Tag: govt work

  • ಇನ್ಸ್ ಪೆಕ್ಟರ್ ಮಗನ ಹೆಸರಲ್ಲಿ ಸರ್ಕಾರಕ್ಕೆ ಮೋಸ- 2.63 ಲಕ್ಷ ರೂ. ದೋಚಿದ ಗ್ರಾ.ಪಂ. ಅಧ್ಯಕ್ಷೆ

    ಇನ್ಸ್ ಪೆಕ್ಟರ್ ಮಗನ ಹೆಸರಲ್ಲಿ ಸರ್ಕಾರಕ್ಕೆ ಮೋಸ- 2.63 ಲಕ್ಷ ರೂ. ದೋಚಿದ ಗ್ರಾ.ಪಂ. ಅಧ್ಯಕ್ಷೆ

    ಬಳ್ಳಾರಿ: ಸರ್ಕಾರಿ ಕೆಲ್ಸದಲ್ಲಿರೋ ಇನ್ಸ್ ಪೆಕ್ಟರ್ ಕೂಡಾ ನಿರುದ್ಯೋಗಿಯಂತೆ. ಗ್ರಾಮ ಪಂಚಾಯತ್ ಅಧ್ಯಕ್ಷೆಯೂ ಕೂಲಿ ಕೆಲ್ಸ ಮಾಡ್ತಾರಂತೆ. ಆಕೆಯ ಪತಿ, ಪುತ್ರಿಯೂ ಕೂಲಿ ಕೆಲ್ಸ ಮಾಡ್ತಾರಂತೆ.

    ಅಂದಹಾಗೆ ಇದು ಬಳ್ಳಾರಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರೋ ಅಕ್ರಮದ ಸ್ಯಾಂಪಲ್ ಅಷ್ಟೇ. ಸಂಡೂರು ತಾಲೂಕಿನ ಸುಶೀಲಾನಗರದ ಗ್ರಾಮ ಪಂಚಾಯತ ಅಧ್ಯಕ್ಷೆ ಗೌರಿಬಾಯಿ ಸುಳ್ಳು ಲೆಕ್ಕ ತೋರಿಸಿ 2.63 ಲಕ್ಷ ರೂಪಾಯಿ ದೋಚಿದ್ದಾರೆ.

    ತನ್ನ ಪತಿ, ಸಿಆರ್ ಪಿಎಫ್‍ನಲ್ಲಿ ಇನ್ಸ್ ಪೆಕ್ಟರ್ ಆಗಿರೋ ಪುತ್ರ ಶಿವುನಾಯ್ಕ್ ಮತ್ತು ಓದ್ತಿರೋ ಪುತ್ರಿಯ ಹೆಸರಲ್ಲಿ ಕೂಲಿ ಕೆಲ್ಸ ಅಂತಾ ತೋರಿಸಿ ಸರ್ಕಾರಿ ದುಡ್ಡನ್ನು ನುಂಗಿ ನೀರು ಕುಡೀತಿದ್ದಾರೆ.

    ಸದ್ಯ ಈ ಅವ್ಯವಹಾರಗಳ ಬಗ್ಗೆ ಜಿಲ್ಲಾ ಸಿಇಒ ತನಿಖೆ ನಡೆಸುತ್ತಿದ್ದು, ಅಕ್ರಮ ಸಾಬೀತಾದ್ರೆ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂದು ತಿಳಿದುಬಂದಿದೆ.