‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸಾನ್ಯ ಅಯ್ಯರ್ (Saanya Iyer) ಸ್ಯಾಂಡಲ್‌ವುಡ್‌ಗೆ (Sandalwood) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ‘ಗೌರಿ’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸಿನಿಮಾ ಯಾವ ಹಂತಕ್ಕೆ ಬಂದಿದೆ ಎಂಬುದರ ಬಗ್ಗೆ ನಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಸಿನಿಮಾದಲ್ಲಿ ಸಮರ್ಜಿತ್ ಲಂಕೇಶ್‌ಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇನ್ನೂ ಕೆಲವು ದಿನಗಳ ಶೂಟಿಂಗ್ ಬಾಕಿಯಿದೆ. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

ಈ ಚಿತ್ರದ ಮೂಲಕ ಮಗ ಸಮರ್ಜಿತ್‌ರನ್ನ ಚಿತ್ರರಂಗಕ್ಕೆ ಇಂದ್ರಜಿತ್ ಲಂಕೇಶ್ (Indrajit Lankesh) ಪರಿಚಯಿಸುತ್ತಿದ್ದಾರೆ. ಸಮರ್ಜಿತ್ ಮುಂದೆ ವಿಲನ್ ಆಗಿ ಚಂದು ಗೌಡ ಅಬ್ಬರಿಸುತ್ತಿದ್ದಾರೆ. ವಿಭಿನ್ನ ಕಥೆಯನ್ನ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪರಿಚಯಿಸಲು ಹೊರಟಿದ್ದಾರೆ.
‘ಪುಟ್ಟಗೌರಿ ಮದುವೆ’ ಮದುವೆ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ (Bigg Boss Kannada) ಮೂಲಕ ಕನ್ನಡಿಗರ ಮನಗೆದ್ದ ನಟಿ ಈಗ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಸಕಲ ತಯಾರಿ ಮಾಡಿಕೊಂಡೇ ನಟನೆಯ ಅಖಾಡಕ್ಕೆ ಸಾನ್ಯ ಇಳಿದಿದ್ದಾರೆ. ನಾಯಕಿಯಾಗಿ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]



ಈ ಚಿತ್ರದಲ್ಲಿ ಉದ್ಯಮಿಯಾಗಿ ನೆಗೆಟಿವ್ ಶೇಡ್‌ನಲ್ಲಿ ನಟಿಸುತ್ತಿದ್ದೇನೆ. ನಾಯಕ ಸಮರ್ಜಿತ್ ಮತ್ತು ನನ್ನ ನಡುವಿನ ಕಾಂಬಿನೇಷನ್ ಚೆನ್ನಾಗಿ ಮೂಡಿ ಬರುತ್ತಿದೆ. ಚಿತ್ರೀಕರಣ ಕಳೆದ ಎರಡು ದಿನಗಳಿಂದ ಭರದಿಂದ ಸಾಗುತ್ತಿದೆ ಎಂದು ಚಂದು ತಿಳಿಸಿದ್ದಾರೆ. ಇದನ್ನೂ ಓದಿ:
‘ಗೌರಿ’ ಚಿತ್ರದಲ್ಲಿ ನನ್ನ ಪಾತ್ರ ಸ್ಟೈಲೀಶ್ ಆಗಿದೆ. ನಟನೆಗೆ ತುಂಬಾ ಸ್ಕೋಪ್ ಇರುವಂತಹ ಪಾತ್ರ, ತೆರೆಯ ಮೇಲೆ ಅಬ್ಬರದ ಡೈಲಾಗ್ ಹೊರಹಾಕಲು ಅವಕಾಶ ನೀಡಿದ್ದಾರೆ. ರಾಬರ್ಟ್ (Robert) ಚಿತ್ರದ ನಂತರ ಒಂದೊಳ್ಳೆ ಕಥೆ ನನಗೆ ಸಿಕ್ಕಿದೆ. ಈ ಸಿನಿಮಾದ ಭಾಗವಾಗಿರೋದಕ್ಕೆ ಖುಷಿಯಿದೆ ಎಂದಿದ್ದಾರೆ.







ಮಗನ ಮೊದಲ ಸಿನಿಮಾಗೆ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನ ಮಾಡ್ತಿದ್ದಾರೆ. ‘ಗೌರಿ’ (Gowri) ಸಿನಿಮಾ ಸಲುವಾಗಿ ಸಮರ್ಜಿತ್ ಲಂಕೇಶ್ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಆ್ಯಬ್ಸ್ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಈಗಾಗಲೇ ಹೈಲೈಟ್ ಆಗಿವೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಆಗಸ್ಟ್ 31ರಂದು ಬೆಳಗ್ಗೆ 10:30ಕ್ಕೆ ಗೌರಿ ಸಿನಿಮಾದ ಮುಹೂರ್ತ ನೆರವೇರಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಇದನ್ನೂ ಓದಿ: