Tag: government

  • ಸಿಬ್ಬಂದಿ ಕೊರತೆ, ಸ್ಥಳದ ಕೊರತೆ ನೆಪ- ಬೆಂಗಳೂರಿಗೆ ಸದ್ಯಕ್ಕಿಲ್ಲ ನಮ್ಮ ಕ್ಲಿನಿಕ್ ಭಾಗ್ಯ

    ಸಿಬ್ಬಂದಿ ಕೊರತೆ, ಸ್ಥಳದ ಕೊರತೆ ನೆಪ- ಬೆಂಗಳೂರಿಗೆ ಸದ್ಯಕ್ಕಿಲ್ಲ ನಮ್ಮ ಕ್ಲಿನಿಕ್ ಭಾಗ್ಯ

    ಬೆಂಗಳೂರು: ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ ಇದು. ಈ ಯೋಜನೆ ಜಾರಿಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಬಿಬಿಎಂಪಿ (BBMP) ಹೊಸ ಹೊಸ ಪ್ಲಾನ್ ಮಾಡಿದೆ. ಈ ವಿಶೇಷ ಸೌಲಭ್ಯ ನೀಡಲು ಪಾಲಿಕೆ ಸರ್ಕಾರಕ್ಕೆ ಪತ್ರ ಬರೆದಿದೆ.

    ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ ನಮ್ಮ ಕ್ಲಿನಿಕ್ (Namma Clinic) ಆರಂಭ ಬೆಂಗಳೂರಿನಲ್ಲಿ ತಡ ಆಗ್ತಿದೆ. ಡಿಸೆಂಬರ್ 2ನೇ ವಾರದಿಂದ ರಾಜ್ಯದಲ್ಲಿ 114 ಕಡೆ ನಮ್ಮ ಕ್ಲಿನಿಕ್ ಆರಂಭ ಆಗಿದೆ. ಆದರೆ ಬೆಂಗಳೂರಿನಲ್ಲಿ ಜಾಗದ ಕೊರತೆ ಮತ್ತು ಸಿಬ್ಬಂದಿ ಕೊರತೆಯಿಂದ ಯೋಜನೆ ಜಾರಿ ನಿಧಾನವಾಗ್ತಿದೆ. ಇದೀಗ ಜಾಗ ಸಿಕ್ಕಿದ್ರೂ ನಮ್ಮ ಕ್ಲಿನಿಕ್‍ಗೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಿಬ್ಬಂದಿಯೇ ಸಿಕ್ತಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೆಕ್ಕುಗಳ ಕಾಟ- ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ

    ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಸಿಬ್ಬಂದಿಯನ್ನ ನೇಮಕ ಮಾಡಿಕೊಳ್ತಿದ್ರೂ ನಮ್ಮ ಕ್ಲಿನಿಕ್‍ಗಳಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಬಿಬಿಎಂಪಿಗೆ ಸವಾಲಾಗಿದೆ. ಸರ್ಕಾರಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಪತ್ರ ಬರೆದಿದೆ. ಸರ್ಕಾರಿ ಕೋಟಾದಡಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡ್ತಾ ಇರುವವರನ್ನ ಒಂದು ವರ್ಷದ ಮಟ್ಟಿಗೆ ನಮ್ಮ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕೊಡಿ. ವೈದ್ಯಕೀಯ ಕೋರ್ಸ್ (Medical Course) ಮುಗಿಸಿರೋ ವೈದ್ಯರನ್ನ ನೀಡಲು ಪತ್ರ ಬರೆಯಲಾಗಿದ್ಯಂತೆ. ಇದಕ್ಕೆ ಸರ್ಕಾರ ಸ್ಪಂದಿಸಿದ್ದು ವೈದ್ಯರನ್ನ ನೀಡುವ ಭರವಸೆ ನೀಡಿದೆಯಂತೆ.

    ಗುತ್ತಿಗೆ ಅಧಾರದ ಮೇಲೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ನೀಟ್ ಪರೀಕ್ಷೆ ಕೂಡ ಅಡ್ಡಿ ಆಗ್ತಿದ್ಯಂತೆ. ನೀಟ್ ಪರೀಕ್ಷೆಗೆ ರೆಡಿಯಾಗ್ತಿರೋ ವೈದ್ಯಕೀಯ ವಿದ್ಯಾರ್ಥಿಗಳು ಯಾರು ನಮ್ಮ ಕ್ಲಿನಿಕ್‍ಗಳಲ್ಲಿ ಕೆಲಸ ಮಾಡಲು ಮುಂದಾಗ್ತಾ ಇಲ್ವಂತೆ ಜೊತೆಗೆ ಉದ್ಯೋಗ (Job) ಖಾಲಿ ಇದೆ ಬನ್ನಿ ಅಂದರು ಬರ್ತಾ ಇಲ್ವಂತೆ. ಹೀಗಾಗಿ ಸರ್ಕಾರಿ ಕೋಟಾದ ವೈದ್ಯರ ಮೊರೆ ಹೋಗಿದ್ದು ಜನವರಿ ಅಂತ್ಯದ ಒಳಗೆ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಆರಂಭಕ್ಕೆ ಮುಂದಾಗಿರುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿದ್ದಾರೆ.

    ಒಟ್ಟಾರೆ ನಮ್ಮ ಕ್ಲಿನಿಕ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ನೇಮಕಕ್ಕೆ ಬಿಬಿಎಂಪಿ ಹರಸಾಹಸ ಪಡುತ್ತಿದ್ದು, ಜನವರಿಯಲ್ಲೇ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಆರಂಭ ಆಗುತ್ತಾ ಇಲ್ಲ ಮತ್ತಷ್ಟು ದಿನಕ್ಕೆ ಮುಂದೂಡಲಾಗುತ್ತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಂಚಮಸಾಲಿ ಮೀಸಲು ಮಾಯೆ- ಸರ್ಕಾರಕ್ಕೆ ಹೊಸ ಗಡುವು, ಮತ್ತೆ ಇಕ್ಕಟ್ಟು

    ಪಂಚಮಸಾಲಿ ಮೀಸಲು ಮಾಯೆ- ಸರ್ಕಾರಕ್ಕೆ ಹೊಸ ಗಡುವು, ಮತ್ತೆ ಇಕ್ಕಟ್ಟು

    ಬೆಂಗಳೂರು: ಪಂಚಮಸಾಲಿ ಮೀಸಲಾತಿ (Panchamasali Reservation) ಬೇಡಿಕೆ ಈಡೇರಿಕೆಗೆ ಸರ್ಕಾರ ಕಂಡುಕೊಂಡಿದ್ದ ಪರಿಹಾರ ಸೂತ್ರ ರಿಜೆಕ್ಟ್ ಆಗಿದೆ. ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಪಂಚಮಸಾಲಿ ಹೋರಾಟಗಾರರು ತೀವ್ರವಾಗಿ ವಿರೋಧ ತೋರಿದ್ದಾರೆ.

    ಪಂಚಮಸಾಲಿ ಮತ್ತು ಇತರೆ ಸಮುದಾಯಗಳಿಗೆ ಸೃಷ್ಟಿಸಿದ್ದ ಹೊಸ ಪ್ರವರ್ಗ 2ಡಿ ಪ್ರಸ್ತಾಪವನ್ನು ನಿರಾಕರಿಸಲಾಗಿದೆ. ಅಲ್ಲದೇ ಪಂಚಮಸಾಲಿಗಳಿಗೆ 2ಎ ಪ್ರವರ್ಗಕ್ಕೆ ಸೇರಿಸಲು ಹೋರಾಟಗಾರರು ಸರ್ಕಾರಕ್ಕೆ ಹೊಸ ಗಡುವು ನೀಡಿರೋದು ಸರ್ಕಾರಕ್ಕೆ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ. ಆ ಮೂಲಕ ರಾಜ್ಯಸರ್ಕಾರಕ್ಕೆ ಮತ್ತೆ ಬಿಗಿಯಾಯ್ತು ಮೀಸಲಾತಿ ಕುಣಿಕೆ. ಪಂಚಮಸಾಲಿಯನ್ನು 2ಎ ಪ್ರವರ್ಗಕ್ಕೇ ಸೇರಿಸುವಂತೆ ಬಿಗಿ ಪಟ್ಟು ಮುದುವರಿಸಲಾಗಿದೆ.

    24 ಗಂಟೆಯೊಳಗೆ 2ಎ ಸೇರ್ಪಡೆ ಘೋಷಣೆ ಮಾಡಬೇಕು. ಇನ್ನು ಜನವರಿ 12 ರೊಳಗೆ ಈ ಸಂಬಂಧ ಸರ್ಕಾರಿ ಆದೇಶ ಬರಬೇಕು. ಇಲ್ಲದಿದ್ದಲ್ಲಿ ಸಿಎಂ ಬೊಮ್ಮಾಯಿ (Basavaraj Bommai) ನಿವಾಸದ ಮುತ್ತಿಗೆ, ಹೋರಾಟದ ಎಚ್ಚರಿಕೆ ಕೊಡಲಾಗಿದೆ. ಗುರುವಾರ ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಜನಪ್ರತಿನಿಧಿಗಳು, ಪದಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ಈ ನಿರ್ಣಯಗಳು ಸರ್ಕಾರಕ್ಕೆ ತೀವ್ರ ಹಿನ್ನಡೆಯುಂಟು ಮಾಡಿವೆ. ಇದನ್ನೂ ಓದಿ: ಕೋಲಾರ ಸ್ಪರ್ಧೆ ಫಿಕ್ಸ್- ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?

    ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬೇಡಿಕೆ ಈಡೇರಿಕೆಗೆ ಹೊಸ ಡೆಡ್ ಲೈನ್ ಕೊಟ್ಟಿರುವ ಸಂಬಂಧ ಇವತ್ತು ಸಚಿವ ಮುರುಗೇಶ್ ನಿರಾಣಿ (Murugesh Nirani) ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ. ಇಂದು (ಶುಕ್ರವಾರ) ಬೆಳಗ್ಗೆ ಸಿಎಂ ಅವರ ಆರ್ ಟಿನಗರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಈ ಬಗ್ಗೆ ಚರ್ಚೆ ನಡೆಸಿದ ಸಚಿವ ನಿರಾಣಿ, ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗ್ತಿದೆ ಎಂದು ಸಿಎಂ ಎದುರು ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಯತ್ನಾಳ್ (BasanaGaudaPatil Yatnal) ನನ್ನ ವಿರುದ್ಧ ಪದೇ ಪದೇ ಮಾತನಾಡ್ತಾರೆ ಎಂದು ನಿರಾಣಿಯವರು ಸಿಎಂ ಎದುರು ಅಸಮಾಧಾನ ಹೊರ ಹಾಕಿದ್ದಾರೆನ್ನಲಾಗಿದೆ.

    ಒಟ್ಟಿನಲ್ಲಿ ಪಂಚಮಸಾಲಿ ಸಮುದಾಯದ ಹೋರಾಟದ ವರಸೆಗೆ ಸಿಎಂ ಹೈರಾಣರಾಗಿದ್ದಾರೆ. ಬೀಸೋ ದೊಣ್ಣೆಯಿಂದ ಪಾರಾಗುವ ಹೊತ್ತಿಗೆ ಮತ್ತೆ ಮೀಸಲಾತಿ ಕುಣಿಕೆ ಬಿಗಿಯಾಗಿರೋದು ಸಿಎಂ ತಲೆಬೇನೆ ಹೆಚ್ಚಿಸಿದೆ. ಹೋರಾಟಗಾರರ ಹೊಸ ಗಡುವು, ಸಿಎಂಗೆ ಇಕ್ಕಟ್ಟು ತಂದಿದೆ. ಅಲ್ಲಿಗೆ ಸರ್ಕಾರದ ಮುಂದಿನ ದಾರಿ ಅಸ್ಪಷ್ಟ, ಗೊಂದಲದಿಂದ ಕೂಡಿರೋದು ಸ್ಪಷ್ಟ. ಹಾಗಾದ್ರೆ ಸಿಎಂ ಅವರ ಎದುರು ಇರುವ ಅವಕಾಶಗಳಾದರೂ ಏನು? ಪಂಚಮಸಾಲಿಗಳ ಮನವೊಲಿಕೆಗೆ ಸಿಎಂ ಮುಂದಾಗ್ತಾರಾ? ಅಥವಾ ಹೊಸ ಪ್ರವರ್ಗದ ಬಗ್ಗೆ ಮತ್ತೆ ಮನವರಿಕೆ ಮಾಡಿ ಮಾಡ್ತಾರಾ? ಅಥವಾ ಸರ್ವಪಕ್ಷ ಸಭೆ ಕರೀತಾರಾ? ಅಥವಾ ಹೈಕಮಾಂಡ್ ಮೊರೆ ಹೋಗ್ತಾರಾ? ಈ ಪೈಕಿ ಸಿಎಂ ಯಾವ ದಾಳ ಉರುಳಿಸ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ಗೆಲ್ಲೋದು 50-70 ಸೀಟ್ ಅಷ್ಟೇ – ಜೆಡಿಎಸ್ ಸರ್ಕಾರ ರಚಿಸುತ್ತೆ ಬರೆದಿಟ್ಟುಕೊಳ್ಳಿ: HDK

    ಕಾಂಗ್ರೆಸ್ ಗೆಲ್ಲೋದು 50-70 ಸೀಟ್ ಅಷ್ಟೇ – ಜೆಡಿಎಸ್ ಸರ್ಕಾರ ರಚಿಸುತ್ತೆ ಬರೆದಿಟ್ಟುಕೊಳ್ಳಿ: HDK

    ಮಂಡ್ಯ: ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತೆ ಅನ್ನೋ ನಂಬಿಕೆ ಡಿ.ಕೆ.ಶಿವಕುಮಾರ್‌ಗೆ (DK Shivakumar) ಯಾಕಿದೆ? ಕಾಂಗ್ರೆಸ್ಸಿನ ಸಮೀಕ್ಷೆ ತಗೊಂಡು ಡಿಕೆಶಿ ಚಿನ್ನದ ತಗಡು ಹೊಡೆಸಿಕೊಂಡು ಮನೆ, ಕಚೇರಿಯಲ್ಲಿ ಹಾಕೊಳ್ಳಲಿ. ಅವರು ಈ ಬಾರಿಗೆ ಗೆಲ್ಲೋದು 50 ರಿಂದ 70 ಸೀಟ್. ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‍ಡಿಕೆ, ಜೆಡಿಎಸ್‍ನ (JDS) ಸಾಮರ್ಥ್ಯ ಹಳೆ ಮೈಸೂರು ಭಾಗದಲ್ಲಿ ಮಾತ್ರ. ನಮ್ಮ ಪೈಪೋಟಿ ಬಿಜೆಪಿ ಜೊತೆ ಮಾತ್ರ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗೆ ಇದೆ ಎನ್ನುವುದು ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ (BJP) ನಡುವೆ ನೇರ ಸ್ಪರ್ಧೆ ಇದೆ ಅದು ಚುನಾವಣೆ ಗೆಲ್ಲುವುದಕ್ಕೆ ಅಲ್ಲ. ಅಧಿಕಾರಕ್ಕೇ ಬಂದ್ರೆ ಎಷ್ಟು ಪರ್ಸಂಟೇಜ್ ಪಡೆಯಬೇಕು ಅನ್ನೋದಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿರಾಣಿ ನನ್ನ ಮುಂದೆ ಬಚ್ಚಾ, ಇಂತವರನ್ನ ಸಿಎಂ ಮಾಡಿದ್ರೆ ವಿಧಾನಸೌಧಕ್ಕೆ ಅವಮಾನ: ಯತ್ನಾಳ್

    ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮೂರು ಬಾರಿ ಅಧಿಕಾರ ನಡೆಸಿದೆ. ಅದಾದ ನಂತರ ಒಂದು ಬಾರಿ 38, ಮತ್ತೊಮ್ಮೆ 62, ಇನ್ನೊಮ್ಮೆ 78 ಸ್ಥಾನ ಪಡೆದಿದೆ ಅಷ್ಟೇ. ಈ ಬಾರಿ ಕಾಂಗ್ರೆಸ್ ಅವರಿಗೆ ಗೆಲ್ಲುವ ಶಕ್ತಿ ಇರೋದು 50-70 ಸೀಟ್ ಅಷ್ಟೇ. ಸಂಪೂರ್ಣ ಬಹುಮತ ಬರುತ್ತೆ ಎನ್ನುವ ಕಾಂಗ್ರೆಸ್ಸಿಗರು, ಜೆಡಿಎಸ್‍ನ ಹಲವರ ಮನೆ ಕಾಯುತ್ತಿದ್ದಾರೆ. ಇವತ್ತು ನಾನು ಹೇಳ್ತಿದ್ದೀನಿ ಬರೆದಿಟ್ಟುಕೊಳ್ಳಿ. ರಾಜ್ಯದಲ್ಲಿ ಜನತಾದಳದ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೆ. ನಮ್ಮ ಸರ್ಕಾರ ಬರೋದನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಡೆಯುವುದಕ್ಕೆ ಆಗಲ್ಲ. ಮತ್ತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಭದ್ರತೆ – ಬೆಂಗಳೂರು ಪೊಲೀಸರಿಗೆ 35 ಅಂಶಗಳ ಟಾಸ್ಕ್‌ ಕೊಟ್ಟ ಕಮಿಷನರ್

    Live Tv
    [brid partner=56869869 player=32851 video=960834 autoplay=true]

  • ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹ – ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

    ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹ – ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

    ನವದೆಹಲಿ: ಸಲಿಂಗ ವಿವಾಹವನ್ನು (Same Sex Marriage) ಅಂಗೀಕರಿಸುವಂತೆ ಸಲಿಂಗಕಾಮಿ ದಂಪತಿಗಳು (Gay Couples) ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court), ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ.

    ಸಿಜೆಐ (CJI) ಡಿ. ವೈ ಚಂದ್ರಚೂಡ್ ಮತ್ತು ನ್ಯಾ. ಹಿಮಾಕೊಹ್ಲಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ವಿಚಾರಣೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ ಕೋರ್ಟ್ ನಾಲ್ಕು ವಾರಗಳಿಗೆ ವಿಚಾರಣೆಯನ್ನು ಮುಂದೂಡಿತು. ಇದನ್ನೂ ಓದಿ: ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹವನ್ನು ಅಂಗೀಕರಿಸಿ: ಸುಪ್ರೀಂಕೋರ್ಟ್‍ಗೆ ಅರ್ಜಿ

    ಹೈದರಾಬಾದ್‍ನಲ್ಲಿ ಮೂಲದ ಇಬ್ಬರು ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್ ಈ ಅರ್ಜಿ ಸಲ್ಲಿಸಿದ್ದು, ಒಬ್ಬರ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು LGBTQ+ ನಾಗರಿಕರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. 10 ವರ್ಷದ ಹಿಂದೆ ಅಧಿಕೃತ ಮದುವೆ ನಡೆದಿದ್ದರೂ ಈವರೆಗೂ ಅವರು ವಿವಾಹಿತ ದಂಪತಿಗಳ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ದಂಪತಿಗಳು ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಕೋರ್ಟ್ ಹೇಗೆ ರಕ್ಷಿಸುತ್ತದೆಯೋ ಅದರಂತೆ ಸಲಿಂಗ ವಿವಾಹವು ಈ ಸಾಂವಿಧಾನಿಕವಾಗಿ ಅಧಿಕೃತಗೊಳಿಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ

    ಈ ಪ್ರಕರಣ ಸೆಕ್ಷನ್ 377 ಅನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ LGBTQ+ ವ್ಯಕ್ತಿಗಳು ಸಮಾನತೆ, ಘನತೆ ಮತ್ತು ಗೌಪ್ಯತೆಯ ಹಕ್ಕನ್ನು ಇತರ ಎಲ್ಲಾ ನಾಗರಿಕರಿಗೆ ಸಮಾನವಾಗಿ ಸಂವಿಧಾನವು ಖಾತರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇವುಗಳ ಆಧರಿಸಿ ಕೋರ್ಟ್‍ಗೆ ಈಗ ಅರ್ಜಿ ಸಲ್ಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಒಂದೇ ಸಮುದಾಯದ 7 ಮಂದಿ ಇದ್ದಾರೆ – ದತ್ತಪೀಠದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ

    ಒಂದೇ ಸಮುದಾಯದ 7 ಮಂದಿ ಇದ್ದಾರೆ – ದತ್ತಪೀಠದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ

    ಚಿಕ್ಕಮಗಳೂರು: ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರ ಹಾಗೂ ವಿವಾದಿತ ಪ್ರದೇಶವೂ ಆಗಿರುವ ದತ್ತಪೀಠದ (Datta Peetha) ಆಡಳಿತಕ್ಕೆ ರಾಜ್ಯ ಸರ್ಕಾರ (Government) ನೇಮಕ ಮಾಡಿದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ ಕೇಳಿ ಬಂದಿದೆ.

    ಸಮಿತಿಯಲ್ಲಿ ಎರಡು ಸಮುದಾಯಕ್ಕೆ ಸೇರಿದ ಎಂಟು ಜನರಿರಬೇಕಿತ್ತು. ಆದರೆ, ಒಂದೇ ಸಮುದಾಯಕ್ಕೆ ಸೇರಿದ ಏಳು ಜನರಿದ್ದಾರೆ. ಈ ಸಮಿತಿ ಮೇಲೆ ನಂಬಿಕೆ ಇಲ್ಲ. ಕೂಡಲೇ ಈ ಸಮಿತಿಯನ್ನು ಅನೂರ್ಜಿತಗೊಳಿಸಬೇಕೆಂದು ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದೆ. ಇದನ್ನೂ ಓದಿ: 1 ರೂ.ಗೆ ಲೀಸ್ ಪಡೆದಿದ್ದ ಅವಧಿ ಮುಕ್ತಾಯ – ಜಾಗ ಬಿಟ್ಟುಕೊಡುವಂತೆ ಕೇಳಿದ ದೇವಸ್ಥಾನ ಮಂಡಳಿ

    ನಗರದಲ್ಲಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿನುದ್ದಿನ್, ಸಮಿತಿಯಲ್ಲಿ ಏಳು ಮಂದಿ ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಕಮಿಟಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಎಂಟು ಜನರ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಿದೆ. ಆದರೆ, ಮುಸ್ಲಿಂ ಸಮುದಾಯದ ಕೇವಲ ಒಬ್ಬರನ್ನು ಕಮಿಟಿ ಸದಸ್ಯರನ್ನಾಗಿ ನೇಮಿಸಿ, ಉಳಿದ 7 ಜನರನ್ನು ಒಂದೇ ಸಮುದಾಯಕ್ಕೆ ಸೇರಿದವರನ್ನು ನೇಮಿಸಿದೆ. ಈ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ – ಹಿಂದೂಗಳ 5 ದಶಕಗಳ ಹೋರಾಟಕ್ಕೆ ಜಯ ಎಂದ ಸಿಟಿ ರವಿ

    ಹಾಲಿ ಕಮಿಟಿಯನ್ನು ಅನೂರ್ಜಿತಗೊಳಿಸಬೇಕು. ಎರಡು ಸಮುದಾಯಕ್ಕೆ ಸೇರಿದ ಸದಸ್ಯರನ್ನು ಸಮಾನ ರೀತಿ ಹಾಗೂ ಇಬ್ಬರು ಮಹಿಳೆಯನ್ನೊಳಗೊಂಡ ಪಾರದರ್ಶಕ ಸಮಿತಿಯನ್ನು ರಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕಮಿಟಿ 1989ರ ಧಾರ್ಮಿಕ ದತ್ತಿ ಆಯುಕ್ತರ ಆದೇಶಕ್ಕೆ ಪೂರಕವಾಗಿರಬೇಕು. ಇಲ್ಲವಾದಲ್ಲಿ ವೇದಿಕೆ ವತಿಯಿಂದ ಜನಪರ ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ

    ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ

    ಮಂಡ್ಯ: ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕೆಂದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ (Karnataka) ರಾಜ್ಯ ರೈತ ಸಂಘ ಕಳೆದ 10 ದಿನಗಳಿಂದ ಮಂಡ್ಯದಲ್ಲಿ (Mandya) ಅಹೋರಾತ್ರಿ ಧರಣಿ ನಡೆಸುತ್ತಿದೆ. ಆದರೆ ಸರ್ಕಾರ (Government) ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪಾಲಿಗೆ (Farmers) ಸತ್ತು ಹೋಗಿವೆ ಎಂದು ಅಣುಕು ಶವಯಾತ್ರೆ ನಡೆಸಿ ಡಿಸಿ ಕಚೇರಿ ಮುತ್ತಿಗೆ ಹಾಕಿ ಇಂದು ರೈತರು ಪ್ರತಿಭಟನೆ ನಡೆಸಿದ್ದಾರೆ.

    ಕಳೆದ 10 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗಧಿ, ಹಾಲಿನ ದರ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಅಹೋರಾತ್ರಿ ಧರಣಿ ನಡೆಸಿರುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕಾಂಗ್ರೆಸ್ (Congress) ಹಾಗೂ ಜೆಡಿಎಸ್‍ನ (JDS) ನಾಯಕರು ಪ್ರತಿಭಟನೆ ಬಂದು ಭೇಟಿ ನೀಡಿ ಬೆಂಬಲ ಸೂಚಿಸಿದ್ರು. ಇಷ್ಟಾದ್ರು ಸಹ ಸರ್ಕಾರದ ಯಾವೊಬ್ಬ ಮಂತ್ರಿಯೂ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಇನ್ಮುಂದೆ ವಿದ್ಯುತ್‌ ಬಿಲ್ ಕಟ್ಟದೇ ಇದ್ದರೆ ಸಂಪರ್ಕವೇ ಕಡಿತ

    ಹೀಗಾಗಿ ಇಂದು ಸಿಟ್ಟಿಗೆದ್ದ ರೈತರು ಮಂಡ್ಯದ ಸಂಜಯ್ ವೃತ್ತದಿಂದ ಕಬ್ಬಿನ ಟ್ರ್ಯಾಕ್ಟರ್‌ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಈ ವೇಳೆ ರೈತರ ಪಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸತ್ತಿವೆ ಎಂದು ಅಣುಕು ಶವ ಯಾತ್ರೆ ಮಾಡಿದ್ರು. ರೈತರೊಂದಿಗೆ ಪೊಲೀಸರು ಶವಯಾತ್ರೆ ನಿಲ್ಲಿಸುವಂತೆ ವಾಗ್ವಾದ ನಡೆಸಿದ್ರು. ವಾಗ್ವಾದ ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲೇ ಅಣಕು ಶವಕ್ಕೆ ಬೆಂಕಿ ಹಾಕಿ ರೈತರು ಆಕ್ರೋಶ ಹೊರಹಾಕಿದರು. ಬಳಿಕ ಜಿಲ್ಲಾಧಿಕಾರಿಯತ್ತ ಪ್ರತಿಭಟನಾ ಮೆರಣಿಗೆ ಮೂಲಕ ಬಂದ ರೈತರು, ಡಿಸಿ ಕಚೇರಿ ಬಳಿ ಹಾಕಿದ್ದ ಬ್ಯಾರಿಕೇಡ್‌ನ್ನು ತಳ್ಳಿ ಡಿಸಿ ಕಚೇರಿ ಮುತ್ತಿಗೆಗೆ ಯತ್ನಿಸಿದ್ರು. ಡಿಸಿ ಕಚೇರಿ ಆವರಣದಲ್ಲಿ ರೈತರು ಆಕ್ರೋಶ ಪಡುತ್ತಿದ್ದಂತೆ ಪೊಲೀಸರು ಡಿಸಿ ಕಚೇರಿಯ ಸುತ್ತ ಸುತ್ತುವರಿದ ಕಾರಣ ರೈತರು ಡಿಸಿ ಆವರಣದಲ್ಲಿ ಕೂತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ – ನ್ಯಾಯಧಿಕರಣ ರಚನೆಗೆ ಕೇಂದ್ರದ ಒಲವು

    Live Tv
    [brid partner=56869869 player=32851 video=960834 autoplay=true]

  • ರಸ್ತೆ ಗುಂಡಿಗೆ ಬಿದ್ದು ಭುಜ ಮುರಿದುಕೊಂಡ ಬೈಕ್ ಸವಾರ!

    ರಸ್ತೆ ಗುಂಡಿಗೆ ಬಿದ್ದು ಭುಜ ಮುರಿದುಕೊಂಡ ಬೈಕ್ ಸವಾರ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗುಂಡಿ ಗಂಡಾಂತರ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಬೈಕ್ (Bike) ಸವಾರನೊಬ್ಬ ರಸ್ತೆ ಗುಂಡಿಗೆ ಬಿದ್ದು ಕತ್ತು ಹಾಗೂ ಭುಜದಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಜೆಸಿ ನಗರದ ನಿವಾಸಿ 38 ವರ್ಷದ ಬಾಲಾಜಿಯವರು ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಯಶವಂತಪುರ ಕ್ಷೇತ್ರದ ಬಿಇಎಲ್ ಸರ್ಕಲ್ ಬಳಿ ಗುಂಡಿಗೆ (Potholes) ಬಿದ್ದಿದ್ದಾರೆ. ಪರಿಣಾಮ ಕುತ್ತ, ಭುಜದ ಭಾಗ, ಕಾಲಿಗೆ ತೀವ್ರ ನೋವು ಕಾಣಿಸಿಕೊಂಡಿದೆ. ಕಾಲಿಗೂ ಹೊಡೆತ ಬಿದ್ದ ಹಿನ್ನೆಲೆ ನಡೆದಾಡಲು ಸಾಧ್ಯವಾಗದೇ ವೀಲ್ ಚೇರ್ ನ ಮೂಲಕವೇ ಓಡಾಟ ನಡೆಸುತ್ತಿದ್ದಾರೆ.

    ಈ ಸಂಬಂಧ ಎಕ್ಸ್ ಕ್ಲೂಸಿವ್ ಆಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಾಲಾಜಿ, ನನ್ನ ಈ ಸ್ಥಿತಿಗೆ ಬಿಬಿಎಂಪಿ, ಸರ್ಕಾರನೇ ಕಾರಣ. ನನ್ನ ಸ್ಥಿತಿ ಯಾರಿಗೂ ಬಾರದಿರಲಿ, ಸರ್ಕಾರ ಕೂಡಲೇ ಗುಂಡಿಗಳನ್ನ ಮುಚ್ಚಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ

    Live Tv
    [brid partner=56869869 player=32851 video=960834 autoplay=true]

  • ಕಾಂತಾರ ಎಫೆಕ್ಟ್- ದೈವನರ್ತಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

    ಕಾಂತಾರ ಎಫೆಕ್ಟ್- ದೈವನರ್ತಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

    – ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತಾಡಬಾರದು

    ಬೆಂಗಳೂರು: ದೈವ ನರ್ತನ ಹಿಂದೂ ಸಂಸ್ಕ್ರತಿ (Hindu Culture) ಭಾಗ. ಇದು ನಮ್ಮ ಸಂಸ್ಕ್ರತಿ ಭಾಗ ಇದನ್ನು ಮತ್ತಷ್ಟು ಗಟ್ಟಿ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ದೈವನರ್ತಕರಿಗೆ ಪ್ರತಿ ತಿಂಗಳು ಮಾಶಾಸನ ನೀಡಲು ತೀರ್ಮಾನಿಸಿರುವುದಾಗಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ (Sunil Kumar) ಘೋಷಣೆ ಮಾಡಿದ್ದಾರೆ.

    ಭೂತಾರಾಧನೆ ಮಾಡುವ ದೈವನರ್ತಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಗಲಿದೆ ಎಂದು ಸಚಿವರು ಘೋಷಣೆ ಮಾಡಿದರು. ದೈವ ನರ್ತನ ಮಾಡುವವರಿಗೆ ಮಾಸಾಶನ ಕೊಡುವ ತೀರ್ಮಾನ ಮಾಡಿದ್ದೀವಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತೀ ತಿಂಗಳು 2 ಸಾವಿರ ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ. 60 ವರ್ಷ ತುಂಬಿದ ದೈವನರ್ತನ ಮಾಡುವವರಿಗೆ ಮಾಸಾಶನ ಸಿಗಲಿದೆ ಎಂದರು.

    ಭೂತಾರಾಧನೆ ಕುರಿತ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತಾಡಬಾರದು. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ (Bhtharadhane) ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗವಾಗಿದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ: ಚೇತನ್‌ಗೆ ಉಪೇಂದ್ರ ಟಾಂಗ್

    ಇದೇ ವೇಳೆ ರಾಮಮಂದಿರ (RamaMandira) ಸ್ಫೋಟಕ್ಕೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಚು ಆರೋಪ ವಿಚಾರದ ಕುರಿತು ಮಾತನಾಡಿದ ಅವರು, ತುಷ್ಟೀಕರಣದ ರಾಜಕಾರಣಕ್ಕೆ ಪಿಎಫ್‍ಐ ಅನ್ನು ದೇಶದಲ್ಲಿ ಬೆಂಬಲಿಸಲಾಗ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಇಂಥ ಸಂಘಟನೆಗಳನ್ನು ವಿರೋಧಿಸುವವರೆಗೂ ಇಂಥ ಶಕ್ತಿಗಳು ವಿಜೃಂಭಿಸುತ್ತಿರುತ್ತವೆ ಎಂದರು. ಇದನ್ನೂ ಓದಿ: ಮುಸ್ಲಿಮರು ರಾಮ ಮಂದಿರ ಧ್ವಂಸ ಮಾಡುವ ಕನಸನ್ನು ಕಾಣಬೇಡಿ: ಪ್ರಮೋದ್ ಮುತಾಲಿಕ್

    ಪಿಎಫ್‍ಐ ಅನ್ನು ನಿಷೇಧ ಮಾಡಿದ ಬಳಿಕ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ಪಿಎಫ್‍ಐ ಸಂಘಟನೆ ಭಾರತವನ್ನು ಇಸ್ಲಾಮೀಕರಣ ಮಾಡುವ ದೊಡ್ಡ ಸಂಚು ಮಾಡುತ್ತಿತ್ತು. ಇವತ್ತು ರಾಮಮಂದಿರವನ್ನು ಧ್ವಂಸ ಮಾಡುವ ಅಜೆಂಡಾ ಇಟ್ಕೊಂಡಿತ್ತು. ಈ ಅಜೆಂಡಾದ ಕಾರ್ಯತಂತ್ರವನ್ನು ಈಗ ಕೇಂದ್ರ ಸರ್ಕಾರ ವಿಫಲಗೊಳಿಸಿದೆ. ಇಡೀ ತನಿಖಾ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸ್ತೇನೆ. ಯಾವುದೇ ಕಾರಣಕ್ಕೂ ಭಾರತವನ್ನು ಇಸ್ಲಾಮೀಕರಣ ಮಾಡಲು ಬಿಡಲ್ಲ. ನಮ್ಮದು ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರವಾಗಿಯೇ ಇನ್ನಷ್ಟು ಗಟ್ಟಿ ಮಾಡ್ತೇವೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ನಮ್ಮದು ರೈತರ ಪರವಾದ ಸರ್ಕಾರ: ಜಗದೀಶ್ ಶೆಟ್ಟರ್

    ನಮ್ಮದು ರೈತರ ಪರವಾದ ಸರ್ಕಾರ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ನಮ್ಮ ಸರ್ಕಾರದ ಮುಖ್ಯ ಧ್ಯೇಯ ರೈತರ ಅಭಿವೃದ್ಧಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadeesh Shettar) ಹೇಳಿದ್ದಾರೆ.

    ವಾರ್ಡ್ ನಂ.35 ರ ಭೈರಿದೇವರಕೊಪ್ಪದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 8 ಕೋಟಿ ಅನುದಾನದಲ್ಲಿ, ಎರಡು ಸಣ್ಣ ಸೇತುವೆ ಒಳಗೊಂಡಂತೆ ಭೈರಿದೇವರಕೊಪ್ಪ – ಮಾರಡಗಿ, ಭೈರಿದೇವರಕೊಪ್ಪ – ಸೋಮಾಪುರ ಜಿಲ್ಲಾ ಮುಖ್ಯ ರಸ್ತೆ ಸುಧಾರಣಾ ಕಾಮಗಾರಿಗಳು ಹಾಗೂ ಭೈರಿದೇವರಕೊಪ್ಪ – ಸದಾಶಿವ ನಗರದ 24*7 ಕುಡಿಯುವ ನೀರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಸಮೀಕ್ಷೆ ಏನೇ ಹೇಳಿದ್ರೂ ಈ ಬಾರಿ JDSಗೆ ಅಧಿಕಾರ- HDK

    ರಸ್ತೆಗಳನ್ನು ಡಾಂಬರೀಕರಣ ಮಾಡುವುದರಿಂದ ಮನೆಯಿಂದ ಹೊಲಗಳಿಗೆ ಸರಾಗವಾಗಿ ಓಡಾಡಬಹುದು. ಅಲ್ಲದೇ ಬೆಳೆದ ಬೆಳೆಗಳನ್ನು ಸುಲಭವಾಗಿ ಸಾಗಿಸಬಹುದು. ರಸ್ತೆ (Road) ಗಳು ಅತಿಕ್ರಮಣವಾಗಿದ್ದರೆ ತೆರವುಗೊಳಿಸಿ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.ಇನ್ನೂ ನಮ್ಮ ಸರ್ಕಾರದ ರೈತರ ಪರವಾದ ಸರ್ಕಾರ ರೈತರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ನಾಳೆಯಿಂದ ಓಲಾ, ಊಬರ್ ಆಟೋ ಬಂದ್- ಸರ್ಕಾರದಿಂದಲೇ ಆಟೋ ದರ ನಿಗದಿ

    ನಾಳೆಯಿಂದ ಓಲಾ, ಊಬರ್ ಆಟೋ ಬಂದ್- ಸರ್ಕಾರದಿಂದಲೇ ಆಟೋ ದರ ನಿಗದಿ

    ಬೆಂಗಳೂರು: ಓಲಾ, ಊಬರ್ ಆ್ಯಪ್ ಆಧಾರಿತ ಆಟೋಟೋಪಕ್ಕೆ ಸರ್ಕಾರ ಮೂಗುದಾರ ಹಾಕಿದೆ. ಪ್ರಯಾಣಿಕರು, ಆಟೋ ಚಾಲಕರಿಂದ ಸುಲಿಗೆ ಮಾಡ್ತಿದ್ದ ಓಲಾ, ಊಬರ್ ಗೆ ಸರ್ಕಾರ ಕೊಂಚ ಬಿಸಿ ಮುಟ್ಟಿಸಿದೆ.

    ನಾಳೆಯಿಂದ ಓಲಾ (OLA), ಊಬರ್ ಆಟೋ ಓಡಾಟ ಬಂದ್ ಇರಲಿದೆ. ಓಲಾ, ಊಬರ್ ಆಧಾರಿತ ಆಟೋಗಳು ರಸ್ತೆಗಿಳಿದ್ರೆ ನಾಳೆಯಿಂದ ಭಾರೀ ಮೊತ್ತದ ದಂಡ ಬೀಳಲಿದೆ. ಆದರೆ ದಂಡದ ಹೊರೆ ಆಪ್ ಕಂಪನಿಗಳ ಮೇಲಿರಲಿದೆ. ಆ್ಯಪ್ ಆಧಾರಿತ ಆಟೋಗಳು ಕಂಡ್ರೆ ಕಂಪನಿಗೆ 5 ಸಾವಿರ ದಂಡ ಬೀಳಲಿದೆ. ಆಟೋ (uto) ಚಾಲಕರ ಮೇಲೆ ಯಾವುದೇ ಕಾರಣಕ್ಕೂ ದಂಡ ವಿಧಿಸಲ್ಲ. ಇದಕ್ಕಂತನೇ ಸಹಾಯವಾಣಿ ಕೂಡ ತೆರೆಯಲಾಗಿದೆ. 2021ರಲ್ಲೇ ಲೈಸನ್ಸ್ ರದ್ದಾಗಿದ್ದರೂ ಓಲಾ, ಊಬರ್ (Uber) ರೂಲ್ಸ್ ಬ್ರೇಕ್ ಮಾಡಿರೋದು ಸಾರಿಗೆ ಇಲಾಖೆ ಕಣ್ಣು ಕೆಂಪಾಗಿಸಿದೆ.

    ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ (Government), ಕೊನೆಗೂ ಆಟೋಗಳಿಗೆ ದರ ನಿಗದಿ ಮಾಡಿದೆ. 2 ಕಿ.ಮೀ 30ರೂ. ದರ ನಿಗದಿ ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ್ರೆ ಕ್ರಮ ಅಂತ ಸಾರಿಗೆ ಇಲಾಖೆ ಎಚ್ಚರಿಸಿದೆ. ಅಲ್ಲದೆ ಜಿಎಸ್‍ಟಿ ದರ ಕೂಡ ಸೇರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಲ್ಡಿಂಗ್ ಕುಸಿದು ಇಬ್ಬರ ಸಾವು

    ಇತ್ತ ಸಾರಿಗೆ ಇಲಾಖೆ ನಾಳೆಯಿಂದ ಆಪ್ ಆಧಾರಿತ ಆಟೋ ಸಂಚಾರ ಬಂದ್ ಎಂದಿದ್ದಾರೆ. ಆದರೆ ಸಾರಿಗೆ ಸಚಿವರು ಹೇಳಿದ್ದೇ ಬೇರೆ. ಆಟೋಗಳು ಬೇಕಾದರೆ ಓಡಾಡಲಿ, ಕಡಿಮೆ ದರದಲ್ಲಿ ಸೇವೆ ನೀಡಲಿ ಅಂತ ರಾಮುಲು (Sriramulu) ಹೇಳಿರೋದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಪ್ರಯಾಣಿಕರ ಬಳಿಯೂ ಸುಲಿಗೆ, ಚಾಲಕರ ಬಳಿಯೂ ಸುಲಿಗೆ ಮಾಡ್ತಿದ್ದ ಓಲಾ-ಊಬರ್ ಸಂಸ್ಥೆ ಆಟೋಟೋಪಕ್ಕೆ ಬ್ರೇಕ್ ಬಿದ್ದಿದೆ. ನಾಳೆ ಆಪ್ ಆಧಾರಿತ ಆಟೋಗಳು ರಸ್ತೆಗಿಳಿದ್ರೆ ದಂಡ ಮಾತ್ರ ಫಿಕ್ಸ್.

    Live Tv
    [brid partner=56869869 player=32851 video=960834 autoplay=true]