Tag: govinda babu poojary

  • ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣ- ಸಿಸಿಬಿ ವಿಚಾರಣೆ ವೇಳೆ ಚೈತ್ರಾ ತಪ್ಪೊಪ್ಪಿಗೆ

    ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣ- ಸಿಸಿಬಿ ವಿಚಾರಣೆ ವೇಳೆ ಚೈತ್ರಾ ತಪ್ಪೊಪ್ಪಿಗೆ

    ಬೆಂಗಳೂರು: ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ವೇಳೆ ಚೈತ್ರಾ (Chaitra) ತಪ್ಪೊಪ್ಪಿಗೆ ನೀಡಿದ್ದಾರೆ.

    ಸಿಸಿಬಿ ಎದುರು ಚೈತ್ರಾ ನೀಡಿದ ಸ್ವ-ಇಚ್ಛಾ ಹೇಳಿಕೆ ಏನು..?, ವಿಷದ ಬಾಟಲಿ ನಾಟಕದ ಬಗ್ಗೆ ಚೈತ್ರಾ ಹೇಳಿದ್ದೇನು..?, ಯಾರ್ಯಾರನ್ನ ಬಳಸಿಕೊಂಡು ಎಲ್ಲೆಲ್ಲಿ ಹಣ ವಸೂಲಿಗೆ ನಿಂತಿದ್ರು..?, ಡೀಲ್ ಮಾಡೋದಕ್ಕೆ ಸಿಮ್ ಖರೀದಿ ಮಾಡಿಸಿಕೊಟ್ಟಿದ್ದು ಯಾರು ಎಂಬುದರ ಇಂಚಿಂಚು ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ತಪ್ಪೊಪ್ಪಿಗೆ ಪ್ರತಿಯಲ್ಲಿ ಏನಿದೆ..?: 2018ರಲ್ಲಿ ಅಭಿನವ ಹಾಲಶ್ರೀಯನ್ನು (Halashree) ಭೇಟಿ ಮಾಡಿದ್ದೆ. ನನಗೂ ಬಿಜೆಪಿಯ ಕೆಲ ನಾಯಕರು ಗೊತ್ತಿದ್ರಿಂದ ಅಭಿನವ ಹಾಲಶ್ರೀ ನನಗೆ ಒಂದು ಮಾತು ಹೇಳಿದ್ರು. ಈಗಾಗಲೇ 10 ಜನರ ಪೈಕಿ 6 ಜನರಿಗೆ ಟಿಕೆಟ್ ಕೊಡಿಸಿದ್ರು. ಇನ್ನು 4 ಜನರಿಗೆ ಟಿಕೆಟ್ ಕೊಡಿಸ್ತೀನಿ ಅಂತ ಹೇಳಲಾಗಿತ್ತು. ಬಿಜೆಪಿಯ ಟಿಕೆಟ್ (BJP Ticket) ಯಾರಿಗಾದ್ರೂ ಬೇಕು ಅಂದ್ರೆ ನನಗೆ ಹೇಳಿ ಟಿಕೆಟ್ ಕೊಡಿಸ್ತೀನಿ ಅಂದಿದ್ರು.

    2022ರಲ್ಲಿ ಪ್ರಸಾದ್ ಬೈಂದೂರು (Prasad Baindoor) ಮೂಲಕ ನನಗೆ ಗೋವಿಂದ ಬಾಬು ಪೂಜಾರಿ (Govinda Babu Poojary) ಸಂಪರ್ಕ ಆಯ್ತು. ಗೋವಿಂದಬಾಬು ಪೂಜಾರಿ ಬೈಂದೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ರು. ಗೋವಿಂದ ಬಾಬು ಪೂಜಾರಿ ಅವರಿಗೆ ಮೋಸ ಮಾಡೋದಕ್ಕಾಗಿ ಗಗನ್ ಜೊತೆ ಸೇರಿಕೊಂಡೆ. ಕೇಂದ್ರದ ನಾಯಕರು ಅಂತ ಪರಿಚಯ ಮಾಡೋದಕ್ಕೆ ರಮೇಶ್, ಧನರಾಜ್ ತೀರ್ಮಾನ ಮಾಡಿದ್ವಿ. ಧನರಾಜ್ ಮತ್ತು ರಮೇಶ್‍ಗೆ ಮೂರು ಗಂಟೆಗಳ ಕಾಲ ರಿಹರ್ಸಲ್ ಮಾಡಿಸಿದ್ವಿ. 2022ರ ಜುಲೈ 4ರಂದು ಗಗನ್ (Gagan), ಗೋವಿಂದ ಬಾಬು ಪೂಜಾರಿಯನ್ನು ಚಿಕ್ಕಮಗಳೂರಿನ ಅತಿಥಿ ಗೃಹಕ್ಕೆ ಕರೆಸಿಕೊಂಡು ಧನರಾಜ್ ಮತ್ತು ರಮೇಶ್ ಇಬ್ಬರನ್ನು ಪಿಎಂ ಮತ್ತು ಗೃಹಸಚಿವಾಲಯದ ನಿಕಟವರ್ತಿಗಳು ಅಂತ ಪರಿಚಯ ಮಾಡಿಕೊಟ್ವಿ. ಗಗನ್ ಆ ಸಂದರ್ಭದಲ್ಲಿ 50 ಲಕ್ಷಕ್ಕೆ ಬೇಡಿಕೆ ಇಟ್ಟರು.

    ಗೋವಿಂದಬಾಬು ಪೂಜಾರಿ ಏಕಾಏಕಿ ಹಣ ನೀಡಲು ಒಪ್ಪಿಕೊಂಡ್ರು. ಇದ್ರಿಂದ ಖುಷಿಯಾಗಿ ನಾವು ಮುಂದಿನ ಡೀಲ್‍ಗೆ ಇಳಿದ್ವಿ. ಹೈಕಮಾಂಡ್ ನಾಯಕರು ಅಂತ ಹೇಳಿದ್ದ ಧನರಾಜ್ ಮತ್ತು ರಮೇಶ್‍ಗೆ 2 ಲಕ್ಷ ಹಣ ಕೊಟ್ವಿ. ಶಿವಮೊಗ್ಗದ ಆರ್‍ಎಸ್‍ಎಸ್ ಕಚೇರಿಯ ಬಳಿ ಮತ್ತೆ ಕರೆಸಿ 3 ಕೋಟಿ ಕೇಳಿದ್ವಿ. 3 ಕೋಟಿಯನ್ನು ಪ್ರಸಾದ್ ಬೈಂದೂರು ಮೂಲಕ ಮಂಗಳೂರಿಗೆ ಹಣ ತರಿಸಿಕೊಳ್ಳಲಾಯ್ತು. ಗೋವಿಂದ ಬಾಬು ನೀಡಿದ್ದ 50 ಲಕ್ಷದಲ್ಲಿ 12 ಲಕ್ಷ ಗಗನ್ ಕಡೂರಿಗೆ ನೀಡಲಾಗಿತ್ತು. ಚೆನ್ನನಾಯ್ಕ್‍ನನ್ನು ಬಳಸಿಕೊಂಡು ವಿಶ್ವನಾಥ್ ಜೀ ಹೆಸರನ್ನು ಹೇಳಿ ಮೋಸ ಮಾಡಲಾಗಿತ್ತು ಎಂದು ಸಿಸಿಬಿ ಮುಂದೆ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ.

    5 ಕೋಟಿ ಲೆಕ್ಕ ಕೊಟ್ಟ ಚೈತ್ರಾ..!
    * ಚೈತ್ರಾ & ಶ್ರೀಕಾಂತ್‍ಗೆ – 3 ಕೋಟಿ 2 ಲಕ್ಷ ರೂ.
    * ಅಭಿನವ ಹಾಲಶ್ರೀಗೆ – 1.5 ಕೋಟಿ ರೂ.
    * ಗಗನ್ ಕಡೂರ್ ಗೆ – 39 ಲಕ್ಷ ರೂ.
    * ರಮೇಶ್‍ಗೆ – 2 ಲಕ್ಷ ರೂ.
    * ಧನರಾಜ್‍ಗೆ – 2 ಲಕ್ಷ ರೂ.
    * ಚೆನ್ನನಾಯ್ಕ್ ಗೆ – 1 ಲಕ್ಷ ರೂ.

  • ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್

    ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್

    ಬೆಂಗಳೂರು: ವಂಚಕಿ ಚೈತ್ರಾ ಕುಂದಾಪುರ (Chaitra Kundapura) ಹಾಗೂ ಗ್ಯಾಂಗ್ ಡೀಲ್‍ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯನ್ನು (Chakravarthy Sulibele) ಥಳಕು ಹಾಕುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಸೂಲಿಬೆಲೆ ಪಬ್ಲಿಕ್ ಟಿವಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Poojary) ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಎರಡು ಬಾರಿ ಕರೆ ಮಾಡಿದ್ರು. ಗೋವಿಂದ ಬಾಬು ಪೂಜಾರಿಯವರ ಜೊತೆ ಯಾಕೆ ಹೀಗೆ ದುಡ್ಡು ಕೊಟ್ರಿ ಅಂತಾ ಜಗಳವಾಡಿದ್ದೆ. ಹಾಲಾಶ್ರೀ ಸ್ವಾಮೀಜಿ ಜೊತೆ ಸೇರಿದಂತೆ ಅನೇಕ ಸ್ವಾಮೀಜಿಗಳ ಜೊತೆ ಸಂಪರ್ಕ ಇದೆ. ಹಾಗಂತ ಈ ಪ್ರಕರಣದಲ್ಲಿ ಥಳಕು ಹಾಕೋದು ಬೇಡ ಎಂದರು.

    ನನ್ನ ಹೆಸರನ್ನು ಥಳಕು ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ ಇದನ್ನು ಗಂಭೀರವಾಗಿ ನಾನು ತೆಗೆದುಕೊಳ್ಳಲ್ಲ. ಗೋವಿಂದ ಬಾಬು ಪೂಜಾರಿ ನನ್ನ ಆತ್ಮೀಯರು ಎಂದರು. ಇದನ್ನೂ ಓದಿ: ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ – ಬಂಧನಕ್ಕೆ ತೆರಳಿದ ಸಿಸಿಬಿ ಟೀಂ

    ಸಿಟಿ ರವಿ ಕೂಡ ತುಂಬಾ ಸಲ ಹೇಳಿದ್ರು ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೇಟ್ ಪಡೆಯುವಂತಿಲ್ಲ. ನಾನು ಕೂಡ ಇದನ್ನೇ ಹೇಳಿದ್ದೇನೆ. ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಹಾಗೂ ಗ್ಯಾಂಗ್ ಉದ್ಯಮಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೇ ಅಚ್ಚರಿಯ ವಿಚಾರಗಳು ಬಯಲಾಗುತ್ತಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಹಾಗೂ ಗ್ಯಾಂಗ್ ನಾಟಕದ ವೀಡಿಯೋವೊಂದು ಎಕ್ಸ್ ಕ್ಲೂಸೀವ್ ಆಗಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚೈತ್ರಾ ಗ್ಯಾಂಗ್ ಮಾಡ್ತಿರುವ ಮೋಸ ಗೊತ್ತಾಗಿ ಗೋವಿಂದ ಬಾಬು ಕೊಟ್ಟ ಹಣವನ್ನು ವಾಪಸ್ ಮಾಡುವಂತೆ ಡಿಮ್ಯಾಂಡ್ ಮಾಡಿದ್ರು. ಹೀಗಾಗಿ ಏಪ್ರಿಲ್ 24ರಂದು ಗೋವಿಂದಬಾಬು ಕಚೇರಿಗೆ ಬಂದ ಚೈತ್ರಾ, ಗಗನ್ ಕಡೂರು ಮತ್ತು ಇತರರು ಮುಂಚಿತವಾಗಿಯೇ ಮಾಡಿದ ಪ್ಲಾನ್ ರೀತಿ ದೊಡ್ಡ ಹೈಡ್ರಾಮಾವನ್ನೇ ಮಾಡಿದ್ರು.

    ಗೋವಿಂದ ಬಾಬು ಕಚೇರಿಗೆ ಪ್ರಮುಖ ಆರೋಪಿ ಚೈತ್ರಾ, 2ನೇ ಆರೋಪಿ ಗಗನ್ ಕಡೂರು, 7ನೇ ಆರೋಪಿ ಕಿಶೋರ್, 8ನೇ ಆರೋಪಿ ಪ್ರಶಾಂತ್ ಬೈಂದೂರು ಆಗಮಿಸಿ ಸಂಧಾನಕ್ಕೆ ಯತ್ನಿಸಿದ್ರು. ಆದ್ರೆ, ಇದಕ್ಕೆ ಒಪ್ಪದೇ 5 ಕೋಟಿ ಹಣಕ್ಕೆ ಗೋವಿಂದ ಬಾಬು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಖಾಲಿ ವಿಷದ ಬಾಟಲಿಯಲ್ಲಿ ನೀರು ತುಂಬಿಕೊಂಡು, ಅದನ್ನೇ ಕುಡಿದು ಆತ್ಮಹತ್ಯೆಗೆ ಯತ್ನಿಸುವ ರೀತಿ ಗಗನ್ ಕಡೂರು ಡ್ರಾಮಾ ಮಾಡಿದ್ರು.

    ಈ ವೇಳೆ ಎ1 ಆರೋಪಿ ಚೈತ್ರಾ, ಗಗನ್ ಜೀವ ರಕ್ಷಣೆ ಮಾಡೋ ರೀತಿ ನಾಟಕ ಮಾಡಿದ್ರು. ಇದೀಗ ಈ ವಿಡಿಯೋ ಸಿಸಿಬಿಗೆ ಪ್ರಬಲ ಸಾಕ್ಷ್ಯವಾಗಲಿದೆ. ಅಂದ ಹಾಗೇ, ಪಬ್ಲಿಕ್ ಟಿವಿ ಜೊತೆ ನಿನ್ನೆ ಮಾತಾಡಿದ್ದ ಗೋವಿಂದ ಬಾಬು ಸಿಬ್ಬಂದಿ ಆರ್ಯ ಎನ್ನುವವರು, ಚೈತ್ರಾ ಗ್ಯಾಂಗ್ ಆತ್ಮಹತ್ಯೆ ಡ್ರಾಮಾ ಮಾಡಿತ್ತು. ಇದಕ್ಕೆ ನಾನೆ ಸಾಕ್ಷಿ ಅಂದಿದ್ರು. ಇದನ್ನೂ ಓದಿ: ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?

    ಇಂದು ಬೆಳಗ್ಗೆಯಷ್ಟೇ ಸಿಸಿಬಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದರು. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಚ್ಚರಿ ಅಂದ್ರೆ ಚೈತ್ರಾ ಕುಸಿದು ಬಿದ್ದಾಗ ಆಕೆಯ ಬಾಯಲ್ಲಿ ನೊರೆ ಬಂದಿತ್ತು. ಹೀಗಾಗಿ ಆಕೆಗೆ ಪಿಡ್ಸ್ ಬಂದಿರಬಹುದು ಎಂದು ಊಹಿಸಲಾಗಿತ್ತು. ಆದರೆ ಮೂರ್ಛೆ ರೋಗ ಅಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ  ಪ್ರಾಂಶುಪಾಲೆ ಆಸೀಮಾ ಬಾನು ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಹಣವನ್ನ ಲೋನ್ ಪಡೆದು ಕೊಟ್ಟಿದ್ದೇನೆ: ಗೋವಿಂದ ಬಾಬು ಪೂಜಾರಿ

    ನಾನು ಹಣವನ್ನ ಲೋನ್ ಪಡೆದು ಕೊಟ್ಟಿದ್ದೇನೆ: ಗೋವಿಂದ ಬಾಬು ಪೂಜಾರಿ

    ಬೆಂಗಳೂರು: ನಾನು ಹಣವನ್ನ ಲೋನ್ (Loan) ಪಡೆದು ಕೊಟ್ಟಿದ್ದೇನೆ. ಪೂರ್ತಿ ದಾಖಲೆಯನ್ನು ಸಿಸಿಬಿಯವರಿಗೆ ಕೊಟ್ಟಿದ್ದೇನೆ ಎಂದು ಚೈತ್ರಾ ಕುಂದಾಪುರ (Chaitra Kundapura) ಅವರಿಂದ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.

    ಸಿಸಿಬಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿಯವರು (CCB) ಏನೆಲ್ಲಾ ಕೇಳಿದ್ದಾರೆ ಅದನ್ನೆಲ್ಲಾ ಕೊಟ್ಟಿದ್ದೇನೆ. ಪೆನ್ ಡ್ರೈವ್‍ನಲ್ಲಿ ದಾಖಲೆಗಳನ್ನ ಕೊಟ್ಟಿದ್ದೇನೆ. ವಿಚಾರಣೆ ಹಂತದಲ್ಲಿದೆ ಹಾಗಾಗಿ ನಾನು ಹೇಳೊದಿಕ್ಕೆ ಬರಲ್ಲ ಎಂದರು.

    ಹಣ ವಾಪಸ್ ಕೊಡಲು ಟೈಂ ತಗೆದುಕೊಂಡಿದ್ದರು. ಹೀಗಾಗಿ ಆಗಲೇ ದೂರು ಕೊಟ್ಟಿಲ್ಲ. ಆದರೆ ಅವರು ಹಣ ಕೊಡದೆ ಸತಾಯಿಸಿ ಬೆದರಿಕೆ ಹಾಕಿದ್ರು. ಕೊನೆಗೆ ಸತ್ಯ ಹೊರಗೆ ಬರ್ಬೇಕು ಅಂತ ದೂರು ನೀಡಿದೆ. ನಾನು ಹಣವನ್ನ ಲೋನ್ ಪಡೆದು ಕೊಟ್ಟಿದ್ದೇನೆ. ಪೂರ್ತಿ ದಾಖಲೆಯನ್ನು ಸಿಸಿಬಿಯವರಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ನಾನು ಉದ್ಯಮಿ ರಾಜಕೀಯ ನನಗೆ ಅಷ್ಟೊಂದು ಗೊತ್ತಿಲ್ಲ. ಸಂಪೂರ್ಣವಾಗಿ ನನಗೆ ಸಂಶಯವೇ ಬರದ ರೀತಿ ನಂಬಿಸಿದ್ದರು. ನನಗೆ ಮೋಸ ಆಗಿದೆ ನನಗೆ ಆಗಿದ ರೀತಿ ಬೇರೆ ಯಾರಿಗೂ ಆಗಬಾರದು. ನಾನು ಮನೆ ಮೇಲೆ ಲೋನ್ ತೆಗೆದುಕೊಂಡು ಹಣ ನೀಡಿದ್ದೇನೆ. ಆ ದಾಖಲೆ ಎಲ್ಲವೂ ನೀಡಿದ್ದೇನೆ. ನಾನು ಉದ್ಯಮಿ ಹಾಗಾಗಿ ರಾಜಕೀಯ ನಾಯಕರು ಪರಿಚಯವಿಲ್ಲ. ಮುಂದೆ ಎಲ್ಲ ಸತ್ಯ ಹೊರ ಬರುತ್ತೆ. ಎಲ್ಲವನ್ನು ನಿಮ್ಮ ಬಳಿ ಹೇಳ್ತೇನೆ ಎಂದರು.

    ಇತ್ತ ಸಿಸಿಬಿ ಕಚೇರಿಯಿಂದ ಚೈತ್ರಾ ಕುಂದಾಪುರ ಅವರನ್ನು ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]