Tag: gowda

  • ಚುನಾವಣೆ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚಿಸಿದ ಡ್ರೋನ್ ‍ಪ್ರತಾಪ್: ದೂರು ದಾಖಲು

    ಚುನಾವಣೆ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚಿಸಿದ ಡ್ರೋನ್ ‍ಪ್ರತಾಪ್: ದೂರು ದಾಖಲು

    ಡ್ರೋನ್ ‍ಪ್ರತಾಪ್ (Drone Pratap) ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದೇ ಇದ್ದರೂ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರಿಗೆ ಹೇಳಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸೋದಾಗಿ ಡ್ರೋನ್ ಪ್ರತಾಪ್ ಹಣ ಪಡೆದು ವಂಚಿಸಿದ್ದಾರೆ ಎಂದು ಚಂದನ್ ಕುಮಾರ್ ಗೌಡ ಎನ್ನುವವರು ದೂರು ನೀಡಿದ್ದಾರೆ.

    ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಡ್ರೋನ್ ಪ್ರತಾಪ್ ತಮ್ಮಿಂದ ಎರಡು ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಚಂದನ್ ಕುಮಾರ್ ದೂರು ನೀಡಿದ್ದಾರೆ. ಈ ಕುರಿತಂತೆ ಡ್ರೋನ್ ಪ್ರತಾಪ್ ಜೊತೆ ಮಾತನಾಡಿರುವ ಆಡಿಯೋವನ್ನೂ ಅವರು ನೀಡಿದ್ದಾರೆ.

     

    ಚಂದನ್ ಕುಮಾರ್ ಮತ್ತು ಡ್ರೋನ್ ಆಡಿದ ಆಡಿಯೋದಲ್ಲಿ , ನಂದು ಸ್ವಲ್ಪ ಕಾಂಟ್ರವರ್ಸಿ ಅದ್ಮೇಲೆ ಯುತ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡ್ತೇವೆ ಬಾ ಅಂದ್ರು. ಆಗ ನಾನು ಹೆಚ್ ಡಿಕೆ ಜೊತೆ ಇದ್ದೆ ಎಂದು ಡ್ರೋನ್ ಹೇಳ್ತಾರೆ. ದೂರುದಾರ ಚಂದನ್,’ ತುಂಬಾ ಜನಪ್ರಿಯವಾಗಿದ್ರಿ ಅಂತಾರೆ. ಮತ್ತೆ ಡ್ರೋನ್ ಪ್ರತಾಪ್ , ನನ್ನ ಭಾವಚಿತ್ರ ಎಲ್ಲೂ ಹಾಕಲ್ಲ. ಬಿಡದಿ ತೋಟದ ಮನೆಗೆ ಇಬ್ಬರೂ ಒಮ್ಮೆ ಹೋಗಾಣ ಆಯ್ತಾ? ಕುಮಾರ ಸ್ವಾಮಿ ಒಳ್ಳೆ ವ್ಯಕ್ತಿ ಪಾಪಾ. ಕೆಟ್ಟ ಪದ ಬಳಸ್ತಾರೆ ಹೊರತು ಮೋಸ ಇಲ್ಲ. ಡಿಕೆಶಿ ರೀತಿ ಪೇಪರ್ ಎಸೆಯೋದು ಪೇಪರ್ ಹರಿದು ಹಾಕೋ ಕೆಲಸ ಹೆಚ್ ಡಿಕೆ ಮಾಡಲ್ಲ. ಯಾರೇ ಹೋದರು ದುಡ್ಡು ಕೊಡ್ತಾರೆ’ ಎಂದು ಆಡಿಯೋದಲ್ಲಿದೆ.

  • ಗೌಡ ಸಮುದಾಯದ ಭಾಷೆ ಉಳಿಸಲು ಪಣ- ಸಂಸ್ಕೃತಿಗಾಗಿ ಜಾಗೃತಿ ಮೂಡಿಸ್ತಿರೋ ಕೊಡಗಿನ ಮಿಲನ ಭರತ್

    ಗೌಡ ಸಮುದಾಯದ ಭಾಷೆ ಉಳಿಸಲು ಪಣ- ಸಂಸ್ಕೃತಿಗಾಗಿ ಜಾಗೃತಿ ಮೂಡಿಸ್ತಿರೋ ಕೊಡಗಿನ ಮಿಲನ ಭರತ್

    ಮಡಿಕೇರಿ: ರಾಜ್ಯದ ಎಷ್ಟೋ ಸಮುದಾಯಗಳಿಗೆ ಈಗಲೂ ಮಾತನಾಡಲು ಸರಿಯಾದ ಭಾಷೆ ಇಲ್ಲ. ಹೀಗಾಗಿ, ಸಂಸ್ಕøತಿ-ಭಾಷೆಗಳು ಅವಸಾನ ಕಂಡಿವೆ. ಆದ್ರೆ, ಇಂಥ ಶ್ರೀಮಂತ ಸಂಸ್ಕೃತಿ ಮರೆಯಾಗಬಾರದು ಅಂತ ಕೊಡಗಿನ ಮಹಿಳೆಯೊಬ್ಬರು ಪಣತೊಟ್ಟಿದ್ದಾರೆ.

    ಕೊಡಗು ಜಿಲ್ಲೆಯ ಭಾಗಮಂಡಲದ ಮಿಲನ ಭರತ್, ಮೀನುಗಾರಿಕೆ ವಿಷಯದಲ್ಲಿ ಪದವಿ ಮತ್ತು ಮಾರುಕಟ್ಟೆ ನಿರ್ವಹಣೆ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಶ್ರೇಯಾಂಕ ಗಳಿಸಿದ್ದಾರೆ. ಪ್ರಸ್ತುತ ಸೋಮವಾರಪೇಟೆ ತಾಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಸರ್ಕಾರಿ ಅಧಿಕಾರಿಯಾಗಿದ್ರೂ ರಜೆ ದಿನಗಳಲ್ಲಿ ತಮ್ಮ ಗೌಡ ಸಮುದಾಯದ ಅರೆ ಭಾಷೆ ಸಂಸ್ಕೃತಿ ಉಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಂಡಲ ಗ್ರಾಮದಲ್ಲಿ ಕಳೆದ 14 ವರ್ಷಗಳಿಂದ `ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್’ ಅಡಿ `ನಾಟ್ಯ ಮಿಲನ ನೃತ್ಯ ಶಾಲೆ’ ಮೂಲಕ ಉಚಿತ ನೃತ್ಯ ತರಬೇತಿ ನೀಡ್ತಿದ್ದಾರೆ.

    ಗೌಡರ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ಹುತ್ತರಿ ಕೋಲು, ಸುಗ್ಗಿ ಕುಣಿತ, ಭೂತಕೋಲ, ಆಟಿ ಕಳಂಜ, ಜೋಗಿ ಕುಣಿತ, ಸೋಬಾನೆ ಪದ ಇವುಗಳನ್ನು ಪ್ರದರ್ಶನ ಕಲೆಯಾಗಿ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. “ಅರೆ ಭಾಷೆ ಗೌಡರ ಸಿರಿ ಸಂಸ್ಕøತಿ” ಎಂಬ ಹೆಸರಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇವರ ತಂಡ ಪ್ರದರ್ಶನ ನೀಡಿದೆ.

    ನೃತ್ಯ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ವೇಷ ಭೂಷಣ, ಕಾರ್ಯಕ್ರಮ ನೀಡುವ ಪ್ರಯಾಣದ ವೆಚ್ಚ ಎಲ್ಲವನ್ನೂ ಟ್ರಸ್ಟ್ ಮೂಲಕ ಭರಿಸಲಾಗ್ತಿದೆ. ಇನ್ನು ಸಾಹಿತ್ಯದತ್ತ ಒಲವು ಹೊಂದಿರೋ ಮಿಲನ ಅವರು ಭಾವಲಹರಿ ಮತ್ತು ಮೌನ ಮುರಿಯೋ ಸಮಯ ಅನ್ನೋ ಕವನ ಸಂಕಲನ ಹಾಗೂ “ಕೊಡಗಿನಲ್ಲಿ ಐನ್ ಮನೆಗಳು” ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದಾರೆ.

    https://www.youtube.com/watch?v=XWC2r6Es5Wc