Tag: Gowri Ganesh Festival

  • 2 ಸಾವಿರ ಮಕ್ಕಳಿಂದ ಗಣೇಶನ ಆಕೃತಿ – ಐನೂರು ಅಡಿ ಎತ್ತರದಿಂದ ಚಿತ್ರೀಕರಣ

    2 ಸಾವಿರ ಮಕ್ಕಳಿಂದ ಗಣೇಶನ ಆಕೃತಿ – ಐನೂರು ಅಡಿ ಎತ್ತರದಿಂದ ಚಿತ್ರೀಕರಣ

    ಕೊಪ್ಪಳ: ಗೌರಿ-ಗಣೇಶ ಹಬ್ಬದ (Gowri Ganesh Festival) ಪ್ರಯುಕ್ತ ಸುಮಾರು ಎರಡು ಸಾವಿರ ಮಕ್ಕಳು ಸಾಮೂಹಿಕವಾಗಿ ಸೇರಿ ಬೃಹತ್ ವಿನಾಯಕನ ಆಕೃತಿ ರಚನೆಯಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ (Vidyaniketan Public School) ಗಣೇಶ ಹಬ್ಬದ ಪ್ರಯುಕ್ತ ಎರಡು ಸಾವಿರ ವಿದ್ಯಾರ್ಥಿಗಳಿಂದ ಬೃಹತ್ ವಿನಾಯಕನ ಆಕೃತಿ ರಚಿಸಲಾಯಿತು.ಇದನ್ನೂ ಓದಿ: ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಅಂತ ಗಂಡ ಟಾರ್ಚರ್ – ಪೆಟ್ರೋಲ್ ಸುರಿದುಕೊಂಡು ಮಹಿಳೆ ಆತ್ಮಹತ್ಯೆ

    ಮೂರು ಎಕರೆಯಷ್ಟಿರುವ ಶಾಲಾ ಮೈದಾನದಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಶಾಲೆಯ ಕಲಾ ಶಿಕ್ಷಕ ವಿನೋದ್, ಗಣೇಶ ಆಕೃತಿಯ ಸ್ಕೆಚ್ ರಚಿಸಿದ್ದರು. ಅವರು ರಚಿಸಿದ ಸ್ಕೆಚ್‌ನಲ್ಲಿ ಮಕ್ಕಳು ಸಾಮೂಹಿಕವಾಗಿ ನಿಂತು ವಿನಾಯಕನ ಆಕೃತಿ ರಚನೆಯಲ್ಲಿ ಭಾಗಿಯಾಗಿದ್ದರು. ಈ ದೃಶ್ಯವನ್ನು ಸುಮಾರು ಐನೂರು ಅಡಿಗಳ ಎತ್ತರದಿಂದ ಡ್ರೋನ್ ಮೂಲಕ ಸೆರೆ ಹಿಡಿಯಲಾಯಿತು.

    ಬೃಹತ್ ಆಕಾರದ ಗಣೇಶನ ಆಕೃತಿಯ ಕೆಳಗೆ ಶಿಕ್ಷಣ ಸಂಸ್ಥೆಯ 25ಕ್ಕೂ ಹೆಚ್ಚು ವಾಹನಗಳನ್ನು ಬಳಸಿಕೊಂಡು ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಎಂಬ ಶಾಲೆಯ ಸಂಕೇತಾಕ್ಷರಗಳು ಬರುವಂತೆ ನಿಲ್ಲಿಸಲಾಗಿತ್ತು. ಶಾಲಾ ಮಕ್ಕಳ ಈ ಸಾಹಸ ಸಾಮಾಜಿಕ ಜಾಲತಾಣದಲ್ಲಿ (Social Media) ಜನರ ಗಮನ ಸೆಳೆಯುತ್ತಿದೆ.ಇದನ್ನೂ ಓದಿ: ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ದರೋಡೆ ಮಾಡಿತ್ತು ‘ಡಿ’ಗ್ಯಾಂಗ್!

    ಈ ಬಗ್ಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಗಣೇಶನ ಹಬ್ಬಕ್ಕೆ ಮಕ್ಕಳಿಂದ ವಿನಾಯಕ ಆಕೃತಿ ರಚಿಸುವ ಮೂಲಕ ಚಾಲನೆ ನೀಡಲಾಗಿದೆ. ಈ ಮೂಲಕ ಹಬ್ಬಕ್ಕೆ ಮೆರುಗು ನೀಡಲಾಗಿದೆ. ಇದಕ್ಕಾಗಿ ಮಕ್ಕಳು ಸುಮಾರು ಮೂರು ಗಂಟೆಗೂ ಅಧಿಕ ಸಮಯದ ತಾಲೀಮು ಮಾಡಿದ್ದಾರೆ ಎಂದರು.

  • ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಬೆಂಗಳೂರು: ಕೊರೊನಾದ ಮಧ್ಯೆ ಜನರು ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹಬ್ಬದ ಸಂಭ್ರಮದಲ್ಲಿ ಜನರು ಕೊರೊನಾ ಆತಂಕವನ್ನ ಮರೆತಿದ್ದಾರೆ ಎನ್ನುವಂತಿದೆ. ಬೆಳ್ಳಂಬೆಳ್ಳಗ್ಗೆ ಜನರು ಮಾರ್ಕೆಟ್‍ನಲ್ಲಿ ಹಬ್ಬದ ವಸ್ತುಗಳನ್ನ ಖರೀದಿ ಮಾಡಲು ಗುಂಪು ಗೂಡಿದ್ದಾರೆ.

    ಇವತ್ತು ಗೌರಿ ಹಬ್ಬ, ನಾಳೆ ಗಣೇಶ ಚತುರ್ಥಿ. ಆದರೆ ಈ ಬಾರಿ ಗೌರಿ ಗಣೇಶ ಹಬ್ಬಕ್ಕೆ ಕೊರೊನಾ ಕವಿದಿದೆ. ಸಾಮಾಜಿಕ ಅಂತರವನ್ನು ಮರೆತು, ಮಾಸ್ಕ್ ಹಾಕಿಕೊಳ್ಳದೆ ಅಗತ್ಯ ವಸ್ತುಗಳನ್ನ ಖರೀದಿ ಮಾಡುವುದರಲ್ಲಿ ಜನರು ಬ್ಯುಸಿಯಾಗಿದ್ದಾರೆ. ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ  ಜನ ಕೊರೊನಾ ಆತಂಕವನ್ನು ಮರೆತು ಅಜಾಗೃತರಾಗಿ ವ್ಯಾಪಾರ ಮಾಡುತ್ತಿದ್ದಾರೆ.

    ಹಬ್ಬಕ್ಕೆ ಹೂ, ಹಣ್ಣು, ಬಾಳೆ ಕಂದಿನ, ಮಾರಾಟ ಬೆಂಗಳೂರಿನಲ್ಲಿ ಜೋರಾಗಿ ಆಗುತ್ತಿದೆ. ಕೊರೊನಾದ ನಡುವೆ ಗಣೇಶ ಹಬ್ಬವನ್ನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಂದ್ ಆಗಿದೆ. ಹೀಗಾಗಿ ಹೂವಿನ ವ್ಯಾಪಾರಿಗಳು ತಾತ್ಕಾಲಿಕವಾಗಿ ಕೆ.ಆರ್ ರೋಡ್‍ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ.

    ಇತ್ತ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೌಸಿಂಗ್ ಬೋಡಿನಲ್ಲಿ ಸಂತೆ ಮಾರುಕಟ್ಟೆಗೆ ಹಬ್ಬದ ಅಗತ್ಯ ವಸ್ತುಗಳ ಖರೀದಿ ಮಾಡಲು ಅಪಾರ ಜನರು ಬಂದಿದ್ದಾರೆ. ಸಾಮಾಜಿಕ ಅಂತರ ಇಲ್ಲದೆ ಮಾಸ್ಕ್ ಧರಿಸದೆ ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.