Tag: government

  • ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

    ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

    –  ಹೆಲಿಕಾಪ್ಟರ್‌ನಲ್ಲಿ ಓಡಾಡುವ ಎಸ್‍ಸಿ, ಎಸ್‍ಟಿಗಳು ಇದ್ದಾರೆ

    ಧಾರವಾಡ: ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಆ ಜನರೆಲ್ಲರೂ ಪಂಚಮಸಾಲಿಯ ನಾಯಕರೇ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕೂಡಲ ಸಂಗಮ ಮತ್ತು ಹರಿಹರ ಪೀಠ ಸ್ವಾಮೀಜಿ 2ಎ ಗಾಗಿ ಅವರದ್ದೇ ಲೆವಲ್‍ನಲ್ಲಿ ಅವರು ಹೋರಾಟ ಮಾಡುತ್ತಿದ್ದಾರೆ. ನಾವು ಸಹ ವಿಧಾನಸಭೆ ಒಳಗೆ ಈ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದೆವೆ. ಮೀಸಲಾತಿ ಕೊಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮೀಸಲಾತಿ ಬಂದ ಬಳಿಕ ಕೋರ್ಟ್‍ಗೆ ಹೋದರೆ ಅದು ಹಾಗೆಯೇ ಉಳಿಯುತ್ತದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿಗಳ ತ್ರಿ ಸದಸ್ಯ ಪೀಠದಿಂದ ಈ ಕೆಲಸ ನಡೆದಿದೆ. ಇಷ್ಟೇ ದಿನದಲ್ಲಿ ಮೀಸಲಾತಿ ಆಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಎಲ್ಲ ಸಮಾಜದಲ್ಲಿ ಬಡವರು ಶ್ರೀಮಂತರು ಇದ್ದಾರೆ. ಎಸ್‍ಸಿ ಸಮಾಜದಲ್ಲಿಯೂ ಶ್ರೀಮಂತರಿದ್ದಾರೆ, ಮಲ್ಲಿಕಾರ್ಜುನ ಖರ್ಗೆಯಂಥವರು ಹೆಲಿಕಾಪ್ಟರ್‍ನಲ್ಲಿ ಓಡಾಡುವವರು ಎಸ್‍ಸಿ, ಎಸ್‍ಟಿಯಲ್ಲಿ ಇದ್ದಾರೆ. ಬ್ರಾಹ್ಮಣ ಮೇಲ್ವರ್ಗದ ಸಮಾಜದಲ್ಲೂ ಬಡವರಿದ್ದಾರೆ ಎಂದು ಹೇಳಿದರು.

    ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಇದು ನಕಲಿ ಸಿಡಿ ಎಂದು ಜಾರಕಿಹೊಳಿಯವರೇ ಹೇಳಿದ್ದಾರೆ. ಆದರೂ ಸಹ ಸತ್ಯಾಸತ್ಯತೆ ಕಂಡು ಹಿಡಿಯಲು ತನಿಖೆ ಮಾಡುತ್ತಿದ್ದಾರೆ. ಸ್ವಲ್ಪ ದಿನದಲ್ಲಿ ನಿರಪರಾಧಿಯಾಗಿ ಹೊರ ಬರುತ್ತಾರೆ. ವರದಿ ಬಂದ ಬಳಿಕ ಅಪಾದನೆಯಿಂದ ಹೊರಗೆ ಬರುತ್ತಾರೆ. ಗೃಹ ಇಲಾಖೆಗೆ ತನ್ನದೆಯಾದ ಪ್ರಕ್ರಿಯೆ ಇರುತ್ತದೆ. ಆ ಪ್ರಕ್ರಿಯೆ ಅಡಿಯಲ್ಲಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

  • ಬಡಾಯಿ ಸಚಿವರ ಬಂಡವಾಳ ಬಯಲು – ವಿಧವೆಯರು, ವೃದ್ಧರಿಗೆ ಮಾಸಾಶನ ಕೊಡದ ಸರ್ಕಾರ

    ಬಡಾಯಿ ಸಚಿವರ ಬಂಡವಾಳ ಬಯಲು – ವಿಧವೆಯರು, ವೃದ್ಧರಿಗೆ ಮಾಸಾಶನ ಕೊಡದ ಸರ್ಕಾರ

    ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿ ಕಣ್ಣೀರಿಡುತ್ತಿವ ಜನಕ್ಕೆ ಆಸರೆಯಾದ ಸರ್ಕಾರ ನಿದ್ದೆಗೆ ಜಾರಿತಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಸರ್ಕಾರ ನೀಡುವ ಮಸಾಶನವನ್ನೇ ನಂಬಿಕೊಂಡು ಅದೆಷ್ಟೋ ಜನ ಜೀವನ ನಡೆಸುತ್ತಿದ್ದಾರೆ. ಆದ್ರೆ ಕಂದಾಯ ಸಚಿವ ಅಶೋಕ್ ಇಲಾಖೆಯಲ್ಲಿ ಎಲ್ಲವೂ ಅಯೋಮಯವಾಗಿದ್ದು, 59 ಸಾವಿರ ಪ್ರಕರಣಗಳಿಗೆ ಪಿಂಚಣಿ ಹಣ ಪಾವತಿಯಾಗಿಲ್ಲ.

    ಕೊರೊನಾ ಸಂಕಷ್ಟದಲ್ಲಿ ಮಾಸಾಶನ ಆಸರೆಯಾಗಿತ್ತು. ಸಚಿವರು ಸಹ ಹಣ ಬಾಕಿ ಬಗ್ಗೆ ಭೌತಿಕ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅಂಕಿ ಅಂಶ ಸಂಗ್ರಹಿಸಬೇಕಾದ ಅಧಿಕಾರಿಗಳು ನಿದ್ದೆಗೆ ಜಾರಿದಂತೆ ಕಾಣಿಸುತ್ತಿದೆ. ಫಲಾನುಭವಿಗಳು ಪಿಂಚಣಿಗಾಗಿ ಅಲೆದಾಡುವಂತಾಗಿದೆ.

    ಬೆಂಗಳೂರು 46,093, ಬೆಳಗಾವಿ 2,596, ಮಂಡ್ಯ 1,828, ರಾಯಚೂರು 1,810, ಯಾದಗಿರಿ 1,450 ಮತ್ತು ಕೊಪ್ಪಳ, ಮೈಸೂರು, ತುಮಕೂರು, ಬಳ್ಳಾರಿಯಲ್ಲಿ ತಲಾ 3,236 ಪ್ರಕರಣಗಳಿಗೆ ಪಿಂಚಣಿ ನೀಡಬೇಕಿದೆ.

  • ಕೊಟ್ಟ ಗಡುವು ಮುಗಿಯಿತು, ಸಮಾಧಾನ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ: ಕೋಡಿಹಳ್ಳಿ

    ಕೊಟ್ಟ ಗಡುವು ಮುಗಿಯಿತು, ಸಮಾಧಾನ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ: ಕೋಡಿಹಳ್ಳಿ

    ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ವಿಚಾರ ಕುರಿತಂತೆ, ನಿಮಗೆ ಕೊಟ್ಟ ಗಡುವು ಮುಗಿಯಿತು. ಸಮಾಧಾನ ಪಡಿಸುವ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ಹೇಳಿದ್ದಾರೆ

    ಈ ವಿಚಾರವಾಗಿ ಇಂದು ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸರ್ಕಾರದ ವಿರುದ್ಧ ಡಿಸೆಂಬರ್ 10 ರಿಂದ 14ರವರೆಗೂ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೊನೆಗೂ ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಕಟಿಸಿತ್ತು. ಅಲ್ಲದೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮಾರ್ಚ್ 15 ರವರೆಗೂ ಅಂತಿಮ ಗಡುವು ನೀಡಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ಕಾರ ಒಂದೇ ಒಂದು ಬೇಡಿಕೆ ಪೂರ್ಣಗೊಳಿಸಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    6ನೇ ವೇತನ ಆಯೋಗದ ವರದಿ ಏನಾಯ್ತು? ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಯಂತೂ ಮಾಡಲಿಲ್ಲ. ಆದರೆ ಉಳಿದ 9 ಬೇಡಿಕೆಯಾದರೆ ಪೂರೈಸಬೇಕಿತ್ತು. ಕೇವಲ ಮಾಧ್ಯಮಗಳ ಮುಂದೆ ಬೇಡಿಕೆ ಪೂರೈಕೆಯ ಪ್ರಕಟಣೆಯಷ್ಟೇ ಮುಂದಿಟ್ಟಿದ್ದೀರಾ. ಸಾರಿಗೆ ನಿಗಮಗಳ ಪ್ರಕಟಣೆ ಜಾರಿಗೊಳಿಸುವ ಕೆಲಸವನ್ನು ಮಾಡಿಯೇ ಇಲ್ಲ. 7 ದಿನಗಳಲ್ಲಿ ಮುಗಿಸಬೇಕಾದ ಕೆಲಸಗಳು ಇನ್ನೂ ಕಾರ್ಯಗತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಿಮ್ಮ ರಾಜಕೀಯ ನಾಯಕರು ಮಂತ್ರಿಗಿರಿ ಸಿಗದಿದ್ದಾಗ ಅದಕ್ಕೆ ಸಮಾಧಾನ ಮಾಡಲು ನಿಗಮಗಳ ಮುಂದಿಟ್ಟು ಖರ್ಚು ಮಾಡುತ್ತಾ ಇದ್ದೀರಾ? ಇದು ಸರಿ ಇಲ್ಲ. ಅಲ್ಲದೆ ಸಾರಿಗೆ ನಷ್ಟ ಭರಿಸಲು ನೌಕರರ ಸಂಬಳ ಕಟ್ ಮಾಡುತ್ತಿರುವುದು ನ್ಯಾಯಬದ್ದವಲ್ಲ. ಸೇವಾ ಸಂಸ್ಥೆಗಳು ಉಚಿತವಾಗಿ ಸೇವೆ ನೀಡಲಿ. ಆದರೆ ನೌಕರನಿಗೆ ಹೊರೆ ಬೇಡ. ಕೋಟಿ ಗಟ್ಟಲೆ ಇರುವ ಸಂಸ್ಥೆ ನಷ್ಟಕ್ಕೆ ನೀವೇ ಹೊಣೆಯಾಗಲಿದ್ದೀರಿ ಎಂದು ಪ್ರತಿಭಟನೆ ಎಚ್ಚರಿಕೆ ನೀಡಿದರು

    ಸರ್ಕಾರಕ್ಕೆ ನೀಡಿದ ಗಡುವು ಅಂತಿಮಗೊಳ್ಳುತ್ತಿದೆ ಆದರೆ ಇಲ್ಲಿಯವರೆಗೂ ಈ ಕುರಿತಂತೆ ಯಾವುದೇ ಮಾತುಕತೆ ನಡೆಸಿಲ್ಲ. ಕೇವಲ ಘೋಷಣೆಗಳ ಪೂರೈಕೆ ಬಗ್ಗೆ ಭರವಸೆ ಮಾತ್ರ ಕೊಡುತ್ತಿದ್ದೀರಿ. ಇದು ಬೇಡ. ಸರ್ಕಾರ ಸಾರಿಗೆ ನೌಕರರ ವಿಚಾರವಾಗಿ ಗಮನ ಹರಿಸಿ ಬೇಡಿಕೆ ಈಡೇರಿಸಿ ಎಂದು ಹೇಳಿದರು.

  • ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಬೆಂಗಳೂರು: ಕೊರೊನಾ ಆರ್ಥಿಕ ಸಂಕಷ್ಟ ಕಾಸಿಲ್ಲ ಎಂದು ಹೇಳುವ ಸರ್ಕಾರ ಸಚಿವರು ಮತ್ತು ಸಂಸದರಿಗೆ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಟೀಕೆಗೆ ಗುರಿಯಾಗಿದೆ.

    ಸಚಿವರು, ಸಂಸದರಿಗೆ ಹೊಸ ಕಾರು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಶೋರೂಂ ದರ 22 ಲಕ್ಷಕ್ಕೆ ಖರೀದಿ ಮಿತಿ ನಿಗದಿ ಮಾಡಲಾಗಿತ್ತು. ಈಗ ಶೋರೂಮ್ ದರ 23 ಲಕ್ಷಕ್ಕೆ ಖರೀದಿ ಮಿತಿ ಏರಿಕೆ ನಿಗದಿ ಪರಿಷ್ಕರಿಸಿ ಆದೇಶಿಸಲಾಗಿದೆ. 60 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.

    ಕೊರೊನಾ ಕಾಲದಲ್ಲೇ ಇದು ಎರಡನೇ ಬಾರಿ ಖರೀದಿ ದರ ಮಿತಿ ಪರಿಷ್ಕರಣೆ ಮಾಡಲಾಗುತ್ತಿದೆ. ಬರೋಬ್ಬರಿ 32ಸಚಿವರು, 28 ಸಂಸದರು ಹೊಸ ಕಾರು ಖರೀದಿ ಮಾಡ್ತಾರಾ ಎನ್ನಲಾಗುತ್ತಿದೆ. 60 ಕಾರು ಖರೀದಿ ಮಾಡಿದ್ರೆ ರಾಜ್ಯದಕ್ಕೆ ಬೊಕ್ಕಸಕ್ಕೆ ಬರೋಬ್ಬರಿ 13.80 ಕೋಟಿ ರೂ. ಹೊರೆ ಬೀಳಲಿದೆ.

    ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿ ಎಂದರೆ ಕೊರೊನಾ ಕಾರಣವನ್ನು ಹೇಳುತ್ತಾರೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಲು ದುಡ್ಡಿಲ್ಲ ಎಂದು ಹೇಳುತ್ತಾರೆ. ಸಾರಿಗೆ ನೌಕರರ ಸಂಬಳ ಸರಿಯಾಗಿ ಪಾವತಿಯಾಗತ್ತಿಲ್ಲ. ತೆರಿಗೆ ಕಡಿಮೆ ಮಾಡಿ ತೈಲ ಬೆಲೆ ಇಳಿಸಿ ಎಂದರೂ ಕೇಳದ ಸರ್ಕಾರ ಈಗ ನಮ್ಮ ತೆರಿಗೆ ಹಣದಿಂದಲೇ ಕಾರು ಖರೀದಿಗೆ ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.


    ಸಚಿವರಿಗೆ ವಾಹನ ಬೇಕು ನಿಜ. ಆದರೆ ಸುಸಜ್ಜಿತವಾಗಿರಬೇಕು. ಆದರೆ ಐಶಾರಾಮಿಯಾಗಿರಬೇಕು ಎಂಬ ನಿಯಮವಿಲ್ಲ. ಕೋವಿಡ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕಾದ ಸರ್ಕಾರವೇ ಖರ್ಚು ಮಾಡಲು ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

  • ಮದುವೆ ಸಮಾರಂಭಗಳಿಗೆ ಓರ್ವ ಮಾರ್ಷಲ್ ಯೋಜನೆ: ಸುಧಾಕರ್

    ಮದುವೆ ಸಮಾರಂಭಗಳಿಗೆ ಓರ್ವ ಮಾರ್ಷಲ್ ಯೋಜನೆ: ಸುಧಾಕರ್

    – ಕೊರೊನಾ ಎರಡನೇ ಅಲೆಯ ಆತಂಕ
    – ನೆರೆ ರಾಜ್ಯದವರಿಗೆ ಬರಲು ನಿರ್ಬಂಧವಿಲ್ಲ

    ಬೆಂಗಳೂರು: ನೆರೆ ರಾಜ್ಯಗಳವರಿಗೆ ನಾವು ಇಲ್ಲಿಗೆ ಬರಲು ನಿರ್ಬಂಧ ಹೇರಿಲ್ಲ. ಕೊರೊನಾ ತಪಾಸಣೆ ಕಡ್ಡಾಯ ಮಾತ್ರ ಮಾಡಿದ್ದೇವೆ, ಸಹಕರಿಸಬೇಕು. ಮದುವೆ ಸಮಾರಂಭಗಳಿಗೆ ಮಾರ್ಷಲ್ ಯೋಜನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸಭೆ ನಡೆಸಿ ಮಾತನಾಡಿದ ಅವರು, ಕೇರಳ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆಯ ಎಫೆಕ್ಟ್ ನಿಂದಾಗಿ ಬೆಂಗಳೂರಿನಲ್ಲಿಯೂ ಕೊರೊನಾ ಎರಡನೇ ಅಲೆಯ ಆತಂಕವಿದೆ. ಬೆಳಗಾವಿ, ವಿಜಯಪುರ ಡಿಸಿ, ಎಸ್ಪಿ, ಸಿಇಒ ಜೊತೆ ಚರ್ಚೆ ಮಾಡಿದ್ದಾರೆ. ಪ್ರಸ್ತುತ ಅಲ್ಲಿನ ಪರಿಸ್ಥಿತಿ ಹೇಗಿದೆ. ಮಹಾರಾಷ್ಟ್ರದಿಂದ ಬರುವವರ ತಪಾಸಣೆ ಹೇಗೆ ನಡೆದಿದೆ? ಗಡಿಭಾಗದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

    ಕೋವಿಡ್ ಲಕ್ಷಣಗಳು ಕಂಡರೆ ತಪಾಸಣೆಗೊಳಪಡಿಸಿಕೊಳ್ಳಿ. ಹೈವೇನಲ್ಲಿ ಚಾಲಕರ ರಿಪೋರ್ಟ್ ಚೆಕ್ ಮಾಡಿಸಿ. ಕೋವಿಡ್ ಟೆಸ್ಟ್ ರಿಪೋರ್ಟ್ ಇದ್ಯಾ, ಇಲ್ವಾ ಚೆಕ್ ಮಾಡಿ ಒಂದು ವೇಳೆ ರಿಪೋರ್ಟ್ ಇಲ್ಲದಿದ್ದರೆ ಒಳಬಿಡಬೇಡಿ. ಚೆಕ್ ಪೋಸ್ಟ್‍ನಲ್ಲಿ ತೀವ್ರ ನಿಗಾವಹಿಸಿ. ನಿಪ್ಪಾಣಿ, ಝಳಕಿ ಚೆಕ್ ಪೋಸ್ಟ್‍ನಲ್ಲಿ ಕಟ್ಟು ನಿಟ್ಟು ಮಾಡಿ ಎಂದು ಬೆಳಗಾವಿ, ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಸಭೆ ಬಳಿಕ ಸಚಿವ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಡಿಸಿ, ಎಸ್ ಪಿ, ಡಿಹೆಚ್‍ಒ, ಎಲ್ಲಾ ಮೆಡಿಕಲ್ ಕಾಲೇಜು ಮುಖ್ಯಸ್ಥರೊಂದಿಗೆ ಸಂವಾದ ಮಾಡಲಾಯಿತು. ಗಡಿಯಲ್ಲಿ ತಪಾಸಣೆ ಹೇಗಿದೆ. ಬಿಗಿಯಾಗಿ ನಡೆಯುತ್ತಾ ಇದೆಯಾ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೊರೊನಾ ವಾರಿಯರ್ಸ್ ಗೆ ವ್ಯಾಕ್ಸಿನ್ ನೀಡುವ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಕೆಲವು ಕಡೆ ವಾರಿಯರ್ಸ್ ಎರಡೆರಡು ಕಡೆ ನೊಂದಾಯಿಸಿರೋದ್ರಿಂದ ನಮ್ಮಲ್ಲಿ 1 ಲಕ್ಷ ಕಡಿಮೆ ಆಗುತ್ತೆದೆ. ಎರಡನೇ ಹಂತದ ವ್ಯಾಕ್ಸಿನ್ 18 ರಂದು ನಡೆಯುತ್ತೆ ಎಂದು ತಿಳಿಸಿದ್ದಾರೆ.

    ನೆರೆ ರಾಜ್ಯಗಳವರಿಗೆ ನಾವು ಇಲ್ಲಿಗೆ ಬರಲು ನಿರ್ಬಂಧ ಹೇರಿಲ್ಲ. ತಪಾಸಣೆ ಕಡ್ಡಾಯ ಮಾತ್ರ ಮಾಡಿದ್ದೇವೆ, ಸಹಕರಿಸಬೇಕು. ನೆರೆ ರಾಜ್ಯಗಳಲ್ಲಿ ತಪ್ಪು ಸಂದೇಶ ಇದೆ. ಗಡಿ ಜಿಲ್ಲೆಗಳ ಬಗ್ಗೆ ವಿಶೇಷ ನಿಗಾ ಇಡಬೇಕಾಗಿದೆ. ಶೀಘ್ರದಲ್ಲಿ ನೆರೆ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ಮಾಡಿ ಅಲ್ಲಿನ ಸಹಕಾರ ಕೋರುತ್ತೇವೆ. ಅಲ್ಲಿಂದ ಬರುವವರಿಗೆ ಅಲ್ಲೇ ತಪಾಸಣೆ ಮಾಡಿ ರಿಪೋರ್ಟ್ ತರುವಂತೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ರಾಜ್ಯಾದ್ಯಂತ ನಿಯಮ ಮೀರಿ ಸಮಾರಂಭಗಳು ನಡೆಯುತ್ತಿವೆ. ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಆಗುತ್ತದೆ. ಹೀಗಾಗಿ ಜನತೆ ಸ್ವಯಂ ನಿಯಂತ್ರಣ ಮಾಡಿ ಸಹಕರಿಸದಿದ್ದರೆ ಬಿಗಿ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತೆದೆ. ಆ ಪರಿಸ್ಥಿತಿಗೆ ಬರುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಠ್ರದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ. ಆ ಪರಿಸ್ಥಿತಿ ಬೇಕಾ ಎಂದು ಜನತೆಗೆ ಎಚ್ಚರಿಸಿ. ಎಚ್ಚರಿಕೆ ವಹಿಸದೇ ಮದುವೆ ಸಮಾರಂಭಗಳು ಎಗ್ಗಿಲ್ಲದೇ ನಡೆಯುತ್ತದೆ. ಮದುವೆ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ಹಾಕಲು ತೀರ್ಮಾನ ಮಾಡಿದ್ದೇವೆ. ರಾಜ್ಯಾದ್ಯಂತ ಎಲ್ಲ ಮದುವೆ ನಡೆಯುವ ಕಡೆ ಒಬ್ಬ ಮಾರ್ಷಲ್ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.

    ಕಲಬುರಗಿ 1.37, ಬೆಂಗಳೂರು 1.26, ದಕ್ಷಿಣ ಕನ್ನಡ 1.1 ಪಾಸಿಟಿವಿಟಿ ಹೆಚ್ಚಾಗುತ್ತಿದೆ. ಈ ಜಿಲ್ಲೆಗಳಲ್ಲಿ ಟೆಸ್ಟ್ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಮಾರ್ಚ್ ನಲ್ಲಿ 50 ವರ್ಷಕ್ಕಿಂತ ಹೆಚ್ಚಿನವರಿಗೆ ಲಸಿಕೆ ಘೋಷಿಸುತ್ತದೆ. ಲಾಕ್ ಡೌನ್ ಮಟ್ಟಕ್ಕೆ ಹೋಗಿಲ್ಲ. ಹೋಗಬಾರದು ಅನ್ನೋ ನಿಟ್ಟಿನಲ್ಲಿ ಕ್ರಮ ಎಂದಿದ್ದಾರೆ.

  • ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮಹಿಳಾ ಮಣಿಗಳಿಂದ ವಿಭಿನ್ನ ಹೋರಾಟ

    ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮಹಿಳಾ ಮಣಿಗಳಿಂದ ವಿಭಿನ್ನ ಹೋರಾಟ

    – ಹೂವಿನ ಹಾರ ಹಾಕಿ, ಬೀದಿಯಲ್ಲಿ ಅಡುಗೆ

    ಗದಗ: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಗದಗನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಬೀದಿಯಲ್ಲಿ ಅಡುಗೆ ತಯಾರಿಸುವ ಮೂಕಲವಾಗಿ ವಿಭಿನ್ನವಾಗಿ ಹೋರಾಟ ಮಾಡಿದ್ದಾರೆ.

    ಸಿಲಿಂಡರ್ ಗೆ ಹೂವಿನ ಹಾರ ಹಾಕಿ ಅದನ್ನು ಬದಿಗಿಟ್ಟು, ಕಟ್ಟಿಗೆ ಉರಿಸಿ ಅಡುಗೆ ಮಾಡಿದರು. ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪ್ರತಿಭಟಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕವಾಗಿ ಆಕ್ರೋಶ ಹೊರಹಾಕಿದರು.

    ಸಿಲಿಂಡರ್, ಪಾತ್ರೆಗಳನ್ನು ತಲೆ ಮೇಲೆ ಹೊತ್ತು ಪ್ರತಿಭಟಿಸಿದರು. ದುಬಾರಿಯಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಬೀದಿಗೆ ಬಂದಿದೆ. ಬೀದಿಯಲ್ಲಿ ತರತರನಾದ ಅಡುಗೆ ಮಾಡಿದರು. ಜಗತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಉತ್ಪನ್ನಗಳಿಗೆ ಅತಿ ಹೆಚ್ಚು ತೆರಿಗೆಯನ್ನು ವಿಧಿಸುತ್ತಿರುವ ದೇಶ ನಮ್ಮ ಭಾರತ ದೇಶವಾಗಿದೆ.

    ಸಾಮಾನ್ಯರ ಜೀವಮಾನದ ಹಣವನ್ನು  ಕಾರ್ಪೋರೇಟ್ ಕುಳಗಳಿಗೆ ಧಾರೆಯೆರೆದು, ಬಡವರನ್ನು ಕೂಪಕ್ಕೆ ತಳ್ಳುವ ಸರ್ಕಾರವಾಗಿದೆ. ಶ್ರೀಮಂತರಿಗೆ ಸರ್ಕಾರ ಸೈ ಎನಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.

  • ಉತ್ತರಾಖಂಡ್ ಹಿಮಪ್ರಳಯ – ಸಾವಿನ ಸಂಖ್ಯೆ 62ಕ್ಕೆ ಏರಿಕೆ, 142 ಜನರು ನಾಪತ್ತೆ

    ಉತ್ತರಾಖಂಡ್ ಹಿಮಪ್ರಳಯ – ಸಾವಿನ ಸಂಖ್ಯೆ 62ಕ್ಕೆ ಏರಿಕೆ, 142 ಜನರು ನಾಪತ್ತೆ

    ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

    ಹಿಮ ಪ್ರಳಯಕ್ಕೆ ತುತ್ತಾದ ಚಮೋಲಿ ತಪೋವನ ಸಿಲುಕಿಕೊಂಡಿರುವವರ ಪತ್ತೆ ಕಾರ್ಯ 13ನೇ ದಿನವೂ ಮುಂದುವರಿದಿದ್ದು, ಗುರುವಾರ ಶವವೊಂದನ್ನು ಹೊರತೆಗೆಯಲಾಗಿದೆ.

    ತಪೋವನವಿಷ್ಣುಗಡ್ ಯೋಜನೆಯ ಬಳಿ ಗುರುವಾರ ರಾತ್ರಿ ಶವ ಪತ್ತೆಯಾಗಿದೆ. ಈವರೆಗೆ ಒಟ್ಟು 62 ಶವಗಳು ಪತ್ತೆಯಾಗಿವೆ. 142 ಜನರು ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ ಯೋಜನೆಯ ಸುರಂಗದಲ್ಲಿ 13 ಶವಗಳು ಪತ್ತೆಯಾಗಿವೆ. ಇದನ್ನು ಹೊರತುಪಡಿಸಿ ಹಲವೆಡೆ 28 ಕೈಕಾಲುಗಳು ಸಿಕ್ಕಿವೆ.

    ಪತ್ತೆಯಾಗಿರುವ 62 ಶವಗಳಲ್ಲಿ 33 ಜನರನ್ನು ಗುರುತಿಸಲಾಗಿದೆ. ಗುರುತಿಸಲಾಗದವರ ಡಿಎನ್‍ಎಯನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಚಮೋಲಿ ಜಿಲ್ಲಾ ಪೊಲೀಸರು ಇಂದು ತಿಳಿಸಿದ್ದಾರೆ.

  • ಶೀಘ್ರದಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ: ಲಕ್ಷ್ಮಣ ಸವದಿ

    ಶೀಘ್ರದಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ: ಲಕ್ಷ್ಮಣ ಸವದಿ

    ಕಾರವಾರ: ಸಾರಿಗೆ ನೌಕರರು ಸರ್ಕಾರದ ಮುಂದೆ ಹತ್ತು ಬೇಡಿಕೆಯನ್ನು ಇಟ್ಟಿದ್ದರು. ಈ ಹತ್ತು ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ನಾಲ್ಕು ಬೇಡಿಕೆ ಈಡೇರಿಸಲು ಸಮಯಾವಕಾಶ ಕೇಳಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಡ್ತಿ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೌಕರರ ಸಂಘಟನೆಗಳು ಮೂರ್ನಾಲ್ಕು ಇದೆ. ಪ್ರತಿಯೊಬ್ಬರೂ ಒಂದೊಂದು ಬಾರಿ ಒಂದೊಂದು ಬೇಡಿಕೆ ಇಡುತ್ತಿದ್ದಾರೆ. ನೌಕರರೊಂದಿಗೆ ಇನ್ನೆರೆಡು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ, ನಾವು ಒಪ್ಪಿಕೊಂಡಂತೆ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದರು.

    ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾನು ಸ್ಪರ್ದಿಸುವುದಿಲ್ಲ, ಇದು ಗಾಳಿ ಸುದ್ದಿ, ಕೇವಲ ಉಸ್ತುವಾರಿ ಮಾತ್ರ ತೆಗೆದುಕೊಂಡಿದ್ದೇನೆ. ನಾವು ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಂಚಮಸಾಲಿಗಳು ಹೋರಾಟ ಮಾಡುತ್ತಿರುವುದು ತಪ್ಪಿಲ್ಲ, ಮಿಸಲಾತಿ ಸೂಕ್ಷ್ಮ ವಿಚಾರವಾಗಿದ್ದು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ. ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಅಲ್ಲಿನ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರದ್ದು ಮನೆಯೊಂದು ಮೂರು ಬಾಗಿಲು, ಅವರಲ್ಲೇ ಒಮ್ಮತವಿಲ್ಲ ಎಂದು ಕಿಡಿಕಾರಿದರು.

    ಗಡಿ ಕನ್ನಡ ಶಾಲೆ ಅಭಿವೃದ್ಧಿ:
    ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಕನ್ನಡ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಲು ಸಿದ್ಧವಾಗಿದೆ. ಹಲವು ಶಾಲೆಗಳು ಹಿಂದೆ ಬಿದ್ದಿವೆ, ಅವುಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ತಳಿಸಿದರು.

    ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದ ಸಿದ್ದರಾಮಯ್ಯ ಹೇಳಿಕೆ ಕುರಿತು ತಿರುಗೇಟು ಕೊಟ್ಟ ಸಚಿವರು ಕೊರೊನಾ ಬಂದ ನಂತರ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗಿರುವುದು ನಿಜ. ಸಿದ್ದರಾಮಯ್ಯ ನಮ್ಮನ್ನು ಟೀಕೆ ಮಾಡ್ತಾನೆ ಇರ್ತಾರೆ. ಅವರು ಇರುವುದೆ ಟೀಕೆ ಮಾಡೋದಕ್ಕೆ ಹೊರತು ಮತ್ತೇನೂ ನಮ್ಮನ್ನು ಹೊಗಳ್ತಾರಾ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.

  • ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ 1-5 ನೇ ತರಗತಿ ಆರಂಭ

    ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ 1-5 ನೇ ತರಗತಿ ಆರಂಭ

    – ನಿಯಮ ಗಾಳಿಗೆ ತೂರಿದ ಖಾಸಗಿ ಶಾಲೆಗಳು

    ಯಾದಗಿರಿ: ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ ಸದ್ದಿಲ್ಲದೆ 1 ರಿಂದ 5 ನೇ ತರಗತಿ ನಡೆಯುತ್ತಿವೆ. ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಕೆಲ ಖಾಸಗಿ ಶಾಲೆಗಳು ತರಗತಿ ಆರಂಭಿಸಿ, ಮುಗ್ಧ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿವೆ. ಯಾದಗಿರಿ ನಗರದ ಸಪ್ತಗಿರಿ, ನವನಂದಿ, ಆರ್ ವಿ ಸೇರಿದಂತೆ ಬಹುತೇಕ ಖಾಸಗಿ ಶಾಲೆಗಳಲ್ಲಿ ಗಪ್ ಚುಪ್ ಆಗಿ ಕ್ಲಾಸ್ ಆರಂಭವಾಗಿವೆ.

    ಕ್ಲಾಸ್ ರೂಮ್ ಗಳಲ್ಲಿ ಯಾವುದೇ ಮಕ್ಕಳ ಮಧ್ಯೆ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಕೂರಿಸಿ ಪಾಠ ಮಾಡಲಾಗುತ್ತಿದೆ. ಶಿಕ್ಷಕರೇ ಸ್ವತಃ ಮಾಸ್ಕ್ ಇಲ್ಲದೆ ತರಗತಿಯಲ್ಲಿ ಪಾಠ ಭೋದನೆ ಮಾಡುತ್ತಿದ್ದಾರೆ. ಡಿಡಿಪಿಐ ಕಚೇರಿ ಕೂಗಳತೆ ದೂರದಲ್ಲಿ ಈ ಎಲ್ಲಾ ಶಾಲೆಗಳು ಇದ್ದರೂ, ಖಾಸಗಿ ಶಾಲೆ ನಿಯಂತ್ರಿಸುವಲ್ಲಿ ಡಿಡಿಪಿಐ ಕಚೇರಿ ವಿಫಲವಾಗಿದೆ.

    ಸರ್ಕಾರದ ನಿಯಮ ಗಾಳಿಗೆ ತೂರಿ ಯಾದಗಿರಿ ನಗರದ ಬಹುತೇಕ ಖಾಸಗಿ ಶಾಲೆಗಳು 1 ರಿಂದ 5 ನೇ ತರಗತಿ ಆರಂಭ ಮಾಡಿದ್ದು, ಪೋಷಕರು ಸಹ ತಮ್ಮ ಮಕ್ಕಳನ್ನು ಶಾಲೆ ಕಳುಹಿಸುತ್ತಿರುವುದು ವಿಪರ್ಯಾಸವಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಹಣ ಮಾಡುವ ಉದ್ದೇಶದದಿಂದ ಖಾಸಗಿ ಶಾಲೆಗಳು ಈ ರೀತಿಯ ವರ್ತನೆ ತೋರುತ್ತಿವೆ ಎಂಬ ಅನುಮಾನ ಮೂಡುತ್ತಿದೆ.

  • ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಕಿಡಿ

    ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಕಿಡಿ

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಅವರು ಕಿಡಿಕಾರಿದ್ದಾರೆ.

    ಹೌದು. ಚಿತ್ರಮಂದಿರ ಶೇ.100 ಭರ್ತಿಗೆ ನಿರ್ಬಂಧ ಹೇರಿ, ಶೇ.50 ಭರ್ತಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಟ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಧ್ರುವ, ಮಾರ್ಕೆಟ್‍ನಲ್ಲಿ ಗಿಜಿ ಗಿಜಿ ಜನ ಸೇರುತ್ತಾರೆ. ಬಸ್ಸಿನಲ್ಲೂ ಫುಲ್ ರಶ್ ಇರುತ್ತೆ. ಆದರೆ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಟ್ವೀಟ್ ಅನ್ನು ಸಿಎಂ, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಆರೋಗ್ಯ ಸಚಿವ ಸುಧಾಕರ್‍ಗೆ ಟ್ಯಾಗ್ ಮಾಡಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿ, ರಾಜ್ಯ ಸರ್ಕಾರಗಳು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ಮತ್ತೆ ನಿರಾಸೆಯಾಗಿದೆ.

    ಒಟ್ಟಿನಲ್ಲಿ ಚಿತ್ರಮಂದಿರ ಶೇ.100 ರಷ್ಟು ಭರ್ತಿಗೆ ಕೇಂದ್ರ ಅನುಮತಿ ಕೊಟ್ಟರೂ ರಾಜ್ಯ ಸರ್ಕಾರ ಅಡ್ಡಿಪಡಿಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್‍ನಲ್ಲಿ ನಟ ಧೃವ ಸರ್ಜಾ ಅಸಮಾಧಾನ ಹೊರಹಾಕಿದ್ದಾರೆ.