ಚಿಕ್ಕೋಡಿ: ದೇಶವ್ಯಾಪಿ ರೈತರು ನೀಡಿರುವ ಭಾರತ್ ಬಂದ್‍ಗೆ ಬೆಂಬಲವಿಲ್ಲ, ಎಂದಿನಂತೆ ರಾಜ್ಯದ ಎಲ್ಲಕಡೆಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಾರಿಗೆ ಬಸ್‍ಗಳು ಸಂಚಾರ ನಡೆಸಲಿವೆ ಎಂದು ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಸಾರಿಗೆ ಇಲಾಖೆ, ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ, ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು. pic.twitter.com/pOR2GpVyCG
ಚಿಕ್ಕೋಡಿ ಪಟ್ಟಣದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಶೀಲಾನ್ಯಾಸ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಬೆಳೆಯುವ ಸಲುವಾಗಿ ಕಾಂಗ್ರೆಸ್ ಪಕ್ಷ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದು, ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ರೈತರು ನೀಡಿರುವ ಭಾರತ ಬಂದ್‍ಗೆ ಸಾರಿಗೆ ಇಲಾಖೆ ಮತ್ತು ಸರ್ಕಾರದಿಂದ ಬೆಂಬಲವಿಲ್ಲ. ರಾಜ್ಯದ ಎಲ್ಲ ಕಡೆಗೂ ಸಾರಿಗೆ ಬಸ್‍ಗಳು ಸಂಚಾರ ನಡೆಸಲಿವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಯಥಾಸ್ಥಿತಿಯಲ್ಲಿ ಬಸ್‍ಗಳನ್ನು ಆರಂಭಿಸಲಾಗುವುದು ಎಂದರು. ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ
ರೈತರ ಹೆಸರು ಇಟ್ಟುಕೊಂಡು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಸರ್ಕಾರ ಮತ್ತು ಸಾರಿಗೆ ಇಲಾಖೆಯಿಂದ ಯಾವುದೇ ಕಾರಣಕ್ಕೂ ರೈತರು ಕರೆ ನೀಡಿದ್ದ ಬಂದ್ ಬೆಂಬಲಕ್ಕೆ ಸಹಕಾರವಿಲ್ಲ. ಸೆಪ್ಟೆಂಬರ್ 27ರದಂದು ಸಾರ್ವಜನಿಕ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಮೋದಿ ಸರ್ಕಾರದ ರೈತರಪರವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ದೇಶ,ರಾಜ್ಯದಲ್ಲಿ ಮಾಡುತ್ತಿದ್ದಾರೆ. ಅಸಲಿ ರೈತರ ಬಿಜೆಪಿ ಜೊತೆಗೆ ಇದ್ದಾರೆ. ಬಿಳಿ ಬಟ್ಟೆ ಹಾಕಿ ರಾಜಕಾರಣ ಮಾಡುತ್ತಿರುವ ರೈತರು ನಿಜವಾದ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ಹುಬ್ಬಳ್ಳಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ನಡೆಯುತ್ತಿರುವ ಹೋರಾಟ ಇಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೇ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾಶಪ್ಪನವರ್, ಸಿಎಂ ಬೊಮ್ಮಾಯಿಯವರು ಮೀಸಲಾತಿ ನೀಡಿದರೆ ಅವರಿಗೂ ಗೌರವ, ನಮಗೂ ಗೌರವ. ಹೋರಾಟ ಬೆಂಗಳೂರು ತಲುಪುವ ಮುನ್ನ ಸರ್ಕಾರದಿಂದ ಸ್ಪಷ್ಟ ಉತ್ತರ ದೊರೆಯಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗುತ್ತದೆ ಎಂದು ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪರಿಂದ ನಿರಾಣಿಗೆ ಸಿಎಂ ಸ್ಥಾನ ಕೈತಪ್ಪಿದೆ, ಯತ್ನಾಳ್ ಬಾಹುಬಲಿ: ಜಯಮೃತ್ಯುಂಜಯ ಸ್ವಾಮೀಜಿ
ಸಮಾವೇಶಕ್ಕೂ ಮುನ್ನ ಸಮುದಾಯದ ಬಾಂಧವರು ಚೆನ್ನಮ್ಮ ವೃತ್ತದಿಂದ ಬೈಕ್ ರ‍್ಯಾಲಿ ನಡೆಸಿದರು. ಚೆನ್ನಮ್ಮನ ಪ್ರತಿಮೆಗೆ ಮಾರ್ಲಾಪಣೆ ಮಾಡಿ ರ‍್ಯಾಲಿ ಆರಂಭಿಸಿದರು. ಪಂಚಮಸಾಲಿ ಪೀಠದ ಜಯಮೃತ್ಯುಂಜಯ್ಯ ಸ್ವಾಮೀಜಿ. ಶಾಸಕ ಅರವಿಂದ ಬೆಲ್ಲದ್. ಮಾಜಿ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ರ‍್ಯಾಲಿ ನಡೆಯಿತು. ಈ ವೇಳೆ ಮಾತನಾಡಿದ ಜಯ ಮೃತ್ಯುಂಜಯ್ಯ ಸ್ವಾಮೀಜಿ, ಸಪ್ಟೆಂಬರ್ 15 ರೊಳಗೆ ಮೀಸಲಾತಿ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಈಗ ಕಾಲಾವಕಾಶ ಮೀರಿದೆ. ನಮ್ಮಹೋರಾಟ 31ನೇ ದಿನಕ್ಕೆ ಕಾಲಿರಿಸಿದೆ, ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ, ಸದನದಲ್ಲೂ ನಮಗೆ ಸರಿಯಾಗಿ ಉತ್ತರ ನೀಡಿಲ್ಲ, ನನ್ನ ಜೊತೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ, ಮೀಸಲಾತಿ ಸಿಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿ, ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ನಾನು ಸದನದ ಬಾವಿಯೊಳಗೆ ಇಳಿದು ಹೋರಾಟ ಮಾಡಿದ್ದೇವೆ, ನಮ್ಮ ಹೋರಾಟದ ವೇಳೆ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಸಿಎಂ ನಮಗೆ ನ್ಯಾಯ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಆಯೋಗದ ವರದಿ ಬೇಗ ತರಿಸಿಕೊಂಡು ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಗದ್ದೆಗೆ ಹೋಗೋ ನೆನಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಆರೋಪಿಗೆ ಜೀವವಾಧಿ ಶಿಕ್ಷೆ
ಬೆಂಗಳೂರು: ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ಘೋಷಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತಿಳಿಸಿದ್ದಾರೆ.
ಒಕ್ಕೂಟ ಸರ್ಕಾರವು ವಿವಾದಿತ ಕೃಷಿ ಕಾನೂನು ಜಾರಿಗೆ ತಂದು ಒಂದು ವರ್ಷವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ರೈತ ವಿರೋಧಿಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ರಾಜಧಾನಿ ದಿಲ್ಲಿಯ ಗಡಿಯಲ್ಲಿ ಪ್ರತಿಭಟನಾ ನಿರತವಾಗಿವೆ. ಲಕ್ಷಾಂತರ ಸಂಖ್ಯೆಯ ರೈತಾಪಿ ವರ್ಗಗಳು ಸುಮಾರು ಒಂದು ವರ್ಷದಿಂದ ವಿರೋಧ ಪ್ರದರ್ಶನ ನಡೆಸುತ್ತಿದ್ದರೂ, ಒಕ್ಕೂಟ ಸರ್ಕಾರವು ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ ಮತ್ತು ಪ್ರತಿಭಟನೆಯನ್ನು ದಮನಿಸುವ ಪಿತೂರಿಗಳನ್ನು ನಡೆಸುತ್ತಿದೆ. ಆದರೂ ದೃತಿಗೆಡದ ರೈತರು ಎಲ್ಲಾ ಸಂಕಷ್ಟಗಳನ್ನು ಎದುರಿಸಿಕೊಂಡು ಪ್ರತಿಭಟನೆಯನ್ನು ಮುಂದುವರಿಸಿರುವುದು ಆಶಾದಾಯಕವಾಗಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ
ಕಾರ್ಪೋರೇಟ್ ಕುಳಗಳಿಗಷ್ಟೇ ಅಪಾರ ಲಾಭ ತಂದು ಕೊಡುವ ಕರಾಳ ಕೃಷಿ ಕಾಯ್ದೆಗಳು ಕೇವಲ ರೈತರಿಗಷ್ಟೇ ಅಲ್ಲ, ಒಟ್ಟು ದೇಶಕ್ಕೆ ಮಾರಕವಾಗಿದೆ. ಈ ನಿಟ್ಟಿನಲ್ಲಿ, ದೇಶದ ಜೀವಾಳವಾಗಿರುವ ಕೃಷಿಕ ವರ್ಗವು ಮಳೆ ಬಿಸಿಲನ್ನು ಲೆಕ್ಕಿಸದೇ ಮುನ್ನಡೆಸುತ್ತಿರುವ ಹೋರಾಟದೊಂದಿಗೆ ಕೈಜೋಡಿಸುವುದು ಪ್ರತಿಯೋರ್ವ ನಾಗರಿಕನ ಹೊಣೆಗಾರಿಕೆಯಾಗಿರುತ್ತದೆ. ಒಕ್ಕೂಟ ಸರ್ಕಾರದ ಜನವಿರೋಧಿ, ಕೃಷಿಕ ವಿರೋಧಿ ನೀತಿಗಳ ವಿರುದ್ಧ ನಡೆಯುವ ರೈತರ ಎಲ್ಲಾ ರೀತಿಯ ಹೋರಾಟಗಳೊಂದಿಗೆ ಪಾಪ್ಯುಲರ್ ಫ್ರಂಟ್ ಐಕಮತ್ಯವನ್ನು ವ್ಯಕ್ತಪಡಿಸುತ್ತದೆ ಎಂದು ಯಾಸಿರ್ ಹಸನ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಏರಿಕೆ ಆಯ್ತು ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳು
ಬೆಂಗಳೂರು: ವಿಧಾನಸಭೆಯಲ್ಲಿ ನಿನ್ನೆ ಸರ್ಕಾರ ತಾರತುರಿಯಲ್ಲಿ ಚಾಣಕ್ಯ ವಿ.ವಿ ಬಿಲ್ ಪಾಸ್ ಮಾಡಿಕೊಂಡಿದೆ. ಸೆಸ್ ಎಂಬ ಸಂಸ್ಥೆ ಈ ಯೂನಿವರ್ಸಿಟಿ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಸ್ಥೆಯಲ್ಲಿ ಇರುವವರೆಲ್ಲರೂ ಆರ್‍ಎಸ್‍ಎಸ್‍ನವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಆರ್‌ಎಸ್‌ಎಸ್(RSS) ವಿರುದ್ಧ ಗುಡುಗಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಕಚೇರಿಯಲ್ಲಿ ಈ ಬಗ್ಗೆ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಚಾಣಕ್ಯ ಯೂನಿವರ್ಸಿಟಿಗೆ ಭೂಮಿ ನೀಡಿರುವುದು ಒಂದು ದೊಡ್ಡ ಹಗರಣ. ನಿಬಂಧನೆಗಳನ್ನು ಗಾಳಿಗೆ ತೂರಿ ಭೂಮಿ ನೀಡಲಾಗಿದೆ. ನಾನು ಚಾಣಕ್ಯ ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರು ಏನು ಅಂತ ನಿಮಗೆ ಗೊತ್ತು. ಚಾಣಕ್ಯ ಮನುವಾದಿ ಕುಟುಂಬಕ್ಕೆ ಸೇರಿದವರು. ಈ ಯೂನಿವರ್ಸಿಟಿ ಮನುವಾದಿ ಯುನಿವರ್ಸಿಟಿ. ಚತುರ್ವರ್ಣ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ಮುಂದಾಗಿದ್ದಾರೆ. ರೈತರಿಂದ ಜಮೀನು ಕಿತ್ತುಕೊಂಡು ಮನುವಾದಿಗಳಿಗೆ ಕಡಿಮೆ ಬೆಲೆಗೆ ಕೊಡುವ ಮೂಲಕ ಸರ್ಕಾರ ಲೂಟಿ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್
ಈ ವಿಧೇಯಕ ಮಂಡನೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಮಧ್ಯೆ ಸರ್ಕಾರ ಬಿಲ್ ಪಾಸ್ ಮಾಡಿಕೊಂಡಿತ್ತು. ಸರ್ಕಾರದ ಬಿಲ್ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತ್ತು. ಚಾಣಕ್ಯ ವಿವಿ ಬಿಲ್ ಧ್ವನಿ ಮತದಿಂದ ಪಾಸ್ ಮಾಡಿಕೊಂಡಿದ್ದಾರೆ. ಚರ್ಚೆಗೆ ಅವಕಾಶ ನೀಡದೇ ಪಾಸ್ ಮಾಡಿಕೊಂಡಿದ್ದಾರೆ. ಚಾಣಕ್ಯ ವಿವಿ ಮಾಡುತ್ತಿರುವುದು ಸೆಸ್ ಎಂಬ ಸಂಸ್ಥೆ (ಸೆಂಟರ್ ಫಾರ್ ಎಜುಕೇಶನ್ ಆ್ಯಂಡ್ ಸೋಶಿಯಲ್ ಸ್ಟಡಿ ಸಂಸ್ಥೆ) ಈ ಸಂಸ್ಥೆಯಲ್ಲಿ ಇರುವವರು ಎಲ್ಲರೂ ಆರ್‌ಎಸ್‌ಎಸ್‌ನವರು. ಶ್ರೀಧರ್, ದೀವಾಕರ್ ಶಿವಕುಮಾರ್, ರಾಜೇಂದ್ರ ಸೇರಿದಂತೆ ಅನೇಕರಿದ್ದಾರೆ. ಯಾರು ಕೂಡ ಎಜುಕೇಶನ್ ಸಂಸ್ಥೆ ನಡೆಸುತ್ತಿಲ್ಲ. ಈ ಸೆಸ್ ಸಂಸ್ಥೆಗೆ ಬಿಜೆಪಿ ಸರ್ಕಾರ 2021ರ ಏಪ್ರಿಲ್ 26ರಂದು ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ಕೆಐಡಿಬಿಗೆ ಸೇರಿದ ಜಮೀನು, ಏರೋಸ್ಪೇಸ್ ಮಾಡೋಕೆ ಮಿಸಲಿಟ್ಟ ಜಮೀನು ನೀಡಲು ನಿರ್ಧರಿಸಿದೆ. ದೇವನಹಳ್ಳಿ ಹತ್ರ ಜಮೀನು ಇದೆ. 116 ಎಕರೆ ಜಮೀನನ್ನು ಸರ್ಕಾರ ಸೆಸ್ ಸಂಸ್ಥೆಗೆ ಕೊಟ್ಟಿದೆ ಎಂದು ಆರೋಪಿಸಿದರು. ಇದನ್ನೂ ಓದಿ: 7.5 ಲಕ್ಷ ಕಿ.ಮೀ. ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ: ಶ್ರೀರಾಮುಲು
ರೈತರಿಗೆ ಒಂದು ಕೋಟಿ ಐವತ್ತುಲಕ್ಷ ರೂಪಾಯಿ ಒಂದು ಎಕರೆಗೆ ಪರಿಹಾರ ಕೊಟ್ಟಿದ್ದಾರೆ. ಸೆಸ್ ಸಂಸ್ಥೆಗೆ ಕೇವಲ ಐವತ್ತು ಕೋಟಿಗೆ ಕೊಟ್ಟಿದ್ದಾರೆ. ಸರ್ಕಾರ ರೈತರಿಗೆ 175 ಕೋಟಿ ಪರಿಹಾರ ಕೊಟ್ಟಿದೆ. ಖರೀದಿ ಬಳಿಕ ಭೂಮಿ ಬೆಲೆ ಜಾಸ್ತಿ ಆಗುತ್ತಿದ್ದು, ಇದೀಗ ಈ ಭೂಮಿ ಬೆಲೆ 300 ರಿಂದ 400 ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ. ಆದರೆ ಸರ್ಕಾರ ಆರ್‌ಎಸ್‌ಎಸ್‌ಗೆ ಸೇರಿದವರಿಗೆ ಬಳುವಳಿಯಾಗಿ ಕೊಟ್ಟಿದೆ. ಇದೊಂದು ದೊಡ್ಡ ಹಗರಣ ಅವರಿಗೆ ಎಜುಕೇಷನ್ ಸಂಸ್ಥೆಗಳು ಇದ್ದು, ಈಗ ನಿಯಮಾವಳಿ ಪ್ರಕಾರ ಮಾಡಿದ್ದರೆ, ನಮ್ಮ ತಕರಾರು ಇಲ್ಲ. ಆದರೆ ನಿಬಂಧನೆಗಳನ್ನು ಗಾಳಿಗೆ ತೂರಿ ಭೂಮಿ ಕೊಟ್ಟಿದ್ದಾರೆ. ಜಮೀನು ಈಗಿನ ಬೆಲೆ ನೋಡಿ ಜಮೀನು ಕೊಡಬೇಕಿತ್ತು. ಕೊರೊನಾ ಸಂದರ್ಭದಲ್ಲಿ ಆತುರವಾಗಿ ಕೊಟ್ಟಿದ್ದಾರೆ. ಇದು ಮನುವಾದಿಗಳ ವಿಶ್ವ ವಿದ್ಯಾಲಯ ಆಗುತ್ತದೆ ಹಾಗಾಗಿ ಯಾವುದೇ ಚರ್ಚೆಯಿಲ್ಲದೆ ಭೂಮಿ ಕೊಟ್ಟಿದ್ದಾರೆ. ಸ್ಪೀಕರ್ ಬಿಲ್ ಪಾಸ್ ಮಾಡಿದ್ದಾರೆ. ಇನ್ನೂ ಹಲವು ಬಿಲ್ ಇತ್ತು ಅದನ್ನು ಬಿಟ್ಟು ಈ ಬಿಲ್ ಪಾಸ್ ಮಾಡಿದ್ದಾರೆ. ಸ್ಪೀಕರ್ ಯಾವುದೇ ರಾಜಕೀಯ ಚಟುವಟಿಕೆಗೆ ಸೇರಿದವರಲ್ಲ. ಒಂದು ಪಕ್ಷದ ಪರವಾಗಿ ನಡೆದು ಕೊಳ್ಳಬಾರದು ಎಂದು ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಭೂಮಿ ಕೊಟ್ಟು ಸರ್ಕಾರ ಲೂಟಿ ಮಾಡಿದೆ. ಬಿಜೆಪಿ ಸ್ವಜನ ಪಕ್ಷಪಾತ ಮಾಡಿದೆ. ಕೂಡಲೇ ಸರ್ಕಾರ ಬಿಲ್ ರದ್ದು ಮಾಡಬೇಕು. ಕೊರೊನಾ ಎಂದು ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಬಿಲ್ ಪಾಸ್ ಮಾಡಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ತೀರ್ವವಾಗಿ ವಿರೋಧಿಸುತ್ತದೆ. ಚರ್ಚೆಗೆ ಅವಕಾಶ ಕೊಡದೆ ಪಾಸ್ ಮಾಡಿದ್ದಾರೆ. ಸ್ಪೀಕರ್ ಗೆ ನಾನು ಪರಿಪರಿಯಾಗಿ ಬೇಡಿಕೊಂಡೆ ಚರ್ಚೆಗೆ ಅವಕಾಶವನ್ನು ಕೊಡಿ ಎಂದು ಇದೇನು ಜನರಿಗೆ ಸದ್ಯಕ್ಕೆ ಅವಶ್ಯಕತೆ ಇತ್ತಾ? ನಾವು ಲೀಗಲ್ ಆಗಿ ಕೂಡ ಫೈಟ್ ಮಾಡುತ್ತೇವೆ. ಪಕ್ಷದ ವತಿಯಿಂತ ಹೋರಾಟವನ್ನೂ ನಡೆಸುತ್ತೇವೆ ಎಂದರು.
ಬೆಳಗಾವಿ: ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ಚರ್ಚೆಗೆ ಅವಕಾಶ ನೀಡದೇ ಜಾರಿಗೊಳಿಸಿರುವುದು ಸರಿಯಲ್ಲ. ಇದರಲ್ಲಿ ಸಂಘ ಪರಿವಾರದವರ ಕುತಂತ್ರ ಇದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಕೋವಿಡ್ ವೇಳೆಯಲ್ಲಿ ಕಾರ್ಮಿಕರಿಗೆ ನೀಡಬೇಕಿದ್ದ ಫುಡ್ ಕಿಟ್‍ನ್ನು ಸಂಗ್ರಹಿಸಿಟ್ಟಿದ್ದ ಬಿಜೆಪಿಯವರ ನಡೆ ಕುರಿತಂತೆ ಮಾತನಾಡಿದ ಅವರು ಫುಡ್‍ಕಿಟ್‍ಗಳನ್ನು ಬಡವರಿಗೆ ನೀಡದೇ ಏಕೆ ಸಂಗ್ರಹಿಸಿಟ್ಟಿದ್ದರು ಎಂಬದನ್ನು ಜನತೆಗೆ ತಿಳಿಸಿ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯವರು ಗೂಂಡಾಗಿರಿ ಮಾಡಿದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ನವದೆಹಲಿ: ಸ್ವಪಕ್ಷದ ಬಗ್ಗೆಯೇ ಆಗಾಗ ಚಾಟಿ ಬೀಸುತ್ತಾ ಕೆಲವು ಸಲಹೆಗಳನ್ನು ನೀಡುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಇದೀಗ ಪ್ರಧಾನಿ ಮೋದಿ ಅವರಿಗೆ ವ್ಯಂಗ್ಯವಾಡಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಕೆಲವು ದಿನಗಳಿಂದ ನನಗೆ ಅಂಗಡಿಗಳನ್ನು ಇಟ್ಟುಕೊಂಡಿರುವವರು ಫೋನ್ ಮಾಡಿ ಸದ್ಯ ನಿರ್ಮಾಣವಾಗಿರೋ ಆರ್ಥಿಕ ಪರಿಸ್ಥಿತಿಯಿಂದ ಪರಿಹಾರ ಪಡೆಯಲು ಮೋದಿಗೆ ಕೆಲವು ಸೂಚನೆ ನೀಡಿ ಎಂದು ಹೇಳುತ್ತಾರೆ. ಅವರಿಗೆ ನಾನು ಕುದುರೆಯನ್ನ ನೀರಿರುವಲ್ಲಿಗೆ ಕರೆದೊಯ್ಯಬಹುದು. ಆದರೆ ನೀರು ಕುಡಿಯುವುದು ಹೇಗೆ? ಎಂದು ಹೇಳಿದ್ದೇನೆ. ನಾನು ಮೋದಿಗೆ 12 ಪತ್ರಗಳನ್ನು ಬರೆದಿದ್ದೇನೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Nowadays I get phone calls even from shop keepers asking me to suggest to Modi how to get out the current economic mess. I told them a horse can be taken to water but how to make it drink? I have written 12 letters to Modi on how to fix the economy but only acknowledged no action
ನಿನ್ನೆ ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರಿಲಾನ್ಸ್ ಪೊಲಿಟಿಶಿಯನ್(ಸ್ವತಂತ್ರ ರಾಜಕಾರಣಿ) ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿಯವರು ಖಾರವಾಗಿ ತಿರುಗೇಟು ನೀಡಿದ್ದರು. ಇದನ್ನೂ ಓದಿ:ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ
ಬೊಮ್ಮಾಯಿ ಹೇಳಿದ್ದೇನು?
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಸೆಪ್ಟೆಂಬರ್ 15ರಂದು ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಬ್ರಮಣಿಯನ್ ಸ್ವಾಮಿಯವರ ಟ್ವೀಟ್ ಕುರಿತು ಉಲ್ಲೇಖಿಸಿ ಮಾತನಾಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ, ಸುಬ್ರಮಣಿಯನ್ ಸ್ವಾಮಿಯವರ ಬಗ್ಗೆ ನಿಮಗೆ ಗೊತ್ತಿದೆ. ಅವರು ಯಾವುದೇ ಪಕ್ಷದಲ್ಲಿರಲಿ ಸ್ವತಂತ್ರ ರಾಜಕಾರಣಿ ಇದ್ದಂಗೆ. ಅವರಿಗೆ ಏನು ಮನಸ್ಸಿಗೆ ಬರುತ್ತದೋ ಅದನ್ನು ಹೇಳುತ್ತಾರೆ. ಅವರೊಬ್ಬರ ಸ್ವತಂತ್ರ ರಾಜಕಾರಣಿಯಾಗಿ ಅವರದ್ದೇಯಾದ ವಿಶ್ಲೇಷಣೆಯಲ್ಲಿ ಹೇಳುತ್ತಿರುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ನಾನು ಯಾರ ಬೂಟೂ ನೆಕ್ಕಿಲ್ಲ – ಬೊಮ್ಮಾಯಿಗೆ ಸುಬ್ರಮಣಿಯನ್ ಸ್ವಾಮಿ ತಿರುಗೇಟು
ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸುಬ್ರಮಣಿಯನ್ ಸ್ವಾಮಿ ಒಬ್ಬ ಸ್ವತಂತ್ರ ರಾಜಕಾರಣಿ ಎಂದು ಹೇಳಿದ್ದಾರೆ. ನಾನು 6 ಬಾರಿ ಸಂಸದನಾಗಿದ್ದೇನೆ. ಎರಡು ಬಾರಿ ಸಚಿವನಾಗಿದ್ದೇನೆ. ಆದರೆ ಯಾರ ಬೂಟನ್ನು ನೆಕ್ಕಿಲ್ಲ. ಪ್ರಜಾಪ್ರಭುತ್ವಕ್ಕೆ ಸತ್ಯ ಹೇಳುವುದು ಅನಿವಾರ್ಯ ಎಂದು ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದರು.
ಕಾಬೂಲ್: ತಾಲಿಬಾನ್ ಸರ್ಕಾರ ಮಹಿಳಾ ಸಚಿವಾಲಯವನ್ನೇ ತೆಗೆದು ಹಾಕಿದ್ದು, ಸದ್ಗುಣ ಸಚಿವಾಲಯ ಎಂದು ಬದಲಿಸಿದೆ. ಈ ಮೂಲಕ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಭರವಸೆಗೆ ವಿರುದ್ಧವಾಗಿ ವರ್ತಿಸುತ್ತಿದೆ.
A major setback for 17 million women of Afghanistan : Ministry of Women’s Affairs with 1000 employees erased, replaced by Taliban Ministry of Vice & Virtue (moral policing) pic.twitter.com/n4ay52LTam
ದೇಶದ ಮಹಿಳಾ ಸಚಿವಾಲಯವನ್ನು ತಾಲಿಬಾನ್‍ನ ನೈತಿಕ ಪೊಲೀಸ್‍ಗೆ ಬದಲಿಸುವುದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಅಲ್ಲದೆ ಇಲಾಖೆಯ ಮಹಿಳಾ ಉದ್ಯೋಗಿಗಳನ್ನು ಕಟ್ಟಡದಿಂದ ಹೊರಗೆ ಹಾಕಲಾಗಿದೆ. ಮಹಿಳಾ ಸಚಿವಾಲಯವನ್ನು ಪ್ರಾರ್ಥನೆ, ಮಾರ್ಗದರ್ಶನ ಹಾಗೂ ಸದ್ಗುಣಗಳ ಪ್ರಚಾರ, ದುರಾಚಾರ ತಡೆ ಸಚಿವಾಲಯ ಎಂದು ಬದಲಿಸಲಾಗಿದೆ. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ
ಮಹಿಳೆಯರು ಕೆಲಸ ಮಾಡಲು ಅವಕಾಶ ನಿಡುವುದಿಲ್ಲ ಎಂದು ತಾಲಿಬಾನ್ ಈಗಾಗಲೇ ಘೋಷಿಸಿದೆ. ಆದರೆ ಶಿಕ್ಷಣ ಪಡೆಯಬಹುದು ಎಂದು ಹೇಳಿದೆ. ಹೀಗಾಗಿ ಇದೀಗ ಮಹಿಳಾ ಸಚಿವಾಲಯದ ಉದ್ಯೋಗಿಗಳನ್ನು ಸಹ ಕಚೇರಿಯಿಂದ ಹೊರಗೆ ಹಾಕಲಾಗಿದೆ. ಮಹಿಳೆಯರು ಕೆಲಸ ಮಾಡುವುದನ್ನು ಅನುಮತಿಸುತ್ತಿಲ್ಲ. ಮಹಿಳೆಯರು ಕೆಲಸಕ್ಕೆ ತೆರಳಲು ಪ್ರಯತ್ನಿಸಿದಾಗ ವಾಪಸ್ ಮನೆಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ತಾಲಿಬಾನ್ ಸರ್ಕಾರ ವಿರುದ್ಧ ಸಿಡಿದ ಅಫ್ಘಾನ್ ಮಹಿಳೆಯರು
ಮಹಿಳೆಯರು ಕೆಲಸಕ್ಕಾಗಿ ಕಚೇರಿಗೆ ತೆರಳುವುಕ್ಕೆ ನಿರ್ಬಂಧ ವಿಧಿಸಿದ ಬಳಿಕ ಸಚಿವಾಲಯದ ಬಹುತೇಕ ಮಹಿಳಾ ಉದ್ಯೋಗಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನಾನೊಬ್ಬಳೇ ಕೆಲಸ ಮಾಡುವುದು, ಯಾವುದೇ ಸಚಿವಾಲಯದಲ್ಲಿ ಕೆಲಸವಿಲ್ಲದಿದ್ದಾಗ ಅಫ್ಘಾನ್ ಮಹಿಳೆಯರು ಏನು ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ಅನಧಿಕೃತ ದೇಗುಲ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ಬೃಹನ್ನಾಟಕ ಬಟಾಬಯಲಾಗಿದೆ. ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರವೇ ಆದೇಶ ನೀಡಿರುವ ವಿಚಾರ ಬಹಿರಂಗಗೊಂಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜುಲೈ 1ರಂದೇ ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ ತುರ್ತು ಆದೇಶ ಹೊರಡಿಸಿದ್ದಾರೆ. 2009ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪಾಲಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಮುಂದಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರವೇ ಡಿಸಿಗಳು ತರಾತುರಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅದರ ಒಂದು ಭಾಗವೇ ಕಳೆದ ವಾರ ನಂಜನಗೂಡಿನ ಮಹಾದೇವಮ್ಮ ದೇವಾಲಯ ಧ್ವಂಸ ಪ್ರಕರಣ. ಆದರೆ ದೇಗುಲ ತೆರವಿಗೆ ಹಿಂದೂ ಸಂಘಟನೆಗಳು, ಸ್ವಪಕ್ಷೀಯ ನಾಯಕರು, ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ತಮಗೆ ಏನು ಗೊತ್ತಿಲ್ಲ ಎಂಬಂತೆ ರಾಜ್ಯ ಸರ್ಕಾರ ವರ್ತಿಸಿದೆ. ಇದನ್ನೂ ಓದಿ: ಸೆ.17ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ
ಡಿಸಿಗಳಿಗೆ ಸಿಎಸ್ ಪತ್ರದಲ್ಲಿ ಏನಿದೆ..?
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ 2021ರ ಜುಲೈ 1ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. 2009ರ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ 2020ರ ಡಿಸೆಂಬರ್ 14ರಂದು ಹೈಕೋರ್ಟ್ ನಿರ್ದೇಶನ ನೀಡಿದೆ. ನಿಮ್ಮ ವ್ಯಾಪ್ತಿಯಲ್ಲಿ 2009ರ ಸೆ.29 ರ ನಂತರ ನಿರ್ಮಾಣವಾಗಿರುವ ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಪಟ್ಟಿ ಮಾಡಿ ಎಂದಿದ್ದಾರೆ. ದೇಗುಲ/ಮಸೀದಿ/ಚರ್ಚ್.. ಇತರೆ ಮಂದಿರಗಳ ಧ್ವಂಸ/ತೆರವು/ಸ್ಥಳಾಂತರ/ಅಕ್ರಮ ಸಕ್ರಮಕ್ಕೆ ಕ್ರಮ ತೆಗೆದುಕೊಳ್ಳಿ. ಜುಲೈ 15ರಿಂದ ಪ್ರತಿ ತಾಲೂಕಿನಲ್ಲಿ ಪ್ರತಿವಾರ ಕನಿಷ್ಠ 1 ಅನಧಿಕೃತ ಮಂದಿರ ನೆಲಸಮ ಮಾಡಲು ಯೋಜನೆ ರೂಪಿಸಿ. ಜುಲೈ 15ರಿಂದ ನಗರದಲ್ಲಿ ವಲಯವಾರು ಕನಿಷ್ಠ ವಾರಕ್ಕೆ 1ರಂತೆ ಅನಧಿಕೃತ ಪ್ರಾರ್ಥನಾ ಮಂದಿರ ತೆರವು ಮಾಡಿ. ಪ್ರತಿ ತಿಂಗಳು ರಾಜ್ಯ ಸರ್ಕಾರಕ್ಕೆ ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವಿನ ಕುರಿತು ವರದಿ ನೀಡಿ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
2009ರ ತೀರ್ಪಿನಲ್ಲಿ ಸುಪ್ರೀಂ ಏನು ಹೇಳಿತ್ತು..?
ರಸ್ತೆ, ಫುಟ್‍ಪಾತ್, ಪಾರ್ಕ್‍ಗಳಲ್ಲಿನ ಅನಧಿಕೃತ ಪ್ರಾರ್ಥನಾ ಮಂದಿರ ಗುರುತಿಸಿ. ಮೊದಲ ಆದ್ಯತೆಯಾಗಿ ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಸಕ್ರಮ ಮಾಡಿ. ಸಕ್ರಮ ಮಾಡಲು ಸಾಧ್ಯವಾಗದಿದ್ದರೇ ಪ್ರಾರ್ಥನಾ ಮಂದಿರಗಳನ್ನು ಸ್ಥಳಾಂತರಿಸಿ. ಸಕ್ರಮ-ಸ್ಥಳಾಂತರ ಆಗದೇ ಇದ್ದಲ್ಲಿ ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡಿ ಎಂದು ಕೊರ್ಟ್ ಹೇಳಿತ್ತು.
ಜೈಪುರ: ಸಚಿವರ ನೇಮಕಾತಿಯ ಬಗ್ಗೆ ಉಲ್ಲೇಖಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಹುದ್ದೆಗಳ ಬಗ್ಗೆ ಯಾರಿಗೂ ಸಂತೋಷವಿಲ್ಲ, ಇನ್ನೂ ಹೆಚ್ಚಿನದ್ದು ಬೇಕೆಂಬ ಅಭಿಪ್ರಾಯವಿದೆ. ರಾಜಕೀಯ ಸಾಮಾಜಿಕ ಆರ್ಥಿಕ ಬದಲಾವಣೆ ತರುವುದಕ್ಕೆ ಇರುವ ಸಾಧನ ಎಂದು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಸಂಸದೀಯ ವ್ಯವಸ್ಥೆ ಹಾಗೂ ಜನರ ನಿರೀಕ್ಷೆಗಳು ಎಂಬ ವಿಷಯದ ಬಗ್ಗೆ ಸೆಮಿನಾರ್ ಉದ್ದೇಶಿಸಿ ಮಾತನಾಡಿರುವ ಗಡ್ಕರಿ, ಶಾಸಕರಿಗೆ ಮಂತ್ರಿಯಾಗಲಿಲ್ಲ ಎಂಬ ಬೇಸರವಿದೆ. ಸಚಿವರಿಗೆ ತಮಗೆ ಒಳ್ಳೆಯ ಇಲಾಖೆ ಸಿಗಲಿಲ್ಲ ಎಂಬ ಬೇಸರವಿದೆ. ಕೆಲವರಿಗೆ ಸಿಎಂ ಆಗಲಿಲ್ಲ ಎಂಬ ಬೇಸರವಿದೆ. ಇನ್ನು ಮುಖ್ಯಮಂತ್ರಿಯಾದವರಿಗೆ ಎಷ್ಟು ದಿನ ಆ ಹುದ್ದೆಯಲ್ಲಿರುತ್ತೇವೆ ಎಂಬುದು ತಿಳಿಯದೇ ಬೇಸರದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೈತನ ಜಮೀನಿನಲ್ಲಿ ಮೂರ್ತಿ ಪತ್ತೆ- 21 ದಿನ 21 ಗ್ರಾಮದಲ್ಲಿ ಕುಟುಂಬದಿಂದ ಭಿಕ್ಷಾಟನೆ
ರಾಜ್ಯಕ್ಕೆ ಸರಿ ಇಲ್ಲದವರನ್ನು ದೆಹಲಿಗೆ ಕಳಿಸಲಾಗುತ್ತಿತ್ತು. ದೆಹಲಿಯಲ್ಲೂ ಸಲ್ಲದವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುತ್ತಿತ್ತು. ರಾಜ್ಯಪಾಲರಾಗುವುದಕ್ಕೂ ಸರಿ ಇಲ್ಲದವರನ್ನು ರಾಯಭಾರಿಗಳನ್ನಾಗಿ ಮಾಡಲಾಗುತ್ತಿತ್ತು ಎಂದು ಕವಿ ಶರದ್ ಜೋಶಿ ಒಮ್ಮೆ ಬರೆದಿದ್ದರು. ಇದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ನಾನು ಬಿಜೆಪಿ ರಾಷ್ಟ್ರಾಧ್ಯಕ್ಷನಾಗಿದ್ದಾಗ ಬೇಸರವಿಲ್ಲದ ಒಬ್ಬನನ್ನೂ ನೋಡಿಲ್ಲ. ಸಂತೋಷವಾಗಿ ಹೇಗಿರುವುದು ಎಂದು ಪತ್ರಕರ್ತರೊಬ್ಬರು ಕೇಳಿದ್ದರು. ಭವಿಷ್ಯದಲ್ಲಿ ಏನಾಗಲಿದೆಯೋ ಎಂಬ ಬಗ್ಗೆ ಅತಿ ಹೆಚ್ಚು ಚಿಂತೆ ಮಾಡದೇ ಇರುವುದರಿಂದ ಸಂತೋಷವಾಗಿರಬಹುದು. ಹಲವು ಸಮಸ್ಯೆಗಳಿದ್ದರೂ ಶಾಸಕಾಂಗದ ಕರ್ತವ್ಯ ಸಾಮಾಜಿಕ, ಆರ್ಥಿಕ ಉನ್ನತೀಕರಣಕ್ಕಾಗಿ ಗುಣಾತ್ಮಕ ಬದಲಾವಣೆ ತರುವುದಾಗಿದೆ ಎಂದು ಗಡ್ಕರಿ ಶಾಸಕರಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರು: ಇಂದಿನಿಂದ ಹತ್ತುದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮೊದಲ ಅಧಿವೇಶನ ದಿನವೇ 2 ಸಾವಿರಕ್ಕೂ ಅಧಿಕ ರೈತರು ಸರ್ಕಾರಕ್ಕೆ ಮಹಾ ದಿಗ್ಬಂಧನ ಹಾಕಲು ಸಜ್ಜಾಗಿದ್ದಾರೆ.
ನಿಷೇಧಾಜ್ಞೆ ಇದ್ರೂ ಡೋಂಟ್ ಕೇರ್ ಎನ್ನುತ್ತಿರುವ ರೈತರು, ನಾವು ಕ್ರಿಮಿನಲ್ಸ್ ಅಲ್ಲ. ಏನೇ ಆದ್ರೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ. ರೈತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿಧಾನಸೌಧ ಚಲೋ ಪ್ರತಿಭಟನಾ ರ್‍ಯಾಲಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು
ಸಿಟಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ರಾಯಣ್ಣ ಸರ್ಕಲ್, ಆನಂದರಾವ್ ಸರ್ಕಲ್ ಮೂಲಕ ವಿಧಾನಸೌಧಕ್ಕೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಸುಮಾರು 7 ರಿಂದ 8 ಸಾವಿರ ರೈತರು ಪ್ರತಿಭಟನೆಯಲ್ಲಿ ಭಾಗಿ ಸಾಧ್ಯತೆ ಇದ್ದು, ನಾವು ಅಪರಾಧ ಮಾಡಲು ಸೇರುತ್ತಿಲ್ಲ. ನಾವು ರೈತರು. ಭಾರತ ಸರ್ಕಾರ ಮೂರು ಕೃಷಿ ಕಾಯ್ದೆ ಜಾರಿಗೆ ತಂದ ನಂತರ ಅದಕ್ಕೆ ಪೂರಕವಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತಂದಿಲ್ಲ. ಆದರೆ ಇದೀಗ ಕರ್ನಾಟಕ ಸರ್ಕಾರ ಅದನ್ನು ಜಾರಿಗೊಳಿಸಲು ಮುಂದಾಗಿದೆ. ಬೇರೆ ಬೇರೆ ಕಾಯ್ದೆಗಳನ್ನು ಬದಲಾವಣೆ ಮಾಡಿ ಜಾರಿಗೊಳಿಸುವ ಕೆಲಸ ಮಾಡಿದೆ. ಈಗಾಗಲೇ ಕೆಟ್ಟ ಪರಿಣಾಮ ಕೃಷಿ ಕ್ಷೇತ್ರದ ಮೇಲಾಗಿದೆ. 80% ಎಪಿಎಂಸಿ ಬಂದ್ ಆಗ್ತಿವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರಕ್ಕೆ ತಮ್ಮ ಪ್ರತಿಭಟನಾ ರ್‍ಯಾಲಿ ಮೂಲಕ ಎಚ್ಚರಿಕೆ ನೀಡುತ್ತೇವೆ. ರೈತರ ಪಕ್ಷ, ರೈತ ನಾಯಕ ಅಂತ ಬಾಯಿ ಮಾತಿಗೆ ಹೇಳೋದ್ ಅಲ್ಲ. ಈ ಕಾಯ್ದೆಗಳನ್ನು ಬಂದ್ ಮಾಡಿ ನೀವು ರೈತ ನಾಯಕರು ಅಂತ ಸಾಬೀತು ಮಾಡ್ಕೊಳ್ಳಿ ಎಂದಿದ್ದಾರೆ. ಈಗಾಗಲೇ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಬಳಿಗೆ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಂದ ರೈತರು ಆಗಮಿಸಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ರೈತರು ಆಗಮಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ