Tag: Govinda Babu Poojari

  • ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

    ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

    ಮಂಗಳೂರು: ಆರೋಪಿ ಸ್ಥಾನದಲ್ಲಿರುವ ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಸಮಗ್ರ ತನಿಖೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

    ಮಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಆರೋಪಿ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಚೈತ್ರಾ ಕುಂದಾಪುರ ಕೇಸ್ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು. ಟಿಕೆಟ್ ಕೊಡಿಸ್ತೀವಿ ಅಂತ ಹಣ ಪಡೆದಿರೋದನ್ನ ನಾವು ಗಂಭೀರವಾಗಿ ಪರಿಗಣಿಸ್ತೇವೆ. ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಹಲವರು ಹೋರಾಟ ಮಾಡ್ತಾರೆ, ಹಾಗೆಂದ ಮಾತ್ರಕ್ಕೆ ಅದೆಲ್ಲವೂ ಪಕ್ಷಕ್ಕೆ ಸಂಬಂಧವಿರುತ್ತದೆ ಎಂದಲ್ಲ. ಈ ಪ್ರಕರಣದ ಸಂಪೂರ್ಣ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ವಿಚಾರದಲ್ಲಿ ಇನ್ನೂ ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ. ಸದ್ಯ ಪ್ರಾಥಮಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ನಾಯಕರು ಚರ್ಚಿಸುತ್ತಾರೆ. ಮೈತ್ರಿ ಸಮಯದಲ್ಲಿ ನಮ್ಮೊಂದಿಗೂ ಚರ್ಚಿಸಿ ಅಭಿಪ್ರಾಯ ಕೈಗೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಂದಾಗಿ ಹೆಚ್ಚು ಸೀಟ್ ಪಡೆಯೋದು ನಮ್ಮ ಉದ್ದೇಶ. ಮಾನ್ಸೂನ್ ಪೂರ್ವದ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು, ಬರಗಾಲ ಘೋಷಣೆಯಲ್ಲೂ ವಿಳಂಬ ಮಾಡಿದ್ದಾರೆ. ಸರ್ಕಾರ ವರದಿ ಪಡೆಯುವಲ್ಲಿ ವಿಳಂಬ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈಗ ಮುಂಗಾರು ಹೋಗಿದೆ, ರೈತರಿಗೆ ಸಹಾಯ ಮಾಡಲು ಆಗಲ್ಲ. ಕನಿಷ್ಠ ಬೆಳೆ ನಷ್ಟ ಪರಿಹಾರವಾದ್ರೂ ಸರ್ಕಾರ ಕೊಡಬೇಕು. ನಮ್ಮ ಅವಧಿಯಲ್ಲಿ ಪ್ರವಾಹದ ಒಂದು ತಿಂಗಳಲ್ಲೇ ಪರಿಹಾರ ಕೊಟ್ಟಿದ್ದೇವೆ. ನಾವು ಕೇಂದ್ರದ ಮಾನದಂಡಕ್ಕೂ ಕಾಯಲಿಲ್ಲ, ಇವರು ಕೇಂದ್ರದ ಮಾನದಂಡ ಅಂತಿದ್ದಾರೆ. ಕಷ್ಟದಲ್ಲಿರೋ ಜನರಿಗೆ ಸಹಾಯ ಮಾಡುವ ಮನೋಭಾವ ಸರ್ಕಾರಕ್ಕೆ ಇಲ್ಲ. ಕುಂಟು ನೆಪ ಹೇಳಿಕೊಂಡು ಕಾಲ ದೂಡುತ್ತಿದೆ. ಸುಮಾರು 25 ಸಾವಿರ ಕೋಟಿ ಸಾಲದ ಬದಲು ರೈತರಿಗೆ 7 ಸಾವಿರ ಕೋಟಿ ಅಷ್ಟೇ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂಪರ ಕಾರ್ಯಕರ್ತರ ವಿರುದ್ಧ ಕೇಸ್‌ ಎಂಬ ಆರೋಪಕ್ಕೂ, ಚೈತ್ರಾ ಪ್ರಕರಣಕ್ಕೂ ಸಂಬಂಧ ಇಲ್ಲ: ಜಿ.ಪರಮೇಶ್ವರ್

    ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ನಾವು ಹೇಳಿಕೊಂಡು ಬಂದಿದ್ದೇವೆ. ತಮಿಳುನಾಡಿನ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಆದರೂ ರಾಜ್ಯ ಸರ್ಕಾರ ನೀರು ಬಿಡ್ತಾ ಇತ್ತು. ಕಾನೂನಾತ್ಮಕವಾಗಿ ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಕಾವೇರಿ ಜಲಾನಯನ ರೈತರಿಗೆ, ಬೆಂಗಳೂರಿಗೆ ಕಷ್ಟ ಆಗಲಿದೆ. ಇವತ್ತು ಪರಿಹಾರ ಕಾನೂನಾತ್ಮಕ ಮತ್ತು ತಮಿಳುನಾಡನ್ನ ಒಪ್ಪಿಸೋದು. ಆದ್ರೆ ನಮ್ಮ ಸಿಎಂ ತಮಿಳುನಾಡಿನ ಸಿಎಂ ಸ್ಟಾಲಿನ್ ಜೊತೆಗೆ ಮಾತಾಡೋಕೆ ತಯಾರಿಲ್ಲ ಎಂದು ಹೇಳಿದ್ದಾರೆ.

    ಐಎನ್‌ಡಿಐಎ ಇಂಡಿಯಾ ಒಕ್ಕೂಟ ಅಂತಾ ಹೇಳ್ತಾರೆ, ಇವರು ನಮ್ಮ ನೀರಿನ ಹಕ್ಕಿನ ಬಗ್ಗೆ ಮಾತನಾಡಲ್ಲ. ಸದ್ಯ ನೀರು ಬಿಡಲ್ಲ ಅನ್ನೋ ತಮ್ಮ ನಿಲುವಿಗೆ ಅವರು ಗಟ್ಟಿಯಾಗಿ ನಿಲ್ಲಬೇಕು. ನಾವು ಈ ನಿಲುವಿನ ಬಗ್ಗೆ ಸರ್ಕಾರದ ಜೊತೆ ನಿಲ್ತೇವೆ, ಒಂದು ವೇಳೆ ನೀರು ಬಿಟ್ಟರೆ ನಾವು ಸರ್ಕಾರದ ವಿರುದ್ಧ ಹೋರಾಡ್ತೀವಿ ಎಂದು ಎಚ್ಚರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    – ಸಿಸಿಟಿವಿ ಫೂಟೇಜ್, ಫೋನ್ ಕಾಲ್ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿ ಇದೆ

    ಬೆಂಗಳೂರು: ಚೈತ್ರಾ (Chaitra Kundapur) ವಿರುದ್ಧ ಸಿಸಿಟಿವಿ ಪೂಟೇಜ್, ಫೋನ್ ಸಂಭಾಷಣೆ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿಗಳೂ ಇದೆ. ಪ್ರಕರಣ ಹೊರಗೆ ಬಂದರೆ ಸರಿಯಿರಲ್ಲ, ನನಗೆ ಅಂಡರ್ ವರ್ಲ್ಡ್ ಪರಿಚಯವಿದೆ ಎಂದು ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಕಚೇರಿಗೆ ಬಂದು ಸೂಸೈಡ್ ಮಾಡಿಕೊಳ್ಳೋ ಬೆದರಿಕೆ ಕೂಡಾ ಹಾಕಿದ್ರು ಎಂದು ದೂರುದಾರ ಗೋವಿಂದ ಬಾಬು ಪೂಜಾರಿ (Govinda Babu Poojari) ಆಪ್ತ ರಕ್ಷಿತ್ ಶೆಟ್ಟಿ (Rakshit Shetty) ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿರುವ ಅವರು, ಚೈತ್ರಾ ಬೆದರಿಕೆ ಹಾಕಿರೋದು, ಬ್ಲಾಕ್ ಮೇಲ್ ಮಾಡಿರೋದು, ತಪ್ಪೊಪ್ಪಿಗೆ ಮಾಡಿಕೊಂಡಿದ್ದು ಎಲ್ಲವೂ ಆಡಿಯೋ ರೆಕಾರ್ಡ್ ಹಾಗೂ ಸಿಸಿಟಿವಿ ದಾಖಲೆಗಳು ಇವೆ. ಚೈತ್ರಾ ಈ ವಿಚಾರದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರಕರಣ ಏನಾದ್ರೂ ಹೊರಗೆ ಬಂದರೆ ಸರಿಯಿರಲ್ಲ, ನಂಗೆ ಅಂಡರ್ ವರ್ಲ್ಡ್ ನಲ್ಲಿಯೂ ಪರಿಚಯ ಇದ್ದಾರೆ ಎಂದು ಆರಂಭದಲ್ಲಿ ಗೋವಿಂದ ಬಾಬು ಪೂಜಾರಿಗೆ ಬೆದರಿಕೆ ಹಾಕಿದ್ದರು. ಅದಾದ ಬಳಿಕ ಕಚೇರಿಗೆ ಬಂದು ಸೂಸೈಡ್ ಮಾಡ್ತೀನಿ ಅಂತ ಕಣ್ಣೀರು ಹಾಕಿದ್ರು ಎಂದು ತಿಳಿಸಿದ್ದಾರೆ.

    ಚೈತ್ರಾ ಹಾಗೂ ಗೋವಿಂದ ಬಾಬು ಪೂಜಾರಿ ಅವರ ನಡುವಿನ ಮಾತುಕತೆ, ಚೈತ್ರಾ ಆತ್ಮಹತ್ಯೆ ಬೆದರಿಕೆ ಎಲ್ಲವನ್ನು ನಾನು ಖುದ್ದು ಆಡಿಯೋ ಕೇಳಿಸಿಕೊಂಡಿದ್ದೇನೆ. ಅರ್ಧ ದುಡ್ಡು ಅಂದ್ರೆ 1 ಕೋಟಿ 70 ಲಕ್ಷ ರೂ. ವಾಪಸ್ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ದು ನಿಜ ಅಂತ ಕಚೇರಿಗೆ ಬಂದು ಕಣ್ಣೀರು ಹಾಕಿದ್ದರು. ಇದೆಲ್ಲದರ ಸಿಸಿ ಟಿವಿ ಫೂಟೇಜ್ ಆಡಿಯೋ ರೆಕಾರ್ಡ್ ಇದೆ. ಚೈತ್ರಾ ಬೇರೆಯವರಲ್ಲ. ಅದರೆ ಹಿಂದುತ್ವ, ಹಿಂದೂ ಎಂದು ಹೀಗೆಲ್ಲಾ ಯಾಮಾರಿಸ್ತಾರೆ ಎಂದರೆ ಖಂಡಿತಾ ತಪ್ಪು ಎಂದು ಹೇಳಿಕೆ ನೀಡಿದರು. ಈ ಬಗ್ಗೆ ರಕ್ಷಿತ್ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬೈಂದೂರು ರಾಜಕೀಯದಲ್ಲಿ ನಾವೊಂದಿಷ್ಟು ಜನ ಸಕ್ರಿಯರಾಗಿರುವುದರಿಂದ ನನಗೆ ಟಿಕೆಟ್‌ಗಾಗಿ ಹಣ ಪಡೆದ ಕೇಸ್‌ನ ಬಗ್ಗೆ ಒಂದಿಷ್ಟು ನಿಖರವಾದ ಮಾಹಿತಿ ಗೊತ್ತಿದೆ. ಇಷ್ಟೆಲ್ಲಾ ಮುಗಿದು ಪೋಲಿಸರ ಕಸ್ಟಡಿಯಲ್ಲಿರುವ ತಂಡ ಇನ್ನು ನಮ್ಮದೇನು ತಪ್ಪಿಲ್ಲ. ಇಂದಿರಾ ಕ್ಯಾಂಟೀನ್ ಹಣ ಬಾಕಿಯಿರುವುದರಿಂದ ಇದೆಲ್ಲಾ, ಸ್ವಾಮೀಜಿ ಸಿಗಲಿ ಗೊತ್ತಾಗುತ್ತೆ ಎಂದಿದ್ದಾರೆ.

    ಅಸಲಿಗೆ ಮೂರುವರೆ ಕೋಟಿ ನೀಡಿದ್ದು ಚೈತ್ರಾ ಆ್ಯಂಡ್ ಕಂಪನಿಗೆ. ಒಂದೂವರೆ ಕೋಟಿ ನೀಡಿದ್ದು ಸ್ವಾಮಿಗಳಿಗೆ, ಒಟ್ಟು 5 ಕೋಟಿಗಳು. ದುಡ್ಡಿನ ವಿಚಾರದಲ್ಲಿ ಸ್ವಾಮೀಜಿ ಸಿಕ್ಕಿಯೇ ಗೊತ್ತಾಗಬೇಕಾದ ವಿಚಾರಗಳಿಲ್ಲ. ಎಲ್ಲಾ ನಡೆದು ಟಿಕೆಟ್ ಸಿಗದೆ ಇದ್ದಾಗ ಸ್ವತಃ ತನಿಖೆ ಇಳಿದ ಗೋವಿಂದ ಬಾಬು ಪೂಜಾರಿಯವರಿಗೆ ಎಲ್ಲರೂ ಸಿಗುತ್ತಾರೆ. ಆಗ ಆಫೀಸಿನಲ್ಲಿ ಕೂರಿಸಿ ವಿಚಾರಣೆ ನಡೆಸಿದಾಗ ಅವರು ಹೇಳಿದ ಮಾತು ನಾವು ಹಣವನ್ನೆಲ್ಲಾ ವಿಶ್ವನಾಥ ಜೀಗೆ ಕೊಟ್ಟಿದ್ದೇವೆ. ಅವರು ತೀರಿಕೊಂಡರು ಎಂದು. ಇದನ್ನೂ ಓದಿ: ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್‌ಗೂ ಸಂಬಂಧ ಇಲ್ಲ: ಗೋವಿಂದ ಬಾಬು

    ಕೊನೆಗೆ ವಿಶ್ವನಾಥ್ ಜೀ ಪಾತ್ರ ಮಾಡಿದವನನ್ನು ಎಳೆದು ತಂದಾಗ ಇದೇ ತಂಡ ಗೋವಿಂದ ಬಾಬು ಪೂಜಾರಿಯವರ ಆಫೀಸ್‌ನಲ್ಲಿ ವಿಷ ಕುಡಿಯುವ ಪ್ರಹಸನ ಬೇರೆ ಮಾಡಿತ್ತು. ಕೊನೆಗೆ ಸ್ವಲ್ಪ ದಿನದ ನಂತರ ಹಣ ವಾಪಸ್ ಕೊಡುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿತ್ತು. ಇದೆಲ್ಲದರ ಬಗ್ಗೆ ಸಿಸಿಟಿವಿ ಫೂಟೇಜ್‌ಗಳಿವೆ, ಪೋನ್ ಸಂಭಾಷಣೆಗಳ ರೆಕಾರ್ಡ್‌ಗಳಿವೆ. ಇಷ್ಟೆಲ್ಲಾ ಇದ್ದರೂ ಆಟ ಆಡುವ ಈಕೆ ಮತ್ತು ತಂಡ, ಜೊತೆಗೆ ಆಕೆಯದೆ ಸರಿ ಎನ್ನುವ ಕೆಲವರು. ಡಿಫೆಂಡ್ ಮಾಡಿಕೊಳ್ಳೋಣ ಎಂದು ರಕ್ಷಿತ್ ಬರೆದಿದ್ದಾರೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್‌ಗೂ ಸಂಬಂಧ ಇಲ್ಲ: ಗೋವಿಂದ ಬಾಬು

    ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್‌ಗೂ ಸಂಬಂಧ ಇಲ್ಲ: ಗೋವಿಂದ ಬಾಬು

    ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapur) ವಂಚನೆ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್‌ಗೂ (Indira Canteen) ಯಾವುದೇ ಸಂಬಂಧ ಇಲ್ಲ. ನನ್ನ ಉದ್ಯಮದಲ್ಲಿ ಇಂದಿರಾ ಕ್ಯಾಂಟೀನ್ ಕೇವಲ 10%. ಉಳಿದ 90% ಖಾಸಗಿ ಉದ್ಯಮದ್ದಾಗಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಗ್ಗೆ ನಾವು ಎಂದಿಗೂ ಅವರೊಂದಿಗೆ ಮಾತಾಡಿರಲಿಲ್ಲ ಎಂದು ಪ್ರಕರಣದ ದೂರುದಾರರಾದ ಉದ್ಯಮಿ, ಚೆಫ್ ಟ್ಯಾಕ್ ಕಂಪನಿಯ ಮಾಲೀಕ ಗೋವಿಂದ ಬಾಬು ಪೂಜಾರಿ (Govinda Babu Poojari) ಹೇಳಿಕೆ ನೀಡಿದ್ದಾರೆ.

    ದೂರವಾಣಿ ಕರೆ ಮೂಲಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ವಿಚಾರ ಇಲ್ಲಿ ಬರಲ್ಲ. ಅವರು ಮೋಸ ಮಾಡಿರುವುದು ರಾಜಕೀಯ ವಿಚಾರವಾಗಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಾಸತ್ಯತೆ ಹೊರಗೆ ಬರಲಿ. ನನ್ನ ಬಳಿಯಿರೋ ಎಲ್ಲಾ ದಾಖಲೆಗಳನ್ನೂ ಕೊಡುತ್ತಿದ್ದೇನೆ. ಅವರು ನಮಗೆ ಪ್ಲ್ಯಾನ್ ಮಾಡಿ ಮೋಸ ಮಾಡಿದ್ದಾರೆ. ಅವರು ಯಾವ ಪಕ್ಷದವರೇ ಆಗಿರಲಿ, ಇನ್ನೊಂದು ಬಾರಿ ಇಂತಹ ಮೋಸ ಆಗಬಾರದು. ಇಂತಹವರಿಗೆ ಶಿಕ್ಷೆ ಆಗಲೇ ಬೇಕು ಎಂದಿದ್ದಾರೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

    ಸಿಸಿಬಿಗೆ ಎಲ್ಲಾ ರೀತಿಯ ದಾಖಲೆಗಳನ್ನು ನೀಡಿದ್ದೇನೆ. ಸಿಸಿ ಕ್ಯಾಮೆರಾ, ವೀಡಿಯೋ, ಆಡಿಯೋ ಎಲ್ಲಾ ನೀಡಿದ್ದೇನೆ. ನನ್ನ ಬಳಿ ಇನ್ನೂ ಸಾಕ್ಷಿಗಳಿವೆ, ಅವುಗಳನ್ನೂ ನೀಡಲಿದ್ದೇನೆ. ನಾನು ಬೆಳಗ್ಗಿನಿಂದ ರಾತ್ರಿವರೆಗೂ ದುಡಿದ ಹಣ, ಲಾಭವನ್ನೆಲ್ಲಾ ಒಟ್ಟುಗೂಡಿಸಿ 10 ಕೋಟಿ ರೂ. ನೀಡಿದ್ದೇನೆ. ಹೀಗಾಗಿ ಈ ಪ್ರಕರಣದಲ್ಲಿ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸುಲಭವಾಗಿ ಸಿಕ್ಕ 50 ಲಕ್ಷಕ್ಕೆ ಚೈತ್ರಾ ಫಿದಾ – 3.5 ಕೋಟಿಗೆ ಶುರುವಾದ ಪ್ಲಾನ್ 5 ಕೋಟಿಗೆ ಏರಿದ್ದೇ ರೋಚಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]