Tag: Govindarajanagar

  • ಚಿಕಿತ್ಸೆಗೆ ಹೋಗಿದ್ದಾಗ ಮಾಂಗಲ್ಯ ಸರ ಕಳ್ಳತನ?- ನರ್ಸ್ ವಿರುದ್ಧ ಮಹಿಳೆ ದೂರು

    ಚಿಕಿತ್ಸೆಗೆ ಹೋಗಿದ್ದಾಗ ಮಾಂಗಲ್ಯ ಸರ ಕಳ್ಳತನ?- ನರ್ಸ್ ವಿರುದ್ಧ ಮಹಿಳೆ ದೂರು

    ಬೆಂಗಳೂರು: ಎದೆ ನೋವು ಅಂತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ ಮಹಿಳೆಯ ಮೈಮೇಲಿದ್ದ ಮಾಂಗಲ್ಯ ಸರವನ್ನ ಎಗ್ಗರಿಸಲಾಗಿದೆ. ಮಾಂಗಲ್ಯ ಸರ ಕಳ್ಳತನದ ಹಿಂದೆ ಆಸ್ಪತ್ರೆ ಸಿಬ್ಬಂದಿ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಮಹಿಳೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ (Govindrajanagar Police Station) ದೂರು ನೀಡಿದ್ದಾರೆ.

    ರಾಧಾ ಎಂಬವರು ಫೆಬ್ರವರಿ 8 ರಂದು ಮೂಡಲ್ ಪಾಳ್ಯದಲ್ಲಿರೋ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾರೆ. ಎದೆನೋವು ಅಂತ ಹೋಗಿದ್ದಾರೆ. ಎದೆ ನೋವು ಇದ್ದ ಕಾರಣ ಇಸಿಜಿ ಮಾಡಬೇಕು ಚಿನ್ನದ ಸರ ತಗೆದು ಇಡುವಂತೆ ನರ್ಸ್ ಅಕ್ಷತಾ ಸೂಚಿಸುತ್ತಾರೆ. ಮಾಂಗಲ್ಯ ಸರ ತೆಗೆದ ಬಳಿಕ ಪತಿಗೆ ಕೊಡಲು ಮಹಿಳೆ ಸೂಚಿಸಿದ್ದಾರೆ.

    ನರ್ಸ್ ದಿಂಬಿನ ಕೆಳಗಡೆ ಇಡುವಂತೆ ಸೂಚಿಸಿದ್ದಾರೆ. ಅದರಂತೆ ಮಹಿಳೆ ಕೆಳಗಡೆ ಸರ ಇಟ್ಟು ECG ಮಾಡಿಸಿಕೊಂಡು ಗಾಬರಿಯಲ್ಲಿ ಸರ ಮರೆತು ಹೋಗಿರುತ್ತಾರೆ. ರಾಧಾ ಅವರಿಗೆ ಮಾತ್ರೆ ಇಂಜೆಕ್ಷನ್ ಕೊಟ್ಟಿದ್ದ ಕಾರಣ ಮಾಂಗಲ್ಯ ಸರ ಆಸ್ಪತ್ರೆಯಲ್ಲಿ ಬಿಟ್ಟಿರೋದನ್ನ ಮರೆತು ನಿದ್ದೆ ಮಾಡಿಬಿಟ್ಟಿದ್ದಾರೆ. ಮಾರನೇ ದಿನ ಸ್ನಾನಕ್ಕೆ ಹೋದಾಗ ಮಹಿಳೆಗೆ ಸರದ ಬಗ್ಗೆ ಅರಿವಾಗಿದೆ. ಕೂಡಲೇ ನೆನಪಿಸಿಕೊಂಡು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ. ಇದನ್ನೂ ಓದಿ: ಚಿನ್ನದ ಅಂಗಡಿಗೆ ಕನ್ನ – 250 ಗ್ರಾಂ ಚಿನ್ನ, 1.8 ಲಕ್ಷ ರೂ. ಹಣದೊಂದಿಗೆ ಪರಾರಿ

    ಸಿಸಿಟಿವಿ ಪರಿಶೀಲನೆ ಮಾಡಿ ನೋಡಿದಾಗ ನರ್ಸ್ ಒಬ್ಬರು ಕೈಯಲ್ಲಿ ಸರ ಗೊತ್ತಾಗದಂತೆ ಹಿಡಿದುಕೊಂಡು ಬರುತ್ತಿರೋದು ಅನುಮಾನ ಹುಟ್ಟಿಸಿದೆ. ಹಾಗಾಗಿ ಸಿಸಿಟಿವಿ ದೃಶ್ಯಗಳೊಂದಿಗೆ ದೂರು ಕೊಟ್ಟಿದ್ದು, ಗೋವಿಂದರಾಜ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ

    ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ

    ಬೆಂಗಳೂರು: ಕುಟುಂಬದಲ್ಲಿ ಹಣಕಾಸಿಗೇನು ಕೊರತೆ ಇರಲಿಲ್ಲ. ಕೋಟಿ ಕೋಟಿಯಷ್ಟು ಹಣ ಇದ್ರೂ ಹಣದ ದಾಹ ತೀರಲಿಲ್ಲ. ಹಣದ ದಾಹದ ಜೊತೆಗೆ ಗಂಡನಿಗೆ ಹೆಂಡತಿ ಮೇಲೆ ಸಂಶಯ. ಮಾವನಿಗೆ ಸೊಸೆ ಮೇಲೆ ಅನುಮಾನ. ಕೊನೆಗೆ ಸಿಕ್ಕ ಫಲಿತಾಂಶ ಆತ್ಮಹತ್ಯೆ.

    ಅಮೇರಿಕಾದಲ್ಲಿ (America) ಚೆನ್ನಾಗಿ ಓದಿ ಉನ್ನತ ವ್ಯಾಸಂಗ ಮಾಡಿದ್ದ ಐಶ್ವರ್ಯ ಚಂದ್ರಲೇಔಟ್ ನ (Chandra Layout) ನಿವಾಸಿ ಸುಬ್ರಹ್ಮಣಿಯವರ ಏಕೈಕ ಪುತ್ರಿ. ಸುಬ್ರಹ್ಮಣಿಯೂ ಆಸ್ತಿ ಅಂತಸ್ತಿನಲ್ಲಿ ಸ್ವಲ್ಪ ಚೆನ್ನಾಗಿಯೇ ಇದ್ದರು. ತನ್ನ ಮಗಳನ್ನ ತನಗಿಂತ ಸಿರಿವಂತನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಆಸೆ ಇತ್ತು. ಅದರಂತೆ ಹೆಸರಾಂತ ಡೈರಿ ರೀಚಿ ಐಸ್ ಕ್ರೀಂ ನ ಮಾಲೀಕರಾದ ಗಿರಿಯಪ್ಪ ಅವರ ಮಗ ರಾಜೇಶ್‍ಗೆ ಐದು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ರು. ಮದ್ವೆ ಮೊದ ಮೊದಲು ಜೀವನ ಚೆನ್ನಾಗಿಯೇ ಇತ್ತು.

    ಐಶ್ವರ್ಯ ಬಾಳಲ್ಲಿ ವಿಲನ್ ಆದ ಚಿಕ್ಕಪ್ಪ: ಗಿರಿಯಪ್ಪ ಸಂಬಂಧ ಕುದಿರಿಸಿದ್ದು ಐಶ್ವರ್ಯ ಚಿಕ್ಕಪ್ಪ ಅರ್ಥಾತ್ ಸುಬ್ರಹ್ಮಣಿಯ ತಮ್ಮ. ಅಣ್ಣನ ಮಗಳಿಗೆ ಒಳ್ಳೆಯ ಸಂಬಂಧ ನೋಡಿದ ರವೀಂದ್ರ ಸ್ರುಬ್ಮಹ್ಮಣಿಯ ಜೊತೆ ಆಸ್ತಿ ಕಲಹ ಮಾಡಿಕೊಂಡ. ಇದನ್ನ ಸೇಡು ತೀರಿಸಿಕೊಳ್ಳುವ ಸಲುವಾಗಿ ರವೀಂದ್ರ, ಗಿರಿಯಪ್ಪ ಮತ್ತು ರಾಜೇಶ್‍ಗೆ ಚಾಡಿ ಹೇಳಿಕೊಡಲು ಶುರು ಮಾಡಿದ್ದಾನೆ.

    ಐಶ್ವರ್ಯ ಮೇಲೆ ಸಂಶಯ ಬರೋ ಹಾಗೇ ಮಾಡಿದ್ದಾನೆ. ಬಳಿಕ ವರದಕ್ಷಿಣೆಗೆ ಪೀಡಿಸುವಂತೆ ಕಿವಿ ಊದಿದ್ದಾನೆ. ರವೀಂದ್ರ ಮಾತು ಕೇಳಿದ ಗಿರಿಯಪ್ಪ, ರಾಜೇಶ್, ಸೀತಾ ಎಲ್ಲಾ ಐಶ್ವರ್ಯಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಇದನ್ನೂ ಓದಿ: ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ 2 ಕೋಟಿ ವಂಚನೆ

    ಯಾವಾಗ ಅತ್ತೆ ಮಾವ, ಗಂಡ ನಾದಿನಿ ಎಲ್ಲಾ ಮೇಲಿಂದ ಮೇಲೆ ಹಿಂಸೆ ಕೊಡೋದಕ್ಕೆ ಶುರು ಮಾಡಿದ್ರೋ ಮನೆ ಬಿಟ್ಟು ಹೊರಗೆ ಬರೋ ನಿರ್ಧಾರ ಮಾಡಿ ತಂದೆ ಮನೆಗೆ ಐಶ್ವರ್ಯ ಬಂದು ಬಿಟ್ಟಿದ್ದಳು. ಆದರೆ ಅಲ್ಲೂ ನೆಮ್ಮದಿಯಾಗಿ ಇರೋದಕ್ಕೆ ಬಿಡದ ಗಂಡ ರಾಜೇಶ್ ಭಯಾನಕ ಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ಐಶ್ವರ್ಯ ಎಳೆ ಎಳೆಯಾಗಿ ಕಷ್ಟದ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರಕರಣದ ತನಿಖೆ ನಡೆಸಿದ ಗೋವಿಂದರಾಜ ನಗರ ಪೊಲೀಸರು, ಅಗರ್ಭ ಶ್ರೀಮಂತ ಗಿರಿಯಪ್ಪ, ಸೀತಾ, ಐಶ್ವರ್ಯ ಪತಿ ರಾಜೇಶ್‍ನ ಬಂಧಿಸಿ ವಿಚಾರಣೆ ನಡೆಸಿದೆ. ತಾನು ಮಾಡಿದ ತಪ್ಪಿಗೆ ಹಿಂಸೆ ಅನುಭವಿಸಿದ ಐಶ್ವರ್ಯ ಇಹಲೋಕ ತ್ಯಜಿಸಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್

    ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗೋವಿಂದರಾಜನಗರ ಪೊಲೀಸ್ ಕಾನ್ಸ್‌ಟೇಬಲ್‌ನನ್ನು ಬಂಧನ ಮಾಡಲಾಗಿದೆ.

    ಚಾಮರಾಜನಗರ ಮೂಲದ ಬಾಲಕಿ ಮೇಲೆ ಗೋವಿಂದರಾಜನಗರ ಪೊಲೀಸ್ ಕಾನ್ಸ್‌ಟೇಬಲ್‌ ದೌರ್ಜನ್ಯ ಎಸಗಿದ್ದ ಎಂದು ಅಪ್ರಾಪ್ತೆಯ ಪೋಷಕರು ದೂರು ಕೊಟ್ಟಿದ್ದಾರೆ. ಈ ಆರೋಪದ ಆಧಾರ ಮೇಲೆ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 6 ರಿಂದ 7 ಮಂದಿ ಸೇರಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಶಂಕಿತರು ವಶ  

    ನಡೆದಿದ್ದೇನು?
    ಗೋವಿಂದರಾಜನಗರದ ರಸ್ತೆ ಬದಿಯ ಪಾರ್ಕ್‍ನಲ್ಲಿ ಬಾಲಕಿ ಇದ್ದಳು. ಈ ವೇಳೆ ಕಾನ್ಸ್‌ಟೇಬಲ್‌ ಸಹಾಯ ಮಾಡುವ ನೆಪದಲ್ಲಿ ಬಾಲಕಿ ಹತ್ತಿರ ಹೋಗಿದ್ದ. ಬಳಿಕ ಆಕೆಯನ್ನು ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಮರುದಿನ ಬಾಲಕಿಯನ್ನು ವಾಪಸ್ ಊರಿಗೆ ಕಳಿಸಿದ್ದ.

    ಬಾಲಕಿ ಮನೆಗೆ ಹೋದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪರಿಣಾಮ ಪೋಷಕರು ಆಕ್ರೋಶಗೊಂಡಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಗೋವಿಂದರಾಜನಗರ ಪೊಲೀಸರು ಕಾನ್ಸ್‌ಟೇಬಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯುವತಿ ಫೋಟೋ ಬಳಸಿ ಯುವಕರಿಂದ 19 ಲಕ್ಷ ರೂ. ಎಗರಿಸಿದ್ದ ಆರೋಪಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಬೆಲ್ಟ್ ಬಿಚ್ಚಿ ಹೊಡಿತೀನಿ, ಏನ್ ಮಾಡ್ತೀನಿ ನೋಡು-ಮಹಿಳೆಗೆ ಶಾಸಕ ವಿ.ಸೋಮಣ್ಣ ಅವಾಜ್

    ಬೆಲ್ಟ್ ಬಿಚ್ಚಿ ಹೊಡಿತೀನಿ, ಏನ್ ಮಾಡ್ತೀನಿ ನೋಡು-ಮಹಿಳೆಗೆ ಶಾಸಕ ವಿ.ಸೋಮಣ್ಣ ಅವಾಜ್

    -ನಾನು ಹಲ್ಕಟ್ ರಾಜಕಾರಣಿ ಅಲ್ಲ ಅಂದ್ರು ಸೋಮಣ್ಣ

    ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಗೋವಿಂದರಾಜ ನಗರ ಶಾಸಕ ವಿ.ಸೋಮಣ್ಣ ಅವರು, ಮಹಿಳೆಗೆ ಏಕವಚನದಲ್ಲಿಯೇ ಕೆಳಮಟ್ಟದ ಪದ ಪ್ರಯೋಗಿಸಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.

    ರಾಜಕಾರಣದಲ್ಲಿ ಸಭ್ಯ, ಮೃದು ಸ್ವಭಾವದ ನಾಯಕ ಅಂತಾ ಗುರುತಿಸಿಕೊಳ್ಳುವ ವಿ.ಸೋಮಣ್ಣರ ಕೆಳಮಟ್ಟದ ಮಾತುಗಳನ್ನು ಕೇಳಿದ ಜನರು ಶಾಕ್ ಆಗಿದ್ದಾರೆ. ಚುನಾವಣೆ ಸಮಯದಲ್ಲಿ ಮಹಿಳೆಯರಿಗೆ ಅಮ್ಮಾ.. ತಾಯಿ ಎಂದು ಕರೆಯುವ ರಾಜಕೀಯ ನಾಯಕರು ಸಹಾಯ ಕೇಳಲು ಹೋದಾಗ ಈ ರೀತಿಯ ಪದ ಪ್ರಯೋಗ ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಶಾಲಾ ಕಟ್ಟಡದ ವಿಚಾರಕ್ಕಾಗಿ ಕೆಲ ಸ್ಥಳೀಯ ಮಹಿಳೆಯರು ಶಾಸಕರನ್ನು ಭೇಟಿ ಆಗಿದ್ದರು. ಇದೇ ವೇಳೆ ಶಾಸಕರು, ಈಯಮ್ಮ ಏನ್ ಕಡಿಮೆ ಇಲ್ಲ, ಬೆಲ್ಟ್ ಬಿಚ್ಚಿ ಹೊಡೀತಿನಿ ನಿಂಗೆ, ಇರು ಏನ್ ಮಾಡ್ತೀನಿ ನೋಡು ಎಂದು ಅವಾಜ್ ಹಾಕಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ನಾನು 40 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ವಿಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಯಾರೋ ಎಡಿಟ್ ಮಾಡಿರುವ ಕೆಲಸ ಇದಾಗಿದ್ದು, ಉದ್ದೇಶ ಪೂರ್ವಕವಾಗಿ ನನ್ನ ತೇಜೋವಧೆಗಾಗಿ ವಿಡಿಯೋ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ. 40 ವರ್ಷಗಳ ನನ್ನ ರಾಜಕಾರಣದಲ್ಲಿ ಎಂದಿಗೂ ನಾನು ಇಷ್ಟು ಕೆಳಮಟ್ಟದ ಪದಗಳನ್ನು ಬಳಸಿಲ್ಲ. ಅದರಲ್ಲಿಯೂ ಮಹಿಳೆಯರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ. ಪ್ರತಿದಿನ ಕಚೇರಿಗೆ ಆಗಮಿಸಿ ಸಾವಿರಾರು ಜನರ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.

    ನನ್ನ ಕಚೇರಿಗೆ ಸುಮಾರು 20 ರಿಂದ 30 ಮಹಿಳೆಯರು ಬಂದಿದ್ದರು. ಶಾಲಾ ಆವರಣದಲ್ಲಿರುವ ದೇವಸ್ಥಾನಕ್ಕೆ ಕಾಂಪೌಂಡ್ ಕಟ್ಟಬೇಕೆಂದು ಕೇಳಿಕೊಂಡಿದ್ದರು. ಕಾಂಪೌಂಡ್ ನಿರ್ಮಿಸುವುದರಿಂದ ಶಾಲೆಯ ಮಕ್ಕಳಿಗೆ ತೊಂದರೆ ಆಗಲಿದ್ದು, ದೇವಸ್ಥಾನಕ್ಕಾಗಿ ಬೇರೆ ಸ್ಥಳ ನಿಗದಿ ಮಾಡುತ್ತೇನೆ. ಸರ್ಕಾರದಿಂದ 10 ಲಕ್ಷ ರೂ.ಯನ್ನು ಸಹ ಕೊಡಿಸುತ್ತೇನೆ ಅಂತಾ ಹೇಳಿ ಕಳುಹಿಸಿದ್ದೆ ಎಂದು ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

    ಮಾತು ಬದಲಿಸಿದ ಸೋಮಣ್ಣ: ವಿಡಿಯೋ ಕುರಿತು ಸ್ಪಷ್ಟನೆ ನೀಡುತ್ತಿದ್ದ ಶಾಸಕರು ಕ್ಷಣಾರ್ಧದಲ್ಲಿ ತಮ್ಮ ಮಾತುಗಳನ್ನು ಬದಲಿಸಿದ್ದಾರೆ. ಸ್ಪಷ್ಟನೆ ಆರಂಭದಲ್ಲಿ ನಾನು ಈ ಬಗ್ಗೆ ಸಿಬಿಐಗೆ ದೂರು ಸಲ್ಲಿಸುತ್ತೇನೆ ಅಂತಾ ಹೇಳಿದರು. ಕೊನೆಗೆ ನಾನು ಯಾವುದೇ ದೂರು ನೀಡಲ್ಲ ಅಂದರು. ನಾನೇನು ತಪ್ಪು ಮಾಡಿಲ್ಲ, ಅಲ್ಲಿರುವ ಧ್ವನಿ ನನ್ನದಲ್ಲ. ವಿಡಿಯೋ ವೈರಲ್ ಮಾಡಿರುವವರೇ ಅದಕ್ಕೆ ಸಾಕ್ಷ್ಯಾಧಾರ ಒದಗಿಸಲಿ. ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರೇ ಈ ವಿಡಿಯೋ ಮಾಡಿಸಿರುವ ಸಾಧ್ಯತೆಗಳಿವೆ ಎಂದು ಆರೋಪ ಮಾಡಿದರು.

    ಇದೆಲ್ಲಾ ಸುಳ್ಳು ಅಂತಾದ್ರೆ, ವಿಡಿಯೋ ಮೂಲಕ ನಿಮ್ಮ ತೇಜೋವಧೆ ಆಗುತ್ತಿದ್ದರೆ ನೀವು ಯಾಕೆ ದೂರು ದಾಖಲಿಸಿಬರದು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರು ಏನ್ ಬೇಕಾದರೂ ಮಾಡಿಕೊಳ್ಳಲಿ, ನಾನೇನು ತಲೆ ಕೆಡಿಸಿಕೊಳ್ಳಲ್ಲ. ವಿಡಿಯೋದಲ್ಲಿರುವ ಧ್ವನಿ ಮಾತ್ರ ನನ್ನದಲ್ಲ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತೇನೆ. ಗೌರವ, ಸಂಸ್ಕಾರದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಅಂತಾ ಅಂದ್ರು.