Tag: govt

  • 2047ಕ್ಕೆ ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಗೆ ಸರ್ಕಾರ ಮಾಸ್ಟರ್‌ಪ್ಲಾನ್‌

    2047ಕ್ಕೆ ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಗೆ ಸರ್ಕಾರ ಮಾಸ್ಟರ್‌ಪ್ಲಾನ್‌

    ನವದೆಹಲಿ: 2047 ಕ್ಕೆ ಹೆದ್ದಾರಿಗಳು (Highway) ಮತ್ತು ಎಕ್ಸ್‌ಪ್ರೆಸ್‌ವೇಗಳ (Expressway) ಅಭಿವೃದ್ಧಿಗಾಗಿ ಸರ್ಕಾರವು ಮಾಸ್ಟರ್ ಪ್ಲಾನ್‌ ಮಾಡುತ್ತಿದೆ. ಇದು ಟ್ರಕ್‌ಗಳು ಒಂದು ದಿನದಲ್ಲಿ 800 ಕಿ.ಮೀ ಕ್ರಮಿಸಲು ಸಾಧ್ಯವಾಗಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಸ್ತುತ ಭಾರತದಲ್ಲಿ ಟ್ರಕ್‌ಗಳು ಒಂದು ದಿನದಲ್ಲಿ 300 ರಿಂದ 350 ಕಿಮೀಗಳನ್ನು ಕ್ರಮಿಸುತ್ತವೆ. ಇದು ಯುಎಸ್ ಮತ್ತು ಯುರೋಪ್‌ನ ಅಂಕಿ-ಅಂಶಗಳಿಗಿಂತ ಕಡಿಮೆಯಾಗಿದೆ. ಯುರೋಪ್‌ನಲ್ಲಿ ದಿನಕ್ಕೆ 750 ಕಿಮೀ ಆಗಿದ್ದರೆ, ಯುಎಸ್‌ನಲ್ಲಿ ಚಾಲಕರು ಗಂಟೆಗೆ 100 ಕಿ.ಮೀ ವೇಗದಲ್ಲಿ ದಿನಕ್ಕೆ 1100-1200 ಕಿ.ಮೀ ವರೆಗೆ ಕಾನೂನುಬದ್ಧವಾಗಿ ಚಾಲನೆ ಮಾಡಬಹುದು. ಎಕ್ಸ್‌ಪ್ರೆಸ್‌ವೇಗಳು ಮತ್ತು ಹೊಸ ಹೆದ್ದಾರಿಗಳೊಂದಿಗೆ ವೇಗದ ಹೆಚ್ಚಳವು ಲಾಜಿಸ್ಟಿಕ್ಸ್ ವೆಚ್ಚವನ್ನು 3-4% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಇತ್ತೀಚಿನ ಅಧ್ಯಯನದ ಪ್ರಕಾರ, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER), ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಮತ್ತು ತಜ್ಞರೊಂದಿಗೆ ಸಮಾಲೋಚಿಸಿ ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚಗಳು ಒಟ್ಟು ಆರ್ಥಿಕ ಉತ್ಪಾದನೆಯ ಶೇ.7.8% ರಿಂದ 8.9 ರ ನಡುವೆ ಇರುತ್ತದೆ. ಲಾಜಿಸ್ಟಿಕ್ಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, 2030 ರ ವೇಳೆಗೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ವಿಶ್ವ ಬ್ಯಾಂಕ್‌ನ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕ (LPI) ಶ್ರೇಯಾಂಕವನ್ನು ಸುಧಾರಿಸುವ ಉದ್ದೇಶದಿಂದ ಸರ್ಕಾರವು ಕಳೆದ ಸೆಪ್ಟೆಂಬರ್‌ನಲ್ಲಿ ಲಾಜಿಸ್ಟಿಕ್ಸ್ ನೀತಿಯನ್ನು ಹೊರತಂದಿತ್ತು.

    2047 ರ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳ ಜಾಲದ ಅಭಿವೃದ್ಧಿಗಾಗಿ ಮಾಸ್ಟರ್‌ಪ್ಲಾನ್ ದೇಶದ ರಾಷ್ಟ್ರೀಯ ಹೆದ್ದಾರಿಗಳ ಒಟ್ಟಾರೆ ಚೌಕಟ್ಟನ್ನು ಬಹುಮುಖವಾಗಿ ಹೆಚ್ಚಿಸುತ್ತದೆ ಎಂದು ಅಧಿಕಾರಿ ಹೇಳಿದರು.  ಇದನ್ನೂ ಓದಿ: ಅರವಿಂದ್‌ ಕೇಜ್ರಿವಾಲ್‌ 7 ದಿನಗಳ ಕಾಲ ಇ.ಡಿ ಕಸ್ಟಡಿಗೆ

    ಮಾಸ್ಟರ್‌ಪ್ಲಾನ್ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಸಿದ್ಧಪಡಿಸಿದ ಬ್ರಾಡರ್ ವಿಷನ್ 2047 ರ ಭಾಗವಾಗಿದೆ. ಈ ಯೋಜನೆಯಡಿ 50,000 ಕಿಮೀ ‌ಹೆದ್ದಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇಗಳ ಜೋಡಣೆಯು ದೇಶದ ಯಾವುದೇ ಸ್ಥಳದಿಂದ ಕೇವಲ 100-125 ಕಿ.ಮೀ. ಆಗಿರುತ್ತದೆ. ಪ್ರಸ್ತುತ ದೇಶದಲ್ಲಿ ಎಕ್ಸ್‌ಪ್ರೆಸ್‌ವೇಗಳ ಒಟ್ಟು ಉದ್ದ 2913 ಕಿ.ಮೀ. ಆಗಿರುತ್ತದೆ. ದೇಶದಲ್ಲಿ ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಉದ್ದ 1.46 ಲಕ್ಷ ಕಿ.ಮೀ ಆಗಿದ್ದು, ಭಾರತ್‌ಮಾಲಾ ನಂತಹ ಚಾಲ್ತಿಯಲ್ಲಿರುವ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಎಕ್ಸ್‌ಪ್ರೆಸ್‌ವೇಗಳು ಮತ್ತು ವಿಸ್ತರಣೆಗಳನ್ನು ಪೂರ್ಣಗೊಳಿಸುವುದರಿಂದ ಒಟ್ಟು ಉದ್ದವು 2 ಲಕ್ಷ ಕಿಮೀ ಮೀರುತ್ತದೆ.

    ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳ ಹೊರತಾಗಿ, ಅಸ್ತಿತ್ವದಲ್ಲಿರುವ ಹೆದ್ದಾರಿಗಳಲ್ಲಿ ಸಾಮರ್ಥ್ಯ ವರ್ಧನೆಗೆ ಸರ್ಕಾರವು ಗಮನಹರಿಸಿದೆ. 2014 ರಲ್ಲಿ 30% ಇದ್ದ 2 ಲೇನ್ ಅಗಲಕ್ಕಿಂತ ಕಡಿಮೆ ಇರುವ ಹೆದ್ದಾರಿಗಳ ಪಾಲು 2023 ರಲ್ಲಿ 10% ಕ್ಕೆ ಇಳಿದಿದೆ. ಅವುಗಳ ಒಟ್ಟಾರೆ ಉದ್ದವು 2014 ರಲ್ಲಿ 27,517 ಕಿಮೀ ನಿಂದ 14,850 ಕಿಮೀಗೆ ಇಳಿದಿದೆ.

    ಎರಡು ಲೇನ್‌ಗಳು ಅಥವಾ ಅದಕ್ಕಿಂತ ಹೆಚ್ಚು ಆದರೆ 4 ಲೇನ್‌ಗಳಿಗಿಂತ ಕಡಿಮೆ ಇರುವ ಹೆದ್ದಾರಿಗಳ ಪಾಲು 58% ಅಥವಾ 85,096 ಕಿಮೀಗೆ ಏರಿದೆ. ನಾಲ್ಕು ಲೇನ್‌ಗಳು ಅಥವಾ ಅದಕ್ಕಿಂತ ಹೆಚ್ಚಿನ ಹೆದ್ದಾರಿಗಳ ಉದ್ದವು 46,179 ಕಿಮೀಗೆ ಏರಿದೆ. ಇದು ಒಟ್ಟು 32% ಆಗಿದೆ, ಇದು 2014 ರಲ್ಲಿ 18,371 ಕಿಮೀ ಅಥವಾ 20% ರಿಂದ ಹೆಚ್ಚಾಗಿದೆ.

  • ಸರ್ಕಾರದಿಂದ ಗುಡ್‍ನ್ಯೂಸ್- ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಕರ್ನಾಟಕ ಯಾತ್ರಿ ನಿವಾಸ

    ಸರ್ಕಾರದಿಂದ ಗುಡ್‍ನ್ಯೂಸ್- ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಕರ್ನಾಟಕ ಯಾತ್ರಿ ನಿವಾಸ

    ಬೆಂಗಳೂರು: ಇಡೀ ರಾಷ್ಟ್ರವೇ ರಾಮನೂರಿನಲ್ಲಿ ರಾಮನ ಮಂದಿರಕ್ಕಾಗಿ (Ayodhya Ram Mandir) ಕಾಯುತ್ತಿದೆ. ಆ ಕ್ಷಣಗಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ. ಈ ಸಂದರ್ಭದಲ್ಲಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಜನರಿಗೆ ಗುಡ್ ನ್ಯೂಸ್ ಒಂದನ್ನು ಕೊಡಲು ಮುಂದಾಗಿದೆ.

    ಹೌದು. ಕರ್ನಾಟಕದ ಮುಜರಾಯಿ ಇಲಾಖೆ ರಾಮನೂರು ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಒಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಇನ್ನೇನು ಕೆಲ ದಿನಗಳಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಇದಕ್ಕೂ ಮೊದಲೇ ಉತ್ತರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಮಭಕ್ತರು ಅಯ್ಯೋಧ್ಯೆಗೆ ಬರುತ್ತಾರೆ. ಅವರಿಗಾಗಿ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದೆ.

    ಸರಯೂ ನದಿ (Sarayu River) ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸುವಂತೆ 2023ರ ಆಗಸ್ಟ್ ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh) ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಪತ್ರವನ್ನ ಬರೆದು ಮನವಿ ಮಾಡಿದ್ರು. 2020ರಲ್ಲಿ ಯುಪಿ ಸಿಎಂಗೆ ಯಡಿಯೂರಪ್ಪ ಕೂಡ ಪತ್ರ ಬರೆದು ಮನವಿ ಮಾಡಿದ್ರು. ಇನ್ನು ಈಗ ರಾಜ್ಯದ ಮನವಿಗೆ ಯುಪಿ ಸರ್ಕಾರದ ಹೌಸಿಂಗ್ ಬೋರ್ಡ್ ಪ್ರತಿಕ್ರಿಯೆ ಪತ್ರ ಕಳುಹಿಸಿದೆ. ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿಯನ್ನ ಮುಜರಾಯಿ ಇಲಾಖೆ ಮಾಡುತ್ತಿದೆ. ಈ ಮೂಲಕ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗಿದೆ ಅಂತ ತಿಳಿಸಿದೆ. ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

    ಒಟ್ಟಾರೆ ಅಯೋಧ್ಯೆಗೆ ರಾಮನ ದರ್ಶನಕ್ಕೆ ಹೋಗುವ ಕನ್ನಡಿಗರಿಗೆ ಅನುಕೂಲವಾಗುವಂತೆ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿರೋದು ಖುಷಿ ವಿಚಾರ. ರಾಮಮಂದಿರದ ಬಳಿ ಸರಯೂ ನದಿಯ ಸಮೀಪದಲ್ಲೇ ನಮ್ಮ ಕರ್ನಾಟಕ ಅತಿಥಿ ಗೃಹ ನಿರ್ಮಾಣವಾಗಿ, ಆದಷ್ಟು ಬೇಗ ಕನ್ನಡಿಗರಿಗೆ ಸಿಗುವಂತಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.

  • ‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೆಳ್ಳಿಗೆ ಸರಕಾರಿ ನೌಕರಿ ನೀಡಿದ ತಮಿಳುನಾಡು ಸರಕಾರ

    ‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೆಳ್ಳಿಗೆ ಸರಕಾರಿ ನೌಕರಿ ನೀಡಿದ ತಮಿಳುನಾಡು ಸರಕಾರ

    ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಿನಿಮಾದ ಮೂಲಕ ಜಗತ್ತಿಗೆ ಪರಿಚಯವಾಗಿದ್ದ ಬೊಮ್ಮನ್ (Bomman) ಮತ್ತು ಬೆಳ್ಳಿಯ (Belli) ಮುಖದಲ್ಲಿ ಮಂದಹಾಸ ಮೂಡಿಸಿದೆ ತಮಿಳುನಾಡು  (Tamil Nadu) ಸರಕಾರ. ಆರ್ಥಿಕ ಸಂಕಷ್ಟದಿಂದ  ಈ ದಂಪತಿ ಬಳಲುತ್ತಿದ್ದರು ಎನ್ನುವ ಮಾಹಿತಿ ಸಿಕ್ಕ ತಕ್ಷಣವೇ ಬೆಳ್ಳಿಗೆ ಸರಕಾರಿ ನೌಕರಿಯನ್ನು ನೀಡಿದೆ ಸರಕಾರ. ಮೊದಲ ಸರಕಾರಿ ಕಾವಡಿಯಾಗಿ ಬೆಳ್ಳಿ ಇದೀಗ ನೇಮಕಗೊಂಡಿದ್ದಾರೆ.

    ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ಮಾಡಿ ಅಭಿನಂದಿಸಿದ್ದರು. ಇದನ್ನೂ ಓದಿ:ಟೆಂಪಲ್ ರನ್ ಮುಗಿಸಿ ಫೋಟೋಶೂಟ್ ನಲ್ಲಿ ಭಾಗಿಯಾದ ಸಾರಾ ಅಲಿ ಖಾನ್

    ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾದ ಮೋದಿ ಅವರ ಫೋಟೋ ಸಖತ್ ವೈರಲ್ ಆಗಿತ್ತು.

    ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ದೀಪಿಕಾ ಪಡುಕೋಣೆ ಅವರು ಭಾರತವನ್ನು ಪ್ರತಿನಿಧಿಸಿದ ಆಸ್ಕರ್ ಅಂಗಳದಲ್ಲಿ ನಿರೂಪಣೆ ಮಾಡಿದ್ದರು. ಆಸ್ಕತ್ ಪ್ರಶಸ್ತಿಯ ಬಳಿಕ ಬೊಮ್ಮನ್- ಬೆಳ್ಳಿ ಜನಪ್ರಿಯತೆ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಯಮ ಮೀರಿ ಹುದ್ದೆ ನೀಡಿದ ಆರೋಪ- ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಂದ ಸರ್ಕಾರಕ್ಕೆ ಪತ್ರ

    ನಿಯಮ ಮೀರಿ ಹುದ್ದೆ ನೀಡಿದ ಆರೋಪ- ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಂದ ಸರ್ಕಾರಕ್ಕೆ ಪತ್ರ

    ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (Pollution Board) ಪೊಲಿಟಿಕಲ್ ಡ್ರಾಮಾ ನಡೆದಿರುವುದು ಬಯಲಾಗಿದೆ. ಅರ್ಹತೆ ಇಲ್ಲದವರಿಗೆ ಅತ್ಯುನ್ನತ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸೂರಿ ಪಾಯಲ್ ಅನ್ನೋ ಐಟಿ ವ್ಯವಸ್ಥಾಪಕರಿಗೆ ಸದಸ್ಯ ಕಾರ್ಯದರ್ಶಿಯ ಹುದ್ದೆಗೆ ಬಡ್ತಿ ಸಿಕ್ಕಿದೆ. ಹುದ್ದೆಯ ವಿದ್ಯಾರ್ಹತೆಯನ್ನೂ ಮೀರಿ ಸೂರಿ ಪಾಯಲ್‍ಗೆ 4 ತಿಂಗಳ ಹಿಂದೆ ಸದಸ್ಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಈ ಹಿಂದೆಯೂ ಸೂರಿ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬಳಿಕ ಮಾತಾನಾಡದೇ ಇಡೀ ರಸ್ತೆಯಲ್ಲಿ ಓಡಿ ಹೋಗಿದ್ದ.

    ಇದೀಗ ಹೆಚ್‍ಸಿ ಗಿರೀಶ್ ಅವ್ರ ವರ್ಗಾವಣೆಯ ಬಳಿಕ ಸೂರಿಗೆ ಹುದ್ದೆ ನೀಡಲಾಗಿದೆ. ಸೂರಿ ಪಾಯಲ್ ಅಧಿಕಾರ ವಹಿಸಿಕೊಂಡ ಬಳಿಕ ಅಧ್ಯಕ್ಷರ ಅಧಿಕಾರದಲ್ಲಿಯೂ ಕೈಯಾಡಿಸಿದ್ದನು. ಅಧ್ಯಕ್ಷರ ಅಧಿಕಾರದಲ್ಲಿಯೂ ಮೂಗು ತೂರಿಸಿದ್ರಿಂದ ಶಾಂತ್ ಎ ತಿಮ್ಮಯ್ಯ ಸಿಟ್ಟಿಗೆದ್ದಿದ್ದಾರೆ. ಎಲ್ಲಾ ಫೈಲ್ ಗಳನ್ನು ತಮ್ಮ ಬಳಿಯೇ ಬರಬೇಕು ಅಂತಾ ಸೂರಿ ಸೂಚನೆ ನೀಡಿದ್ದಾನೆಂದು ಆರೋಪಿಸಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಲೋಕಸಮರಕ್ಕಾಗಿ BJP- JDS ದೋಸ್ತಿ- NDA ಸಭೆಯಲ್ಲಿ ಭಾಗಿಯಾಗ್ತಾರಾ ಹೆಚ್‍ಡಿಕೆ?

    ಸೂರಿ ಪಾಯಲ್ ಹುದ್ದೆ ರದ್ದುಗೊಳಿಸಿದ ಆದೇಶ ನೀಡಿದ ಅಧ್ಯಕ್ಷರು, ಈಗ ಈ ಸ್ಥಾನಕ್ಕೆ ಬೇರೆ ಅರ್ಹ ಸಿಬ್ಬಂದಿಯನ್ನು ನೇಮಕ ಮಾಡಿ ಅಂತಾ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಳಿ ತಪ್ಪಿದ್ದು ರೈಲಲ್ಲ, ಸರಕಾರ: ಮತ್ತೆ ಕೇಂದ್ರದ ವಿರುದ್ಧ ಗುಡುಗಿದ ನಟ ಕಿಶೋರ್

    ಹಳಿ ತಪ್ಪಿದ್ದು ರೈಲಲ್ಲ, ಸರಕಾರ: ಮತ್ತೆ ಕೇಂದ್ರದ ವಿರುದ್ಧ ಗುಡುಗಿದ ನಟ ಕಿಶೋರ್

    ಕೇಂದ್ರ ಸರಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ ನಟ ಕಿಶೋರ್ (Kishor). ಒಡಿಶಾದಲ್ಲಿ (Odisha) ನಡೆದ ಭೀಕರ ರೈಲು (train) ದುರಂತದ ಬಗ್ಗೆ ಪೋಸ್ಟ್ ಮಾಡಿರುವ ಅವರು,  ಇನ್ನೂರಕ್ಕೂ ಹೆಚ್ಚು ಜನರ ಸಾವಿಗೆ ನೇರವಾಗಿ ಕೇಂದ್ರ ಸರಕಾರವೇ ಹೊಣೆ ಎಂದು ಅವರು ಬಣ್ಣಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂಗ್ಲಿಷ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಪೋಸ್ಟ್ ಮಾಡಿ, ಅದರೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

    ರೈಲ್ವೆ ಮಂತ್ರಿ ಈಗ ಹೋಗಿ ನಿಂತು ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವ ನಾಟಕ ಬಿಟ್ಟು, ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು 1500ಕ್ಕೂ ಹೆಚ್ಚು ರೈಲ್ವೆ ಸುರಕ್ಷತೆಗೆ ಬೇಕಾದ ಖಾಲಿಯಾಗೇ ಉಳಿದಿರುವ ಹುದ್ದೆಗಳನ್ನು ತುಂಬಿ, ಹಳಿ ನಿರ್ವಹಣೆ ಸಮಪರ್ಕವಾಗಿಸಬಹುದಿತ್ತೆ? ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದ ಅಭಿಷೇಕ್

    ಮುಂದುವರೆದು ಬರೆದಿರುವ ಕಿಶೋರ್, ‘ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು, ಕವಚ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೆ? ಹಾಗೆ ನೋಡಿದರೆ ಕಳೆದ ಆರೇಳು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ರೈಲುಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, 2021ರ ಸಿಎಜಿ ರಿಪೋರ್ಟನ್ನು ಕಡೆಗಣಿಸಿ, ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೆ?’ ಎಂದು ಪ್ರಶ್ನೆ ಮಾಡಿದ್ದಾರೆ.

    ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ, ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ. ಎಂತ ವಿಪರ್ಯಾಸ. ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ. ಅಪಘಾತಗಳನ್ನೂ ದುರಂತಗಳನ್ನೂ ತಮ್ಮ ಇಮೇಜು ಬೆಳೆಸಿಕೊಳ್ಳಲು ಬಳಸುವುದನ್ನು ಬಿಟ್ಟು ಚುನಾವಣೆಯಾಚೆಗಿನ ತಮ್ಮ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ ಎಂದು ಅವರು ಬರೆದಿದ್ದಾರೆ.

  • ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ

    ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ

    ಕಾಂತಾರ (Kantara) ಚಿತ್ರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty)  ಸರಕಾರದ ಮುಂದೆ ಹಳೆ ಬೇಡಿಕೆಯನ್ನೇ ಇಟ್ಟಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ಆಗಬೇಕು ಎಂದು ಹಲವಾರು ಬಾರಿ ಚರ್ಚೆಯಾಗಿದೆ. ಆನಂತರ ರಾಮನಗರ, ಮೈಸೂರು ಹೇಗೆ ಮಾತಿನಲ್ಲೇ ಫಿಲ್ಮ್ ಸಿಟಿ ಸುತ್ತಾಡಿ ಬಂದಿದೆ. ಇದೀಗ ಮತ್ತೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ  (Film City)ಆಗಬೇಕು ಎಂದು ರಿಷಬ್ ಒತ್ತಾಯಿಸಿದ್ದಾರೆ.

    ಕೇಂದ್ರ ಸರಕಾರ (Govt) ಆಯೋಜಿಸಿದ್ದ ಭಾರತದ ಯುವಜನತೆಯ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್, ‘ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ಆಗಲಿ. ಫಿಲ್ಮ್ ಸಿಟಿ ಅವಶ್ಯಕತೆ ಬೆಂಗಳೂರಿನಲ್ಲೇ ಹೆಚ್ಚಿದೆ. ಫಿಲ್ಮ್ ಸಿಟಿ ಎನ್ನುವುದು ಚಿತ್ರೋದ್ಯಮದ ಕನಸು. ಇನ್ನೂ ಆ ಕನಸು ಈಡೇರಿಲ್ಲ’ ಎಂದಿದ್ದಾರೆ ರಿಷಬ್. ಇದನ್ನೂ ಓದಿ:ಬಾಯ್‌ಫ್ರೆಂಡ್ ಖಾಸಗಿ ಫೋಟೋ ಶೇರ್ ಮಾಡಿದ ಮಲೈಕಾ- ಅರ್ಜುನ್ ಕಪೂರ್ ಟ್ರೋಲ್

    ‍ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಆಯೋಜಿಸಿದ್ದ 9ನೇ ಸೇವಾ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶದ ಪ್ಯಾನೆಲಿಸ್ಟ್ ಆಗಿ ಹೋಗಿದ್ದ ರಿಷಬ್, ಸಿನಿಮಾ ರಂಗದ ಬಗ್ಗೆ ಅನೇಕ ವಿಷಯಗಳನ್ನೂ ಹೊರಹಾಕಿದ್ದಾರೆ. ಪ್ರೇಕ್ಷಕರನ್ನು ತಲುಪುವ ಬಗೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

  • ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್

    ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್

    ಚಂಡೀಗಢ: ಎನ್‍ಆರ್‍ಐಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ರಾಜ್ಯ ಸರ್ಕಾರ ಹೊಸ ನೀತಿಯನ್ನು ಹೊರತರಲಿದೆ ಎಂದು ಪಂಜಾಬ್ ಕ್ಯಾಬಿನೆಟ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಹೇಳಿದ್ದಾರೆ.

    ಧಲಿವಾಲ್ ಅವರು ಎನ್‍ಆರ್‌ಐ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದು, ಹೊಸ ಅನಿವಾಸಿ ಭಾರತೀಯ(ಎನ್‍ಆರ್‌ಐ) ನೀತಿಯ ಕರಡನ್ನು ಅವರೊಂದಿಗೆ ಮತ್ತು ಪಂಜಾಬ್‍ನ ಎನ್‍ಆರ್‌ಐ ಆಯೋಗದ ಸದಸ್ಯರೊಂದಿಗೆ ಚರ್ಚಿಸಿ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

    ಚರ್ಚೆಯಲ್ಲಿ ಆಗಿದ್ದೇನು?
    ಎನ್‍ಆರ್‌ಐ ಪಂಜಾಬಿ ಯುವಕರನ್ನು ಅವರ ಮೂಲವನ್ನು ಸಂಪರ್ಕಿಸಲು ಪಂಜಾಬ್ ಸರ್ಕಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಎನ್‍ಆರ್‌ಐ ಪಂಜಾಬಿ ವೃದ್ಧರಿಗೆ ರಾಜ್ಯದ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಉಚಿತ ಪ್ರಯಾಣವನ್ನು ಒದಗಿಸುವ ಸಲುವಾಗಿ ಸರ್ಕಾರವು ಕಾರ್ಯಕ್ರಮವನ್ನು ಪ್ರಾರಂಭಿಸುತ್ತದೆ. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ಎನ್‍ಆರ್‌ಐ ವ್ಯವಹಾರಗಳ ಸಚಿವರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾಗರಿಕ ಲೋಕ ಅದಾಲತ್‍ಗಳ ಮಾದರಿಯಲ್ಲಿ ಎನ್‍ಆರ್‍ಐ ಲೋಕ ಅದಾಲತ್‍ಗಳನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ನ್ಯಾಯಾಲಯಗಳಲ್ಲಿ, ವಿಶೇಷವಾಗಿ ಭೂಮಿ ಮತ್ತು ವಿವಾಹದ ವಿವಾದಗಳನ್ನು ಪರಸ್ಪರ ಒಪ್ಪಿಗೆಯಿಂದ ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗುವುದು. ಅದಕ್ಕೆ ಕಾನೂನಿನ ಮಾನ್ಯತೆ ಇರುತ್ತದೆ.

    ಸಭೆಯಲ್ಲಿ ತೆಗೆದುಕೊಳ್ಳಲಾದ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಎನ್‍ಆರ್‌ಐಗಳ ಸಮಸ್ಯೆಗಳಿಗೆ ತ್ವರಿತ ವಿಚಾರಣೆಗೆ ಪ್ರತಿ ಜಿಲ್ಲೆಗೆ ಪಂಜಾಬ್ ನಾಗರಿಕ ಸೇವೆಗಳ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲು ಸಿಎಂ ಭಗವಂತ್ ಮಾನ್ ಅವರಿಗೆ ಮನವಿ ಮಾಡಲಾಗುವುದು. ಇದನ್ನೂ ಓದಿ: ಯಾರಿಗೆ ಬೇಕು ‘ಚಿಕನ್ ಕಥಿ ರೋಲ್’ – ಮನೆಯಲ್ಲಿ ಟ್ರೈ ಮಾಡಿ

    ಸಾಮಾನ್ಯವಾಗಿ ಅನಿವಾಸಿ ಭಾರತೀಯರ ಜಮೀನು ಅತಿಕ್ರಮಣ ಪ್ರಕರಣಗಳು ಹೆಚ್ಚಾಗಿದೆ. ಅನಿವಾಸಿ ಭಾರತೀಯರಿಗೆ ಪರಿಹಾರ ನೀಡಲು ಅನಿವಾಸಿ ಭಾರತೀಯರ ಒಪ್ಪಿಗೆಯಿಲ್ಲದೆ ಗಿರದಾರಿ ಬದಲಾವಣೆಯನ್ನು ತಡೆಯಲು ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ ಕಿಡಿ

    ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ ಕಿಡಿ

    ರಾಮನಗರ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

    ಚನ್ನಪಟ್ಟಣದ ಗೌಡಗೆರೆ ಗ್ರಾಮದ ಶಕ್ತಿದೇವತೆ ಚಾಮುಂಡೇಶ್ವರಿ ತಾಯಿಯ 16 ಕೆ.ಜಿ ತೂಕದ ಚಿನ್ನದ ವಿಗ್ರಹಕ್ಕೆ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಪ್ರಕರಣದ ವಿಚಾರವಾಗಿ ಹೇಳಿಕೆ ಕೊಟ್ಟ ಅವರು, ಸರ್ಕಾರದಿಂದ ಎರಡು ಸಮುದಾಯವನ್ನು ಬೆಸೆಯುವ ಕೆಲಸ ನಡೆಯುತ್ತಿಲ್ಲ. ಸಿಎಂ ಬೊಮ್ಮಾಯಿ ಅವರಿಂದ ಈ ರೀತಿಯ ಮಂಗಳೂರು ಪ್ರವಾಸ ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಜೈಲಿನಲ್ಲೇ ಉಕ್ರೇನ್ ಖೈದಿಗಳ ಸಾವು – ತನಿಖೆಗೆ UN, ರೆಡ್‍ಕ್ರಾಸ್ ಆಹ್ವಾನಿಸಿದ ರಷ್ಯಾ 

    ನಾಳೆ ನಾನು ಮಂಗಳೂರಿಗೆ ಹೋಗ್ತಿದ್ದೇನೆ. ಹತ್ಯೆಯಾದ ಮೂರು ಕುಟುಂಬವನ್ನು ಭೇಟಿಯಾಗ್ತಿದ್ದೇನೆ. ನನ್ನದೇ ಆದ ಮಾಹಿತಿಯೂ ಇದೆ. ಮೂರು ಕುಟುಂಬಕ್ಕೂ ಸಾಂತ್ವನ ಹೇಳ್ತೇನೆ. ಇಲ್ಲಿ ರಾಜಕೀಯ ಬಂಡವಾಳ ಮಾಡಿಕೊಂಡಿದ್ದಾರೆ, ರಾಜಕೀಯದ ದೊಡ್ಡಮಟ್ಟದ ಷಡ್ಯಂತ್ರವಿದೆ. ಭಾವನಾತ್ಮಕ ವಿಚಾರ ಕೆದಕಿ ರಾಜಕೀಯ ಲಾಭ ಪಡೆಯಲು, ಮತ ಪಡೆಯಲು ಕೆಲ ಪಕ್ಷ ಹೊರಟಿವೆ ಎಂದು ಟೀಕಿಸಿದರು.

    ರಾಜಕೀಯ ನಾಯಕರು, ಸರ್ಕಾರದ ನಡವಳಿಕೆ ಬಗ್ಗೆ ರಾಜ್ಯದ ಜನರಲ್ಲಿ ಅಸಮಾಧಾನವಿದೆ. ಎಲ್ಲ ರಾಜಕೀಯ ಪಕ್ಷಗಳು, ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಘಟನೆಗಳಿಗೂ ನಾನು ಹೇಳುವುದು ಇಷ್ಟೇ. ಯಾರು ಬೇಕಾದರೂ ಸಂಘಟನೆ ಮಾಡಿಕೊಳ್ಳಲಿ ನನ್ನ ತಕರಾರಿಲ್ಲ. ಆದರೆ ಈ ರೀತಿಯ ಹತ್ಯೆಗಳಿಂದ ಸಂಘಟನೆ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ 

    ನಾನು ಯುವಕರಲ್ಲಿ ಮನವಿ ಮಾಡ್ತೇನೆ. ಶಾಂತಿಯ ವಾತವರಣ ತರಲು ಪ್ರಯತ್ನ ಮಾಡಿ. ನಿಮ್ಮ ಕುಟುಂಬದಲ್ಲಿ ಅಶಾಂತಿ ವಾತವರಣ ಬರುವುದು ಬೇಡ ಎಂದು ಮನವಿ ಮಾಡ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಬೆಂಗಳೂರು: ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷವು ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಪಡೆದಿದೆ. ಇದರಿಂದ ಕರ್ನಾಟಕದ ಕಾರ್ಯಕರ್ತರಲ್ಲೂ ಸಹ ಉತ್ಸಾಹ ಹೆಚ್ಚಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಕೂಡಾ ಬಿಜೆಪಿ ಅಧಿಕಾರ ಪಡೆಯುವುದು ಖಚಿತ ಎಂದರು. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

    ಶೋಷಿತರು, ಬಡವರು, ಹಿಂದುಳಿದ ವರ್ಗದವರು ಮತ್ತು ರೈತರ ಕಡೆ ನಮ್ಮ ಪ್ರಧಾನಿ ವಿಶೇಷ ಗಮನ ಹರಿಸುತ್ತಾರೆ. ಉತ್ತರ ಪ್ರದೇಶ ಸೇರಿ ಈ ನಾಲ್ಕು ರಾಜ್ಯಗಳಲ್ಲೂ ಮುಖ್ಯಮಂತ್ರಿಗಳು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಇದರಿಂದಾಗಿ ಈ ಗೆಲುವು ನಮ್ಮದಾಗಿದೆ ಎಂದು ತಿಳಿಸಿದರು.

    ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಪ್ರಚಾರ ಮಾಡಿದ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದೆ ಎಂದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಜನಪರ ಮತ್ತು ಜನಪ್ರಿಯ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವೂ ಇದೆ. ಆದ್ದರಿಂದ ಇಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ. 150 ಸ್ಥಾನ ನಮಗೆ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆಯ್ಕೆ ನೀಡಿ – ಹಲಾಲ್ ವಿರುದ್ಧ ಕತ್ತಿಗೆ ಸಂಬರಗಿ ಪತ್ರ

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಪಕ್ಷದ ಮುಖಂಡತ್ವದಲ್ಲೂ ಬದಲಾವಣೆ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಮತದಾರರಿಗೆ ತಿಳಿಸಲಾಗುವುದು. ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಿ ಗೆದ್ದು ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸಚಿವ ಸಂಪುಟ ವಿಸ್ತರಣೆ ಮತ್ತು ಸೇರ್ಪಡೆ ಆಗುವವರ ಕುರಿತು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ ಎಂದರು. ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿ ಮತ್ತು ಪ್ರಚಾರ ಸಾಧ್ಯತೆ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ನಂತರವೂ ರಾಹುಲ್ ಅವರಿಗೆ ಇಲ್ಲಿ ಪ್ರಚಾರ ಮಾಡುವ ತಾಕತ್ತಿದೆಯೇ ಎಂದು ಅವರು ನಗುತ್ತಲೇ ಪ್ರಶ್ನಿಸಿದರು.

  • ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ

    ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ

    ಬೆಂಗಳೂರು: ಕೆಪಿಎಸ್‍ಸಿಗೆ ಕಾಯಕಲ್ಪ ಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ಶೂನ್ಯವೇಳೆಯಲ್ಲಿ ಕಾಂಗ್ರೆಸ್‍ನ ರವಿ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ನೇಮಕಾತಿ ಪೂರ್ಣ ಮಾಡಲು ಏನು ಪ್ರಕ್ರಿಯೆ ನಡೆಯುತ್ತಿದೆ? ಎಂದು ಪ್ರಶ್ನೆ ಮಾಡಿದರು.

    ಕೆಪಿಎಸ್‍ಸಿಯಲ್ಲಿ 517 ಕ್ರಮಬದ್ಧವಾದ ಪ್ರಸ್ತಾವನೆ ಸಲ್ಲಿಕೆ ಆಗಿದೆ. 25 ಸಾವಿರ ಹುದ್ದೆಗಳಿಗೆ 45 ಅಧಿಸೂಚನೆ ಹೊರಡಿಸಲಾಗಿದೆ. 17 ಸಾವಿರ ನೇಮಕಾತಿಗಳು ನೆನೆಗುದಿಗೆ ಬಿದ್ದಿದೆ. ಕೆಪಿಎಸ್‍ಸಿಯಲ್ಲಿ ಸರಿಯಾಗಿ ನೇಮಕಾತಿ ಪ್ರಕ್ರಿಯೆ ಆಗುತ್ತಿಲ್ಲ. ಹೀಗಾಗಿ ಕೆಪಿಎಸ್‍ಸಿ ರದ್ದು ಮಾಡುವುದು ಸೂಕ್ತ ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು

    ಈ ಕುರಿತು ಉತ್ತರ ನೀಡಿದ ಸಿಎಂ, ಕಳೆದ ಹಲವಾರು ವರ್ಷಗಳಿಂದ ಆರ್ಥಿಕ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಖಾಲಿ ಹುದ್ದೆಗಳ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅನೇಕ ಇಲಾಖೆಗಳಿಗೆ ನೇಮಕ ಮಾಡಿಕೊಳ್ತಿದ್ದೇವೆ. 16 ಸಾವಿರ ಪೊಲೀಸರ ನೇಮಕಾತಿ, 15 ಸಾವಿರ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ 14 ಸಾವಿರ ಪೋಸ್ಟ್ ನೇಮಕಾತಿ ಮಾಡ್ತಿದ್ದೇವೆ. ಕೆಲವು ವರ್ಷಗಳಲ್ಲಿ ಖಾಲಿ ಇರೋ ಹುದ್ದೆ ಭರ್ತಿ ಮಾಡುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.

    KPSC Recruitment For Assistant Engineers And Junior Engineers Post, Apply Online Before September 16 - Careerindia

    ಕೆಪಿಎಸ್‍ಸಿಯಲ್ಲಿ ಎರಡು ಮೂರು ಸಮಸ್ಯೆ ಇದೆ. ಇನ್ನಷ್ಟು ಸಿಬ್ಬಂದಿ ಅಲ್ಲಿಗೆ ಒದಗಿಸಬೇಕು. ಕಂಟ್ರೋಲರ್ ನೇಮಕ ಕೂಡ ಆಗಬೇಕು. ಶೀಘ್ರವೇ ಅವುಗಳ ನೇಮಕಾತಿ ಮಾಡುತ್ತೇವೆ. ಕೆಪಿಎಸ್‍ಸಿಯನ್ನ ಸಂಪೂರ್ಣವಾಗಿ ಕಾಯಕಲ್ಪ ಮಾಡುವ ಅಗತ್ಯವಿದೆ. ಇಲ್ಲಿ ರಿಸಲ್ಟ್ ಬಂದ ಮೇಲೆ ತಕರಾರು ಬರುತ್ತದೆ ಎಂದು ಮುಂದಾಗುವ ಸಮಸ್ಯೆಗಳ ಬಗ್ಗೆ ತಿಳಿಸಿದರು.

    ಇಂಟರ್ ವ್ಯೂ ಆದ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಹೀಗಾಗಿ ನೇಮಕಾತಿ ವಿಳಂಬ ಆಗುತ್ತಿದೆ. ಕೆಪಿಎಸ್‍ಸಿಗೆ ಕಾಯಕಲ್ಪ ಕೊಡಲು ಈಗಾಗಲೇ ಕೆಲ ಸಭೆ ಮಾಡಿದ್ದೇನೆ. ಸಂದರ್ಶನದ ಅಂಕಗಳನ್ನು ಕಡಿತ ಮಾಡಲಾಗಿದೆ. ಆದಷ್ಟು ಬೇಗ ಕೆಪಿಎಸ್‍ಗೆ ಹೊಸ ರೂಪ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ