Tag: gowri ganesha festival

  • ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ಯಾವುದೇ ಶುಭ ಕಾರ್ಯಗಳು ನಿರ್ವಿಘ್ನವಾಗಿ ಆಚರಣೆ ಮಾಡುವುದಕ್ಕಾಗಿಯೇ ಮೊದಲು ವಿಘ್ನೇಶ್ವರನ್ನು (Ganesha) ಪೂಜಿಸುತ್ತಾರೆ. ಆದ್ರೆ ಪೂಜಾ ಸಂದರ್ಭದಲ್ಲಿ ಗೋವಿನ ಸಗಣಿಯೊಂದಿಗೆ ಒಂದೆರಡು ಗರಿಕೆಗಳನ್ನೂ ಇಡುತ್ತಾರೆ. ಈ ಗರಿಕೆಯನ್ನು ಪೂಜಾ  ಕೈಂಕರ್ಯಕ್ಕೆ (Pooja Perfam) ಬಳಸುವುದಕ್ಕೂ ಒಂದು ಕಾರಣವಿದೆ. ಅದೇನು ಎಂದು ತಿಳಿಯಬೇಕೇ ಹಾಗಿದ್ದರೆ ಮುಂದೆ ಓದಿ…

    ಒಂದು ಸಾರಿ ಯಮಲೋಕದಲ್ಲಿ ಉತ್ಸವ ನಡೆದಿತ್ತು. ಉತ್ಸವದಲ್ಲಿ ಅಪ್ಸರೆಯರು ಮತ್ತು ನರ್ತಕಿಯರು ನೃತ್ಯ ಮಾಡುತ್ತಿದ್ದರು. ತಿಲೋತ್ತೆಮೆ ನೃತ್ಯ ಕಂಡ ಯಮ ಮೋಹಿತನಾದನು. ಯಮ ಅನುರಕ್ತನಾದ ಪರಿಣಾಮ ತಿಲೋತ್ತಮೆಯ ಗರ್ಭದಲ್ಲಿ ಭಯಂಕರ, ಕ್ರೂರ ಮತ್ತು ವಿಕಾರವಾದ ಅನಲಾಸುರ ಎಂಬ ರಾಕ್ಷಸ ಹುಟ್ಟಿಕೊಂಡನು. ಅನಲಾಸುರ ಹೋದ ಸ್ಥಳದಲ್ಲಿ ಅಗ್ನಿ ನಿರ್ಮಾಣವಾಗಿ ಎಲ್ಲವೂ ಭಸ್ಮವಾಗುತಿತ್ತು. ಇಂತಹ ಭಯಂಕರ ರಾಕ್ಷಸ ದೇವತೆಗಳನ್ನು ಬೆನ್ನಟ್ಟಲು ಆರಂಭಿಸಿದನು.

    ಅನಲಾಸುರನಿಂದ ಭಯಭೀತರಾದ ದೇವತೆಗಳು ಗಜಾನನ್ನು ಪ್ರಾರ್ಥಿಸಲು ಆರಂಭಿಸಿದರು. ಆಗ ಗಜಾನನ ಬಾಲ ರೂಪದಲ್ಲಿ ದೇವತೆಗಳ ಮುಂದೆ ಪ್ರತ್ಯಕ್ಷನಾಗಿ ಅನಲಾಸುರನನ್ನು ವಧೆ ಮಾಡಲಾಗುವುದು ಎಂದು ಭರವಸೆ ನೀಡಿದನು. ಅಷ್ಟರಲ್ಲಿ ದಶ ದಿಕ್ಕುಗಳನ್ನು ಭಸ್ಮ ಮಾಡುತ್ತ ಅನಲಾಸುರ ದೇವತೆಗಳ ಬಳಿ ಬಂದನು. ಎಲ್ಲ ದೇವತೆಗಳು ಭಯಗೊಂಡು ಅತ್ತಿತ್ತ ಓಡಾಡ ತೊಡಗಿದರು.

    ಬಾಲಗಣೇಶ ಮಾತ್ರ ನಿಂತಲ್ಲಿಯೇ ನಿಂತಿದ್ದನು. ಗಜಾನನ ಬಳಿ ಬಂದ ಅನಲಾಸುರ ಬಾಲಗಣೇಶನನ್ನು ನುಂಗಲು ಮುಂದೆ ಬಂದನು. ಅಷ್ಟರಲ್ಲಿಯೇ ಬಾಲ ಗಣೇಶ ದೈತ್ಯ ರೂಪ ತಾಳಿ ಅನಲಾಸುರನ್ನು ನುಂಗಿ ಬಿಟ್ಟನು. ಸಾಕ್ಷಾತ್ ಅಗ್ನಿ ಸ್ವರೂಪನಾದ ಅನಲಾಸುರನನ್ನು ನುಂಗಿದ್ದರಿಂದ ಗಜಾನನ ಶರೀರದಲ್ಲಿ ದಾಹ ಉದ್ಭವಿಸಿತು.

    ಗಣೇಶನ ಬಳಿ ಬಂದ ಸರ್ವ ದೇವತೆಗಳು ಆತನ ದಾಹವನ್ನು ಉಪಶಮನಿಸಲು ವಿವಿಧ ಉಪಾಯಗಳನ್ನು ಮಾಡಿದರು. ಇಂದ್ರದೇವ ಶೀತಲ ಚಂದ್ರ ಮತ್ತು ಅಮೃತವನ್ನು ಗಜಾನನ ತಲೆಯ ಮೇಲಿಟ್ಟರೂ ದಾಹ ಕಡಿಮೆಯಾಗಲಿಲ್ಲ. ಬ್ರಹ್ಮ ಸಿದ್ಧಿ ಮತ್ತು ಬುದ್ಧಿ ಎಂಬ ಮಾನಸ ಕನ್ಯೆಗಳನ್ನು ನೀಡಿದರೆ, ವಿಷ್ಣು ತನ್ನ ಕೈಯಲ್ಲಿದ್ದ ತಂಪಾದ ಕಮಲ ನೀಡಿದ. ವರುಣ ದೇವ ತಂಪಾದ ಜಲಾಭಿಷೇಕ ಮಾಡಿದ. ಪರಮೇಶ್ವರ ತನ್ನ ಶೇಷನಾಗನನ್ನು ಗಣೇಶನ ಹೊಟ್ಟೆಯ ಮೇಲೆ ಸುತ್ತಿದ. ದೇವತೆಗಳು ಎಲ್ಲಾ ರೀತಿಯಿಂದಲೂ ಉಪಾಯ ಮಾಡಿದರೂ ಗಜಾನನ ದಾಹ ಮಾತ್ರ ಕಡಿಮೆಯಾಗಲಿಲ್ಲ.

    ಕೊನೆಗೆ 88 ಸಹಸ್ರ ಮುನಿಗಳು 21 ಹಚ್ಚ ಹಸಿರಾದ ದ್ರುವ (ಗರಿಕೆ) ಗಣೇಶನ ಮಸ್ತಕದ ಮೇಲೆ ಸುರಿದರು. ಆಗ ಗಜಾನನ ದಾಹ ಕಡಿಮೆ ಆಯ್ತು. ಇದರಿಂದ ಗಣೇಶ ಪ್ರಸನ್ನಗೊಂಡು, ಅನೇಕ ಉಪಾಯದಿಂದ ನನ್ನ ಅಂಗದ ದಾಹ ಕಡಿಮೆ ಆಗಲಿಲ್ಲ. ದ್ರುವದಿಂದ ಮಾತ್ರ ನನ್ನ ಅಂಗದ ದಾಹ ಕಡಿಮೆ ಆಯ್ತು. ಇನ್ನ್ಮುಂದೆ ನನಗೆ ದ್ರುವ ಅರ್ಪಣೆ ಮಾಡುವವರಿಗೆ ಸಾವಿರಾರು ಯಜ್ಞ, ವ್ರತ, ತೀರ್ಥಯಾತ್ರೆ ಮತ್ತು ದಾನ ಮಾಡಿದ ಪುಣ್ಯ ಲಭಿಸಲಿದೆ ಎಂದು ಹೇಳಿದ. ಹೀಗಾಗಿ ಈಗಲೂ ಗಣಪತಿಗೆ ಗರಿಕೆಯನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದ್ರೆ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.

  • ಗೌರಿಹಬ್ಬದಂದು ಸಂಪ್ರದಾಯಿಕ ಉಡುಗೆಯಲ್ಲಿ ಮಿರ, ಮಿರ ಮಿಂಚಿದ ಸ್ಯಾಂಡಲ್‍ವುಡ್ ನಟಿಯರು

    ಗೌರಿಹಬ್ಬದಂದು ಸಂಪ್ರದಾಯಿಕ ಉಡುಗೆಯಲ್ಲಿ ಮಿರ, ಮಿರ ಮಿಂಚಿದ ಸ್ಯಾಂಡಲ್‍ವುಡ್ ನಟಿಯರು

    ಬೆಂಗಳೂರು: ಇಂದು ರಾಜ್ಯಾದ್ಯಂತ ಗೌರಿ ಹಾಗೂ ಗಣೇಶ ಹಬ್ಬವನ್ನು ಅದ್ದುರಿಯಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಸ್ಯಾಂಡಲ್‍ವುಡ್ ನಟಿಯರು ಸೀರೆ ಹಾಗೂ ಸಂಪ್ರದಾಯಿಕ ಉಡುಗೆಯಲ್ಲಿ ಮಿರಮಿರ ಮಿಂಚಿದ್ದಾರೆ.

    ಇತ್ತೀಚೆಗಷ್ಟೇ ಕಡಲ ತೀರದಲ್ಲಿ ತುಂಡು ಉಡುಗೆ ತೊಟ್ಟ ಫೋಟೋಗೆ ಪೋಸ್ ನೀಡಿದ್ದ ನಟಿ ಶ್ವೇತಾ ಶ್ರಿವತ್ಸವ್ ಮಗಳೊಂದಿಗಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಅಮ್ಮ ಸೀರೆಯುಟ್ಟಿದ್ದರೆ, ಮಗಳು ಶ್ಮಿತಾ ಶ್ರೀವಾತ್ಸವ್ ಲಂಗ ದವಣಿ ತೊಟ್ಟು ಕರುವಿಗೆ ಸಿಹಿತಿಂಡಿಯನ್ನು ತಿನ್ನಿಸಿದ್ದಾಳೆ. ಈ ವೀಡಿಯೋ ನೋಡಲು ಸಖತ್ ಕ್ಯೂಟ್ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಮೊದಲು ಕಾಂಗ್ರೆಸ್ಸನ್ನು ತೊಡೆದು ಹಾಕಿ ಬಿಜೆಪಿಯನ್ನು ಧ್ವಂಸ ಮಾಡಬೇಕು: ಚೇತನ್

     

    View this post on Instagram

     

    A post shared by Shwetha Srivatsav (@shwethasrivatsav)

    ಇದಲ್ಲದೇ ಬಿಗ್‍ಬಾಸ್ ಸೀಸನ್-8ರ ಕಾರ್ಯಕ್ರಮದ ಬಳಿಕ ಚಿನ್ನಿಬಾಂಬ್ ಜೊತೆ ಟ್ರಿಪ್ ಹೊಡೆಯುತ್ತಾ ಎಂಜಾಯ್ ಮಾಡುತ್ತಿರುವ ಶುಭಾ ಪೂಂಜಾ, ವೀಡಿಯೋವೊಂದನ್ನು ಮಾಡುವ ಮೂಲಕ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ. ನಿಮ್ಮೆಲ್ಲರ ಜೀವನದಲ್ಲಿ ಸದಾ ಖುಷಿ ಹಾಗೂ ನಗು ಇರಲಿ. ನಾವು ಇಂದು ಗಣೇಶನ ಬಳಿ ಬೇಡಿಕೊಳ್ಳೋಣ. ಎಲ್ಲರ ಜೀವನದಲ್ಲಿ ಸದಾ ಸಂತೋಷ ಇರಲಿ. ಚೆನ್ನಾಗಿ ತಿನ್ನಿ, ಮಜಾ ಮಾಡಿ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಚಂದನವನದ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

     

    View this post on Instagram

     

    A post shared by shubha Poonja . (@shubhapoonja)

    ಬಿಗ್‍ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕೂಡ ಪಿಂಕ್ ಹಾಗೂ ಹಸಿರು ಬಣ್ಣದ ಲೆಹೆಂಗಾ ತೊಟ್ಟಿರುವ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

     

  • ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಮಂಡ್ಯ: ಜಿಲ್ಲೆಯಲ್ಲಿ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರವರ ಪತ್ನಿ ಹಾಗೂ ಪುತ್ರಿ ಕಣ್ಣೀರು ಹಾಕಿದ್ದಾರೆ.

    Narayana Gowda

    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ನನ್ನ ಸಾಧನೆಗೆ ಪತ್ನಿ, ಪುತ್ರಿಯರ ಶಕ್ತಿಯೇ ಕಾರಣ. ಅವರ ಆಸೆಯಂತೆ ಇಂದು ಸಹೋದರಿಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿದ್ದೇನೆ. ಪತ್ನಿ, ಪುತ್ರಿಯರ ತ್ಯಾಗ, ಶಕ್ತಿಯೇ ನನ್ನ ಈ ಸಾಧನೆಗೆ ಕಾರಣವಾಗಿದೆ. ನನ್ನ ಅಮ್ಮನ ಬಳಿಕ ಪತ್ನಿ, ಪುತ್ರಿಯರ ಕಾಳಜಿಯನ್ನು ನಾನು ಯಾವತ್ತು ಮರೆಯುವುದಿಲ್ಲ ಎಂದು ಭಾವುಕರಾಗಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿದ್ದ ನಾರಾಯಣಗೌಡ ಅವರ ಪತ್ನಿ ದೇವಕಿ, ಪುತ್ರಿ ಲೀನಾ ನಾರಾಯಣಗೌಡ ಅವರ ಮಾತುಗಳನ್ನು ಕೇಳಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:  ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

    Narayana Gowda

    ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ನೆಲೆಯೂರುವ ಸಲುವಾಗಿ ನಾರಾಯಣಗೌಡ ಪ್ರತಿ ಬಾರಿಯೂ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಜೊತೆಗೆ ಸಂಪ್ರದಾಯ ಪಾಲನೆಗಾಗಿ, ಇಂದು 500ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಿದ್ದಾರೆ. ಸೀರೆ ಜೊತೆಗೆ ಅರಿಶಿನ ಕುಂಕುಮ, ಹೂ ಮತ್ತು ಬಾಗಿನ ನೀಡಿ ಮಹಿಳೆಯರಿಗೆ ಗೌರಿ-ಗಣೇಶ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

  • ಮಹಾಮಳೆಗೆ ಮತ್ತೆ ತತ್ತರಿಸಿದ ಬೆಂಗಳೂರು

    ಮಹಾಮಳೆಗೆ ಮತ್ತೆ ತತ್ತರಿಸಿದ ಬೆಂಗಳೂರು

    ಬೆಂಗಳೂರು: ಗೌರಿ ಗಣೇಶ ಹಬ್ಬದ ಹೊತ್ತಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿ ಮತ್ತೆ ವರುಣ ಆರ್ಭಟಿಸಿದ್ದಾನೆ.

    ರಾತ್ರಿಯಿಡಿ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದೆ. ಕೆ.ಆರ್.ಪುರಂ, ಮಾರತ್ ಹಳ್ಳಿ, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಚಂದ್ರಾಲೇಔಟ್, ಶಾಂತಿ ನಗರ, ಯಶವಂತಪುರ, ಜಾಲಹಳ್ಳಿ, ವಿಜಯನಗರ, ಕಾರ್ಪೊರೇಷನ್, ಯಲಹಂಕ, ಹೆಬ್ಬಾಳ ಸೇರಿದಂತೆ ನಗರದ ಬಹುತೇಕ ಕಡೆ ಜೋರು ಮಳೆಯಾಗಿದೆ.

    ಬುಧವಾರ ರಾತ್ರಿ ಒಟ್ಟು 82 ಮಿ.ಮೀ ನಷ್ಟು ಮಳೆ ನಗರದಲ್ಲಿ ದಾಖಲಾಗಿದೆ. ಇದ್ರಿಂದಾಗಿ ನಗರದ ಬಹುತೇಕ ಕಡೆ ಟ್ರಾಫಿಕ್ ಸಮಸ್ಯೆ ಸಹ ಉಂಟಾಗಿತ್ತು. ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿ ಸ್ಥಳೀಯರು ನಾನಾ ಅವಸ್ಥೆ ಪಡಬೇಕಾಯ್ತು. ಚಂದ್ರಲೇಔಟ್ ರಾಜಾಕಾಲುವೆ ಪಕ್ಕದ ಹತ್ತಾರು ಮನೆಗಳಿಗೆ ಮಳೆ ನೀರು ನಿಗ್ಗಿದ್ರಿಂದ ಜನ ನೀರನ್ನ ಹೊರಗೆ ಹಾಕೋದ್ರಲ್ಲೇ ರಾತ್ರಿ ಕಳೆದ್ರು.

    ಎಚ್‍ಎಸ್‍ಆರ್ ಲೇಔಟ್ ಹಾಗೂ ಶಾಂತಿ ನಗರದಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿತ್ತು. ಮಾರತ್ ಹಳ್ಳಿ ಸುತ್ತಮುತ್ತ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೆ ಫಜೀತಿ, ಯಾವ ಜನಪ್ರತಿನಿಧಿಯಾಗ್ಲೀ, ಅಧಿಕಾರಿಗಳಾಗಲೀ ನಮ್ಮ ಕಷ್ಟ ಕೇಳೋಕೆ ಬರಲ್ಲ. ಮಕ್ಕಳ ಜೊತೆ ಈ ಕೊಳಚೆ ನೀರಿನಲ್ಲೇ ಬದುಕುವಂತಾಗಿದೆ ಎಂದು ಇಲ್ಲಿನ ಜನ ಅಳಲು ತೋಡಿಕೊಂಡ್ರು.

    ಇನ್ನೊಂದೆಡೆ ಕೆಆರ್ ಮಾರ್ಕೆಟ್‍ ನಲ್ಲಿ ಹಬ್ಬದ ವ್ಯಾಪಾರ ಜೋರಾಗಿದೆ. ಬೆಳ್ಳಂಬೆಳಗ್ಗೆ ಹೂವು ಹಣ್ಣು ಖರೀದಿಸಲು ಸಾವಿರು ಜನ ಕೆಆರ್ ಮಾರ್ಕೆಟ್‍ಗೆ ಲಗ್ಗೆ ಇಟ್ಟಿದ್ದಾರೆ. ಕೆಸರಿನಲ್ಲೇ ವ್ಯಾಪಾರ ನಡೀತಿದೆ. ಹೂ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಆದ್ರೆ ಮಳೆ ಕಾರಣ ವ್ಯಾಪಾರ ಡಲ್ ಅಂತಿದ್ದಾರೆ ವ್ಯಾಪಾರಿಗಳು.

    https://twitter.com/krpuramtraffic1/status/900434970421862400