Tag: government vehicle

  • PUBLiC TV ರಿಯಾಲಿಟಿ ಚೆಕ್ | HSRP ಇಂದೇ ಕೊನೆ ದಿನ; ಸರ್ಕಾರಿ ವಾಹನಗಳಿಗೇ ಇನ್ನೂ ಹಾಕಿಲ್ಲ!

    PUBLiC TV ರಿಯಾಲಿಟಿ ಚೆಕ್ | HSRP ಇಂದೇ ಕೊನೆ ದಿನ; ಸರ್ಕಾರಿ ವಾಹನಗಳಿಗೇ ಇನ್ನೂ ಹಾಕಿಲ್ಲ!

    ಬೆಂಗಳೂರು: ವಾಹನಗಳಿಗೆ ಹೆಚ್‍ಎಸ್‍ಆರ್‌ಪಿ ನಂಬರ್ ಪ್ಲೇಟ್ (HSRP number plate) ಹಾಕಿಸಲು ನೀಡಿದ್ದ ಗಡವು ಇಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆ `ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ನಡೆಸಿದ್ದು ವಿಧಾನಸೌಧದ ಎದುರು ನಿಂತಿರುವ ಸರ್ಕಾರಿ ವಾಹನಗಳಲ್ಲೇ ಹೆಚ್‍ಎಸ್‍ಆರ್‌ಪಿ ನಂಬರ್ ಪ್ಲೇಟ್ ಹಾಕಿಸದೇ ಇರುವುದು ಪತ್ತೆಯಾಗಿದೆ.

    ಸೋಮವಾರದಿಂದ ಹೆಚ್‍ಎಸ್‍ಆರ್‌ಪಿ ಇಲ್ಲದೇ ಇದ್ದರೆ ಮೊದಲ ಬಾರಿಗೆ 500 ರೂ. ದಂಡ ಎರಡನೇ ಬಾರಿ ಸಿಕ್ಕಿಬಿದ್ದರೆ 1,000 ರೂ. ದಂಡವನ್ನ ಹಾಕಲು ಸಾರಿಗೆ ಇಲಾಖೆ ತಯಾರಿ ನಡೆಸಿದೆ. ಅಲ್ಲದೇ ಟ್ರಾಫಿಕ್ ಪೊಲೀಸರು ಸಹ ಈ ದಂಡವನ್ನ ಹಾಕಲಿದ್ದಾರೆ. ಇದಕ್ಕಾಗಿಯೇ ವಿಶೇಷ ಕಾರ್ಯಚರಣೆ ಮಾಡುವ ತಯಾರಿ ಕೂಡ ನಡೆದಿದೆ.

    ವಿಧಾನಸೌಧದದ ಎದುರು ನಿಂತಿರುವ ಹಲವು ಸರ್ಕಾರದ ವಾಹನಗಳಿಗೆ ಹೆಚ್‍ಎಸ್‍ಆರ್‌ಪಿ ಆಗಿಲ್ಲ. ಜೊತೆಗೆ ಅಲ್ಲೇ ಇರುವ ಅಗ್ನಿಶಾಮಕ ಠಾಣೆಯ ವಾಹನಗಳಿಗೂ ಇನ್ನೂ ಹೆಚ್‍ಎಸ್‍ಆರ್‍ಪಿ ಆಗಿಲ್ಲ ಅನ್ನೋದು ರಿಯಾಲಿಟಿ ಚೆಕ್‍ನಲ್ಲಿ ಕಂಡುಬಂದಿದೆ. ಇನ್ನೂ ವಿಕಾಸಸೌಧದ ಬಿಲ್ಡಿಂಗ್‍ನಲ್ಲೂ ಅನೇಕ ಇಲಾಖೆಯ ವಾಹನಗಳನ್ನು ಪಾರ್ಕ್ ಮಾಡಿದ್ದು, ಅದರಲ್ಲೂ ಅನೇಕ ವಾಹನಗಳಿಗೆ ಹೆಚ್‍ಎಸ್‍ಆರ್‍ಪಿ ಹಾಕಿಸಿಲ್ಲ ಎಂಬುದು ಗೊತ್ತಾಗಿದೆ.

    HSRP ನಂಬರ್ ಪ್ಲೇಟ್ ಎಂದರೇನು?
    ಸಾಮಾನ್ಯ ನಂಬರ್ ಪ್ಲೇಟ್‍ಗಳಿಗಿಂತಲೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಭಿನ್ನವಾಗಿರುತ್ತವೆ. ಇವು ಅಲ್ಯೂಮಿನಿಯಂ ಲೋಹದಿಂದ ತಯಾರಿಸಲ್ಪಟ್ಟ ಪ್ಲೇಟ್‍ಗಳು. ಈ ಪ್ಲೇಟ್‍ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರದ ಮುದ್ರೆಯ 20ಘಿ20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರದೊಂದಿಗೆ ಉಬ್ಬಿಕೊಂಡಿರುವ ರೀತಿ ನಂಬರ್‍ಗಳು ಅಚ್ಚಾಗಿರುತ್ತವೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಇಂಗ್ಲಿಷ್‍ನಲ್ಲಿ ಇಂಡಿಯಾ ಎಂಬ ಪದ ಹಲವೆಡೆ ಇರುತ್ತದೆ. ಈ ನಂಬರ್ ಪ್ಲೇಟ್‍ಗಳನ್ನು ಎರಡು ಲಾಕ್ ಪಿನ್‍ಗಳನ್ನು ಬಳಸಿ ಅಳವಡಿಸುತ್ತಾರೆ. ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಹೆಚ್‍ಎಸ್‍ಆರ್‌ಪಿ ಸಹಕಾರಿಯಾಗಲಿದೆ. ಇದರಿಂದಾಗಿ ಅಸಲಿ ಹಾಗೂ ನಕಲಿ ನಂಬರ್ ಪ್ಲೇಟ್‍ಗಳನ್ನು ಗುರುತಿಸಲು ಸುಲಭವಾಗಿರುತ್ತದೆ. ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿರುವುದಿಲ್ಲ.

  • ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ

    ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ

    ಬೆಳಗಾವಿ: ಅಧಿವೇಶನ ಮುನ್ನವೇ ಬೆಳಗಾವಿಯಲ್ಲಿ (Belagavi) ಮರಾಠಿ ಭಾಷಿಕ ಪುಂಡರು ಪುಂಡಾಟ ಪ್ರದರ್ಶನ ಮುಂದುವರಿಸಿದ್ದು, ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕ (Karnataka) ಸರ್ಕಾರಿ ವಾಹನ (Government Vehicle) ಮೇಲೆ ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ.

    ತಾಲೂಕಿನ ಹೊರವಲಯದ ಸುವರ್ಣಸೌಧದ ಬಳಿ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ಕರ್ನಾಟಕ ಸರ್ಕಾರ ಎದು ಬರೆದ ವಾಹನ ಅಡ್ಡಗಟ್ಟಿ, ಕಲ್ಲು ತೋರಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ವಾಹನ ಚಾಲಕ ಚೇತನ್ ಎಂಬುವವರಿಗೂ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ, ಶಲ್ಯ ಸಮರ್ಪಿಸಿದ ಅಶ್ವಥ್ ನಾರಾಯಣ

    ಈ ವೇಳೆ ವಾಹನ ಚಾಲಕ ಅವರಿಂದ ತಪ್ಪಿಸಿಕೊಂಡು ತಕ್ಷಣವೇ ವಾಹನ ಚಲಾಯಿಸಿಕೊಂಡು ಪುಂಡರಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್‌ ಸಮೀಕ್ಷೆ ರಿಸಲ್ಟ್‌ ಔಟ್‌

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ವಾಹನ ಚಾಲಕನಿಗೂ ಬಿತ್ತು 1 ಸಾವಿರ ರೂ. ದಂಡ

    ಸರ್ಕಾರಿ ವಾಹನ ಚಾಲಕನಿಗೂ ಬಿತ್ತು 1 ಸಾವಿರ ರೂ. ದಂಡ

    ದಾವಣಗೆರೆ: ಸಂಚಾರಿ ಪೊಲೀಸರು ಕೇವಲ ಸಾರ್ವಜನಿಕರ ವಾಹನಗಳಿಗೆ ಮಾತ್ರ ಅಲ್ಲ ಸರ್ಕಾರಿ ವಾಹನಗಳಿಗೂ ದಂಡ ವಿಧಿಸಿದ್ದಾರೆ.

    ದಾವಣಗೆರೆಯ ಪಿಬಿ ರಸ್ತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಾಹನ ಸೇರಿದಂತೆ ಹಲವು ಸರ್ಕಾರಿ ವಾಹನಗಳಿಗೆ ದಂಡ ವಿಧಿಸಿದ್ದಾರೆ. ನಗರದ ಪಿಬಿ ರಸ್ತೆಯಲ್ಲಿ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು.

    ತಪಾಸಣೆಯ ವೇಳೆ ಸಂಚಾರಿ ಪೊಲೀಸರು ಸೀಟ್ ಬೆಲ್ಟ್ ಧರಿಸದ ವಾಹನಗಳಿಗೆ ದಂಡ ವಿಧಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬಂದ ಸರ್ಕಾರಿ ವಾಹನ ಚಾಲಕರು ಕೂಡ ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುತ್ತಿದ್ದರು. ಹೀಗಾಗಿ ಸರ್ಕಾರಿ ವಾಹನ ಚಾಲಕನಿಗೂ 1 ಸಾವಿರ ರೂ. ದಂಡ ವಿಧಿಸಿದ್ದಾರೆ.

    ಸಂಚಾರಿ ಪೊಲೀಸರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರು ಚಾಲಕನಿಗೆ ದಂಡ ವಿಧಿಸಿದ್ದಾರೆ. ಈ ಮೂಲಕ ಸಂಚಾರಿ ನಿಯಮ ಪಾಲನೆ ಮಾಡದ ಸರ್ಕಾರಿ ವಾಹನಗಳಿಗೂ ದಂಡ ವಿಧಿಸಲಾಗುತ್ತದೆ ಎಂಬ ಸಂದೇಶ ರವಾನಿಸಿದ್ದಾರೆ.