Tag: govt property

  • ಕೋಲಾರ ಜಿಲ್ಲಾಡಳಿತದಿಂದಲೂ ವಕ್ಫ್‌ಗೆ ಸರ್ಕಾರಿ ಜಮೀನು ಮಂಜೂರು ಆರೋಪ

    ಕೋಲಾರ ಜಿಲ್ಲಾಡಳಿತದಿಂದಲೂ ವಕ್ಫ್‌ಗೆ ಸರ್ಕಾರಿ ಜಮೀನು ಮಂಜೂರು ಆರೋಪ

    – ಸರ್ಕಾರಿ ಶಾಲೆ, ದೇವಾಲಯ, ಸ್ಮಶಾನಕ್ಕೆ ಮೀಸಲಿಟ್ಟ ಜಮೀನು ಮಂಜೂರು

    ಕೋಲಾರ: ರಾಜ್ಯದಲ್ಲಿ ಈಗಾಗಲೇ ವಕ್ಫ್ ವಿವಾದ ತೀವ್ರಗೊಂಡಿದ್ದು, ಕೋಲಾರದಲ್ಲೂ ಸರ್ಕಾರಿ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಮಂಜೂರು ಮಾಡಿರುವ ಆರೋಪಗಳು ಕೇಳಿ ಬಂದಿವೆ. ಅದರಂತೆ ಗ್ರಾಮಗಳಲ್ಲಿ ಐದು ಗುಂಟೆಯಿಂದ ನಾಲ್ಕೈದು ಎಕರೆವರೆಗೆ ಮಂಜೂರು ಮಾಡಿರುವ ಗಂಭೀರ ಆರೋಪ ಹೊರಿಸಲಾಗಿದೆ.

    ಕೋಲಾರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಸರ್ಕಾರಿ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆಯ ಹತ್ತಾರು ಗ್ರಾಮಗಳಲ್ಲಿ ಮುಸ್ಲಿಂ ಪ್ರಾರ್ಥನಾ ಮಂದಿರ ಹಾಗೂ ಖಬರಾಸ್ಥಾನ್‌ಗಾಗಿ ಮಸೀದಿಗೆ ಜಾಗ ಮೀಸಲು ಮಾಡಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಕೋಲಾರ ತಾಲೂಕು, ಮಾಲೂರು, ಶ್ರೀನಿವಾಸಪುರ, ಮುಳಬಾಗಿಲು ತಾಲೂಕುಗಳಲ್ಲಿ ಸರ್ಕಾರಿ ಜಾಗ ಮಂಜೂರು ಮಾಡಿದ್ದು, ಕೋಲಾರ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷಾ ಅಧಿಕಾರ ವಹಿಸಿಕೊಂಡ ನಂತರ ಜಾಗ ಮೀಸಲು ಎಂಬ ಆರೋಪ ಕೇಳಿ ಬಂದಿದೆ. ಗ್ರಾಮಗಳಲ್ಲಿ ಐದು ಗುಂಟೆಯಿಂದ ನಾಲ್ಕೈದು ಎಕರೆವರೆಗೆ ಮಂಜೂರು ಮಾಡಿರುವ ಗಂಭೀರ ಆರೋಪ ಹೊರಿಸಲಾಗಿದೆ. ಅದರಂತೆ 2023ರ ನಂತರ ಅಂದರೆ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಅಧಿಕಾರ ವಹಿಸಿಕೊಂಡ ನಂತರ ನೂರಾರು ಆಸ್ತಿ ವಕ್ಫ್ ಬೋರ್ಡ್‌ಗೆ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ದೀಪಾವಳಿ ಹಿನ್ನೆಲೆ ಇಂದು 250ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರ- ರೈಲ್ವೆ ಇಲಾಖೆ

    ಇನ್ನೂ ಮುಸ್ಲಿಮರು ವಾಸವಿಲ್ಲದೆ ಇರುವ ಗ್ರಾಮಗಳಿಗೂ ವಕ್ಫ್ ಬೋರ್ಡ್‌ಗೆ ಜಾಗ ಮಂಜೂರು ಮಾಡಿರುವ ಆರೋಪ ಜಿಲ್ಲಾಧಿಕಾರಿ ವಿರುದ್ಧ ಕೇಳಿ ಬಂದಿದೆ. ಕೋಲಾರ ನಗರದಲ್ಲೂ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿಗಳು ವಕ್ಫ್ ಬೋರ್ಡ್‌ನ ಹೆಸರಿಗೆ ಮೀಸಲಿರಿಸಲಾಗಿದೆ. ಕೋಲಾರ ನಗರ ಹಾಗೂ ಗ್ರಾಮೀಣ ಭಾಗದ ಹಲವೆಡೆ ಸರ್ಕಾರಿ ಜಮೀನನ್ನು ವಕ್ಫ್ ಬೋರ್ಡ್‌ಗೆ ಖಾತೆ ಮಾಡುವಂತೆ ತಮ್ಮ ಕಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಸರ್ಕಾರಿ ಜಾಗದಲ್ಲಿ ಶಾಲೆಗಳನ್ನು ಕಟ್ಟಿದ್ದರೂ ಸಹ ಅವುಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಖಾತೆ ಮಾಡಲಾಗಿದೆ ಎಂಬ ಆರೋಪವಿದೆ. ಇದನ್ನೂ ಓದಿ: MUDA Case; ಮುಡಾ ಮಾಜಿ ಆಯುಕ್ತ ನಟೇಶ್‌ ED ವಶಕ್ಕೆ

    ಆದರೆ ಆದ್ಯತೆ ಮೇರೆಗೆ ಶಾಲೆಗಳಿಗೆ, ಅಂಗನವಾಡಿ, ಸ್ಮಶಾನಗಳಿಗೆ ನಿವೇಶನ ನೀಡಲಾಗುತ್ತಿದೆ. ನಾವು ಯಾವುದೇ ಖಾತೆಗಳನ್ನು ಮಾಡುತ್ತಿಲ್ಲ. ಇ.ಒ, ಆರ್.ಐ, ತಹಶೀಲ್ದಾರ್ ಅವರು ಮತ್ತು ನಗರಸಭೆ ಆಯುಕ್ತರು ಖಾತೆಗಳನ್ನು ಮಾಡುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಯಾವುದೇ ಖಾತೆ ಮಾಡುವುದಿಲ್ಲ ಎಂಬುದು ಜಿಲ್ಲಾಧಿಕಾರಿಗಳ ಮಾತು. ಇನ್ನೂ ಈ ಸಂಬಂಧ ಮಾತನಾಡಿರುವ ಶಾಸಕ ಕೊತ್ತೂರು ಮಂಜುನಾಥ್ ಸರ್ಕಾರಿ ಶಾಲೆ, ದೇವಾಲಯ, ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ವಕ್ಫ್ ಮಂಡಳಿಗೆ ಮಂಜೂರು ಮಾಡಿದರೆ ಸಿಎಂ ಬಳಿ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಣೆ – ದೆಹಲಿ, ಪಶ್ಚಿಮ ಬಂಗಾಳ ಜನರಿಗೆ ಸಿಗಲ್ಲ ಸೌಲಭ್ಯ

  • ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಬೆಂಗಳೂರು: ಮಠದ ಜಾಗವನ್ನು ಹೊಡೆಯಲು ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ಪ್ರಯತ್ನಿಸಿದ್ದಾಯ್ತು. ಇದೀಗ ಸಚಿವ ಕೆಜೆ ಜಾರ್ಜ್ ಕ್ಷೇತ್ರದಲ್ಲಿ ಬರುವ ಶ್ರೀರಾಮ ಮಂದಿರದ ಟ್ರಸ್ಟ್ ಗೆ ಸೇರಿದ ಜಾಗವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಅಧಿಕಾರಿಗಳು ಮುಂದಾಗಿರೋದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಕಾಚರಕನಹಳ್ಳಿಯಲ್ಲಿರುವ ರಾಮಮಂದಿರದ ಸುತ್ತಮುತ್ತಲಿನ ಜಾಗ ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಗೆ ಸೇರಿದ್ದು ಅಂತ ಕೋರ್ಟ್ ಆದೇಶಿಸಿದೆ. ಆದ್ರೆ ಈ ಜಾಗ ಸರ್ಕಾರದ್ದು ಅಂತ ತಹಶೀಲ್ದಾರ್ ಮತ್ತು ಅಧಿಕಾರಿಗಳು ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ.

    ಈ ಕುರಿತು ಆದೇಶ ಎಲ್ಲಿದೆ ಅಂತ ಪ್ರಶ್ನಿಸಿದ್ರೆ ನಮಗೆ ಮೇಲಿಂದ ಒತ್ತಡ ಇದೆ ಅಂತ ಹೇಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ದೇವಸ್ಥಾನದ ಟ್ರಸ್ಟಿಗಳು ಮತ್ತು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿವ ಕೆಜೆ ಜಾರ್ಜ್ ಅವರೇ ಪರೋಕ್ಷವಾಗಿ ಒತ್ತಡ ಹೇರಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ ಅಂತ ಟ್ರಸ್ಟಿಗಳು ಆರೋಪಿಸಿದ್ದಾರೆ.

    ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ನಮಗೆ ಯಾರ ಒತ್ತಡವೂ ಇಲ್ಲ ಅಂತ ಹೇಳುತ್ತಿದ್ದಾರೆ. ಆದ್ರೆ ದಾಖಲೆಗಳನ್ನು ಕೇಳಿದ್ರೆ ಮಾತ್ರ ತೋರಿಸಲು ಮುಂದಾಗುತ್ತಿಲ್ಲ.

  • ಕಚೇರಿಗೆ ನುಗ್ಗಿ ತಹಶೀಲ್ದಾರ್‍ಗೆ ಬೆಂಗ್ಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಧಮ್ಕಿ

    ಕಚೇರಿಗೆ ನುಗ್ಗಿ ತಹಶೀಲ್ದಾರ್‍ಗೆ ಬೆಂಗ್ಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಧಮ್ಕಿ

    ಬೆಂಗಳೂರು: ಒತ್ತುವರಿ ತೆರವು ವಿಚಾರವಾಗಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಹಾಗು ಜಿಲ್ಲಾ ಪಂಚಾಯತ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಆನೇಕಲ್ ನಲ್ಲಿ ನಡೆದಿದೆ.

    ಬೆಂಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮುನಿರಾಜು ಹಾಗೂ ಆನೇಕಲ್ ತಾಲೂಕು ತಹಶೀಲ್ದಾರ್ ಆಶಾ ಪರ್ವಿನ್ ನಡುವೆ ಮಾತಿನ ಚಕಮಕಿ ನಡೆದಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಗ್ರಾಮದ ಬಳಿ ಸರ್ವೇ ನಂ.24 ರ ಒಟ್ಟು 1.5 ಗುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುವುದು ಸರ್ವೆಯಲ್ಲಿ ಸಾಬೀತಾದ ಹಿನ್ನಲೆಯಲ್ಲಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಜಾಗವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸೇರಿ ಒಟ್ಟು 10 ಮಂದಿ ಒತ್ತುವರಿ ಮಾಡಿಕೊಂಡಿದ್ದರು. ತಕ್ಷಣ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ತೆರುವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್‍ನಲ್ಲಿ ಸೂಚಿಸಿದ್ದರು.

    ಈ ನೋಟಿಸ್ ವಿಚಾರವಾಗಿ ತಾಲೂಕು ಕಚೇರಿಗೆ ಆಗಮಿಸಿ ಜಿಲ್ಲಾ ಪಂಚಾಯತ್ ಅಧಕ್ಷರು ಹಾಗೂ ಅವರ ಬೆಂಬಲಿಗರು ತಹಶೀಲ್ದಾರ್ ಆಶಾ ಪರ್ವಿನ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಆಶಾ, ಯಾರೇ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡರೂ ಅದನ್ನು ತೆರವುಗೊಳಿಸುವುದು ನಮ್ಮ ಕರ್ತವ್ಯ. ಈಗಾಗಲೇ ವಿವಾದಿತ ಸ್ಥಳದಲ್ಲಿ ಎರಡು ಬಾರಿ ಸರ್ವೇ ಕಾರ್ಯವನ್ನು ನಡೆಸಲಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಈ ವರ್ತನೆ ಸಮಂಜಸವಲ್ಲ. ಅಲ್ಲದೇ ನಮ್ಮ ಅಧಿಕಾರಿಗಳ ಜೊತೆಯೂ ಅನುಚಿವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.

    ಇನ್ನೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಾದವೇ ಬೇರೆಯಾಗಿದೆ. ಈ ಜಾಗ ನಮ್ಮ ತಾತನ ಕಾಲದಿಂದಲೂ ಬಂದಿರುವ ಆಸ್ತಿಯಾಗಿದ್ದು, ತಹಶೀಲ್ದಾರರು ಕೆಲವರ ಚಿತಾವಣೆಯ ಮೇರೆಗೆ ಸುಖಾಸುಮ್ಮನೆ ಕಿರುಕುಳವನ್ನು ನೀಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದರು.