Tag: government

  • ವ್ಯಾಕ್ಸಿನೇಷನ್ ಅಕ್ರಮ ದಂಧೆ ಮಾಡುವವರ ಮೇಲೆ ಕಠಿಣ ಕ್ರಮ – ಬೊಮ್ಮಾಯಿ

    ವ್ಯಾಕ್ಸಿನೇಷನ್ ಅಕ್ರಮ ದಂಧೆ ಮಾಡುವವರ ಮೇಲೆ ಕಠಿಣ ಕ್ರಮ – ಬೊಮ್ಮಾಯಿ

    ಬೆಂಗಳೂರು: ರಾಜ್ಯದಲ್ಲಿ ವಾಕ್ಸಿನೇಷನ್ ಅಕ್ರಮ ದಂಧೆ ಮಾಡುವವರನ್ನು ಸುಮ್ಮನೆ ಬಿಡಲ್ಲ. ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ವ್ಯಾಕ್ಸಿನ್ ಅಕ್ರಮ ದಂಧೆ ಮಾಡುವವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ. ರೆಮ್‍ಡಿಸಿವಿರ್ ಇಂಜೆಕ್ಷನ್ ವಿಷಯದಲ್ಲಿ ಈ ರೀತಿ ಮಾಡಿದ್ರು ಆ ನಂತರ ಅದು ಸರಿ ಹೋಗಿದೆ. ಇದೀಗ ವ್ಯಾಕ್ಸಿನೇಷನ್ ಅಕ್ರಮ ದಂಧೆಗೆ ಕೆಲವರು ಹೊರಟಿದ್ದಾರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ತೇವೆ ಎಂದು ಎಚ್ಚರಿಸಿದ್ದಾರೆ.

    ರಾಜ್ಯದಲ್ಲಿ ವ್ಯಾಕ್ಸಿನೇಷನ್ ಕೊರತೆ ವಿಚಾರವಾಗಿ ಕೊರತೆ ನೀಗಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಖಾಸಗಿಯವರು ಹೆಚ್ಚಿನ ದರದಲ್ಲಿ ವ್ಯಾಕ್ಸಿನೇಷನ್ ನೀಡುವ ಸಂಬಂಧ ಕೇಂದ್ರ ಸರ್ಕಾರ ಒಂದು ನಿಯಮ ರೂಪಿಸುವ ಅಗತ್ಯ ಇದೆ. ರಾಜ್ಯದಲ್ಲಿ ಇಂದಿನಿಂದ ಎರಡನೇ ಹಂತದ ಲಾಕ್ ಡೌನ್ ವಿಸ್ತರಣೆಯಾಗಿದೆ. ಇಂದಿನಿಂದ ಇನ್ನಷ್ಟು ಬಿಗಿ ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ರಾಜ್ಯದ ಪೊಲೀಸರು ಈಗಾಗಲೇ ಕ್ರಮಕ್ಕೆ ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುವ ವಾಹನಗಳ ಸೀಜ್ ಮಾಡುವ ಪ್ರಕರಣ ಮುಂದುವರೆಸಲಾಗುತ್ತದೆ ಎಂದರು.

    ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡುವವರನ್ನು ಸುಮ್ಮನೆ ಬಿಡಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಲಾಕ್‍ಡೌನ್ ಪರಿಣಾಮಕಾರಿಯಾಗುತ್ತಿದೆ. ಆದರೆ ಪಟ್ಟಣ ಪ್ರದೇಶದಲ್ಲಿ ಉಲ್ಲಂಘನೆ ಪ್ರಕರಣ ಜಾಸ್ತಿಯಾಗುತ್ತಿದೆ. ಹೀಗಾಗಿ ಬಿಗಿಯಾದ ಕ್ರಮ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಎರಡನೇ ಹಂತದ ಲಾಕ್‍ಡೌನ್‍ನಲ್ಲಿ ಬಿಗಿ ಕ್ರಮಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

  • ಕೊರೊನಾದಿಂದ ಅನಾಥರಾದ 50 ಮಕ್ಕಳಿಗೆ ಫ್ರೀ ಎಜುಕೇಶನ್ – ಗುರುಕುಲ ರೆಸಿಡೆನ್ಸಿಯಲ್

    ಕೊರೊನಾದಿಂದ ಅನಾಥರಾದ 50 ಮಕ್ಕಳಿಗೆ ಫ್ರೀ ಎಜುಕೇಶನ್ – ಗುರುಕುಲ ರೆಸಿಡೆನ್ಸಿಯಲ್

    ದಾವಣಗೆರೆ: ಕೊರೊನಾ ಬಂದು ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಪಾಡು ಹೇಳತೀರದು. ಅಂತಹ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲು ದಾವಣಗೆರೆಯಲ್ಲಿ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗುರುಕುಲ ರೆಸಿಡೆನ್ಸಿಯಲ್ ಶಾಲೆ ಮುಂದಾಗಿದೆ.

    ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾಕಷ್ಟು ಮಕ್ಕಳಿದ್ದಾರೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಶಾಲಾ ಅಡಳಿತ ಮಂಡಳಿಯವರಾದ ನಸ್ರಿನ್ ಖಾನ್ ಹಾಗೂ ಅಬ್ದುಲ್ ಎನ್ನುವರು ಈ ನಿರ್ಧಾರ ಮಾಡಿದ್ದು, ಕೋವಿಡ್ ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ.

    ಕೇವಲ ಯೂನಿಫಾರ್ಮ್, ಹಾಗೂ ಪುಸ್ತಕಗಳನ್ನು ಮಾತ್ರ ಕೊಂಡುಕೊಳ್ಳಲಿ ಉಳಿದ ಎಲ್ಲಾ ಶುಲ್ಕವನ್ನು ಶಾಲೆಯೇ ಭರಿಸುತ್ತಿದರ ಎಂದು ಶಾಲಾ ಅಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಪ್ರತಿಯೊಂದು ಶಾಲೆಯಲ್ಲಿ ಈ ರೀತಿ ನಿರ್ಧಾರ ಕೈಗೊಂಡರೆ ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಉಜ್ವಲವಾಗಲಿದ್ದು, ಗುರುಕುಲ ಶಾಲಾಯ ನಿರ್ಧಾರ ಸರ್ಕಾರವನ್ನೇ ನಾಚಿಸುವಂತಹ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಗುರುಕುಲ ಶಾಲೆಯ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

  • ಕೋವಿಡ್‍ನಿಂದ ಮೃತರಾದ ಶಿಕ್ಷಕರಿಗೆ ಪರಿಹಾರ ಕೊಡಿ- ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ

    ಕೋವಿಡ್‍ನಿಂದ ಮೃತರಾದ ಶಿಕ್ಷಕರಿಗೆ ಪರಿಹಾರ ಕೊಡಿ- ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ

    ಬೆಂಗಳೂರು: ಚುನಾವಣೆ ಕರ್ತವ್ಯದಲ್ಲಿ ಕೋವಿಡ್‍ಗೆ ಮೃತರಾದ ಮತ್ತು ವಿದ್ಯಾಗಮದಲ್ಲಿ ಪಾಠ ಮಾಡಿ ಕೋವಿಡ್‍ನಿಂದ ಮರಣಹೊಂದಿದ ಶಿಕ್ಷಕರಿಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಟ್ವಿಟ್ಟರ್ ಮೂಲಕ ಸರ್ಕಾರಕ್ಕೆ ಆಗ್ರಹ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಚುನಾವಣೆ ಕರ್ತವ್ಯದಲ್ಲಿ ಮತ್ತು ವಿದ್ಯಾಗಮ ಯೋಜನೆಯಲ್ಲಿ ಪಾಠ ಮಾಡಿ ಈಗಾಗಲೇ 145ಕ್ಕೂ ಹೆಚ್ಚು ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ. ಮೃತಪಟ್ಟ ಎಲ್ಲ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿಮಾಡಿಕೊಂಡಿದ್ದಾರೆ.

    ಶಿಕ್ಷಕರನ್ನು ಚುನಾವಣೆ ಹಾಗೂ ಮತ್ಯಾವುದೋ ಕಾರಣಕ್ಕೆ ನಿಯೋಜಿಸಿದ ಸರ್ಕಾರವೇ ಅವರ ಸಾವುಗಳ ಸಂಪೂರ್ಣ ಹೊಣೆ ಹೊರಬೇಕು. ಭವಿಷ್ಯ ಕಟ್ಟುವ ಶಿಕ್ಷಕರ ಬಗ್ಗೆ ಸರ್ಕಾರದ ಉಡಾಫೆ ಹಾಗೂ ದಿವ್ಯ ನಿರ್ಲಕ್ಷ್ಯ ಧೋರಣೆ ಬಗ್ಗೆ ನನ್ನ ಧಿಕ್ಕಾರವಿದೆ. ಸರ್ಕಾರ ಕೂಡಲೇ ಈ ಕುರಿತು ತುರ್ತುಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

  • ಅರ್ಚಕರಿಗೆ ಕೋವಿಡ್ ಪರಿಹಾರ ನೀಡಿದಂತೆ ಇಮಾಮರಿಗೂ ಪರಿಹಾರ ಘೋಷಿಸಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ

    ಅರ್ಚಕರಿಗೆ ಕೋವಿಡ್ ಪರಿಹಾರ ನೀಡಿದಂತೆ ಇಮಾಮರಿಗೂ ಪರಿಹಾರ ಘೋಷಿಸಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ

    ಬೆಂಗಳೂರು: ಕೋವಿಡ್ ನಿಗ್ರಹಕ್ಕಾಗಿ ವಿಧಿಸಲಾಗಿರುವ ಲಾಕ್‍ಡೌನ್ ವೇಳೆ ರಾಜ್ಯ ಸರಕಾರವು ದೇವಸ್ಥಾನಗಳ ಅರ್ಚಕರಿಗೆ ಪರಿಹಾರ ನೀಡಿದಂತೆ ಮಸ್ಜಿದ್ ಇಮಾಮರಿಗೂ ಪರಿಹಾರ ಘೋಷಿಸಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಆಗ್ರಹಿಸಿದ್ದಾರೆ.

    ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರವು ಪರಿಹಾರವನ್ನು ಘೋಷಿಸಿದೆ. 33.45 ಕೋಟಿ ರೂಪಾಯಿ ಮುಂಗಡ ತಸ್ತಿಕ್ ಜೊತೆಗೆ 4.50 ಕೋಟಿ ರೂ. ವರ್ಷಾಸನವನ್ನೂ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಅದರೊಂದಿಗೆ ಆಹಾರ ಕಿಟ್‍ನ ವ್ಯವಸ್ಥೆಗೂ ಆದೇಶ ಹೊರಡಿಸಿದೆ. ಇದೇ ವೇಳೆ ಮಸೀದಿಗಳ ಇಮಾಮರು ಮತ್ತು ಮುಅಝ್ಝಿನ್ ಗಳು, ಚರ್ಚ್‍ನ ಪಾದ್ರಿಗಳು ಸೇರಿದಂತೆ ಇತರ ಧಾರ್ಮಿಕ ಕ್ಷೇತ್ರಗಳ ಸಿಬ್ಬಂದಿಗೆ ಯಾವುದೇ ಪರಿಹಾರ ಘೋಷಣೆ ಮಾಡದಿರುವುದು ರಾಜ್ಯ ಸರಕಾರದ ಧಾರ್ಮಿಕ ಅಸಹಿಷ್ಣುತೆಯನ್ನು ಎತ್ತಿ ತೋರಿಸುತ್ತದೆ.

    ರಾಜ್ಯ ಸರಕಾರವು ಮಾನವೀಯತೆಯ ತಳಹದಿಯಲ್ಲಿ ಪರಿಹಾರ ಘೋಷಣೆ ಮಾಡಬೇಕೇ ಹೊರತು ಧರ್ಮಾಧರಿತ ರಾಜಕೀಯದ ಆಧಾರದಲ್ಲಿ ಅಲ್ಲ. ಎಲ್ಲಾ ಧಾರ್ಮಿಕ ಕ್ಷೇತ್ರಗಳ ಸಿಬ್ಬಂದಿಯನ್ನು ಸಮಾನವಾಗಿ ಕಾಣುವುದರ ಜೊತೆಗೆ ಅವರಿಗೆ ಸಮಾನ ನ್ಯಾಯವನ್ನು ಖಾತರಿಪಡಿಸಬೇಕು. ಲಾಕ್‍ಡೌನ್‍ನಿಂದಾಗಿ ಅತಂತ್ರರಾಗಿರುವ ಈ ಸಿಬ್ಬಂದಿಗೆ ಸರಕಾರವು ತಕ್ಷಣಕ್ಕೆ ಜಾರಿಯಾಗುವಂತೆ ಪರಿಹಾರ ಘೋಷಿಸಿ ಅವರ ಸಂಕಷ್ಟಕ್ಕೆ ನೆರವಾಗಬೇಕು. ಅದೇ ರೀತಿ ಪರಿಹಾರ ಬಿಡುಗಡೆಗಾಗಿ ವಕ್ಫ್ ಬೋರ್ಡ್ ಕೂಡ ಸರಕಾರವನ್ನು ಆಗ್ರಹಿಸಬೇಕೆಂದು ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಒತ್ತಾಯಿಸಿದ್ದಾರೆ.

  • ಎಲ್ಲರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ ಖಾಸಗಿ ಬಸ್ ಸಿಬ್ಬಂದಿಗೆ ಯಾಕಿಲ್ಲ: ನಾರಾಯಣ ರೈ

    ಎಲ್ಲರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ ಖಾಸಗಿ ಬಸ್ ಸಿಬ್ಬಂದಿಗೆ ಯಾಕಿಲ್ಲ: ನಾರಾಯಣ ರೈ

    ಮಂಗಳೂರು: ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ಈಗಾಗಲೇ ಪ್ಯಾಕೇಜ್ ಘೋಷಣೆ ಮಾಡಿದ್ದು ಖಾಸಗಿ ಬಸ್ಸು ಸಿಬ್ಬಂದಿಗೆ ಪರಿಹಾರ ಏಕೆ ಘೋಷಣೆ ಮಾಡಿಲ್ಲ ಎಂದು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಮಾಲಕ ಸಂಘದ ಮಾಜಿ ಅಧ್ಯಕ್ಷ ಸುಳ್ಯ ನಾರಾಯಣ ರೈ ಪ್ರಶ್ನೆ ಮಾಡಿದ್ದಾರೆ.

    ಕಳೆದ ಲಾಕ್ ಡೌನ್ ಅವಧಿಯಲ್ಲಿ ಬಸ್ ಸಿಬ್ಬಂದಿಯನ್ನು ಪ್ಯಾಕೇಜ್ ನಿಂದ ದೂರ ಇಡಲಾಗಿತ್ತು. ಈ ಬಾರಿಯೂ ಬಸ್ ಸಿಬ್ಬಂದಿಯನ್ನು ಕಡೆಗಣಿಸಲಾಗಿದೆ. ಸರ್ಕಾರ ಬಸ್ ಮಾಲಕರು ಮತ್ತು ಬಸ್ ಸಿಬ್ಬಂದಿಗಳಿಗೆ ಲಾಕ್ ಡೌನ್ ಸಮಯದಲ್ಲಿ ಪರಿಹಾರ ನೀಡಬೇಕೆಂದು ಹೇಳುತ್ತಿದೆ. ನಾವು ಬಸ್‍ಗಳನ್ನು ಓಡಿಸದೆ ರಸ್ತೆ ತೆರಿಗೆ, ಬ್ಯಾಂಕ್ ಸಾಲ, ಇನ್ಸ್‌ರೆನ್ಸ್‌ ಕಟ್ಟಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಕಾರಣಗಳಿಂದ ಕಳೆದ ಒಂದು ವರ್ಷಗಳಿಂದ ಖಾಸಗಿ ಬಸ್ ಮಾಲಕರ ಸ್ಥಿತಿ ಶೋಚನಿಯವಾಗಿದೆ ಎಂದರು.

    ಈ ನಿಟ್ಟಿನಲ್ಲಿ ಖಾಸಗಿ ಬಸ್ ಮಾಲಕರ ಸಮಸ್ಯೆಯನ್ನು ಸರ್ಕಾರ ಗಮನ ಹರಿಸಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಇದರೊಂದಿಗೆ ಖಾಸಗಿ ಬಸ್ ಸಿಬ್ಬಂದಿಗೂ ಪರಿಹಾರ ಘೋಷಣೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

  • ಸೂಕ್ತ ಬೆಲೆಯಿಲ್ಲದೆ ಟೊಮೇಟೋ ಬೆಳೆಗೆ ಬೆಂಕಿ ಹಚ್ಚಿದ ರೈತ

    ಸೂಕ್ತ ಬೆಲೆಯಿಲ್ಲದೆ ಟೊಮೇಟೋ ಬೆಳೆಗೆ ಬೆಂಕಿ ಹಚ್ಚಿದ ರೈತ

    ನೆಲಮಂಗಲ: ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಟೊಮೇಟೋ ಬೆಳೆದ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಬಾರಿ ಬೆಳೆ ಚೆನ್ನಾಗಿ ಇದ್ದರು ಕೂಡ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬಂದಿರುವುದರಿಂದಾಗಿ ಮನನೊಂದು ಬೆಳೆಗೆ ಬೆಂಕಿ ಹಚ್ಚಿರುವ ಘಟನೆ ನೆಲಮಂಗಲದಲ್ಲಿ ವರದಿಯಾಗಿದೆ.

    ಇದೀಗ ಟೊಮೇಟೋ ಕೆಜಿಗೆ 2 ರೂಪಾಯಿಯಂತೆ ರೈತರಿಂದ ಖರೀದಿಯಾದರೆ, 10 ರೂಪಾಯಿಗೆ ದಲ್ಲಾಳಿ ಮಾರುವಂತಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕಾಜಿಪಾಳ್ಯ ಹಾಗೂ ಕುತ್ತಿನಗೆರೆ ಗ್ರಾಮಸ್ಥರ ಕಥೆ ವ್ಯಥೆ ಇದ್ದಾಗಿದ್ದು, ಇದರಿಂದ ಮನನೊಂದು ಟೊಮೇಟೋ ಗಿಡಕ್ಕೆ ಬೆಂಕಿ ಹಚ್ಚುವ ಮೂಲಕ ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ ರೈತರು, ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಿಸುವವರಾದರೂ ನೇರವಾಗಿ ಟೊಮೇಟೋ ನಮ್ಮಿಂದ ಖರೀದಿಸಿ ಎಂದು ಮನವಿಮಾಡಿಕೊಂಡಿದ್ದಾರೆ.

    ಈ ಕುರಿತು ರಾಜ್ಯ ಸರ್ಕಾರಕ್ಕೆ ಸಹ ಮನವಿ ಮಾಡಿಕೊಂಡಿರುವ ರೈತರು ನಮಗೆ ಬೆಂಬಲ ಬೆಲೆ ನೀಡಿ ಸಹಕಾರಿಯಾಗಿ. ಇದರೊಂದಿಗೆ ದಾನಿಗಳು ನೇರವಾಗಿ ರೈತರಿಂದ ಸ್ಥಳದಲ್ಲೇ ಟೊಮೇಟೋ ಖರೀದಿಸಿದರೆ ಮಾಡಿದ ಖರ್ಚು ಆದರೂ ಸಿಗುತ್ತದೆ ಎಂದು ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

  • ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ: ಡಿಕೆಶಿ

    ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ: ಡಿಕೆಶಿ

    – ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ

    ಬೆಂಗಳೂರು: ಕಳೆದ ಬಾರಿ ಹೀಗೆ ಲಾಕ್‍ಡೌನ್ ಪ್ಯಾಕೇಜ್ ಘೋಷಣೆ ಮಾಡಿದರು. ಸರಿಯಾಗಿ ಹಣ ಕೊಡಲಿಲ್ಲ. ಈಗ ಸರಿಯಾಗಿ ಪ್ಯಾಕೇಜ್ ಹಂಚಿಕೆ ಮಾಡ್ತಾರೆ ಅನ್ನೋ ಗ್ಯಾರಂಟಿ ಇಲ್ಲಾ ಎಂದು ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ ಪಂಚಾಯ್ತಿ ಮೂಲಕ ಕೊಡಬೇಕು. ಇದು ಕೊಡಬೇಕು ಅಂತ ಕೊಟ್ಟಿರೋದಲ್ಲ. ನಾವೆಲ್ಲಾ ಒತ್ತಾಯ ಮಾಡಿದೆವು ಅಂತ ಏನೋ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಡವರ ಬಗ್ಗೆ ಚಿಂತನೆ ಮಾಡುವಂತ ಸರ್ಕಾರ ಅಂತು ಇದಲ್ಲ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಕೊಡುವ ವಿಧಾನವೇ ಸಂಪೂರ್ಣ ಫೈಲ್ಯೂರ್ ಆಗಿದೆ. ಇಂದಿರಾ ಕ್ಯಾಂಟೀನ್ ಊಟಕ್ಕೆ ಆಧಾರ್ ಕಾರ್ಡ್ ಐಡಿ ಕಾರ್ಡ್ ತನ್ನಿ ಅಂದಿದ್ದರು. ನಾವು ಹೇಳಿದ ಮೇಲೆ ವಾಪಸ್ ಪಡೆದರು. ಕಾರ್ಮಿಕರು ಶ್ರಮಿಕ ವರ್ಗಕ್ಕೆ ಏನು ಇಲ್ಲಾ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.

    ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ. ಹತ್ತು ಲಕ್ಷ ಡ್ರೈವರ್ ಇದ್ದಾರೆ ಎಂದು ಹೇಳಿ ಎರಡು ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಪರಿಹಾರ ಹಂಚಿಕೆ ವಿಧಾನ ಸರಿ ಇಲ್ಲ. ಪರಿಹಾರ ಹಂಚುವ ಜವಾಬ್ದಾರಿ ಗ್ರಾಮ ಪಂಚಾಯ್ತಿಗೆ ಕೊಡಿ. ಅವರು ಮಡಿವಾಳ, ಕ್ಷೌರಿಕ ಹೂ ಮಾರುವವನು, ಆರ್ಚಕರು, ಅಡಿಗೆ ಮಾಡುವವನು ಎಲ್ಲರೂ ಅವರಿಗೆ ಗೊತ್ತಾಗುತ್ತೆ. ಹಳ್ಳಿ ಜನ ಮೋಸ ಮಾಡದೇ ಎಲ್ಲರಿಗೂ ಕೊಡ್ತಾರೆ ಎಂದಿದ್ದಾರೆ.

    ನಮಗಂತು ಸರ್ಕಾರದ ನಿರ್ವಾಹಣೆ ಬಗ್ಗೆ ವಿಶ್ವಾಸ ಇಲ್ಲ. ನಮ್ಮ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಸರ್ಕಾರದ ಮೇಲೆ ನಂಬಿಕೆ ಇಲ್ಲಾ ಅಂತಾನೆ ಡಿಸಿಗಳ ಜೊತೆ ಪಿಎಂ ಮೀಟಿಂಗ್ ಮಾಡಿದ್ದಾರೆ. ಇವರು ಪ್ಯಾಕೇಜ್ ಮಾಡಿರುವ ಹಂಚುವ ವಿಧಾನವೇ ಸರಿ ಇಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.

  • ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ಗಾಂಧಿನಗರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‍ಗೆ ಭೇಟಿ ನೀಡಲಿದ್ದಾರೆ.

    ಗುಜರಾತ್, ಮುಂಬೈ, ಕರ್ನಾಟಕದ ಕೆಲವು ಭಾಗಗಳಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದ ಹಾನಿಗೊಂಡ ಪ್ರದೇಶಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿಯವರು ಡಿಯುಗೆ ಭೇಟಿ ನೀಡಲಿದ್ದಾರೆ.

    ಬೆಳಗ್ಗೆ 9.30ರ ಸುಮಾರಿಗೆ ಮೋದಿಯವರು ದೆಹಲಿಯಿಂದ ಹೊರಡಲಿದ್ದು ಭಾವನಗರದಲ್ಲಿ ತಲುಪಿ, ಅಲ್ಲಿಂದ ಉನಾ, ಡಿಯು, ಜಫರಾಬಾದ್ ಮತ್ತು ಮಾಹುವಾಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಲಿದ್ದಾರೆ. ಸಮೀಕ್ಷೆಯ ನಂತರ ಮೋದಿಯವರು ಅಹಮದಾಬಾದ್ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

    ತೌಕ್ತೆ ಚಂಡಮಾರುತದಿಂದ ಸೋಮವಾರ ರಾತ್ರಿ ಡಿಯು ಮತ್ತು ಉನಾ ನಡುವಿನ ಸೌರಾಷ್ಟ್ರ ಪ್ರದೇಶದ ಗುಜರಾತ್ ಕರಾವಳಿಯಲ್ಲಿ ಭೂ ಕುಸಿತ ಉಂಟಾಗಿದೆ ಹಾಗೂ ಚಂಡಮಾರುತದಿಂದ 13 ಜನರು ಮೃತಪಟ್ಟಿದ್ದಾರೆ.

  • ಕೋಟೆನಾಡಿನ ಅನ್ನದಾತನಿಗೆ ಬರೆ ಹಾಕಿದ ಸೆಮಿ ಲಾಕ್‍ಡೌನ್ – ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹ

    ಕೋಟೆನಾಡಿನ ಅನ್ನದಾತನಿಗೆ ಬರೆ ಹಾಕಿದ ಸೆಮಿ ಲಾಕ್‍ಡೌನ್ – ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹ

    ಚಿತ್ರದುರ್ಗ: ಎಲ್ಲೆಡೆ ಕೊರೊರಾ ಎರಡನೇ ಅಲೆಯಿಂದಾಗಿ ಸರ್ಕಾರ ರಾಜ್ಯಾದ್ಯಂತ ಸೆಮಿ ಲಾಕ್ ಡೌನ್ ಘೋಷಿಸಿರುವ ಪರಿಣಾಮ ಕೋಟೆನಾಡಿನ ಅನ್ನದಾತರ ಮೇಲೆ ಪ್ರಭಾವ ಬೀರಿದೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕರಿ ಓಬೇನಹಳ್ಳಿ ಗ್ರಾಮದ ಹಲವು ಜನ ರೈತರು ಹತ್ತಾರು ಎಕರೆಯಲ್ಲಿ ಲಕ್ಷ ಲಕ್ಷ ಹಣ ಖರ್ಚು ಮಾಡಿ, ಗುಲಾಬಿ ಹೂವು, ಬದನೆ ಕಾಯಿ ಹಾಗೂ ಬೂದು ಕುಂಬಳಕಾಯಿ ಬೆಳೆದಿದ್ದಾರೆ. ಆದರೆ ಲಾಕ್ ಡೌನ್‍ನಿಂದಾಗಿ ದಿಢೀರ್ ಅಂತ ಹೂವು, ಹಣ್ಣು ಹಾಗೂ ತರಕಾರಿ ಬೆಲೆ ಕುಸಿತವಾಗಿದೆ. ಹೀಗಾಗಿ ಖರೀದಿಸಲು ಯಾರು ಸಹ ಮುಂದೆ ಬರುತ್ತಿಲ್ಲ. ಅಲ್ಲದೇ ಅವುಗಳನ್ನು ಕಷ್ಟಪಟ್ಟು ಮಾರುಕಟ್ಟೆಗೆ ಸಾಗಿಸಿದರೆ, ಸಾಗಣೆಯ ವೆಚ್ಚ ಸಹ ಅನ್ನದಾತನಿಗೆ ಸಿಗಲಾರದೆಂಬ ಆತಂಕದಲ್ಲಿ ಅನ್ನದಾತರಿದ್ದಾರೆ.

    ಬೆಲೆ ಕುಸಿತ ಹಾಗೂ ಖರೀದಿಸುವವರಿಲ್ಲದೇ ಸೊಂಪಾಗಿ ಬೆಳೆದ ಬೆಳೆಗಳು ಹೊಲದಲ್ಲೇ ಕೊಳೆತು ಹೋಗುತ್ತಿವೆ. ಹೀಗಾಗಿ ಸಾಲ ಸೂಲ ಮಾಡಿ ಬೆಳೆಯನ್ನು ಮಾರಾಟ ಮಾಡಿ ಸಾಲ ಮುಕ್ತರಾಗಬೇಕೆಂಬ ಕನಸು ಕಂಡಿದ್ದ ಕರಿ ಓಬೇನಹಳ್ಳಿ ಗ್ರಾಮದ ರೈತರಾದ ಯಶೋದಮ್ಮ, ಚಿಕ್ಕಣ್ಣ, ಪೂಜಾರಿ ಚಿಕ್ಕಣ್ಣ ಸೇರಿದಂತೆ ಹಲವರು ದಾರಿಕಾಣದೇ ಕಂಗಾಲಾಗಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು, ನಷ್ಟಕ್ಕೆ ತಕ್ಕ ಪರಿಹಾರ ಒದಗಿಸಬೇಕೆಂದು ಅನ್ನದಾತರು ಮನವಿ ಮಾಡಿದ್ದಾರೆ.

  • ಕೋವಿಡ್ ಕರ್ಫ್ಯೂ ವಿಸ್ತರಿಸಿದ ಉತ್ತರಾಖಂಡ್ – ಮದ್ವೆಯಲ್ಲಿ ಭಾಗಿಯಾಗಲು ರಿಪೋರ್ಟ್ ಕಡ್ಡಾಯ

    ಕೋವಿಡ್ ಕರ್ಫ್ಯೂ ವಿಸ್ತರಿಸಿದ ಉತ್ತರಾಖಂಡ್ – ಮದ್ವೆಯಲ್ಲಿ ಭಾಗಿಯಾಗಲು ರಿಪೋರ್ಟ್ ಕಡ್ಡಾಯ

    ದೆಹ್ರಾಡೂನ್: ಉತ್ತರಾಖಂಡ್ ಸರ್ಕಾರ ರಾಜ್ಯದಲ್ಲಿ ಕೊರೊನಾ ಕರ್ಫ್ಯೂವನ್ನು ಸೋಮವಾರದಿಂದ ವಿಸ್ತರಿಸಿದ್ದು, ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳವವರಿಗೆ ಕೋವಿಡ್-19 ನೆಗೆಟಿವ್ ವರದಿಯನ್ನು ತರಲು ಕಡ್ಡಾಯಗೊಳಿಸಿದೆ.

    ಮೇ 18ರ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗಬೇಕಿದ್ದ ಕೋವಿಡ್-19 ಕರ್ಫ್ಯೂ ಮೇ 25ರ ಬೆಳಗ್ಗೆ 6 ಗಂಟೆಯವರೆಗೂ ವಿಸ್ತರಿಸಲಾಗಿದೆ ಎಂದು ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಸರ್ಕಾರದ ಅಧಿಕೃತ ವಕ್ತಾರ ಸುಬೋಧ್ ಯುನಿಯಲ್ ತಿಳಿಸಿದ್ದಾರೆ.

    ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಜನರು ತಮ್ಮ ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯನ್ನು ತೆಗೆದುಕೊಂಡು ಬರಬೇಕು. ಅದು 72 ಗಂಟೆಗಳಿಗಿಂತ ಒಳಗಿನದ್ದಾಗಿರಬೇಕು ಹಾಗೂ ಮದುವೆ ಸಮಾರಂಭಗಳಿಗೆ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 20 ಮಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಲ್ಲದೇ ಶವಸಂಸ್ಕಾರಕ್ಕೆ ಹೋಗುವವರಿಗೆ ಆಡಳಿತವು ಕರ್ಫ್ಯೂ ಪಾಸ್ ನೀಡುವುದು ಅಗತ್ಯವಾಗಿದೆ. ಒಟ್ಟಾರೆ ಕೊರೊನಾ ಸೋಂಕನ್ನು ತಡೆಗಟ್ಟಲು ಕರ್ಫ್ಯೂ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.