Tag: government

  • ಈಗ ಪರ್ಸಂಟೇಜ್ ಕಡಿಮೆ ಆಗಿದೆ, ಆದ್ರೆ ಎಷ್ಟಾಗಿದೆ ಗೊತ್ತಿಲ್ಲ- ಉಲ್ಟಾ ಹೊಡೆದ ಕೆಂಪಣ್ಣ

    ಈಗ ಪರ್ಸಂಟೇಜ್ ಕಡಿಮೆ ಆಗಿದೆ, ಆದ್ರೆ ಎಷ್ಟಾಗಿದೆ ಗೊತ್ತಿಲ್ಲ- ಉಲ್ಟಾ ಹೊಡೆದ ಕೆಂಪಣ್ಣ

    ಬೆಂಗಳೂರು: ಗುತ್ತಿಗೆದಾರರರಿಗೆ ಸರ್ಕಾರ 600 ಕೋಟಿ ರಿಲೀಸ್ ಮಾಡಿದ ಬೆನ್ನಲ್ಲೇ ಗುತ್ತಿಗೆ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಸುದ್ದಿಗೋಷ್ಠಿ ನಡೆಸುವ ಮೂಲಕ 40% ಕಮೀಷನ್ ಆರೋಪದಿಂದ ಉಲ್ಟಾ ಹೊಡೆದಿದ್ದಾರೆ.

    ಎಲ್ಲಾ ಬಾಕಿ ಬಿಲ್ ಕ್ಲಿಯರ್ ಮಾಡುವಂತೆ ಒತ್ತಾಯ ಮಾಡಿದ್ವಿ. ಹಿಂದಿನ ಅವಧಿಯಲ್ಲಿ ಅಷ್ಟೊಂದು ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಬಾಕಿ ಬಿಲ್ ಕ್ಲೀಯರ್ ಮಾಡುವ ಬಗ್ಗೆ ಸಿಎಂ, ಡಿಸಿಎಂ ಸಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ. ನಮ್ಮ ಪದಾಧಿಕಾರಿಗಳು ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಸರ್ಕಾರ 1054 ಮಂದಿ ಸಣ್ಣ ಗುತ್ತಿಗೆದಾರರಿಗೆ ಫುಲ್ ಕ್ಲೀಯರ್ ಮಾಡಿದೆ. ಒಂದು ಕೋಟಿ ಗುತ್ತಿಗೆದಾರರಿಗೆ ಬಿಲ್ ಕ್ಲೀಯರ್ ಮಾಡಿದೆ. ಒಟ್ಟು 600 ಕೋಟಿ ಈಗಾಗಲೇ ಸರ್ಕಾರ ಬಿಡುಗಡೆ ಮಾಡಿಕೊಟ್ಟಿದೆ. ಆದರೆ ಪ್ಯಾಕೇಜ್ ಗುತ್ತಿಗೆ ಪದ್ಧತಿ ರದ್ದಾಗಬೇಕು ಎನ್ನುವ ನಿಲುವು ಈಗಲೂ ಮುಂದುವರಿದಿದೆ ಎಂದರು.

    ಕಳೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಕಮಿಷನರ್ ಆರೋಪ ಮಾಡಿದ್ದ ಕೆಂಪಣ್ಣ, ಇದೀಗ ಕಮಿಷನ್ ತೆಗೆದುಕೊಂಡ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಸರ್ಕಾರಕ್ಕೆ ಯಾವುದೇ ಕ್ಲೀನ್ ಚಿಟ್ ಕೊಡಲ್ಲ ಎಂದು ಹೇಳುವ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ನಡೆ ಮುಂದುವರಿಸಿದ್ದಾರೆ.

    ಅಧಿಕಾರಿಗಳು 40% ಕಮೀಷನ್ ಕೇಳ್ತಾರೆ ಅಂತಾ ಕೆಂಪಣ್ಣ ಈ ಹಿಂದೆ ಹೇಳಿದ್ದರು. ಆದರೆ ಈಗ ಯಾವುದೇ ಕಮೀಷನ್ ಇಲ್ಲದೇ ಹಣ ಬಿಡುಗಡೆ ಆಗಿದೆ ಅಂತಿದ್ದಾರೆ. ಸಂಪೂರ್ಣ ಬಿಲ್ ಕ್ಲೀಯರ್ ಮಾಡಿಕೊಡುವ ಬಗ್ಗೆ ಡಿಸಿಎಂ ನಮಗೆ ಭರಸವೆ ಕೊಟ್ಟಿದ್ದಾರೆ. ಶೀಘ್ರವೇ ಎಲ್ಲಾ ಬಾಕಿ ಬಿಲ್ ಕ್ಲೀಯರ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮಗೆ ಇನ್ನೂ ಸಾವಿರಾರು ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿದೆ. ಅವೆಲ್ಲವನ್ನೂ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡುವ ವಿಶ್ವಾಸ ನಮಗಿದೆ ಎಂದರು.

    ಇದೇ ವೇಳೆ 600 ಕೋಟಿಯಲ್ಲಿ ಎಷ್ಟು ಪರ್ಸಂಟೇಜ್ ಕೊಟ್ಟಿರಿ? ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದು ನಯಾ ಪೈಸೆ ಕೊಡದೆ ಯಾವ ಬಿಲ್ ಕೂಡ ಪಾಸ್ ಆಗಲ್ಲ ಎಂದು ಹೇಲುವ ಮೂಲಕ ಪರೋಕ್ಷವಾಗಿ ಕಮಿಷನ್ ಆರೋಪ ಮುಂದುವರಿಸಿದರು.

    ಒಟ್ಟಿನಲ್ಲಿ ಈಗ ಪರ್ಸಂಟೇಜ್ ಕಡಿಮೆ ಆಗಿದೆ. ಆದರೆ ಎಷ್ಟಾಗಿದೆ ಗೊತ್ತಿಲ್ಲ. ಒಂದೊಂದೇ ಬಿಲ್ ಕ್ಲೀಯರ್ ಆಗುತ್ತಿದೆ, ಬಿಬಿಎಂಪಿಯದ್ದೂ ಆಗುತ್ತಿದೆ ಎಂದರು. ಕಾಂಗ್ರೆಸ್ ಸರ್ಕಾರವು ಸಣ್ಣ ಗುತ್ತಿಗೆದಾರರಿಗೆ 600 ಕೋಟಿ ಬಿಡುಗಡೆ ಮಾಡಿದೆ. ಹೀಗಾಗಿ ಸಿಎಂ, ಡಿಸಿಎಂಗೆ ನಮ್ಮ ನೋವು ಆಲಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳುವ ಮೂಲಕ ಕೇವಲ ನಾಲ್ಕೈದು ದಿನಕ್ಕೆ ಕೆಂಪಣ್ಣ ಉಲ್ಟಾ ಹೊಡೆದ್ರಾ ಎಂಬ ಪ್ರಶ್ನೆ ಎದ್ದಿದೆ.

  • ಸರ್ಕಾರಿ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಗಿ – ಅಹವಾಲು ಕೊಡಲು ಮುಗಿಬಿದ್ದ ಜನ

    ಸರ್ಕಾರಿ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಗಿ – ಅಹವಾಲು ಕೊಡಲು ಮುಗಿಬಿದ್ದ ಜನ

    ಮೈಸೂರು: ವರುಣಾ (Varuna) ಕ್ಷೇತ್ರದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಭಾಗಿಯಾಗಿದ್ದಾರೆ. ಸದ್ಯ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಅವರು ಸರ್ಕಾರಿ (Government) ಕಾರ್ಯಕ್ರಮ ಉದ್ಘಾಟಿಸಿದ್ದಾರೆ.

    ವರುಣಾ ಕ್ಷೇತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿದ್ದಾರೆ. ಆದರೆ ಕ್ಷೇತ್ರದ ತುಂಬಲ ಗ್ರಾಮದಲ್ಲಿ ನಡೆದ ನೂತನ ಹಾಲಿನ ಡೈರಿ ಮೇಲ್ಛಾವಣಿ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಮಾಜಿ ಶಾಸಕ ಯತೀಂದ್ರ ಅವರು ಪಾಲ್ಗೊಂಡಿದ್ದರು. ಬಳಿಕ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನೂತನ ಸಂಜೀವಿನಿ ಕಟ್ಟಡ ಉದ್ಘಾಟನೆಯಲ್ಲೂ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮುಖ ತೊಳೆಯಲು, ಬಟ್ಟೆ ಬದಲಿಸಲೂ ಅವಕಾಶ ಕೊಡಲಿಲ್ಲ: ಪೊಲೀಸರ ನಡೆಗೆ ಬಿಜೆಪಿ ಕಾರ್ಯಕರ್ತೆ ಆಕ್ರೋಶ

    ಕಾರ್ಯಕ್ರಮದಲ್ಲಿ ಭಾಗಿಯಾದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸೇಬಿನ ಹಾರ ಹಾಕಿ ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ. ಇದೇ ವೇಳೆ ಅವರಿಗೆ ಅಹವಾಲು ನೀಡಲು ಸಾರ್ವಜನಿಕರು ಮುಗಿಬಿದ್ದಿದ್ದರು. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ, ಮರ ಬೆಳೆಸೋದು ಕಡ್ಡಾಯ – ಆರೋಗ್ಯ ಇಲಾಖೆ ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋವಿಡ್ ಹಗರಣಗಳ ಬಗ್ಗೆ ಸರ್ಕಾರಕ್ಕೆ ಆರೋಗ್ಯ ಇಲಾಖೆ ವರದಿ ಸಲ್ಲಿಕೆ

    ಕೋವಿಡ್ ಹಗರಣಗಳ ಬಗ್ಗೆ ಸರ್ಕಾರಕ್ಕೆ ಆರೋಗ್ಯ ಇಲಾಖೆ ವರದಿ ಸಲ್ಲಿಕೆ

    ಬೆಂಗಳೂರು: ಕೋವಿಡ್ ಹಗರಣಗಳ ಬಗ್ಗೆ ತನಿಖೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಹಣಕಾಸು ವಿಭಾಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ಬಿಜೆಪಿ ಅವಧಿಯಲ್ಲಿ ಕೋವಿಡ್ (COVID 19) ವೇಳೆ ಎಷ್ಟು ವೈದ್ಯಕೀಯ ಸಲಕರಣೆ ಖರೀದಿ ಆಗಿತ್ತು, ಯಾವೆಲ್ಲ ಔಷಧಿ ಖರೀದಿ ಮಾಡಿದ್ರು ಅಂತಾ ವರದಿಯಲ್ಲಿ ತಿಳಿಸಲಾಗಿದೆ. ವಿಭಾಗವಾರು ಯಾವುದಕ್ಕೆ ಎಲ್ಲಾ ಹಣ ಖರ್ಚಾಗಿದೆ?. ಏನೆಲ್ಲಾ ಖರೀದಿ ಆಗಿದೆ ಎಂಬುದರ ಬಗ್ಗೆಯೂ ವಿವರಿಸಲಾಗಿದೆ. ಎನ್ ಹೆಚ್ ಎಂ, ಅಡ್ಮಿನ್ ವಿಭಾಗ, ಇಂಜಿನಿಯರಿಂಗ್ ವಿಭಾಗ, ಐಸಿಯು, ವೆಂಟಿಲೇಟರ್ ಖರೀದಿ ಸೇರಿದಂತೆ ವಿಭಾಗವಾರು ಪ್ರತ್ಯೇಕ ಪ್ರತ್ಯೇಕ ಬಿಲ್ ಗಳನ್ನ ಒಳಗೊಂಡ ವರದಿ ವರದಿ ಸಲ್ಲಿಕೆ ಮಾಡಲಾಗಿದೆ.

    ಕಳೆದ ಬಾರಿ ಆರೋಗ್ಯ ಇಲಾಖೆಯಲ್ಲಿ (Helth Department) ನಡೆದ ಸಭೆಯಲ್ಲಿ ಆಯುಕ್ತರು ಮೌಖಿಕವಾಗಿ ಮಾಹಿತಿ ನೀಡಿದ್ದರು. ಈ ವೇಳೆ ಮೌಖಿಕವಾಗಿ ಬೇಡ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ ಹಣಕಾಸು ವಿಭಾಗದಿಂದ ಆಡಿಟ್ ಮಾಡಿ ಕೋವಿಡ್ ಅವಧಿಯಲ್ಲಿ ಆಗಿರೋ ಖರ್ಚು ವೆಚ್ಚಗಳನ್ನ ಒಳಗೊಂಡ ಮಾಹಿತಿಯ ವರದಿ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: ವರ್ಗಾವಣೆ ಆರೋಪದ ಬೆನ್ನಲ್ಲೇ ಆಪ್ತರಿಗೆ ಸಿಎಂ ಸೂಚನೆ

    ಈಗಾಗಲೇ ರಾಜ್ಯ ಸರ್ಕಾರದಿಂದ ಕೊವಿಡ್ ಅವಧಿಯ ಹಗರಣಗಳ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದ್ದು, ಇದು ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಖಲೆ ಮೀರಿ ಗೋಧಿ ಉತ್ಪಾದನೆಯಾಗುತ್ತಿದ್ದರೂ ಬೆಲೆ ಏರಿಕೆ ಯಾಕೆ?

    ದಾಖಲೆ ಮೀರಿ ಗೋಧಿ ಉತ್ಪಾದನೆಯಾಗುತ್ತಿದ್ದರೂ ಬೆಲೆ ಏರಿಕೆ ಯಾಕೆ?

    ಕೇಂದ್ರವು 16 ವರ್ಷಗಳಲ್ಲೇ ಮೊದಲ ಬಾರಿಗೆ ಜೂನ್ 12ರಂದು ಗೋಧಿ (Wheat) ಮೇಲೆ ದಾಸ್ತಾನು ಮಿತಿಯನ್ನು ಹೇರಿದೆ. ಅಕ್ರಮ ದಾಸ್ತಾನು ತಡೆಯಲು ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

    ಏಪ್ರಿಲ್-ಜೂನ್ ತಿಂಗಳು ಗೋಧಿಗೆ ಪ್ರಮುಖ ಕೊಯ್ಲು ತಿಂಗಳಾಗಿದೆ. ದೇಶದಲ್ಲಿ ಗೋಧಿ ದಾಖಲೆಯ ಉತ್ಪಾದನೆ ಹೊಂದಿದ್ದರೂ ಇಂತಹ ಕ್ರಮಗಳನ್ನು ಏಕೆ ತೆಗೆದುಕೊಂಡಿದೆ ಎಂಬುದು ಜನತೆಯಲ್ಲಿ ಮೂಡಿರುವ ಪ್ರಶ್ನೆ.

    ಇದೀಗ ಮುಂದಿನ ವರ್ಷವೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಸರ್ಕಾರ ದೇಶದ ಪ್ರಮುಖ ಆಹಾರ ಧಾನ್ಯವಾಗಿರುವ ಅಕ್ಕಿ ಹಾಗೂ ಗೋಧಿಯ ಹಣದುಬ್ಬರದ ಬಗ್ಗೆ ಚಿಂತಿಸುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಸಿರಿಧಾನ್ಯಗಳ ಚಿಲ್ಲರೆ ಹಣದುಬ್ಬರ 12.65% ರಷ್ಟಿತ್ತು. ಮುಂದಿನ ಬೆಳೆ ಬರುವವರೆಗೆ ಎಂದರೆ 2024ರ ಮಾರ್ಚ್ ತಿಂಗಳ ವರೆಗೆ ಗೋಧಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

    2023-24ರಲ್ಲಿ ಗೋಧಿ ಬೇಡಿಕೆ, ಪೂರೈಕೆ ಎಷ್ಟು?
    2023 ಜುಲೈಯಿಂದ 2023 ಜೂನ್ ವರೆಗೆ ದೇಶದಲ್ಲಿ ಗೋಧಿ ಉತ್ಪಾದನೆ ದಾಖಲೆಯ 112.74 ಮೆಟ್ರಿಕ್ ಟನ್‌ನಷ್ಟು ಹೊಂದಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ಆದರೆ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ (RFMFI) ನಿಯೋಜಿಸಿದ ಖಾಸಗಿ ಸಂಸ್ಥೆ ಮಾರ್ಚ್ನಲ್ಲಿ ಅಕಾಲಿ ಮಳೆ ಹಾಗೂ ಆಲಿಕಲ್ಲು ಮಳೆಯ ಬಳಿಕ 1.35 ಮೀ.ನಷ್ಟು ಬೆಳೆ ನಷ್ಟಕ್ಕೆ ಕಾರಣವಾಗಿದ್ದು, ಉತ್ಪಾದನೆಯನ್ನು 102.89 ಮೆಟ್ರಿಕ್ ಟನ್ ಎಂದು ಅಂದಾಜಿಸಿದೆ.

    ನೀತಿ ಆಯೋಗದ ಅಂದಾಜಿನ ಪ್ರಕಾರ 2021-22ರಲ್ಲಿ 97.12 ಮೆಟ್ರಿಕ್ ಟನ್ ಗೋಧಿ ಬಳಕೆಯಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಗೋಧಿ ಬಳಕೆ 100 ಮೆಟ್ರಿಕ್ ಟನ್ ಅನ್ನು ಮೀರಬಹುದು ಎನ್ನಲಾಗಿದೆ. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆ (USDA) ದೇಶದ ಗೋಧಿ ಬಳಕೆಯನ್ನು 108.1 ಮೆಟ್ರಿಕ್ ಟನ್ ಎಂದು ನಿಗದಿಪಡಿಸಿದೆ. ಆದರೆ ದೇಶದಲ್ಲಿ ಹೆಚ್ಚುವರಿ ಗೋಧಿ ಇದೆಯೇ ಅಥವಾ ಕೊರತೆಯಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: LPG Price Hike: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 7 ರೂ. ಏರಿಕೆ

    ಗೋಧಿ ಬೆಲೆ:
    ಪ್ಯಾನ್ ಇಂಡಿಯಾ ಸರಾಸರಿ ಮಾರುಕಟ್ಟೆಯ ಬೆಲೆ ಕ್ವಿಂಟಲ್ ಗೋಧಿಗೆ ಮೇ 15ರಂದು 2,196 ರೂ., ಮೇ 22ರಂದು 2,225 ರೂ., ಮೇ 29ರಂದು 2,277, ಜೂನ್ 5ರಂದು 2,307, ಜೂನ್ 12ರಂದು 2,295 ಹಾಗೂ ಜೂನ್ 19ರಂದು 2,310ಕ್ಕೆ ಹೆಚ್ಚಳವಾಗಿದೆ.

    ಸಾಮಾನ್ಯವಾಗಿ ಬೇಡಿಕೆ ಹಾಗೂ ಪೂರೈಕೆಯ ಅಂಶದ ಮೇಲೆ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುತ್ತದೆ. 2022ರ ಮೇ ತಿಂಗಳಿನಲ್ಲಿ ದೇಶದಲ್ಲಿ ಗೋಧಿಯ ಸಂಗ್ರಹ ಕಡಿಮೆಯಿದ್ದು, ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಹಾಗೂ ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಧಾನ್ಯ ಹಂಚಿಕೆಯಲ್ಲಿ ಬದಲಾವಣೆಗೆ ಮುಂದಾಯಿತು. ಗೋಧಿಯ ಬದಲಿಗೆ ಅಕ್ಕಿಯನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಕೇಳಲಾಯಿತು. ಈ ಪ್ರಕ್ರಿಯೆಯಲ್ಲಿ ತಿಂಗಳಿಗೆ 7 ಲಕ್ಷ ಟನ್ ಗೋಧಿಯನ್ನು ಹಿಂತೆಗೆದುಕೊಳ್ಳಲಾಯಿತು.

    ಈ ಕ್ರಮದಿಂದ ಬೆಲೆಗಳ ಮೇಲೂ ಪರಿಣಾಮ ಬೀರಿದ್ದು, ಹೆಚ್ಚಿನ ಗ್ರಾಹಕರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಬದಲು ಮುಕ್ತ ಮಾರುಕಟ್ಟೆಯಿಂದ ಧಾನ್ಯವನ್ನು ಪಡೆಯಲು ಹೆಚ್ಚು ಆದ್ಯತೆ ನೀಡಿದರು. 2022ರಲ್ಲಿ ಸುಮಾರು 1.9 ಕೋಟಿ ಟನ್ ಸಂಗ್ರಹವಿತ್ತು. ಈ ವರ್ಷ 2.62 ಕೋಟಿ ಟನ್ ಗೋಧಿ ಸಂಗ್ರಹವಿದ್ದರೂ ಆ ಮಾರುಕಟ್ಟೆ ಸ್ಪಷ್ಟತೆಯನ್ನು ತಿಳಿಸಲಾಗಿಲ್ಲ. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!

    ಕೆಲ ವಾರಗಳಿಂದ ಗೋಧಿ ಮಾರುಕಟ್ಟೆಯ ಬೆಲೆ ಹೆಚ್ಚುತ್ತಲೇ ಬಂದಿದೆ. ಇದು ಮಾರ್ಚ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆಯಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ಗಮನಿಸಿ : 5 ವರ್ಷಗಳಿಂದ ಚಲನಚಿತ್ರ ಪ್ರಶಸ್ತಿ ಪ್ರದಾನವಿಲ್ಲ

    ಸಿಎಂ ಗಮನಿಸಿ : 5 ವರ್ಷಗಳಿಂದ ಚಲನಚಿತ್ರ ಪ್ರಶಸ್ತಿ ಪ್ರದಾನವಿಲ್ಲ

    ರ್ನಾಟಕ (Karnataka) ಸರ್ಕಾರ ಚಲನಚಿತ್ರಗಳಿಗೆ ನೀಡುವ ವಾರ್ಷಿಕ ಪ್ರಶಸ್ತಿಯನ್ನು (State Award) ಬರೋಬ್ಬರಿ ಐದು ವರ್ಷಗಳಿಂದ ಪ್ರದಾನ ಮಾಡಿಲ್ಲ. 2018ರ ಪ್ರಶಸ್ತಿ ಘೋಷಣೆಯಾಗಿದ್ದು, ಅದು ಕೋರ್ಟಿನಲ್ಲಿ ಇರುವುದರಿಂದ ಈವರೆಗೂ ಅದರತ್ತ ಯಾರೂ ಕಣ್ಣು ಕೂಡ ಹಾಯಿಸಿಲ್ಲ. 2019 ರಿಂದ 2022ರವರೆಗೆ ಈವರೆಗೂ ಪ್ರಶಸ್ತಿಗಳ ಆಯ್ಕೆ ಕೂಡ ಆಗಿಲ್ಲ. ಪ್ರಶಸ್ತಿ ಆಯ್ಕೆ ಕಮಿಟಿ ಕೂಡ ಮಾಡಿಲ್ಲ. 2022 ಸಾಲಿನ ಪ್ರಶಸ್ತಿಗಳಿಗೆ ಸಿನಿಮಾಗಳನ್ನು ಆಹ್ವಾನ ಕೂಡ ಮಾಡಿಲ್ಲ. ಇಷ್ಟರ ಮಟ್ಟಿಗೆ ಚಲನಚಿತ್ರ ರಂಗದ ಮೇಲೆ ಸರಕಾರ (Government) ದಿವ್ಯ ನಿರ್ಲಕ್ಷ್ಯ ತೋರಿದೆ.

    ಸಬ್ಸಿಡಿ ವಿಚಾರದಲ್ಲೂ ಹಾಗೆಯೇ ಆಗಿದೆ. ಹಲವು ವರ್ಷಗಳಿಂದ ಸಬ್ಸಿಡಿಯನ್ನೇ ನೀಡಿಲ್ಲ. ಸಿನಿಮಾಗಳ (Cinema) ಆಯ್ಕೆಗಾಗಿ ಕಮಿಟಿ ಕೂಡ ರಚನೆ ಮಾಡಿಲ್ಲ. ಮೂರ್ನಾಲ್ಕು ವರ್ಷಗಳಿಂದ ಸಬ್ಸಿಡಿ ಬಾಕಿಯಿದೆ. ಹಾಗಾಗಿ ನಿರ್ಮಾಪಕರು ಸಹಜವಾಗಿಯೇ ಸಂಕಷ್ಟದಲ್ಲಿದ್ದಾರೆ. ಹಿಂದಿನ ಸರಕಾರಕ್ಕೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಕೂಡ ಆಗಲಿಲ್ಲ ಎನ್ನುವ ಮಾತನ್ನು ಹಲವರು ಆಡುತ್ತಾರೆ. ಇದನ್ನೂ ಓದಿ:ಮೈಸೂರಿಗೆ ಬಂದಿಳಿದ ನಟ ಉಸ್ತಾದ್ ರಾಮ್ ಪೋತಿನೇನಿ

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ಬಿ.ಎಸ್.ಲಿಂಗದೇವರು, ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ ಸೇರಿದಂತೆ ಹಲವರು ನೇರವಾಗಿ ಸಚಿವರನ್ನು ಭೇಟಿ ಮಾಡಿ ಈ ಎರಡೂ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದರು. ಜೊತೆಗೆ ಚಿತ್ರನಗರಿ ಕುರಿತು ಪ್ರಸ್ತಾಪ ಮಾಡಿದ್ದರು. ಆದರೂ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿಲ್ಲ. ಸಬ್ಸಿಡಿ ಸಿಗಲಿಲ್ಲ. ಮೂರು ವರ್ಷಗಳ ಅವಧಿಯ ಸಿನಿಮಾಗಳನ್ನು ಆಹ್ವಾನಿಸಿದ್ದು ಬಿಟ್ಟರೆ, ಮುಂದಿನ ಹಂತದ ಯಾವ ಕಾರ್ಯಗಳು ನಡೆದಿಲ್ಲ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇದ್ದಾಗಲೇ ಏಪ್ರಿಲ್ 24 ರಂದು ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅವರು ಅಧಿಕಾರದಿಂದ ಕೆಳಗಿಳಿದ ನಂತರ ಆ ಕೆಲಸವೂ ಆಗಲೇ ಇಲ್ಲ. ಹೀಗಾಗಿ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅವರ ಸರಕಾರವಾದರೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಾ ನೋಡಬೇಕಿದೆ.

  • ವಿದ್ಯುತ್ ಬಿಲ್ ವಸೂಲಿಗೆ ಬಂದವರ ಮೇಲೆ ಚಪ್ಪಲಿಯಿಂದ ಹಲ್ಲೆ!

    ವಿದ್ಯುತ್ ಬಿಲ್ ವಸೂಲಿಗೆ ಬಂದವರ ಮೇಲೆ ಚಪ್ಪಲಿಯಿಂದ ಹಲ್ಲೆ!

    ಕೊಪ್ಪಳ: 200 ಯುನಿಟ್ ಕರೆಂಟ್ ಫ್ರೀ (Free Electricity) ಕೊಡ್ತೀವಿ ಅಂತ ಕಾಂಗ್ರೆಸ್ ಸರ್ಕಾರ ಹೇಳಿದ್ದು, ಜನ ಇದನ್ನೇ ನೆಪ ಮಾಡಿಕೊಂಡು ಕರೆಂಟ್ ಬಿಲ್ ಕಟ್ಟಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಅಂತೆಯೇ ಇದೀಗ ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಬಂದವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಕುಕನಪಳ್ಳಿ ಗ್ರಾಮದ ಚಂದ್ರಶೇಖರಯ್ಯ ಎಂಬವರು ಕಳೆದ ಆರು ತಿಂಗಳಿನಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಲೈನ್ ಮ್ಯಾನ್ ಮಂಜುನಾಥ ಬಿಲ್ ವಸೂಲಾತಿಗೆ ತೆರಳಿದ್ದರು. ಈ ವೇಳೆ ವಿದ್ಯುತ್ ಬಿಲ್ (Electricity Bill) ಕಟ್ಟಲ್ಲ, ಕರೆಂಟ್ ಫ್ರೀ ಎಂದು ಹೇಳಿದ್ದಾರೆ, ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಲಾಗಿದೆ.

    ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಮಂಜುನಾಥ್ ಅವರು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್‌ ಗ್ಯಾರಂಟಿ ನೆನಪಿಸಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು ಕೊಡದ ಅಜ್ಜಿ: ಕಂಗಾಲಾದ ಕಂಡಕ್ಟರ್

     

  • ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಿನಿಮಾ ನಾಯಕ ನಟ ಸ್ಪರ್ಧೆ

    ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಿನಿಮಾ ನಾಯಕ ನಟ ಸ್ಪರ್ಧೆ

    ಮುಂಬರುವ 2023ರ ವಿಧಾನಸಭಾ ಚುನಾವಣೆಗೆ (Politics) ಮತ್ತೊಬ್ಬ ಸಿನಿಮಾ ಸ್ಟಾರ್ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ನಟ ಹಾಲಿ ಶಾಸಕ ಮುನಿರತ್ನ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಸಿಕ್ಕಿರುವ ಮಾಹಿತಿ. ಈ ಸ್ಟಾರ್ ಎಂಟ್ರಿಯಿಂದಾಗಿ ಯಾವ ಪಕ್ಷಕ್ಕೆ ಲಾಭ ಯಾವ ಪಕ್ಷಕ್ಕೆ ನಷ್ಟ ಎನ್ನುವ ಕುರಿತು ಚರ್ಚೆ ಆಗುತ್ತಿದೆ.

    ಸ್ವತಂತ್ರ ಅಭ್ಯರ್ಥಿಯಾಗಿ ಈ ನಟ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಈ ಸ್ಟಾರ್ ನಟನ ಹಿಂದೆ ತೆರೆ ಮರೆಯಲ್ಲಿ ರಾಜಕೀಯ ದಿಗ್ಗಜರು ಇದ್ದಾರೆ ಎಂದು ಹೇಳಲಾಗುತ್ತಿದೆ. ಆ ಸ್ಟಾರ್ ನಟ ಬೇರೆ ಯಾರೂ ಅಲ್ಲ ಚೇತನ್ ಚಂದ್ರ (Chetan Chandra). ಬರೋಬ್ಬರಿ 15 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿರೋ ಚೇತನ್ ಚಂದ್ರ. ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ, ಜಾತ್ರೆ, ಹುಚ್ಚುಡುಗ್ರು, ಸಂಯುಕ್ತ 2, ಪ್ಲಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ಚೇತನ್ ಚಂದ್ರ ಅಭಿನಯದ ಇತ್ತೀಚಿನ ಚಿತ್ರ‌ ‘ಪ್ರಭುತ್ವ’ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇಂದಿನ ರಾಜಕೀಯ ಸ್ಥಿತಿ, ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡೋ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೆ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಇದ್ರಲ್ಲಿ ಚೇತನ್ ಕ್ರಾಂತಿಕಾರಿ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ವ್ಯವಸ್ಥೆ ಮತ್ತು ಮತದಾನದ ಬಗ್ಗೆ ಹೊಡೆದಿರೋ ಡೈಲಾಗ್ಸ್ ಸಿನಿಮಾದ ಹೈಲೈಟ್ ಆಗಿದೆ.

    ಸ್ಥಿತಿವಂತ ಹಿನ್ನೆಲೆ ಇರೋ ಚೇತನ್ ಚಂದ್ರಗೆ ಈ ಹಿಂದೆಯೇ ಕಾರ್ಪೋರೇಟರ್ ಎಲೆಕ್ಷನ್ಗೆ ಆಫರ್ ಬಂದಿತ್ತು. ಆದರೆ, ಮುಂದಾಲೋಚನೆ ದೊಡ್ಡದಿಟ್ಟುಕೊಂಡಿದ್ದ ಅವರು ಈ ಬಾರಿ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡೋ ಯೋಜನೆಯನ್ನು ಐದು ವರ್ಷದ ಹಿಂದೆಯೇ ರೂಪಿಸಿದ್ದರಂತೆ. ಅದಕ್ಕೆ ತಕ್ಕಂತೆ ಇದೀಗ ಅದು ಚಾಲ್ತಿಗೆ ಬಂದಿದೆ. ಅದಕ್ಕೆ ಕಾಕತಾಳೀಯ ಎಂಬಂತೆ ಈಗ  ಪ್ರಭುತ್ವ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ.

    ಎಲೆಕ್ಷನ್ಗೂ ಮೊದ್ಲೇ ಪ್ರಭುತ್ವ ಸಿನಿಮಾ ರಿಲೀಸ್ ಆಗೋದು ಕನ್ಫರ್ಮ್ ಆಗಿದ್ದು, ಈ ಸಿನಿಮಾ ಬಂದ್ಮೇಲೆ ಚೇತನ್ ಚಂದ್ರ ಸಿನಿಮಾ ನಸೀಬು ಏನಾಗುತ್ತೋ ಗೊತ್ತಿಲ್ಲ ಆದ್ರೆ ರಾಜಕೀಯವಾಗಿ ಹಣೆಬರಹ ಬದಲಾಗೋ ಎಲ್ಲಾ ಸೂಚನೆ ಸಿಕ್ತಿದೆ. ಇದಿಷ್ಟು ತೆರೆಮರೆಯಲ್ಲಿ‌ ಸಿಕ್ಕಿರೋ ಮಾಹಿತಿ ಅಧಿಕೃತವಾಗಿ ಸದ್ಯದಲ್ಲೇ ಚೇತನ್ ಚಂದ್ರ ಈ ವಿಚಾರವನ್ನ ಬಹಿರಂಗ ಪಡಿಸಲಿದ್ದಾರಂತೆ.

  • ಐವರು ಮಕ್ಕಳಿದ್ದರೂ, ಆಸ್ತಿಯೆಲ್ಲಾ UP ಸರ್ಕಾರದ ಹೆಸರಿಗೆ ಬರೆದ ವೃದ್ಧ

    ಐವರು ಮಕ್ಕಳಿದ್ದರೂ, ಆಸ್ತಿಯೆಲ್ಲಾ UP ಸರ್ಕಾರದ ಹೆಸರಿಗೆ ಬರೆದ ವೃದ್ಧ

    ಲಕ್ನೋ: ವೃದ್ಧನೊಬ್ಬ ತಮ್ಮ ಮಕ್ಕಳು ಕೈಬಿಟ್ಟಿದ್ದಕ್ಕೆ ಮನನೊಂದು 1.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು (Property) ಉತ್ತರ ಪ್ರದೇಶ (Uttar Pradesh) ಸರ್ಕಾರಕ್ಕೆ (Government) ವಿಲ್ ಮಾಡಿರುವ ವಿಚಿತ್ರ ಘಟನೆ ನಡೆದಿದೆ.

    ಮುಜಾಫರ್‌ನಗರದ ನಿವಾಸಿಯಾದ 85 ವರ್ಷದ ನಾಥು ಸಿಂಗ್ ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಬರೆದಿರುವ ವ್ಯಕ್ತಿ. ನಾಥು ಸಿಂಗ್ ಒಟ್ಟು 1.5 ಕೋಟಿ ಮೌಲ್ಯದ ಮನೆ ಹಾಗೂ ಜಮೀನನಲ್ಲಿ ತಮ್ಮ ಪತ್ನಿ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಜೊತೆಗೆ ಇವರಿಗೆ ಓರ್ವ ಪುತ್ರ ಸೇರಿ ಐವರು ಮಕ್ಕಳಿದ್ದಾರೆ. ನಾಥುಸಿಂಗ್ ಪುತ್ರ ಶಾಲಾ ಶಿಕ್ಷಕನಾಗಿ ಸಹರಾನ್‍ಪುರದಲ್ಲಿ ವಾಸವಾಗಿದ್ದ. ಉಳಿದ ನಾಲ್ವರು ಪುತ್ರಿಯರನ್ನು ಮದುವೆ ಮಾಡಿಕೊಡಲಾಗಿತ್ತು.

    ಇದಾದ ಬಳಿಕ ನಾಥುಸಿಂಗ್ ಅವರ ಪತ್ನಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಳು. ಅದಾದ ಕೆಲವೇ ದಿನಗಳಲ್ಲಿ ನಾಥುಸಿಂಗ್ ಐವರು ಮಕ್ಕಳಿದ್ದರೂ ಒಂಟಿ ಜೀವನ ನಡೆಸಲು ಪ್ರಾರಂಭಿಸಿದರು. ಈ ಒಂಟಿತನದಿಂದಾಗಿ ಬೇಸತ್ತು ಸುಮಾರು 7 ತಿಂಗಳ ಹಿಂದೆ ತಮ್ಮ ಗ್ರಾಮದಲ್ಲೇ ಇರುವ ವೃದ್ಧಾಶ್ರಮಕ್ಕೆ ಸೇರಿದರು.

    ಈ ವೇಳೆಯೂ ನಾಥುಸಿಂಗ್‍ನನ್ನು ಭೇಟಿ ಮಾಡಲು ಅವರ ಮಕ್ಕಳು ಯಾರು ಬಂದಿರಲಿಲ್ಲ. ಇದರಿಂದಾಗಿ ಬೇಸರಗೊಂಡ ನಾಥುಸಿಂಗ್ ತಮ್ಮ ಎಲ್ಲಾ ಆಸ್ತಿಯನ್ನು ರಾಜ್ಯ ಸರ್ಕಾರದ ಹೆಸರಿಗೆ ವಿಲ್ ಮಾಡಲು ನಿರ್ಧರಿಸಿದರು.

    ತಾವು ಯೋಚಿಸಿದಂತೆ ಇದೀಗ ಉತ್ತರಪ್ರದೇಶ ಸರ್ಕಾರಕ್ಕೆ ತಮ್ಮ ಸಮಸ್ತ ಆಸ್ತಿಯನ್ನು ವಿಲ್ ಮಾಡಿದ್ದು, ಮರಣದ ನಂತರ ಆ ಜಮೀನಿನಲ್ಲಿ ಶಾಲೆ ಹಾಗೂ ಆಸ್ಪತ್ರೆಯನ್ನು ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಲ್‍ನಲ್ಲಿ, ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕು. ಜೊತೆಗೆ ಅಂತಿಮ ವಿಧಿವಿಧಾನ ನಡೆಯುವಾಗ ಮಗ ಹಾಗೂ ನಾಲ್ವರು ಪುತ್ರಿಯರಿಗೆ ಪಾಲ್ಗೊಳ್ಳಲು ಬಿಟ್ಟುಕೊಳ್ಳಬಾರದು ಎಂದು ಬರೆದಿದ್ದಾರೆ. ಇದನ್ನೂ ಓದಿ: ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು

    ಈ ಬಗ್ಗೆ ಮಾತನಾಡಿದ ನಾಥುಸಿಂಗ್, ಈ ವಯಸ್ಸಿನಲ್ಲಿ ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು. ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಆದ್ದರಿಂದ ನಾನು ಆಸ್ತಿಯನ್ನು ವರ್ಗಾಯಿಸಲು ನನ್ನ ಮನಸ್ಸು ಮಾಡಿದೆ. ಈ ಎಲ್ಲ ಆಸ್ತಿಯೂ ನನ್ನ ಮರಣದ ನಂತರ ಸರ್ಕಾರಕ್ಕೆ ಸೇರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೀವನದಿ ಕಾವೇರಿ ತೀರ್ಥ ಪ್ರಸಾದ ಇನ್ಮುಂದೆ ಭಕ್ತರ ಮನೆ ಬಾಗಿಲಿಗೆ

  • ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ: ಸುಧಾಕರ್

    ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ: ಸುಧಾಕರ್

    ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಇನ್ನು ಮುಂದೆ ಚಿಕಿತ್ಸೆಗಾಗಿ ಗಂಟೆಗಟ್ಟಲೆ ಕಾಯುವ ವ್ಯವಸ್ಥೆ ಇರುವುದಿಲ್ಲ. ಇದಕ್ಕಾಗಿ ವಿಶೇಷ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Sudhakar) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಹರೀಶ್ ಕುಮಾರ್, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಗಂಟೆಗಟ್ಟಲೇ ಕಾಯುವ ಸ್ಥಿತಿ ಬಂದಿದೆ. ಸರಿಯಾದ ಮಾಹಿತಿ ಇಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಈ ವ್ಯವಸ್ಥೆ ಸರಿ ಮಾಡಬೇಕು ಎಂದರು.

     

    ಇದಕ್ಕೆ ಉತ್ತರ ನೀಡಿದ ಸಚಿವ ಸುಧಾಕರ್, ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ತುಂಬಾ ಸಮಯ ಕಾಯೋ ಅವಶ್ಯಕತೆ ಇಲ್ಲ. ಈಗ ಹೊಸ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ. QR ಕೋಡ್ ವ್ಯವಸ್ಥೆ ಜಾರಿ ಮಾಡಿದ್ದೇವೆ. ಸ್ಕಿಪ್ ದ ಕ್ಯೂ ಅಂತ ಕಾರ್ಯಕ್ರಮ ಮಾಡಿದ್ದೇವೆ. ಈ ಆಪ್ ನಲ್ಲಿ ಆಸ್ಪತ್ರೆಯಲ್ಲಿ ಎಷ್ಟು ಜನ ಇದ್ದಾರೆ, ಕ್ಯೂ ಎಷ್ಟು ಅಂತ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಉತ್ತರ ನೀಡಿದರು. ಇದನ್ನೂ ಓದಿ: ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ

    ಇದಲ್ಲದೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭ ಮಾಡಲಾಗಿದೆ. ಈಗಾಗಲೇ 19 ಜಿಲ್ಲೆಗಳಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭ ಮಾಡಲಾಗಿದೆ. ದಿನದ 24 ಗಂಟೆ 4 ಜನ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಮಾಹಿತಿ ಕೊಡುತ್ತಾರೆ ಎಂದು ಮಾಹಿತಿ ನೀಡಿದರು.

    ಆಯುಷ್ಮಾನ್ ಭಾರತ್ ‌ಮತ್ತು ರಾಜ್ಯದ ಹೆಲ್ತ್ ಕಾರ್ಡ್ ಒಟ್ಟಾಗಿ ಕಾರ್ಡ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. 4 ದಿನಗಳಲ್ಲಿ ಈಗಾಗಲೇ 1 ಕೋಟಿ 28 ಲಕ್ಷ ಕಾರ್ಡ್ ಕೊಡಲಾಗಿದೆ.ಒಟ್ಟು 4 ಕೋಟಿ ಕಾರ್ಡ್ ಕೊಡಬೇಕು. ಎಲ್ಲೇ ಹೋದರೂ ಈ ಕಾರ್ಡ್ ತೋರಿಸಿದರೆ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರಕ್ಕೆ ಮತ್ತೆ ಈದ್ಗಾ ವಿವಾದ ಟೆನ್ಷನ್- ಜ. 21ರೊಳಗೆ ನಿಲುವು ಪ್ರಕಟಿಸಲು ಡೆಡ್‍ಲೈನ್

    ಸರ್ಕಾರಕ್ಕೆ ಮತ್ತೆ ಈದ್ಗಾ ವಿವಾದ ಟೆನ್ಷನ್- ಜ. 21ರೊಳಗೆ ನಿಲುವು ಪ್ರಕಟಿಸಲು ಡೆಡ್‍ಲೈನ್

    ಬೆಂಗಳೂರು: ಗಣರಾಜ್ಯೋತ್ಸ (Republic Day) ವ ಸಮೀಪಿಸುತ್ತಾ ಇದ್ದಂತೆ ಚಾಮರಾಜಪೇಟಯ ಈದ್ಗಾ ಮೈದಾನ(Idgah Maidan) ದ ವಿವಾದ ಮತ್ತೆ ಭುಗಿಲೆದ್ದಿದೆ. ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಹಿಂದೂ ಸಂಘಟನೆಗಳು ಬಿಗಿಪಟ್ಟು ಹಿಡಿದಿದ್ದು, ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲು ಡೆಡ್ ಲೈನ್ ಕೊಟ್ಟಿವೆ.

    ಕಳೆದ ಒಂದು ವರ್ಷದಿಂದ ಬೆಂಗಳೂರಿನ ಚಾಮರಾಜಪೇಟೆ (Chamarajapete) ಯ ಈದ್ಗಾ ಮೈದಾನದ ವಿವಾದಿತ ಕೇಂದ್ರಬಿಂದುವಾಗಿದೆ.ಸ್ವಾತಂತ್ರ್ಯ ದಿನಾಚರಣೆಯ ಮಾದರಿಯಲ್ಲೇ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಒತ್ತಾಯ ಕೇಳಿ ಬಂದಿದೆ. ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ಸಿಗದೆ ನಿರಾಸೆಗೊಂಡಿರೋ ಹಿಂದೂಪರ ಸಂಘಟನೆಗಳು ಹಾಗೂ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವವನ್ನ ಆಚರಣೆ ಮಾಡ್ಲೇಬೇಕು ಅಂತ ಹೋರಾಟಕ್ಕೆ ಇಳಿದಿದ್ದಾರೆ. ಈಗಾಗ್ಲೇ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಬೇಕೆಂದು ಚಾಮರಾಜಪೇಟೆ ನಾಗರೀಕ ಒಕ್ಕೂಟ, ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಸಿಎಂ, ಕಂದಾಯ ಇಲಾಖೆಗೂ ಪತ್ರ ಕೊಟ್ಟಿದ್ದಾರೆ. ಆದರೂ ಸರ್ಕಾರದಿಂದ ಯಾವುದೇ ನಿಲುವು ಹೊರಬಿದ್ದಿಲ್ಲ.

    ಸರ್ಕಾರ 7 ದಿನಗಳೊಳಗೆ, ಜನವರಿ 21ರವೊಳಗೆ ತೀರ್ಮಾನ ಪ್ರಕಟಿಸದಿದ್ದರೆ ಜನವರಿ 26ರಂದು ಮೈದಾನಕ್ಕೆ ನುಗ್ಗಿ ತ್ರಿವರ್ಣ ಧ್ವಜ ಹಾರಿಸೋದಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಮನವಿ ಮಾಡಿದ್ರು ರೆಸ್ಪಾನ್ಸ್ ನೀಡದ ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅನುಮತಿ ಇದ್ರೂ ಓಕೆ, ಇಲ್ಲದೇ ಇದ್ರೂ ಓಕೆ ನಾವು ಗಣರಾಜೋತ್ಸವ ಆಚರಣೆ ಮಾಡ್ತೀವಿ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹೇಳಿದರು.

    ಸರ್ಕಾರ ಮೌನವಾಗಿರೋದ್ದಕ್ಕೆ ಚಾಮರಾಜಪೇಟೆ ನಾಗರೀಕ ಒಕ್ಕೂಟ ಅಷ್ಟೇ ಅಲ್ಲದೆ ಹಿಂದೂಪರ ಸಂಘಟನೆಗಳು ಗರಂ ಆಗಿವೆ. ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು. ಇಲ್ಲವಾದ್ರೆ, ಕಾನೂನು ರೀತಿ ಹೋರಾಟ ಮಾಡೋದಾಗಿ ಹಿಂದೂ ಜನಜಾಗೃತಿ ಸಮಿತಿ (ರೀಜನಲ್) ವಕ್ತಾರ ಮೋಹನ್ ಗೌಡ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಒಟ್ಟಿನಲ್ಲಿ ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಈದ್ಗಾ ಮೈದಾನ ವಿವಾದ ಮತ್ತೆ ಭುಗಿಲೆದ್ದಿದೆ. ಆದರೆ ಸರ್ಕಾರ ಗಣರಾಜ್ಯೋತ್ಸವಕ್ಕೆ ಅನುಮತಿ ಕೊಡುತ್ತೊ ಇಲ್ಲವೋ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k