Tag: governor

  • ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

    ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (79) (Satyapal Malik) ಅವರಿಂದು ನಿಧನರಾಗಿದ್ದಾರೆ.

    ರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಲಿಕ್‌ ದೆಹಲಿಯ (Delhi) ಆರ್‌ಎಂಎಲ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

    ಜೆ&ಕೆ ಮಾತ್ರವಲ್ಲದೇ ಬಿಹಾರದ ರಾಜ್ಯಪಾಲರಾಗಿಯೂ (Governor) ಸೇವೆ ಸಲ್ಲಿಸಿದ್ದ ಮಲಿಕ್‌ ಅವರು, ಕೃಷಿ ಚಳುವಳಿ ಮತ್ತು ಭ್ರಷ್ಟಾಚಾರದ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುತ್ತಿದ್ದರು. ಆದ್ರೆ ಅವರಿಗೆ ಮೂತ್ರಪಿಂಡದ ಸಮಸ್ಯೆ ಇತ್ತು. ಹೀಗಾಗಿ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ (RML Hospital) ದಾಖಲಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವೀಸಾ ಅವಧಿ ಮೀರಿ ವಾಸ್ತವ್ಯ; ಭಾರತ ಸೇರಿ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡೀಪಾರು ಎಚ್ಚರಿಕೆ

    ಸತ್ಯಪಾಲ್‌ ಮಲಿಕ್‌ ಯಾರು?
    ಉತ್ತರ ಪ್ರದೇಶದ (UttarPradesh) ಬಾಗ್‌ಪತ್‌ನವರಾದ ಮಲಿಕ್‌ ಮೊದಲ ಬಾರಿಗೆ ಚೌಧರಿ ಚರಣ್ ಸಿಂಗ್ ಅವರ ಭಾರತೀಯ ಕ್ರಾಂತಿ ದಳದಿಂದ ವಿಧಾನಸಭೆಗೆ ಆಯ್ಕೆಯಾದರು. 1970 ರಲ್ಲಿ ಶಾಸಕರಾಗಿ ರಾಜಕೀಯ ವೃತ್ತಿಜೀವನ ಆರಂಭಿಸಿದರು. ರಾಜಕಾರಣಿಯಾಗಿ ಸುಮಾರು 50 ವರ್ಷ ಜೀವನ ಪೂರೈಸಿದರು. ಈ ಅವಧಿಯಲ್ಲಿ ಮಲಿಕ್‌ ಹಲವು ಪಕ್ಷಗಳನ್ನ ಬದಲಾಯಿಸಿದರು. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ – ʻಜೈ ಶ್ರೀರಾಮ್‌, ಹರಹರ ಮಹದೇವ್ʼ ಘೋಷಣೆ ನಡ್ವೆ ಮೋದಿಗೆ ಗೌರವ

    1980 ರಲ್ಲಿ, ಚರಣ್ ಸಿಂಗ್ ನೇತೃತ್ವದ ಲೋಕ ದಳದಿಂದ ರಾಜ್ಯಸಭೆಗೆ ಆಯ್ಕೆಯಾದರು. 1984 ರಲ್ಲಿ, ಅವರು ಕಾಂಗ್ರೆಸ್ ಸೇರಿದರು. 1986 ರಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಆಯ್ಕೆಯಾದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯ ನಂತರ ಅವರ 1 ವರ್ಷದ ರಾಜ್ಯಪಾಲರ ಅಧಿಕಾರಾವಧಿ ಮುಕ್ತಾಯವಾಯಿತು. ಇದನ್ನೂ ಓದಿ: ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್‌

  • 2,000 ಕೋಟಿ ಅಕ್ರಮ, 400 ಕೋಟಿ ಕಮಿಷನ್ ಆರೋಪ – ಡಿಕೆಶಿ, ಡಿಕೆಸು ವಿರುದ್ಧ ರಾಜ್ಯಪಾಲರಿಗೆ ಮುನಿರತ್ನ ದೂರು

    2,000 ಕೋಟಿ ಅಕ್ರಮ, 400 ಕೋಟಿ ಕಮಿಷನ್ ಆರೋಪ – ಡಿಕೆಶಿ, ಡಿಕೆಸು ವಿರುದ್ಧ ರಾಜ್ಯಪಾಲರಿಗೆ ಮುನಿರತ್ನ ದೂರು

    ಬೆಂಗಳೂರು: ವರ್ಲ್ಡ್ ಬ್ಯಾಂಕ್ ಲೋನ್‌ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ. ಅಕ್ರಮ ಹಾಗೂ 400 ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿ ಡಿಕೆ ಶಿವಕುಮಾರ್ (DK Shivakumar) ಹಾಗೂ ಡಿಕೆ ಸುರೇಶ್ (DK Suresh) ವಿರುದ್ಧ ಶಾಸಕ ಮುನಿರತ್ನ ರಾಜ್ಯಪಾಲರಿಗೆ (Thawar Chand Gehlot) ದೂರು ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಜಾಕಾಲುವೆ ಕಾಮಗಾರಿಗಳ ಟೆಂಡರ್‌ಗಳಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ. ವರ್ಲ್ಡ್ ಬ್ಯಾಂಕ್‌ನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದು, ಸ್ಟಾರ್ ಇನ್ಫ್ರಾಟೆಕ್, ರಾಮಲಿಂಗಂ ಕನ್‌ಸ್ಟ್ರಕ್ಷನ್‌, ತಿರುಮಲ ಗಿರಿ ಕನ್‌ಸ್ಟ್ರಕ್ಷನ್‌, ಆರ್‌ಎನ್‌ಎಸ್ ಕನ್‌ಸ್ಟ್ರಕ್ಷನ್‌ ಹಾಗೂ ಬಿಎಸ್‌ಆರ್ ಕನ್‌ಸ್ಟ್ರಕ್ಷನ್‌ ಕಂಪನಿಗಳಿಂದ ದೊಡ್ಡ ಮೊತ್ತದ ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ ಎಂದು ಆರೋಪಿಸಿದರು.ಇದನ್ನೂ ಓದಿ: ನಡುರಸ್ತೆಯಲ್ಲೇ ಅನ್ಯಧರ್ಮೀಯ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು – 6 ಆರೋಪಿಗಳು ಅರೆಸ್ಟ್

    ಒಟ್ಟು 16 ವರ್ಕ್ ಆರ್ಡರ್‌ಗಳನ್ನು ಈ ಕಂಪನಿಗಳ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟಿದ್ದಾರೆ. ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ದೊಡ್ಡ ದೊಡ್ಡ ಕಂಪನಿಗಳಿಂದ 400 ಕೋಟಿ ರೂ. ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ. ಇದರ ಟೆಂಡರ್ ಅನ್ನು ಅನರ್ಹ ಕಂಪನಿಗಳಿಗೆ ಕೊಡುತ್ತಿದ್ದಾರೆ. ಇದರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಕೈವಾಡ ಇದೆ. ಇನ್ನೂ ಈ ಟೆಂಡರ್ ಅವ್ಯವಹಾರವನ್ನು ಇಡಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

    ವರ್ಲ್ಡ್ ಬ್ಯಾಂಕ್ ಲೋನ್‌ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಕಳೆದ ಫೆಬ್ರವರಿಯಲ್ಲಿ ನಾನು ಇಡಿಗೆ ದೂರು ಕೊಟ್ಟಿದ್ದೆ. ಅದಾದ ನಂತರ ಡಿಕೆಶಿ, ಡಿಕೆ ಸುರೇಶ್ ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೆದಿದ್ದಾರೆ. ಏ.15ಕ್ಕೆ ಟೆಂಡರ್ ಕರೆದಿದ್ದು, ಈ ಗುತ್ತಿಗೆದಾರರ ಕಂಪನಿಗಳಿಗೆ ಅನುಕೂಲ ಆಗುವಂತೆ ಟೆಂಡರ್ ನಿಯಮ ಬದಲಾಯಿಸಲಾಗಿದೆ. ಗುತ್ತಿಗೆದಾರರ ಜೊತೆ ಶಾಮೀಲಾಗಿ 2 ಸಾವಿರ ಕೋಟಿ ರೂ. ಅಕ್ರಮ ಮಾಡುತ್ತಿದ್ದಾರೆ. 400 ಕೋಟಿ ರೂ. ಕಮಿಷನ್ ಪಡೆಯುತ್ತಾರೆ. ಇದನ್ನು ತಡೆಗಟ್ಟಿದರೆ ಸರ್ಕಾರಕ್ಕೆ 400 ಕೋಟಿ ರೂ. ಉಳಿಯಲಿದೆ. ಮಂಗಳವಾರ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ (PIL) ಹಾಕುತ್ತೇವೆ. ಈ ಹಗರಣದ ನೇರ ಹೊಣೆ ಡಿಕೆಶಿ, ಡಿಕೆ ಸುರೇಶ್ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ವಕ್ಫ್‌ ಕಾಯ್ದೆ ವಿರೋಧಿಸಿ ಹಿಂಸಾಚಾರ – ಹಿಂದೂಗಳು ಮನೆಬಿಟ್ಟು ಓಡಿಹೋಗುತ್ತಿದ್ದಾರೆಂದು ಬಿಜೆಪಿ ಆರೋಪ

  • ದೇಶದ ಇತಿಹಾಸದಲ್ಲಿ ಮೊದಲು; ರಾಜ್ಯಪಾಲರು-ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನ ಜಾರಿಗೊಳಿಸಿದ ತ.ನಾಡು ಸರ್ಕಾರ

    ದೇಶದ ಇತಿಹಾಸದಲ್ಲಿ ಮೊದಲು; ರಾಜ್ಯಪಾಲರು-ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನ ಜಾರಿಗೊಳಿಸಿದ ತ.ನಾಡು ಸರ್ಕಾರ

    ಚೆನ್ನೈ: ತಮಿಳುನಾಡು (Tamil Nadu) ಸರ್ಕಾರವು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್‌ನ (Supreme Court) ಐತಿಹಾಸಿಕ ತೀರ್ಪಿನ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

    ತಮಿಳುನಾಡು ರಾಜ್ಯ ವಿಧಾನಸಭೆಯು 2020ರ ಜನವರಿಯಿಂದ 2023ರ ಏಪ್ರಿಲ್‌ವರೆಗೆ 12 ಮಸೂದೆಗಳನ್ನು ಅಂಗೀಕರಿಸಿತ್ತು. ಈ ಮಸೂದೆಗಳು ರಾಜ್ಯದ ವಿಶ್ವವಿದ್ಯಾಲಯಗಳ ಆಡಳಿತವನ್ನು ಗವರ್ನರ್‌ರಿಂದ ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವ ಗುರಿಯನ್ನು ಹೊಂದಿದ್ದವು. ಆದರೆ, ಗವರ್ನರ್ ಆರ್.ಎನ್.ರವಿ ಈ ಮಸೂದೆಗಳಿಗೆ ಸಮ್ಮತಿ ನೀಡದೆ ಮೂರು ವರ್ಷಗಳಿಗೂ ಹೆಚ್ಚು ಕಾಲ ವಿಳಂಬ ಮಾಡಿದರು.

    2023ರ ನವೆಂಬರ್‌ನಲ್ಲಿ ಗವರ್ನರ್ 10 ಮಸೂದೆಗಳಿಗೆ ಸಮ್ಮತಿಯನ್ನು ನಿರಾಕರಿಸಿದರು. ಎರಡನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದರು. ರಾಜ್ಯ ವಿಧಾನಸಭೆಯು ಈ 10 ಮಸೂದೆಗಳನ್ನು ವಿಶೇಷ ಅಧಿವೇಶನದಲ್ಲಿ ಮತ್ತೆ ಅಂಗೀಕರಿಸಿ ಗವರ್ನರ್‌ಗೆ ಕಳುಹಿಸಿತಾದರೂ, ಅವರು ಇವುಗಳನ್ನು ರಾಷ್ಟ್ರಪತಿಗಳಿಗೆ ರವಾನಿಸಿದರು. ರಾಷ್ಟ್ರಪತಿಗಳು ಒಂದು ಮಸೂದೆಗೆ ಸಮ್ಮತಿ ನೀಡಿದರು, ಏಳನ್ನು ತಿರಸ್ಕರಿಸಿದರು ಮತ್ತು ಎರಡನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.

    ಈ ವಿಳಂಬ ಮತ್ತು ಕ್ರಮಗಳನ್ನು ಪ್ರಶ್ನಿಸಿ, ತಮಿಳುನಾಡು ಸರ್ಕಾರವು 2023ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಗವರ್ನರ್‌ರ ಕ್ರಮಗಳು ಸಂವಿಧಾನದ 200ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ಸರ್ಕಾರ ವಾದಿಸಿತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಜೆ.ಬಿ. ಪಾರ್ಡಿವಾಲಾ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠವು, ಗವರ್ನರ್ ಆರ್.ಎನ್. ರವಿ ಅವರ ಕ್ರಮವನ್ನು ಕಾನೂನುಬಾಹಿರ ಮತ್ತು ತಪ್ಪು ಎಂದು ಘೋಷಿಸಿತು.

    ರಾಜ್ಯಪಾಲರಿಗೆ ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ‘ಪಾಕೆಟ್ ವೀಟೋ’ ಅಧಿಕಾರವಿಲ್ಲ. ಸಂವಿಧಾನದಲ್ಲಿ ಇಂತಹ ಆಯ್ಕೆಯನ್ನು ಒದಗಿಸಲಾಗಿಲ್ಲ ಎನ್ನುವ ಮೂಲಕ ರಾಜ್ಯಪಾಲರ ಕಾರ್ಯವಿಧಾನಕ್ಕೆ ಸ್ಪಷ್ಟ ಸಮಯ ಮಿತಿಗಳನ್ನು ವಿಧಿಸಿತು. ಸಮ್ಮತಿಯನ್ನು ನಿರಾಕರಿಸಲು ಅಥವಾ ರಾಷ್ಟ್ರಪತಿಗಳಿಗೆ ಕಳುಹಿಸಲು ಒಂದು ತಿಂಗಳು, ಸಮ್ಮತಿಯನ್ನು ನಿರಾಕರಿಸಲು ಮತ್ತು ವಿಧಾನಸಭೆಗೆ ಮರಳಿಸಲು ಮೂರು ತಿಂಗಳು ಹಾಗೂ ಮರು-ಅಂಗೀಕೃತ ಮಸೂದೆಗೆ ಸಮ್ಮತಿ ನೀಡಲು ಒಂದು ತಿಂಗಳು ಸಮಯ ನಿಗದಿ ಮಾಡಿತು.

    ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವಾದ ಆರ್ಟಿಕಲ್ 142ನ್ನು ಬಳಸಿಕೊಂಡು, ಈ 10 ಮಸೂದೆಗಳು ರಾಜ್ಯ ವಿಧಾನಸಭೆಯಿಂದ ಮರು-ಅಂಗೀಕರಿಸಿದ ದಿನಾಂಕದಿಂದಲೇ ಗವರ್ನರ್‌ರ ಸಮ್ಮತಿಯನ್ನು ಪಡೆದಿರುವಂತೆ ಘೋಷಿಸಿತು. ರಾಷ್ಟ್ರಪತಿಗಳಿಂದ ತೆಗೆದುಕೊಂಡ ಯಾವುದೇ ಕ್ರಮಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

    ಸುಪ್ರೀಂ ಕೋರ್ಟ್ ಆದೇಶದ ಅನ್ವಯ ತಮಿಳುನಾಡು ಸರ್ಕಾರವು ಈ 10 ಕಾಯ್ದೆಗಳನ್ನು ಸರ್ಕಾರಿ ಗೆಜೆಟ್‌ನಲ್ಲಿ ಅಧಿಸೂಚಿಸಿತು. ಇದರಿಂದಾಗಿ ಅವು ಕಾನೂನು ರೂಪವನ್ನು ಪಡೆದವು. ತಮಿಳುನಾಡು ವೆಟರಿನರಿ ಮತ್ತು ಪಶು ವಿಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ, ತಮಿಳುನಾಡು ಮೀನುಗಾರಿಕೆ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ, ಅಣ್ಣಾ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ ಸೇರಿ ಹತ್ತು ಕಾಯ್ದೆಗಳು ಕಾನೂನಾಗಿ ಜಾರಿಯಾದವು. ಇದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಬೆಳವಣಿಗೆಯಾಗಿದೆ.

  • 2023-24ನೇ ಸಾಲಿನಲ್ಲಿ ಸಿಎಂ ಹೆಲಿಕಾಪ್ಟರ್ ಪ್ರಯಾಣಕ್ಕೆ 11 ಕೋಟಿ ಹಣ ಖರ್ಚು

    2023-24ನೇ ಸಾಲಿನಲ್ಲಿ ಸಿಎಂ ಹೆಲಿಕಾಪ್ಟರ್ ಪ್ರಯಾಣಕ್ಕೆ 11 ಕೋಟಿ ಹಣ ಖರ್ಚು

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ (Congress) ಸರ್ಕಾರ ಬಂದಾಗಿನಿಂದ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣಕ್ಕೆ ಬರೋಬ್ಬರಿ 11 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಖರ್ಚು ವೆಚ್ಚದ ವರದಿಯನ್ನು ಸರ್ಕಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದೆ.

    ಈ ವಿಚಾರವಾಗಿ ವಿಧಾನಪರಿಷತ್‌ನಲ್ಲಿ ಜೆಡಿಎಸ್ ಶಾಸಕ ಜವರಾಯಿಗೌಡ ಪ್ರಶ್ನಿಸಿದರು. ಈ ವೇಳೆ ಸಿಎಂ ಲಿಖಿತ ರೂಪದ ಮೂಲಕ ಉತ್ತರವನ್ನು ನೀಡಿದ್ದಾರೆ. ಇದನ್ನೂ ಓದಿ: ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ವಿವಿಧ ಜಿಲ್ಲೆ ಪ್ರವಾಸ, ವಿಶೇಷ ಪ್ರವಾಸಗಳಿಗಾಗಿ ಸಿಎಂ ವಿಮಾನ ಬಳಕೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ಸಿಎಂ ಹಾಗೂ ರಾಜ್ಯಪಾಲರು ಸುಮಾರು 34 ಕೋಟಿ ರೂ. ವಿಮಾನಯಾನಕ್ಕೆ ಖರ್ಚು ಮಾಡಿದ್ದಾರೆ. ಇದನ್ನೂ ಓದಿ: ಹಮಾಸ್‌ ಉಗ್ರರಿಗೆ ಬೆಂಬಲ – ಭಾರತದ ಸಂಶೋಧಕ ಅಮೆರಿಕದಲ್ಲಿ ಅರೆಸ್ಟ್‌, ಶೀಘ್ರವೇ ಗಡೀಪಾರು

    ಈ ವರದಿಯಲ್ಲಿ ಸಿಎಂ, ರಾಜ್ಯಪಾಲರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ಸಂಪೂರ್ಣ ವಿಮಾನ ಹಾಗೂ ಹೆಲಿಕಾಷ್ಟರ್ ಪ್ರಯಾಣದ ಖರ್ಚು ವೆಚ್ಚದ ಮಾಹಿತಿಯಿದೆ. 2024-25ನೇ ಸಾಲಿನಲ್ಲಿ ಸರ್ಕಾರವು ಸುಮಾರು 21 ಕೋಟಿ ರೂ. ವಿಮಾನ ಪ್ರಯಾಣಕ್ಕೆ ಖರ್ಚು ಮಾಡಿದೆ.

  • ರಾಜ್ಯಪಾಲರ ಕಚೇರಿಯಿಂದಲೇ ಮಾಹಿತಿ ಸೋರಿಕೆಯಾಗಿರಬಹುದು – ಸಿಎಂ

    ರಾಜ್ಯಪಾಲರ ಕಚೇರಿಯಿಂದಲೇ ಮಾಹಿತಿ ಸೋರಿಕೆಯಾಗಿರಬಹುದು – ಸಿಎಂ

    ಕೊಪ್ಪಳ: ಅರ್ಕಾವತಿ ಬಡಾವಣೆ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ಸರ್ಕಾರ ಈ ಬಗ್ಗೆ ಗಮನಹರಿಸಲಿದೆ ಎಂದು ಕೊಪ್ಪಳದಲ್ಲಿ (Koppala) ಸಿಎಂ ಸಿದ್ದರಾಮಯ್ಯ ತಿಳಿಸಿದರು.

    ರಾಜ್ಯಪಾಲರು (Governor) ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ, ರಾಜ್ಯಪಾಲರ ಕಚೇರಿಯಿಂದಲೇ ಸೋರಿಕೆಯಾಗಿರಬಹುದು. ಇದರ ಬಗ್ಗೆ ತನಿಖೆಯಾಗಲಿ. ಈ ವಿಚಾರ ಮಾಧ್ಯಮಗಳಿಂದ ತಿಳಿದಿದ್ದೇನೆ. ರೀಡೂ ಮಾಡಿ ಎಂದು ಬಿಡಿಎಗೆ ಸುಪ್ರೀಂ ಕೋರ್ಟ್ ಹೇಳಿದೆ ಎಂದರು. ಇದನ್ನೂ ಓದಿ: ದಸರಾ ಆನೆಗಳ ಮುಂದೆ ಫೋಟೊ, ಸೆಲ್ಫಿ ತೆಗೆದುಕೊಳ್ಳುವವರಿಗೆ ಕಡಿವಾಣ ಹಾಕಬೇಕು: ಯದುವೀರ್

    ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿದ 46 ವಿಷಯಗಳ ಬಗ್ಗೆ ತೀರ್ಮಾನ:
    ಕೊಪ್ಪಳ ಜಿಲ್ಲೆಯ ನಗರಸಭೆಯಲ್ಲಿ 8.5 ಕೋಟಿ ಬಾಕಿ ಕಾಮಗಾರಿಗಳ ಬಗ್ಗೆ ಮಾತನಾಡಿ, ಕಲಬುರಗಿಯಲ್ಲಿ (Kalaburagi) ನಡೆದ ಸಚಿವ ಸಂಪುಟ ಸಭೆಯಲ್ಲಿ 56 ವಿಷಯಗಳಲ್ಲಿ 46 ವಿಷಯಗಳು ಹೈದರಾಬಾದ್(Hyderabad) ಕರ್ನಾಟಕಕ್ಕೆ ಸಂಬಂಧಿಸಿತ್ತು. ಇದರಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಟಿಬಿ ಡ್ಯಾಂ ಗೇಟ್‌ಗಳ ನಿರ್ವಹಣೆ: ಸಿಎಂ ಸಿದ್ದರಾಮಯ್ಯ

    ಹಾಲಿನ ದರ ಹೆಚ್ಚು ಮಾಡಿದರೆ ಅದು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲಾಗುವುದು:
    ಮಾಗಡಿಯಲ್ಲಿ ಬಹಳ ಶಾಸಕರು, ರೈತರು ಹಸು ಸಾಕಣೆಯ ವೆಚ್ಚ ಹೆಚ್ಚಾಗಿದ್ದು ಹಾಲಿನ ದರ ಹೆಚ್ಚಳ ಮಾಡಲು ಒತ್ತಾಯ ಮಾಡಿದರು. ಒಂದು ವೇಳೆ ಹಾಲಿನ ದರ ಹೆಚ್ಚಿಸುವ ಬಗ್ಗೆ ತೀರ್ಮಾನವಾದರೆ ಅದನ್ನು ಸಂಪೂರ್ಣವಾಗಿ ರೈತರಿಗೆ ಕೊಡಬೇಕೆಂದು ಹೇಳಿದ್ದೇನೆ ಎಂದರು. ಇದನ್ನೂ ಓದಿ: ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ಮುನಿರತ್ನ ಅವರಿಂದ ಸುಳ್ಳು ಆರೋಪ:
    ಶಾಸಕ ಮುನಿರತ್ನ (Muniratna) ಅವರು ಸರ್ಕಾರ ಬಂಧಿಸಿರುವುದು ಕಿರುಕುಳ ನೀಡಲು ಹಾಗೂ ನನ್ನ ಆಪ್ತ ಬಳಗಕ್ಕೆ ಕಿರುಕುಳ ನೀಡಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ನಾವು ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಪರಾಧ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಶಾಸಕರು ನನ್ನನ್ನು ಭೇಟಿ ಮಾಡಿ ಎಸ್‌ಐಟಿ ರಚಿಸಲು ಕೋರಿದರು. ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿದೆ. ತಪ್ಪು ಮಾಡಿದರೆ ತಾನೇ ಎಫ್‌ಐಆರ್ ಆಗುವುದು. ನಾವು ಯಾರಿಗೂ ಕಿರುಕುಳ ನೀಡಿ ಕೇಸು ದಾಖಲಿಸಿಲ್ಲ. ಈ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ರಾಜ್ಯಪಾಲರೇ ವಿರೋಧ ಪಕ್ಷದ ನಾಯಕನಂತೆ ನಡೆದುಕೊಳ್ಳುತ್ತಿದ್ದಾರೆ: ದಿನೇಶ್ ಗುಂಡೂರಾವ್

  • ರಾಜ್ಯದಲ್ಲಿ ರಾಜ್ಯಪಾಲರೇ ವಿರೋಧ ಪಕ್ಷದ ನಾಯಕನಂತೆ ನಡೆದುಕೊಳ್ಳುತ್ತಿದ್ದಾರೆ: ದಿನೇಶ್ ಗುಂಡೂರಾವ್

    ರಾಜ್ಯದಲ್ಲಿ ರಾಜ್ಯಪಾಲರೇ ವಿರೋಧ ಪಕ್ಷದ ನಾಯಕನಂತೆ ನಡೆದುಕೊಳ್ಳುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಬೆಂಗಳೂರು: ರಾಜ್ಯದಲ್ಲಿ ರಾಜ್ಯಪಾಲರೇ (Governor) ವಿರೋಧ ಪಕ್ಷದ ನಾಯಕನ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಅರ್ಕಾವತಿ ಡಿನೋಟಿಫಿಕೇಶನ್ ಕೇಸ್ ಕೆಂಪಣ್ಣ ಆಯೋಗದ ವರದಿ ರಾಜ್ಯಪಾಲರು ಕೇಳಿದ ಬಗ್ಗೆ ಮಾತನಾಡಿ, ರಾಜ್ಯಪಾಲರ ನಡೆ ನೋಡಿದರೆ ಇವರೇ ವಿರೋಧ ಪಕ್ಷದ ನಾಯಕರ ರೀತಿ ಆಡುತ್ತಿದ್ದಾರೆ. ಆರ್‌ಟಿಐ ಆಕ್ಟಿವಿಸ್ಟ್‌ಗಳು  ಅರ್ಜಿ ಹಾಕೋದು ಮಾಹಿತಿ ಕೇಳುತ್ತಾರೆ. ಆ ರೀತಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ರಾಜ್ಯಪಾಲರು ತಮಗೆ ಬಂದ ಪ್ರತಿಯೊಂದು ಅರ್ಜಿಗೂ ಸರ್ಕಾರಕ್ಕೆ ಬರೆಯೋದಕ್ಕೆ ಶುರು ಮಾಡಿದ್ದಾರೆ. ಈ ರೀತಿ ರಾಜ್ಯಪಾಲರು ನಡೆದುಕೊಳ್ಳಬಾರದು. ಅದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ಪ್ರಮುಖ ಕೇಸುಗಳ ಮೇಲೆ ಆದ್ಯತೆ ಕೊಡಬೇಕಾಗಿತ್ತು. ತನಿಖೆ ಮಾಡಿ ಪೊಲೀಸ್ ಅಧಿಕಾರಿಗಳ ಪ್ರಾಸಿಕ್ಯೂಶನ್ ಕೇಳಿದಾಗ ಅಂತಹದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಅದನ್ನು ಬಿಟ್ಟು ರಾಜ್ಯದಲ್ಲಿ ಏನೋ ನಡೆಯುತ್ತಿದೆ ಎನ್ನುವ ರೀತಿ ರಾಜ್ಯಪಾಲರು ಪತ್ರ ಬರೆಯುತ್ತಿರುವುದು ಖಂಡನೀಯ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ತುಪ್ಪ ಉತ್ಪಾದನೆಯ ಗುಣಮಟ್ಟ ಪರಿಶೀಲನೆಗೆ ನಿರ್ಧಾರ: ದಿನೇಶ್ ಗುಂಡೂರಾವ್

    ರಾಜ್ಯಪಾಲರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ನನಗೆ ಆಶ್ಚರ್ಯ ಆಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೇವೆ. ಕೇಂದ್ರ ಸರ್ಕಾರ ಈಗ ರಾಜ್ಯಪಾಲರನ್ನು ಉಪಯೋಗಿಸಿಕೊಂಡು ಇಲ್ಲಿ ರಾಜಕೀಯ ಮಾಡಲು ಶುರು ಮಾಡಿದ್ದಾರೆ. ಈ ರೀತಿ ರಾಜ್ಯಪಾಲರು ಪತ್ರ ಬರೆಯುತ್ತಾರಾ ಎಂದು ವಿರೋಧ ಪಕ್ಷದ ನಾಯಕರು ಮಾಹಿತಿ ಕೇಳಲಿ. ಆದರೆ ರಾಜ್ಯಪಾಲರು ಕೇಳುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ಆತ್ಮಹತ್ಯೆ – ಕೆಲಸದ ಒತ್ತಡ ಕಾರಣ?

  • ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?

    ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?

    ಬೆಂಗಳೂರು: ಮುಡಾ ಸೈಟ್ (MUDA Scam Case) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಮುಂದಾಗಿದ್ದಾರೆ.

    ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಕಾನೂನು ಮೊರೆ ಹೋಗಲಿದ್ದಾರೆ. ಈ ಕಾನೂನು ಸಮರ ಸಿದ್ದರಾಮಯ್ಯನವರೇ ಮಾಡಬೇಕಿದೆ. ಇದನ್ನೂ ಓದಿ: ಸಿಎಂಗೆ ಮುಡಾ ಸಂಕಷ್ಟ – ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ

    ವೈಯಕ್ತಿಕವಾಗಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಕಾನೂನು ಸಮರ ಮುಂದುವರೆಸಬೇಕು. ಪ್ರಾಸಿಕ್ಯೂಷನ್ ಅಸಾಂವಿಧಾನಿಕ, ಕಾನೂನುಬಾಹಿರ ಅಂತಾ ಕೋರ್ಟ್‌ಗೆ ಸಿಎಂ ಮನವರಿಕೆ ಮಾಡಬೇಕಾಗುತ್ತದೆ.

    ರಾಜ್ಯಪಾಲರ ವಿವೇಚನಾ ಅಧಿಕಾರ ಪ್ರಶ್ನಿಸುವ ಹಕ್ಕು ಸರ್ಕಾರಕ್ಕೆ ಇಲ್ಲ. ರಾಜ್ಯಪಾಲರು ಅನುಮತಿ ಕೊಟ್ಟ ಪ್ರಾಸಿಕ್ಯೂಷನ್ ಬಗ್ಗೆ ಪ್ರಶ್ನೆ ಮಾಡಬೇಕಾಗುತ್ತದೆ. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗಲ್ಲ: ಪರಮೇಶ್ವರ್

    ಸಿಎಂ ಮುಂದಿರುವ ಆಯ್ಕೆ ಏನು?
    * ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಬಹುದು.
    * ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಸಿಎಂಗೆ ಅವಕಾಶ ಇದೆ.
    * 2022ರಲ್ಲಿ ಮುಡಾ ಸೈಟ್ ಸಿಎಂಗೆ ಹಂಚಿಕೆ ಆಗಿರೋದು. ಹೀಗಾಗಿ ರಾಜ್ಯಪಾಲರಿಗೆ ಅಧಿಕಾರ ಇಲ್ಲ ಅಂತಾ ವಾದಿಸಬಹುದು.
    * ಸ್ಪೀಕರ್‌ಗೆ ಅವಕಾಶ ಇದೆ ಅಂತಾ ಕೋರ್ಟ್‌ನಲ್ಲಿ ಪ್ರಸ್ತಾಪಿಸಬಹುದು.

  • ರಾಜ್ಯಪಾಲರು ಎರಡನೇ ಶೋಕಾಸ್ ನೋಟಿಸ್‌ ಕೊಟ್ಟಿಲ್ಲ: ಟಿಜೆ ಅಬ್ರಹಾಂ

    ರಾಜ್ಯಪಾಲರು ಎರಡನೇ ಶೋಕಾಸ್ ನೋಟಿಸ್‌ ಕೊಟ್ಟಿಲ್ಲ: ಟಿಜೆ ಅಬ್ರಹಾಂ

    – ರಾಜ್ಯಪಾಲರ ಭೇಟಿಯಾಗಿ ಸ್ಪಷ್ಟೀಕರಣ

    ಬೆಂಗಳೂರು: ನನಗೆ ತಿಳಿದ ಮಟ್ಟಿಗೆ ರಾಜ್ಯಪಾಲರು ಸಿಎಂಗೆ ಎರಡನೇ ಶೋಕಾಸ್‌ ನೋಟಿಸ್‌ ಕೊಟ್ಟಿಲ್ಲ ಎಂದು ದೂರುದಾರ ಟಿ.ಜೆ.ಅಬ್ರಹಾಂ (T.J.Abraham) ತಿಳಿಸಿದರು.

    ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಅವರು, ನನ್ನ ಪ್ರಾಸಿಕ್ಯೂಷನ್ ಬೇಡಿಕೆ ಏನಿತ್ತೋ ಅದರ ಮೇರೆಗೆ ಸರ್ಕಾರಕ್ಕೆ ಶೋಕಾಸ್ ನೋಟಿಸ್ ಕೊಟ್ಟಿದ್ದರು. ನನ್ನ ಅರ್ಜಿಯಲ್ಲಿ ಒಂದೂ ತಪ್ಪು ಹೇಳದೆ ಕ್ಯಾಬಿನೆಟ್ ನಡೆಸಿ ತಮ್ಮ ತಪ್ಪಿಲ್ಲ. ರಾಜ್ಯಪಾಲರು ನೋಟಿಸ್ ಕೊಟ್ಟಿರೋದೇ ತಪ್ಪು ಅಂತಾ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಅಬ್ರಹಾಂ ಸರಿಯಿಲ್ಲ ಅಂತಲೂ ಆಪಾದನೆ ಮಾಡಿದೆ ಸರ್ಕಾರ. ನಾನು ಹೇಳಿರೋದು ಸರಿ ಇದೆ, ನಾನು ಸರಿ ಇಲ್ಲ. ಈ ಬಗ್ಗೆ ರಾಜ್ಯಪಾಲರಿಗೆ ಸ್ಪಷ್ಟನೆ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು: ಭಾಸ್ಕರ್ ರಾವ್ ಬೇಸರ

    ಸರ್ಕಾರ ನನ್ನ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರೆ ಎಂಬುದು ನನ್ನ ವಿಶ್ವಾಸ. ಸಾಕಷ್ಟು ವಿವರಣೆ ಕೊಟ್ಟಿದ್ದೇನೆ. ಆದಷ್ಟು ಶೀಘ್ರದಲ್ಲಿ ರಾಜ್ಯಪಾಲರು ಉತ್ತರ ಕೊಡ್ತಾರೆ ಎಂದು ಹೇಳಿದರು.

    ಇವತ್ತು ಹೆಚ್ಚುವರಿ ದಾಖಲೆ ಕೊಡಲಿಲ್ಲ. ನನ್ನ ಮೇಲೆ ಸರ್ಕಾರ ಮಾಡಿರುವ ಆಪಾದನೆಗೆ ರಾಜ್ಯಪಾಲರ ಬಳಿ ಸ್ಪಷ್ಟೀಕರಣ ಕೊಟ್ಟಿದ್ದೇನೆ. ರಾಜ್ಯಪಾಲರು ಎರಡನೇ ಶೋಕಾಸ್ ನೋಟಿಸ್ ಕೊಟ್ಟಿಲ್ಲ.‌ ನನಗೆ ತಿಳಿದ ಮಟ್ಟಿಗೆ ಎರಡನೇ ನೋಟಿಸ್ ಕೊಟ್ಟಿಲ್ಲ.‌ ರಾಜ್ಯಪಾಲರು ಸ್ಪಷ್ಟನೆ ಕೇಳ್ತಾರೆ ಅಂದ್ರೆ ಅವರಿಗೆ ಇದನ್ನು ಮುಂದುವರೆಸಲು ಆಸಕ್ತಿ ಇದೆ ಅಂತರ್ಥ ಎಂದು ಮಾತನಾಡಿದರು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸರ್ಕಾರಿಂದ ಗುಡ್ ನ್ಯೂಸ್!

    ಕಳೆದ ಗುರುವಾರ ರಾಜ್ಯಪಾಲರ ಸಮಯ ಕೇಳಿದ್ದೆ. ಇವತ್ತು ಬರಲು ಹೇಳಿದ್ರು, ಬಂದು ಸ್ಪಷ್ಟೀಕರಣ ಕೊಟ್ಟಿದ್ದೇನೆ. ನನ್ನ ವಿರುದ್ಧ ಯಾವ ದೂರೂ ಇಲ್ಲ. ಸರ್ಕಾರಕ್ಕೆ ನಾನು ನೇರ ಸವಾಲ್ ಹಾಕ್ತೇನೆ. ನನ್ನ ವಿರುದ್ಧ ಕೇಸ್ ಹುಡುಕಿ. ಹುಡುಕಲು ಆಗದಿದ್ರೆ ಹೇಗೆ ಹುಡುಕಬೇಕು ಅಂತಾ ನನ್ನ ಕೇಳಿ ಎಂದು ಟಾಂಗ್‌ ಕೊಟ್ಟರು.

  • ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ರಾಜ್ಯಪಾಲರಿಗೆ ಹೆಚ್‍ಡಿಕೆ, ಜೆಡಿಎಸ್ ನಿಯೋಗ ದೂರು

    ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ರಾಜ್ಯಪಾಲರಿಗೆ ಹೆಚ್‍ಡಿಕೆ, ಜೆಡಿಎಸ್ ನಿಯೋಗ ದೂರು

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣ (Prajwal Pendrive Case) ಭಾರೀ ಕೋಲಾಹಲ ಎಬ್ಬಿಸಿದೆ. ಈ ಸಂಬಧ ಇಂದು ಹೆಚ್‍ಡಿಕೆ ನೇತೃತ್ವದ ಜೆಡಿಎಸ್ (JDS) ನಿಯೋಗವು ರಾಜಭವನದ ಕದ ತಟ್ಟಿದೆ.

    ಹೌದು. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸಂಬಂಧ ಕುಮಾರಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ವೇಳೆ ಹೆಚ್‍ಡಿಕೆಗೆ ಕೆಲ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಸಾಥ್ ನೀಡಿದ್ದಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ ತನಿಖೆ ಆಗಬೇಕು. ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದೆ ಅಂತಾ ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಆಡಳಿತ ನಡೆಸಿದವರ ಕುಟುಂಬದಿಂದ ಇಂಥ ಕೃತ್ಯ ಆಯ್ತಲ್ಲಾ ಎಂಬ ನೋವಿದೆ: ಶಿವಲಿಂಗೇಗೌಡ

    ಇದೇ ವೇಳೆ ಕುಮಾರಸ್ವಾಮಿಯವರು (HD Kumaraswamy) ಪೆನ್‍ಡ್ರೈವ್ ಪ್ರಕರಣ ಸಂಬಂಧ ಕಳೆದ ಒಮದು ವಾರದಿಂದ ಆದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರಿಗೆ ವಿವರಣೆ ನೀಡಿದರು. ಇನ್ನು ವಿಡಿಯೋ ಬಿಡುಗಡೆ ಮಾಡಿದ ಪ್ರಮುಖ ಆರೋಪಿ ಬೆಂಗಳೂರಿನಲ್ಲಿದ್ದು, ಅವನಿಗೆ ಸರ್ಕಾರದಿಂದಲೇ ರಾಜ ಮರ್ಯಾದೆ ಸಿಗುತ್ತಿದೆ. ಇದರ ಹಿಂದೆ ಸರ್ಕಾರದ ಪ್ರಭಾವಿ ನಾಯಕರ ಕೈವಾಡ ಇದೆ. ಕೈವಾಡ ಇರೋ ಆಡಿಯೋ ಮಾಧ್ಯಮಗಳಲ್ಲಿ ಬಂದಿದೆ. ಹೀಗಾಗಿ ಎಸ್‍ಐಟಿ ಇಂದ ನಿಷ್ಪಕ್ಷಪಾತವಾಗಿ ತನಿಖೆ ಆಗ್ತಿಲ್ಲ ಎಂದು ರಾಜ್ಯಪಾಲರ ಮುಂದೆ ಹೆಚ್‍ಡಿಕೆ ದೂರಿದ್ದಾರೆ.

    ಇಷ್ಟು ಮಾತ್ರವಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮಧ್ಯಪ್ರವೇಶ ಮಾಡುವಂತೆ ಹೆಚ್ ಡಿಕೆ ರಾಜ್ಯಪಾಲರನ್ನು (Governor) ಆಗ್ರಹಿಸಿದರು.

  • Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

    Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

    ಬೆಂಗಳೂರು: ಸರ್ಕಾರ ನುಡಿದಂತೆ ನಡೆದಿದೆ. 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ. ಶಕ್ತಿ ಯೋಜನೆಯಲ್ಲಿ 134.34 ಕೋಟಿ ಜನ ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ 2900.12 ಕೋಟಿ ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆ ಅಡಿ 1.50 ಕೋಟಿ ಗ್ರಾಹಕರು ಯೋಜನೆ ಫಲ ಪಡೆಯುತ್ತಿದ್ದಾರೆ. 700 ಕೋಟಿ ಗೃಹಜ್ಯೋತಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಹೇಳಿದ್ದಾರೆ.

    ಗಣರಾಜ್ಯೋತ್ಸವ ಅಂಗವಾಗಿ ನಗರ ಮಾಣಿಕ್ ಶಾ ಗ್ರೌಂಡ್‍ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮೊದಲು ನಾಡಿನ ಜನರಿಗೆ ಗಣರಾಜ್ಯೋತ್ಸವ ಶುಭಾಶಯ ಕೋರಿದರು. ರಾಜ್ಯದಲ್ಲಿ 223 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. ಬರ ಪರಿಹಾರಕ್ಕಾಗಿ ಎನ್‍ಡಿಆರ್ ಎಫ್‍ಗೆ ಅನುದಾನ ಕೋರಲಾಗಿದೆ. ರಾಜ್ಯ ಸರ್ಕಾರ ಬರ ಪರಿಹಾರವಾಗಿ ರೈತರಿಗೆ 2 ಸಾವಿರ ಮಧ್ಯಂತರ ಪರಿಹಾರ ನೀಡಲಾಗಿದೆ ಎಂದರು.

    262 ಹೊಸ ಅಂಬುಲೆನ್ಸ್ ಖರೀದಿ: ಕುಡಿಯುವ ನೀರು, ಮೇವು, ಪರಿಹಾರ ಕ್ರಮಗಳಿಗಾಗಿ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಬೆಳೆ ಸಮೀಕ್ಷೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ. ರೈತ ಸಿರಿ ಯೋಜನೆ ಅಡಿ ಸಿರಿಧಾನ್ಯ ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ದಂತೆ ಗರಿಷ್ಠ2 ಹೆಕ್ಟೇರ್ ಗೆ ಪ್ರೋತ್ಸಾಹ ಧನ ನೀಡಲಾಗ್ತಿದೆ. ಕರ್ನಾಟಕ ಅನೀಮಿಯಾ ಮುಕ್ತ ರಾಜ್ಯ ಮಾಡಲು 185.74 ಕೋಟಿ ವೆಚ್ಚ ಮಾಡಲಾಗ್ತಿದೆ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ. ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 108 ಆರೋಗ್ಯ ಕವಚ ಯೋಜನೆ ಅಡಿ ಹೊಸದಾಗಿ 262 ಅಂಬುಲೆನ್ಸ್ ಖರೀದಿ ಮಾಡಲಾಗ್ತಿದೆ ಎಂದು ಹೇಳಿದರು. ಇದನ್ನೂ ಓದಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ಸುರಂಗ ರಸ್ತೆ ನಿರ್ಮಿಸಲು ಯೋಜನೆ: ಬೆಂಗಳೂರು ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು, ಸಾರ್ವಜನಿಕರ ಧ್ವನಿ ಸರ್ಕಾರದ ಧ್ವನಿ ಎಂಬ ಮನೋಭಾವದಿಂದ ರೂಪಿಸಲಾಗಿದೆ. 8 ಪ್ರಮುಖ ವಿಷಯಗಳ ಕುರಿತು ತಜ್ಞರು, ಸಾರ್ವಜನಿಕರಿಂದ ಸಲಹೆ ಪಡೆಯಲಾಗಿದೆ. 70 ಸಾವಿರ ಸಲಹೆ ಬಂದಿದ್ದು ಸಮಿತಿ ಪರಿಶೀಲನೆ ಮಾಡಿ ಕ್ರಮ ಮಾಡಲಾಗುತ್ತದೆ. ಬೆಂಗಳೂರು ಮುಖ್ಯ ರಸ್ತೆಗಳ ಅಭಿವೃದ್ಧಿ 200 ಕೋಟಿ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಆಯ್ದ ಸ್ಥಳಗಳಲ್ಲಿ ಸುರಂಗ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗ್ತಿದೆ. ಪ್ರಾಯೋಗಿಕವಾಗಿ 2km ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ವ್ಯವಸ್ಥೆ ಮಾಡಲಾಗಿದೆ. SC-ST ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೆ ತರಲಾಗಿದೆ ಎಂದರು.

    ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿ, ನಗರ ಪೊಲೀಸ್ ಆಯುಕ್ತ, ಬಿಬಿಎಂಪಿ ಆಯುಕ್ತ ಉಪಸ್ಥಿತರಿದ್ದರು.