Tag: government

  • ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿಕೆಶಿ, ಸಿದ್ದರಾಮಯ್ಯ ಅವರಂತೆ ಯಾಕೆ ಆಡ್ತೀರಾ?: ಜೋಶಿ

    ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿಕೆಶಿ, ಸಿದ್ದರಾಮಯ್ಯ ಅವರಂತೆ ಯಾಕೆ ಆಡ್ತೀರಾ?: ಜೋಶಿ

    ಧಾರವಾಡ: ಕಾಂಗ್ರೆಸ್ ಪಕ್ಷಕ್ಕೆ ಜನ ಹಿತ ಏನು ಹಾಗೂ ಜನ ಎಲ್ಲಿ ಹೋಗಿ ವೋಟು ಹಾಕಿದ್ರು ಅಂತಾ ಗೊತ್ತಿಲ್ಲ. ದೇಶದಲ್ಲಿ 29 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಅದರಲ್ಲಿ ಎನ್‍ಡಿಎ ಮೈತ್ರಿ ಕೂಟ 12 ಸ್ಥಾನಗಳನ್ನು ಗೆದ್ದಿದೆ. ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡ ರಾಹುಲ್ ರೀತಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.


    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನ ಎರಡು ಕಡೆ ಗೆದ್ದಿದ್ದು ಬಿಟ್ಟರೆ ಸಮಗ್ರ ಪಾಲು ಇಲ್ಲ. ನಾವು ತೆಲಂಗಾಣ, ಕರ್ನಾಟಕ, ಉತ್ತರ ಈಶಾನ್ಯದಲ್ಲಿ ಗೆದ್ದಿದ್ದೇವೆ. ಮಧ್ಯಪ್ರದೇಶ ಹಾಗೂ ಹಿಂದಿನ ಚುನಾವಣೆಯಲ್ಲಿ ಯುಪಿಯಲ್ಲಿ ಕೂಡಾ ಗೆದ್ದಿದ್ದೇವೆ. ಆಗಲೂ ಸಹಿತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಲ್ಲಿತ್ತು. ತೈಲ ಬೆಲೆ ಕಂಟ್ರೋಲ್ ಆಗಿರುವಂತದ್ದು ಕಾಂಗ್ರೆಸ್ ಸಮಯದಲ್ಲಿ, ಇವತ್ತಿನ ಅಂತರಾಷ್ಟ್ರೀಯ ಬೆಲೆ ಪ್ರಕಾರ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ನಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒತ್ತಡ ಹಾಕುತಿದ್ದೇವೆ ಎಂದರು. ಇದನ್ನೂ ಓದಿ: ಉಪಚುನಾವಣೆ ಗೆದ್ದರೆ ನಾವು ಭಾರೀ ಬೀಗಬಾರದು, ಸೋತರೆ ಧೃತಿಗೆಡಬಾರದು: ಜೋಶಿ

    ತೆರಿಗೆ ಕಡಿಮೆ ಮಾಡಿ ನಾವು ಪೆಟ್ರೋಲ್ ಹಾಗೂ ಡೀಸೆಲ್ ಕೊಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ಒಂದು ಪೈಸೆ ದರ ಕಡಿಮೆಯಾಗಿಲ್ಲ. ಡಿಕೆಶಿ ಹಾಗೂ ರಾಹುಲ್ ಗಾಂಧಿ ಅವರನ್ನು ನಾನು ಪ್ರಶ್ನೆ ಮಾಡುತ್ತೇನೆ. ಚುನಾವಣೆ ಫಲಿತಾಂಶ ಅವರ ಪರ ಬಂದಿದೆ ಎಂದರೆ ಅವರು ದರ ಕಡಿಮೆ ಮಾಡುವುದಿಲ್ಲವೇ? ಡಿಕೆಶಿ ಹಲವು ಖಾತೆ ನಿರ್ವಹಣೆ ಮಾಡಿವರು. ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು. ಆದರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ರಾಹುಲ್ ರೀತಿ ಯಾಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.

    ಮನೆಯಲ್ಲಿ ತಿಳುವಳಿಕೆ ಇಲ್ಲದವರಿಗೆ ಸ್ವಲ್ಪ ವಿನಾಯ್ತಿ ನೀಡಬಹುದು. ಆದರೆ ನೀವು ರಾಹುಲ್ ರೀತಿ ಅಲ್ಲ, ಸ್ವಲ್ಪ ಪ್ರಬುದ್ಧರಾಗಿ ಮಾತನಾಡಿ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ತೈಲ ದರ ರಾಹುಲ್ ಗಾಂಧಿಗೆ ಕೇಳಿ ಕಡಿಮೆ ಮಾಡ್ತಿರಾ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ ಜೋಶಿ, ನಾವು ಅಲ್ಪ ಸಂಖ್ಯಾತರ, ಬಹುಸಂಖ್ಯಾತರ ಪರ ಅಲ್ಲ. ನಾವು ತುಷ್ಟಿಕರಣ ರಾಜಕಾರಣ ಮಾಡಲ್ಲ. ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿ ಅವರು ತುಷ್ಟಿಕರಣ ಮಾಡುತ್ತಿದ್ದಾರೆ. ಆದರೆ ನಮ್ಮದು ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

  • ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ – ಖಾದ್ಯ ತೈಲದ ಬೆಲೆ ಇಳಿಸಲು ಮುಂದಾದ ಸರ್ಕಾರ

    ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ – ಖಾದ್ಯ ತೈಲದ ಬೆಲೆ ಇಳಿಸಲು ಮುಂದಾದ ಸರ್ಕಾರ

    ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಳಿಸಿದ ಬೆನ್ನಲ್ಲೇ ಜನ ಸಾಮಾನ್ಯರಿಗೆ, ಅದರಲ್ಲೂ ಗೃಹಿಣಿಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೊಂದು ಗಿಫ್ಟ್ ಸಿಕ್ಕಿದೆ. ಅಡುಗೆಗೆ ಬಳಸುವ ಖಾದ್ಯ ತೈಲದ ಬೆಲೆಯನ್ನು ಇಳಿಕೆ ಮಾಡುವ ಕುರಿತು ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.

    ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ತಾಳೆ ಎಣ್ಣೆ, ಕಡಲೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆಗಳ ಬೆಲೆಗಳನ್ನು ಸ್ಲಾಬ್‍ಗಳ ಆಧಾರದಲ್ಲಿ ಇಳಿಕೆ ಮಾಡುವುದಾಗಿ ತಿಳಿಸಿದೆ. ಖಾದ್ಯತೈಲದ ಬೆಲೆಗಳ ಇಳಿಕೆ ಒಂದೊಂದು ರಾಜ್ಯದಲ್ಲಿ ವಿಭಿನ್ನವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ದರ ಹೆಚ್ಚಿದೆ. ಆದರೆ ಆಮದು ಸುಂಕವನ್ನು ಕಡಿತ ಮಾಡಿರುವ ಕಾರಣ, ಅದರ ಫಲವನ್ನು ಗ್ರಾಹಕರಿಗೆ ನೀಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಎಣ್ಣೆ ಬೀಜಗಳ ಪೂರೈಕೆ ಹೆಚ್ಚಳವಾಗಿರುವುದು, ಡೀಸೆಲ್ ಬೆಲೆಗಳು ಇಳಿಕೆ ಆಗಿರುವುದು ಖಾದ್ಯ ತೈಲಗಳ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೆಂದು ಇಲ್ಲದ ರೀತಿಯಲ್ಲಿ ಖಾದ್ಯ ತೈಲದ ಬೆಲೆ ಶೇಕಡಾ 62 ರಷ್ಟು ಹೆಚ್ಚಳ ಕಂಡಿತ್ತು. ಕಳೆದ ಜನವರಿಯಲ್ಲಿ 90 ರೂಪಾಯಿಗೆ ಲೀಟರ್ ಪಾಮ್ ಆಯಿಲ್ ಸಿಗುತ್ತಿತ್ತು. ನಂತರ ಅದು 150 ರೂಪಾಯಿವರೆಗೂ ಮುಟ್ಟಿತ್ತು. ಇತ್ತೀಚಿಗೆ ಇಳಿಕೆ ಹಾದಿಯಲ್ಲಿತ್ತು. ಸದ್ಯ 125 ರೂಪಾಯಿಗೆ ಅದು ಸಿಗುತ್ತಿದೆ. ಸೂರ್ಯಕಾಂತಿ ಎಣ್ಣೆ ಬೆಲೆ 180 ರೂಪಾಯಿ ಆಗಿತ್ತು. ಸದ್ಯ ಅದರ ಬೆಲೆ 140 ರೂಪಾಯಿಯಿದೆ. ಈಗ ಕೇಂದ್ರ ಸರ್ಕಾರ ಖಾದ್ಯ ತೈಲ ಬೆಲೆಗಳನ್ನು ಇಳಿಸುವ ಕಾರಣ ಇದು ಮತ್ತಷ್ಟು ಇಳಿಯಲಿದೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

  • ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ನವದೆಹಲಿ: ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಇಷ್ಟುದಿನ ತೈಲ ಬೆಲೆ ಏರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ನೇತೃತ್ವ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದ ಸಾಮಾನ್ಯರ ಜೀವನ ಸಂಕಷ್ಟಕ್ಕೆ ತಿರುಗಿದೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

     

    ಕೇಂದ್ರ ಸರ್ಕಾ ತೈಲ ಬೆಲೆ ಇಳಿಕೆ ಮಾಡಿದೆ. ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಇಳಿಕೆಯ ನಂತರ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ತೈಲ ಬೆಲೆ ಇಳಿಕೆ ಮಾಡಿದ್ದು, ಹೃಯದದಿಂದ ಅಲ್ಲ, ಬದಲಾಗಿ ಭಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೂಟಿಕೋರ ಸರ್ಕಾರಕ್ಕೆ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ ಎಂದು ಟ್ವೀಟ್ ಮಾಡಿ ಆಢಳಿತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 10 ರೂ. ಹಾಗೂ 5 ರೂ. ಕ್ಕೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿರಂತರವಾಗಿತ್ತು. ಅಕ್ಟೋಬರ್ ಒಂದೇ ತಿಂಗಳಲ್ಲಿ ಸುಮಾರು 30ಕ್ಕೂ ಅಧಿಕ ಬಾರಿ ಪೈಸೆಗಳ ಲೆಕ್ಕದಲ್ಲಿ ಬೆಲೆ ಏರಿಕೆಯಾಗಿತ್ತು. ಇದರಿಂದ ಜನ ಸಾಮಾನ್ಯರಿಗೆ ನೇರವಾಗಿ ಪರಿಣಾಮ ಬೀರುವುದಲ್ಲದೇ ಪೆಟ್ರೋಲ್, ಡೀಸೆಲ್ ಅವಲಂಬಿತ ಎಲ್ಲ ವಸ್ತುಗಳ ಬೆಲೆಯೂ ಅಧಿಕವಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಕಾರಣವಾಗಿತ್ತು. ಜನ ಸಾಮಾನ್ಯರ ಆಕ್ರೋಶ ಎದುರಿಸಲಾಗದ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದವು. ಈ ವಿಚಾರವನ್ನು ಗಣನೆಗೆ ತೆಗೆದುಕೊಂಡ ಮೋದಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

  • ನ.8 ರಿಂದ ಅಂಗನವಾಡಿ ಕೇಂದ್ರಗಳು ರೀ ಓಪನ್

    ನ.8 ರಿಂದ ಅಂಗನವಾಡಿ ಕೇಂದ್ರಗಳು ರೀ ಓಪನ್

    ಬೆಂಗಳೂರು: ಈಗಾಗಲೇ ಹಂತ ಹಂತವಾಗಿ ಎಲ್ಲಾ ಶಾಲಾ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸಿರುವ ಸರ್ಕಾರ, ಇದೀಗ ನವೆಂಬರ್ 8 ರಿಂದ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನೂ ಆರಂಭಿಸಲು ಅನುಮತಿ ನೀಡಿ, ಈ ಸಂಬಂಧ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ.

    ಕೋವಿಡ್ ನಿಯಂತ್ರಣ ಮಾರ್ಗಸೂಚಿಯ ಎಲ್ಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನ.8 ರಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ ಮಕ್ಕಳಿಗೆ ಕಲಿಕಾ ಚಟುವಟಿಕೆ ನಡೆಸಬಹುದು. ಮೊದಲ ಹಂತದಲ್ಲಿ ಬೆಳಗ್ಗೆ 10ರಿಂದ 12ರವರೆಗೆ ಮಾತ್ರ ನಡೆಸಬೇಕು. ಕೇಂದ್ರದ ಆರಂಭಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯತ್ ಗಮನಕ್ಕೆ ತರಬೇಕು, ಮಕ್ಕಳ ಹಾಜರಾತಿಗೆ ಪೋಷಕರ ಅನುಮತಿ ಪತ್ರ ಪಡೆಯಬೇಕು. ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

    ಮಾರ್ಗಸೂಚಿ:
    ಅಂಗನವಾಡಿಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಅದು ಪುಟ್ಟಮಕ್ಕಳ ಕೈಗೆ ಸಿಗದಂತೆ ಸಿಬ್ಬಂದಿ ಎಚ್ಚರ ವಹಿಸಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳನ್ನು ಕನಿಷ್ಠ 1 ಮೀಟರ್ ಅಂತರದಲ್ಲಿ ಕೂರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ತಂಡಗಳನ್ನು ರಚಿಸಿ ಒಂದು ತಂಡ ಒಂದು ದಿನ, ಮತ್ತೊಂದು ತಂಡ ಮರುದಿನ ಬರಲು ಸೂಚಿಸಬೇಕು. ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯಬೇಕು. ಕೇಂದ್ರಗಳಿಗೆ ಸಾರ್ವಜನಿಕರ ಸಂದರ್ಶನ ನಿರ್ಬಂಧಿಸಬೇಕು. ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ ಲಕ್ಷಣಗಳಿರುವ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಬೇಕು. ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸೂಚಿಸಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಲಂಡನ್‍ನಿಂದ ಬರೋ ಉಡುಗೊರೆಗೆ ಆಸೆಪಟ್ಟು 4.49 ಲಕ್ಷ ರೂ. ಕಳ್ಕೊಂಡ್ರು!

  • ಪಟಾಕಿ ಇಲ್ಲದೇ ದೀಪಾವಳಿ ಆಚರಿಸಲು ಶಾಲೆಗಳಲ್ಲೇ ಮಕ್ಕಳಿಗೆ ಪ್ರೇರಣೆ- ದೆಹಲಿ ಸರ್ಕಾರದಿಂದ ಹೊಸ ಪ್ರಯತ್ನ

    ಪಟಾಕಿ ಇಲ್ಲದೇ ದೀಪಾವಳಿ ಆಚರಿಸಲು ಶಾಲೆಗಳಲ್ಲೇ ಮಕ್ಕಳಿಗೆ ಪ್ರೇರಣೆ- ದೆಹಲಿ ಸರ್ಕಾರದಿಂದ ಹೊಸ ಪ್ರಯತ್ನ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ಅರವಿಂದ್ ಕೇಜ್ರಿವಾಲ್‌ ನೇತೃತ್ವದ ಸರ್ಕಾರ, ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಹೊಸ ಹೊಸ ಚಿಂತನೆಗಳನ್ನು ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಈ ಬಾರಿ ಪಟಾಕಿ ರಹಿತ ದೀಪಾವಳಿ ಆಚರಿಸಲು ಮಕ್ಕಳನ್ನು ಪ್ರೇರೇಪಿಸಲು ಶಾಲೆ ಮತ್ತು ಕಾಲೇಜುಗಳಿಗೆ ದೆಹಲಿ ಸರ್ಕಾರ ಸೂಚನೆ ನೀಡಿದೆ‌.

    FIRECRACKERS

    ನವದೆಹಲಿಯಲ್ಲಿ ನವೆಂಬರ್ 1ರಿಂದ ದೆಹಲಿಯಲ್ಲಿ ಶಾಲೆಗಳು ಶುರುವಾಗಿವೆ. ಶಾಲೆಗಳಲ್ಲಿ ದೀಪಾವಳಿ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳನ್ನೂ ಪಟಾಕಿ ರಹಿತವಾಗಿ ಆಚರಿಸಲು ಮಕ್ಕಳನ್ನು ಪ್ರೇರೇಪಿಸುವಂತೆ ಶಿಕ್ಷಕರನ್ನು ದೆಹಲಿ ಸರ್ಕಾರ ಕೇಳಿಕೊಂಡಿದೆ. ಇದನ್ನೂ ಓದಿ: ದೀಪಾವಳಿ ವಿಶೇಷ ರಾಯನ್ ಕ್ಯೂಟ್ ಫೋಟೋಸ್ ಶೇರ್ ಮಾಡಿದ ಮೇಘನಾ ರಾಜ್

    ತರಗತಿಗಳ ವೇಳೆ ಮತ್ತು ಶಾಲೆಗಳ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ಪಟಾಕಿಗಳಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪಟಾಕಿ ಹೊಡೆಯದಂತೆ ಜಾಗೃತಿ ಮೂಡಿಸಲು ಹೇಳಿದೆ. ಮುಂಬರುವ ಎಲ್ಲ ಹಬ್ಬಗಳನ್ನು ದೀಪ, ಮೇಣ ಬೆಳಗುವ ಮೂಲಕ ಆಚರಿಸಲು ತಿಳಿಸುವಂತೆ ಶಾಲೆ ಮುಖ್ಯಸ್ಥರಿಗೆ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    DEEPAVALI

    ದೆಹಲಿಯಲ್ಲಿ ದೀಪಾವಳಿ ಬಳಿಕ ಭಾರಿ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಕಾರಣ ದೀಪಾವಳಿ ವೇಳೆ ಸಿಡಿಸುವ ಪಟಾಕಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿರುವ ವಾಹನ ದಟ್ಟಣೆ ಮತ್ತು ಕೃಷಿ ಭೂಮಿಗಳಿಗೆ ಹಚ್ಚುವ ಬೆಂಕಿಯಿಂದ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಪಟಾಕಿಯಿಂದ ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಗಾಳಿಯಲ್ಲಿ ಬೆರೆಯಲಿದ್ದು, ಇದರಿಂದ ಮಾರಕ ರೋಗಗಳು ಕೂಡಾ ಬರಲಿದೆ ಎಂದು ದೆಹಲಿ ಸರ್ಕಾರ ಎಚ್ಚರಿಸಿದೆ.

  • ರೈತರ ನೋವನ್ನು ಅರ್ಥಮಾಡಿಕೊಳ್ಳಲು ಅವರ ಮಾತನ್ನು ಆಲಿಸಬೇಕು: ವರುಣ್ ಗಾಂಧಿ

    ರೈತರ ನೋವನ್ನು ಅರ್ಥಮಾಡಿಕೊಳ್ಳಲು ಅವರ ಮಾತನ್ನು ಆಲಿಸಬೇಕು: ವರುಣ್ ಗಾಂಧಿ

    ನವದೆಹಲಿ: ರೈತರ ನೋವನ್ನು ಅರ್ಥಮಾಡಿಕೊಳ್ಳಲು ಮೊದಲು ಅವರ ಮಾತನ್ನು ಆಲಿಸಬೇಕು ಎಂದು ಪಕ್ಷದ ವಿರುದ್ಧ ಬಿಜೆಪಿಯ ಲೋಕಸಭಾ ಸಂಸದ ವರುಣ್ ಗಾಂಧಿ ಮತ್ತೆ ಕಿಡಿಕಾರಿದ್ದಾರೆ.

    ಇಂದು ಲಖಿಂಪುರ ಮತ್ತು ಪಿಲಿಭಿತ್ ಗಡಿಭಾಗದ ರೈತರೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು. ರೈತರ ನೋವಿಗೆ ಕಿವಿಗೊಡಬೇಕು. ರೈತರ ಕಷ್ಟಗಳನ್ನು ತಿಳಿದುಕೊಳ್ಳಲು ಮೊದಲು ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಸಿಗಲಿದೆ ಎಂಬುದಕ್ಕೆ ಕಾನೂನು ರಕ್ಷಣೆ ಬೇಕಾಗಿದೆ. ಇದರಿಂದ ಮಾತ್ರವೇ ಸಗಟು ಮಾರುಕಟ್ಟೆಯಲ್ಲಿ ರೈತರ ಶೋಷಣೆ ತಪ್ಪಲಿದೆ ಎಂದು ಹೇಳಿದರು. ಇದನ್ನೂ ಓದಿ:  ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ

    ಕಳೆದ ಕೆಲವು ದಿನಗಳಿಂದ ವರುಣಗಾಂಧಿ ಸತತವಾಗಿ ರೈತರ ಬೇಡಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್ 29ರಂದು ಮಂಡಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಪಿಲಿಭಿತ್ ಸೇರಿದಂತೆ 17 ಜಿಲ್ಲೆಗಳಲ್ಲಿ ರೈತ ತನ್ನ ಭತ್ತದ ಬೆಳೆಗೆ ತಾನೇ ಬೆಂಕಿ ಹಚ್ಚುತ್ತಿದ್ದಾನೆ ಎಂದು ಮಂಡಿ ನೌಕರರಿಗೆ ಹೇಳಿದ್ದರು. ಇದು ಇಡೀ ರಾಜ್ಯಕ್ಕೆ ದೊಡ್ಡ ಅವಮಾನ ಎಂದು ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀಟ್ ಫಲಿತಾಂಶ ಪ್ರಕಟ- ಇ-ಮೇಲ್‍ಗೇ ರಿಸಲ್ಟ್

  • ಜನಸೇವಕ, ಜನಸ್ಪಂದನದಿಂದ ಜನಸ್ನೇಹಿ ಆಡಳಿತ: ಬೊಮ್ಮಾಯಿ

    ಜನಸೇವಕ, ಜನಸ್ಪಂದನದಿಂದ ಜನಸ್ನೇಹಿ ಆಡಳಿತ: ಬೊಮ್ಮಾಯಿ

    -ಕರ್ನಾಟಕದ ಆಡಳಿತದಲ್ಲಿ ಬದಲಾವಣೆಯ ಪರ್ವ ಪ್ರಾರಂಭ

    ಬೆಂಗಳೂರು: ಜನಸೇವಕ ಹಾಗೂ ಜನಸ್ಪಂದನ ಕಾರ್ಯಕ್ರಮಗಳಿಂದ ಜನಸ್ನೇಹಿ ಆಡಳಿತ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.

    ಇಂದು ಜನಸೇವಕ- ಮನೆಬಾಗಿಲಿಗೆ ಸರ್ಕಾರದ ಸೇವೆಗಳು, ಜನಸ್ಪಂದನ – ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ, 1902 ಸಹಾಯವಾಣಿ, ಮೊಬೈಲ್ ಆ್ಯಪ್ ಹಾಗೂ ವೆಬ್ ಪೋರ್ಟಲ್‍ಗಳು ಹಾಗೂ ಸಾರಿಗೆ ಇಲಾಖೆಯ 30 ಸಂಪರ್ಕರಹಿತ ಆನ್‍ಲೈನ್ ಸೇವೆಗಳನ್ನು ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರರಂತೆ ನೇತ್ರ ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ!

    ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಆಡಳಿತದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾದ ದಿನ. ನಮ್ಮ ಕರ್ತವ್ಯ, ಜವಾಬ್ದಾರಿ, ಉತ್ತರದಾಯಿತ್ವ ಎನ್ನುವ ಬಗ್ಗೆ ಆಳುವವರು ಹಾಗೂ ಆಡಳಿತ ನಡೆಸುವವರಲ್ಲಿ ಸ್ಪಷ್ಟತೆ ಇದ್ದಾಗ ಮಾತ್ರ ಜನಹಿತ, ಜನಸ್ನೇಹಿ ಆಡಳಿತ ಸಾಧ್ಯವಾಗುತ್ತದೆ. ಅಧಿಕಾರಿಶಾಹಿ, ವಿಳಂಬಧೋರಣೆಯ ಮುಖಾಂತರ ತಳಹಂತದಲ್ಲಿ ನಾಗರಿಕರ ಸೇವೆ ಮರೀಚಿಕೆಯಾಗುವುದನ್ನು ತಪ್ಪಿಸಲು ಹಾಗೂ ಸರ್ಕಾರದ ಸೇವೆಯನ್ನು ಸರಳವಾಗಿ ತಲುಪಿಸಲು ಸರ್ಕಾರ ಜನರ ಬಾಗಿಲಿಗೆ ಆಡಳಿತವನ್ನು ಒಯ್ಯುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಜನರ ಸುತ್ತಲೂ ಆಡಳಿತ ಮತ್ತು ಅಭಿವೃದ್ಧಿ:
    ಜನಸೇವಕ ಕಾರ್ಯಕ್ರಮದ ಮೂಲಕ ಜನ ಹೆಚ್ಚಾಗಿ ಬಳಸುವ ಸರ್ಕಾರದ ಸೇವೆಗಳನ್ನು ಸಕಾಲದಡಿ ಜಾರಿಗೊಳಿಸಲಾಗಿದೆ. ಜನರ ಸುತ್ತಲೂ ಆಡಳಿತ, ಅಭಿವೃದ್ಧಿ ಆಗಬೇಕು. ಇದು ಸರ್ಕಾರದ ಧ್ಯೇಯ. ಆಡಳಿತದಲ್ಲಿ ಸುಧಾರಣೆ, ಜನಪರ, ಬಡವರಪರ ನಮ್ಮ ಆಡಳಿತ ಇರಲಿದೆ. ಆಡಳಿತ ಸುಧಾರಣೆ ಸಮಿತಿಯ ಶಿಫಾರಸ್ಸಿನ ಅನ್ವಯ ಉತ್ತಮ ಆಡಳಿತಕ್ಕಾಗಿ ಹಲವಾರು ಸೇವೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಸೇವೆಗಳಿಂದ ಜನರ ಸಮಯ ಉಳಿಯುತ್ತದೆ. ಭ್ರಷ್ಟಾಚಾರ ನಿಲ್ಲುತ್ತದೆ. ನಾಗರಿಕರು ತಮ್ಮ ಸಮಯವನ್ನು ಕ್ರಿಯಾತ್ಮಕವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ರಾಜ್ಯದ ಜನ ಶ್ರೀಮಂತರಾದರೆ, ಅವರ ಜೀವನ ಮಟ್ಟ, ಆದಾಯ ಸುಧಾರಣೆ, ಆರೋಗ್ಯ ಮಟ್ಟ ಉತ್ತಮ ಶಿಕ್ಷಣ, ಉದ್ಯೋಗ ಸೃಷ್ಟಿ ಎಲ್ಲವೂ ಸುಧಾರಿಸುತ್ತದೆ. ಆಧಿಕಾರ, ಆಡಳಿತ ಎಂದರೆ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಎಂದು ನುಡಿದರು.

    ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾಗಬೇಕು:
    ಇಂದು ರಾಜ್ಯ ತಲಾವಾರು ಆದಾಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇವಲ 35% ಜನ ಮಾತ್ರ ರಾಜ್ಯದ ಆದಾಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾದರೆ ರಾಜ್ಯದ ಆದಾಯವೂ ಹೆಚ್ಚಾಗುತ್ತದೆ. ಈ ಚಿಂತನೆ ನಮ್ಮ ಸರ್ಕಾರದ್ದು. ಸರ್ಕಾರದಲ್ಲಿ ಜನರ ಪಾಲ್ಗೊಳ್ಳುವಿಕೆ ಇರಬೇಕು. ಫಲಾನುಭವಿಗಳಾಗಿ ತಮ್ಮ ಕಾರ್ಯದಕ್ಷತೆದಿಂದ ಆದಾಯ ಹೆಚ್ಚಿಸಿಕೊಂಡು ಅವರು ಪಾಲುದಾರರಾಗಬೇಕು. ಆಗ ಮಾತ್ರ ಸಮುದಾಯ, ಸಮಾಜ, ಸರ್ಕಾರ, ರಾಜ್ಯ ಅಭಿವೃದ್ಧಿ ಆಗುತ್ತದೆ. ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಈ ಸೇವೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಈ ಕಾರ್ಯಕ್ರಮ ಇಡೀ ವ್ಯವಸ್ಥೆಯ ಬದಲಾವಣೆಗೆ ಭದ್ರ ಬುನಾದಿಯಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊವ್ಯಾಕ್ಸಿನ್ ಲಸಿಕೆ ಪಡೆದವರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಬಹುದು

    ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್‍ಲೈನ್ ಸೇವೆ:
    60 ಲಕ್ಷ ಜನರು ಸಾರಿಗೆ ಕಚೇರಿಗೆ ಬರುವುದು ತಪ್ಪಿಸಲು ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್‍ಲೈನ್ ಸೇವೆಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರಮುಖ 10 ಕಾರು, ಸ್ಕೂಟರ್ ಮಾರುವ ಸಂಸ್ಥೆಗಳಿಗೆ ವಾಹನ ನೋಂದಣಿ ಮಾಡಿಕೊಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಆಹಾರವಿತರಣೆ, ಬಿಬಿಎಂಪಿ ಯಾವುದೇ ಪ್ರಮಾಣಪತ್ರ. ಮಾಸಾಶನ, ಆಧಾರ ಕಾರ್ಡ್ 56 ಸೇವೆ, ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ತೆ, 1902 ಸಹಾಯವಾಣಿ , ಮೊಬೈಲ್ ಆ್ಯಪ್ ಪ್ರಾರಂಭಿಸಲಾಗಿದೆ. ಸುಮಾರು 4,11,000 ಹೊಸ ಪಡಿತರ ಕಾರ್ಡಿಗೆ ಅನುಮೋದನೆ ನೀಡಿರುವುದಾಗಿ ತಿಳಿಸಿದರು.

    ನಿಗದಿತ ಗುರಿ, ಸ್ಪಷ್ಟ ದಿಕ್ಸೂಚಿ, ಸಂಕಲ್ಪ, ಬದ್ಧತೆಯಿಂದ ಆಡಳಿತ ಸುಧಾರಣೆ ಆಗಲಿದೆ. ಜನಸೇವಕರು ಜನರ ಮನೆ ಬಾಗಿಲಿಗೆ ಬಂದಾಗ ನಾಗರಿಕರು ಸೌಜನ್ಯದಿಂದ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.

  • ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ

    ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ

    ತಿರುವನಂತಪುರಂ: ಸ್ಯಾಂಡಲ್‍ವುಡ್‍ನ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೇರಳ ಸರ್ಕಾರ ಜಿಮ್‍ಗಳಲ್ಲಿ ಎಇಡಿ ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ.

    ಕೇರಳ ಸರ್ಕಾರ ರಾಜ್ಯಾದ್ಯಂತ ಇರುವ ಎಲ್ಲ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್‍ಗಳು ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ-ಆಟೋಮೇಟೆಡ್ ಎಕ್ಸ್ಟರ್ನಲ್ ಟಿಫಿಬ್ರಿಲೇಟರ್)ಗಳನ್ನು ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಯನ್ನು ಎತ್ತಿಹಿಡಿದಿದೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    ನಗರದ ರಾಯಲ್ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಶನಿವಾರ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ಅಂಟೋನಿ ರಾಜು, ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್ ಅವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಇದನ್ನು ತುರ್ತಾಗಿ ಜಾರಿಗೆ ತರುವ ಭರವಸೆಯನ್ನು ನೀಡಿದರು. ನಟ ಪುನೀತ್ ಅಕಾಲ ನಿಧನದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್ 

    ಹೃದಯ ಸ್ತಂಭನದಿಂದ ಮೃತಪಟ್ಟ ನಟ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ನೆರವೇರಿದೆ. ಅಭಿಮಾನಿಗಳು ಪ್ರೀತಿಯ ಅಪ್ಪುನನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ.

  • ಜನರಿಗೆ ತೊಂದರೆ ನೀಡುವಲ್ಲಿ ಮೋದಿ ಸರ್ಕಾರ ದಾಖಲೆ ಮಾಡಿದೆ: ಪ್ರಿಯಾಂಕಾ ಗಾಂಧಿ

    ಜನರಿಗೆ ತೊಂದರೆ ನೀಡುವಲ್ಲಿ ಮೋದಿ ಸರ್ಕಾರ ದಾಖಲೆ ಮಾಡಿದೆ: ಪ್ರಿಯಾಂಕಾ ಗಾಂಧಿ

    ನವದೆಹಲಿ: ಜನರಿಗೆ ತೊಂದರೆ ಕೊಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದಾಖಲೆ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಇಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಸರ್ಕಾರ ಜನರಿಗೆ ತೊಂದರೆ ನೀಡುವಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಈ ವರ್ಷ ಪೆಟ್ರೋಲ್ ಬೆಲೆ ದಾಖಲೆಯ 23.53 ರೂ.ಗಳಷ್ಟು ಹೆಚ್ಚಾಗಿದೆ. ಮೋದಿ ಜಿ ಸರ್ಕಾರವು ಸಾರ್ವಜನಿಕರಿಗೆ ತೊಂದರೆ ನೀಡುವಲ್ಲಿ ದೊಡ್ಡ ದಾಖಲೆಗಳನ್ನು ಮಾಡಿದೆ. ಅತಿ ಹೆಚ್ಚು ನಿರುದ್ಯೋಗ, ಸರ್ಕಾರಿ ಆಸ್ತಿ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

    ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಇದೇ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿ ಅಚ್ಛೇ ದಿನ್ (ಒಳ್ಳೆಯ ದಿನಗಳು) ಎಂದು ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸತತ ನಾಲ್ಕನೇ ದಿನವಾದ ಶನಿವಾರ ಪ್ರತಿ ಲೀಟರ್‍ಗೆ 35 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಮೇಲಿನ ದರವನ್ನು ಪ್ರತಿ ಲೀಟರ್‍ಗೆ 36 ರೂ. ಮತ್ತು ಡೀಸೆಲ್ ಮೇಲೆ 26.58 ರೂ.ಗೆ ಏರಿಕೆ ಮಾಡಲಾಗಿದೆ.

  • ನಮಗೆ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ: ಹೆಚ್.ಡಿ ಕುಮಾರಸ್ವಾಮಿ

    ನಮಗೆ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ: ಹೆಚ್.ಡಿ ಕುಮಾರಸ್ವಾಮಿ

    ಹುಬ್ಬಳ್ಳಿ: ನಮಗೆ ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ, ನಮಗೆ ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತ್ತಿದ್ದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಅದನ್ನು ಬಿಟ್ಟು ಬೇರೆ ಏನು ಹೇಳಲಿಕ್ಕೆ ಸಾಧ್ಯ? ಬಿಜೆಪಿ ಜೊತೆ 5 ವರ್ಷ ಸರ್ಕಾರ ಮಾಡಿದ್ದೆ, 2006ರಲ್ಲಿ ಸರ್ಕಾರ ಮಾಡಲು ಇದೇ ಸಿದ್ದರಾಮಯ್ಯ ಕಾರಣ. ನಮ್ಮ ಪಕ್ಷದ ಬಗ್ಗೆ ಬೇರೆ ವಿಷಯ ಇಲ್ಲದೇ ಮಾತು ಎತ್ತಿದರೆ ಒಳ ಒಪ್ಪಂದ ಅಂತ ಮಾತನಾಡುತ್ತಾರೆ ಎಂದು ಖಾರವಾಗಿ ನುಡಿದರು. ಇದನ್ನೂ ಓದಿ:  ಪ್ರಜ್ವಲ್ ರೇವಣ್ಣಗಿನ್ನೂ ಮದ್ವೆನೇ ಆಗಿಲ್ಲ, ತಾತನಿಂದ ಒಳ್ಳೇದನ್ನ ತಿಳ್ಕೋಬೇಕು: ಸೋಮಣ್ಣ ವ್ಯಂಗ್ಯ

    HDK

    ಇನ್ನೂ ಸಿಂದಗಿಯಲ್ಲಿ ಕಳೆದ 5 ದಿನಗಳಿಂದ ಪ್ರಚಾರ ನಡೆಸಿದ್ದು, ಈ ಬಾರಿ ಚುನಾವಣೆ ಗೆಲ್ಲುತ್ತೇವೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ದೇವೆಗೌಡರ ಕಾಲದ ಹಾಗೂ ನನ್ನ ಕಾಲದ ನೀರಾವರಿ ಯೋಜನೆಗಳು ರೈತರ ಸಾಲ ಮನ್ನಾ ಬಗ್ಗೆ ಹಳ್ಳಿಗಳಲ್ಲಿ ಜನ ಸ್ಪಂದಿಸಿ ಮಾತನಾಡುತ್ತಿದ್ದಾರೆ ಎಂದರು. ಇದೇ ವೇಳೆ ಜನತಾ ಪರಿವಾರದ ಸಿಎಂ ಉದಾಸಿ ಬಿಜೆಪಿಗೆ ಹೋದ ನಂತರ ನಮಗೆ ಹಾನಗಲ್‍ನಲ್ಲಿ ನಾಯಕತ್ವದ ಕೊರತೆ ಇತ್ತು. ಈ ಬಾರಿ ನಾವು ಹಾನಗಲ್‍ನಲ್ಲಿ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ, ಅಲ್ಲಿಯ ಸ್ಥಿತಿ ನೋಡಿ ನಾನು ಮಾತನಾಡುತ್ತೇನೆ ಎಂದರು.  ಇದನ್ನೂ ಓದಿ: ಸಿದ್ದರಾಮಯ್ಯ ತೀರ್ಮಾನ, ಹೇಳಿಕೆಗಳು ಅವರಿಗೆ ಶೋಭೆಯಲ್ಲ: ವಿ. ಸೋಮಣ್ಣ

    ಸಿದ್ದರಾಮಯ್ಯ ಅವರಿಗೆ ಜೆಡಿಎಸ್‍ನಲ್ಲಿ ಸಮಸ್ಯೆ ಇಲ್ಲಾ ಅಂತ ಅವರ ಭಾವನೆ ಇರಬಹುದು, ನಾನು ಅವರಿಗೆ ಮನವಿ ಮಾಡುತ್ತೇನೆ, ಸಿದ್ದರಾಮಯ್ಯ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ ಕೆಲಸ ಮಾಡಬೇಡ, ನಾನು ಯಾರ ಮೇಲೂ ವೈಯಕ್ತಿಕ ನಿಂದನೆ ಮಾಡಿಲ್ಲ, ಆದರೆ ನಾನು ಎಲ್ಲ ನಾಯಕರಿಗೂ ಹೇಳುತ್ತೇನೆ, ಚುನಾವಣೆಯಲ್ಲಿ ಆಗಿರಬಹುದು ಅಥವಾ ಜನಪ್ರತಿನಿಯಾಗಿರಬಹುದು ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ವೈಯಕ್ತಿಕವಾದ ವಿಚಾರ ಚರ್ಚೆ ಮಾಡಲು ಹೋದರೆ ಪರಸ್ಪರ ಕೆಸರೆರಚಾಟ ಮಾಡಿಕೊಂಡು ಹೋದರೆ ಅದಕ್ಕೆ ಅಂತಿಮ ಇರಲ್ಲ ಎಂದು ನುಡಿದರು.