Tag: Gown

  • ಮದುವೆ ಗೌನ್‍ ಕತ್ತರಿಸಿದ ನಟಿ ಸಮಂತಾ

    ಮದುವೆ ಗೌನ್‍ ಕತ್ತರಿಸಿದ ನಟಿ ಸಮಂತಾ

    ಟಿ ಸಮಂತ್ ರುತ್ ಪ್ರಭು (Samantha) ತಾವು ಮದುವೆಯಲ್ಲಿ ಧರಿಸಿದ್ದ ಗೌನ್ (Gown) ಅನ್ನು ಕತ್ತರಿಸಿ, ಹೊಸ ವಿನ್ಯಾಸದಲ್ಲಿ ಕಾಸ್ಟ್ಯೂಮ್ ತಯಾರಿಸಿಕೊಂಡಿದ್ದಾರೆ. ಆ ಕಾಸ್ಟ್ಯೂಮ್ ಅನ್ನೇ ಧರಿಸಿಕೊಂಡು ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆ ಹೊಸ ಕಾಸ್ಟ್ಯೂಮ್ ಧರಿಸಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಮಂತಾ ಅವರು ಮದುವೆ (Wedding) ಕಾಸ್ಟ್ಯೂಮ್ ಅನ್ನು ತಯಾರಿಸಿದವರು ಡಿಸೈನರ್ ಕ್ರೇಶಾ ಬಜಾಜ್ 9Kresha Bajaj), ಅವರೇ ಈಗ ಆ ಗೌನ್ ಅನ್ನು ಕತ್ತರಿಸಿ ಸ್ಟ್ರಾಪ್ ಲೆಸ್ ಡ್ರೆಸ್ ಆಗಿ ಪರಿವರ್ತನೆ ಮಾಡಿದ್ದಾರೆ. ಮಾಜಿ ಪತಿ, ನಟ ನಾಗ ಚೈತನ್ಯ ಅವರು ಬೇರೊಬ್ಬ ಹುಡುಗಿಯ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಈ ಕಾರ್ಯ ನಡೆದಿದ್ದು, ಬೇರೆ ಬೇರೆ ಅರ್ಥವನ್ನು ಕಲ್ಪಿಸುವಂತೆ ಮಾಡಿದೆ.

     

    ಸಮಂತಾ ಹೊಸದಾಗಿ ವಿನ್ಯಾಸಗೊಂಡಿರುವ ಗೌನ್ ಅನ್ನು ಧರಿಸಿಕೊಂಡು, ‘ಇದು ನನ್ನ ಪ್ರೀತಿ ಗೌನ್’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ನನ್ನ ಹಳೆ ಬಟ್ಟೆಗಳನ್ನು ಮರುಬಳಕೆ ಮಾಡೋದು ಮೊದಲಿನಿಂದಲೂ ನನಗಿರೋ ಅಭ್ಯಾಸ’ ಎಂದು ಬರೆದು ಸಮಾಧಾನ ಪಟ್ಟುಕೊಂಡಿದ್ದಾರೆ.

  • ಹು-ಧಾ ಮಹಾನಗರ ಪಾಲಿಕೆ ಸದಸ್ಯ, ಮೇಯರ್ ಗೌನ್ ಗುದ್ದಾಟ – ‘ಕೈ’ ಸದಸ್ಯರಿಗೆ ಹಿನ್ನಡೆ

    ಹು-ಧಾ ಮಹಾನಗರ ಪಾಲಿಕೆ ಸದಸ್ಯ, ಮೇಯರ್ ಗೌನ್ ಗುದ್ದಾಟ – ‘ಕೈ’ ಸದಸ್ಯರಿಗೆ ಹಿನ್ನಡೆ

    ಹುಬ್ಬಳ್ಳಿ: ರಾಜ್ಯದ ಮಹಾನಗರ ಪಾಲಿಕೆಗಳ ಮಹಾಪೌರರು ಪಾಲಿಕೆಯ ಸಭೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಗೌನ್ (Gown)  ಧರಿಸುವುದು ಆಯಾ ಮಹಾನಗರ ಪಾಲಿಕೆಗಳ ಮಹಾಪೌರರ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದ್ದು, ಹು-ಧಾ ಮಹಾನಗರ ಪಾಲಿಕೆಯ ‘ಕೈ’ (Congress) ಸದಸ್ಯರಿಗೆ ಹಿನ್ನಡೆಯಾಗಿದೆ.

    ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಗೌನ್ ಧರಿಸುವ ವಿಷಯದಲ್ಲಿ ಸ್ಪಷ್ಟನೆ ಕೋರಿ ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಈರೇಶ್ ಅಂಚಟಗೇರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪಾಲಿಕೆಯ ಸಾಮಾನ್ಯ ಸಭೆ ಅ. 28 ರಂದು ಧಾರವಾಡದಲ್ಲಿ (Dharwad) ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ. ಪಾಲಿಕೆಯ ಸೆಪ್ಟೆಂಬರ್ ಮಾಸಿಕ ಸಭೆಯಲ್ಲಿ ಮೇಯರ್ ಈರೇಶ್ ಅಂಚಟಗೇರಿ ಗೌನ್ ಧರಿಸದೆ ಪಾಲ್ಗೊಂಡಿದ್ದನ್ನು ಕಾಂಗ್ರೆಸ್ ಸದಸ್ಯರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ಬಳಿಕ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿತ್ತು. ಇದನ್ನೂ ಓದಿ: ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ

    ಪೂರ್ವ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಪೌರ ಸನ್ಮಾನ ಕಾರ್ಯಕ್ರಮದಲ್ಲೂ ಮೇಯರ್ ಗೌನ್ ಧರಿಸಿರಲಿಲ್ಲ. ಮುಖ್ಯಮಂತ್ರಿ ಅವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದೆ ಎಂದು ಮೇಯರ್ ತಿಳಿಸಿದ್ದರು. ಇದೀಗ ಸರ್ಕಾರವೇ ಲಿಖಿತವಾಗಿ ಸ್ಪಷ್ಟನೆ ನೀಡಿದೆ. ಆದರೆ, ಮೇಯರ್ ಗೌನ್ ಧರಿಸುವುದಿಲ್ಲ ಎಂಬುದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಬೇಕು ಎಂಬುದು ಕಾಂಗ್ರೆಸ್ ವಾದವಾಗಿದೆ. ಇನ್ನು ಮುಂದೆ ಪಾಲಿಕೆ ಸಭೆಗಳಲ್ಲಿ, ಮಹತ್ವದ ಕಾರ್ಯಕ್ರಮಗಳಲ್ಲಿ ಗೌನ್ ಧರಿಸುವುದಿಲ್ಲ ಎಂದು ಮೇಯರ್ ಈರೇಶ್ ಅಂಚಟಗೇರಿ ತಿಳಿಸಿದ್ದರು. ಇದನ್ನೂ ಓದಿ: ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸುನಿಲ್ ಕುಮಾರ್ ವಿವಾದ ಸೃಷ್ಟಿಸಲು ಹೊರಟಿದ್ದಾರೆ: ಕಾಂಗ್ರೆಸ್

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರಿಗೆ ಸೂಟ್ ಆಗುವಂತಹ ಸ್ಯಾಟಿನ್ ಬೆಸ್ಟ್ ಪಾರ್ಟಿ ವೇರ್‌ಗಳು

    ಮಹಿಳೆಯರಿಗೆ ಸೂಟ್ ಆಗುವಂತಹ ಸ್ಯಾಟಿನ್ ಬೆಸ್ಟ್ ಪಾರ್ಟಿ ವೇರ್‌ಗಳು

    ಸ್ಯಾಟಿನ್ ಡ್ರೆಸ್‍ಗಳು ಧರಿಸಲು ಬಹಳ ಕಂಫರ್ಟ್ ಆಗಿರುತ್ತದೆ. ಸ್ಯಾಟಿನ್ ಉಡುಪುಗಳನ್ನು ನೀವು ಕ್ಯಾಶುವಲ್ ವೇರ್ ಆಗಿ ಬಳಸಬಹುದು. ಅದರಲ್ಲಿಯೂ ಪಾರ್ಟಿ ಮತ್ತು ಸಮಾರಂಭಗಳಿಗೆ ಸ್ಯಾಟಿನ್ ಉಡುಪುಗಳು ಬೆಸ್ಟ್ ಎಂದೇ ಹೇಳಬಹುದು. ಈ ಉಡುಪುಗಳು ನಿಮ್ಮ ದೇಹಕ್ಕೆ ಫಿಟ್ ಆಗಿರುವುದರ ಜೊತೆಗೆ ಬ್ಯೂಟಿಫುಲ್ ಶೇಪನ್ನು ನೀಡುತ್ತದೆ. ಸ್ಯಾಟಿನ್ ಉಡುಪುಗಳಲ್ಲಿ ವೆರೈಟಿ ಡಿಸೈನ್‍ಗಳಿದ್ದು, ಹೊಸ, ಹೊಸ ಪ್ಯಾಟರ್ನ್ ಗಳನ್ನು ವಿನ್ಯಾಸಕರು ತಯಾರಿಸುತ್ತಿದ್ದಾರೆ. ಬ್ರೈಟ್ ಕಲರ್ ಡ್ರೆಸ್‍ಗಳು ಸ್ಯಾಟಿನ್ ಉಡುಪುಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಅವುಗಳಲ್ಲಿ ಕೆಲವಷ್ಟು ಲೇಟೆಸ್ಟ್ ಹಾಗೂ ಸ್ಟೈಲಿಶ್ ಸ್ಯಾಟಿನ್ ಉಡುಪುಗಳ ಮಾಹಿತಿ ಈ ಕೆಳಗಿನಂತಿದೆ.

    ವೈಟ್ ಸ್ಯಾಟಿನ್ ಗೌವ್ನ್
    ಸಂಜೆ ವೇಳೆ ನಡೆಯುವ ಪಾರ್ಟಿಗಳಿಗೆ ಈ ಸ್ಟೈಲಿಶ್ ಸ್ಯಾಟಿನ್ ಡ್ರೆಸ್ ಸುಂದರವಾಗಿ ಕಾಣಿಸುತ್ತದೆ. ಇದು ನಿಮ್ಮ ಅಂದವನ್ನು ಹೆಚ್ಚಿಸುವುದರ ಜೊತೆಗೆ ಎಲ್ಲರನ್ನು ಆಕರ್ಷಿಸುತ್ತದೆ. ಈ ಉಡುಪಿಗೆ ವಜ್ರದ ಆಭರಣಗಳು ಸಖತ್ ಮ್ಯಾಚ್ ಆಗುತ್ತದೆ ಮತ್ತು ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ.

    Satin Dress

    ಬರ್ಗಂಡಿ ಕಲರ್‌ನ ಲಾಗ್
    ಬರ್ಗಂಡಿ ಬಣ್ಣದ ಲಾಂಗ್ ಸ್ಯಾಟಿನ್ ಡ್ರೆಸ್ ಇದಾಗಿದ್ದು, ಮದುವೆ ಮತ್ತು ಪಾರ್ಟಿಗಳಿಗೆ ಈ ಡ್ರೆಸ್ ಧರಿಸಬಹುದಾಗಿದೆ. ಈ ಸ್ಟೈಲಿಶ್ ಡ್ರೆಸ್ ನಿಮಗೆ ರಾಜಾಕುಮಾರಿಯಂತಹ ಲುಕ್ ನೀಡುತ್ತದೆ. ಆಫ್ ಫ್ ಶೋಲ್ಡರ್ ಗೊಳಿಸಿ, ಎಂಬ್ರೋಡರಿ ವರ್ಕ್ ಮೂಲಕ ಈ ಗೌವ್ನ್ ಅನ್ನು ವಿನ್ಯಾಸಗೊಳಿಸಲಾಗಿದೆ.

    ಬ್ಲೂ ಕಲರ್ ಶಾರ್ಟ್
    ಬ್ಲೂ ಕಲರ್‍ನ ಈ ಸ್ಯಾಟಿನ್ ಡ್ರೆಸ್ ಮಾಡರ್ನ್ ಲುಕ್ ನೀಡುತ್ತದೆ. ಇದು ಸಂಜೆಯ ವೇಳೆ ನಡೆಯುವ ಪಾರ್ಟಿಗಳಿಗೆ ಸೂಟ್ ಆಗುತ್ತದೆ. ಡೀಪ್ ನೆಕ್ ಹಾಗೂ ಮೊಣಕಾಲುದ್ದ ಈ ಡ್ರೆಸ್ ವಿನ್ಯಾಸಗೊಳಿಸಲಾಗಿದ್ದು, ಇದು ನಿಮಗೆ ಫ್ರಾಕ್ ಧರಿಸಿದ ಫೀಲ್ ನೀಡುತ್ತದೆ. ಅಲ್ಲದೇ ಇತರರ ಮಧ್ಯೆ ನೀವು ಸಖತ್ ವಿಭಿನ್ನವಾಗಿ ಕಾಣಿಸುತ್ತೀರಿ. ಇದನ್ನೂ ಓದಿ: ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ

    Satin Dress

    ಶಾರ್ಟ್ ಸ್ಯಾಟಿನ್ ಸ್ಲಿಪ್ ಡ್ರೆಸ್
    ಸಿಲ್ವರ್ ಕಲರ್ ಸ್ಯಾಟಿನ್ ಸ್ಲಿಪ್ ಡ್ರೆಸನ್ನು ನೀವು ಯಾವಾಗ ಬೇಕಾದರೂ ಧರಿಸಬಹುದು. ಇದರಲ್ಲಿ ಹಲವು ಬಣ್ಣಗಳ ಡ್ರೆಸ್‍ಗಳಿದ್ದು, ಅವುಗಳಲ್ಲಿ ಸಿಲ್ವರ್ ಬಣ್ಣ ಕೂಡ ಒಂದಾಗಿದೆ. ನೀವು ಔಟಿಂಗ್ ಹೋಗುವ ವೇಳೆ ಈ ಡ್ರೆಸ್‍ನನ್ನು ಧರಿಸಬಹುದಾಗಿದೆ ಮತ್ತು ಇದು ನಿಮಗೆ ಸಖತ್ ಹೊಳಪು ನೀಡುತ್ತದೆ. ಜೊತೆ ಈ ಡ್ರೆಸ್ ಧರಿಸಲು ಬಹಳ ಆರಾಮದಾಯಕವಾಗಿದೆ.

    Satin Dress

    ರೆಡ್ ಸ್ಯಾಟಿನ್ ಡ್ರೆಸ್
    ಕೆಂಪು ಬಣ್ಣದ ಸ್ಯಾಟಿನ್ ಡ್ರೆಸ್ ಇದಾಗಿದ್ದು, ಭುಜದ ಭಾಗದಲ್ಲಿ ಬಹಳ ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ನಿಮಗೆ ಹಳೆಯ ಡಿಸೈನ್‍ಗಳ ಉಡುಪು ಧರಿಸಿ ಬೇಸರವಾಗಿದ್ದರೆ, ಈ ಡ್ರೆಸ್‍ನನ್ನು ಟ್ರೈ ಮಾಡಬಹುದು. ಇದು ನಿಮಗೆ ಚೇಂಜ್ ಲುಕ್ ನೀಡುತ್ತದೆ. ಈ ಬಣ್ಣ ನಿಮಗೆ ಅದ್ಭುತ ಲುಕ್ ನೀಡುತ್ತದೆ. ಇದನ್ನೂ ಓದಿ: ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೇ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ: ಕಾಶಪ್ಪನವರ್

    Satin Dress

  • ಮದುವೆ ಡ್ರೆಸ್‍ನಲ್ಲಿ ಬಂದು ಲಸಿಕೆ ಹಾಕಿಸಿಕೊಂಡ ವಧು

    ಮದುವೆ ಡ್ರೆಸ್‍ನಲ್ಲಿ ಬಂದು ಲಸಿಕೆ ಹಾಕಿಸಿಕೊಂಡ ವಧು

    ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಮದುವೆ ಸಮಾರಂಭಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಕೊರೊನಾದಿಂದ ಎಷ್ಟೋ ಮದುವೆಗಳು ರದ್ದುಗೊಂಡಿದೆ ಇನ್ನೂ ಕೆಲವು ಮದುವೆಗಳನ್ನು ಮುಂದೂಡಿದ್ದಾರೆ.

    ಅಮೆರಿಕದ ಬಾಲ್ಟಿಮೋರ್ ಸಾರಾ ಸ್ಟಡ್ಲಿ ತನ್ನ ವಿವಾಹದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದಳು. ಆದರೆ ಕೋವಿಡ್-19 ನಿಯಮಗಳಿಂದಾಗಿ ವಿಜೃಂಭಣೆಯಿಂದ ನಡೆಯಬೇಕದ್ದ ಸಾರಾ ಸ್ಟಡ್ಲಿ ಮದುವೆ ಬಹಳ ಸರಳವಾಗಿ ನಡೆಯಿತು. ಮದುವೆ ರಿಸೆಪ್ಷನ್ ರದ್ದುಗೊಳಿಸಲಾಗಿತ್ತು. ಹೀಗಾಗಿ ಮದುವೆ ವೇಳೆ ಧರಿಸಬೇಕಿದ್ದ ಡ್ರಸ್‍ನನ್ನು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ದಿನದಂದು ಧರಿಸಲು ಪ್ಲಾನ್ ಮಾಡಿದ್ದಳು.

    ಅದರಂತೆ ಭಾನುವಾರ ಮದುವೆಯ ಗೌನ್ ಧರಿಸಿ ಕ್ಲಿನಿಕ್‍ಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಂಡಿದ್ದಾಳೆ. ಈ ಫೋಟೋವನ್ನು ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸಿಸ್ಟಮ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಗೆ ವಧು ಬಂದಿದ್ದಾರೆ. ಎಂ ಮತ್ತು ಟಿ ಬ್ಯಾಂಕ್ ಸ್ಟೇಡಿಯಂನ ವ್ಯಾಕ್ಸಿನ್ ಸೈಟಿನಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಡ್‍ನಿಂದ ರದ್ದಾದ ಮದುವೆಯ ರಿಸೆಪ್ಷನ್ ಗೌನ್ ಧರಿಸಿ ಲಸಿಕೆ ಪಡೆದಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಹಾಕಿಕೊಂಡಿದೆ.

  • ಒಂದು ಗೌನ್ ಧರಿಸಿ ನಾಲ್ಕು ಸೀಟಿನಲ್ಲಿ ಕುಳಿತ ಊರ್ವಶಿ: ವಿಡಿಯೋ ವೈರಲ್

    ಒಂದು ಗೌನ್ ಧರಿಸಿ ನಾಲ್ಕು ಸೀಟಿನಲ್ಲಿ ಕುಳಿತ ಊರ್ವಶಿ: ವಿಡಿಯೋ ವೈರಲ್

    ಮುಂಬೈ: ಐರಾವತ ಬೆಡಗಿ ಊರ್ವಶಿ ರೌಟೇಲಾ ಒಂದು ಗೌನ್ ಧರಿಸಿ ನಾಲ್ಕು ಸೀಟಿನಲ್ಲಿ ಕುಳಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗೆ ಊರ್ವಶಿ ಫಿಲ್ಮ್‌ಫೇರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಕೆಂಪು ಬಣ್ಣದ ಗೌನ್ ಧರಿಸಿದ್ದು, ಸಾಕಷ್ಟು ಭಾರ ಕೂಡ ಇತ್ತು. ಗೌನ್ ಭಾರವಾಗಿದ್ದ ಕಾರಣ ಊರ್ವಶಿಗೆ ಅದನ್ನು ನಿಭಾಯಿಸಲು ಕಷ್ಟವಾಗಿತ್ತು.

    ಊರ್ವಶಿ ತನ್ನ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಊರ್ವಶಿ ಕೆಂಪು ಬಣ್ಣದ ಗೌನ್ ಧರಿಸಿ ಕುಳಿತಿದ್ದಾರೆ. ಆದರೆ ಅವರ ತಂಡದ ಮೂರು- ನಾಲ್ಕು ಮಂದಿ ಊರ್ವಶಿಯ ಗೌನ್ ಸರಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸದ್ಯ ಈ ವಿಡಿಯೋ ಹಾಕಿ ಊರ್ವಶಿ ತಮ್ಮ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

    ವಿಡಿಯೋದಲ್ಲಿ ಊರ್ವಶಿ ಅವರಿಗೆ ಒಂದು ಸೀಟಿನಲ್ಲಿ ಕುಳಿತುಕೊಳ್ಳಲು ಆಗಲಿಲ್ಲ. ಅವರ ಗೌನ್‍ಗಾಗಿಯೇ ಎರಡರಿಂದ ಮೂರು ಸೀಟ್ ಬೇಕಾಯಿತು. ಊರ್ವಶಿ ಅವರ ಗೌನ್‍ಗಾಗಿ ಎರಡರಿಂದ ಮೂರು ಸೀಟ್‍ಗನ್ನು ಖಾಲಿ ಮಾಡಿಸಲಾಯಿತು.

    ಸದ್ಯ ಊರ್ವಶಿ ಪೋಸ್ಟ್ ಮಾಡಿದ ವಿಡಿಯೋ ನೋಡಿ ಕೆಲವರು, ‘ಈ ಗೌನ್ ಧರಿಸಿ ಕೂರಲು ಬೇರೆಯೇ ಸೀಟ್ ಬೇಕಾಗುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ‘ನೀವು ಒಂದು ಸೀಟಿನಲ್ಲಿ ಕುಳಿತಿದ್ದೀರಾ, ಆದರೆ ನಿಮ್ಮ ಗೌನ್‍ಗೆ ನಾಲ್ಕು ಸೀಟ್ ಬೇಕಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ.

  • ದುಬಾರಿ ಬೆಲೆಯ ಗೌನ್ ಧರಿಸಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಿಂಚಿದ ದೀಪಿಕಾ

    ದುಬಾರಿ ಬೆಲೆಯ ಗೌನ್ ಧರಿಸಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಿಂಚಿದ ದೀಪಿಕಾ

    ದಾವೋಸ್: ಬಾಲಿವುಡ್‍ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇತ್ತೀಚಿಗೆ ಸ್ವಿಟ್ಜರ್ಲ್ಯಾಂಡ್ ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ದುಬಾರಿ ಗೌನ್‍ ಧರಿಸಿ ದೀಪಿಕಾ ಮಿಂಚಿದ್ದಾರೆ.

    ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ನೀಲಿ ಬಣ್ಣದ ಗೌನ್‍ನಲ್ಲಿ ದೀಪಿಕಾ ಮಿಂಚಿ ಎಲ್ಲರ ಗಮನ ಸೆಳೆದಿದ್ದಾರೆ. ವೇದಿಕೆ ಮೇಲೆ ನೀಲಿ ಗೌನ್‍ನಲ್ಲಿ ದೀಪಿಕಾ ಕ್ರಿಸ್ಟಲ್ ಅವಾರ್ಡ್ ಪಡೆಯುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ದೀಪಿಕಾ ಅವರ ದೇಹದ ಶೇಪ್‍ಗೆ ತಕ್ಕಂತೆ ಈ ಗೌನ್ ಡಿಸೈನ್ ಮಾಡಲಾಗಿತ್ತು. ಈ ದುಬಾರಿ ಗೌನ್‍ಗೆ ಚೌಕ ಆಕಾರದ ನೆಕ್‍ಲೈನ್, ಪ್ಯಾಡೆಡ್ ಶೋಲ್ಡರ್, ಕೇಪ್ ಸ್ಲೀವ್ಸ್ ಫಿನಿಷಿಂಗ್ ನೀಡಲಾಗಿದೆ. ಈ ಗೌನ್ ಧರಿಸಿದ್ದ ದೀಪಿಕಾ ಅದಕ್ಕೆ ಮ್ಯಾಚಿಂಗ್ ಡೈಮಂಡ್ ಮತ್ತು ಸಫೈರ್ ಇಯರ್‍ರಿಂಗ್ ಹಾಕಿದ್ದರು. ನೋಡಲು ಸಿಂಪಲ್ ಆಗಿ ಕಾಣಿಸಿದರೂ ದೀಪಿಕಾ ಅವರ ಗೌನ್ ಲುಕ್ ಎಲ್ಲರ ಗಮನ ಸೆಳೆದಿದೆ. ವೇದಿಕೆ ಮೇಲೆ ಗೌನ್‍ನಲ್ಲಿ ಕ್ರಿಸ್ಟಲ್ ಅರ್ವಾಡ್ ಜೊತೆ ದೀಪಿಕಾ ಮಿಂಚಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದಕ್ಕಾಗಿ ದೀಪಿಕಾ ಅವರಿಗೆ ಕ್ರಿಸ್ಟಲ್ ಅವಾರ್ಡ್ 2020 ನೀಡಿ ಗೌರವಿಸಲಾಗಿದೆ. ಸ್ಟಾರ್ ನಟಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳನ್ನು ದೀಪಿಕಾ ಮಾಡುತ್ತಾ ಬಂದಿದ್ದಾರೆ. ಖಿನ್ನತೆಗೆ ಒಳಗಾದರಿಗೆ ಸಹಾಯ ಮಾಡುವ ಉದ್ದೇಶದಿಂದ 2015ರಲ್ಲಿ `ಲೀವ್ ಲವ್ ಲಾಫ್’ ಸಂಸ್ಥೆಯನ್ನು ದೀಪಿಕಾ ಸ್ಥಾಪಿಸಿದ್ದಾರೆ. ಈ ಮೂಲಕ ಖಿನ್ನತೆಗೆ ಒಳಗಾದವರು ಆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ.

    ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ದೀಪಿಕಾ, ತಾವು ಖಿನ್ನತೆಗೆ ಒಳಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಪ್ರಾರಂಭವಾದ ಖಿನ್ನತೆ ಮತ್ತು ಆತಂಕದಿಂದ ಸಾಕಷ್ಟು ಬಾರಿ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೆ. ಆದರೆ ನನ್ನ ತಾಯಿ ನನ್ನನ್ನು ಖಿನ್ನತೆಯಿಂದ ಹೊರಗೆ ಕರೆದುಕೊಂಡು ಬಂದರು. ಖಿನ್ನತೆ ಮತ್ತು ಆತಂಕಕ್ಕೆ ಚಿಕಿತ್ಸೆ ನೀಡಲಾಗುತ್ತೆ. ನನ್ನ ಅನುಭವದ ಪ್ರಕಾರ ಸ್ವೀಕಾರವು ಚೇತರಿಕೆಯ ಮೊದಲ ಹೆಜ್ಜೆಯಾಗಿದೆ ಎಂದು ಭಾಷಣ ಮಾಡಿದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಮೆಟ್ ಗಾಲಾ 2019’ ಕಾರ್ಯಕ್ರಮದಲ್ಲಿ ಧರಿಸಿದ್ದ ಗೌನಿನ ಬೆಲೆ ರಿವೀಲ್ ಆಗಿದೆ. ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ. ವೆಚ್ಚದ ಗೌನ್ ಧರಿಸಿದ್ದಾರೆ.

    ಪ್ರಿಯಾಂಕಾ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಡಿಯೋರ್ ವಿನ್ಯಾಸದ ಡ್ರಾಮಾಟಿಕ್ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು.

    ಪ್ರಿಯಾಂಕಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ.ಯ ಗೌನ್ ಧರಿಸಿದ್ದರು. 1500 ಗಂಟೆಗಳ ಕಾಲ ಶ್ರಮವಹಿಸಿ ಈ ಗೌನ್‍ನನ್ನು ಟುಲೆಯಿಂದ ತಯಾರಿಸಲಾಗಿದೆ. ಆ ಗೌನ್‍ಗೆ ಪ್ರಿಯಾಂಕಾ ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರದ ಇಯರಿಂಗ್ ಹಾಕಿದ್ದರು.

    ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಮೆಟ್ ಗಾಲಾ ಲುಕ್ ನೋಡಿ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಹಾಗೂ ಹಲವಾರು ಮಿಮ್ಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಆದರೆ ಈಗ ಪ್ರಿಯಾಂಕ ಲುಕ್ ಬಗ್ಗೆ ಸ್ವತಃ ಅವರ ತಾಯಿ ಮಧು ಚೋಪ್ರಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಿಯಾಂಕಾ ಲುಕ್ ಬಗ್ಗೆ ಅವರ ತಾಯಿ ಮಧು ಚೋಪ್ರಾ ಬಳಿ ಕೇಳಿದ್ದಕ್ಕೆ, “ಇಷ್ಟು ದೂರದಿಂದ ನಾನು ಏನೆಂದು ಪ್ರತಿಕ್ರಿಯಿಸಲಿ. ಪ್ರಿಯಾಂಕಾ ನನ್ನ ಮುಂದೆ ಇದ್ದಿದ್ದರೆ ನಾನು ಅವಳನ್ನು ತಬ್ಬಿಕೊಳ್ಳುತ್ತಿದೆ. ಏಕೆಂದರೆ ಅವಳು ಅಷ್ಟು ಸುಂದರವಾಗಿ ಹಾಗೂ ಸ್ಪೆಷಲ್ ಆಗಿ ಕಾಣಿಸುತ್ತಿದ್ದಳು” ಎಂದು ಹೇಳಿದ್ದಾರೆ.

    ಮೆಟ್ ಗಾಲಾ ಕಾರ್ಯಕ್ರಮಕ್ಕೆ ಪ್ರಿಯಾಂಕ ಪತಿ, ಅಮೆರಿಕದ ಗಾಯಕ ನಿಕ್ ಜೋನಸ್ ಪ್ರಿಸ್ಟಿನ್ ಬಿಳಿ ಬಣ್ಣದ ಸೂಟ್ ಧರಿಸಿ ಪತ್ನಿ ಜೊತೆ ಆಗಮಿಸಿದ್ದರು. ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.

  • ವಿವಿ ಘಟಿಕೋತ್ಸವ ವೇಳೆ ಧರಿಸುವ ಗೌನ್ ಸಂಸ್ಕೃತಿಗೆ ಕೇಂದ್ರದಿಂದ ಬ್ರೇಕ್

    ವಿವಿ ಘಟಿಕೋತ್ಸವ ವೇಳೆ ಧರಿಸುವ ಗೌನ್ ಸಂಸ್ಕೃತಿಗೆ ಕೇಂದ್ರದಿಂದ ಬ್ರೇಕ್

    ನವದೆಹಲಿ: ವಿಶ್ವವಿದ್ಯಾಲಯಗಳ ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಧರಿಸುವ ಗೌನ್ ಪಾಶ್ಚಿಮಾತ್ಯ ಸಂಸ್ಕೃತಿಗೆ ಪ್ರತಿ ರೂಪವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಈ ಸಂಸ್ಕೃತಿಗೆ ಬ್ರೇಕ್ ಹಾಕಲು ಮುಂದಾಗಿದೆ.

    ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿದೆ.

    ಸಚಿವಾಲಯವು ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿದೆ. ಅಲ್ಲದೆ ಈ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಸ್ತುತ ಭಾರತದ ಎಲ್ಲಾ ವಿಶ್ವವಿದ್ಯಾಲಯಗಳು ಘಟಿಕೋತ್ಸವದ ವೇಳೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ತಮ್ಮದೇ ಅದ ನಿಯಮಗಳನ್ನು ಹೊಂದಿವೆ.

    ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್‍ಸ್ಟುಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು. ಈ ವರ್ಷ ಕಾನ್ಪುರ ಐಐಟಿ ವಿದ್ಯಾರ್ಥಿಗಳು ಕುರ್ತಾ, ಪೈಜಮಾ, ಚೂಡಿದಾರ್ ಧರಿಸಿ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.