ಚೆನ್ನೈ: ತಮಿಳು ತಾಯಿಗೆ ವಂದಿಸುವ (ತಮಿಳ್ ತಾಯ್ ವಾಳ್ತ್) ತಮಿಳು ತಾಯಿಯೇ ನಿನಗೆ ವಂದನೆ ಗೀತೆಯನ್ನು ತಮಿಳುನಾಡು ತನ್ನ ನಾಡಗೀತೆಯಾಗಿ ಫೋಷಿಸಿದೆ ಹಾಗೂ ಈ ಗೀತೆ ಹಾಡುವಾಗ ಎಲ್ಲರೂ ಎದ್ದು ಗೌರವ ಕೊಡಬೇಕು ಎಂಬ ಸುತ್ತೋಲೆ ಹೊರಡಿಸಿದೆ.
ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ತಮಿಳ್ ತಾಯ್ ವಾಳ್ತ್ ಕೇವಲ ಪ್ರಾರ್ಥನಾ ಗೀತೆಯೇ ಹೊರತು ರಾಷ್ಟ್ರ ಗೀತೆಯಲ್ಲ, ಹೀಗಾಗಿ ಈ ಹಾಡಿನ ವೇಳೆ ಯಾರೂ ಎದ್ದು ನಿಲ್ಲುವ ಅವಶ್ಯಕತೆ ಇಲ್ಲ ಎಂದಿತ್ತು. ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಹಾಡನ್ನು ನಾಡಗೀತೆಯಾಗಿ ಫೋಷಿಸಿ ಸರ್ಕಾರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ
நீராரும் கடலுடுத்த எனும் மாநிலப் பாடல் பாடப்படுகையில், மாற்றுத்திறனாளிகள் தவிர, இனி மற்ற அனைவரும் எழுந்து நின்று மரியாதை செலுத்த வேண்டும் என அரசாணை வெளியிடப்பட்டுள்ளது. (2/2)
55 ಸೆಕೆಂಡುಗಳಿರುವ ಈ ನಾಡಗೀತೆ ಹಾಡುವಾಗ ಅಂಗವಿಕಲರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಲ್ಲಬೇಕು ಹಾಗೂ ರಾಜ್ಯದ ಎಲ್ಲಾ ಶಾಲೆಗಳು, ವಿಶ್ವ ವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಸ್ಥೆತೆಗಳು ಯಾವುದೇ ಕಾರ್ಯಕ್ರಮಗಳು ಆರಂಭಿಸುವ ಮುನ್ನ ಈ ಗೀತೆಯನ್ನು ಹಾಡುವುದು ಕಡ್ಡಾಯ ಎಂದು ಸ್ಟಾಲಿನ್ ಆದೇಶಿಸಿದ್ದಾರೆ. ಇದನ್ನೂ ಓದಿ:ಸರ್ಕಾರ ನಿರ್ಧಾರ ತಪ್ಪಿರಬಹುದು, ಉದ್ದೇಶವಲ್ಲ: ಅಮಿತ್ ಶಾ
ತಮಿಳಿನ ಖ್ಯಾತ ವಿದ್ವಾಂಸ ಎಂ.ಎಸ್ ಪಿಳ್ಳೈ(1855-1897)ಗೀತೆ ಬರೆದಿದ್ದರು. ಎಂ.ಎಸ್ ವಿಶ್ವನಾಥನ್ ಸಂಗೀತ ನೀಡಿದ್ದಾರೆ. ಇದು 1970ರಿಂದ ಅಧಿಕೃತ ಗೀತೆ ಮಾನ್ಯತೆ ಹೊಂದಿತ್ತು. ಇದೀಗ ಇದಕ್ಕೆ ನಾಡಗೀತೆ ಸ್ಥಾನಮಾನ ದೊರಕಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ
2018ರಲ್ಲಿ ಈ ಗೀತಗಾಯನದ ವೇಳೆ ಕಂಚಿ ಕಾಮಕೋಟಿ ಶ್ರೀಗಳಾದ ವಿಜಯೇಂದ್ರ ಸರಸ್ವತಿಗಳು ಎದ್ದು ನಿಲ್ಲದೇ ಇರುವುದು ವಿವಾದಕ್ಕೀಡಾಗಿತ್ತು. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನಾಡಗೀತೆಯಿದೆ. ಜಯಭಾರತ ಜನನಿಯ ತನುಜಾತೆ ಕರ್ನಾಟಕದ ನಾಡಗೀತೆಯಾಗಿದೆ.
ದಾವಣಗೆರೆ: ಫೆಬ್ರವರಿಯಲ್ಲಿ ನಡೆಯುವ ನಾಲ್ಕನೇ ವಾಲ್ಮೀಕಿ ಜಾತ್ರೆ ವೇಳೆಗೆ 7.5 ಮೀಸಲಾತಿ ಪ್ರಕಟಿಸಬೇಕು. ಮೀಸಲಾತಿ ನೀಡದಿದ್ದರೆ ಮುಂದಾಗುವ ಬೆಳವಣೆಗೆಗೆ ನಾವು ಜವಾಬ್ದಾರರಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಡೆಡ್ ಲೈನ್ ನೀಡುವುದರ ಜೊತೆಗೆ ಖಡಕ್ ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಕ ಸಮಾಜದ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕು ಎಂದರೆ ಮೀಸಲಾತಿ ಹೆಚ್ಚಳ ಮಾಡಬೇಕು. ಇದು ಸಮಸ್ತ ವಾಲ್ಮೀಕಿ ಸಮಾಜದ ಒತ್ತಾಯವಾಗಿದೆ ಹಾಗೂ ಬಹುದಿನ ಬೇಡಿಕೆಯಾಗಿದೆ. ಮೂರು ವಾಲ್ಮೀಕಿ ಜಾತ್ರೆಗಳಲ್ಲಿ ಸರ್ಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಆದರೆ ಈ ಬಾರಿ ವಾಲ್ಮೀಕಿ ಜಾತ್ರೆಯಲ್ಲಿ ನಾವು ಕೇಳುತ್ತಾ ಕೂರುವುದಿಲ್ಲ. ಕಳೆದ ಮೂರನೇ ವಾಲ್ಮೀಕಿ ಜಾತ್ರೆಯಲ್ಲಿ ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳಿದವರು ಈಗ ಎಲ್ಲಿ ಇದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ನವರ ಬಗ್ಗೆ ಪರೋಕ್ಷವಾಗಿ ವಾಲ್ಮೀಕಿ ಶ್ರೀ ಗಳು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಚಿವರ ಪುತ್ರನ ಆರತಕ್ಷತೆಯಲ್ಲಿ ಬಂದೂಕಿನಿಂದ ಗುಂಡು ಸಿಡಿಸಿ ಸಂಭ್ರಮ
ಈ ಸರ್ಕಾರಗಳು ಮೀಸಲಾತಿ ನೀಡುತ್ತೇವೆ ಎಂದು ವಾಲ್ಮೀಕಿ ಸಮುದಾಯವನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡು ಯಾಮಾರಿಸುತ್ತಾ ಬಂದಿವೆ. ಆದರೆ ಈ ನಾಲ್ಕನೇ ವಾಲ್ಮೀಕಿ ಜಾತ್ರೆಯೊಳಗೆ ಮೀಸಲಾತಿ ನೀಡದಿದ್ದರೆ ಅದರ ಪರಿಣಾಮ ಬೇರೆ ಇರುತ್ತದೆ. ಎರಡು ಬಾರಿ ಸಮಾಜ ನನ್ನ ಮಾತು ಕೇಳಿತು, ನಾಳೆ ನಾನು ನನ್ನ ಸಮುದಾಯ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ದನಾಗಿರುತ್ತೇನೆ. ಆಗ ನಮ್ಮ ಮೇಲೆ ಗೂಬೆ ಕೂರಿಸಲು ಸರ್ಕಾರ ಬರಬಾರದು ಎಂದು ಹೇಳಿದರು. ಇದನ್ನೂ ಓದಿ: ನವದೆಹಲಿ-ಕರ್ನಾಟಕ ಎಕ್ಸ್‌ಪ್ರೆಸ್‍ನಲ್ಲಿ ಬಾಂಬ್ – ಹುಸಿ ಕರೆಗೆ ಪ್ರಯಾಣಿಕರು ಕಂಗಾಲು
ಇಂದು ಬೆಳಗಾವಿಯ ಸಂಕಮ್ ಹೋಟೆಲ್ ನಲ್ಲಿ ನಾಯಕ ಸಮುದಾಯದ ಶಾಸಕರ ಜೊತೆ ಸಭೆ ಇದೆ. ಎಲ್ಲಾ ಪಕ್ಷದ ನಾಯಕ ಸಮುದಾಯದ ಶಾಸಕರು ಸಂಸದರು ಸಚಿವರು ಭಾಗವಹಿಸುತ್ತಾರೆ. ಈ ಸಭೆ ನಂತರ ಬೆಳವಣೆಗೆ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ. ಈಗಾಗಲೇ ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ತರಿಸಿಕೊಂಡು ಸಬ್ ಕಮಿಟಿ ಮಾಡಿದೆ. ಈಗ ಅದನ್ನು ಉನ್ನತ ಕಮಿಟಿಗೆ ಹಾಕಿದ್ದಾರೆ. ಆದ್ದರಿಂದ ಇಂದು ನಡೆಯುವ ಸಭೆಯಲ್ಲಿ ಅದನ್ನು ಕೂಡ ಪ್ರಸ್ತಾಪ ಮಾಡುತ್ತೇವೆ ಎಂದರು.
ಬೆಂಗಳೂರು: ಸರ್ಕಾರಿ ನೌಕರರು ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಪಕ್ಷದ ಪರ ಅಥವಾ ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಸರ್ಕಾರಿ ನೌಕರರ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಕಡಿವಾಣ ಹಾಕಲು ಮುಂದಾಗಿದೆ.
ಸರ್ಕಾರಿ ನೌಕರರು ರಾಜಕೀಯವಾಗಿ ತಟಸ್ಥ ಮನೋಭಾವವನ್ನು ಹೊಂದಿರಬೇಕು. ಜೊತೆಗೆ ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಹೇಳಿಕೆ ಕೊಡುವುದಾಗಲಿ ಪಕ್ಷಗಳ ಪರ ಗುರುತಿಸಿಕೊಂಡಿರುವುದು ಕಂಡುಬಂದರೆ ಸರ್ಕಾರ ನೌಕರರ ಮೇಲೆ ಕ್ರಮ ಕೈಗೊಳ್ಳುವ ಅವಕಾಶವಿದೆ. ಹಾಗಾಗಿ ಸರ್ಕಾರಿ ನೌಕಕರು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದನ್ನು ಸರ್ಕಾರಿ ನಿಯಮದಲ್ಲಿ ಸ್ಪಷ್ಟವಾಗಿದೆ. ಇದನ್ನೂ ಓದಿ: ವೇಸ್ಟ್ ಬಾಡಿ ಯಾರು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ: ಜಾರಕಿಹೊಳಿಗೆ ತಿವಿದ ಸಿದ್ದರಾಮಯ್ಯ
ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕಕರು ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರ ಅಥವಾ ವಿರೋಧವಾಗಿ ಲೇಖನ, ಅಭಿಪ್ರಾಯ, ವೀಡಿಯೋಗಳನ್ನು ಹಂಚಿಕೊಳ್ಳುವುದನ್ನು ಸರ್ಕಾರ ಗಮನಿಸಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕಕರು ಪ್ರದರ್ಶಿಸುವ ವರ್ತನೆಯು ಕೂಡ ರಾಜ್ಯ ನಾಗರಿಕ ಸೇವಾ(ನಡತೆ) ನಿಮಯಗಳು, 2021ರ ವ್ಯಾಪ್ತಿಗೆ ಒಳಪಡಿಸಿದೆ. ಈ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮ 1957ರ ಅವಕಾಶಗಳನ್ವಯ ಶಿಸ್ತುಕ್ರಮ ಕೈಗೊಳ್ಳುವಂತೆ ಆಯಾ ಪ್ರಾಧಿಕಾರಗಳಿಗೆ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್
ಇನ್ನುಮುಂದೆ ಸರ್ಕಾರಿ ನೌಕಕರು ಬೇಕಾಬಿಟ್ಟಿ ಸಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಲ್ಲಿ ನಿಯಮಕ್ಕೆ ವಿರುದ್ಧವಾಗಿದ್ದರೆ ತಮ್ಮ ಸರ್ಕಾರಿ ಉದ್ಯೋಗಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದೆ.
ಬೆಳಗಾವಿ: ಕೇಂದ್ರದಂತೆ ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವ ಬಗ್ಗೆ ಇಂದು ಮಧ್ಯಾಹ್ನ 2.30ರೊಳಗೆ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಬೇಲಿ ಹಾರಿಯಾದರೂ ಸುವರ್ಣಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಳಗಾವಿಯ ಸುವರ್ಣಸೌಧ ಎದುರಿರುವ ಕೊಂಡಸಕೊಪ್ಪದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ನಾವು ಬೆಳಗ್ಗೆ 11 ಘಂಟೆಯಿಂದ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಕೂಡಲೇ ಸ್ಥಳಕ್ಕೆ ಬಂದು ನಮ್ಮ ಜೊತೆಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸುವರ್ಣಸೌಧ ಮುತ್ತಿಗೆ ಯತ್ನ ವಿಫಲ – ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರು ಪೊಲೀಸರ ವಶಕ್ಕೆ
ಹರಿಕಥೆ ಕೇಳೋಕೆ ಬಂದಿಲ್ಲ: ಸರ್ಕಾರದ ಪ್ರತಿನಿಧಿಗಳು ಇಲ್ಲಿಗೆ ಬರದಿದ್ದರೆ ನಾವು ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ನಮ್ಮನ್ನು ಯಾರು ತಡೆಯುತ್ತಾರೆ ನೋಡುತ್ತೇವೆ. ಪೊಲೀಸರ ಕಣ್ಣು ತಪ್ಪಿಸಿ ಸುವರ್ಣ ಸೌಧಕ್ಕೆ ಹೋಗಲೇಬೇಕು. ನಾವು ಇಲ್ಲಿ ಹರಿಕಥೆ ಕೇಳಲು ಬಂದಿಲ್ಲ, ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ
ತೀವ್ರಗೊಂಡ ರೈತರ ಹೋರಾಟ: ವಿನೂತನವಾಗಿ ಪ್ರತಿಭಟನೆ ಮಾಡಿ ಅನ್ನದಾತರು ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಡೊಳ್ಳು ಬಾರಿಸಿ, ರೈತಗೀತೆಗಳನ್ನ ಹಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದಾರೆ.
ದುಬೈ: ವಿಶ್ವದ ಮೊದಲ ಪೇಪರ್‌ಲೆಸ್ ಸರ್ಕಾರ ದುಬೈ ಆಗಿದೆ. ಶೇ.100ರಷ್ಟು ಕಾಗದರಹಿತ ಆಡಳಿತ ಜಾರಿ ಮಾಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ ಪಾತ್ರವಾಗಿದೆ ಎಂದು ಯುವರಾಜ ಶೇಖ್ ಹಮದ್ ಬಿನ್ ಮಹಮ್ಮದ್ ಬಿನ್ ರಶೀದ್ ಆಲ್ ಮುಕ್ತುಮ್ ಶನಿವಾರ ಘೋಷಿಸಿದ್ದಾರೆ.
ದುಬೈ 2.65 ಲಕ್ಷ ಕೋಟಿ ಹಣ ಮತ್ತು 1.4ಲಕ್ಷ ಕೋಟಿ ಮಾನವ ಗಂಟೆಗಳನ್ನು ಉಳಿತಾಯ ಮಾಡಿದೆ ಎಂದು ತಿಳಿಸಿದ್ದಾರೆ. ಇನ್ಮುಂದೆ ದುಬೈ ಸರ್ಕಾರದ ಎಲ್ಲಾ ಆಂತರಿಕ ಮತ್ತು ಬಾಹ್ಯ ವಹಿವಾಟು ಮತ್ತು ಕಾರ್ಯ ವಿಧಾನಗಳು ಶೇ.100ರಷ್ಟು ಡಿಜಿಟಲ್ ಆಗಿರಲಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ
ದುಬೈನಲ್ಲಿ ಕಾಗದರಹಿತ ಆಡಳಿತವನ್ನು 5 ಹಂತಗಳ ಮೂಲಕವಾಗಿ ಅಳವಡಿಸಿಕೊಳ್ಳಲಾಗಿದೆ. 5ನೇ ಹಂತದ ವೇಳೆಗೆ ದುಬೈನ ಎಲ್ಲಾ 45 ಸರ್ಕಾರಿ ಘಟಕಗಳ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕಾಗದರಹಿತ ಮಾಡಲಾಗಿದೆ. ಈ ಘಟಕಗಳು 1,800ಕ್ಕೂ ಹೆಚ್ಚು ಡಿಜಿಟಲ್ ಸೇವೆಯನ್ನು ಮತ್ತು 10,500ಕ್ಕೂ ಹೆಚ್ಚು ಪ್ರಮುಖ ವಹಿವಾಟುಗಳನ್ನು ಒದಗಿಸುತ್ತದೆ. ಇದರಿಂದ ದುಬೈ ನಿವಾಸಿಗಳ ನಿರೇಕ್ಷೆಗಳನ್ನು ಪೂರೈಸಲು ಸರ್ಕಾರಕ್ಕೆ ನೆರವಾಗುತ್ತದೆ ಎಂದು ಶೇಖ್ ಹಮದ್ ತಿಳಿಸಿದ್ದಾರೆ. ಇದನ್ನೂ ಓದಿ:ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆ
ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಕೃಷಿ ಇಲಾಖೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯ ಸಂದರ್ಭ ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದರು. ಇದನ್ನೂ ಓದಿ: ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು : ಬೊಮ್ಮಾಯಿ
ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಜಾತಿ ಕಾರಣವೋ, ಆರೋಗ್ಯ ಕಾರಣವೋ, ಆರ್ಥಿಕ ಪರಿಸ್ಥಿತ ಕಾರಣವೋ, ಸಾಮಾಜಿಕ ಅಡತಡೆಗಳು ಕಾರಣವೋ ಎನ್ನುವುದನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು. ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮತಾಂತರ ಕಾಯ್ದೆಗೆ ಕಾಂಗ್ರೆಸ್ ವಿರೋಧಿಸುತ್ತಿರುವ ವಿಚಾರ ಕುರಿತಂತೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವೆಯಾಗಿ ಈ ಬಗ್ಗೆ ಹೆಚ್ಚು ಮಾತಾಡಲ್ಲ. ಆದರೆ, ನಾನೇ ಕಂಡಂತೆ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಬಾಂಗ್ಲಾ ದೇಶದಿಂದ ಬರುವ ಮಕ್ಕಳನ್ನು ಇಲ್ಲಿಗೆ ತಂದು ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನು ಮತದಾರರನ್ನಾ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಮಾನಸಿಕತೆ ಇರುವುದು ಕಾಂಗ್ರೆಸ್‍ನಲ್ಲಿ ಮಾತ್ರ. ಜಾತಿ ಹಾಗೂ ಧರ್ಮದ ಆಧಾರದಲ್ಲಿ ಪರ್ಮನೆಂಟ್ ಆಗಿ ಅಧಿಕಾರದಲ್ಲಿ ಇರಬಹುದು ಎನ್ನುವುದು ಕಾಂಗ್ರೆಸ್ ಮಾನಸಿಕತೆ. ಈ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ ಮಾಡದೇ ಇರುವುದು ಒಳ್ಳೆಯದು. ಅವರ ಪಕ್ಷ ನಿಂತಿದ್ದೆ ಇದೇ ಆಧಾರದಲ್ಲಿ. ಜಾತಿ, ಧರ್ಮ, ಒಂದು ವರ್ಗ ಓಲೈಸಿ ಅಧಿಕಾರ ಪಡೆಯುವುದು ಅಲ್ಲ ಎಂದು ಮೋದಿ ಅವರು ಎರಡು ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದ್ರು, ನಾವೇನಾದ್ರೂ ಮಾತಾಡಿದ್ವಾ: ಸಿ.ಎಂ ಇಬ್ರಾಹಿಂ
ರಾವತ್ ಸಾವಿಗೆ ವಿಕೃತ ಮನಸ್ಸುಗಳ ಸಂಭ್ರಮಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದ ಸಿಡಿಎಸ್ ರಾವತ್ ಅವರು ನಿಧನರಾದ ಸಂದರ್ಭದಲ್ಲಿ ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಅವರು ವಿಕೃತ ಮನಸ್ಸುಗಳಲ್ಲ, ದೇಶದ್ರೋಹಿಗಳು. ಈ ಬಗ್ಗೆ ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥವರಿಗೆ ಕಠಿಣವಾದ ಶಿಕ್ಷೆಯನ್ನು ಕೊಡಬೇಕು ಅನ್ನುವುದು ನಮ್ಮೆಲ್ಲರ ಆಗ್ರಹ ಹಾಗೂ ದೇಶದ ಜನರ ಆಗ್ರಹವಾಗಿದೆ. ಇದರಲ್ಲೇನು ರಾಜಕೀಯವಿಲ್ಲ. ಕೆಲವರು ದೇಶಕ್ಕಾಗಿ ವಿರೋಧ ಮಾಡುವವರು ವಿರೋಧಿಗಳಾಗಿಯೇ ಇರುತ್ತಾರೆ. ಅಂತವರಿಗೆ ಪಕ್ಷ ಇಲ್ಲ, ಪಂಗಡ ಇಲ್ಲ, ಜಾತಿ ಇಲ್ಲ, ಪಂಥ ಇಲ್ಲ. ಅಂಥವರ ಮೇಲೆ ಉಗ್ರ ಕ್ರಮಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದೆ ಎಂದು ಹೇಳಿದರು.
ತಿರುವನಂತಪುರಂ: ಕೇರಳದ ಆಲಪ್ಪುಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಆಲಪ್ಪುಳ ಜಿಲ್ಲೆಯ ಕೋಟ್ಟನಾಡ್‍ನಲ್ಲಿ ರೈತರೊಬ್ಬರು ಸಾಕಿದ್ದ ಸಾವಿರಾರು ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸತ್ತ ಹಿನ್ನೆಲೆ ಅಧಿಕಾರಿಗಳು ಭೋಪಾಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ಗೆ ಮಾದರಿಗಳನ್ನು ಕಳುಹಿಸಿದ್ದರು. ಇದೀಗ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿದೆ.
ಹೀಗಾಗಿ ಹಕ್ಕಿ ಜ್ವರ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಇದೀಗ ಪ್ರಕರಣ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು ಮತ್ತು ಇತರ ಪಕ್ಷಿಗಳನ್ನು ನಾಶಗೊಳಿಸಲು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ
ಬೆಂಗಳೂರು: ಕೊರೊನಾದಿಂದ ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ಮೃತಪಟ್ಟರೆ 1 ಲಕ್ಷ ಪರಿಹಾರ ಎಂಬ ಸರ್ಕಾರದ ಆದೇಶದಲ್ಲಿ ಇದೀಗ ಪರಿಷ್ಕರಣೆ ಮಾಡಲಾಗಿದೆ.
ಈ ಹಿಂದೆ ಕುಟುಂಬದ ದುಡಿಯುವ ಸದಸ್ಯರಾಗಿದ್ದರೇ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಹಿಂದಿನ ಆದೇಶ ಬದಲಾಯಿಸಿ ಹೊಸ ಆದೇಶ ಹೊರಡಿಸಿದೆ. ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೊನಾದಿಂದ ಮೃತರಾಗಿದ್ದರೆ ಅವರ ಕುಟುಂಬಕ್ಕೆ 1 ಲಕ್ಷ ಪರಿಹಾರ ಕೊಡುವುದಾಗಿ ಹೊಸ ಆದೇಶ ಪ್ರಕಟ ಮಾಡಿದೆ.
ಬೆಂಗಳೂರು: ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ಹೊಸ ರೂಪಾಂತರಿ ತಳಿ ಒಮಿಕ್ರಾನ್ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಸೋಂಕಿತ ದೇಶಗಳಿಂದ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೊರೊನಾ ಎರಡನೇ ಅಲೆ ಇನ್ನೇನು ಸಂಪೂರ್ಣವಾಗಿ ಮುಗಿದೆ ಹೋಯಿತು ಎನ್ನುವಷ್ಟರಲ್ಲಿ ಕೊರೊನಾ ಹೊಸ ರೂಪಾಂತರಿ ತಳಿ `ಒಮಿಕ್ರಾನ್’ ಎಂಟ್ರಿಯಾಗಿದೆ. ಈಗಾಗಲೇ ಜಗತ್ತಿನ 11 ದೇಶಗಳಲ್ಲಿ `ಒಮಿಕ್ರಾನ್’ ತನ್ನ ಆರ್ಭಟ ಶುರು ಮಾಡಿದೆ. ಈ ಕುರಿತಂತೆ ರಾಜಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುರ್ತು ಸಭೆ ನಡೆಸಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಡಬ್ಲ್ಯೂಎಚ್‌ಒ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್
ಹೊಸ ಮಾರ್ಗಸೂಚಿಗಳು:
* ಕೇರಳ, ಮಹಾರಾಷ್ಟ್ರ ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ
* ಕೇರಳ, ಮಹಾರಾಷ್ಟ್ರ ಗಡಿಜಿಲ್ಲೆಗಳಲ್ಲಿ 3 ಶಿಫ್ಟ್‍ಗಳಲ್ಲಿ ಕಟ್ಟೆಚ್ಚರ
* ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ
* 16 ದಿನಗಳ ಹಿಂದೆ ಕೇರಳದಿಂದ ಬಂದ ಸ್ಟೂಡೆಂಟ್ಸ್‍ಗೆ ಮತ್ತೊಮ್ಮೆ ಆರ್‍ಟಿಪಿಸಿಆರ್ ಟೆಸ್ಟ್
* ಕೇರಳ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಕಡ್ಡಾಯ ಟೆಸ್ಟ್
* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಟ್ಟೆಚ್ಚರ
* ಹಾಸ್ಟೆಲ್‍ನಲ್ಲಿ ಇರೋರಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7ನೇ ದಿನಕ್ಕೆ ಮತ್ತೊಮ್ಮೆ ಟೆಸ್ಟ್
* ಹೋಟೆಲ್, ರೆಸ್ಟೋರೆಂಟ್, ಥಿಯೇಟರ್ ಸಿಬ್ಬಂದಿಗೆ 2 ಡೋಸ್ ಕಡ್ಡಾಯ
* ಈಜುಕೊಳ, ಲೈಬ್ರೆರಿ, ಮೃಗಾಲಯ, ಜೈವಿಕ ಉದ್ಯಾನವನದ ಸಿಬ್ಬಂದಿಗೆ 2ನೇ ಡೋಸ್ ಕಡ್ಡಾಯ
* ಸರ್ಕಾರಿ ಕಚೇರಿ, ಮಾಲ್ ಸಿಬ್ಬಂದಿಗೆ 2 ಡೋಸ್ ಕಡ್ಡಾಯ
* ವೈದ್ಯಕೀಯ, ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಟೆಸ್ಟ್ ಹೆಚ್ಚಳ
* ವಿಮಾನ ನಿಲ್ದಾಣದಲ್ಲಿ ತಪಾಸಣೆ ತೀವ್ರಗೊಳಿಸುವುದು
* ಏರ್‍ಪೋರ್ಟ್‍ನಲ್ಲಿ ನೆಗಟಿವ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ
* ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್
* ಸೆಮಿನಾರ್‍ಗಳಿಗೆ ಬ್ರೇಕ್
* ಮದುವೆ, ಇತರೆ ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸೋದು ಕಡ್ಡಾಯ
* ಗಡಿಭಾಗ, ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು
ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ:
*ದಕ್ಷಿಣ ಆಫ್ರಿಕಾ, ಬೋಟ್ಸ್‍ವಾನಾ, ಹಾಂಕಾಂಗ್ ಪ್ರಯಾಣಿಕರಿಗೆ ಟೆಸ್ಟ್ ಕಡ್ಡಾಯ
*ಕೊರೊನಾ ಟೆಸ್ಟ್, ನೆಗೆಟಿವ್ ವರದಿ ಕಡ್ಡಾಯ
*15 ದಿನಗಳ ಹಿಂದೆ ರಾಜ್ಯಕ್ಕೆ ಬಂದವರಿಗೆ ಮತ್ತೊಮ್ಮೆ ಟೆಸ್ಟ್
*ಕೊರೊನಾ ವರದಿ ಬರೋ ತನಕ ಹೊರಗಡೆ ಬರುವಂತಿಲ್ಲ
*ಪಾಸಿಟಿವ್ ಬಂದಲ್ಲಿ ಆಸ್ಪತ್ರೆಯಲ್ಲಿ 10 ದಿನ ಕ್ವಾರಂಟೈನ್ ಇರಬೇಕು
*ಪಾಸಿಟಿವ್ ವರದಿಯಾದ್ರೆ ಜಿನೋಮಿಕ್ ಸಿಕ್ವೆನ್ಸಿಂಗ್ ಸ್ಯಾಂಪಲ್ ಕೊಡ್ಬೇಕು
ಬೆಂಗಳೂರಿನಲ್ಲಿಯೂ ಕೊರೊನಾ ರೂಪಾಂತರ ತಳಿಯನ್ನು ತಡಗಟ್ಟಲು ಬಿಬಿಎಂಪಿ ಕೂಡ ಬ್ಲ್ಯೂಪ್ರಿಂಟ್ ಸಿದ್ಧಪಡಿಸಿದೆ. ಬಿಬಿಎಂಪಿ ಬ್ಲ್ಯೂಪ್ರಿಂಟ್:
* ಜನನಿಬಿಡ ಪ್ರದೇಶಗಳಲ್ಲಿ ಮಾರ್ಷಲ್‍ಗಳ ಮರು ನಿಯೋಜನೆ
* ಮಾರುಕಟ್ಟೆ ಪ್ರದೇಶ, ಪಾರ್ಕ್‍ಗಳಲ್ಲಿ ಮಾರ್ಷಲ್‍ಗಳ ನಿಯೋಜನೆ
* ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾಲ್‍ಗಳಲ್ಲಿ ಕಟ್ಟೆಚ್ಚರ
* ಮಾಸ್ಕ್ ಕಡ್ಡಾಯ ರೂಲ್ಸ್
* ಸರ್ಕಾರಿ ನೌಕರರಿಗೆ, ಕಾರ್ಮಿಕರಿಗೆ 2 ಡೋಸ್ ಕಡ್ಡಾಯ
* ಮಾಲ್, ವಾಣಿಜ್ಯ ಮಳಿಗೆಗಳ ಸಿಬ್ಬಂದಿಗೂ 2 ಡೋಸ್ ಕಡ್ಡಾಯ
* ಚಿಕ್ಕಪೇಟೆ, ಜಯನಗರ ಸೇರಿದಂತೆ ಶಾಪಿಂಗ್ ಏರಿಯಾಗಳ ಸಿಬ್ಬಂದಿಗೆ ಡಬಲ್ ಡೋಸ್ ಕಡ್ಡಾಯ ಜಾರಿ ಇದನ್ನೂ ಓದಿ:ಓಮಿಕ್ರಾನ್ ಭಾರೀ ಡೇಂಜರ್ – ಹೊಸ ವೈರಸ್, ಹೊಸ ಲಕ್ಷಣ!
ಒಮಿಕ್ರಾನ್ ಇದುವರೆಗಿನ ರೂಪಾಂತರಿಗಳಿಗಿಂತ ಭಯಂಕರ, ಡೆಲ್ಟಾಗಿಂತಲೂ ಅಪಾಯಕಾರಿ ಎನ್ನಲಾಗಿದೆ. ಸದ್ಯ ಇದರ ವ್ಯಾಪ್ತಿ ಪ್ರಾಥಮಿಕ ಹಂತದಲ್ಲಿಯೇ ಇವೆ. ಆದರೆ ಓಮಿಕ್ರಾನ್ ಗುಣಲಕ್ಷಣಗಳ ಅತ್ಯಂತ ವೇಗವಾಗಿ ಜಗತ್ತನ್ನು ಆವರಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಏಳು ದೇಶಗಳಿಗೆ ಈ ಮಾರಕ ವೈರಸ್ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್ ಘೋಷಣೆ, 87 ಮಂದಿಗೆ ಸೋಂಕು
ಒಮಿಕ್ರಾನ್ ಸೋಂಕು ಲಕ್ಷಣಗಳು:
* ಶೀತ, ಕೆಮ್ಮು, ನೆಗಡಿ
* ಉಸಿರಾಟದ ಸಮಸ್ಯೆ
* ಮೈ ನಡುಗುವಿಕೆ
* ಸ್ನಾಯು ಸೆಳೆತ
* ತಲೆನೋವು
* ಗಂಟಲು ನೋವು
* ರುಚಿ, ವಾಸನೆ ಕಳೆದುಕೊಳ್ಳುವುದು
ತುಮಕೂರು: ವಿದ್ಯಾರ್ಥಿಗಳ ಕೊರತೆಯಿಂದ 10 ವರ್ಷಗಳಿಂದ ಮುಚ್ಚಿದ್ದ ಸರ್ಕಾರಿ ಶಾಲೆಗೆ ಗ್ರಾಮಸ್ಥರೆಲ್ಲರು ಸೇರಿ ಮರುಜೀವ ನೀಡಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಗೂರು ಕ್ಲಸ್ಟರ್ ವ್ಯಾಪ್ತಿಯ ಯರೇಕಟ್ಟೆ ಸರ್ಕಾರಿ ಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿತ್ತು. ಈ ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ ಕೇಳುತ್ತಿದೆ. ಸುಮಾರು 30 ಕುಟುಂಬಗಳಿರುವ ಈ ಗ್ರಾಮದಿಂದ ಅಕ್ಕಪಕ್ಕದ ಗ್ರಾಮಗಳ ಶಾಲೆಗೆ ಮಕ್ಕಳು ಹೋಗುತ್ತಿದ್ದರು. ಗ್ರಾಮದಲ್ಲಿ ಶಾಲೆಯೊಂದು ಇರಬೇಕೆಂಬ ಗ್ರಾಮಸ್ಥರ ಬೇಡಿಕೆಯಂತೆ ಮೂರು ದಶಕಗಳ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಇದನ್ನೂ ಓದಿ: ಸರ್ಕಾರಿ ಕಚೇರಿ, ಮಾಲ್, ಹೋಟೆಲ್‍ಗಳಲ್ಲಿ ಕೆಲಸ ಮಾಡೋರಿಗೆ ಎರಡು ಡೋಸ್ ಕಡ್ಡಾಯ: ಆರ್. ಅಶೋಕ್
ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿತ್ತು. ಕ್ರಮೇಣ ಇಳಿಮುಖವಾಯಿತು. ವಿದ್ಯಾರ್ಥಿಗಳ ಕೊರತೆಯಿಂದ 10 ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿತ್ತು. ಶಾಲೆ ಮುಚ್ಚುವ ವೇಳೆ ವಿದ್ಯಾರ್ಥಿಗಳ ಹಾಜರಾತಿ 2ಕ್ಕೆ ಇಳಿದಿತ್ತು. ಶಾಲೆಯ ದಾಖಲಾತಿಗಳನ್ನು ಪಕ್ಕದ ಬರಗೂರು ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿ ಶಾಲೆಯನ್ನು ಮುಚ್ಚಲಾಗಿತ್ತು. ಇದನ್ನೂ ಓದಿ:ಕಾರಿನಲ್ಲಿ ತೆರಳುತ್ತಿದ್ದಾಗ ಮಹಿಳೆಗೆ ಡ್ರಗ್ಸ್ ನೀಡಿ ಅತ್ಯಾಚಾರ- ಸೇನಾ ಸಿಬ್ಬಂದಿ ಅರೆಸ್ಟ್
ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದ ಕೆಲವು ಪೋಷಕರು ದೂರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿದ್ದರು. ಕೆಲವು ವಿದ್ಯಾರ್ಥಿಗಳು ಮಾತ್ರ ಅಕ್ಕಪಕ್ಕದ ಶಾಲೆಗಳಿಗೆ ಹೋಗುತ್ತಿದ್ದರು. ಬೇರೆ ಊರುಗಳಲ್ಲಿ ನೆಲೆ ಕಂಡುಕೊಂಡಿದ್ದ ಗ್ರಾಮಸ್ಥರು, ಕೋವಿಡ್ ಸಂಕಷ್ಟದ ನಂತರ ಮತ್ತೆ ಗ್ರಾಮಕ್ಕೆ ಬಂದಿದ್ದಾರೆ. ತಮ್ಮೂರಿನ ಶಾಲೆಯತ್ತ ಗಮನ ಹರಿಸಿದ್ದಾರೆ. ಗ್ರಾಮದ ಕೆಲವು ಯುವಕರು ಗ್ರಾಮದಲ್ಲಿ ಸಭೆ ನಡೆಸಿ, ತಮ್ಮೂರಿನ ಶಾಲೆಯನ್ನು ಮತ್ತೆ ಪ್ರಾರಂಭಿಸುವ ಪಣತೊಟ್ಟು ಶಾಲೆಯ ಆರಂಭಕ್ಕೆ ಕಾರಣರಾಗಿದ್ದಾರೆ. ಶಾಲೆಗೆ 1ರಿಂದ 4ನೇ ತರಗತಿವರೆಗೆ 16 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹತ್ತು ವರ್ಷಗಳಿಂದ ಬಣಗುಡುತ್ತಿದ್ದ ಶಾಲೆ ಕಟ್ಟಡದಲ್ಲಿ ಮತ್ತೆ ಮಕ್ಕಳ ನಗು ಚೆಲ್ಲಿದೆ. ಇದನ್ನೂ ಓದಿ: ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣ- ಮಾಜಿ ಸಚಿವ ಪಿ.ಚಿದಂಬರಂ, ಪುತ್ರನಿಗೆ ಸಮನ್ಸ್