Tag: government

  • ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

    ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

    ಶಿಮ್ಲಾ: ಹಿಮಾಚಲ ಪ್ರದೇಶದ ಸರ್ಕಾರವು ರಾಜ್ಯದಲ್ಲಿ ಸಾಮೂಹಿಕ ಮತಾಂತರವನ್ನು ನಿಷೇಧಿಸಿದ್ದು, ಬಲವಂತದಿಂದ ಮತಾಂತರ ಮಾಡುವವರಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಪ್ರಸಕ್ತ ವರ್ಷದ ಅಂತ್ಯಕ್ಕೆ ಹಿಮಾಚಲ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಸರ್ಕಾರ ಈ ಕಾನೂನು ಕ್ರಮವನ್ನು ಜರುಗಿಸಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಇಲ್ಲಿ ಸಾಮೂಹಿಕ ಮತಾಂತರ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿತು. ಅಲ್ಲದೇ 2019ರ ಕಾನೂನಿನ ಅನ್ವಯ ಯಾವುದೇ ಧರ್ಮಕ್ಕೆ ಮತಾಂತರ ಮಾಡುವವರಿಗೆ ಗರಿಷ್ಠ 10 ವರ್ಷಗಳ ಕಾಲ ಶಿಕ್ಷೆ ವಿಧಿಸುವುದಾಗಿ ನಿರ್ಧರಿಸಿತು. ಇದೇ ವೇಳೆ ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ‍್ಯ (ತಿದ್ದುಪಡಿ) ಮಸೂದೆ-2022 ಅನ್ನು ಧ್ವನಿ ಮತದೊಂದಿಗೆ ಸರ್ವಾನುಮತದಿಂದ ಅಂಗೀಕರಿಲ್ಪಟ್ಟಿತು.

    ಇತ್ತೀಚೆಗೆ ಇಬ್ಬರು ಅಥವಾ ಅದಕ್ಕಿಂತಲೂ ಹೆಚ್ಚಿನವರನ್ನು ಏಕಕಾಲದಲ್ಲಿ ಮತಾಂತರಗೊಳಿಸುತ್ತಿದ್ದಾರೆ. ಅದಕ್ಕಾಗಿ ಮತಾಂತರ ಶಿಕ್ಷೆಯ ಪ್ರಮಾಣವನ್ನು 7 ರಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮಸೂದೆಯಲ್ಲಿ ಸಭೆಯಲ್ಲಿ ಠಾಕೂರ್ ಉಲ್ಲೇಖಿಸಿದರು. ಇದನ್ನೂ ಓದಿ: ಒಡಿಶಾ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್, ಪ್ರೆಗ್ನೆನ್ಸಿ ಟೂಲ್ ಹೊಂದಿದ `ವೆಡ್ಡಿಂಗ್ ಕಿಟ್’ ಗಿಫ್ಟ್

    ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರವು ಶುಕ್ರವಾರ ಹಿಮಾಚಲ ಪ್ರದೇಶ ಧರ್ಮದ ಸ್ವಾತಂತ್ರ‍್ಯ (ತಿದ್ದುಪಡಿ) ಮಸೂದೆ, 2022 ಅನ್ನು ಪರಿಚಯಿಸಿತು. ಇದು 18 ತಿಂಗಳುಗಳ ಹಿಂದಷ್ಟೇ ಜಾರಿಗೆ ಬಂದ ಹಿಮಾಚಲ ಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ -2019ರ ಹೆಚ್ಚು ಕಟ್ಟುನಿಟ್ಟಾದ ವಿಧೇಯಕವಾಗಿದೆ.

    2019ರ ಮಸೂದೆಯನ್ನು ಡಿಸೆಂಬರ್ 21, 2020 ರಂದು ಅಂದರೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ 15 ತಿಂಗಳ ನಂತರ ಅಧಿಸೂಚನೆ ಹೊರಡಿಸಲಾಗಿತ್ತು. 2019ರ ಕಾಯ್ದೆಯು 2006ರ ಕಾನೂನನ್ನು ಬದಲಿಸಿದೆ. ಆದರೆ, ಈ ಕಾಯ್ದೆ ಕಡಿಮೆ ಶಿಕ್ಷೆಯನ್ನು ಸೂಚಿಸಿದೆ. ಇನ್ನೊಂದೆಡೆ, ಶುಕ್ರವಾರ ಮಂಡಿಸಲಾಗಿರುವ ತಿದ್ದುಪಡಿ ಮಸೂದೆಯು ಬಲವಂತದ ಮತಾಂತರದ ಶಿಕ್ಷೆಯನ್ನು ಗರಿಷ್ಠ 7 ವರ್ಷಗಳಿಂದ ಗರಿಷ್ಠ 10 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    2019ರ ಕಾಯ್ದೆಯೂ ಸಾಮೂಹಿಕ ಮತಾಂತರವನ್ನು ತಡೆಯುವ ಅವಕಾಶಗಳನ್ನು ಹೊಂದಿಲ್ಲ. ಅದಕ್ಕಾಗಿ ಪರಿಣಾಮಕಾರಿ ನಿಬಂಧನೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಪ್ರಸ್ತಾಪಿಸಿದರು.

    ಬಿಜೆಪಿಯು ಮತಾಂತರ-ವಿರೋಧಿ ಕಾನೂನುಗಳ ಧ್ವನಿಯನ್ನು ಬೆಂಬಲಿಸುತ್ತಿದ್ದು, ಅನೇಕ ಪಕ್ಷ-ಆಡಳಿತ ರಾಜ್ಯಗಳು ಇದೇ ರೀತಿಯ ಕಾನೂನು ಕ್ರಮಗಳನ್ನು ಪರಿಚಯಿಸಿವೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಅಧಿಕಾರದ ಮಹಲು ಕಟ್ಟಿದ್ದೀರಿ: BJP ಸರ್ಕಾರದ ವಿರುದ್ಧ ಸೂಲಿಬೆಲೆ ಕಿಡಿ

    23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಅಧಿಕಾರದ ಮಹಲು ಕಟ್ಟಿದ್ದೀರಿ: BJP ಸರ್ಕಾರದ ವಿರುದ್ಧ ಸೂಲಿಬೆಲೆ ಕಿಡಿ

    ಬೆಂಗಳೂರು: ಕರಾವಳಿಯಲ್ಲಿ ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಇಂದು ಬೆಳ್ಳಂಬೆಳಗ್ಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬೆಂಕಿ ಬಾಂಬ್ ಬಿಜೆಪಿಯ ವಿರುದ್ಧ ರೋಷಾಗ್ನಿಗೆ ತುಪ್ಪ ಸುರಿದಂತೆ ಆಗಿದೆ. ಅಕ್ಷರಶಃ ಥಂಡಾ ಹೊಡೆದಂತೆ ಆಗಿದೆ ಬಿಜೆಪಿ ಪರಿಸ್ಥಿತಿ. ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಮಾಡಿರುವ ಚಾರ್ಜ್‌ಶೀಟ್ ಮಾತಿನ ಚಾಟಿ ಹೇಗಿತ್ತು ನೋಡಿ.

    ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮೂಲಕ ಕಿಡಿಕಾರಿರುವ ಸೂಲಿಬೆಲೆ, 23 ಹಿಂದೂ ಕಾರ್ಯಕರ್ತರ ಸಮಾಧಿಯಲ್ಲಿ ಅಧಿಕಾರದ ಮಹಲು ಕಟ್ಟಿದ್ದೀರಿ. ಭ್ರಷ್ಟಾಚಾರ ರಹಿತ ಸರ್ಕಾರವನ್ನು ಕೊಟ್ಟಿದ್ದಿದ್ದರೆ ಕಾರ್ಯಕರ್ತರು ಹೆಮ್ಮೆ ಪಡ್ತಾ ಇದ್ರು. ಅದನ್ನು ಮಾಡಿಲ್ಲ. ಹರ್ಷ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ಅಂದ್ರಿ. ಜೈಲಿನಲ್ಲಿ ಹಂತಕರಿಗೆ ಮೊಬೈಲ್ ಕೊಟ್ರಿ‌. 40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತಾ ಲೇವಡಿ ಮಾಡಿದಾಗಲೂ ಸಮರ್ಥವಾಗಿ ಇದನ್ನು ತಳ್ಳಿ ಹಾಕಲು ನಿಮಗೆ ಒಬ್ಬರಿಗೂ ಧೈರ್ಯ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್

    ಈಶ್ವರಪ್ಪ, ಸಿದ್ಧೇಶ್ವರ್‌ರವರೇ ನಿಮ್ಮ ಸ್ಥಾನವನ್ನು ಬೇರೆ ಅನೇಕ ನಾಯಕರು ತುಂಬಬಹುದು. ಆದರೆ ಕಾರ್ಯಕರ್ತರ ಬಗ್ಗೆ ಲೇವಡಿ ಮಾಡುವ ನೀವು, ಆ ಕಾರ್ಯಕರ್ತನ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಅಸಾಧ್ಯ ಅಂತಾ ಅರ್ಥಮಾಡಿಕೊಳ್ಳಬೇಕು. ಕುಟುಂಬ ರಾಜಕೀಯದ ಮುಖವಾಣಿ ನಿಮ್ಮಿಂದ ಯಾವ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯ? ಬಿಎಸ್‌ವೈ ಮತ್ತು ಮಕ್ಕಳು ಜಾರಕಿಹೊಳಿ ಮತ್ತು ಕುಟುಂಬ, ಎಂಎಲ್‌ಎ ರವಿಸುಬ್ರಮಣ್ಯ ಮತ್ತು ಕುಟುಂಬ, ಶೆಟ್ಟರ್ ಮತ್ತು ಕುಟುಂಬ ನಿಮ್ಮಿಂದ ಯಾವ ಬದಲಾವಣೆ ನಿರೀಕ್ಷೆ ಮಾಡಬಹುದು ಎಂದು ಖಾರವಾಗಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

    ಹಲಾಲ್ ಕಟ್, ಆಜಾನ್ ಹೋರಾಟ ಮಾಡಿದಾಗ ನೀವೇನ್ ಮಾಡಿದ್ರಿ? ಮೈಸೂರಿನಲ್ಲಿ ದೇವಸ್ಥಾನ ಒಡೆದಿದ್ದೆ ನಿಮ್ಮ ಸಾಧನೆಯೇ? ಕೊರೊನಾ ಸಂದರ್ಭದಲ್ಲಿ ಬೆಡ್, ಪಿಪಿಇ ಕಿಟ್‌ನಲ್ಲಿ ಜನರನ್ನು ಲೂಟಿ ಮಾಡಿದ್ರಿ. ಕಾರ್ಯಕರ್ತರಿಗೆ ಇದೆಲ್ಲವೂ ಗೊತ್ತಿಲ್ಲ ಅಂದುಕೊಂಡ್ರಾ? ಬಿಜೆಪಿ ಅಧಿಕಾರದ ಆಸೆಗೆ ಕೆಲ ಕಾಂಗ್ರೆಸ್ಸಿಗರನ್ನು ಪಕ್ಷದೊಳಗೆ ಸೇರ್ಪಡೆ ಮಾಡಿಕೊಂಡಿದೆ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಸಿದ್ಧಾಂತಗಳಿಲ್ಲ. ಮೋದಿ ವಿರುದ್ಧದ ಸಿದ್ಧಾಂತಗಳಿರುವ ಹಾಗೂ ದರ್ಪ ತೋರುವ ಕಾರ್ಯಕರ್ತರನ್ನು ಹೊಂದಿರುವ ಕೆಲವರಿಗೆ ಸಚಿವರ ಹುದ್ದೆ ಕೊಟ್ಟಿದೆ. ಹೀಗಿರುವಾಗ ಕಾರ್ಯಕರ್ತರ ಪರಿಸ್ಥಿತಿ ಏನಾಗಿರಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ಮನೆಗೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿ – ನೆಟ್ಟಾರು ಕುಟುಂಬಕ್ಕೆ 5 ಲಕ್ಷ ಪರಿಹಾರ

    ಕಾರ್ಯಕರ್ತರನ್ನು ಪುಟ್ಬಾಲ್ ಒದೆಯುವಂತೆ ಒದೆಯುತ್ತಿದ್ದೀರಾ? ಕಾರ್ಯಕರ್ತರಿಗೆ ಎತ್ತ ಹೋಗಬೇಕು ಎನ್ನುವಂತಾಗಿದೆ. ಭ್ರಷ್ಟಾಚಾರದಲ್ಲಿ ಹಣ, ಅಧಿಕಾರದ ಅಮಲಿನಲ್ಲಿ ಮುಳುಗಿ ಹೋಗಿದ್ದೀರಾ. ರೈತರು, ಕಾರ್ಮಿಕರು, ಶಿಕ್ಷಕರು.. ಯಾರ ಸಮಸ್ಯೆಗೂ ನೀವು ಸ್ಪಂದಿಸಲ್ಲ. ಆದರೆ ಸಿನಿಮಾ ಪ್ರೀಮಿಯರ್ ಶೋಗೆ ಸಿಎಂ ಹೋಗುತ್ತೀರೆ. ಫೈಲ್‌ಗಳಿಗೆ ಸಹಿ ಹಾಕೋಕೆ ‌ಮಾತ್ರ ತಾವು ಬ್ಯುಸಿ ಎಂದು ಸಿಎಂ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ: ಡಿ.ಕೆ ಶಿವಕುಮಾರ್

    ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ: ಡಿ.ಕೆ ಶಿವಕುಮಾರ್

    ಮೈಸೂರು: ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ. ಎಸ್.ಎಂ ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿ ಸಿಎಂ ಆಗಿದ್ದರು. ಅಂತಹದೊಂದು ಅವಕಾಶ ಸಮುದಾಯಕ್ಕೆ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ಅವರು, ನಾನು ಸನ್ಯಾಸಿ ಅಲ, ಖಾವಿ ತೊಟ್ಟಿಲ್ಲ ನಾನು ಖಾದಿ ತೊಟ್ಟಿದ್ದೇನೆ. ಎಸ್.ಎಂ ಕೃಷ್ಣ ನಂತರ ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಅವಕಾಶ ಬಂದಿದೆ. ಅದನ್ನು ಮಿಸ್ ಮಾಡಿಕೊಳ್ಳಬೇಡಿ ಅಂತಾ ಸಮುದಾಯದವರಿಗೆ ಹೇಳಿದ್ದೇನೆ. ಸಮುದಾಯದವರು ನನ್ನ ಪರ ನಿಲ್ಲಲ್ಲಿ ಅಂತಾ ಅವರಿಗೆ ಮನದಟ್ಟು ಮಾಡಿದ್ದೇನೆ. ಸಿಎಂ ಆಗಬೇಕಾದರೆ ಸರ್ಕಾರ ಬರಬೇಕು. ಸಿಎಂ ಆಗುವುದು ಆಮೇಲೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನನ್ನ ಬೆನ್ನಿಗೆ ಒಕ್ಕಲಿಗರು ಮಾತ್ರವಲ್ಲ ಎಲ್ಲಾ ಸಮಯದಾಯ ನಿಲ್ಲಲಿ ಎಂದರು.  ಇದನ್ನೂ ಓದಿ: ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್

    ಇದು ಕುವೆಂಪು, ಬಸವಣ್ಣ, ಕನಕದಾಸರು, ಶಿಶುನಾಳ ಷರೀಫ್ ಅವರ ಕರ್ನಾಟಕ ಇದು. ಈ ನಾಡಿನ ಶಾಂತಿಯನ್ನು ಬಿಜೆಪಿ ಸರಕಾರ ಕೆಡಿಸುತ್ತಿದೆ. ಅನೇಕರ ವ್ಯಾಪಾರ ವಹಿವಾಟನ್ನು ಬಿಜೆಪಿ ಹಾಳು ಮಾಡಿದೆ. ಎಲ್ಲಾ ನೇಮಕಾತಿಗೂ ಬೆಲೆ ನಿಗದಿ ಮಾಡಿದ್ದಾರೆ. ಹೋಟೆಲ್ ನಲ್ಲಿ ತಿಂಡಿಗೆ ಬೆಲೆ ನಿಗದಿ ಮಾಡಿದ ರೀತಿ ಬೆಲೆ ಪಟ್ಟಿ ಹಾಕಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಆಗಿರೋ ಅಕ್ರಮ ಈ ದೇಶದಲ್ಲಿ ಎಲ್ಲೂ ಕೂಡ ನಡೆದಿಲ್ಲ. ಓಎಂಆರ್ ಶೀಟ್ ಅನ್ನೇ ತಿದ್ದುತ್ತಾರೆ ಅಂದರೆ ಎಂತಹ ಸ್ಥಿತಿ ಇದೆ ನೋಡಿ ಎಂದರು.

    H VISHWANATH

    ಒಬ್ಬ ಮಂತ್ರಿ ಲಂಚದಿಂದ ಹೋದ ಇನ್ನೊಬ್ಬ ಮಂಚದಿಂದ ಹೋದ. ಇಂತಹ ಹತ್ತಾರು ಹಗರಣ ನಡೆದಿದೆ. ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದ್ದು. ನಾನು ಎಂದಿಗೂ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವರೇ ಇದು ಭ್ರಷ್ಟ ಸರ್ಕಾರ ಎಂದು ಹೇಳಿದ್ದಾರೆ. ಅವರಿಗೆ ನೋಟೀಸ್ ಕೊಟ್ಟು ವಿವರಣೆ ಕೇಳಿ ಎಂದು ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

    ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

    ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವೀಡಿಯೋ ಮಾಡಬಾರದೆಂದು ಸರ್ಕಾರ ಹೊರಡಿಸಿದ್ದ  ಆದೇಶದಲ್ಲಿ ವ್ಯಾಕರಣ ದೋಷ ಹೆಚ್ಚಿದ್ದರಿಂದ ಟೀಕೆ ಕೇಳಿ ಬಂದಿದೆ. ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಕಿಡಿಕಾರಿದೆ.

    ಟ್ವೀಟ್‍ನಲ್ಲಿ ಏನಿದೆ:
    ಭ್ರಷ್ಟ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ. ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧವೇ ಬರಬೇಕಾ ಭ್ರಷ್ಟ ಬಿಜೆಪಿ ಸರ್ಕಾರ ಬುದ್ಧಿ ಕಲಿಯಲು? ಬಿಜೆಪಿ ಸರ್ಕಾರ ʼಮದ್ಯ’ ʼರಾತ್ರಿʼ ಕೆಲಸಗಳನ್ನು ನಿಲ್ಲಿಸಬೇಕು ಮತ್ತು ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಸರ್ಕಾರದ ಆದೇಶದಲ್ಲಿ ವ್ಯಾಕರಣ ದೋಷ- ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ

    ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವೀಡಿಯೋ ಮಾಡಬಾರದೆಂದು ಸರ್ಕಾರ ಹೊರಡಿಸಿದ ಆದೇಶವನ್ನು ರಾಜ್ಯ ಸರ್ಕಾರ ಮಧ್ಯರಾತ್ರಿ ಹಿಂಪಡೆದಿದೆ. ಆದರೆ ಆ ಆದೇಶದಲ್ಲಿ ವ್ಯಾಕರಣ ದೋಷಗಳೇ ತುಂಬಿತ್ತು. ನಡಾವಳಿ ಎಂಬ ಶಬ್ದವನ್ನು ನಡವಳಿ, ಪ್ರಸ್ತಾವನೆಯನ್ನು ಪ್ರಸತ್ತಾವನೆ, ಮೇಲೆ- ಮೇಲೇ, ಭಾಗ- ಬಾಗ, ಕರ್ನಾಟಕ- ಕರ್ನಾಟಾ, ಆಡಳಿತ- ಆಡಳಿದ ಎಂದು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆದೇಶದಲ್ಲಿ ಆಗಿದ್ದ ವ್ಯಾಕರಣದ ಲೋಪದೋಷಗಳನ್ನು ಸರಿಪಡಿಸಿ ಮತ್ತೊಮ್ಮೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸಚಿವ ಜೆ.ಸಿ ಮಾಧುಸ್ವಾಮಿಗೆ ಆನೆಯಿಂದ ಮಾಲಾರ್ಪಣೆ

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ

    ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ

    ಲಂಡನ್: ಬ್ರಿಟನ್‌ನಲ್ಲಿ ಕಳೆದ 48 ಗಂಟೆಗಳಲ್ಲಿ 5 ಕ್ಯಾಬಿನೆಟ್ ಸಚಿವರು ಅಧಿಕಾರಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಹ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    ಮಂಗಳವಾರ ರಾತ್ರಿಯಿಂದಲೇ ಪ್ರಮುಖ ಸಚಿವರು ಸರ್ಕಾರವನ್ನು ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನೇರವಾಗಿ ಒಪಿಡಿಗೆ ಓಡಿಬಂದ ಕತ್ತೆ- ಗಾಬರಿಗೊಂಡ ರೋಗಿಗಳು

    ಕಳೆದ ತಿಂಗಳು, ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವರಾದ ರಿಷಿ ಸುನಕ್ ಮತ್ತು ಸಾಜಿದ್ ಜಾವಿದ್ ಕೂಡ ಜಾನ್ಸನ್ ತಂಡವನ್ನು ತೊರೆದಿದ್ದಾರೆ.

    ಆರೋಗ್ಯ ಸಚಿವ ಸಾಜಿದ್ ಜಾವಿದ್ ಮತ್ತು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್ ಅವರ ರಾಜೀನಾಮೆಯೊಂದಿಗೆ ಪ್ರಾರಂಭವಾದ ಸಂಚಲನ ನಿನ್ನೆಯೂ ಮುಂದುವರಿದಿತ್ತು. ಜಾನ್ ಗ್ಲೇನ್, ಭದ್ರತಾ ಕಾರ್ಯದರ್ಶಿ ರಾಚೆಲ್ ಮೆಕ್ಲೀನ್, ರಫ್ತು ಸಚಿವ ಮೈಕ್ ಫ್ರೀರ್, ವಸತಿ ಮತ್ತು ಸಮುದಾಯಗಳ ಜೂನಿಯರ್ ಸಚಿವ ನೀಲ್ ಒಬ್ರೇನ್, ಶಿಕ್ಷಣ ಇಲಾಖೆಯ ಕಿರಿಯ ಕಾರ್ಯದರ್ಶಿ ಅಲೆಕ್ಸ್ ಬರ್ಗರ್ಟ್ ಸೇರಿದಂತೆ 40ಕ್ಕೂ ಹೆಚ್ಚು ಸಚಿವರು ಜಾನ್ಸನ್ ಅವರ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನ್ಯಾಯಾಂಗ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯೇ ಹೊರತು ರಾಜಕೀಯ ಪಕ್ಷಗಳಿಗಲ್ಲ: ಎನ್.ವಿ.ರಮಣ

    ನ್ಯಾಯಾಂಗ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯೇ ಹೊರತು ರಾಜಕೀಯ ಪಕ್ಷಗಳಿಗಲ್ಲ: ಎನ್.ವಿ.ರಮಣ

    ವಾಷಿಂಗ್ಟನ್: ನ್ಯಾಯಾಂಗ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯೇ ಹೊರತು ರಾಜಕೀಯ ಪಕ್ಷಗಳಿಗೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.

    ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ಅಮೆರಿಕನ್ನರ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ನ್ಯಾಯಾಂಗ ವ್ಯವಸ್ಥೆ ಕುರಿತಾಗಿ ರಾಜಕೀಯ ಪಕ್ಷಗಳು ನೀಡುತ್ತಿರುವ ಪರ-ವಿರೋಧದ ಹೇಳಿಕೆಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಆಸ್ಟ್ರೇಲಿಯಾಕ್ಕೆ ಅಕ್ರಮ ವಲಸೆಗೆ ಯತ್ನ – 51 ಮಂದಿ ಬಂಧನ

    ಅಧಿಕಾರದಲ್ಲಿರುವ ಸರ್ಕಾರದ ಪ್ರತಿ ಕ್ರಿಯೆಯೂ ನ್ಯಾಯಾಂಗದ ಅನುಮೋದನೆಗೆ ಅರ್ಹ ಎಂದು ಭಾವಿಸುತ್ತವೆ. ವಿರೋಧ ಪಕ್ಷಗಳೂ ತಮ್ಮ ರಾಜಕೀಯ ಸ್ಥಾನ ಮತ್ತು ಅನುಕೂಲತೆಗಳಿಗೆ ಪೂರಕವಾಗಿ ನ್ಯಾಯಾಂಗ ಇರಬೇಕೆಂದು ನಿರೀಕ್ಷಿಸುತ್ತವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಬಗ್ಗೆ ಜನರಲ್ಲಿ ಸೂಕ್ತ ತಿಳಿವಳಿಕೆ ಕೊರತೆಗಳು ಇಂತಹ ಎಲ್ಲ ದುರ್ಬಲ ಆಲೋಚನೆಗಳಿಗೆ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ಯಾರಿಸ್‌ಗೆ ಹೋಗ್ತಿದ್ದ ಪುಲಿಟ್ಜರ್ ವಿಜೇತೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ತಡೆ

    ಸಾಮಾನ್ಯ ಜನರ ನಡುವೆ ವ್ಯಾಪಕವಾಗಿ ತುಂಬಿರುವ ತಿಳಿವಳಿಕೆಯ ಕೊರತೆಯು ನ್ಯಾಯಾಂಗದ ಮೇಲೆ ಪ್ರಭಾವ ಬೀರುತ್ತಿವೆ. ಜೊತೆಗೆ ತಪ್ಪು ತಿಳಿವಳಿಕೆಯನ್ನೂ ಮೂಡಿಸುತ್ತಿವೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಾವು ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯೇ ಹೊರತು ರಾಜಕೀಯ ಪಕ್ಷಗಳಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಜನರು ದೇಶವನ್ನು ಒಂದುಗೂಡಿಸುವ ವಿಚಾರಗಳ ಕಡೆ ಗಮನ ಹರಿಸಬೇಕೇ ವಿನಾ ವಿಭಜನೆಯ ಸಂಗತಿಗಳ ಮೇಲೆ ಅಲ್ಲ. ಏಕೆಂದರೆ ಸಾಮಾಜಿಕ ಒಳಗೊಳ್ಳುವಿಕೆಯು ಸಮಾಜದ ಒಗ್ಗಟ್ಟನ್ನು ಬಲಪಡಿಸುತ್ತದೆ. ಇದು ಶಾಂತಿ ಮತ್ತು ಪ್ರಗತಿಯ ಮುಖ್ಯ ಶಕ್ತಿ. ನಮ್ಮನ್ನು ಒಂದುಗೂಡಿಸುವ ವಿಷಯಗಳ ಮೇಲೆ ನಾವು ಗಮನ ಹರಿಸಬೇಕಿದೆಯೇ ಹೊರತು ನಮ್ಮನ್ನು ವಿಭಜನೆ ಮಾಡುವ ಸಂಗತಿಗಳ ಮೇಲಲ್ಲ ಎಂದು ಎಚ್ಚರಿಸಿದ್ದಾರೆ.

    Live Tv

  • ಸರ್ಕಾರದ ವಿವಿಧ ಯೋಜನೆ – ರಾಜ್ಯಪಾಲರಿಂದ ಫಲಾನುಭವಿಗಳೊಂದಿಗೆ ಸಂವಾದ

    ಸರ್ಕಾರದ ವಿವಿಧ ಯೋಜನೆ – ರಾಜ್ಯಪಾಲರಿಂದ ಫಲಾನುಭವಿಗಳೊಂದಿಗೆ ಸಂವಾದ

    ಮಡಿಕೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಸಂವಾದ ನಡೆಸಿದರು.

    ನಗರದ ಹೋಟೆಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ಸ್ವಾಗತಿಸಿ, ಸರ್ಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಫಲಾನುಭವಿ ಮಲ್ಲಮ್ಮ ಅವರು ಹೂ ವ್ಯಾಪಾರ ಮಾಡುತ್ತಿದ್ದು, ನಗರಸಭೆ ವತಿಯಿಂದ 2.70 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿರುವುದರಿಂದ ಬದುಕು ಕಟ್ಟಿಕೊಳ್ಳಲು ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.

    ಆ್ಯರಿಸ್ ಅವರು ಮಾತನಾಡಿ, ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ನಗರಸಭೆ ವತಿಯಿಂದ 10 ಸಾವಿರ ರೂ. ಸಹಾಯಧನ ಕಲ್ಪಿಸಿದ್ದರು, ಇದನ್ನು ಪಾವತಿಸಿದ ನಂತರ 20 ಸಾವಿರ ರೂ. ಸಹಾಯಧನ ಕಲ್ಪಿಸಿದರು. 20 ಸಾವಿರ ರೂ. ಪಾವತಿಸಿದ ನಂತರ 50 ಸಾವಿರ ರೂ. ಮಂಜೂರಾಗಿದೆ. ಪಾಸ್ಟ್ ಫುಡ್ ಸ್ವ-ಉದ್ಯೋಗ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಪಿ.ಕೆ ರಂಗಪ್ಪ ಮಾತನಾಡಿ, ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಉನ್ನತ ಶಿಕ್ಷಣ ಕೊಡಿಸಿದೆ. ಮಗಳು ಕೇಂದ್ರ ನಾಗರಿಕ ಸೇವೆ ತರಬೇತಿ ಪಡೆಯುತ್ತಿದ್ದಾಳೆ. ಇದಕ್ಕಾಗಿ ನಗರಸಭೆಯಿಂದ 1.5 ಲಕ್ಷ ರೂ. ಪ್ರೋತ್ಸಾಹಧನ ಕಲ್ಪಿಸಿದ್ದಾರೆ. ಮಗಳು ಮತ್ತು ಮಗ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರಾಜ್ಯಪಾಲರ ಭೇಟಿ

    ನಂಜುಂಡ ಅವರು ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಗುರುತಿನ ಚೀಟಿ ದೊರೆತಿದೆ. ಪಾರ್ಶ್ವವಾಯು, ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗಳಿದ್ದು, ಗುರುತಿನ ಚೀಟಿ ನೀಡಿರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

    ಫಲಾನುಭವಿ ಯಶೋಧ ಮಾತನಾಡಿ, 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡೆ. ಆ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿ ಇದ್ದೆ. ಸರ್ಕಾರ ವಾಸಕ್ಕೆ ಕರ್ಣಂಗೇರಿಯಲ್ಲಿ ಮನೆ ಕಲ್ಪಿಸಿದ್ದು, ಬದುಕು ದೂಡಲು ಸಹಕಾರಿಯಾಗಿದೆ ಎಂದು ಸ್ಮರಿಸಿದರು. ಇದನ್ನೂ ಓದಿ: ಭಾರೀ ಮಳೆಗೆ ಪಂಜ-ಉಳ್ಯ ಜಲಾವೃತ – ಆತಂಕದಲ್ಲಿ ಕೃಷಿಕರು

    ಚಿರಾಗ್ ಅವರು ಮಾತನಾಡಿ, ಎಂಬಿಬಿಎಸ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಿಂದುಳಿದ ವರ್ಗಗಳ ಇಲಾಖೆಯಿಂದ ಶಿಷ್ಯವೇತನ ದೊರೆಯುತ್ತಿರುವುದರಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.

    ಹೆಚ್.ಎಸ್ ಮೋಹನ್ ಮಾತನಾಡಿ, ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಲಭ್ಯವಾಗಿರುವುದರಿಂದ ಶಿಷ್ಯವೇತನ ದೊರೆತಿದೆ ಎಂದು ಹೇಳಿದರು. ಧರಣಿ ಮಾತನಾಡಿ, ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಧನ ದೊರೆತಿದೆ ಎಂದರು. ಶರತ್ ಕುಮಾರ್ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಭಿತ್ತನೆ ಬೀಜ ಹಾಗೂ ಇತರೆ ಕೃಷಿಗಾಗಿ 9 ಕಂತಿನಲ್ಲಿ 18 ಸಾವಿರ ರೂ. ಪಾವತಿ ಆಗಿರುವುದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

    ಮೀನಾ ಕುಮಾರಿ ಮಾತನಾಡಿ, ಸಂಪಾಜೆಯಲ್ಲಿ ಸಂಜೀವಿನಿ ಒಕ್ಟೂಟದ ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಸಾವಿರ ರೂ. ಸಹಾಯಧನ ಕಲ್ಪಿಸಲಾಗುತ್ತದೆ ಎಂದರು. ಸ್ವ-ಸಹಾಯ ಗುಂಪಿನಲ್ಲಿ 58 ಮಂದಿ ಸದಸ್ಯರಿದ್ದು, ಸರ್ಕಾರದಿಂದ ಒಂದಲ್ಲ ಒಂದು ಸೌಲಭ್ಯಗಳು ದೊರೆಯುತ್ತಿವೆ ಎಂದರು.

    ನವೀನ್ ಅವರು ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ 3 ಲಕ್ಷ ರೂ. ಸಹಾಯಧನದಡಿ ಟ್ಯಾಕ್ಸಿ ದೊರೆತಿದ್ದು, ಇದರಿಂದ ಜೀವನ ಸಾಗಿಸಲು ಸಹಕಾರಿಯಾಗಿದೆ ಎಂದರು. ಮೋಹನ್ ಕುಮಾರ್ ಅವರು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಲವು ಸೌಲಭ್ಯಗಳು ದೊರೆಯುತ್ತಿದೆ ಎಂದರು. ರಶ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ವ-ಉದ್ಯೋಗ ಕೈಗೊಳ್ಳಲು 69 ಸಾವಿರ ರೂ. ಸಹಾಯಧನ ದೊರೆತಿದೆ ಎಂದು ಸಂತಸಪಟ್ಟರು. ಉದ್ಯೋಗಿನಿ ಯೋಜನೆಯಡಿ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಧನ ದೊರೆತಿದೆ ಎಂದರು.

    ಸಂವಾದ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಉತ್ತಮ ಜೀವನ ಕಟ್ಟಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ವಸತಿ, ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಪಿಂಚಣಿ, ಪುನರ್ವಸತಿ ಯೋಜನೆ, ಶಿಷ್ಯವೇತನ, ಮುದ್ರಾ ಯೋಜನೆ, ಮುಖ್ಯಮಂತ್ರಿಯವರ ಅಮೃತ ಯೋಜನೆ, ಉನ್ನತ ಶಿಕ್ಷಣದಡಿ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹಧನ, ಉದ್ಯೋಗಿನಿ ಹೀಗೆ ಸರ್ಕಾರದ ವಿವಿಧ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಸಂವಾದ ನಡೆಸಿಕೊಟ್ಟರು.

    ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಬಲವರ್ಧನ ಕಾರ್ಯಕ್ರಮ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿವಿಧ ಇಲಾಖೆ ಅಧಿಕಾರಿಗಳು ಸಂವಾದದಲ್ಲಿ ಉಪಸ್ಥಿತರಿದ್ದರು.

    Live Tv

  • ಮಳೆ ಬಂದ್ರೆ ನೆಂದು ಹೋಗ್ತೇವೆ, ಸರಿಯಾದ ಶಾಲಾ ಕೊಠಡಿ ಕಟ್ಟಿಸಿಕೊಡಿ: ವಿದ್ಯಾರ್ಥಿಗಳ ಮನವಿ

    ಮಳೆ ಬಂದ್ರೆ ನೆಂದು ಹೋಗ್ತೇವೆ, ಸರಿಯಾದ ಶಾಲಾ ಕೊಠಡಿ ಕಟ್ಟಿಸಿಕೊಡಿ: ವಿದ್ಯಾರ್ಥಿಗಳ ಮನವಿ

    ಹಾಸನ: ಸರ್ಕಾರ ಮಕ್ಕಳಿಗೆ ಉಚಿತ ಹಾಗೂ ಉತ್ತಮ ಶಿಕ್ಷಣ ನೀಡೋದಾಗಿ ಬಡಾಯಿ ಕೊಚ್ಚಿಕೊಳ್ಳುತ್ತೆ. ಆದರೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು ನೂರು ಮಕ್ಕಳು ಓದುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಸರಿಯಾದ ಕಟ್ಟಡ ಇಲ್ಲದೆ, ಬಿರುಕು ಗೋಡೆಯ ಕೊಠಡಿಯಲ್ಲಿ ಮಕ್ಕಳು ಕುಳಿತು ಪಾಠ ಕೇಳುವಂತಾಗಿದೆ. ಇದರಿಂದ ಮಕ್ಕಳು ಮತ್ತು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚೆಗೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿವೆ. ಆದರೆ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸುಮಾರು ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೂ ಕೂಡ ಸರಿಯಾದ ಕಟ್ಟಡ, ಶೌಚಾಲಯ ಇಲ್ಲದೆ, ಪ್ರತಿನಿತ್ಯ ಮಕ್ಕಳು ಸಂಕಟ ಪಡುವಂತಾಗಿದೆ. ಮಕ್ಕಳು ಕುಳಿತು ಪಾಠ ಕೇಳುವ ತರಗತಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿವೆ. ವಿಧಿಯಿಲ್ಲದೆ ಜೀವ ಕೈಲಿಡಿದು, ಮಕ್ಕಳು ಅದೇ ತರಗತಿಯೊಳಗೆ ಕುಳಿತು ಪಾಠ ಕೇಳುವಂತಾಗಿದೆ. ಇದನ್ನೂ ಓದಿ: ಹಾಂಕಾಂಗ್ ತೇಲುವ ಜಂಬೋ ರೆಸ್ಟೋರೆಂಟ್ ಕುಸಿದಿದೆ, ಮುಳುಗಿಲ್ಲ: ಸ್ಪಷ್ಟನೆ ಕೊಟ್ಟ ಮಾಲೀಕ

    ಈ ಹಿನ್ನೆಲೆ ವಿದ್ಯಾರ್ಥಿಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಳೆ ಬಂದ್ರೆ ನಾವು ನೆಂದು ಹೋಗ್ತೇವೆ. ನಮಗೆ ಸರಿಯಾದ ಶಾಲಾ ಕೊಠಡಿ ಕಟ್ಟಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಶೌಚಾಲಯವೇ ಇಲ್ಲ
    ಸುಮಾರು ನೂರು ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಸರಿಯಾದ ಶೌಚಾಲಯವೇ ಇಲ್ಲ. ಹೀಗಾಗಿ ಮಕ್ಕಳು ಬಯಲು ಶೌಚಾಲಯವನ್ನೇ ಆಶ್ರಯಿಸುವಂತಾಗಿದೆ. ಬಯಲುಮುಕ್ತ ಶೌಚಾಲಯದ ಬಗ್ಗೆ ಮಾತನಾಡುವ ಸರ್ಕಾರ ವಿದ್ಯಾರ್ಥಿಗಳಿಗೆ ಕನಿಷ್ಟ ಶೌಚಾಲಯ ವ್ಯವಸ್ಥೆ ಮಾಡಲು ಕೂಡ ಮೀನಾಮೇಷ ಎಣಿಸುತ್ತಿದೆ. ತಮ್ಮ ಮಕ್ಕಳು ಜೀವ ಭಯದಲ್ಲಿ ಇಂತಹ ಶಾಲೆಯಲ್ಲಿ ಓದುವ ಬದಲು, ನಾವು ಸಾಲ ಮಾಡಿಯಾದರೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತೇವೆ ಎಂದು ಕೆಲವು ಪೋಷಕರು ಟಿಸಿ ಪಡೆದು ಹೋಗುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ

    ಸುಸಜ್ಜಿತ ಕಟ್ಟಡ ಹಾಗೂ ಶೌಚಾಲಯಕ್ಕಾಗಿ ಈಗಾಗಲೇ ಗ್ರಾಮಸ್ಥರು ಹಲವು ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಕುಸಿದು ಏನಾದರೂ ಅವಾಂತರ ಆಗುವ ಮೊದಲು, ಸರ್ಕಾರ ಈ ಶಾಲೆಗೆ ಒಳ್ಳೆಯ ಕಟ್ಟಡ ಕಟ್ಟಿಕೊಡಲು ತಕ್ಷಣವೇ ಮುಂದಾಗಬೇಕಿದೆ.

    Live Tv

  • ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ

    ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ

    ಬೆಳಗಾವಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ ಎಂದು ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.

    ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ವಿಚಾರವಾಗಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ. ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಮೂರು ಪಕ್ಷ ಸೇರಿ ಮೂರಾಬಟ್ಟೆ ಸರ್ಕಾರ ಮಾಡಿದೆ. ಕಾಂಗ್ರೆಸ್, ಶಿವಸೇನೆಗೆ ಎಂದೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ನೀರಿಗೆ ಎಣ್ಣೆ ಸೇರಿಸಿದ ಹಾಗೇ ಆಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.

    ಬಾಳಾಸಾಹೇಬ್ ಠಾಕ್ರೆ ಮುಂಬೈನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿ ಶಿವಸೇನೆ ಪಕ್ಷವನ್ನು ಕಟ್ಟಿದ್ದಾರೆ. ಅಧಿಕಾರದ ಆಸೆಗೆ ಉದ್ಧವ್ ಠಾಕ್ರೆ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದಾರೆ. ತತ್ವ, ಸಿದ್ಧಾಂತವಿಲ್ಲದ ಪಕ್ಷದ ಜೊತೆ ಕೈ ಜೋಡಿಸಿ ಸರ್ಕಾರ ಮಾಡಿದ್ದು, ಮಹಾ ಅಪರಾಧ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ವಿಧಿವಶ

    ಉದ್ಧವ ಠಾಕ್ರೆ ವಿರುದ್ಧ ಅವರದೇ ಪಕ್ಷದ ಶಾಸಕರು ಬಂಡೆದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಕಾದು ನೋಡಬೇಕು. ಆಪರೇಷನ್ ನಾವು ಮಾಡಿಲ್ಲ. ಯಾವ ಪಕ್ಷಕ್ಕೆ ತತ್ವ ಸಿದ್ಧಾಂತವಿಲ್ಲ. ಅಂತವರ ವಿರುದ್ಧ ಪಕ್ಷದ ಶಾಸಕರೇ ಬಂಡೆದ್ದಿದ್ದಾರೆ. ಪ್ರಧಾನಿ ಮೋದಿ ಆಡಳಿತ ಮೆಚ್ಚಿ ಇಡೀ ಪ್ರಪಂಚದಲ್ಲಿ ಬಿಜೆಪಿ ಬಲಿಷ್ಠ ಪಕ್ಷವಾಗ್ತಿದೆ ಎಂದು ವಿವರಿಸಿದರು.

    18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ದೇಶದಲ್ಲಿ 1,378 ಬಿಜೆಪಿ ಶಾಸಕರಿದ್ದು, 301 ಬಿಜೆಪಿ ಸಂಸದರಿದ್ದಾರೆ. 95 ರಾಜ್ಯಸಭಾ ಸದಸ್ಯರಿದ್ದಾರೆ. ನರೇಂದ್ರ ಮೋದಿ ದೇಶಪ್ರೇಮ, ಅಭಿವೃದ್ಧಿ, ಇಡೀ ಪ್ರಪಂಚದಲ್ಲಿ ಬಿಜೆಪಿ ಕೀರ್ತಿ ಗೌರವ ಹೆಚ್ಚಾಗಿದ್ದರಿಂದ ಮೆಚ್ಚಿ ಬರುತ್ತಿದ್ದಾರೆ. ಸ್ಥಿರ ಸರ್ಕಾರ ಅಂದ್ರೆ ಏನು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಿಯಮಗಳನ್ನು ಮೀರಿ ಕಲ್ಲು ಕ್ವಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ

    ಮಹಾರಾಷ್ಟ್ರದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆ ಸಂದರ್ಭದಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸೀಟ್ ಬಂದಿರುತ್ತೆ ಅವರನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

    Live Tv

  • 1.5 ವರ್ಷದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ನೀಡಲು ಮುಂದಾದ ಮೋದಿ ಸರ್ಕಾರ

    1.5 ವರ್ಷದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ನೀಡಲು ಮುಂದಾದ ಮೋದಿ ಸರ್ಕಾರ

    ನವದೆಹಲಿ: ಮೋದಿ ಸರ್ಕಾರವು ಮುಂದಿನ 1.5 ವರ್ಷಗಳಲ್ಲಿ ವಿವಿಧ ಇಲಾಖೆಗಳಿಗೆ ಹಾಗೂ ಸಚಿವಾಲಯಗಳಲ್ಲಿ 10 ಲಕ್ಷ ಜನರನ್ನು ನೇಮಿಸಿಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

    ಈ ಬಗ್ಗೆ ಪಿಎಂ ಇಂಡಿಯಾ ಟ್ವೀಟ್ ಮಾಡಿದ್ದು, ಮಿಷನ್ ಮೋಡ್‍ನಡಿಯಲ್ಲಿ ನೇಮಕಾತಿಯನ್ನು ಪ್ರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಇಲಾಖೆಗಳಿಗೆ ಹಾಗೂ ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದೆ.

    ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳು ಸೇರಿದಂತೆ ಸ್ವಪಕ್ಷದ ಸಂಸದ ವರುಣ್ ಗಾಂಧಿ ಪದೇ ಪದೇ ಟೀಕಿಸುತ್ತಿರುವ ಹಿನ್ನೆಲೆಯಲ್ಲೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಉದ್ಯೋಗಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಜನರನ್ನು ನೇಮಕ ಮಾಡುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಧನಸಹಾಯ ಮಾಡುತ್ತಿದ್ದ 4ನೇ ಶಂಕಿತ ಅರೆಸ್ಟ್

    ಈ ಹಿಂದೆ ಏಪ್ರಿಲ್‍ನಲ್ಲಿ ಪ್ರಧಾನಿ ಮೋದಿ ಅವರು ಉನ್ನತ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದರು. ಇದರಿಂದಾಗಿ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿದೆ.

    ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, 2020ರ ಮಾರ್ಚ್ 1ರವರೆಗೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 87 ಲಕ್ಷ ಹುದ್ದೆಗಳು ಖಾಲಿ ಇವೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಫಿಲ್ಮ್ ಸಿಟಿ: ಸಿಎಂ ಹೇಳಿದ್ದೇನು?