Tag: government

  • ಹರ್ಷ ಕುಟುಂಬಕ್ಕೆ  25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ

    ಹರ್ಷ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ

    ಬೆಳಗಾವಿ: ನಿನ್ನೆ ಮೃತನಾದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಖಂಡಿಸಿ ಶ್ರೀರಾಮ ಸೇನಾ ಜಿಲ್ಲಾ ಘಟಕ, ಹಿಂದೂ ರಾಷ್ಟ್ರ ಸೇನೆಯ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಪರ್ ಜಿಲ್ಲಾಧಿಕಾರಿ ಅಶೋಕ್‌ ದುಡಗುಂಟಿ ಅವರು ಈ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಅತ್ಯಂತ ಭೀಕರ, ರಾಕ್ಷಸಿವಾಗಿ ಹತ್ಯೆ ಮಾಡಲಾಗಿದೆ. ಆ ಯುವಕನ ಹತ್ಯೆಗೆ ಕಳೆದ ಹಲವು ವರ್ಷಗಳಿಂದ ಎಸ್.ಡಿ.ಪಿ.ಐ, ಪಿ.ಎಫ್.ಐ, ಸಿ.ಎಫ್.ಐ ಸಂಘಟನೆಗಳು ಪ್ರಯತ್ನ ನಡೆದಿದೆ. ಆದ್ದರಿಂದ ಈ ಸಂಘಟನೆಗಳನ್ನು ನಿಷೇಧಿಸಿ, ಪ್ರಮುಖರನ್ನು ಬಂಧಿಸಬೇಕು. ಹತ್ಯೆಯ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಉಗ್ರ ಶಿಕ್ಷೆಯಾಗಬೇಕು. ಸರ್ಕಾರ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.  ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಹಿಂದೂ ಕಾರ್ಯಕರ್ತರಿಗೆ ಹಾಗೂ ಹಿಂದೂ ನಾಯಕರಿಗೆ ಸೂಕ್ತ ಭದ್ರತೆ ಒದಗಿಸಬೇಕು. ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೇ ಉಗ್ರ ಹೋರಾಟ ನಡೆಸುತ್ತೇವೆ ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ, ಜಿಲ್ಲಾ ಕಾರ್ಯಧ್ಯಕ್ಷ ವಿನಯ ಅಂಗ್ರೋಳ್ಳಿ, ನಾಗೇಶ ಷರಾಫ್, ವಿನೋದ್ ಹಂಗರೇಕರ, ಅಕ್ಷಯ ಪಾಟೀಲ್‌, ಸಂತೋಷ್ ಜಾಧವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

  • ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

    ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

    ಬೆಂಗಳೂರು: ಡಾ.ರಾಜ್‍ಕುಮಾರ್ ವಾರ್ಡ್‍ನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭೂಗತ ಕೇಬಲ್ ಆಗಿ ಬದಲಾವಣೆಗೊಂಡಿರುವ ಕೆಪಿಟಿಸಿಎಲ್ ಹೈಟೆನ್ಷನ್ ಲೈನ್‍ನನ್ನು ತೆರವುಗೊಳಿಸುವ ಕಾಮಗಾರಿ ಪೂಜೆಯನ್ನು ದೀಪ  ಬೆಳಗಿಸಿ ವಸತಿ ಸಚಿವರಾದ ವಿ.ಸೋಮಣ್ಣ ಚಾಲನೆ ನೀಡಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ ಅವರು, ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಅಧಿಕಾರಿಗಳ ಮತ್ತು ಜನರ ಸಹಕಾರ ಮುಖ್ಯ. ಶ್ರೀ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ ಅವರ ಆಶೀರ್ವಾದದಿಂದ ಅಭಿವೃದ್ದಿ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬೊಮ್ಮಾಯಿ ಹೇಳಿದ್ದೆ ವೇದ ವಾಕ್ಯನಾ? ಬೊಮ್ಮಾಯಿಗಿಂತ ಹಿರಿಯ ನಾನು: ಸಿದ್ದರಾಮಯ್ಯ

    ಜನರ ಸಹಕಾರದಿಂದ 3 ವರ್ಷದಲ್ಲಿ ನೂರಾರು ಅಭಿವೃದ್ಧಿ ಕೆಲಸಗಳು ನಡೆದಿದೆ. 7 ಎಕರೆ ಬಾಳಯ್ಯನ ಕೆರೆ ಭೂಕಬಳಿಕೆದಾರರಿಂದ ಬಿಡಿಸಿ, ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದದಿಂದ ಉಳಿಸಲಾಯಿತು. 2 ಕೋಟಿ ರೂ. ವೆಚ್ಚದಲ್ಲಿ ಎಸ್‍ಟಿಪಿ ಪ್ಲಾಂಟ್ ನಿರ್ಮಾಣ ಮತ್ತು 57 ದೇವಾಲಯಗಳ ನವೀಕರಣ, ಜೀರ್ಣೋದ್ಧಾರ ಮತ್ತು ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ ಮಾನಸನಗರದಲ್ಲಿ 2,000 ಸಾವಿರ ಮಕ್ಕಳ ಪ್ರವೇಶಾವಕಾಶ ಇರುವ ಶಾಲೆ ಆರಂಭವಾಗಲಿದೆ ಎಂದು ತಿಳಿಸಿದರು.

    45 ಉದ್ಯಾನವನ, 24 ಬ್ಯಾಡ್ಮಿಂಟನ್ ಕೋರ್ಟ್‍ಗಳು ಪ್ರತಿ ವಾರ್ಡ್‍ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 12 ಕೋಟಿ ರೂ. ವೆಚ್ಚದಲ್ಲಿ ಕನಕಭವನ ನಿರ್ಮಾಣ, 250 ವಿದ್ಯಾರ್ಥಿಗಳ ಉಳಿದುಕೊಳ್ಳುವ ಪಿಜಿ ಸೆಂಟರ್ ಹಾಗೂ ಐಎಎಸ್ ಮತ್ತು IRS ತರಬೇತಿ ಕೇಂದ್ರ, ಉಚಿತ ಡಯಾಲಿಸಿಸ್ ಕೇಂದ್ರ, ದಾಸರಹಳ್ಳಿ ವಾರ್ಡ್‍ನಲ್ಲಿ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪಂತರಪಾಳ್ಯದಲ್ಲಿ ಹೈಟೆಕ್ ಆಸ್ಪತ್ರೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು, ಒಳಚರಂಡಿ ರಸ್ತೆಗಳು ಸುವ್ಯವಸ್ಥಿತವಾದ ಮಾದರಿ ವಿಧಾನಸಭಾ ಕ್ಷೇತ್ರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದ ಬೆನ್ನಲ್ಲೇ ಶುರುವಾಯ್ತು ಸಿಂಧೂರ ಚಳುವಳಿ

    ಬಿಬಿಎಂಪಿ ವಿಶೇಷ ಆಯುಕ್ತರಾದ ದೀಪಕ್ ಅಧಿಕಾರಿಗಳು ಮತ್ತು ಜಂಟಿ ಆಯುಕ್ತರಾದ ಶ್ರೀನಿವಾಸ್, ಕೆಪಿಟಿಸಿಎಲ್ ಮುಖ್ಯ ಅಭಿಯಂತರಾದ ಜಯಕುಮಾರ್, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರೂಪಲಿಂಗೇಶ್ವರ್, ಗಂಗಭೈರಯ್ಯ, ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೇಶ್, ಶಿಲ್ಪ ಶ್ರೀಧರ್, ಪಲ್ಲವಿ, ಬಿಜೆಪಿ ಮುಖಂಡರಾದ ರಾಜಪ್ಪ, ಹೆಚ್.ರಮೇಶ್ ಅವರು ಪಾಲ್ಗೊಂಡಿದ್ದರು.

  • ಐಎಂಎ ಹಗರಣದಲ್ಲಿ ಸರ್ಕಾರದಿಂದ ಯಾರ ರಕ್ಷಣೆಯೂ ಇಲ್ಲ: ಬೊಮ್ಮಾಯಿ

    ಐಎಂಎ ಹಗರಣದಲ್ಲಿ ಸರ್ಕಾರದಿಂದ ಯಾರ ರಕ್ಷಣೆಯೂ ಇಲ್ಲ: ಬೊಮ್ಮಾಯಿ

    ಬೆಂಗಳೂರು: ಐಎಂಎ ಹಗರಣದಲ್ಲಿ ಯಾರನ್ನೂ ರಕ್ಷಣೆ ಮಾಡೋ ಕೆಲಸ ಸರ್ಕಾರ ಮಾಡುವುದಿಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡೋದಿಲ್ಲ ಅಂತಾ ಸ್ಪಷ್ಟಪಡಿಸಿದರು.

    ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಐಎಂಎ ಪ್ರಕರಣದ ಕುರಿತು ಪ್ರಶ್ನೆ ಮಾಡಿದರು. ಐಎಂಎ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಹೆಗ್ಗಣಗಳನ್ನು ಸ್ಪೀಕರ್ ಕಳ್ಸಿದ್ದಾರೆ ಅಂತಾ ಹೇಳ್ಬೇಡಿ: ಸಿದ್ದರಾಮಯ್ಯ ಕಾಲೆಳೆದ ಸ್ಪೀಕರ್!

    ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಯಾರೇ ಪ್ರಕರಣದಲ್ಲಿ ಇದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮೇಲೆ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಪ್ರಾಸಿಕ್ಯೂಷನ್ ಗೂ ಅನುಮತಿ ನೀಡಲಾಗಿದೆ. ಅದರ ವಿರುದ್ಧ ಹೇಮಂತ್ ನಿಂಬಾಳ್ಕರ್ ಕೋರ್ಟ್‍ನಿಂದ ಸ್ಟೇ ತಂದಿದ್ದಾರೆ. ಸಿಬಿಐ ತನಿಖೆ ನಡೆಸುತ್ತಿದ್ದು ಸುಪ್ರಿಂ ಕೋರ್ಟ್‍ಗೆ ಹೋಗಿದೆ. ಅಲ್ಲಿಂದ ತೀರ್ಪು ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸಿದರು.

    ಇನ್ನೊಬ್ಬ ಐಪಿಎಸ್ ಅಧಿಕಾರಿ ಅಜಯ್ ಹಿಲರಿ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಬಗ್ಗೆಯೂ ಸರ್ಕಾರ ಕ್ರಮವಹಿಸಿದೆ. ಯಾರೇ ಹಗರಣದಲ್ಲಿ ಭಾಗಿಯಾಗಿದ್ದರೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತೆ ಅಂತ ಭರವಸೆ ನೀಡಿದರು. ಇದನ್ನೂ ಓದಿ: ಈಶ್ವರಪ್ಪ, ಮುತಾಲಿಕ್ ದೇಶದ ತಾಲಿಬಾನಿಗಳು: ಧ್ರುವನಾರಾಯಣ್

  • ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62ಕ್ಕೆ ಏರಿಕೆ ಮಾಡಿದ ಆಂಧ್ರ ಸರ್ಕಾರ

    ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62ಕ್ಕೆ ಏರಿಕೆ ಮಾಡಿದ ಆಂಧ್ರ ಸರ್ಕಾರ

    ಅಮರಾವತಿ: ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರ ಇಂದು ಹೊರಡಿಸಿದೆ.

    ಈ ನಿಯಮ ಜನವರಿ 1, 2022ರಿಂದಲೇ ಜಾರಿಗೆ ಬರುವಂತೆ ಕ್ರಮವಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರ ನಿರ್ಧಾರವು ನೌಕರರಲ್ಲೂ ಅಚ್ಚರಿ ಮೂಡಿಸಿದೆ. ನಿವೃತ್ತಿ ವಯಸ್ಸನ್ನು ಹೆಚ್ಚಿಸಿ ಎಂದು ಸರ್ಕಾರಿ ನೌಕರರು ಯಾರೂ ಪ್ರತಿಭಟನೆ ಮಾಡಿಲ್ಲ. ಆದರೂ ಸರ್ಕಾರ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದೆ.

    ಈ ಹಿಂದೆ ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲೂ ನೌಕರರ ನಿವೃತ್ತಿ ವಯಸ್ಸನ್ನು ಏರಿಸಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61ಕ್ಕೆ ಹೆಚ್ಚಿಸಲಾಗಿದೆ. ಮಧ್ಯಪ್ರದೇಶದಲ್ಲಿ ನಿವೃತ್ತಿ ವಯಸ್ಸು 62. ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಆಗಿದೆ. ಆದರೆ ಇದೀಗ ಆಂಧ್ರಪ್ರದೇಶ ಸರ್ಕಾರ ನಿವೃತ್ತಿ ವಯಸ್ಸನ್ನು 2 ವರ್ಷ ಮುಂದೆ ಹಾಕಿದೆ.

    ಕೆಲವರು ದಕ್ಷಿಣ ರಾಜ್ಯದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿರುವುದರಿಂದ ಆಂಧ್ರ ರಾಜ್ಯದ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದ ಸರ್ಕಾರಿ ನೌಕರರ ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಇತರ ಪ್ರಯೋಜನಗಳು ಸರಾಸರಿ ಸುಮಾರು 30 ಲಕ್ಷ ರೂ. ಆಗಿದೆ. ಅನೇಕ ಸಿಬ್ಬಂದಿಗೆ ನಿವೃತ್ತಿ ಪ್ರಯೋಜನಗಳ ಪಾವತಿಯನ್ನು ಎರಡು ವರ್ಷಗಳವರೆಗೆ ಮುಂದೂಡಬಹುದು. ಪಿಂಚಣಿ ಹಾಗೂ ಇತರ ನಿವೃತ್ತಿ ಪ್ರಯೋಜನಗಳ ಮೇಲೆ ಸರ್ಕಾರವು ಮಾಡುವ ವೆಚ್ಚವನ್ನು ಮುಂದೂಡುತ್ತದೆ. ಇದನ್ನೂ ಓದಿ: ಕಾಂಗ್ರೆಸ್ ಬಿಡೋರ ಲಿಸ್ಟ್, ಬಿಜೆಪಿ ಬಿಡೋರ ಲಿಸ್ಟ್ ನನ್ನ ಬಳಿ ಇದೆ: ಯತ್ನಾಳ್

  • ಪ್ರವಾಸಿ ಮಾರ್ಗದರ್ಶಿಗಳ ಅನ್ನ ಕಸಿದುಕೊಂಡ ಕೊರೊನಾ

    ಪ್ರವಾಸಿ ಮಾರ್ಗದರ್ಶಿಗಳ ಅನ್ನ ಕಸಿದುಕೊಂಡ ಕೊರೊನಾ

    ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ, ಬೇಲೂರು, ಹಳೇಬೀಡು ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ದೇಶ-ವಿದೇಶ, ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಪ್ರತಿನಿತ್ಯ ನೂರಾರು ಮಂದಿ ಚನ್ನಕೇಶವ ಹಾಗೂ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ದೇವಾಲಯದ ಇತಿಹಾಸದ ಬಗ್ಗೆ ತಿಳಿಸಲು ಸುಮಾರು ಮೂವತ್ತು ಮಂದಿ ಗೈಡ್‍ಗಳು ಜಿಲ್ಲೆಯಲ್ಲಿ ಪ್ರತಿನಿತ್ಯ ಕೆಲಸ ಮಾಡುತ್ತಾರೆ. ಆದರೆ ಕೊರೊನಾದಿಂದ ಪ್ರವಾಸಿಗರು ಕಡಿಮೆ ಬರುತ್ತಿದ್ದು, ಮಾರ್ಗದರ್ಶಿಗಳು ತುಂಬಾ ತೊಂದರೆಯಾಗಿದೆ. ಅಲ್ಲದೆ ಅವರಿಗೆ ತಮ್ಮ ದಿನನಿತ್ಯ ಜೀವನ ನಡೆಸಲು ಸಾಕಷ್ಟು ಕಷ್ಟವಾಗುತ್ತಿದೆ.

    ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿಗರು ನೀಡುವ ಅಷ್ಟೋ ಇಷ್ಟೋ ಹಣದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣ ದೇವಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ. ಇದರಿಂದಾಗಿ ಮಾರ್ಗದರ್ಶಿಗಳಿಗೆ ದಿನದ ಸಂಪಾದನೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    ಒಮ್ಮೆ ಲಾಕ್‍ಡೌನ್ ವೇಳೆ ಸರ್ಕಾರ ಐದು ಸಾವಿರ ಪರಿಹಾರ ನೀಡಿದ್ದನ್ನು ಬಿಟ್ಟರೆ ಇದುವರೆಗೂ ಇವರ ಕಷ್ಟ ಕೇಳುವವರಿಲ್ಲ. ಈ ಹಿಂದೆ ಪ್ರತಿನಿತ್ಯ ಮೂವತ್ತು ಮಂದಿ ಗೈಡ್ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಪ್ರವಾಸಿಗರ ಕೊರತೆ ಎದುರಾಗಿದ್ದು, ಹದಿನೈದು ಮಂದಿಯಂತೆ ಎರಡು ಬ್ಯಾಚ್‍ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಒಂದು ತಂಡ ಕೆಲಸ ಮಾಡಿದರೆ ಮಾರನೇ ದಿನ ಇನ್ನೊಂದು ಬ್ಯಾಚ್ ಕೆಲಸ ಮಾಡುತ್ತಿದೆ. ಒಬ್ಬರಿಗೆ ಆದಾಯ ಬಂದರೂ ಎಲ್ಲರೂ ಆ ಹಣವನ್ನು ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳ ಶಾಲೆ ಫೀಸ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಕಣ್ಣೀರುಡುತ್ತಿದ್ದಾರೆ.

    ರಾಜ್ಯದಲ್ಲಿ ಸುಮಾರು 600 ಮಂದಿ ಗೈಡ್‍ಗಳಿದ್ದು, ಅವರ ಜೀವನ ನಿರ್ವಹಣೆ ಹೇಳತೀರದಾಗಿದೆ. ಈಗಾಗಲೇ ಸರ್ಕಾರಕ್ಕೆ, ಸಂಬಂಧಪಟ್ಟ ಸಚಿವರಿಗೆ ಹತ್ತಾರು ಭಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    ಕುಟುಂಬ ನಿರ್ವಹಣೆಗೆ ಕೈಸಾಲ, ಬ್ಯಾಂಕ್ ಸಾಲ ಮಾಡಿದ್ದು, ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಈಗ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಪ್ರವಾಸಿಗರಿಗಾಗಿ ಕಣ್ಕಣ್ಣು ಬಿಟ್ಟು ಕಾಯುವಂತಾಗಿದೆ. ಇದು ಹೀಗಿಯೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಗೈಡ್‍ಗಳೇ ಇಲ್ಲದಂತಾಗುತ್ತಾರೆ. ಇನ್ನಾದರೂ ಸರ್ಕಾರ ಹಾಗೂ ಪ್ರವಾಸೋದ್ಯಮ ಸಚಿವರು ಇತ್ತ ಗಮನಹರಿಸಿ ಗೈಡ್‍ಗಳ ಹಿತಕಾಯಬೇಕಿದೆ.

  • ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

    ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

    ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಜನವರಿ 28ಕ್ಕೆ 6 ತಿಂಗಳು ಪೂರ್ಣಗೊಳ್ಳಲಿದ್ದು, ಹೈಕಮಾಂಡ್ ರಿಪೋರ್ಟ್ ಕಾರ್ಡ್ ತರಿಸಿಕೊಂಡಿದೆ. ಈ ರಿಪೋರ್ಟ್ ಕಾರ್ಡ್ ಆಧರಿಸಿ ವರಿಷ್ಠರು ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಖಚಿತ ಮಾಹಿತಿ ಲಭ್ಯವಾಗಿದೆ.

    ಸಚಿವರ ಕಾರ್ಯವೈಖರಿಯನ್ನು ಸಚಿವ ಸಂಪುಟ ಪುನಾರಚನೆಗೂ ಮುನ್ನ ಪರಿಶೀಲನೆ ನಡೆಸಲಾಗುವುದು. ಇಲಾಖೆ, ಪಕ್ಷದ ಚಟುವಟಿಕೆ, ಸರ್ಕಾರದ ಸಮರ್ಥನೆ ಹೀಗೆ ಹಲವು ಆಯಾಮಗಳಲ್ಲಿ ಮಾಹಿತಿ ಪಡೆದಿರುವ ವರಿಷ್ಠರು ವರದಿ ಆಧರಿಸಿ ಕ್ರಿಯಾಶೀಲರಲ್ಲದ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ

    ಸಚಿವರ, ಸರ್ಕಾರದ ರಿಪೋರ್ಟ್ ತರಿಸಿಕೊಳ್ಳಲು ಕಾರಣ ಏನು?
    * ಪಂಚರಾಜ್ಯಗಳ ಚುನಾವಣೆ ಬೆನ್ನಲ್ಲೇ ಸಂಪುಟ ವಿಸ್ತರಣೆ ಮಾಡಬೇಕು
    * ಕ್ರಿಯಾಶೀಲರಲ್ಲದ ಸಚಿವರನ್ನು ಗುರುತಿಸುವುದು
    * ಒಂದು ವರ್ಷಕ್ಕೂ ಮುನ್ನ ಚುನಾವಣೆಗೆ ಪಕ್ಷ ಮತ್ತು ಸರ್ಕಾರವನ್ನು ಸಜ್ಜುಗೊಳಿಸಬೇಕಿರುವ ಹೈಕಮಾಂಡ್
    * ಕಡೆಯ ಒಂದೂವರೆ ವರ್ಷದಲ್ಲಿ ಜನರಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವುದು
    * ಈ ಹಿನ್ನೆಲೆ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಚಿವರನ್ನು ಉಳಿಸಿಕೊಂಡು ಉಳಿದವರನ್ನು ಕೈ ಬಿಡುವುದು
    * ರಿಪೋರ್ಟ್ ಪರಿಶೀಲಿಸಿ, ಚುನಾವಣೆ ಬೆನ್ನಲ್ಲೇ ಸಂಪುಟಕ್ಕೆ ಸರ್ಜರಿ ಮಾಡಲಿರುವ ಹೈಕಮಾಂಡ್
    * ಅಲ್ಲದೇ ಸರ್ಕಾರದಲ್ಲಿ ಆಗಬೇಕಿರುವ ಬದಲಾವಣೆ ಗುರುತಿಸಿ ಸಿಎಂ ಬೊಮ್ಮಾಯಿಗೆ ಟಾರ್ಗೆಟ್ ನೀಡುವುದು

  • ಮೃತ ಕೋವಿಡ್ ಕುಟುಂಬಗಳಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ – ಬ್ಯಾಂಕುಗಳಲ್ಲಿ ನಗದು ಆಗ್ತಿಲ್ಲ ಚೆಕ್

    ಮೃತ ಕೋವಿಡ್ ಕುಟುಂಬಗಳಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ – ಬ್ಯಾಂಕುಗಳಲ್ಲಿ ನಗದು ಆಗ್ತಿಲ್ಲ ಚೆಕ್

    ಯಾದಗಿರಿ: ಸರ್ಕಾರದ ಕೋವಿಡ್ ಪರಿಹಾರ ಚೆಕ್ ಬೌನ್ಸ್ ಆಗಿರುವ ಘಟನೆಯೊಂದು ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಕೊರೊನಾ 2ನೇ ಅಲೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 1 ಲಕ್ಷ ರೂ. ಚೆಕ್ ನೀಡಿತ್ತು. ಆದರೆ ಇದು ನಗದೀಕರಣವೇ ಆಗುತ್ತಿಲ್ಲ. ಈ ಮೂಲಕ ನಾಮ್ಕಾವಾಸ್ತೆಗೆ ಕೋವಿಡ್ ಪರಿಹಾರ ನೀಡುತ್ತಿದೆಯೇ ಸರ್ಕಾರ ಎಂಬ ಪ್ರಶ್ನೆ ಎದ್ದಿದೆ.

    ಬ್ಯಾಂಕ್ ಖಾತೆಗೆ ಚೆಕ್ ಹಣ ಜಮೆಯಾಗಿಲ್ಲ ಎಂದು ಕಾರಣ ಹೇಳಿ ಪರಿಹಾರದ ಚೆಕ್ ಅನ್ನು ಕೆಲವು ಬ್ಯಾಂಕ್ ಗಳು ಮರಳಿಸುತ್ತಿವೆ. ಹೀಗಾಗಿ ಫಲಾನುಭವಿಗಳು ಕೋವಿಡ್ ಪರಿಹಾರ ಹಣಕ್ಕಾಗಿ ಅಲೆದು ಅಲೆದು ಸಸ್ತಾಗಿದ್ದಾರೆ. ಇದನ್ನೂ ಓದಿ: ಕೆಲವರಿಗೆ ದೇಶ ಭಕ್ತಿ ಅರ್ಥವಾಗುವುದಿಲ್ಲ: ರಾಹುಲ್ ಗಾಂಧಿ

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಸಣ್ಣಗೌಡ ಎಂಬವರು ಕೋವಿಡ್ ನಿಂದ ಮೃತಪಟ್ಟಿದ್ದರು. ಪರಿಹಾರಕ್ಕಾಗಿ ಬಸಣ್ಣಗೌಡ ಮಗಳು ಅನಿತಾ ಎಲ್ಲಾ ದಾಖಲೆಗಳು ಸಲ್ಲಿಸಿದ್ದಳು. ಅರ್ಜಿದಾರರಿಗೆ 2021ರ ಡಿಸೆಂಬರ್ 17 ರಂದು ಸುರಪುರ ಶಾಸಕ ರಾಜೂಗೌಡ ಅವರೇ ಚೆಕ್ ವಿತರಿಸಿದ್ದರು. ಅನಿತಾ ಅವರಿಗೆ SBI ಶಾಖೆಯ 1 ಲಕ್ಷ ರೂ. ನೀಡಲಾಗಿತ್ತು. 406164 ಸಂಖ್ಯೆಯ ಅಕೌಂಟ್ ನಂಬರ್ ನಿಂದ 8 ಡಿ.2021 ರಂದು ನೀಡಲಾಗಿತ್ತು. ಈ ಚೆಕ್ ಅನ್ನು ಸುರಪುರ SBIಗೆ ನಗದೀಕರಣಕ್ಕಾಗಿ ಅನಿತಾ ಕಾಯುತ್ತಿದ್ದರು. ಆದರೆ ನಗದೀಕರಣ ಆಗಲ್ಲ, ಯಾದಗಿರಿಗೆ ಹೋಗುವಂತೆ ಬ್ಯಾಂಕ್ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆ ತಾಯಿಗಾಗಿ ಕಿಡ್ನಿ ಕೊಟ್ಟ- ಒಂದೇ ಕಿಡ್ನಿಯವ ಬೇಡವೆಂದು ಬೇರೆಯವ್ರ ಕೈ ಹಿಡಿದ್ಳು!

    ಇತ್ತ ಯಾದಗಿರಿ SBI ಶಾಖೆಗೆ ಬಂದು ವಿಚಾರಿಸಿದರೂ ಬ್ಯಾಂಕ್ ಸಿಬ್ಬಂದಿ ಸ್ಪಂದಿಸಿಲ್ಲ. ಕೆಲವು ದಿನಗಳ ನಂತರ ಇತರೆ ಕಾರಣ ನೀಡಿ, ಏಉಃ ಬ್ಯಾಂಕ್ ನಿಂದ ಚೆಕ್ ಸಮೇತ ಚೀಟಿ ಬಂದಿದೆ. ಇತ್ತ ಮಹಾದೇವಿ ಎಂಬವರಿಗೆ ಸಹ ಇದೇ ರೀತಿ ಬ್ಯಾಂಕಿವರು ಸತಾಯಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಪರಿಹಾರ ಹಣ ಜನರ ಕೈ ಸೇರದೇ ಕಂಗಾಲಾಗಿದ್ದಾರೆ.

  • ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ

    ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ

    ಭೋಪಾಲ್: ಬಿಜೆಪಿ ಸರ್ಕಾರ ಅಬಕಾರಿ ನೀತಿಯಲ್ಲಿ ಮಧ್ಯಪ್ರದೇಶ ಅಮೂಲಾಗ್ರ ಬದಲಾವಣೆ ತಂದಿದೆ.

    ಮಧ್ಯಪ್ರದೇಶದ ಎಣ್ಣೆ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮದ್ಯ ದರವನ್ನು ಶೇ.20ರಷ್ಟು ಇಳಿಸಿದೆ. ಅಲ್ಲದೇ, ಹೆಚ್ಚುವರಿ ಆದಾಯಗಳಿಸುವ ಉದ್ದೇಶದಿಂದ ಎಲ್ಲ ಏರ್‌ಪೋರ್ಟ್ ಮತ್ತು ಭೋಪಾಲ್, ಇಂದೋರ್, ಜಬಲ್ಪುರ್ ಹಾಗೂ ಗ್ವಾಲಿಯರ್‌ನ ಆಯ್ದ ಸೂಪರ್ ಮಾರ್ಕೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇದನ್ನೂ ಓದಿ:  ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

    1 ಕೋಟಿಗಿಂತ ಹೆಚ್ಚು ಆದಾಯ ಇರುವವರು ಹೋಂ ಬಾರ್ ಹೊಂದಲು ಅವಕಾಶ ನೀಡಿದೆ. ಇದಕ್ಕೆ ವಾರ್ಷಿಕ 50 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ.

    ತೈಲದ ಮೇಲಿನ ತೆರಿಗೆ ಇಳಿಸೋದು ಬಿಟ್ಟು ಮದ್ಯದ ದರ ಇಳಿಸುವ ಮೂಲಕ ಬಡವರನ್ನು ಲೂಟಿ ಮಾಡಲು ಈ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದೆ.

  • ನೇತಾಜಿ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭ

    ನೇತಾಜಿ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭ

    ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.

    ಗಣರಾಜ್ಯೋತ್ಸವನ್ನು ಭಾರತದಲ್ಲಿ ಪ್ರತಿ ವರ್ಷ ಜನವರಿ 26 ರಂದು ಆಚರಿಸಲಾಗುತ್ತದೆ. ಆದರೆ ಈಗ ನೇತಾಜಿ ಹುಟ್ಟುಹಬ್ಬವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭವಾಗಲಿದೆ ಎಂದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ತಿಳಿಸಿದೆ. ಇದನ್ನೂ ಓದಿ:  ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    ನರೇಂದ್ರ ಮೋದಿ ಸರ್ಕಾರವು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಆಚರಿಸಲು ಮತ್ತು ಸ್ಮರಿಸಲು ಯಾವಾಗಲೂ ಗಮನಕೊಡುತ್ತಾರೆ. ಅದಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿದೆ.

    ಭಾರತದ ನೇತಾಜಿ ಎಂದೇ ಪ್ರಸಿದ್ಧಿ ಹೊಂದಿದ ಸುಭಾಷ್ ಚಂದ್ರ ಬೋಸ್ 23 ಜನವರಿ 1897 ರಂದು ಜನಿಸಿದರು. ಈ ಹಿಂದೆ ಸರ್ಕಾರವು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಲು ಪ್ರಾರಂಭಿಸಿತ್ತು. ಆದರೆ ಈಗ ಅವರ ಹುಟ್ಟಿದ ದಿನದಿಂದಲೇ ಗಣರಾಜ್ಯೋತ್ಸವ ಪ್ರಾರಂಭಿಸಲು ನಿರ್ಧರಿಸಿದೆ.

    ಅದೇ ರೀತಿ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ(ಸರ್ದಾರ್ ಪಟೇಲ್ ಅವರ ಜನ್ಮದಿನ), ನವೆಂಬರ್ 15 ಜನಜಾತಿಯ ಗೌರವ್ ದಿವಸ್(ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವ), ನವೆಂಬರ್ 26 ಅನ್ನು ಸಂವಿಧಾನದ ದಿನವಾಗಿ ಮತ್ತು ಡಿಸೆಂಬರ್ 26 ರಂದು ವೀರ್ ಬಾಲ್ ದಿವಸ್ (ಗುರು ಗೋವಿಂದ್ ಸಿಂಗ್ ಅವರ ನಾಲ್ವರು ಪುತ್ರರಿಗೆ ಗೌರವ) ದಿನವನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತವಾಗಿ, ಸಂತೋಷವಾಗಿದ್ದಾರೆ: ಸಯ್ಯದ್ ಸಯೀದ್

    ಕೇಂದ್ರ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತೆರಳಿದ್ದ ಜಾಗಗಳನ್ನು ದೇಶಾದ್ಯಂತ ಪ್ರಚಾರ ಮಾಡಲು ಯೋಜನೆಗಳನ್ನು ರೂಪಿಸಿದೆ. ಅಕ್ಟೋಬರ್ 21, 1943 ರಂದು ಬೋಸ್ ಅವರು ‘ಆಜಾದ್ ಹಿಂದ್ ಫೌಜ್’ ಹೆಸರಿನ ಸೇನೆಯನ್ನು ಘೋಷಿಸಿದ್ದರು. ನೇತಾಜಿ ಸ್ಮರಣಾರ್ಥ ಕಾರ್ಯಕ್ರಮಗಳ ಭಾಗವಾಗಿ ಪ್ರವಾಸೋದ್ಯಮ ಸಚಿವಾಲಯವು ಪ್ರವಾಸಗಳನ್ನು ಆಯೋಜಿಸಲು ಮುಂದಾಗಿದೆ.

  • ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಅನುಮತಿ ಕೊಟ್ಟಿಲ್ಲದಿದ್ದರೆ ತಡೆಯಲು ಯಾರಿಗಾಗಿ ಕಾಯುತ್ತಿದ್ದೀರಿ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿ ಛೀಮಾರಿ ಹಾಕಿದೆ.

    ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ಆಯೋಜಿಸಿದೆ. ಈ ಪಾದಯಾತ್ರೆಯಿಂದ ಕೊರೊನಾ ಮತ್ತಷ್ಟು ಹೆಚ್ಚಳವಾಗಲಿದೆ. ಈ ಪಾದಯಾತ್ರೆಯನ್ನು ಕೈಗೊಂಡವರ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕೆಂದು ಕೋರಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

    ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಕರ್ನಾಟಕ ಈಗಾಗಲೇ ಕೋವಿಡ್ ನಿಂದ ತತ್ತರಿಸುತ್ತಿದೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಆರಂಭದಲ್ಲೇ ಪ್ರಶ್ನಿಸಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿತು.

    ಸಾರ್ವಜನಿಕ ಹಿತಾಸಕ್ತಿಯ ವಿರುದ್ಧವಿದ್ದರೂ ಯಾಕೆ ಸುಮ್ಮನಿದ್ದೀರಿ. ಹೈಕೋರ್ಟ್ ಆದೇಶ ನೀಡುವವರೆಗೂ ನೀವು ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿತು.

    ಕೋವಿಡ್ ಹೆಚ್ಚುತ್ತಿರುವ ನಡುವೆ ರ್ಯಾಲಿ ನಡೆಸುತ್ತಿದ್ದೀರಾ? ರ್‍ಯಾಲಿಗೆ ಮುನ್ನ ನೀವು ಅನುಮತಿ ಪಡೆದಿದ್ದೀರ ಎಂದು ಕೆಪಿಸಿಸಿಗೆ ಹೈಕೋರ್ಟ್ ಪ್ರಶ್ನೆ ಪ್ರಶ್ನೆ ಮಾಡಿ ಉತ್ತರ ನೀಡುವಂತೆ ಸೂಚಿಸಿದೆ.

    ಸರ್ಕಾರದ ಪರವಾಗಿ ಹಾಜರಾರ ಎಎಜಿ, ಈಗಾಗಲೇ ಪಾದಯಾತ್ರೆ ನಡೆಸುವವರ ವಿರುದ್ಧ ಎಫ್‍ಐಆರ್ ದಾಖಲಾದ್ದು, ಮೂರು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ? ಕೋವಿಡ್ ಬಿಗಡಾಯಿಸಿರುವ ವೇಳೆ ಪಾದಯಾತ್ರೆಗೆ ಅವಕಾಶ ಏಕೆ? ಈ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ಕೋರ್ಟ್ ತಾಕೀತು ಮಾಡಿದೆ. ಈ ಸಂಬಂಧ ಒಂದು ದಿನ ಅವಕಾಶ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಜ.14ಕ್ಕೆ ಮುಂದೂಡಿದೆ. ಇದನ್ನೂ ಓದಿ:  ಕೋವಿಡ್ ನಿಯಮ ಉಲ್ಲಂಘನೆ – ಪ್ರಭು ಚವ್ಹಾಣ್ ವಿರುದ್ಧ ದೂರು

    ಅರ್ಜಿಯಲ್ಲಿ ಏನಿದೆ?: ರಾಜ್ಯದಲ್ಲಿ ಈಗಾಗಲೇ ಕೊರೊನಾ 3ನೇ ಅಲೆ ಪ್ರಾರಂಭವಾಗಿದ್ದು, ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಅವರು ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಜೊತೆಗೆ ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಕ್ರಮಕ್ಕಾಗಿ ಮನವಿ ಮಾಡಿ ನರೇಂದ್ರ ಪ್ರಸಾದ್ ಹಾಗೂ ಶಂಭುಲಿಂಗೇಶ್ ಪಿಐಎಲ್ ನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ತನಿಖಾ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ನೇತೃತ್ವ