Tag: Govu shala

  • ಗೋಶಾಲೆಗಳಿಗೆ ಆರ್ಥಿಕ ಸಹಾಯ ನೀಡಿ – ಸಿಎಂಗೆ ಮನವಿ

    ಗೋಶಾಲೆಗಳಿಗೆ ಆರ್ಥಿಕ ಸಹಾಯ ನೀಡಿ – ಸಿಎಂಗೆ ಮನವಿ

    ಮಂಗಳೂರು: ಗೋಶಾಲೆಗಳಿಗೆ ಆರ್ಥಿಕ ಸಹಾಯ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸ್ಟೇಟ್ ಎನಿಮಲ್ ವೆಲ್ಪೆರ್ ಬೋರ್ಡ್‍ನ ಸದಸ್ಯ ವಿನಯ್ ಶೆಟ್ಟಿ ಪತ್ರ ಬರೆದು ಮನವಿ ಮಾಡಿದ್ದಾರೆ.

    ಲಾಕ್‍ಡೌನ್‍ನಿಂದ ಗೋಶಾಲೆಗಳಿಗೆ ಬರುತ್ತಿದ್ದ ಸಾರ್ವಜನಿಕ ದೇಣಿಗೆ ಸಂಪೂರ್ಣ ನಿಂತು ಹೋಗಿದೆ. ಸರ್ಕಾರದ ಪರವಾಗಿ ಗೋವುಗಳನ್ನು ಸಾಕುತ್ತಿರುವ ಗೋಶಾಲೆಗಳಿಗೆ ಆರ್ಥಿಕ ಪರಿಹಾರ ನೀಡಬೇಕು ಎಂದು ವಿನಯ್ ಶೆಟ್ಟಿ ಕೇಳಿಕೊಂಡಿದ್ದಾರೆ.

    ಅಕ್ರಮ ಗೋಸಾಗಾಟದ ಸಂದರ್ಭದಲ್ಲಿ ಪೊಲೀಸರು ವಶಪಡಿಸಿದ ಗೋವುಗಳನ್ನು ನ್ಯಾಯಲಯಗಳು ಸರ್ಕಾರದ ಪರವಾಗಿ ಸಾಕುವಂತೆ ಗೋಶಾಲೆಗಳಿಗೆ ಹಸ್ತಾಂತರಿಸಿದೆ. ಗೋಶಾಲೆಗಳಲ್ಲಿನ ಅಂತಹ ಗೋವುಗಳಿಗೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗೋ ಶಾಲೆಯಲ್ಲಿ 500-1,000ಕ್ಕೂ ಹೆಚ್ಚು ಗೋವುಗಳಿದ್ದರೂ ಸರ್ಕಾರ ಗರಿಷ್ಠ 200 ಗೋವುಗಳಿಗೆ ಮಾತ್ರ ದಿನಕ್ಕೆ ಜಾನುವಾರು ಒಂದಕ್ಕೆ ಕೇವಲ 17.50 ರೂ. ಅನುದಾನ ಮಾತ್ರ ಕೊಡುತ್ತಿದೆ. ಉಳಿದ ಹಣ ಸಾರ್ವಜನಿಕರಿಂದ ದೇಣಿಗೆ ಪಡೆದು ಸಾಕಬೇಕಿತ್ತು. ಆದರೆ ಲಾಕ್‍ಡೌನ್‍ನಿಂದ ದೇಣಿಗೆ ನಿಂತಿದೆ.

    ಸರ್ಕಾರದ ಪರವಾಗಿ ಸಾಕುವ ಗೋವುಗಳಿಗೆ ಸಂಪೂರ್ಣ ಖಚ್ಚು ವೆಚ್ಚ ಸರ್ಕಾರವೇ ಭರಿಸಿ, ದೊಡ್ಡ ಜಾನುವಾರುಗಳಿಗೆ ದಿನವೊಂದಕ್ಕೆ ರೂ 300 ರೂ. ಹಾಗೂ ಕರುಗಳಿಗೆ 100 ರೂ.ರಂತೆ ನೀಡಬೇಕು. ಅಲ್ಲದೇ ರಾಜ್ಯದ ರೈತರ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದ್ದು, ಇವುಗಳಿಗೂ ತಕ್ಷಣ ಲಾಕ್‍ಡೌನ್ ವಿಶೇಷ ಅನುದಾನ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಸ್ಟೇಟ್ ಎನಿಮಲ್ ವೆಲ್ಪೆರ್ ಬೋರ್ಡ್‍ನ ಸದಸ್ಯ ವಿನಯ್ ಶೆಟ್ಟಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಸ್ವಾಮೀಜಿ ಮೇಲೆ ಬೆಟ್ಟದಷ್ಟು ಪ್ರೀತಿ ಹರಿಸಿದ ಕರುಗಳು

    ಸ್ವಾಮೀಜಿ ಮೇಲೆ ಬೆಟ್ಟದಷ್ಟು ಪ್ರೀತಿ ಹರಿಸಿದ ಕರುಗಳು

    – ಗೋವಿನ ಪ್ರೀತಿಗೆ ಮೈಯ್ಯೊಡ್ಡಿ ಕುಳಿತ ಶ್ರೀಗಳು

    ಉಡುಪಿ: ಶ್ರೀಕೃಷ್ಣನ ಪೂಜೆಯ ಜೊತೆ ಗೋವುಗಳಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು. ಕರುಗಳು ಸ್ವಾಮೀಜಿ ಮೇಲೆ ಮುಗಿಬಿದ್ದು ಪ್ರೀತಿ ತೋರಿದ ವಿಡಿಯೋ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರದಲ್ಲಿ ಪೇಜಾವರ ಮಠದ ಗೋಶಾಲೆ ಇದೆ. ಇಲ್ಲಿ ಸಾವಿರದ ಐನೂರಕ್ಕಿಂತಲೂ ಹೆಚ್ಚು ಗೋವುಗಳಿವೆ. ಪೇಜಾವರ ಶ್ರೀಗಳಿಗೆ ಗೋವುಗಳ ಮೇಲೆ ಪ್ರೀತಿ ಇರೋದರಿಂದ ಗೋಶಾಲೆ ಮಾಡಿದ್ದಾರೆ. ಹೆಬ್ರಿಯಲ್ಲಿ ಮತ್ತೊಂದು ಗೋಶಾಲೆ ತೆರೆದಿದ್ದಾರೆ. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಗೋವಿನ ಮೇಲೆ ಇರುವಷ್ಟೇ ಪ್ರೀತಿ ಗೋವುಗಳಿಗೂ ಸ್ವಾಮೀಜಿಯ ಮೇಲೆ ಪ್ರೀತಿ ಇದೆ. ಇದಕ್ಕೆ ಸಾಕ್ಷಿ ಎನ್ನುವಂತಹ ವಿಡಿಯೋ ಹಾಗೂ ಫೋಟೋಗಳು ಪಬ್ಲಿಕ್ ಟಿವಿಗೆ ಸಿಕ್ಕಿವೆ. ಇದನ್ನೂ ಓದಿ: ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

    ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೋವುಗಳ ಜೊತೆ ಬೆರೆಯುವ ಫೋಟೋಗಳು, ವಿಡಿಯೋಗಳು ಎಲ್ಲರ ಮೊಬೈಲ್‍ನಲ್ಲಿ ಹರಿದಾಡುತ್ತಿವೆ. ಪೇಜಾವರ ಸ್ವಾಮೀಜಿಗಳನ್ನು ಮುತ್ತಿಕೊಂಡಿರುವ ಕರುಗಳು, ಸ್ವಾಮಿಗಳನ್ನು ಮುದ್ದು ಮಾಡುತ್ತದೆ. ಕರುಗಳು ಮೈಯ್ಯನ್ನೆಲ್ಲ ನೆಕ್ಕಿದರೂ ಶ್ರೀಗಳು ಮಾತ್ರ ಕರುಗಳಿಗೆ ಮೈಯ್ಯೊಡ್ಡಿ ಕುಳಿತುಕೊಂಡು ಗೋವು ಪ್ರೀತಿಯನ್ನು ಅನುಭವಿಸಿದ್ದಾರೆ.

    ಕೃಷ್ಣನ ಕೊಳಲಿನ ನಾದಕ್ಕೆ ಗೋವುಗಳ ದ್ವಾಪರದಲ್ಲಿ ತಲೆದೂಗಿದ್ದವು. ಕೃಷ್ಣ ಸೇವೆಯನ್ನು ಮಾಡುವ ಪೇಜಾವರ ಸ್ವಾಮೀಜಿಗಳ ಗೋವು ಪ್ರೀತಿ ಲಕ್ಷಾಂತರ ಭಕ್ತರ ಪ್ರೀತಿಗೆ ಕಾರಣವಾಗಿದೆ. ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಅವರ ಸೇವೆ ಈ ಹಿಂದೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು.