ರಾಯಚೂರು: ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ರೈತರು ಮನವಿ ಮಾಡಿದ್ರೂ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಸರ್ಕಾರಕ್ಕೆ ಬಹುಮತ ಇದ್ರೆ ಸಾಲದು, ಜನರ ಸಹಮತವೂ ಇರಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಎಲ್ಲ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಜೆಡಿಎಸ್ ಬಲಿಷ್ಠವಾಗುತ್ತಿದೆ. ಜನತಾ ಸರ್ಕಾರ ಜಾರಿಗೆ ತರಲು ಜೆಡಿಎಸ್ ಮಿಷನ್ 123 ನಡೆಸಿದ್ದೇವೆ. ಯಾವ ಸರ್ಕಾರವೂ ನೀಡದೇ ಇರುವ ಜನಪ್ರಿಯ ಕಾರ್ಯಕ್ರಮವನ್ನು ಕೊಡಲು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ದಕ್ಕುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಬಕಾಸುರರ ರೀತಿ ನುಂಗೋದು ಅಭಿವೃದ್ಧಿಯಾ?: ಹೆಚ್‍ಡಿಕೆ ತಿರುಗೇಟು
ಜಿಲ್ಲೆಯ ಲಿಂಗಸುಗೂರಿನ ಬೋಗಪುರ ಗ್ರಾಮದಲ್ಲಿ ರೈತ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿದ ಅವರು, ಜಿಲ್ಲಾಡಳಿತ ರೈತರ ವಿಚಾರದಲ್ಲಿ ವಿಫಲವಾಗಿದೆ. ಮೊದಲೇ ಕೊರೊನಾ ಮತ್ತು ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳ ಹಾಗೂ ಸಚಿವರ ತಂಡ ರಚನೆ ಆಗಬೇಕು. ಬೆಳೆಹಾನಿಯಾದ ರೈತರಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು. ಆದರೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಗಾಂಧಿನಗರ: ರೈತರು ಸ್ಮಾಟ್‌ಪೋನ್ ಖರೀದಿಸಲು ಗುಜರಾತ್ ಸರ್ಕಾರ 1500 ಆರ್ಥಿಕ ನೆರವು ಕೊಡುವ ಮೂಲಕವಾಗಿ ಸುದ್ದಿಯಾಗಿದೆ.
ರಾಜ್ಯದಲ್ಲಿನ ರೈತರು ಸ್ಮಾಟ್‌ಪೋನ್‍ವೊಂದನ್ನು ಖರೀದಿಸಲು ಗುಜರಾತ್ ಸರ್ಕಾರವು 1,500ವರೆಗಿನ ಆರ್ಥಿಕ ನೆರವು ಕಲ್ಪಿಸಲು ನಿರ್ಧರಿಸಿದೆ ಎಂದು ರಾಜ್ಯದ ಕೃಷಿ ಇಲಾಖೆಯು ಹೊರಡಿಸಿದ ಅಧಿಸೂಚನೆಯೊಂದು ಹೇಳಿದೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್
ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಸೇವೆಗಳ ಪ್ರಭುತ್ವ ಬೆಳೆಯುತ್ತಿರುವ ಈ ಸಮಯದಲ್ಲಿ ತಮ್ಮ ಕೃಷಿ ಆದಾಯವನ್ನು ಹೆಚ್ಚಿಸಲು ವಿವಿಧ ಉದ್ದೇಶಗಳ ಬಳಕೆಗೆ ಸ್ಮಾಟ್‌ಪೋನ್ ಖರೀದಿಸುವಂತೆ ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಗುಜರಾತ್‍ನಲ್ಲಿ ಭೂಮಿಯನ್ನು ಹೊಂದಿರುವ ಯಾವುದೇ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಸ್ಮಾಟ್‌ಪೋನ್ ಒಟ್ಟು ಮೊತ್ತದ ಶೇ 10 ಭಾಗ ಅಂದರೆ 1,500 ರೂಪಾಯಿ ಸಹಾಯ ಪಡೆಯಲು ಐ-ಖೆದುತ್ ಪೆÇೀರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಕೃಷಿ, ರೈತರ ಕಲ್ಯಾಣ ಮತ್ತು ಸಹಕಾರ ಇಲಾಖೆ ಶನಿವಾರ ಹೊರಡಿಸಿದ ಸರ್ಕಾರದ ನಿರ್ಣಯ (ಜಿಆರ್) ತಿಳಿಸಿದೆ.
ಈ ಆರ್ಥಿಕ ನೆರವು ಸ್ಮಾಟ್‌ಪೋನ್ ಖರೀದಿಸಲು ಮಾತ್ರ ಸಂಬಂಧಿಸಿದೆ. ಚಾರ್ಜರ್, ಇಯರ್ ಫೋನ್ ಮೊದಲಾದ ಬಿಡಿಭಾಗಗಳಿಗಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಪ್ರಕಟಣೆ ಹೇಳಿದೆ. ಅರ್ಜಿಯನ್ನು ಅನುಮೋದಿಸಿದ ನಂತರ, ಫಲಾನುಭವಿ ರೈತರು ಸ್ಮಾಟ್‌ಪೋನ್ ಖರೀದಿ ಬಿಲ್‍ನ ಪ್ರತಿ, ಮೊಬೈಲ್ ಐಎಂಇಐ ಸಂಖ್ಯೆ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.
ನವದೆಹಲಿ: ಕೃಷಿ ಕಾನೂನು ಹಿಂಪಡೆದ ಕೇಂದ್ರ ಸರ್ಕಾರ ಇದೀಗ ಪ್ರತಿಭಟನೆಯನ್ನು ಕೈ ಬಿಡುವಂತೆ ರೈತರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.
#WATCH | We have decided to repeal all 3 farm laws, will begin the procedure at the Parliament session that begins this month. I urge farmers to return home to their families and let’s start afresh: PM Narendra Modi pic.twitter.com/0irwGpna2N
ವಿವಾದಿತ ಕೃಷಿ ಯಾಕ್ದೆಯನ್ನು ವಾಪಸ್ ಪಡೆದುಕೊಂಡಿದೆ. ರೈತರು ನಡೆಸಿದ 355 ದಿನಗಳ ಕಾಲ ಹೋರಾಟದ ನಂತರ ಫಲ ಸಿಕ್ಕಂತಾಗಿದೆ. ಕೈಷಿ ಕಾನೂನು ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ
#WATCH | PM Narendra Modi says, “Whatever I did, I did for farmers. What I’m doing, is for the country. With your blessings, I never left out anything in my hard work. Today I assure you that I’ll now work even harder, so that your dreams, nation’s dreams can be realised.” pic.twitter.com/pTWTEAut4P
ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟ ಹಿನ್ನೆಲೆ ಕಾಯ್ದೆಗಳು ವಾಪಸ್ ತೆಗೆದುಕೊಳ್ಳಲಾಗುವುದು. 3 ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುತ್ತಿದ್ದೇವೆ. ಅದಕ್ಕಾಗಿ ಸಮಿತಿ ರಚಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರು ಇರಲಿದ್ದಾರೆ. ರೈತರು ಹೋರಾಟವನ್ನು ಕೈ ಬಿಡಿ ಎಂದು ಮೋದಿ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
To ensure that farmers get the right amount for their hard work, many steps were taken. We strengthened the rural infrastructure market. We not only increased MSP but also set up record govt procurement centres. Procurement by our govt broke the record of past several decades: PM pic.twitter.com/3UHq71dgkF
ಇತ್ತೀಚೆಗೆ ಭಾರೀ ಚರ್ಚೆಯಾಗಿ ವಿವಾದಕ್ಕೆ ತುತ್ತಾಗಿದ್ದ ಕೃಷಿ ಸಂಬಂಧಿತ ಮೂರೂ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ನಮ್ಮ ನಿರ್ಣಯದಲ್ಲಿಯೇ ಎಲ್ಲೋ ತಪ್ಪು ಆಗಿರಬಹುದು. ಹಾಗಾಗಿ ನಾನು ದೇಶವಾಸಿಗಳಲ್ಲಿ ಕ್ಷಮೆ ಕೋರುವೆ. ತನ್ಮೂಲಕ ಮೂರೂ ಕೃಷಿ ಮಸೂದೆಗಳನ್ನು ಇದೇ ತಿಂಗಳು ಸಂಸತ್ತಿನಲ್ಲಿ ವಾಪಸ್ ತೆಗೆದುಕೊಳ್ಳುವೆ. ರೈತ ಬಂಧುಗಳು ತಮ್ಮ ತಮ್ಮ ಹೊಲ, ತೋಟಗಳಿಗೆ ವಾಪಸ್ ಹೋಗಿ, ಕೃಷಿಯಲ್ಲಿ ತೊಡಗಿರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ: ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ವಿವಾಧಿತ ಕೃಷಿ ಕಾನೂನನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. 355ದಿನಗಳ ಸುದೀರ್ಘವಾದ ರೈತರ ಹೋರಾಟಕ್ಕೆ ಫಲ ಸಿಕ್ಕಿದೆ.
ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು ಎಂದಿದ್ದಾರೆ.
ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
#WATCH | We have also decided to implement Zero Budget Natural Farming…To make MSP more efficient & other issues…a committee to be formed which will comprise, Centre, State representatives, farmers, scientists, economists…Our govt will continue to work for farmers: PM Modi pic.twitter.com/Y27eKzUScy
ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ 80 ಪ್ರತಿಶತ ರೈತರು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಅದನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಬೀಜ, ವಿಮೆ, ಮಾರುಕಟ್ಟೆ, ಉಳಿತಾಯಕ್ಕೆ ಯೋಜನೆಗಳಿಗಾಗಿ ರೈತರಿಗೆ ಫಸಲ್ ಬಿಮಾ, ಪೆನ್ಷನ್ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.
#WATCH | PM Narendra Modi says, “Whatever I did, I did for farmers. What I’m doing, is for the country. With your blessings, I never left out anything in my hard work. Today I assure you that I’ll now work even harder, so that your dreams, nation’s dreams can be realised.” pic.twitter.com/pTWTEAut4P
ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡ್ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ನವದೆಹಲಿ: ವಾಯು ಮಾಲಿನ್ಯವು ದೆಹಲಿಯಲ್ಲಿ ಮಿತಿ ಮಿರುತ್ತಿದ್ದ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಗೆ ದೆಹಲಿ ಕಠಿಣ ಕ್ರಮ ಕೈಗೊಂಡಿದೆ.
ವಾಯುಮಾಲಿನ್ಯ ತಡೆಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಸುಪ್ರೀಂಕೋರ್ಟ್ ನೀಡಿದ 1 ದಿನ ಗಡುವಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ನೇತೃತ್ವದಲ್ಲಿ ನಡೆದ ದೆಹಲಿ ಸುತ್ತಮುತ್ತಲಿನ 4 ರಾಜ್ಯಗಳ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ದೆಹಲಿ, ರಾಜಸ್ತಾನ, ಹರಿಯಾಣ, ಉತ್ರರಪ್ರದೇಶ ಹಾಗೂ ಪಂಜಾಬ್ ರಾಜ್ಯಗಳ ಸಭೆ ನಡೆದಿದೆ. ಬಳಿಕ ತಡರಾತ್ರಿ ವಾಯು ಗುಣಮಟ್ಟ ಆಯೋಗವು ಮುಂದಿನ ಕೆಲವು ದಿನಗಳ ಮಟ್ಟಿಗೆ ಅನ್ವಯ ಆಗುವಂತೆ ಕೆಲವು ಕ್ರಮ ಪ್ರಕಟಿಸಿದೆ.
ಕೈಗೊಂಡ ನಿರ್ಣಯಗಳು:
* ದೆಹಲಿ ಹಾಗೂ ಸುತ್ತಮುತ್ತಲಿನ ವಲಯದಲ್ಲಿ ಮಾಲಿನ್ಯಕಾರಕ ಇಂಧನ ಬಳಕೆ ಉದ್ದಿಮೆಗಳು ಕಾರ್ಯ ನಿರ್ವಹಿಸಕೂಡದು
* 11 ಉಷ್ಣವಿದ್ಯುತ್ ಸ್ಥಾವರಗಳ ಪೈಕಿ 5 ಮಾತ್ರ ನವೆಂಬರ್ 30ರವರೆಗೆ ಕೆಲಸ ಮಾಡಬೇಕು. ಇದನ್ನೂ ಓದಿ:ದೆಹಲಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ
* ನವೆಂಬರ್ 31ರವರೆಗೆ ಅಗತ್ಯವಸ್ತು ಸಾಗಾಣೆ ಟ್ರಕ್ ಹೊರತುಪಡಿಸಿ ಉಳಿದ ಟ್ರಕ್‍ಗಳ ಪ್ರವೇಶ ನಿಷೇಧ.
* 10 ವರ್ಷಕ್ಕಿಂತ ಹಳೆಯ ಪೆಡ್ರೋಲ್, 15 ವರ್ಷಕ್ಕಿಂತ ಹಳೆ ಡಿಸೇಲ್‍ವಾಹನ ನವೆಂಬರ್ 21ರವರೆಗೆ ಸಂಚಾರ ಮಾಡಬಾರದು.
* ನವೆಂಬರ್ 21ರವರೆಗೆ ವರ್ಕ್ ಫ್ರಂ ಹೋಮ್‍ಗೆ ಆದ್ಯತೆ. ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶವಿರುತ್ತದೆ.
* ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಇರುತ್ತದೆ.
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ತನಿಖೆಯಲ್ಲಿ ನಮ್ಮ ಸರ್ಕಾರದ ವೈಫಲ್ಯ ಇಲ್ಲ. ಒಂದು ಸುಳ್ಳು ಸಾವಿರ ಬಾರಿ ಹೇಳುವುದು ಕಾಂಗ್ರೆಸ್ ಸಂಸ್ಕೃತಿ. ಇಡೀ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ ಎಂದು ಸಚಿವ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸೋಮಣ್ಣ, ಗೋಪಾಲಯ್ಯ ಶಾಸಕ ಪ್ರೀತಂ ಗೌಡ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಮುಂದಿನ ಚುನಾವಣೆ ಎದುರಿಸಲು ಸೃಷ್ಟಿ ಮಾಡಿಕೊಂಡಿರುವ ವಿಚಾರವೇ ಬಿಟ್ ಕಾಯಿನ್. ನಿತ್ಯ ಏನು ಸುಳ್ಳು ಹೇಳಬೇಕು ಎಂಬುದು ಕಾಂಗ್ರೆಸ್ ಚಿಂತೆಯಾಗಿದೆ. ಹಾವು ಬಿಡುತ್ತೇವೆ, ಹಾವು ಬಿಡುತ್ತೇವೆ ಅಂತ ಖಾಲಿ ಬುಟ್ಟಿ ಇಟ್ಟುಕೊಂಡು ಸೌಂಡ್ ಮಾಡುತ್ತಿದ್ದಾರೆ. ಇವರ ಹಣೆಬರಹವೇ ಇಷ್ಟು ಎಂದು ಟೀಕಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಪಿಯೂಷ್ ಗೋಯಲ್ ಚಾಲನೆ
ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಇಬ್ಬರು ಹೆಸರು ಹೇಳಲಿ. ಹಾವು ಇಲ್ಲದ ಬುಟ್ಟಿ ಇಟ್ಟುಕೊಂಡು ನಗೆ ಪಾಟಲು ಆಗುವುದು ಬೇಡ ಎಂದು ಸವಾಲು ಹಾಕಿದರು. 2ಜಿ 3ಜಿ ಕಲ್ಲಿದ್ದಲು ಹೀಗೆ ಸಾವಿರಾರು ಕೋಟಿ ರೂ. ಹಗರಣ ಮಾಡಿದ್ದು ಕಾಂಗ್ರೆಸ್. ಇವತ್ತು ದೇಶ ನಡೆಸುತ್ತಿರುವುದು ದೇಶಭಕ್ತ ನರೇಂದ್ರ ಮೋದಿ ಸರ್ಕಾರ ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ವೃದ್ಧೆಯ ಸ್ಫೂರ್ತಿದಾಯಕ ಕಥೆ
ರಫೆಲ್ ವಿಚಾರದಲ್ಲಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದರು. ಅದರಲ್ಲಿ ಲಂಚ ತಿಂದವರು ಇದೇ ಕಾಂಗ್ರೆಸ್‍ನವರು. ಬಿಟ್ ಕಾಯಿನ್ 4,500 ಕೋಟಿ ರೂ. ಅಂತಾರೆ ದಾಖಲೆ ಕೊಡಲಿ. ಇವರಿಗೆ ತಾಕತ್ತು ಇದ್ದರೆ. 2016 ರಲ್ಲೇ ಈ ವ್ಯವಹಾರ ನಡೆದಿದೆ. ವಿದ್ವತ್ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಬಂಧಿಸದೇ ಬಿಟ್ಟು ಕಳುಹಿಸಿದರು ಕಾಂಗ್ರೆಸ್‍ನವರು. ಆಗ ಯಾವ ಒತ್ತಡ ಇತ್ತು. ಸುರ್ಜೆವಾಲ ದೆಹಲಿಯಲ್ಲಿ ಹೇಳುವ ಸಂಸ್ಥೆ ಅಸ್ತಿತ್ವದಲ್ಲೇ ಇಲ್ಲ. ಒಂದು ರಾಷ್ಟ್ರೀಯ ಪಕ್ಷದ ಉಸ್ತುವಾರಿ ಮಾಹಿತಿ ಇಲ್ಲದೆ ಮಾತನಾಡುವುದು ಅವರ ದಿವಾಳಿತನಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದರು.
ಬೆಂಗಳೂರು: ಕಾಂಗ್ರೆಸ್ ನಾಯಕರ ಹೆಸರು ಇದೆ ಎಂದು ಹೇಳಿ ನಮ್ಮ ಬಾಯಿಮುಚ್ಚಿಸಲು ಪ್ರಯತ್ನ ಮಾಡಬೇಡಿ. ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರ ಇದೆ. ತನಿಖೆ ನಡೆಸಿ ಅಪರಾಧಿಗಳನ್ನು ಬಯಲಿಗೆಳೆಯಿರಿ ಎಂದು ಸಿದ್ದರಾಮಯ್ಯ ಟ್ಟಿಟ್ಟರ್ ಮೂಲಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರ ಇದೆ. ತನಿಖೆ ನಡೆಸಿ ಅಪರಾಧಿಗಳನ್ನು ಬಯಲಿಗೆಳೆಯಿರಿ. ಅವರೆಲ್ಲ ಯಾವ ಪಕ್ಷದವರು ಎನ್ನುವುದನ್ನು ಆ ಮೇಲೆ ನೋಡಿಕೊಳ್ಳೋಣ. ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯೋ ಇಲ್ಲವೋ ನಮಗೆ ಗೊತ್ತಿಲ್ಲ, ಅವರು ಅಪರಾಧಿಗಳೆಂದು ಯಾರೂ ಹೇಳಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಿ ಎಂದಷ್ಟೇ ನಾನು ಮತ್ತು ನಮ್ಮ ಪಕ್ಷದ ನಾಯಕರು ಹೇಳುತ್ತಿರುವುದು. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ – ತನಿಖೆಗೆ ಇಡಿ, ಇಂಟರ್‌ಪೋಲ್‌ಗೆ ಪತ್ರ ಬರೆದಿದ್ದ ಸರ್ಕಾರ
ಕಾಂಗ್ರೆಸ್ ನಾಯಕರ ಹೆಸರು ಇದೆ ಎಂದು ಹೇಳಿ ನಮ್ಮ ಬಾಯಿಮುಚ್ಚಿಸಲು ಪ್ರಯತ್ನ ಮಾಡಬೇಡಿ.
ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರ ಇದೆ. ತನಿಖೆ ನಡೆಸಿ ಅಪರಾಧಿಗಳನ್ನು ಬಯಲಿಗೆಳೆಯಿರಿ,
ತನಿಖೆ ನಡೆಸಲು ಹಿಂಜರಿಕೆ ಯಾಕೆ?:
ಬಿಟ್ ಕಾಯಿನ್ ಹಗರಣದ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಯುತ್ತಿದೆ. ಬಸವರಾಜ ಬೊಮ್ಮಾಯಿ ಈಗಿನ ಮುಖ್ಯಮಂತ್ರಿಗಳು ಮಾತ್ರ ಅಲ್ಲ ಹಿಂದಿನ ಗೃಹಮಂತ್ರಿಗಳು ಹೌದು. ಈ ಹಂತದಲ್ಲಿ ಆರೋಪವನ್ನು ನಿರ್ಲಕ್ಷಿಸಿ ಎಂದರೆ ತನಿಖೆಯನ್ನು ಕೈಬಿಡಿ ಎಂದಾಗುವುದಿಲ್ಲವೇ? ಆರೋಪದ ತನಿಖೆ ನಡೆಸಿ ನಿಮ್ಮ ಮೇಲಿನ ಆರೋಪವನ್ನು ಸುಳ್ಳೆಂದು ಸಾಬೀತುಪಡಿಸಿ ಎಂದು ಹೇಳಬೇಕಾಗಿದ್ದ ನೀವು ಆರೋಪವನ್ನೇ ನಿರ್ಲಕ್ಷಿಸಿ ಎಂದು ಹೇಳಿದರೆ ಹೇಗೆ? ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ, ನ್ಯಾಯಾಲಯಗಳ ಅಗತ್ಯ ಇಲ್ಲವೇ? ಪ್ರಧಾನಮಂತ್ರಿಯವರ ಏಕಪಕ್ಷೀಯ ತೀರ್ಮಾನವೇ ಅಂತಿಮವೇ?. ಇದನ್ನೂ ಓದಿ: ಎಥೆನಾಲ್ ಉತ್ಪಾದನೆಗೆ ಮುಂದಾದ ಕೇಂದ್ರ ಸರ್ಕಾರ
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣವನ್ನು ಮುಚ್ಚಿಹಾಕಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ನಿಂದ ಬಿರುಸಿನ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯುತ್ತಿರುವ ಜನತಾ ಪರ್ವದ ಎರಡನೇ ಹಂತದ ಸಂಘಟನಾ ಕಾರ್ಯಗಾರ ಜನತಾ ಸಂಗಮದ ಮೂರನೇ ದಿನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಆ ಮೂಲಕ ಇಡೀ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿವೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ಗೃಹಸಚಿವರೇ ಧಮ್ ಇದ್ದರೆ ಅರೆಸ್ಟ್ ಮಾಡಿ: ಡಿಕೆಶಿ
ಕೆಲ ದಿನಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ದಿಲ್ಲಿಯಲ್ಲಿ ರಫೆಲ್ ಯುದ್ಧ ವಿಮಾನಗಳ ಖರೀದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡೂ ಪಕ್ಷಗಳ ಕೆಸರೆರಚಾಟದಲ್ಲಿ ನಿರತವಾಗಿವೆ. ಬಿಟ್ ಕಾಯಿನ್ ಹಗರಣ ಬಗ್ಗೆ ಗಂಭೀರ ನಿಲುವು ತಾಳಬೇಕು. ಸರ್ಕಾರ ಪ್ರಾರಂಭಿಕ ಹಂತದಲ್ಲಿ ಪ್ರಚಾರಕ್ಕೆ ಮಾತ್ರ ಚರ್ಚೆ ಮಾಡಿ ನಂತರ ನಿರ್ಲಕ್ಷ್ಯ ಮಾಡುವುದು ಬೇಡ ಎಂದರು.
2016-17ರಿಂದಲೂ ಈ ಹಗರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಆಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಲೇ ಅವರು ಕಠಿಣವಾಗಿ ವರ್ತಿಸಿ ಪ್ರಾರಂಭಿಕ ಹಂತದಲ್ಲೇ ಕ್ರಮ ತೆಗೆದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದಂಧೆ ನಡೆಯುತ್ತಿರಲಿಲ್ಲ. ತನಿಖೆಯಲ್ಲಿ ಜಾರಿ ನಿರ್ದೇಶನಾಲಯ ತೊಡಗಿದೆ ಎನ್ನುವ ಮಾಹಿತಿ ಇದೆ. ಸರ್ಕಾರ ನಡೆಸುವವರು, ಸರ್ಕಾರದ ಅಧೀನ ಸಂಸ್ಥೆಗಳು ಜನರಿಗೆ ಸರಿಯದ ದಿಕ್ಕಿನಲ್ಲಿ ಕೆಲಸ ಮಾಡಬೇಕು. ನಾನಂತೂ ನಿಖರ ಮಾಹಿತಿ ಇಲ್ಲದೆ ಯಾವುದೇ ಹೇಳಿಕೆ ನೀಡಲು ತಯಾರಿಲ್ಲ. ಆದರೆ, ಜನರ ಮುಂದೆ ವಾಸ್ತವಾಂಶ ಇಡಲು ಯಾರು ತಯಾರಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!
ನಾಲ್ಕು ಜನರಿಗೆ ತೊಂದರೆ ಕೊಡುವುದರಿಂದ ಉಪಯೋಗ ಇಲ್ಲ. ಆಗಿರುವ ಲೋಪವನ್ನು ಸರಕಾರ ಸರಿ ಮಾಡಬೇಕು. ಇನ್ನು, ಕೇಂದ್ರ ಸರಕಾರದ ಆದೇಶದ ಮೇರೆಗೆ ಇಡಿ ತನಿಖೆಗೆ ಶಿಫಾರಸು ಮಾಡಿದ್ದಾರೋ ಅಥವಾ ರಾಜ್ಯ ಸರ್ಕಾರವೇ ಶಿಫಾರಸು ಮಾಡಿದೆಯೋ ಗೊತ್ತಿಲ್ಲ. ಇದರ ಮೇಲೆ ಕೂಡ ಈಗ ಚರ್ಚೆ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎಲ್ಲಾ ಮಾಹಿತಿ ರವಾನೆಯಾಗಿದೆ. ಆದರೆ, ರಾಜ್ಯ ಸರ್ಕಾರ ಏನು ಮಾಡುತ್ತದೆಯೋ ನೋಡೋಣ ಎಂದರು. ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ
ಕಾಂಗ್ರೆಸ್ ನಾಯಕರು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಲ್ಲಿಯೂ ಸರ್ಕಾರದ ಅಧಿಕಾರಿಗಳೇ ಇರುತ್ತಾರೆ. ನ್ಯಾಯಾಂಗ ತನಿಖೆ ವರದಿ ಕೂಡ ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೆ? ಹಿಂದೆ ಅರ್ಕಾವತಿ ಡಿನೋಟಿಫಿಕೇಷನ್ ಬಗ್ಗೆ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಆಯೋಗದ ವರದಿ ಏನಾಯಿತು? ಬಿಟ್ ಕಾಯಿನ್ ತನಿಖೆ ವರದಿಯ ಗತಿಯೂ ಅಷ್ಟೇ ಆಗುತ್ತದೆ ಎಂದು ಕಾಂಗ್ರೆಸ್‍ಗೆ ತಿರುಗೇಟು ಕೊಟ್ಟರು.
ರಾಜ್ಯದಲ್ಲಿ ಐದು ವರ್ಷ ಸರ್ಕಾರ ನಡೆಸಿದವರು ಸುಮ್ಮನೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಪ್ರಯೋಜನ ಏನು? ಈಗ ಮಾತನಾಡುವ ಬದಲು ತಮ್ಮ ಕಾಲದಲ್ಲಿಯೇ ಕ್ರಮ ವಹಿಸಿದ್ದರೆ ಬಿಟ್ ಕಾಯಿನ್ ದಂಧೆ ಇಷ್ಟು ದೂರ ಬರುತ್ತಿರಲಿಲ್ಲ. ಆಗ ಸುಮ್ಮನಿದ್ದು ಈಗ ಜನರ ಮುಂದೆ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದರೆ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ
-ಮಾತಿನಂತೆ ಒಂದೇ ವರ್ಷಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡ್ರು
ಚಿಕ್ಕಮಗಳೂರು: ಮಾಜಿಮುಖ್ಯಮಂತ್ರಿ ಯಡಿಯೂರಪ್ಪಗೆ ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ. ಹೇಳಿದ ಒಂದೇ ವರ್ಷಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡ್ರು. ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರವೇ ಉಳಿಯಲ್ಲ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಬಿಜೆಪಿ ಸರ್ಕಾರದ ವಿರುದ್ಧ ಭವಿಷ್ಯ ನುಡಿದಿದ್ದಾರೆ.
ಶ್ರೀರಾಮಸೇನೆಯ 17ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ದತ್ತಪೀಠ ಹಿಂದೂಗಳಿಗೆ ಎಂದು ಹೇಳಿದ್ರಿ. ಅಧಿಕಾರಕ್ಕೆ ಬಂದು ಎರಡ್ಮೂರು ವರ್ಷವಾದ್ರು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿಲ್ಲ. ರಾಜಕಾರಣ ಏನಾದ್ರು ಮಾಡಿಕೊಳ್ಳಿ, ಧರ್ಮ-ಗುರುಗಳ ಜೊತೆ ಹುಡುಗಾಟ ಒಳ್ಳೆಯದಲ್ಲ. ಇದೀಗ ದತ್ತಪೀಠದ ಕುರಿತಾಗಿ ಸಮಿತಿ ಮಾಡುವ ಅಗತ್ಯವೇನಿದೆ? ಇಷ್ಟು ವರ್ಷ ಕೋರ್ಟ್ ಕೊಟ್ಟ ತೀರ್ಪಿಗೆ ಕಿಮ್ಮತ್ತಿಲ್ವ ಎಂದು ಪ್ರಶ್ನಿಸಿ ತಕ್ಷಣವೇ ಬಾಯಿ ಮುಚ್ಚಿಕೊಂಡು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು
ಈ ಮೊದಲು ಚಿಕ್ಕಮಗಳೂರು ನಗರದ ಶಂಕರಮಠದಲ್ಲಿ ದತ್ತಮಾಲಾಧಾರಣೆ ಮಾಡುವ ಮೂಲಕ ಗಂಗಾಧರ್ ಕುಲಕರ್ಣಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ಚಾಲನೆ ನೀಡಿದರು. ಇವರೊಂದಿಗೆ ಶ್ರೀರಾಮಸೇನೆಯ ಹಲವು ಕಾರ್ಯಕರ್ತರು ಮಾಲಾಧಾರಣೆ ಮಾಡಿದರು. ಇಂದಿನಿಂದ 7 ದಿನ ಈ ಅಭಿಯಾನ ನಡೆಯಲಿದ್ದು, ನವೆಂಬರ್ 14 ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ವಿವಿಧ ಮಠಾಧೀಶರು ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಇಂದಿನಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಶ್ರೀರಾಮಸೇನೆ ಕಾರ್ಯಕರ್ತರು ಮಾಲಾಧಾರಣೆ ಮಾಡಲಿದ್ದಾರೆ. ಇದನ್ನೂ ಓದಿ: ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು: ಈಶ್ವರಪ್ಪ
ತಿರುವನಂತಪುರಂ: ಕಾಂಗ್ರೆಸ್ ಸಂಸದ ಶಶಿ ತರೂರ್ ಲಾರಿಯೊಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಕೇಂದ್ರ ಸರ್ಕಾರ ನಿದ್ರಿಸುತ್ತಿದೆ ಎಂದು ಛೇಡಿಸಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಕೇಂದ್ರ ಸರ್ಕಾರ ನಿದ್ರಿಸುತ್ತಿದೆ ಎಂದು ಛೇಡಿಸಿದ್ದಾರೆ. ಲಾರಿಯೊಂದರ ಹಿಂಬರಹದಲ್ಲಿ ದಯವಿಟ್ಟು ಹಾರ್ನ್ ಮಾಡಬೇಡಿ, ಮೋದಿ ಸರ್ಕಾರ ನಿದ್ರಿಸುತ್ತಿದೆ ಎಂದು ಬರೆದಿದ್ದು, ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ. ಆದರೆ ಇದು ನಿಜವಾದ ಚಿತ್ರವಲ್ಲ, ಫೋಟೋಶಾಪ್ ಮಾಡಿರುವ ಚಿತ್ರವೆಂದು ಅನೇಕರು ಕಮೆಂಟ್ ಮಾಡಿದ್ದಾರೆ. ಫ್ಯಾಕ್ಟ್ ಚೆಕ್ ವರದಿಗಳು ಇದನ್ನೇ ಹೇಳಿವೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ
ಈ ಹಿಂದೆ ಇದೇ ಚಿತ್ರದ ಮೂಲಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಛೇಡಿಸಲಾಗಿತ್ತು. ಡೀಸೆಲ್‍ನಿಂದ ಚಲಿಸುತ್ತೇನೆ, ಸರಿಯಾಗಿ ಶುಲ್ಕವನ್ನು ಪಾವತಿಸುತ್ತೇನೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಂತೆ ದಳ್ಳಾಳಿತನದಿಂದ ಜನರ ದುಡ್ಡಿನಲ್ಲಿ ಮಜಾ ಮಾಡುವುದಿಲ್ಲ ಎಂದು ಹಿಂಬರಹದಲ್ಲಿ ಹೇಳಲಾಗಿತ್ತು. ಇದನ್ನೂ ಓದಿ:ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ