಾಗಿ ನಿಂತಾಗ ಇಂದು ನಾವು ದೊಡ್ಡ ಜಾಗದಲ್ಲಿದ್ದೇವೆ. ನಮ್ಮ ಎಲ್ಲಾ ಸ್ನೇಹಿತರು, ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದವನ್ನ ತಿಳಿಸುತ್ತೇನೆ ಎಂದು ಗೌರಿ ಖಾನ್ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಈ ವೇಳೆ ಸುಹಾನ್ ಖಾನ್‌ಗೆ ಡೇಟಿಂಗ್ ಬಗ್ಗೆ ಎನು ಸಲಹೆ ಕೊಡುತ್ತೀರಾ ಎಂದು ಕರಣ್ ಗೌರಿ ಖಾನ್‌ಗೆ ಕೇಳಿದ್ದಾರೆ. ಒಟ್ಟಿಗೆ ಇಬ್ಬರು ಹುಡುಗರ ಜತೆ ಡೇಟ್ ಮಾಡಬೇಡ ಎಂದು ಹೇಳಿದ್ದಾರೆ. ಗೌರಿ ಖಾನ್ ಬೋಲ್ಡ್ ಮಾತು ನೋಡುಗರಿಗೆ ಅಚ್ಚರಿ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಶಾರುಖ್ ಖಾನ್ `ಜೀರೋ’ ಚಿತ್ರದ ಸೋಲಿನ ನಂತರ ಜವಾನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಜವಾನ್ ಆರ್ಭಟಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಶಾರುಖ್ ಎಂಟ್ರಿ ಕೊಡ್ತಿದ್ದಾರೆ.

    2018ರ `ಜೀರೋ’ ಸಿನಿಮಾ ನೆಲಕಚ್ಚಿದ ಮೇಲೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ ಶಾರುಖ್ ನಟನೆಯ ಚಿತ್ರಗಳು ರಿಲೀಸ್ ಆಗಿಲ್ಲ. ಈಗ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡಿಕೊಂಡು, ಬಾಲಿವುಡ್ ಬಾದಷಾ ಶಾರುಖ್ ಖಾನ್ ಜವಾನ್ ಆಗಿ ಅವತಾರವೆತ್ತಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರಕ್ಕೆ ಶಾರುಖ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ

    ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಶಾರುಖ್‌ಗೆ ನಯನತಾರಾ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ. ಟೀಸರ್ ಮೂಲಕಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಿದ್ದು, 2023ಕ್ಕೆ ಬೆಳ್ಳಿಪರದೆಯಲ್ಲಿ ರಾರಾಜಿಸೋದು ಗ್ಯಾರೆಂಟಿ.

    ಇದೊಂದು ಪಕ್ಕಾ ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಶಾರುಖ್ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗೆಲುವಿಗಾಗಿ ಕಾಯ್ತಿರೋ ಬಾದಷಾ ಶಾರುಖ್‌ಗೆ ಜವಾನ್ ಸಿನಿಮಾ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.