Tag: govinda karajola

  • ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ

    ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರೇ (Mallikarjun Kharge) ನಿಮ್ಮ ಮನೆ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ ಎಂದು ಸಂಸದ ಗೋವಿಂದ ಕಾರಜೋಳ (Govinda Karajola) ಹೇಳಿದ್ದಾರೆ.

    ಆರ್‌ಎಸ್‌ಎಸ್ (RSS) ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪತ್ರ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಎದುರಿಸಬೇಕಿರೋದು ಆರ್‌ಎಸ್‌ಎಸ್ ಅಲ್ಲ, ಬಿಜೆಪಿಯನ್ನು. ನೀವು ಎದುರಿಸಬೇಕಿರೋದು ಮೋದಿಯನ್ನು, ಮೋಹನ್ ಭಾಗವತ್ ಅವರನ್ನು ಅಲ್ಲ. ಸೋನಿಯಾ ಗಾಂಧಿಯವರನ್ನು ಮೆಚ್ಚಿಸೋಕೆ ಆರ್‌ಎಸ್‌ಎಸ್ ಟೀಕೆ ಟಿಪ್ಪಣಿ ಮಾಡೋದು ಬಿಡಿ. ಇದನ್ನು ದೇಶದ ಜನರು ಸಹಿಸೋದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ದೊಡ್ಡಗೌಡ್ರ ಆರೋಗ್ಯದಲ್ಲಿ ಚೇತರಿಕೆ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಯಾರನ್ನೋ ಮೆಚ್ಚಿಸೋದಕ್ಕೆ ಹೋಗಿ ಈ ರೀತಿ ಹೇಳಿಕೆ ಕೊಡಬೇಡಿ. ಆರ್‌ಎಸ್‌ಎಸ್‌ನಲ್ಲಿ ಜಾತಿ ಪದ್ಧತಿ ಇಲ್ಲ. ನೀವು ಇದೇ ರೀತಿ ಮಾತು ಆಡುತ್ತಿದ್ದರೆ ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತದೆ. ಆರ್‌ಎಸ್‌ಎಸ್ ರಾಜಕೀಯ ಪಕ್ಷ ಅಲ್ಲ, ಮೋಹನ್ ಭಾಗವತ್ ರಾಜಕಾರಣಿ ಅಲ್ಲ. ರಾಹುಲ್ ಗಾಂಧಿ ಎದುರಿಸಬೇಕಾಗಿರುವುದು ಬಿಜೆಪಿಯನ್ನು, ಪ್ರಧಾನಿ ಮೋದಿಯವರನ್ನು. ನೀವು ಸೋನಿಯಾ, ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಮಾತಾಡುವುದನ್ನು 140 ಕೋಟಿ ಜನ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಿಎಂ ಡಿನ್ನರ್ ಪಾರ್ಟಿಗೂ ಅಧಿಕಾರ ಹಸ್ತಾಂತರಕ್ಕೂ ಸಂಬಂಧ ಇಲ್ಲ – ಪರಮೇಶ್ವರ್‌

    ನಾನೂ ಸಿಎಂ ಯಾಕಾಗಬಾರದು ಎಂಬ ಡಾ. ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆದ ದಿನದಿಂದಲೇ ಸಿಎಂ ಕುರ್ಚಿ ಬಗ್ಗೆ ಚರ್ಚೆ ಆಗುತ್ತಿದೆ. ಎರಡೂವರೆ ವರ್ಷದಲ್ಲಿ ಆಡಳಿತ ಕುಸಿದು ರೈತರ ಸಾವಿನಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನಕ್ಕೆ ಹೋಗಿದೆ. ಇಂದು ಸಿದ್ದರಾಮಯ್ಯ ಜಾತಿ ಗಣತಿ, ಆಹಾರ ಕಿಟ್ ಹೀಗೆ ಬೇರೆ ಬೇರೆ ನಾಟಕ ಮಾಡುತ್ತಿದ್ದಾರೆ. ಬಡವರ ಹಣವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಇಂದು ಸಿಎಂ ಡಿನ್ನರ್ ಮೀಟಿಂಗ್ ಸಮಾಧಾನ ಮಾಡಲು ಅಲ್ಲ. ಊಟ ಹಾಕಿ ಬಿಹಾರ ಚುನಾವಣೆಗೆ ಟಾರ್ಗೆಟ್ ಫಿಕ್ಸ್ ಮಾಡಲು ಕರೆದಿದ್ದಾರೆ ಹೊರತು ಮೇಯಿಸಲು ಅಲ್ಲ ಎಂದರು. ಇದನ್ನೂ ಓದಿ: ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಸಿಎಂ ಆಯ್ಕೆ ಮಾಡೋದು: ಡಿಕೆಶಿಗೆ ಪರಮೇಶ್ವರ್ ತಿರುಗೇಟು

  • ಜೂ.10ರ ಒಳಗೆ ಸಿದ್ದರಾಮಯ್ಯ ಒಳಮೀಸಲಾತಿ ಘೋಷಣೆ ಮಾಡಬೇಕು: ಗೋವಿಂದ ಕಾರಜೋಳ

    ಜೂ.10ರ ಒಳಗೆ ಸಿದ್ದರಾಮಯ್ಯ ಒಳಮೀಸಲಾತಿ ಘೋಷಣೆ ಮಾಡಬೇಕು: ಗೋವಿಂದ ಕಾರಜೋಳ

    ಬೆಂಗಳೂರು: ಜೂನ್ 10ರ ಒಳಗೆ ಒಳಮೀಸಲಾತಿ (Internal Reservation) ಘೋಷಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿ ಮೇ 5ರಿಂದ ಒಳಮೀಸಲಾತಿ ಗಣತಿ ಪ್ರಾರಂಭ ಮಾಡಬೇಕು ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ (Govinda Karajola) ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿ 9 ತಿಂಗಳು ಕಳೆದರೂ ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಸಿದ್ದರಾಮಯ್ಯ ಒಳಮೀಸಲಾತಿ ಕೊಡದೇ ಕುಂಟು ನೆಪ ಹೇಳುತ್ತಿದ್ದಾರೆ. ಈಗ ನಾಗಮೋಹನ್ ದಾಸ್ ಅವರಿಂದ ಗಣತಿ ಮಾಡಿಸೋದಾಗಿ ಹೇಳುತ್ತಿದೆ. ಸರ್ಕಾರದ ಬಳಿಕ ಕಾಂತರಾಜು ವರದಿ ಅಂಕಿಅಂಶಗಳು ಇವೆ. ಅದರ ಆಧಾರದಲ್ಲಿ ಒಳಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲವರ್ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ

    ಇಲ್ಲದೆ ಹೋದರೆ ನಾಗಮೋಹನ್ ದಾಸ್ ಆಯೋಗ ಮೇ 5ರಿಂದ ಒಳಮೀಸಲಾತಿ ಗಣತಿ ಪ್ರಾರಂಭ ಮಾಡುತ್ತಿದೆ. ಇದಕ್ಕೂ ಮೊದಲೇ ಸಿದ್ದರಾಮಯ್ಯ ಜೂನ್10ರ ಒಳಗೆ ಮೀಸಲಾತಿ ಕೊಡುತ್ತೇವೆ ಎಂಬ ಭರವಸೆ ಕೊಟ್ಟು ಗಣತಿ ಶುರು ಮಾಡಿಸಬೇಕು ಎಂದರು. ಇದನ್ನೂ ಓದಿ: ಎಲ್ಲಾ ಹಿಂದೂಗಳನ್ನು ಸಾಲಾಗಿ ನಿಲ್ಲುವಂತೆ ಹೇಳಿದ್ರು: ಪಹಲ್ಗಾಮ್‌ ಭೀಕರತೆ ಬಿಚ್ಚಿಟ್ಟ ಸುಬೋಧ್‌

    ಸಚಿವ ಮಹದೇವಪ್ಪ ಬೆಳಗಾವಿ ಅಧಿವೇಶನ ಸಮಯದಲ್ಲಿ ಪ್ರತಿಭಟನೆ ಜಾಗದಲ್ಲಿ ಬಂದು 3 ತಿಂಗಳ ಒಳಗೆ ಒಳಮೀಸಲಾತಿ ಕೊಡಿಸುತ್ತೇವೆ. ಇಲ್ಲದೇ ಹೋದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಮೊದಲು ಒಳಮೀಸಲಾತಿ ಕೊಡಿಸಲಿ. ಜೊತೆಗೆ ಸಮುದಾಯದ 6 ಮಂತ್ರಿಗಳು ಒಳಮೀಸಲಾತಿ ಕೊಡಿಸಬೇಕು. ಸಿಎಂ ಮೀಸಲಾತಿ ಕೊಡಿಸದೇ ಹೋದರೆ ನೀವು ಈ ಸಮಾಜಕ್ಕೆ ದ್ರೋಹ ಮಾಡಿದ ಹಾಗೆ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಹರ್ಷಿಕಾ ಪೂಣಚ್ಚ ಮಗಳ ಹೆಸರು ರಿವೀಲ್ – ದೇವಿ ಹೆಸರಿಟ್ಟ ದಂಪತಿ

    ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಒಳಮೀಸಲಾತಿ ಚರ್ಚೆಗೆ ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಶ್ರಫ್‌ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್‌ – ಟೇಬಲ್‌ ಬಡಿದು ಆಕ್ರೋಶ

  • ಸಂವಿಧಾನ ಬದಲಾವಣೆ ಮಾಡಿದ್ರೆ ರಕ್ತಕ್ರಾಂತಿ ಅಂದಿದ್ದ ಸಿದ್ದರಾಮಯ್ಯನವರ ರಕ್ತ ಈಗ ತಣ್ಣಗೆ ಇದ್ಯಾ: ಕಾರಜೋಳ

    ಸಂವಿಧಾನ ಬದಲಾವಣೆ ಮಾಡಿದ್ರೆ ರಕ್ತಕ್ರಾಂತಿ ಅಂದಿದ್ದ ಸಿದ್ದರಾಮಯ್ಯನವರ ರಕ್ತ ಈಗ ತಣ್ಣಗೆ ಇದ್ಯಾ: ಕಾರಜೋಳ

    ನವದೆಹಲಿ: ಕಾಂಗ್ರೆಸ್ (Congress) ನಾಯಕರು ಯಾವತ್ತಿಗೂ ಸಂವಿಧಾನದ ವಿರೋಧಿಗಳು ಅವರು ಹಿಂದಿನಿಂದಲೂ ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ. ತಮ್ಮ ಕುರ್ಚಿ ಮತ್ತು ಮತ ಬ್ಯಾಂಕ್ ಆಸೆಗೆ ಏನನ್ನು ಬೇಕಾದರೂ ತಿದ್ದುಪಡಿ ಮಾಡುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ (Govinda Karajola) ಆಕ್ರೋಶ ವ್ಯಕ್ತಪಡಿಸಿದರು.

    ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿಕೆ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ನಾವು ದಲಿತರ ಪರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಪರ ಎಂದು ಭಾಷಣ ಮಾಡುತ್ತಾರೆ. ಆದರೆ 75 ವರ್ಷದಲ್ಲಿ ದಲಿತರು ಉದ್ಧಾರ ಆಗುವಂತ ಕೆಲಸ ಮಾಡಲಿಲ್ಲ. ಶಿಕ್ಷಣಕ್ಕೆ ಮಹತ್ವ ಕೊಡಲಿಲ್ಲ. ಅಲ್ಪಸಂಖ್ಯಾತರಿಗೆ ಉದ್ಯೋಗ ಕೊಡಲಿಲ್ಲ ಎಂದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    ಸಿಎಂ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ ಬಂಡಗೆಟ್ಟ ಮತ್ತು ಲಜ್ಜೆಗೆಟ್ಟ ಸರ್ಕಾರ. ಹನಿಟ್ರ‍್ಯಾಪ್ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಆಗಿದೆ. ಮೂವರು ಮಂತ್ರಿಗಳು ಪ್ರಸ್ತಾಪಿಸಿದಾಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬರಬೇಕಾಗಿತ್ತು. ಆಡಳಿತ ಮಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    ಬಿಜೆಪಿ ಕಾರ್ಯಕರ್ತ ಕೊಟ್ಟ ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ದೊಡ್ಡ ಮಟ್ಟದ ಹೋರಾಟ ಮಾಡಿದ್ದೀರಿ. ಆಗ ಸಿದ್ದರಾಮಯ್ಯ ಬಳಸಿದ ಭಾಷೆ ಏನು? ಸಂವಿಧಾನ ಬದಲಾವಣೆ ಮಾಡಿದರೆ, ರಕ್ತಕ್ರಾಂತಿ ಆಗುತ್ತದೆ ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯ ಅವರ ರಕ್ತ ತಣ್ಣಗೆ ಆಗಿದಿಯಾ ಕುದಿಯುತ್ತಿಲ್ಲವೇ? ಶಿವಕುಮಾರ್ ಹೇಳಿಕೆಗೆ ರಕ್ತ ಕ್ರಾಂತಿ ಆಗಬೇಕಿತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರ ಹೇಳಿಕೆಯನ್ನು ಹೇಗೆ ಸಮರ್ಥನೆ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರೀಲ್ಸ್‌ ವಿವಾದ: ಬಿಡುಗಡೆಯಾಗಿದ್ದ ರಜತ್‌, ವಿನಯ್‌ರನ್ನು ಮತ್ತೆ ಬಂಧಿಸಿದ ಪೊಲೀಸರು

    ತಮ್ಮ ಕುರ್ಚಿ ಆಸೆಗೆ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಉತ್ತರ ಕೊಟ್ಟಿದ್ದಾರೆ ಅಷ್ಟೇ. ಅವರು ಸೋನಿಯಾ, ರಾಹುಲ್ ಗಾಂಧಿ (Rahul Gandhi) ಅವರನ್ನು ಖುಷಿಪಡಿಸಲು ಮಾತನಾಡುತ್ತಾರೆ. ನಿಜವಾಗಿಯೂ ಅವರು ದಲಿತರ ಪರವಾಗಿದ್ದರೆ, ತಕ್ಷಣವೇ ಡಿಕೆಶಿ ಬಳಿ ರಾಜೀನಾಮೆ ಕೇಳಬೇಕು ಎಂದು ಆಗ್ರಹಿಸಿದರು.

  • ಕಾಂಗ್ರೆಸ್ ಸರ್ಕಾರ ನಾಟಕದ ಕಂಪನಿ: ಗೋವಿಂದ ಕಾರಜೋಳ

    ಕಾಂಗ್ರೆಸ್ ಸರ್ಕಾರ ನಾಟಕದ ಕಂಪನಿ: ಗೋವಿಂದ ಕಾರಜೋಳ

    ಚಿತ್ರದುರ್ಗ: ಕಾಂಗ್ರೆಸ್ (Congress) ಸರ್ಕಾರವೊಂದು ದೊಡ್ಡಾಟ ಹಾಗೂ ಬಯಲಾಟ ಆಡುವ ನಾಟಕದ ಕಂಪನಿ ಎಂದು ಚಿತ್ರದುರ್ಗ (Chitradurga) ಸಂಸದ ಗೋವಿಂದ ಕಾರಜೋಳ (Govinda Karajola) ಹೇಳಿದರು.

    ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ದಲಿತ ಸಮಾವೇಶ ನಡೆಸಲು ಭರದ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದನಂತರ 70 ವರ್ಷದಲ್ಲಿ 60 ವರ್ಷ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಇಂಥ ಗಿಮಿಕ್ ಬಹಳ ಮಾಡಿದ್ದಾರೆ. ಅವರಿಗೆ ಕುರ್ಚಿಕಂಟಕ ಬಂದಾಗ, ಪಕ್ಷದಿಂದ ಜನ ದೂರವಾದಾಗ, ಮತದಾರರು ಅವರನ್ನು ತಿರಸ್ಕರಿಸಿದಾಗ ಹೊಸ ನಾಟಕ ಶುರು ಮಾಡುತ್ತಾರೆ. ಹೀಗಾಗಿ ಈ ಸರ್ಕಾರ ಬಯಲಾಟ ಹಾಗೂ ದೊಡ್ಡಾಟ ಅಡುವ ದೊಡ್ದ ನಾಟಕ ಕಂಪನಿ ಎನಿಸಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: Photo Gallery: ಮೈಸೂರಲ್ಲಿ ನಟ ಡಾಲಿ ಧನಂಜಯ್‌ ಮದುವೆ ಸಂಭ್ರಮ

    ಈ ಹಿಂದೆ ನಾಟಕ ಆಡಲು ಹೆಚ್ಚು ಬೆಳಕು ಇರುತ್ತಿರಲಿಲ್ಲ. ಆಗ ಕಲಾವಿದರು ಕಂದಿಲ್ ಬೆಳಕಲ್ಲಿ ನಾಟಕ ನಡೆಸುತಿದ್ದರು. ಅಂತೆಯೇ ಈ ಕಾಂಗ್ರೆಸ್ ಸರ್ಕಾರವೊಂದು ದೊಡ್ಡ ನಾಟಕದ ಕಂಪನಿ. ಈಗ ಜನರಿಗೆ ಕಾಂಗ್ರೆಸ್ಸಿಗರ ಬಂಡವಾಳ ಅರ್ಥ ಆಗಿದೆ. ಅವರಿಗೆ ಅಷ್ಟೊಂದು ದಲಿತರ ಮೇಲೆ ಕಾಳಜಿಯಿದ್ದರೆ ದಲಿತರ 25 ಸಾವಿರ ಕೋಟಿ ಎಸ್ಸಿಪಿಟಿಎಸ್ ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ದಲಿತರ ಹಣಕ್ಕೆ ಕತ್ತರಿ ಹಾಕಿದ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುತ್ತತ್ತಿ ದೇವಾಲಯಕ್ಕೆ ಬಂದಿದ್ದ ಇಬ್ಬರು ನೀರುಪಾಲು

    ಇನ್ನು ದಲಿತರ ಸಮಾವೇಶ ನಡೆಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಆರ್ಥಿಕವಾಗಿ ಈ ಸರ್ಕಾರ ದಿವಾಳಿಯಾಗಿದೆ. ದಲಿತರ ಮೇಲೆ ಅಷ್ಟೊಂದು ಕಾಳಜಿಯಿದ್ದರೆ ಈ ಸರ್ಕಾರ ಶಿಕ್ಷಣ ಮತ್ತು ದಲಿತರ ಏಳಿಗೆಗೆ ಅನುದಾನ ಕೊಡಿಸಬೇಕು ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕನ ಬರ್ಬರ ಹತ್ಯೆ, ಆರೋಪಿ ಅರೆಸ್ಟ್‌

    ರಾಜ್ಯದ 9 ವಿವಿಗಳನ್ನು ಮುಚ್ಚುತ್ತಿರೋದು ನೋಡಿದರೆ ಸರ್ಕಾರದಲ್ಲಿ ಆರ್ಥಿಕ ದಿವಾಳಿ ಎದ್ದು ಕಾಣಿಸುತ್ತಿದೆ. ಈ ಸರ್ಕಾರದ ಭೂಮಿಯನ್ನು ಕಾಂಗ್ರೆಸ್ ನುಂಗಿ ಹಾಕಿದೆ. ಹೀಗಾಗಿ ನೂರಾರು ಎಕರೆ ಜಾಗ ಕೊಟ್ಟು ವಿಶ್ವವಿದ್ಯಾಲಯ ಮುಚ್ಚದಂತೆ ಉಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ ಕೇಸ್ – ಆರೋಪಿಗೆ 20 ವರ್ಷ ಜೈಲು, 45 ಸಾವಿರ ದಂಡ

    ಇದೇ ವೇಳೆ ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ದಲಿತರನ್ನು ಸಿಎಂ ಮಾಡಲ್ಲ. ದೀರ್ಘಾವಧಿ ಅಧಿಕಾರದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನೇ ಸಿಎಂ ಮಾಡಲಿಲ್ಲ. ಅವರ ನರಿಗದ್ದಲ ಕೈ ನಾಯಕರಿಗೆ ಕೇಳಲ್ಲ. ಕಾಂಗ್ರೆಸ್ಸನ್ನು ದಲಿತರೆಲ್ಲಾ ಸೇರಿ ಚಿಂದಿ ಮಾಡಿದಾಗ ಅವರಿಗೆ ಬುದ್ದಿ ಬರಲಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮೇನಲ್ಲಿ ಜೆಡಿಎಸ್‌ನಿಂದ ಬೃಹತ್ ಸಮಾವೇಶ: ಹೆಚ್‌ಡಿಡಿ

    ಉದಯಗಿರಿ ಗಲಾಟೆ ಪ್ರಕರಣ ಕಂಡಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನಿಸಿದೆ. ಈ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇವಲ ಉದಯಗಿರಿ ಒಂದೇ ಅಲ್ಲ. ಹುಬ್ಬಳ್ಳಿ ಗಲಾಟೆಯಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಈ ರಾಜ್ಯದ ಪರಿಸ್ಥಿತಿ ಸರಿಯಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದ ಬಳಿಕ ನಮ್ಮ ಪೂರ್ವಜರು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಅಧಿಕಾರ ನಡೆಸಿದ್ದಾರೆ. ಪೊಲೀಸ್ ಠಾಣೆ ಮೇಲೆ ಅಟ್ಯಾಕ್, ಪೊಲೀಸರ ಮೇಲೆ ದೌರ್ಜನ್ಯ ನಡೆಸಿದವರನ್ನು ಎಂದೂ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ದೇವರಾಜ್ ಅರಸುರವರ ದಾಖಲೆ ಸರಿಗಟ್ಟುತ್ತಾರೆ: ಕೆಎನ್ ರಾಜಣ್ಣ

    ಇಂದು ಗೂಂಡಗಳು, ಕೋಮುವಾದಿ ಗಲಬೆ ಹುಟ್ಟಿಸಿ, ಶಾಂತಿ ಕದಡುವವರಿಗೆ ಪ್ರೋತ್ಸಾಹಿಸುವ ಸರ್ಕಾರ ಅಧಿಕಾರದಲ್ಲಿದೆ ಇದನ್ನು ಖಂಡಿಸುತ್ತೇನೆ. ಎಂಟು ದಿನಗಳ ಬಳಿಕ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಿ ಸಭೆ ನಡೆಸಿದ್ದಾರೆ. ಯಾರನ್ನು ಬಿಡಲ್ಲವೆಂದು ಕೆಲವು ಪದಗಳನ್ನು ಬಳಸಿದ್ದಾರೆ. ರಾಜ್ಯದ ಗೃಹಮಂತ್ರಿ, ಡಿಸಿಎಂ, ಸಿಎಂ ಯಾರನ್ನು ಬಿಡಲ್ಲವೆಂದು ಹೇಳಿದ್ದಾರೆ. ಯಾರನ್ನು ಬಿಡಲ್ಲ ಅನ್ನೋದನ್ನು ಸಾಬೀತು ಮಾಡಿ ತೋರಿಸಬೇಕು. ಎಫ್‌ಐಆರ್‌ನಲ್ಲಿ ಸಾವಿರ ಮಂದಿ ಇದ್ದರು ಎಂಬ ಅಂಶವಿದೆ. ಸಿಸಿಟಿವಿಯಲ್ಲಿ ರೆಕಾರ್ಡ್, ಮೀಡಿಯಾ ಕ್ಯಾಮೆರಾಗಳಲ್ಲಿ 1,000 ಮಂದಿ ಇರೋದು ಸೆರೆಯಾಗಿದೆ, ಪತ್ರಿಕೆಗಳಲ್ಲಿ ವರದಿಯಾಗಿದೆ. ತಿಣುಕಾಡಿ 13 ಮಂದಿ ಬಂಧಿಸಿರುವ ನಿಮಗೆ ನಾಚಿಕೆಯಾಗಬೇಕು ಎಂದು ಗುಡುಗಿದರು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ ಅಂತ ನಾನೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ: ಹೆಚ್‌ಡಿಡಿ

    ಇನ್ನು 1,000 ಮಂದಿ ನಡೆಸಿದ ಗಲಾಟೆಯಲ್ಲಿ ಜೈಲು ತುಂಬುವಷ್ಟು ಜನರನ್ನು ಬಂದಿಸಬೇಕಿತ್ತು. ಆಡಳಿತ ನಡೆಸಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಸಾರ್ವಜನಿಕರ ಬಳಿ ಕ್ಷಮೆಯಾಚಿಸುವಂತೆ ಆಗ್ರಹಿದರು. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ

  • ಜ.4ಕ್ಕೆ ಕಲಬುರಗಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಗೋವಿಂದ ಕಾರಜೋಳ

    ಜ.4ಕ್ಕೆ ಕಲಬುರಗಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಗೋವಿಂದ ಕಾರಜೋಳ

    ಚಿತ್ರದುರ್ಗ: ರಾಜ್ಯದಲ್ಲಿ ಅಧಿಕಾರಿಗಳು, ನೌಕರರ ಸರಣಿ ಆತ್ಮಹತ್ಯೆ ಹಿನ್ನೆಲೆ ಜ.4ಕ್ಕೆ ಕಲಬುರಗಿಯಲ್ಲಿ (Kalaburagi) ಬಿಜೆಪಿಯಿಂದ (BJP) ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ (Govinda Karajola) ಹೇಳಿದ್ದಾರೆ.

    ಬೀದರ್‌ನಲ್ಲಿ (Bidar) ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಕುರಿತು ಚಿತ್ರದುರ್ಗದಲ್ಲಿ (Chitradurga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡೆತ್ ನೋಟ್‌ನಲ್ಲಿ ಇನ್ನೂ ನಾಲ್ವರಿಗೆ ಸುಪಾರಿ ಬಗ್ಗೆ ಪ್ರಸ್ತಾಪವಿದೆ. ಮಹಾರಾಷ್ಟ್ರದ ಸುಪಾರಿ ಕಿಲ್ಲರ್ಸ್‌ಗೆ ಸುಪಾರಿ ಬಗ್ಗೆ ಮಾಹಿತಿ ಹಿನ್ನೆಲೆ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿಯ ರವೀಶ್‌ ಹೆಚ್‌ಎಸ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

    ಠಾಣೆಗೆ ದೂರು ನೀಡಲು ಹೋದರೆ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಸಿಎಂ, ಸಚಿವರು, ರಾಜ್ಯ ಸರ್ಕಾರದಿಂದ ಭಂಡತನ ಪ್ರದರ್ಶನವಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ಆತ್ಮಹತ್ಯೆ ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೊಮ್ಮಸಂದ್ರದಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಬಟ್ಟೆ ಕಾರ್ಖಾನೆ

  • ಎಸ್‌ಎಂ ಕೃಷ್ಣ ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣ: ಗೋವಿಂದ ಕಾರಜೋಳ

    ಎಸ್‌ಎಂ ಕೃಷ್ಣ ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣ: ಗೋವಿಂದ ಕಾರಜೋಳ

    ಚಿತ್ರದುರ್ಗ: ಕೆಂಗಲ್ ಹನುಮಂತಯ್ಯ (Kengal Hanumanthaiah) ಕಟ್ಟಿಸಿದ ವಿಧಾನಸೌಧ (Vidhana Soudha) ಏಕೀಕರಣದ ಸಂಕೇತ. ಎಸ್‌ಎಂ ಕೃಷ್ಣ (SM Krishna) ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣವಾಗಿದೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.

    ಮಾಜಿ ಸಿಎಂ ಎಸ್‌ಎಂ ಕೃಷ್ಣ ನಿಧನಕ್ಕೆ ಗೋವಿಂದ ಕಾರಜೋಳ (Govinda Karajola) ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ವಿಕಾಸಸೌಧ ಆಧುನೀಕರಣ, ಜಾಗತೀಕರಣದ ಸಂಕೇತ ಆಗಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿಸಿದ ಕೀರ್ತಿ, ಗೌರವ ಎಸ್‌ಎಂ ಕೃಷ್ಣಗೆ ಸಲ್ಲುತ್ತದೆ. ಪ್ರಪಂಚದ ಗಣ್ಯ ವ್ಯಕ್ತಿಗಳು ಮೊದಲು ಬೆಂಗಳೂರಿಗೆ ಬರುವ ರೂಢಿ. ಬೆಂಗಳೂರು ಭೇಟಿ ಬಳಿಕ ದೆಹಲಿಗೆ ತೆರಳುವ ಕಾಲ ಎಸ್‌ಎಂ ಕೃಷ್ಣರ ಕಾಲದಲ್ಲಿ ಬಂತು ಎಂದು ತಿಳಿಸಿದರು. ಇದನ್ನೂ ಓದಿ: ಸಾವಿನಲ್ಲೂ ಹುಟ್ಟೂರಿನ ಒಳಿತನ್ನೇ ಬಯಸಿದ ಎಸ್‌ಎಂಕೆ

    ಸಾರ್ವಜನಿಕ ಜೀವನದಿ ಕೀರ್ತಿ, ಗೌರವ ಹೆಚ್ಚಿಸಿದ ಸುಸಂಸ್ಕೃತ ರಾಜಕಾರಣಿ. ಎಸ್‌ಎಂ ಕೃಷ್ಣರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಕುಟುಂಬಕ್ಕಾದ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೊಳ್ಳೇಗಾಲ ಮಾಜಿ ಶಾಸಕ ಎಸ್ ಜಯಣ್ಣ ಹೃದಯಾಘಾತದಿಂದ ನಿಧನ

  • ಕೋಟೆನಾಡಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಕೇಂದ್ರ ಸರ್ಕಾರ ಅಸ್ತು

    ಕೋಟೆನಾಡಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಕೇಂದ್ರ ಸರ್ಕಾರ ಅಸ್ತು

    –  2025ರಿಂದಲೇ ಕಾರ್ಯಾರಂಭ ಸಾಧ್ಯತೆ

    ಚಿತ್ರದುರ್ಗ: ಹಲವು ದಶಕಗಳ ಕನಸಾದ ಚಿತ್ರದುರ್ಗ (Chitradurga) ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದ್ದ ಕೇಂದ್ರೀಯ ವಿದ್ಯಾಲಯಕ್ಕೆ (KV) ಕೊನೆಗೂ ಕೇಂದ್ರ ಸರ್ಕಾರ ಅಸ್ತು ಎಂದಿದೆ.

    ಡಿಸೆಂಬರ್ 06ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ದೇಶಕ್ಕೆ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯಕ್ಕೂ ಮೂರು ಕೇಂದ್ರೀಯ ವಿದ್ಯಾಲಯ ಮಂಜೂರಾಗಿವೆ. ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳು ಗ್ರಾಮದ ಬಳಿಯ ಹೊಸ ಕೇಂದ್ರೀಯ ವಿದ್ಯಾಲಯ ಇದರಲ್ಲಿ ಸೇರಿದೆ. ಇದರೊಂದಿಗೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೂ ನೂತನ ಕೆವಿಗಳು ಮಂಜೂರಾಗಿವೆ. ಇದನ್ನೂ ಓದಿ: ಜಿ.ಪಂ ಸಿಇಓ ಸಹಿ ನಕಲು ಮಾಡಿ ಎಂಜಿನಿಯರ್‌ಗೆ ನೇಮಕಾತಿ ಪತ್ರ – ಎಫ್‌ಡಿಎ ಮೇಲೆ ಎಫ್‌ಐಆರ್

    ಕೇಂದ್ರೀಯ ವಿದ್ಯಾಲಯದ ತರಗತಿಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡುವ ಸಾಧ್ಯತೆಯಿದ್ದು, ತಾತ್ಕಾಲಿಕವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಪ್ರಾರಂಭವಾಗಲಿವೆ. ಮುಂದಿನ ಮೂರು ವರ್ಷದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ನಂತರ ಅಲ್ಲಿ ಹೊಸ ತರಗತಿಗಳನ್ನು ಪ್ರಾರಂಭಿಸುವುದು ಕೇಂದ್ರೀಯ ವಿದ್ಯಾಲಯದ ನಿಯಮವಾಗಿದೆ. ಇದನ್ನೂ ಓದಿ: ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದ ಉದ್ಯಮಿಗೆ ಗುಂಡಿಕ್ಕಿ ಹತ್ಯೆ

    ಮಾಜಿ ಸಂಸದ ಎ.ನಾರಾಯಣಸ್ವಾಮಿ ಶ್ರಮ ಅಪಾರ:
    ಅತಿ ಹಿಂದುಳಿದ ಪ್ರದೇಶ ಎನಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ ಆರಂಭವಾಗುವುದರ ಹಿಂದೆ ಕೇಂದ್ರದ ಮಾಜಿ ಸಚಿವರು, ಮಾಜಿ ಸಂಸದರೂ ಆಗಿರುವ ಎ.ನಾರಾಯಣಸ್ವಾಮಿ ಅವರ ಶ್ರಮ ಅಪಾರವಾಗಿದೆ. ಈ ಹಿಂದೆ ಅವರು ಕೇಂದ್ರೀಯ ವಿದ್ಯಾಲಯ ಆರಂಭಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ತಾತ್ಕಾಲಿಕ ತರಗತಿ ಆರಂಭಿಸಲು ಪತ್ರ ವ್ಯವಹಾರ ನಡೆಸಿ ಕೊಠಡಿಗಳನ್ನು ಮಂಜೂರು ಮಾಡಿಸಿದ್ದರು. 2021ರಲ್ಲೇ ಬಹುತೇಕ ಎಲ್ಲಾ ಪ್ರಕ್ರಿಯೆಗಳು ಅಂತಿಮವಾಗಿ ಎರಡು ವರ್ಷದ ಹಿಂದೆಯೇ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ ಎನ್ನಲಾಗುತ್ತಿತ್ತು. ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಆದರೆ, ಕೇಂದ್ರ ಸರ್ಕಾರ ದೇಶದ ಇತರೆ ರಾಜ್ಯಗಳ ಪ್ರಸ್ತಾವನೆಯ ಜೊತೆಗೆ ಒಟ್ಟಿಗೆ ಅನುಮೋದನೆ ನೀಡುವ ಉದ್ದೇಶದಿಂದ ಚಿತ್ರದುರ್ಗ ಕೇಂದ್ರೀಯ ವಿದ್ಯಾಲಯವನ್ನು ಪೆಂಡಿಂಗ್ ಇಟ್ಟಿತ್ತು. ಆದರೆ ಈ ಬಾರಿ ಕೇಂದ್ರದ ಸಂಪುಟ ಸಭೆಯಲ್ಲಿ ನಿರ್ಧರಿಸಿದಂತೆ ಕುಂಚಿಗನಾಳು ಬಳಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಈಗಾಗಲೇ ಭೂಮಿ ಸಿದ್ಧವಾಗಿದೆ. ವಿಆರ್‌ಎಲ್ ಸಮೀಪದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯಕ್ಕೆ ಜಾಗ ಅಂತಿಮವಾಗಿದ್ದು, ಕೆಲ ದಿನಗಳಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಲಿದೆ. ಇದನ್ನೂ ಓದಿ: ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ

    ಗೋವಿಂದ ಕಾರಜೋಳ ಮೊದಲ ಪ್ರಯತ್ನ ಯಶಸ್ವಿ:
    ಎ.ನಾರಾಯಣಸ್ವಾಮಿ ಅವರ ಪ್ರಯತ್ನಕ್ಕೆ ಪೂರಕವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನೂತನ ಸಂಸದರಾಗಿ ಆಯ್ಕೆಯಾಗಿ ಬಂದ ಗೋವಿಂದ ಕಾರಜೋಳ ಅವರು ಕೇಂದ್ರೀಯ ವಿದ್ಯಾಲಯ ಕುರಿತು ಮೊದಲ ದಿನವೇ ಅಧಿವೇಶನದಲ್ಲಿ ಸದ್ದು ಮಾಡಿದ್ದರು. ಸಂಸದರಾಗಿ ದೆಹಲಿಗೆ ತೆರಳಿದ ಮೊದಲ ದಿನವೇ ಕೇಂದ್ರದ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ಹಿಂದುಳಿದ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಪ್ರಧಾನಿ ಅಂಗಳ ತಲುಪಿದ ಮುಡಾ ಪ್ರಕರಣ – ಸಿಬಿಐಗೆ ವಹಿಸುವಂತೆ ವಕೀಲನಿಂದ ಪತ್ರ

    ಅಲ್ಲದೇ ಮೊದಲ ದಿನವೇ ಸಂಸತ್ತಿನ ಅಧಿವೇಶನದಲ್ಲಿ ಚಿತ್ರದುರ್ಗದ ಕೇಂದ್ರೀಯ ವಿದ್ಯಾಲಯ ಆರಂಭದ ಕುರಿತು ಪ್ರಶ್ನೆ ಮಾಡಿದ್ದ ಹಿನ್ನೆಲೆ ಕೋಟೆನಾಡಿನ ಬಹುದಿನಗಳ ಕನಸಾದ ಕೇಂದ್ರಿಯ ವಿದ್ಯಾಲಯ ಮಂಜೂರಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅತಿಹಿಂದುಳಿದ ಪ್ರದೇಶ ಎನಿಸಿರುವ ಚಿತ್ರದುರ್ಗಕ್ಕೆ ಇದೊಂದು ವರದಾನ. ಪ್ರತಿಭಾವಂತ ವಿದ್ಯಾರ್ಥಿಗಳಿಗೊಂದು ಸುವರ್ಣವಕಾಶ ಎನಿಸಿದೆ. ಇದನ್ನೂ ಓದಿ: ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ

  • ನಿಮ್ಮದಲ್ಲದ ಸೈಟ್‌ಗೆ ಪರಿಹಾರ ಕೇಳೋದು ಆತ್ಮಸಾಕ್ಷಿಯಾ?: ಕಾರಜೋಳ

    ನಿಮ್ಮದಲ್ಲದ ಸೈಟ್‌ಗೆ ಪರಿಹಾರ ಕೇಳೋದು ಆತ್ಮಸಾಕ್ಷಿಯಾ?: ಕಾರಜೋಳ

    ಚಿತ್ರದುರ್ಗ: ನಿಮ್ಮದಲ್ಲದ ಸೈಟ್‌ಗೆ ಪರಿಹಾರ ಕೇಳೋದು ಆತ್ಮಸಾಕ್ಷಿಯಾ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ (Govinda Karajola) ಸಿಎಂ ಸಿದ್ದರಾಮಯ್ಯಗೆ (Siddaramaiah) ಟಾಂಗ್ ಕೊಟ್ಟಿದ್ದಾರೆ.

    ಚಿತ್ರದುರ್ಗದಲ್ಲಿ (Chitradurga) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆತ್ಮಸಾಕ್ಷಿಗೆ ಅನುಗುಣ ನಡೆಯುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮುಡಾ ಹಗರಣದಲ್ಲಿ (MUDA Scam) ಸಿಲುಕಿರುವ ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಅಕ್ರಮವಾಗಿ ಬೇನಾಮಿ ಆಸ್ತಿ ಪಡೆದುಕೊಳ್ಳುವುದು ಆತ್ಮಸಾಕ್ಷಿಯಾ? ಅಲ್ಲದೇ, ಈ ಕೇಸ್ ವಿಚಾರದಲ್ಲಿ ಕೋರ್ಟ್ ಆದೇಶ ನೀಡಿದ ದಿನವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು ಎಂದರು. ಇದನ್ನೂ ಓದಿ: ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

    ಈಗಲೂ ಕಾಲ ಮಿಂಚಿಲ್ಲ. ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿ. ಹಾಗೆಯೇ ಸಿಎಂ ಸಿದ್ದರಾಮಯ್ಯ ಅಷ್ಟೊಂದು ತಪ್ಪು ಮಾಡಿಲ್ಲವೆಂಬ ಖಚಿತತೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಆ ಪ್ರಕರಣದಲ್ಲಿ ಒಂದು ವೇಳೆ ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಅವರೇ ಸಿಎಂ ಆಗಲಿ ಎಂದರು. ಈ ವೇಳೆ ಕೇಂದ್ರ ಸಚಿವ ಸೋಮಣ್ಣ, ಎಂಎಲ್‌ಸಿ ನವೀನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಯತ್ನಾಳ್‌ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಮಾಜಿ ಸಂಸದ ಮುನಿಸ್ವಾಮಿ

  • ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂಟಿ, ದ್ವೇಷದಿಂದ ಬಿಜೆಪಿ ವಿರುದ್ಧ ಹಗರಣ ಆರೋಪ: ಕಾರಜೋಳ ಕಿಡಿ

    ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂಟಿ, ದ್ವೇಷದಿಂದ ಬಿಜೆಪಿ ವಿರುದ್ಧ ಹಗರಣ ಆರೋಪ: ಕಾರಜೋಳ ಕಿಡಿ

    ಬಳ್ಳಾರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಒಂಟಿಯಾಗಿದ್ದಾರೆ. ಸಿಎಂ ಪತ್ರಿಕಾಗೋಷ್ಠಿ ಮಾಡಿದಾಗ ಅವರ ಪಕ್ಕದಲ್ಲಿ ಕೂರಲು ಅವರ ಪಕ್ಷದ ನಾಯಕರು, ಮಂತ್ರಿಗಳು ಹಿಂಜರಿಯುತ್ತಿದ್ದಾರೆ. ಅಷ್ಟೇ ಅಲ್ಲಾ ವಿಧಾನಸಭೆಯಲ್ಲೂ ಕೂಡ ಸಿದ್ದರಾಮಯ್ಯನವರು ಒಂಟಿಯಾಗಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ (Govinda Karajola) ಹೇಳಿದ್ದಾರೆ.

    ಬಳ್ಳಾರಿಯ (Ballari) ಸಂಡೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಏನಾದರು ಮಾತನಾಡಿದರೆ ಅದನ್ನು ಬೆಂಬಲಿಸಲು ಯಾವ ಶಾಸಕರು, ಸಚಿವರು ಎದ್ದು ನಿಲ್ಲುತ್ತಿಲ್ಲ. ಸಿದ್ದರಾಮಯ್ಯ ಈ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಎಂದು ಭಯದಿಂದ ಎಲ್ಲರೂ ಅವರನ್ನು ಬಿಟ್ಟು ದೂರ ಸರಿಯುತ್ತಿದ್ದಾರೆ. ಬಿಜೆಪಿ (BJP) ಕಾಲದ 21 ಹಗರಣಗಳನ್ನು ತನಿಖೆ ಮಾಡುತ್ತಾರಂತೆ. ನೀವು ಒಂದು ವರ್ಷ ಮೂರು ತಿಂಗಳು ಕಡುಬು ತಿನ್ನುತ್ತಿದ್ರಾ? ಇಷ್ಟು ದಿನ ಯಾಕೆ ಬಾಯಿ ಮುಚ್ಚಿಕೊಂಡಿದ್ರಿ? ದ್ವೇಷ ಮನೋಭಾವನೆಯಿಂದ ಸುಳ್ಳು ಆರೋಪ ಮಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು

    ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Development Corporation Scam) ಸಿಲುಕಿದ್ದರಿಂದ ಸಿಎಂ ಸಿದ್ದರಾಮಯ್ಯ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳು ಹಗರಣ ಮಾಡಿದ್ದಾರೆ ಎನ್ನುತ್ತೀರಿ, ನೀವು ಅಸಹಾಯಕರಾ? ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವರ ವ್ಯಕ್ತಿತ್ವಕ್ಕೆ ಮೆರುಗು ಬರುತ್ತದೆ. ದೇಶಕ್ಕೆ ಬಂದು 75 ವರ್ಷ ಆಗಿದೆ. 60 ವರ್ಷ ಅನೇಕ ಇಡಿ, ಐಟಿ ದಾಳಿ ಆಗಿದೆ. ಹಾಗಾದರೆ ಅವನ್ನೆಲ್ಲಾ ನೀವೆ ಮಾಡಿಸಿದ್ದು ಎಂದು ಹೇಳಿದ್ದೇವಾ? ಕಾಂಗ್ರೆಸ್‌ನವರ (Congress) ಆರೋಪವನ್ನು ಜನ ನಂಬಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 2 ಅಡಿಯಷ್ಟೇ ಬಾಕಿ

  • ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲ್ಲುವಾಗ ಸರ್ಕಾರ ಏನು ಮಾಡ್ತಿತ್ತು?: ಗೋವಿಂದ ಕಾರಜೋಳ

    ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲ್ಲುವಾಗ ಸರ್ಕಾರ ಏನು ಮಾಡ್ತಿತ್ತು?: ಗೋವಿಂದ ಕಾರಜೋಳ

    – ಚಿತ್ರದುರ್ಗ ಉಸ್ತುವಾರಿ ಸಚಿವ ಸುಧಾಕರ್ ನಡೆಯನ್ನು ಖಂಡಿಸುತ್ತೇನೆ ಎಂದ ಸಂಸದ

    ಚಿತ್ರದುರ್ಗ: ರೇಣುಕಾಸ್ವಾಮಿಯನ್ನು (Renukaswamy Murder Case) ಕಿಡ್ನಾಪ್ ಮಾಡಿ ಕೊಲ್ಲುವಾಗ ಸರ್ಕಾರ ಏನು ಮಾಡುತ್ತಿತ್ತು? ಸರ್ಕಾರ ಜೀವಂತವಿದೆಯೋ ಇಲ್ಲವೋ ಎಂದು ಅನುಮಾನ ಮೂಡಿಸಿದೆ ಎಂದು ಸಂಸದ ಗೋವಿಂದ ಕಾರಜೋಳ (Govinda Karajola) ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದಾರೆ.

    ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಚಿತ್ರದುರ್ಗದಲ್ಲಿ (Chitradurga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಇಂಟೆಲಿಜೆನ್ಸ್ ಇಲಾಖೆ ಏನು ಮಾಡುತ್ತಿತ್ತು? ಈ ಕೇಸಲ್ಲಿ ಪೊಲೀಸ್ ಅಧಿಕಾರಿಗಳು ನಿಷ್ಕ್ರಿಯಗೊಂಡಿದ್ದು ಯಾಕೆ? ಈ ಸ್ಥಿತಿ ನೋಡಿದಾಗ ಸರ್ಕಾರ ಜೀವಂತ ಇಲ್ಲ ಎನ್ನಿಸಿದೆ ಎಂದರು. ಇದನ್ನೂ ಓದಿ: ಈಜಾಡಲು ಹೋಗಿ ಬಳ್ಳೂರು ಕೆರೆಯಲ್ಲಿ ಮೃತಪಟ್ಟ ವಿದ್ಯಾರ್ಥಿಯ ಶವ ಪತ್ತೆ

    ಸ್ಥಳೀಯ ಶಾಸಕ 24 ಗಂಟೆಯೊಳಗೆ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ ಎಂದು ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಈವರೆಗೆ ತಿರುಗಿ ನೋಡಿಲ್ಲ, ಚಿತ್ರದುರ್ಗ ಉಸ್ತುವಾರಿ ಸಚಿವ ಸುಧಾಕರ್ ನಡೆಯನ್ನು ಖಂಡಿಸುತ್ತೇನೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕೊಲೆಯಾಗಿ 10 ದಿನ ಕಳೆದರೂ ಪತ್ತೆಯಾಗಿಲ್ಲ ರೇಣುಕಾಸ್ವಾಮಿ ಮೊಬೈಲ್