Tag: government

  • ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ನಿರ್ಮಿಸಿ ಬಾಡಿಗೆ ಮನೆಯಲ್ಲಿದ್ದ ಉಮೇಶ್‍ಗೆ ಐಟಿ ಶಾಕ್

    ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ನಿರ್ಮಿಸಿ ಬಾಡಿಗೆ ಮನೆಯಲ್ಲಿದ್ದ ಉಮೇಶ್‍ಗೆ ಐಟಿ ಶಾಕ್

    – ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ
    – ಸರ್ಕಾರದ ಕಾರು ವಾಪಸ್

    ಬೆಂಗಳೂರು: ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ಕಟ್ಟಿಸಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಪಿಎ ಉಮೇಶ್  ಮನೆ ಮೇಲೆ ನಡೆದ ಐಟಿ ದಾಳಿ ತಡರಾತ್ರಿ ಅಂತ್ಯಗೊಂಡಿದೆ.

    ಉಮೇಶ್ ನ ಸ್ವಾರಸ್ಯಕರ ಸಂಗತಿಯೆಂದರೆ ಹೊಸ ಮನೆ ಕಟ್ಟಿಸಿದ್ದರು ಕೂಡ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ 3 ಅಂತಸ್ತಿನ ಮನೆಯಲ್ಲಿ ಬಾಡಿಗೆಗಿದ್ದ. ಇದರ ಹಿಂದೆ ರೋಚಕ ಕಹಾನಿ ಇದ್ದು, ಮನೆಯ ಈಶಾನ್ಯ ಭಾಗದಲ್ಲಿ ಸ್ಟೇರ್ ಕೇಸ್ ಹೊಂದಿರುವುದು ಅದೃಷ್ಟ ತರುವುದೆಂದು ಈ ಮನೆಯಲ್ಲಿ ವಾಸವಿದ್ದ. ಇದೇ ಮನೆಯ ಕೆಳಭಾಗದಲ್ಲಿ ಈ ಹಿಂದೆ ರಿಯಲ್ ಎಸ್ಟೇಟ್ ಕಚೇರಿ ಇತ್ತು. 90ರ ದಶಕದಲ್ಲಿ ಕಾಮದೇನು ಎಂಟರ್ ಪ್ರೈಸಸ್ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಕೃಷ್ಣಯ್ಯ ಶೆಟ್ಟಿ ಮತ್ತು ಸೋದರ ಪ್ರಭಾಕರ್ ಶೆಟ್ಟಿ ಇದೇ ಮನೆಯಲ್ಲಿ ವಾಸಿವದ್ದರು. ಅವರಿಗೆ ಅದೃಷ್ಟ ತಂದಿದ್ದ ಮನೆಯಲ್ಲಿ ಉಮೇಶ್  ವಾಸವಿದ್ದ. ಇದನ್ನೂ ಓದಿ: ಐಟಿ ದಾಳಿ ಬೆನ್ನಲ್ಲೇ ಸಿಎಂ ಕಚೇರಿಯಿಂದ ಉಮೇಶ್‍ಗೆ ಗೇಟ್‍ಪಾಸ್

    ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟ ತಂದೊಡ್ಡಿತಾ ಮನೆ
    ಕರ್ನಾಟಕ ರಾಜ್ಯ ಗೃಹ ಮಂಡಳಿ ಅವ್ಯವಹಾರದಲ್ಲಿ ಜೈಲು ಸೇರಿದ್ದ ಕೃಷ್ಣಯ್ಯ ಶೆಟ್ಟಿಗೆ ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟಕ್ಕೂ ಈ ಮನೆ ಕಾರಣವಾಗಿತ್ತು. ಕಾಕತಾಳಿಯವೋ, ಅದೃಷ್ಟದ ಲೆಕ್ಕಚಾರವೋ ಇದೀಗ ಬಿಎಸ್‍ವೈ ಪಿಎ ಉಮೇಶ್‍ಗೂ ಇದೇ ಸಂಕಷ್ಟ ಎದುರಾಗಿದೆ. ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಉಮೇಶ್, ಬಿಎಸ್‍ವೈ ಪಿಎ ಆದ ಬಳಿಕ ಕೋಟ್ಯಂತರ ಮೌಲ್ಯದ ಆಸ್ತಿ, ಪಾಸ್ತಿಗಳಿಸಿದ್ದಾನೆ. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ

    ಉಮೇಶ್ ಮನೆ ಮೇಲೆ ನಡೆದ ಐಟಿ ದಾಳಿಯನ್ನು ತಡ ರಾತ್ರಿ ಐಟಿ ಅಧಿಕಾರಿಗಳು ಅಂತ್ಯಗೊಳಿಸಿದರು. 7 ಮಂದಿ ಐಟಿ ಅಧಿಕಾರಿಗಳಿಂದ ತಡರಾತ್ರಿವರೆಗೂ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಬಳಿಕ ಉಮೇಶ್‍ಗೆ ಸೇರಿದ ಬ್ಯಾಂಕ್ ಖಾತೆಗಳ ವಿವರ, ಲ್ಯಾಪ್‍ಟಾಪ್, ಪೆನ್ ಡ್ರೈವ್, ನೀರಾವರಿ ಇಲಾಖೆಗೆ ಸಂಬಂಧಪಟ್ಟ ದಾಖಲಾತಿ ಸೇರಿದಂತೆ ಮಹತ್ವದ ದಾಖಲೆಗಳು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಉಮೇಶ್‍ಗೆ ಇಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ

    ಇದೀಗ ಐಟಿ ರೇಡ್ ಬೆನ್ನಲ್ಲೇ ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದಲೂ ಸಹ ಉಮೇಶ್‍ನನ್ನು ಬಿಡುಗಡೆಗೊಳಿಸಲಾಗಿದೆ. ಸರ್ಕಾರದಿಂದ ಇನ್ನೋವಾ ಕಾರನ್ನು ಉಮೇಶ್‍ಗೆ ನೀಡಲಾಗಿತ್ತು. ಈ ಕಾರನ್ನು ರಾತ್ರೋರಾತ್ರಿ ಅಧಿಕಾರಿಗಳು ಕುಮಾರಕೃಪಗೆ ವಾಪಸ್ ತೆಗೆದುಕೊಂಡು ಬಂದಿದ್ದಾರೆ.

  • 2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ

    2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ

    – ಮದ್ಯದಿಂದ ಸರ್ಕಾರಕ್ಕೆ ಆದಾಯ ಬರುವಂತಾಗಿದ್ದು ಕೃಷ್ಣರಿಂದ

    ಮೈಸೂರು: ಮುಂದಿನ ವರ್ಷ 2023ರಲ್ಲೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದಸರಾ ಉದ್ಘಾಟಿಸಲಿದ್ದಾರೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಭವಿಷ್ಯ ನುಡಿದಿದ್ದಾರೆ.

    ಮೈಸೂರು ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಅವರಂಥ ಯೋಗ್ಯ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಕರೆಸಿದ ಸಿಎಂ ಬೊಮ್ಮಾಯಿ ಅವರಿಗೆ ವಂದನೆ. ಎಸ್.ಎಂ. ಕೃಷ್ಣ ಅವರಂಥ ನಡೆ ನುಡಿಯನ್ನು ಇಟ್ಟು ಕೊಂಡು ಅವರ ರೀತಿಯಲ್ಲೇ ಆಡಳಿತವನ್ನು ನಡೆಸಲು ಈಗಿನ ಸಿಎಂ ಮುಂದಾಗಿದ್ದಾರೆ. ಎಸ್.ಎಂ. ಕೃಷ್ಣ ಅವರು ದೂರದರ್ಶಿತ್ವ ಇದ್ದ ಮಹಾ ಆಡಳಿತಗಾರ ಆಗಿದ್ದರು. ಆಡಳಿತದಲ್ಲಿ ಆರ್ಥಿಕ ಶಿಸ್ತು ತಂದ ಕೀರ್ತಿ ಅವರಿಗೆ ಮೊದಲು ಸಲ್ಲುತ್ತದೆ ಎಂದರು. ಇದನ್ನೂ ಓದಿ: ಯಾವ ಜನ್ಮದ ಪುಣ್ಯವೋ ಇಂತಹ ದೊಡ್ಡ ಗೌರವ ಸಿಕ್ಕಿದೆ, ಸಿಎಂಗೆ ಧನ್ಯವಾದ: ಎಸ್.ಎಂ ಕೃಷ್ಣ

    ಮದ್ಯದ ಲಾಬಿಯನ್ನು ಹೊಡೆದು ಹಾಕಿದ್ದು ಕೃಷ್ಣ ಅವರ ಸರ್ಕಾರ. ಮದ್ಯದಿಂದ ದೊಡ್ಡ ಮಟ್ಟದ ಆದಾಯ ಸರ್ಕಾರಕ್ಕೆ ಬರುವಂತಾಗಿದ್ದು ಕೃಷ್ಣ ಅವರ ಆಡಳಿತದಿಂದ ಅವರು ದೊಡ್ಡ ದೊಡ್ಡ ಸಮಸ್ಯೆ ಗಳನ್ನು ಎದುರಿಸಿ ಉತ್ತಮ ಆಡಳಿತ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಅವರ ಹಾದಿಯಲ್ಲೇ ಬೊಮ್ಮಾಯಿ ಸಾಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. 2023ರಲ್ಲೂ ಬೊಮ್ಮಾಯಿ ಅವರೆ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ರಾಜ್ಯದ ಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಜನಕ್ಕೆ ಹತ್ತಿರವಾಗುವ ರೀತಿ ಸಿಎಂ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಸಮಸ್ಯೆ ಬಂದರು ವಿಚಲಿತರಾಗದೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಆಡಳಿತದೊಂದಿಗೆ ಕೌಟುಂಬಿಕ ವಿಚಾರದಲ್ಲೂ ಅವರು ಮಾದರಿಯಾಗಿದ್ದಾರೆ ಎಂದು ಬೊಮ್ಮಾಯಿ ನಡೆ ನುಡಿಯನ್ನು ಪ್ರತಾಪ್ ಸಿಂಹ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

  • ಭಾರತದಲ್ಲಿ ಸರ್ವಾಧಿಕಾರವಿದೆ, ರೈತರ ಮೇಲೆ ದಾಳಿ ನಡೆಯುತ್ತಿದೆ: ರಾಹುಲ್ ಗಾಂಧಿ

    ಭಾರತದಲ್ಲಿ ಸರ್ವಾಧಿಕಾರವಿದೆ, ರೈತರ ಮೇಲೆ ದಾಳಿ ನಡೆಯುತ್ತಿದೆ: ರಾಹುಲ್ ಗಾಂಧಿ

    ನವದೆಹಲಿ: ದೇಶದಲ್ಲಿ ಸರ್ವಾಧಿಕಾರ ಪರಿಸ್ಥಿತಿಯಿದ್ದು, ರೈತರ ಮೇಲೆ ವ್ಯವಸ್ಥಿತವಾಗಿ  ದಾಳಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಖಿಂಪುರ್ ಖೇರಿ ಹಿಂಸಾಚಾರದ ಕುರಿತಾಗಿ ಮಾತನಾಡಿ, ರೈತರ ಹಕ್ಕುಗಳನ್ನು ಕಸಿಯಲಾಗುತ್ತದೆ. ಕೇಂದ್ರ ಸಚಿವ ಮತ್ತು ಅವರ ಪುತ್ರರ ಹೆಸರು ಈ ಪ್ರಕರಣದಲ್ಲಿ ಬಂದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ದೇಶದ ರೈತರ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ  ಇಂದು ಬಿಜೆಪಿ  ಸರ್ವಾಧಿಕಾರವಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

    ಕಳೆದ ಭಾನುವಾರ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದು ಅಲ್ಲಿ ಸದ್ಯ ನಿಷೇಧಾಜ್ಞೆ ಜಾರಿಯಲ್ಲಿದೆ. ಸೀತಾಪುರ್‍ದಲ್ಲಿ ಸೋಮವಾರದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗೃಹಬಂಧನದಲ್ಲಿದ್ದಾರೆ. ನಾನು, ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಛತ್ತೀಸ್ ಗಢ ಸಿಎಂ ಭೂಪೇಶ್ ಬಗೆಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರೊಂದಿಗೆ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಸ್ಥರನ್ನು ಭೇಟಿ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಲಖೀಂಪುರ್ ಭೇಟಿಗೆ ಅವಕಾಶವಿಲ್ಲವೆಂದ ಯೋಗಿ ಸರ್ಕಾರ

    ಲಕ್ನೊ ಪೊಲೀಸ್ ಆಯುಕ್ತ ಡಿ ಕೆ ಠಾಕೂರ್ ಪ್ರತಿಕ್ರಿಯೆ ನೀಡಿ ರಾಹುಲ್ ಗಾಂಧಿಯವರ ಭೇಟಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿಲ್ಲ, ಹೀಗಾಗಿ ಅವರು ಲಖಿಂಪುರ್ ಅಥವಾ ಸೀತಾಪುರ್ ಹೋಗಲು ಸಾಧ್ಯವಿಲ್ಲ. ಉತ್ತರ ಪ್ರದೇಶ ಸರ್ಕಾರ ರಾಹುಲ್ ಗಾಂಧಿಯವರಿಗೆ ಅನುಮತಿ ನೀಡಿಲ್ಲ, ಹೀಗಾಗಿ ಅವರು ಬರಲು ಸಾಧ್ಯವಿಲ್ಲ ಎಂದು ಠಾಕೂರ್ ತಿಳಿಸಿದ್ದಾರೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ನಮಗೆ ಪತ್ರ ಬರೆದು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ರಾಹುಲ್ ಗಾಂಧಿಯವರು ಭೇಟಿ ನೀಡಿದರೆ ಸಮಸ್ಯೆಯಾಗಬಹುದು, ಹೀಗಾಗಿ ಅವರಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.

  • FIR ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ: ಪ್ರಿಯಾಂಕಾ ಗಾಂಧಿ ಕಿಡಿ

    FIR ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ: ಪ್ರಿಯಾಂಕಾ ಗಾಂಧಿ ಕಿಡಿ

    ಲಕ್ನೋ: ಲಖಿಂಪುರ್ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ರೈತರನ್ನು ಭೇಟಿ ಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ

    ಈ ಸಂಬಂಧ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ನರೇಂದ್ರ ಮೋದಿ ಜೀ, ಕಳೆದ 28 ಗಂಟೆಗಳಿಂದ ನಿಮ್ಮ ಸರ್ಕಾರ ಯಾವುದೇ ಆದೇಶವಿಲ್ಲದೇ ಹಾಗೂ ಎಫ್‍ಐಆರ್ ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ ಎಂದು ಟ್ವೀಟ್ ಮಾಡಿ ಮೋದಿಗೆ ಟ್ಯಾಗ್ ಮಾಡಿದ್ದಾರೆ.

    ಹಿನ್ನೆಲೆ:
    ಲಖೀಂಪುರ್‍ನಲ್ಲಿ ಉಪ ಮುಖ್ಯಮಂತ್ರಿ ಕೇಶವ್‍ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ನೀಡುವ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೆಂಗಾವಲು ವಾಹನಗಳ ಸಾಲಿನಲ್ಲಿ ಬರುತ್ತಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾನ ಪುತ್ರ ಇದ್ದ ರೈತರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಆ ಬಳಿಕ ಅಲ್ಲಿ ಪ್ರತಿಭಟನೆ ಉದ್ರಿಕ್ತಗೊಂಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದನ್ನೂ ಓದಿ:  ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

    ಲಂಖಿಪುರದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ರೈತರ ಮನೆಗಳಿಗೆ ಭೇಟಿ ನೀಡಲೆಂದು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯವರನ್ನು ಉತ್ತರಪ್ರದೇಶದ ಪೊಲೀಸರು ತಡೆದಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದರು. ಸದ್ಯ ಪೊಲೀಸರ ವಶದಲ್ಲಿರುವ ಪ್ರಿಯಾಂಕ ಅವರಿಗೆ ರಾಹುಲ್ ಗಾಂಧಿ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಆದರೆ ಇದೀಗ ಪ್ರೀಯಾಂಕಾ ಗಾಂಧಿ ಟ್ವೀಟ್ ಮಾಡುವ ಮೂಲಕವಾಗಿ ಕೇಂದ್ರ ಸರ್ಕಾರವನ್ನುತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

  • ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ

    ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ

    ಲಕ್ನೋ: ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಕುಟುಂಬಕ್ಕೆ ತಲಾ 45 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ.

    ಉತ್ತರ ಪ್ರದೇಶ ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಇನ್ನು ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿಯೂ ಹೇಳಿದೆ. ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಲಾಗುವುದು ಮತ್ತು ಮೃತರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಲಾಗುವುದು ಎಂಬ ಭರವಸೆ ನೀಡಿದೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

    ಘಟನೆಗೆ ಸಂಬಂಧಪಟ್ಟಂತೆ ರೈತರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರೊಬ್ಬರು ಘಟನೆಯ ತನಿಖೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಹಾಗೇ ಯಾವುದೇ ರಾಜಕೀಯ ನಾಯಕರಿಗೂ ಲಖಿಂಪುರ ಖೇರಿಗೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ. ಇಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ರೈತ ಸಂಘಟನೆಗಳ ಮುಖಂಡರು ಮಾತ್ರ ಇಲ್ಲಿಗೆ ಬರಬಹುದು ಎಂದೂ ಹೇಳಿದ್ದಾರೆ. ಮೃತ ಎಂಟು ಮಂದಿಯಲ್ಲಿ ನಾಲ್ವರು ರೈತರಾಗಿದ್ದು, ಮೂವರು ಬಿಜೆಪಿ ಕಾರ್ಯಕರ್ತರು, ಒಬ್ಬ ಪತ್ರಕರ್ತ ಎನ್ನಲಾಗಿದೆ. ಸದ್ಯ ರೈತ ಕುಟುಂಬಗಳಿಗೆ ಪರಿಹಾರ ಘೋಷಣೆಯಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

    ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರನ್ನು ಬಿಜೆಪಿ ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಸದಾ ಆರೋಪಿಸುವ ಕಾಂಗ್ರೆಸ್ ಈಗ ಲಖಿಂಪುರ ಖೇರಿಯಲ್ಲಿ ನಡೆದ ರೈತರ ಮೇಲಿನ ದಾಳಿಯನ್ನೂ ಖಂಡಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರು ಪ್ರತಿಭಟನೆ ಶುರು ಮಾಡಿದ್ದಾರೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ

  • ಇದು ಕೊಲೆಗಡುಕ ಸರ್ಕಾರ: ಎಚ್‍ಡಿಕೆ ಕಿಡಿ

    ಇದು ಕೊಲೆಗಡುಕ ಸರ್ಕಾರ: ಎಚ್‍ಡಿಕೆ ಕಿಡಿ

    ಬೆಂಗಳೂರು: ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಹಾಗೂ ಆಕೆಯ ಮಕ್ಕಳ ಆತ್ಮಹತ್ಯೆ ಘಟನೆ ಹೃದಯ ವಿದ್ರಾವಕ ಎಂದು ನೊಂದು ನುಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಸಾವುಗಳಿಗೆ ಸರ್ಕಾರವೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಿಡದಿಯ ತೋಟದಲ್ಲಿ ಇಂದು ಬೆಳಗ್ಗೆ ಆರಂಭವಾದ ಎರಡನೇ ಹಂತದ ‘ಜನತಾ ಪರ್ವ’ ಹಾಗೂ ‘ಮಿಷನ್ 123’ ಕಾರ್ಯಾಗಾರಕ್ಕೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ತವ್ಯದಲ್ಲಿ ಇದ್ದಾಗಲೇ ಕೊರೊನಾ ಮಹಾಮಾರಿಗೆ ತುತ್ತಾಗಿ ಸಾವನ್ನಪ್ಪಿದ ಸಾರಿಗೆ ನೌಕರನ ಕುಟುಂಬಕ್ಕೆ ಸರ್ಕಾರ ಅರು ತಿಂಗಳ ಒಳಗಾಗಿ ಅನುಕಂಪದ ಉದ್ಯೋಗ ನೀಡಿ ಪರಿಹಾರದ ಹಣವನ್ನು ನೀಡಬೇಕು. ಅಲ್ಲದೆ ಕೋವಿಡ್ ವಾರಿಯರ್ಸ್‍ಗಳಿಗೆ ನೀಡುವ ಪರಿಹಾರವನ್ನು ಕೂಡ ನೀಡಿಲ್ಲ. ಗಂಡನನ್ನು ಕಳೆದುಕೊಂಡ ಆ ಹೆಣ್ಣು ಮಗಳಿಗೆ ಕೆಲಸವೂ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಶಾಸಕರ ಸಮಸ್ಯೆ ಕೇಳಲು ನನ್ನ ಮನೆ ಬಾಗಿಲು ಸದಾ ತೆರೆದಿದೆ: ಹೆಚ್‌ಡಿಕೆ

    ಆ ಹೆಣ್ಣು ಮಗಳು ಎಷ್ಟು ನೊಂದಿರಬಹುದು. ಈ ಸರ್ಕಾರಕ್ಕೆ ಯಾವ ಗಮನವೂ ಇರಲಿಲ್ಲ. ಆ ಮುಗ್ದ ಮಕ್ಕಳೂ ಸೇರಿ ಆ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡ ಈ ಸರ್ಕಾರ ಕೊಲೆಗಡುಕ ಸರ್ಕಾರ ಅಂದರೆ ತಪ್ಪಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅರಸೀಕೆರೆಯಲ್ಲಿ ಆಕ್ಸಿಜನ್ ಘಟಕ ಉದ್ಘಾಟನೆ ವೇಳೆ ಜೆಡಿಎಸ್, ಬಿಜೆಪಿ ನಡುವೆ ವಾಕ್ಸಮರ

    ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ ಅವರು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಟ್ವೀಟ್‍ನಲ್ಲಿ ಏನಿದೆ?
    ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಈ ಘಟನೆಯನ್ನು ಸರ್ಕಾರ ತಡೆಯಬಹುದಿತ್ತು. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು. ಇದು ಕೊಲೆಗಡುಕ ಸರ್ಕಾರ.

    ಎಲ್ಲಾ ದುಂದು ವೆಚ್ಚ, ಲೂಟಿ ನಿಲ್ಲಿಸಿ ಸರ್ಕಾರ ಇಂತವರ ನೆರವಿಗೆ ಧಾವಿಸಬೇಕಿತ್ತು. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ರಾಜ್ಯ ಸರ್ಕಾರ ಪೂರ್ಣ ವಿಫಲವಾಗಿದೆ ಹಾಗೂ ಅಧಿಕಾರಿಗಳ ಹೊಣೆಗೇಡಿತನ ಎದ್ದು ಕಾಣುತ್ತದೆ. ಇದನ್ನೂ ಓದಿ: ಮಮತಾಗೆ ಭರ್ಜರಿ ಜಯ – 2024ರಲ್ಲಿ ದೆಹಲಿಯಲ್ಲಿ ನಮ್ಮದೇ ಸರ್ಕಾರ ಎಂದ ಟಿಎಂಸಿ

    ಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಹರಿಸಿ ಕೊರೊನ ಸೋಂಕಿಗೆ ಬಲಿಯಾದ ಸಾರಿಗೆ ನೌಕರರ ಕುಟುಂಬಗಳಿಗೆ ನೆರವುನೀಡಿ, ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯ ಮಾಡುತ್ತೇನೆ.

     

  • ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

    ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

    ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಲು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರಿಗೆ ಇಂದು ರಾಜ್ಯ ಸರ್ಕಾರ ಅಧಿಕೃತವಾಗಿ ಆಹ್ವಾನ ನೀಡಿತು.

    ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ತೆರಳಿ ಸರ್ಕಾರದ ಪರವಾಗಿ ಅವರಿಗೆ ಆಹ್ವಾನ ನೀಡಿದರು. ಇದೇ ತಿಂಗಳ 7ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಸೇರಿದ ಗಣ್ಯರೊಬ್ಬರಿಗೆ ಉದ್ಘಾಟನೆ ಮಾಡುವ ಸೌಭಾಗ್ಯ ಸಿಕ್ಕಿದೆ. ಇದನ್ನೂ ಓದಿ: ಅ. 7 ರಿಂದ13 ರವರೆಗೆ ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ: ಎಸ್.ಟಿ.ಸೋಮಶೇಖರ್

    9 ದಿನಗಳ ಕಾಲ ನಡೆಯಲಿರುವ ಮೈಸೂರು ದಸರಾವನ್ನು ಈ ಹಿಂದೆ ಸಾಹಿತಿಗಳು, ಬರಹಗಾರರು, ಸಮಾಜ ಸೇವಕರು, ಧರ್ಮಗುರುಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಉದ್ಘಾಟನೆ ಮಾಡುತ್ತಿದ್ದರು. ಆದರೆ ಈ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿರುವ ರಾಜ್ಯ ಸರ್ಕಾರ ಮೊದಲ ಬಾರಿಗೆ ವಿಶ್ವವಿಖ್ಯಾತ ದಸರಾವನ್ನು ರಾಜಕೀಯ ಕ್ಷೇತ್ರಕ್ಕೆ ಸೇರಿದವರೊಬ್ಬರಿಂದ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

    ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆಗಳು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಎಸ್.ಎಂ.ಕೃಷ್ಣ ಅವರನ್ನು ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿತ್ತು.

    ಈ ವೇಳೆ ಕಂದಾಯ ಸಚಿವ ಆರ್.ಅಶೋಕ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಮಕ್ಕಳಿಗೆ ಕಳಪೆ ಗುಣಮಟ್ಟದ ಚಿಕ್ಕಿ – ತನಿಖೆಗೆ ರೇವಣ್ಣ ಆಗ್ರಹ

    ಮಕ್ಕಳಿಗೆ ಕಳಪೆ ಗುಣಮಟ್ಟದ ಚಿಕ್ಕಿ – ತನಿಖೆಗೆ ರೇವಣ್ಣ ಆಗ್ರಹ

    ಹಾಸನ: ಸರ್ಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಪೌಷ್ಟಿಕ ಆಹಾರ ನೀಡಲು ಮತ್ತು ಅಂಗನವಾಡಿ ಪರಿಕರ ಖರೀದಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಪೌಷ್ಟಿಕ ಆಹಾರ ನೀಡಲು ಸರಿಯಾದ ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲೂ ಹಾಸನದಲ್ಲಿ ಹಣ ಲೂಟಿಯಾಗುತ್ತಿದೆ ಮತ್ತು ಗುಣಮಟ್ಟಣ ಆಹಾರ ಕೂಡ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ

    ಸರ್ಕಾರ ಇಡೀ ರಾಜ್ಯದ ಅಂಗನವಾಡಿ ಮಕ್ಕಳಿಗೆ ಚಿಕ್ಕಿಕೊಡುತ್ತಿದ್ದು, ಪ್ರತಿ ಚಿಕ್ಕಿಗೆ 2 ರೂಪಾಯಿ ದರ ನಿಗದಿ ಮಾಡಿದೆ. ಚಿಕ್ಕಿಗೆ ಶೇಂಗಾ, ಬೆಲ್ಲ ಬಳಸುತ್ತಾರೆ. ಆದರೆ ಹಾಸನದಲ್ಲಿ ನೀಡುತ್ತಿರುವ ಚಿಕ್ಕಿ ಕಡಿಮೆ ತೂಕದ್ದಾಗಿದ್ದು, ಒಂದು ಚಿಕ್ಕಿಗೆ ಮೂಲಭೂತವಾಗಿ 80 ಪೈಸೆ ಬೀಳುತ್ತಿದೆ. ಸರ್ಕಾರ ಒಂದು ಚಿಕ್ಕಿ ಎಷ್ಟು ತೂಕ ಇರಬೇಕು ಎಂದು ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಪ್ರತಿ ತಿಂಗಳು ಹಾಸನ ಜಿಲ್ಲೆಯೊಂದಕ್ಕೆ 25 ಲಕ್ಷ ಚಿಕ್ಕಿ ಬೇಕು. ಪ್ರತಿ ತಿಂಗಳು ಮಕ್ಕಳಿಗೆ ನೀಡುವ ಚಿಕ್ಕಿಗೆ ಸುಮಾರು 50 ಲಕ್ಷ ಬಿಲ್ ಆಗುತ್ತಿದೆ. ಆದರೆ ಇವರು ಕಡಿಮೆ ದರಕ್ಕೆ ಚಿಕ್ಕಿ ಖರೀದಿಸಿ ಹೆಚ್ಚು ಬಿಲ್ ಹಾಕಿಕೊಂಡು ಹಣ ನುಂಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರವಲ್ಲದೆ, ಅಂಗನವಾಡಿಗೆ ಖರೀದಿಸುವ ಪ್ರಚಾರ ಪರಿಕರದಲ್ಲೂ ಅಕ್ರಮ ಎಸಗಿದ್ದಾರೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ಆರೋಪ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಂಬಂಧ ಪಟ್ಟ ಸಚಿವರಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲಅಂತಿದ್ದಾರೆ. ಈ ಬಗ್ಗೆ ಹಾಸನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಪರಶುರಾಮ್ ಶೆಟ್ಟಪ್ಪನವರ್ ಅವರನ್ನು ಕೇಳಿದರೆ, ನಾನು ಈ ಬಗ್ಗೆ ಕೂಡಲೇ ಗಮನಹರಿಸಿ ಪ್ರಚಾರ ಪರಿಕರ ಮತ್ತು ಚಿಕ್ಕಿ ನೀಡುವಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ- ಸಿಡಿಲಿಗೆ ಯುವಕ ಬಲಿ, ಮನೆಗಳಿಗೆ ನುಗ್ಗಿದ ನೀರು

    ಒಟ್ಟಾರೆ ಅಂಗನವಾಡಿಗೆ ಹೋಗುವ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದು ಪ್ರತಿ ವರ್ಷ ಕೋಟಿ, ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ಪುಟಾಣಿ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಬಿಡುಗಡೆ ಮಾಡುವ ಹಣವನ್ನೂ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

  • ಬಿಸಿಯೂಟ ಯೋಜನೆಗೆ ‘ಪಿಎಂ ಪೋಷಣ್’ ಮರುನಾಮಕರಣ ಮಾಡಿದ ಕೇಂದ್ರ

    ಬಿಸಿಯೂಟ ಯೋಜನೆಗೆ ‘ಪಿಎಂ ಪೋಷಣ್’ ಮರುನಾಮಕರಣ ಮಾಡಿದ ಕೇಂದ್ರ

    ನವದೆಹಲಿ: ದೇಶಾದ್ಯಂತ ಬಡ ಮಕ್ಕಳಿಗೆ ಸುಪೋಷಿತ ಆಹಾರ ಒದಗಿಸಲು ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಪಿಎಂ ಪೋಷಣ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇಂದು ನವದೆಹಲಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕುರ್ ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಶಾಲೆಗೆ ಹೋಗುವ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಪರಿಹರಿಸುವ ಸಲುವಾಗಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ (Pradhan Mantri Poshan Shakti Nirman) ಯೋಜನೆಗೆ ಅನುಮೋದನೆ ನೀಡಿದೆ. ಈಗಿರುವ ಮಿಡ್-ಡೇ ಮೀಲ್ ಸ್ಕೀಮ್ (Mid-Day Meal scheme) ವಿದ್ಯಾರ್ಥಿಗಳಿಗೆ ಬಿಸಿ ಊಟವನ್ನು ಒದಗಿಸುತ್ತದೆ. ಇದನ್ನು ಪಿಎಂ ಪೋಷಣ್ ಶಕ್ತಿ ನಿರ್ಮಾಣ ರಾಷ್ಟ್ರೀಯ ಯೋಜನೆ ಎಂದು ಮರುನಾಮಕರಣ ಮಾಡಲಾಗುವುದು.

    2021-22 ರಿಂದ 2025-26 ರವರೆಗೆ ಐದು ವರ್ಷಗಳವರೆಗೆ ಈ ಯೋಜನೆಯನ್ನು ಮುಂದುವರಿಸಲು ಒಟ್ಟು 1.3 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವು 54061.73 ಕೋಟಿ ರೂ., ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 31,733.17 ಕೋಟಿ ರೂ. ಆಹಾರ ಧಾನ್ಯಗಳ ಮೇಲೆ ಕೇಂದ್ರವು ಸುಮಾರು 45,000 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವನ್ನು ಭರಿಸುತ್ತದೆ ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮುಸ್ಲಿಂ ಯುವತಿಯ ಕನಸು ನನಸು-ದೇವಸ್ಥಾನಕ್ಕೆ ಶ್ರೀಕೃಷ್ಣನ ಚಿತ್ರ ಉಡುಗೊರೆ

    poshan schem

    MyGovIndiaದ ಅಧಿಕೃತ ಟ್ವಿಟರ್ ಹ್ಯಾಂಡಲ್‍ನಲ್ಲಿ ಹಂಚಿಕೊಂಡಿರುವ ಇನ್ಫೋಗ್ರಾಫಿಕ್ ಪ್ರಕಾರ ಈ ಯೋಜನೆಯು 11.20 ಲಕ್ಷ ಶಾಲೆಗಳಲ್ಲಿ 11.80 ಕೋಟಿ ಮಕ್ಕಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಒಂದರಿಂದ ಎಂಟನೇ ತರಗತಿಯ ಎಲ್ಲಾ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರು ಟ್ವಿಟರ್‍ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ರೈತ ಉತ್ಪಾದಕರ ಸಂಘಟನೆಗಳು (ಎಫ್‍ಪಿಒ) ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ವೈದ್ಯರ ಎಡವಟ್ಟು- ಕೊರೊನಾ ಲಸಿಕೆ ಬದಲು ರೇಬಿಸ್ ವ್ಯಾಕ್ಸಿನ್

    ವಿಶೇಷ ಗಮನದ ಪ್ರದೇಶಗಳನ್ನು ಹೈಲೈಟ್ ಮಾಡಿದ ಸಚಿವರು ಇನ್ಫೋಗ್ರಾಫಿಕ್ ಅನ್ನು ಹಂಚಿಕೊಂಡಿದ್ದು ಈ ಯೋಜನೆಯು ಮಹತ್ವಾಕಾಂಕ್ಷೆಯ ಮತ್ತು ಬುಡಕಟ್ಟು ಜಿಲ್ಲೆಗಳು ಮತ್ತು ರಕ್ತಹೀನತೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪೂರಕ ಪೌಷ್ಟಿಕಾಂಶವನ್ನು ಒದಗಿಸುತ್ತದೆ ಎಂದಿದ್ದಾರೆ.  #Vocal4Local ಗೆ ಅನುಗುಣವಾಗಿ ಸಾಂಪ್ರದಾಯಿಕ ಪಾಕಪದ್ಧತಿ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಎಲ್ಲಾ ಹಂತಗಳಲ್ಲಿ ಅಡುಗೆ ಸ್ಪರ್ಧೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.

  • ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್

    ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್

    ಚಿಕ್ಕಬಳ್ಳಾಪುರ: ಪೆಟ್ರೋಲ್-ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಚಿವ ಸುಧಾಕರ್ ಸ್ವಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿ ಶಕ್ತಿ ನಡೆಸುವುದರ ಮೂಲಕ ಸಚಿವ ಸುಧಾಕರ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.

    ಪೇರೇಸಂದ್ರ ಗ್ರಾಮದಲ್ಲಿ ಸಾವಿರಾರು ಮಂದಿಯೊಂದಿಗೆ ಮೆರವಣಿಗೆ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಚಿವ ಸುಧಾಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಸದಸ್ಯ ವಿನಯ್ ಶ್ಯಾಂ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿಮ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಸುಬ್ಬಾರೆಡ್ಡಿ ಭಾಗವಹಿಸಿದ್ದರು. ಇದನ್ನೂ ಓದಿ:  ಸಿದ್ದರಾಮಯ್ಯನ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗ್ತಿದ್ರು: ಸದಾನಂದಗೌಡ ತಿರುಗೇಟು

    ನಾನು ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ, ಅಂತಲೇ ಭಾಷಣ ಆರಂಭಿಸಿದರು. ಈ ಸರ್ಕಾರ ದಪ್ಪ ಎಮ್ಮೆ ಚರ್ಮದ ಸರ್ಕಾರ ಇದ್ದಂತೆ. ಕೊರೊನಾ ಬಂದಾಗ ಬೆಡ್ ಸಿಗಲಿಲ್ವೇ? ಆಕ್ಸಿಜನ್ ಸಿಗಲಿಲ್ವೇ? ಸರಿಯಾಗಿ ಔಷಧಿ ಕೊಡಲಿಲ್ವೇ? ನಾವು ರಾಜಕಾರಣಿಗಳು ಯಾರೂ ಸಾಯಲಿಲ್ಲ. ಸತ್ತ ಕುಟುಂಬಗಳಲ್ಲಿ ಇನ್ನೂ ನೋವು ಮಾಸಿಲ್ಲ ಎಂದರು.

    ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 31 ಜನ ಸತ್ತರೆ. ಮೂರೇ ಜನ ಸತ್ತರು ಅಂತೀರಾ? ನಾವು ನಮ್ಮ ಮನೆಯಲ್ಲಿ ಸಾಕಿದ ನಾಯಿ ಕುರಿ ಸತ್ತರೆ ನೋವಾಗುತ್ತದೆ. ಆ ದಿನ ಊಟ ಮಾಡಲ್ಲ. ಆದರೆ ನಮಗೆ ವೋಟು ಹಾಕಿದ ಜನ 31 ಮಂದಿ ಸತ್ತರೆನಿಮಗೆ ಭಾರತರತ್ನ ಬಿರುದು ಕೊಡಬೇಕಾ? ನಮ್ಮ ಗೂಟದ ಕಾರುಗಳು, ಪೆÇಲೀಸ್ ಸೆಕ್ಯೂರಿಟಿ ಎಲ್ಲವೂ ಕ್ಷಣಿಕ, ನಮ್ಮ ಅಹಂ ಹಮ್ಮು ಬಿಮ್ಮು ಮೂರು ಕಾಸಿಗೆ ಕೆಲಸಕ್ಕೆ ಬರಲ್ಲ. ಬಿಜೆಪಿ ಹುಟ್ಟಿದ್ದು ಸ್ವಾತಂತ್ರ್ಯ ಬಂದ ನಂತರ. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ನೀವು ಕಾಂಗ್ರೆಸ್ ಏನು ಮಾಡಿಲ್ಲ ಅಂತೀರಾ? ಇಂದಿರಾ ಗಾಂಧಿ ಈ ದೇಶಕ್ಕಾಗಿ ಪ್ರಾಣ ಬಿಟ್ಟರು. ಆದರೆ ಈಗ ಬಿಜೆಪಿಯವರು ದೇಶ ಉದ್ದಾರ ಮಾಡೋಕೆ ಬಂದಿದ್ದಾರಂತೆ, ಜನ ಒಂದು ಸಲ ಯಾಮಾರಬಹುದು, ಯಾವಾಗಲೂ ಯಾಮಾರಿಸೋಕೆ ಆಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್

    ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಳುಗಲ್ಲ. ನಾನು ಮಾನಮರ್ಯಾದೆ ಇಲ್ಲದವರ ಬಗ್ಗೆ ಮಾತನಾಡಲ್ಲ. ಅದು ನನ್ನ ಸ್ವಭಾವ ಅಂತಲೇ ಸಚಿವ ಸುಧಾಕರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ವಸ್ತುಗಳನ್ನ ಹರಾಜು ಮಾಡಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸ್ಥಾನಗಳನ್ನ ಹರಾಜು ಮಾಡಬೇಡಿ, ಇದು ದೇಶದ ಮಹಾನ್ ನಾಯಕರಿಗೆ ಅವಮಾನ ಮಾಡಿದಂತೆ. ನಿಮ್ಮ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಿ ಎಂದು ಮನವಿ ಮಾಡಿಕೊಂಡರು.