Tag: govt school

  • ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭ

    ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭ

    ಬೆಂಗಳೂರು: ದಸರಾ ರಜೆ, ಸಾಮಾಜಿಕ, ಶೈಕ್ಷಣಿಕ ಸರ್ವೆ ರಜೆ ಬಳಿಕ ಇಂದಿನಿಂದ ಸರ್ಕಾರಿ ಶಾಲೆಗಳು (Govt School) ಪುನಾರಂಭಗೊಂಡಿದೆ. ಒಂದು ತಿಂಗಳ ಬಳಿಕ ಮತ್ತೆ ಶಾಲೆಗಳು ಪ್ರಾರಂಭವಾಗಿದೆ.

    ಸರ್ವೆಗಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ರಜೆ ವಿಸ್ತರಣೆ ಮಾಡಿ ಶಿಕ್ಷಕರನ್ನ (Teachers) ಸರ್ವೆ (Caste Census) ಕಾರ್ಯಕ್ಕೆ ಬಳಸಿಕೊಂಡಿತ್ತು. ಸದ್ಯ ಸರ್ವೆ ಕಾರ್ಯ ಮುಂದುವರಿಯುತ್ತಿದ್ದರೂ ಶಿಕ್ಷಕರನ್ನ ಸರ್ವೆ ಕಾರ್ಯದಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರನ್ನ ಹೊರತುಪಡಿಸಿ ಉಳಿದವರಿಂದ ಸರ್ವೆ ಕಾರ್ಯ ಮುಂದುವರಿಯುತ್ತಿದೆ. ಈ ಹಿನ್ನೆಲೆ ಇಂದಿನಿಂದ ತರಗತಿಗಳು ಮರು ಪ್ರಾರಂಭವಾಗಿದೆ. ರಜೆಯಲ್ಲಿ ಮಿಸ್ ಆಗಿರುವ ಸಿಲಬಸ್ ಮುಕ್ತಾಯಕ್ಕೆ ಕೆಲವು ಮಹತ್ವದ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿದೆ. ಇದನ್ನೂ ಓದಿ: ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್ – ಕಡೆಗಳಿಗೆಯಲ್ಲೂ ದೇವಿ ಕಣ್ತುಂಬಿಕೊಂಡ ಭಕ್ತಗಣ

    ಶಿಕ್ಷಣ ಇಲಾಖೆ ಸೂಚನೆಗಳೇನು?
    *ಡಿಸೆಂಬರ್- ಜನವರಿ ಒಳಗೆ ಸಂಪೂರ್ಣ ಸಿಲಬಸ್ ಮುಕ್ತಾಯ ಆಗಬೇಕು.
    *ಒಂದು ತಿಂಗಳು ಆಗಿರೋ ಸಿಲಬಸ್ ಲಾಸ್ ತುಂಬಲು ವಿಶೇಷ ತರಗತಿಗಳನ್ನ ನಡೆಸಬೇಕು.
    *ಬೆಳಗ್ಗೆ ಶಾಲೆ ಮುಂಚೆ ಅಥವಾ ಸಂಜೆ ಶಾಲೆ ಮುಗಿದ ಮೇಲೆ ವಿಶೇಷ ತರಗತಿ ತೆಗೆದುಕೊಂಡು ಪಠ್ಯ ಪೂರ್ಣ ಮಾಡಬೇಕು.
    *ಶನಿವಾರ ಅರ್ಧ ದಿನದ ಬದಲಾಗಿ ಪೂರ್ಣ ತರಗತಿಗಳನ್ನು ನಡೆಸಿ ಪಠ್ಯ ಪೂರ್ಣ ಮಾಡಬೇಕು.
    *ತೀರಾ ಅಗತ್ಯವಿದ್ದರೆ ರಜಾ ದಿನಗಳಲ್ಲೂ ವಿಶೇಷ ತರಗತಿ ನಡೆಸಿ ಪಠ್ಯ ಬೋಧನೆ ಪೂರ್ಣ ಮಾಡಬೇಕು.

  • ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ

    ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ

    ವಿಜಯಪುರ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸರ್ಕಾರಿ ಶಾಲೆಯೊಂದು ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಇದನ್ನೂ ಓದಿ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    ಮಂಗಳವಾರ ರಾತ್ರಿಯಿಂದ ಶುರುವಾದ ಮಳೆ ನಿರಂತರವಾಗಿ 12 ಗಂಟೆಗಳ ಕಾಲ ಸುರಿದಿದೆ. ಪರಿಣಾಮ ವಿಜಯಪುರ (Vijayapura) ಜಿಲ್ಲೆಯ ತಿಕೋಟ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯೊಂದು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಶಾಲಾ ಆವರಣ ಕೆರೆಯಂತಾಗಿದ್ದು, ಕೊಠಡಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ನೀರು ಹೊರಹಾಕಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನೀರಿನ ಪ್ರಮಾಣದಲ್ಲಿ ಇಳಿಮುಖ ಕಂಡಿದೆ.

    ಇನ್ನೂ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಕೆಲವೆಡೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆಯುವ ರೈತರಿಗೆ ಸದ್ಯ ಮಳೆಯ ಅವಶ್ಯಕತೆ ಇತ್ತು. ಕೂಡ್ಲಿಗಿ ಹಾಗೂ ಸುತ್ತಮುತ್ತಲು ಭಾರೀ ಮಳೆ ಸುರಿದ ಪರಿಣಾಮ ದೊಡ್ಡ ಕೆರೆ ಕೋಡಿ ಬಿದ್ದಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆಗಸ್ಟ್ ತಿಂಗಳಲ್ಲಿ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಇದನ್ನೂ ಓದಿ: ದೇವಭೂಮಿಯಲ್ಲಿ ಮೇಘಸ್ಫೋಟ – ಧರಾಲಿಯಲ್ಲಿ ಈವರೆಗೆ ಐವರ ಸಾವು ದೃಢ; 150 ಜನರ ರಕ್ಷಣೆ

  • ಕೇರಳ ಮಾದರಿಯಂತೆ ಕೊಪ್ಪಳದ ಶಾಲೆಯೊಂದರಲ್ಲಿ ಲಾಸ್ಟ್ ಬೆಂಚ್‌ಗೆ ಕೊಕ್

    ಕೇರಳ ಮಾದರಿಯಂತೆ ಕೊಪ್ಪಳದ ಶಾಲೆಯೊಂದರಲ್ಲಿ ಲಾಸ್ಟ್ ಬೆಂಚ್‌ಗೆ ಕೊಕ್

    ಕೊಪ್ಪಳ: ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಲಾಸ್ಟ್ ಬೆಂಚ್ (Last Bench) ಮಾದರಿಯನ್ನು ತೆಗೆದು ಯು ಆಕಾರದ ಮಾದರಿಯಲ್ಲಿ ಡೆಸ್ಕ್ ಹಾಕಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ಇದನ್ನೂ ಓದಿ: ಕಾಲ್ತುಳಿತಕ್ಕೆ ಪೊಲೀಸ್‌ ಇಲಾಖೆ ಒಳಗಿನ ರಾಜಕೀಯ ಕಾರಣ.. ಕೊಹ್ಲಿ ಬಲಿಪಶು ಆಗಿದ್ದಾರೆ: ಮಾಜಿ DySP ಅನುಪಮಾ ಶೆಣೈ

    ಇತ್ತೀಚೆಗೆ ಕೇರಳ (Kerala) ಶಾಲೆಯೊಂದರಲ್ಲಿ ಲಾಸ್ಟ್ ಬೆಂಚ್ ಮಾದರಿ ತೆಗೆದುಹಾಕಿ ಯು ಆಕಾರ ಮಾದರಿಯಲ್ಲಿ ಬೆಂಚ್ ಹಾಕಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸದ್ಯ ಇದೇ ಮಾದರಿಯನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿಹಾಳ ಸರ್ಕಾರಿ ಶಾಲೆಯೊಂದು ಅಳವಡಿಸಿಕೊಂಡಿದೆ.

    ಮಕ್ಕಳ ನಡುವೆ ಫಸ್ಟ್ ಬೆಂಚ್, ಲಾಸ್ಟ್ ಬೆಂಚ್ ಎನ್ನುವ ಬೇಧ ಬೇಡವೆಂದು ಯು ಮಾದರಿಯಲ್ಲಿ ಬೆಂಚ್ ಹಾಕಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಮಳೆ ಅವಾಂತರ – ಫ್ಲೈಓವರ್, ರಸ್ತೆಗಳು ಮುಳುಗಡೆ

  • 111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ

    111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ

    -ಶೂ ಮೇಲೆ `ಬೂಟ್ ಪೇ’ ಎಂದು ಬರೆದು `ಕ್ಯೂಆರ್ ಸ್ಕ್ಯಾನ್‌ʼ ಪೋಸ್ಟರ್ ಅಂಟಿಸಿ ಬಿಜೆಪಿ ಟಕ್ಕರ್

    ಬೆಂಗಳೂರು: ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ರಾಜ್ಯ ಸರ್ಕಾರದ (State Govt) ವಿರುದ್ಧ ಬಿಜೆಪಿ (BJP) ಹೊಸ ಕ್ಯಾಂಪೇನ್ ಆರಂಭಿಸಿದೆ.

    ಮಕ್ಕಳ ಶೂ ಮೇಲೆ `ಬೂಟ್ ಪೇ’ ಎಂದು ಬರೆದು `ಕ್ಯೂಆರ್ ಸ್ಕ್ಯಾನ್‌’ ಪೋಸ್ಟರ್ ಮೂಲಕ ಬಿಜೆಪಿ ಟಕ್ಕರ್ ಕೊಟ್ಟಿದೆ. ಕಾಂಗ್ರೆಸ್‌ನ 40% ಫೋನ್ ಪೇ ಮಾದರಿಯಲ್ಲೇ `ಬೂಟ್ ಪೇ’ ಸ್ಕ್ಯಾನ್‌ ಮಾಡಿ ಎಂದು ಸರ್ಕಾರವನ್ನು ಅಣಕಿಸಿದೆ.ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

    ಸಂಪೂರ್ಣ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ ನೀಡಲು ಸಹ ಹಣವಿಲ್ಲ. ಹೀಗಾಗಿ ಶಾಲಾ ಮಕ್ಕಳಿಗೆ ಶೂ ದಾನ ಮಾಡಲು ಬೂಟ್ ಪೇ ಸ್ಕ್ಯಾನ್‌ ಮಾಡಿ ಅಂತ ಟ್ವೀಟ್‌ನಲ್ಲಿ ಸರ್ಕಾರಕ್ಕೆ ಬಿಜೆಪಿ ಮುಖಭಂಗ ಮಾಡಿದೆ.

    ಮಕ್ಕಳ ಶೂ-ಸಾಕ್ಸ್ ಖರೀದಿಗೆ ಬಿಡುಗಡೆಯಾಗಿದ್ದ 111.88 ಕೋಟಿ ರೂ. ಅನುದಾನ ಯಾವ ರಾಜ್ಯದ ಕಾಂಗ್ರೆಸ್ ಚುನಾವಣಾ ಫಂಡ್‌ಗೆ ಬಳಕೆ ಆಯ್ತಾ? ಹಣ ಬಿಡುಗಡೆಯಾದರೂ ದಾನಿಗಳನ್ನು ಹುಡುಕುತ್ತಿದ್ದರೆ ಅನುದಾನ ಯಾರ ಜೇಬು ಸೇರಿರಬಹುದು? ಅಂತ ಬಿಜೆಪಿ ಪ್ರಶ್ನಿಸಿದೆ.ಇದನ್ನೂ ಓದಿ: 15 ಏಷ್ಯನ್ ರಾಷ್ಟ್ರಗಳ ಎದುರು ವಿಜಯಪುರದ ಇತಿಹಾಸ ಅನಾವರಣಗೊಳಿಸಿದ ಡಿಸಿ

  • Chamarajanagar | ಶಿಕ್ಷಕರ ಒಳಜಗಳ ಆರೋಪ – ಮರಿಯಾಲ ಸರ್ಕಾರಿ ಶಾಲೆಯಲ್ಲಿ ಝೀರೋ ಅಡ್ಮಿಷನ್

    Chamarajanagar | ಶಿಕ್ಷಕರ ಒಳಜಗಳ ಆರೋಪ – ಮರಿಯಾಲ ಸರ್ಕಾರಿ ಶಾಲೆಯಲ್ಲಿ ಝೀರೋ ಅಡ್ಮಿಷನ್

    ಚಾಮರಾಜನಗರ: ಶಿಕ್ಷಕರ ಒಳಜಗಳ (Teacher’s Internal Fight) ಹಾಗೂ ಸರಿಯಾಗಿ ಪಾಠ ಪ್ರವಚನ ನಡೆಯದ ಆರೋಪದ ಹಿನ್ನೆಲೆ ಚಾಮರಾಜನಗರ (Chamarajanagar) ತಾಲೂಕಿನ ಮರಿಯಾಲ (Mariyala) ಸ.ಹಿ.ಪ್ರಾ.ಶಾಲೆಯಲ್ಲಿ ಯಾವುದೇ ಅಡ್ಮಿಷನ್ ಆಗಿಲ್ಲ. ಇದರಿಂದ ಇಡೀ ಶಾಲೆ ಖಾಲಿಹೊಡೆಯುತ್ತಿದೆ.

    ಇಬ್ಬರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ, ಏಳು ಕೊಠಡಿಗಳು ಇರುವ ಈ ಸರ್ಕಾರಿ ಶಾಲೆ ಯಾವುದೇ ವಿದ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿದೆ. ಶಿಕ್ಷಕರ ಒಳ ಜಗಳ, ಸರಿಯಾಗಿ ನಡೆಯದ ಪಾಠ ಪ್ರವಚನ ಆರೋಪದಿಂದಾಗಿ ಶಾಲೆ ಆರಂಭವಾಗಿ ನಾಲ್ಕು ದಿನಗಳು ಕಳೆದರೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ. ಸರ್ಕಾರಿ ಶಾಲೆಗೆ ಪ್ರವೇಶ ಪಡೆಯದೇ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್ ಡಿಕ್ಕಿ – ಇಬ್ಬರು ಸಾವು

    ಸಮರ್ಪಕ ಬಿಸಿಯೂಟ ನೀಡಲ್ಲ, ಕುಡಿಯುವ ನೀರಿಲ್ಲ, ಸ್ವಚ್ಛತೆ ಇಲ್ಲ, ಶಿಕ್ಷಕರ ಜಗಳದಿಂದ ಶಾಲೆಯ ವಾತಾವರಣ ಹದಗೆಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕಳೆದ ವರ್ಷ 26 ವಿದ್ಯಾರ್ಥಿಗಳಿದ್ದರು. ಈ ಬಾರಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಮೂರು ತಿಂಗಳ ಹಿಂದೆ ಮುಖ್ಯ ಶಿಕ್ಷಕಿ ಸುಶೀಲಾ ಪೊಲೀಸ್ ರಕ್ಷಣೆ ಪಡೆದಿದ್ದರು. ತಮ್ಮೂರ ಶಾಲೆಗೆ ನಿತ್ಯ ಪೊಲೀಸ್ ಕಾವಲಿನಿಂದ ಪೋಷಕರು ಬೇಸತ್ತಿದ್ದರು. ಸರ್ಕಾರಿ ಶಾಲೆಯ ದುರಾವಸ್ಥೆಯಿಂದ ಆಕ್ರೋಶಗೊಂಡು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧದಲ್ಲಿ ಮನಸ್ತಾಪ – ನಿವೃತ್ತ ಇನ್ಸ್‌ಪೆಕ್ಟರ್ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟುಹಾಕಿದ ಮಹಿಳೆ

    ಉಳ್ಳವರು ಖಾಸಗಿ ಶಾಲೆಗೆ ಸೇರಿಸುತ್ತಾರೆ, ಬಡವರು ಕೂಲಿ ಕಾರ್ಮಿಕರು ಏನು ಮಾಡಬೇಕು? ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡಿ ಹದಗೆಟ್ಟಿರುವ ಸರ್ಕಾರಿ ಶಾಲೆಯ ಚಿತ್ರಣ ಬದಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ

  • SSLC ಫೇಲ್ ಆದ್ರೂ ಶಾಲೆಗೆ ಹೋಗ್ಬೋದು – ರೂಲ್ಸ್ ಏನು?

    SSLC ಫೇಲ್ ಆದ್ರೂ ಶಾಲೆಗೆ ಹೋಗ್ಬೋದು – ರೂಲ್ಸ್ ಏನು?

    ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ನಡೆಯುವ 3 ಪರೀಕ್ಷೆಗಳಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ (Karnataka Government) ಸಿಹಿಸುದ್ದಿಯೊಂದನ್ನು ನೀಡಿದೆ.

    ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳು ಇಚ್ಛೆಪಟ್ಟರೆ ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗಿ ಮತ್ತೆ ಕಲಿಯುವ ಅವಕಾಶ ನೀಡಿದೆ. ಈ ಮೂಲಕ ಇದೇ ವರ್ಷದಿಂದ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ನೀಡಿದೆ.ಇದನ್ನೂ ಓದಿ: IPL Final – ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದ್ರೆ ಚಾಂಪಿಯನ್‌ ಯಾರು?

    ಈ ವರ್ಷದಿಂದ ಅವಕಾಶ ನೀಡುತ್ತಿದ್ದು, ಕೆಲವು ನಿಯಮಗಳನ್ನು ಜಾರಿ ಮಾಡಿದೆ.

    ನಿಯಮಗಳೇನು?
    >ಎಸ್‌ಎಸ್‌ಎಲ್‌ಸಿಯಲ್ಲಿ ನಡೆಯೋ 3 ಪರೀಕ್ಷೆಯಲ್ಲಿ ಫೇಲ್ ಆಗೋ ವಿದ್ಯಾರ್ಥಿ ಮತ್ತೆ ಶಾಲೆಗೆ ಹೋಗಿ ಕಲಿಯಬಹುದು.
    > ಸರ್ಕಾರಿ ಶಾಲೆಯಲ್ಲಿ ಮಾತ್ರ ಈ ಅವಕಾಶ ಸಿಗಲಿದೆ
    > ಮತ್ತೆ ಓದೋಕೆ ಇಷ್ಟಪಡುವ ವಿದ್ಯಾರ್ಥಿ ಶಾಲೆಗೆ ಹೋಗಿ ಮಾಹಿತಿ ಕೊಟ್ಟು ಮರು ದಾಖಲಾತಿ ಆಗಬೇಕು.
    > ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯಂತೆ ದಾಖಲಾತಿ ಆಗಬೇಕು.
    > ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳನ್ನ ಮತ್ತೆ ದಾಖಲಾತಿ ಆಗುವ ವಿದ್ಯಾರ್ಥಿಗೆ ಕೊಡಲಾಗುತ್ತದೆ
    > ಬೇರೆ ಮಕ್ಕಳಂತೆ ತರಗತಿಯಲ್ಲಿ ಕೂತು ಪಾಠ ಕೇಳಬಹುದು.ಇದನ್ನೂ ಓದಿ: ಸಂಜೆ ಟೀ ಜೊತೆ ಸವಿಯಿರಿ ಕ್ರಿಸ್ಪಿ ಬೇಬಿಕಾರ್ನ್ ಫ್ರೈ

  • ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ!

    ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ!

    ಬೆಳಗಾವಿ: ಸರ್ಕಾರಿ ಶಾಲಾ ಮಕ್ಕಳು (Govt School Students) ಬಸ್ಸಿನಲ್ಲಿ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಆದರೆ ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಮಕ್ಕಳು ವಿಮಾನದಲ್ಲಿ ಪ್ರವಾಸ (Flight Tour) ಮಾಡಿದ್ದಾರೆ.

    ಮಕ್ಕಳ ಹಾಜರಾತಿ ಹೆಚ್ಚಿಸುವ ಸಲುವಾಗಿ ಶಿಕ್ಷಕ ಪ್ರಕಾಶ್ ದೇವಣ್ಣವರ್ ಸುಮಾರು ಎರಡೂವರೆ ಲಕ್ಷ ರೂ. ಖರ್ಚು ಮಾಡಿ 17 ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ನೀಡಿದ್ದಾರೆ.

    ವಿದ್ಯಾರ್ಥಿಗಳಿಂದ ತಲಾ ಮೂರು ಸಾವಿರ ರೂ. ಹಣ ಪಡೆದ ಶಿಕ್ಷಕ ಉಳಿದ ಹಣವನ್ನು ತಾವೇ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ: ಸುಮಲತಾ

    ಗುರುವಾರ ಸಂಜೆ ಬೆಳಗಾವಿಯಿಂದ (Belagavi) ಹೈದರಾಬಾದ್ (Hyderabad) ಹೋಗಿರುವ ಮಕ್ಕಳು ರಾಮೋಜಿ ಫಿಲ್ಮ್ ಸಿಟಿ, ಚಾರ್ ಮಿನಾರ್, ಗೋಲ್ಕೊಂಡ ಸೇರಿ ಹಲವು ಸ್ಥಳಗಳನ್ನು ನೋಡಿದ್ದಾರೆ. ಶನಿವಾರ  ಸಂಜೆ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಬೆಳಗಾವಿಗೆ ವಾಪಸ್‌ ಆಗಲಿದ್ದಾರೆ.

     

  • ಬೆಂಗಳೂರಿನ ಸರ್ಕಾರಿ ಶಾಲೆಗೆ ‘ಪಬ್ಲಿಕ್’ ಬೆಳಕು ಕಾಯಕಲ್ಪ

    ಬೆಂಗಳೂರಿನ ಸರ್ಕಾರಿ ಶಾಲೆಗೆ ‘ಪಬ್ಲಿಕ್’ ಬೆಳಕು ಕಾಯಕಲ್ಪ

    ಬೆಂಗಳೂರು: ಸರ್ಕಾರಿ ಶಾಲೆ (Govt School) ಬೆಳೆಯಬೇಕು, ಸರ್ಕಾರಿ ಶಾಲೆ ಉಳಿಬೇಕು ಅಂತಾ ಹೇಳೋ ಸರ್ಕಾರ, ಅದೇ ಸರ್ಕಾರಿ ಶಾಲೆಗಳ ನಿರ್ವಹಣೆ ಬಗ್ಗೆ ಮಾತ್ರ ಗಮನ ಇಲ್ಲ. ಇಂತಹದ್ದೆ ಪರಿಸ್ಥಿತಿ ನಡುವೆ, ಜೀವ ಭಯದಿ ಪಾಠ ಕಲಿಯುವ ಸ್ಥಿತಿಯಲ್ಲಿದ್ದ ಮಕ್ಕಳಿಗೆ ಪಬ್ಲಿಕ್ ಟಿವಿ ಮುಕ್ತಿ ನೀಡಿದ್ದು, ಈ ಮೂಲಕ ಸರ್ಕಾರಿ ಶಾಲೆಗೆ ಹೊಸ ರೂಪ ಸಿಕ್ಕಂತಾಗಿದೆ.

    ಹೌದು. ಸರ್ಕಾರದಿಂದ ಪ್ರತಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲೂ ಮಕ್ಕಳಿಗೆ ಕ್ವಾಲಿಟಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಗ್ಲೀಷ್ ಮಾಧ್ಯಮದ ಪಬ್ಲಿಕ್ ಶಾಲೆಗಳನ್ನ ಆರಂಭ ಮಾಡಲಾಗಿದೆ. ಅದೇ ರೀತಿ ಈ ಶಾಲೆ ಕೂಡ. ಅತ್ತಿಗುಪ್ಪೆ ಸರ್ಕಾರಿ ಶಾಲೆಯಾಗಿದ್ದು, 350ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ನಿತ್ಯ ಪೋಷಕರು ಜೀವವನ್ನ ಕೈಯಲ್ಲಿಡಿದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಸ್ಥಿತಿ ಇತ್ತು. ಕಾರಣ ಬೀಳುವ ಹಂತದಲ್ಲಿದ್ದ ಕಾಂಪೌಂಡ್, ಸ್ವಚ್ಛತೆ ಇಲ್ಲದ ಶೌಚಾಲಯ, ಒಣಗಿ ನಿಂತ ಮರ ಈ ಎಲ್ಲಾದರ ನಡುವೆಗೂ ಮಕ್ಕಳು ಪಾಠ ಕಲಿಯುವ ಸ್ಥಿತಿ ಇತ್ತು.

    ಈ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಸುದ್ದಿ ಪ್ರಸಾರ ಮಾಡಿದ್ದ ಪಬ್ಲಿಕ್ ಟಿವಿ ಶಿಕ್ಷಣ ಇಲಾಖೆ ಗಮನಕ್ಕೆ ತಂದು ಇದನ್ನ ಸರಿಪಡಿಸುವಂತೆ ಒತ್ತಾಯ ಮಾಡಲಾಗಿತ್ತು. ಜೊತೆಗೆ ಸ್ಥಳೀಯ ಶಾಸಕ ಕೃಷ್ಣಪ್ಪರ ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಸುದ್ದಿ ಪ್ರಸಾರವಾದ ಎರಡೇ ತಿಂಗಳಲ್ಲಿ ಕಾಂಪೌಂಡ್ ಕಾಮಗಾರಿ ಮುಕ್ತಾಯಗೊಳಿಸಿ, ಶೌಚಾಲಯ ದುರಸ್ತಿ ಕಾರ್ಯಕೂಡ ಆರಂಭವಾಗಿದೆ. ಇನ್ನೂ ಮಕ್ಕಳನ್ನ ಶಾಲೆಗೆ ಕಳುಹಿಸಿ ದುಗುಡದಲ್ಲೇ ಕಾಲ ಕಳೆಯುತ್ತಿದ್ದ ಪೋಷಕರು, ಸದ್ಯ ಪಬ್ಲಿಕ್ ಟಿವಿ ಇಂಪ್ಯಾಕ್ಟ್ ಗೆ (Public TV Impact) ಧನ್ಯವಾದ ತಿಳಿಸುತ್ತಿದ್ದು, ಪಬ್ಲಿಕ್ ಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಮುಗಿದು ಕೇಳಿಕೊಳ್ತೀನಿ, ಸಿಎಂ ಹೇಳಿಕೆ ನೀಡುವುದನ್ನು ನಿಲ್ಲಿಸಿ: ನೇಹಾ ತಂದೆ ನಿರಂಜನ್‌ ಕಿಡಿ

    ಒಟ್ಟಾರೆ ಸರ್ಕಾರಿ ಶಾಲೆ ಅಂದ ತಕ್ಷಣ ಮೂಗುಮುರಿಯೋ ಸಿಟಿ ಮಂದಿ ಮಧ್ಯೆ ಒಳ್ಳೆಯ ಶಿಕ್ಷಣ ಸಿಗಲಿ ಅಂತಾ ಇಲ್ಲಿಗೆ ಮಕ್ಕಳನ್ನ ಕಳಿಸೋ ಪೆÇೀಷಕರಿಗೆ ಇನ್ಮುಂದೆಯೂ ಯಾವುದೇ ಆತಂಕ ಇಲ್ಲದೇ ತಮ್ಮ ಮಕ್ಕಳನ್ನ ಈ ಸರ್ಕಾರಿ ಶಾಲೆಗೆ ಕಳುಹಿಸಬಹದಾಗಿದ್ದು, ಸರ್ಜಾರ ಕೂಡ ಉಳಿದ ಶಾಲೆಗಳ ವಿಚಾರವಾಗಿ ಹೀಗೆ ಎಚ್ಚೆತ್ತುಕೊಂಡರೆ ಸರ್ಕಾರಿ ಶಾಲೆಗಳು ಕೂಡ ಮಕ್ಕಳ ಅಭಾವ ಎದುರಿಸೋದು ತಪ್ಪಲಿದೆ.

  • ಸರ್ಕಾರಿ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ಚರ್ಚಿಸಿ ತೀರ್ಮಾನ: ಮಧು ಬಂಗಾರಪ್ಪ

    ಸರ್ಕಾರಿ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ಚರ್ಚಿಸಿ ತೀರ್ಮಾನ: ಮಧು ಬಂಗಾರಪ್ಪ

    ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ (Dress Code for Gvt School Teachers) ಜಾರಿಗೆ ತರುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Banagarappa) ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ಅವಧಿಯಲ್ಲಿ ಕಾಂಗ್ರೆಸ್‍ನ ಮಂಜುನಾಥ್ ಭಂಡಾರಿ ಪ್ರಶ್ನೆ ಕೇಳಿದರು.

    ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಡ್ರೆಸ್ ಜಾರಿ ಮಾಡಲು ಸರ್ಕಾರ ಕ್ರಮವಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಸಂಗೀತ ಮತ್ತು ಚಿತ್ರಕಲೆ ಶಿಕ್ಷಕರಲ್ಲಿ 1200 ಹುದ್ದೆ ಖಾಲಿ ಇದೆ. ಇವುಗಳನ್ನ ತುಂಬಬೇಕು. ಹೈಸ್ಕೂಲ್ ನಲ್ಲಿ ಕ್ಲರ್ಕ್ ಹುದ್ದೆ ಖಾಲಿ ಇರೋದ್ರಿಂದ ಮುಖ್ಯ ಶಿಕ್ಷಕರಿಗೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಖಾಲಿ ಇರೋ ಕ್ಲರ್ಕ್ ಹುದ್ದೆ ಭರ್ತಿ ಮಾಡಬೇಕು ಅಂತ ಮಂಜುನಾಥ ಭಂಡಾರಿ (Manjunath Bhandary) ಒತ್ತಾಯ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಕರಿಗೆ ಡ್ರೆಸ್‍ಕೋಡ್ ಜಾರಿ ಮಾಡೋ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಅಂತ ತಿಳಿಸಿದರು. ಈಗಾಗಲೇ ಶಾಲೆಗಳಿಗೆ ಸಮವಸ್ತ್ರ 83% ತಲುಪಿದೆ. ಉಳಿದ ಸಮವಸ್ತ್ರ ಬೇಗ ತಲುಪಿಸುತ್ತೇವೆ. ಖಾಲಿ ಇರೋ ವಿಶೇಷ ಶಿಕ್ಷಕರ ಹುದ್ದೆ ಭರ್ತಿ ಮಾಡ್ತೀವಿ. ಸಂಗೀತ ಮತ್ತು ಚಿತ್ರಕಲೆ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ. ಹೈಸ್ಕೂಲ್ ನಲ್ಲಿ ಕ್ಲರ್ಕ್ ಪೋಸ್ಟ್ ಕೊಡಲಾಗಿದೆ. ಖಾಲಿ ಇರೋ ಕ್ಲರ್ಕ್ ಪೋಸ್ಟ್ ಬೇಗ ತುಂಬಲು ಕ್ರಮವಹಿಸುತ್ತೇವೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]