ಶ್ರೀನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು (Central Government) ಕಾಶ್ಮೀರದಲ್ಲಿ ಹಿಂದುತ್ವ ಅಜೆಂಡಾ ಪ್ರಚಾರ ಮಾಡುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು (Students) `ರಘುಪತಿ ರಾಘವ ರಾಜಾ ರಾಂ’ ಹಾಡುತ್ತಿರುವ ವೀಡಿಯೋವನ್ನು (Viral Video) ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಮುಫ್ತಿ, ಇದು ಕೇಂದ್ರ ಸರ್ಕಾರದ ಹಿಂದುತ್ವ (Hindutva) ಅಜೆಂಡಾವನ್ನು ಸೂಚಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ:ತೆರವು ಪ್ರಹಸನಕ್ಕೆ ಬಿತ್ತಾ ಬ್ರೇಕ್..?- ವಿಲ್ಲಾಗಳ ಕಡೆ ಮುಖಮಾಡದ ಜೆಸಿಬಿ!
Jailing religious scholars, shutting down Jama Masjid & directing school kids here to sing Hindu hymns exposes the real hindutva agenda of GOI in Kashmir. Refusing these rabid dictates invites PSA & UAPA. It is the cost that we are paying for this so called “Badalta J&K”. pic.twitter.com/NssOcDP4t6
`ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಮ್ಮಾ ಮಸೀದಿಯನ್ನು (Jama Masjid) ಮುಚ್ಚುವುದು ಮತ್ತು ಶಾಲಾ ಮಕ್ಕಳಿಗೆ ಹಿಂದೂ ಸ್ತೋತ್ರ ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಭಾರತ ಸರ್ಕಾರದ ನಿಜವಾದ ಹಿಂದುತ್ವವನ್ನು ಬಿಂಬಿಸಿದೆ ಎಂದು ಮುಫ್ತಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ (BJP Leader) ಕವೀಂದರ್ ಗುಪ್ತಾ, ಮುಫ್ತಿಯವರು ಎಲ್ಲವನ್ನೂ ವಿವಾದಾತ್ಮಕವಾಗಿ ಪ್ರಯತ್ನಿಸುತ್ತಿದ್ದಾರೆ. ಕಾಶ್ಮೀರದ ಶಾಲೆಯೊಂದರಲ್ಲಿ ಹಾಡಿದ ಭಜನೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಈ ಭಜನಾ ಗೀತೆಯಲ್ಲಿ `ಈಶ್ವರ ಅಲ್ಲಾ ತೇರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್’ ಕೂಡ ಇದೆ. ಮೆಹಬೂಬಾ ಮುಫ್ತಿಗೆ ಈ ಸನ್ಮತಿ ಸಿಗಲಿ ಎಂದು ಕುಟುಕಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಾಂಚಿ: ಕೋತಿಯೊಂದು(Monkey) ವಿದ್ಯಾರ್ಥಿಗಳಿದ್ದ ತರಗತಿಗೆ ನುಗ್ಗಿ ಪಾಠ ಕೇಳುತ್ತಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಾರ್ಖಂಡ್‍ನ(Jharkhand) ಸರ್ಕಾರಿ ಶಾಲೆಯಲ್ಲಿ(Government School) ಈ ಘಟನೆ ನಡೆದಿದೆ. ಈ ವೀಡಿಯೋವನ್ನು ಬಳಕೆದಾರ ದೀಪಕ್ ಮಹತೋ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ಕೋತಿಯೊಂದು ಇತರ ವಿದ್ಯಾರ್ಥಿಗಳೊಂದಿಗೆ(Student) ಸರ್ಕಾರಿ ಶಾಲೆಗೆ ಹೋಗುತ್ತಾನೆ ಎಂದು ಬರೆದಿದ್ದಾರೆ.
ವೀಡಿಯೋದಲ್ಲಿ ಏನಿದೆ?: ಹಜಾರಿಬಾಗ್‍ನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ತರಗತಿ ನಡೆಯುತ್ತಿದ್ದಾಗ ಕೋತಿಯೊಂದು ಕಾಣಿಸಿಕೊಂಡಿದೆ. ಅಲ್ಲೇ ಸ್ವಲ್ಪ ಸಮಯ ಹಿಂದಿನ ಸಾಲಿನಲ್ಲಿ ಕುಳಿತು ಪಾಠವನ್ನು ಕೇಳಿಸಿಕೊಂಡಿದೆ. ನಂತರ ಮುಂದಿನ ಸಾಲಿಗೆ ಬಂದು ಕೆಲ ಕಾಲ ಕುಳಿತುಕೊಂಡಿದೆ. ಆದರೆ ಅಲ್ಲಿರುವ ಮಕ್ಕಳಿಗೆ ಅದು ಯಾವ ರೀತಿಯ ತೊಂದರೆಯನ್ನು ನೀಡಿಲ್ಲ. ಬದಲಿಗೆ ಶಿಕ್ಷಕರು, ಚಿಕ್ಕ ಮಕ್ಕಳಿಗೆ ಕಲಿಸುವುದನ್ನು ಮುಂದುವರೆಸಿದರು. ಇದನ್ನೂ ಓದಿ: ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್
ತರಗತಿಯೊಂದರ ಮುಂದಿನ ಸಾಲಿನಲ್ಲಿ ಮಂಗ ಕುಳಿತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಶೇರ್ ಹಾಗೂ ಕಾಮೆಂಟ್‍ಗಳು ಬಂದಿದೆ. ನೆಟ್ಟಿಗನೊಬ್ಬ, ಶಾಲೆಯಲ್ಲಿ ಹೊಸ ವಿದ್ಯಾರ್ಥಿ ಎಂದು ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ: ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ ಪುನೀತ್ ಉಪಗ್ರಹವನ್ನು ನ.15 ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿ ಬೆಳೆಸಲು ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.
ಇದರಲ್ಲಿ ಅಂತಿಮವಾಗಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕೆ ಶ್ರೀಹರಿಕೋಟಾಗೆ ಕರೆದುಕೊಂಡು ಹೋಗಲಾಗುವುದು. 75ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಂದಲೇ 75 ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಘೋಷಿಸಿದ್ದರು.
ಈ ಪೈಕಿ ಬೆಂಗಳೂರು ವಲಯದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು `ಕೆಜಿಎಸ್3ಸ್ಯಾಟ್’ ಉಪಗ್ರಹವನ್ನು 1.90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದಿವಂಗತ ನಟ ಪುನೀತ್ ಸ್ಮರಣಾರ್ಥ ಉಪಗ್ರಹಕ್ಕೆ ಅವರ ಹೆಸರಿಡಲಾಗಿದೆ. ಪ್ರಧಾನಿ ಕಾರ್ಯಕ್ರಮದಡಿ ಉಡಾವಣೆಗೊಳ್ಳುತ್ತಿರುವ ದೇಶದ ಪ್ರಥಮ ಉಪಗ್ರಹ ಇದಾಗಿದೆ.
Live Tv
[brid partner=56869869 player=32851 video=960834 autoplay=true]
ಡೆಹ್ರಾಡೂನ್: ಉತ್ತರಾಖಂಡದ ಬಾಗೇಶ್ವರದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಸಮೂಹ ಸನ್ನಿ ಕಾಣಿಸಿಕೊಂಡಿದ್ದು, ಶಿಕ್ಷಕರು ಹಾಗೂ ಸಿಬ್ಬಂದಿ ಭಯಭೀತರಾಗಿದ್ದಾರೆ. ಶಾಲೆಯ ಆವರಣದಲ್ಲಿ ಹಲವಾರು ವಿದ್ಯಾರ್ಥಿನಿಯರು ಜೋರಾಗಿ ಕಿರುಚಾಡುತ್ತಾ, ಅಳುತ್ತಾ, ತಲೆ ಬಡಿದುಕೊಳ್ಳುತ್ತಾ ಭಯಾನಕವಾಗಿ ವರ್ತಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳು ಹಾಗೂ ವೈದ್ಯರು ಶಾಲೆಗೆ ಭೇಟಿ ನೀಡಿದ್ದಾರೆ. ಕಳೆದ ಒಂದೆರಡು ದಿನಗಳ ಹಿಂದೆ ಕೆಲವು ವಿದ್ಯಾರ್ಥಿನಿಯರು ಈ ರೀತಿ ವರ್ತಿಸುತ್ತಿದ್ದರು. ಆದರೆ ಇದೀಗ ಶಾಲೆಯ ಬಹುಪಾಲು ವಿದ್ಯಾರ್ಥಿಗಳು ಇದೇ ರೀತಿ ವರ್ತಿಸಲಾರಂಭಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹುಲಿಗಳ ಸಂಖ್ಯೆ ಹೆಚ್ಚಳ – ಚೆಲುವ ಚಾಮರಾಜನಗರ ಈಗ ಹುಲಿಗಳ ನಾಡು
Few students in a govt school in Bageshwar dist of #Uttarakhand on Wednesday suddenly started screaming and shouting. Some beleieve it’s a “mass hysteria” phenomenon. A team of doctors will visit school today. pic.twitter.com/htsFjrcC0Y
ಈ ಕುರಿತಂತೆ ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ದೇವಿ ಅವರು, ಮಂಗಳವಾರ ಕೆಲವು ಬಾಲಕಿಯರು ಮೊದಲಿಗೆ ಈ ರೀತಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದರು. ಅವರು ಜೋರಾಗಿ ಅಳುತ್ತಿದ್ದರು, ಕೂಗುತ್ತಿದ್ದರು, ನಡುಗುತ್ತಿದ್ದರು ಮತ್ತು ಯಾವುದೇ ಕಾರಣವಿಲ್ಲದೆ ತಲೆ ಬಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆಗ ನಾವು ಪೋಷಕರಿಗೆ ತಿಳಿಸಿದೆವು. ಅವರು ಒಬ್ಬ ಪೂಜಾರಿಯನ್ನು ಕರೆದುಕೊಂಡು ಬಂದು ಏನೋ ಮಂತ್ರ ಹಾಕಿಸಿದರು. ನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತು. ಈಗ ಮತ್ತೆ ಇನ್ನಷ್ಟು ಮಕ್ಕಳು ಅದೇ ರೀತಿ ವರ್ತಿಸುತ್ತಿದ್ದಾರೆ ಎಂದು ತಿಳಿದ್ದಾರೆ. ಇದನ್ನೂ ಓದಿ : ಇಡೀ ಬಿಜೆಪಿ ಪಕ್ಷ ಹಾಳಾಗಿ ಹೋಗುತ್ತೆ, ಅಣ್ಣಪ್ಪನ ಶಾಪ ಇದೆ: ಮಹೇಶ್ ಶೆಟ್ಟಿ ತಿಮರೋಡಿ ಕಿಡಿ
ಇಲ್ಲಿನ ಪಕ್ಕದ ಜಿಲ್ಲೆಗಳಾದ ಅಲ್ಮೋರಾ, ಪಿಥೋರಗಢ್ ಮತ್ತು ಚಮೋಲಿಯ ಸರ್ಕಾರಿ ಶಾಲೆಗಳಲ್ಲಿ ಈ ಹಿಂದೆ ಇದೇ ರೀತಿಯ ಸಮೂಹ ಸನ್ನಿಯ ಘಟನೆಗಳು ವರದಿಯಾಗಿತ್ತು. ನಂತರ ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆ ಮತ್ತು ಕೌನ್ಸೆಲಿಂಗ್‍ಗೆ ಒಳಪಡಿಸಲಾಯಿತು. ಈ ವೇಳೆ ವಿದ್ಯಾರ್ಥಿನಿಯರು ಕೌನ್ಸೆಲಿಂಗ್‍ನಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ತಮ್ಮ ಸಹಪಾಠಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು ಎಂದು ವಿದ್ಯಾರ್ಥಿನಿಯರು ಹೇಳಿರುವುದಾಗಿ ತಿಳಿದುಬಂದಿತ್ತು. ಆದರೆ ಬಾಲಕಿಯರಿಗೆ ಅಪೌಷ್ಟಿಕತೆ ಮತ್ತು ಅತ್ಯಂತ ಉದ್ವಿಗ್ನತೆಯಿಂದ ಈ ರೀತಿಯಾಗಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿಸಲಾಗಿತ್ತು.
ಸಮೂಹ ಸನ್ನಿ ಅಥವಾ ಸಾಮೂಹಿಕ ಹಿಸ್ಟೀರಿಯಾ ಎಂದರೇನು?
ಸಮೂಹ ಸನ್ನಿ ಅಥವಾ ಸಾಮೂಹಿಕ ಹಿಸ್ಟೀರಿಯಾವು ವಿಚಿತ್ರವಾದ ಮತ್ತು ಅಸಾಧಾರಣವಾದ ನಡವಳಿಕೆಗಳು, ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದಾಗಿದೆ. ಇದು ಮಾನಸಿಕ ಸಮಸ್ಯೆಯಾಗಿದ್ದು, ಸನ್ನಿಗೊಳಗಾದವರು ಹುಚ್ಚರಂತೆ ವಿಚಿತ್ರವಾಗಿ ವರ್ತಿಸುತ್ತಾರೆ. ಮಾನಸಿಕ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವಾಗ ಈ ರೀತಿ ಆಗುತ್ತದೆ. ಒಬ್ಬರು ಈ ರೀತಿ ವರ್ತಿಸುವಾಗ ಅದು ಸುತ್ತಮುತ್ತಲಿನವರ ಮೇಲೂ ಪರಿಣಾಮ ಬೀರಿ ಅವರು ಕೂಡ ಅದರ ಪ್ರಭಾವಕ್ಕೊಳಗಾಗುತ್ತಾರೆ. ಇದು ಭಾವನಾತ್ಮಕ ಅಥವಾ ಮಾನಸಿಕ ಒತ್ತಡದಿಂದ ಪ್ರೇರೇಪಿಸಲ್ಪಟ್ಟ ದೈಹಿಕ ಸಮಸ್ಯೆಯಾಗಿಯೂ ಕಾಣಿಸಿಕೊಳ್ಳುತ್ತದೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
ಹರ್ದೋಯಿಯ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿಯನ್ನು ಊರ್ಮಿಳಾ ಸಿಂಗ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಶಿಕ್ಷಕಿ ಕುರ್ಚಿ ಮೇಲೆ ಕುಳಿತುಕೊಂಡು ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದರೆ, ವಿದ್ಯಾರ್ಥಿ ಪಕ್ಕದಲ್ಲಿ ನಿಂತುಕೊಂಡು ಮಸಾಜ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹಂತಕರನ್ನು ಕೇರಳ ಗಡಿಯವರೆಗೆ ಕಳುಹಿಸಿ ಕೊಟ್ಟಿದ್ದೇವೆ: ಬಂಧಿತ ಆರೋಪಿಗಳು
Teacher having bicep Massage by students, Viral video from Hardoi UP govt school. pic.twitter.com/MF8lEQPvEZ
ಭಾರತದ ಎಲ್ಲಾ ಶಿಕ್ಷಕರಿಗೆ ನಾನು ಮನವಿ ಮಾಡುತ್ತೇನೆ. ದಯವಿಟ್ಟು ವಿದ್ಯಾರ್ಥಿಗಳನ್ನು ಇಂತಹ ವಿಚಾರಗಳಿಗಾಗಿ ಬಳಸಿಕೊಳ್ಳಬೇಡಿ ಎಂದು ಕೆಲವರು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಇಂಥವರಿಂದ ಸರ್ಕಾರಿ ಶಾಲೆಗಳಿಗೆ ಕೆಟ್ಟ ಹೆಸರು. ಇಂಥವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಬೆಂಗಳೂರು: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹೊಸ ಪ್ಲ್ಯಾನ್ ಮಾಡಿದೆ. ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಶಾಲಾ-ಕಾಲೇಜುಗಳ ಗುಣಮಟ್ಟದ ಶಿಕ್ಷಣ ಹೆಚ್ಚಿಸುವ ಜವಾಬ್ದಾರಿಯನ್ನ ಶಿಕ್ಷಣ ಇಲಾಖೆ ನೀಡಿದೆ.
ಸರ್ಕಾರಿ ಶಾಲಾ-ಕಾಲೇಜುಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದೆ. ಈ ಶೈಕ್ಷಣಿಕ ದತ್ತು ಕಾರ್ಯಕ್ರಮ ತಮ್ಮ ಭಾಗದ ಸರ್ಕಾರಿ ಶಾಲಾ-ಕಾಲೇಜುಗಳನ್ನ ಅಧಿಕಾರಿಗಳು ದತ್ತು ಪಡೆದು ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸುವ ಕಾರ್ಯಕ್ರಮ ಇದಾಗಿದೆ. ರಾಜ್ಯ, ಜಿಲ್ಲಾಮಟ್ಟದಿಂದ ತಾಲೂಕು ಮಟ್ಟದ ಎಲ್ಲ ಹಂತದ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದೇ ಶೈಕ್ಷಣಿಕ ದತ್ತು ಕಾರ್ಯಕ್ರಮವಾಗಿದೆ. ಇದನ್ನೂ ಓದಿ: ಇತ್ತೀಚೆಗೆ ನಡೆಯುತ್ತಿರುವ ಕ್ಷುಲ್ಲಕ ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ: ಮಸ್ಕ್
ಏನಿದು ಶೈಕ್ಷಣಿಕ ದತ್ತು ಕಾರ್ಯಕ್ರಮ?
ಶಾಲಾ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ ಸರ್ಕಾರದ ಎಲ್ಲ ಇಲಾಖೆಗಳ ರಾಜ್ಯ, ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಸೇರಿದ ಒಂದು ಸರ್ಕಾರಿ, ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ-ಪೂರ್ವ ಕಾಲೇಜನ್ನು ದತ್ತು ಪಡೆಯುವುದು.
ತಮ್ಮ ಕೆಲಸದ ಸ್ಥಳದಲ್ಲಿ ಸ್ಥಳೀಯವಾಗಿ ಇರುವ ಶಾಲಾ-ಕಾಲೇಜುಗಳನ್ನು ದತ್ತು ಪಡೆಯುವುದು. ಅಧಿಕಾರಿಗಳು ತಾವು ದತ್ತು ಪಡೆದ ಶಾಲೆ, ಕಾಲೇಜಿಗೆ ತಿಂಗಳಿಗೆ ಕನಿಷ್ಟ ಒಂದು ಅಥವಾ ಎರಡು ಬಾರಿ ಭೇಟಿ ನೀಡುವುದು. ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಿ, ಸಲಹೆ, ಮಾರ್ಗದರ್ಶನ ನೀಡುವುದು.
ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವುದು, ವಿದ್ಯಾರ್ಥಿಗಳು ತಮ್ಮ ಕನಸಿನ ಗುರಿಗಳನ್ನು ನಿಗದಿಪಡಿಸಿಕೊಂಡು, ಅವುಗಳನ್ನು ಸಾಧಿಸಲು ಪ್ರೇರಣೆ ನೀಡುವುದು, ಅಧಿಕಾರಿಗಳು ತಮ್ಮ ವೃತ್ತಿಯ ಬಗ್ಗೆ ಮಾಹಿತಿ, ಅನುಭವಗಳನ್ನು ಹಂಚಿಕೊಳ್ಳುವುದು.
ಪ್ರಾಂಶುಪಾಲರು, ಶಿಕ್ಷಕರ ಜೊತೆ ಸಂವಾದ ನಡೆಸಿ, ಶಾಲೆ ಕೈಗೊಳ್ಳುತ್ತಿರುವ ಉತ್ತಮ ಕಾರ್ಯಗಳ ಮಾಹಿತಿ ಪಡೆದು, ಅಗತ್ಯವಾದ ಮಾರ್ಗದರ್ಶನ, ಪ್ರೇರಣೆ ನೀಡುವುದು. ಶಾಲೆ, ಕಾಲೇಜಿನ ಕುಂದು-ಕೊರತೆಗಳನ್ನು ಸಾವಧಾನದಿಂದ ಆಲಿಸಿ, ಗಮನಿಸಿ, ಅವುಗಳ ನಿವಾರಣೆಗೆ ಸರ್ಕಾರ ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ದಾನಿಗಳ ನೆರವಿನಿಂದ ಅಗತ್ಯ ಕ್ರಮ ಕೈಗೊಳ್ಳುವುದು.
ಅಧಿಕಾರಿಗಳ ಶಾಲಾ ಭೇಟಿಯು ಸೌಹಾರ್ದಯುತ ಮತ್ತು ಪ್ರೇರಣಾದಾಯಕವಾಗಿ ಇರಬೇಕು. ದತ್ತು ಪಡೆದ ಶಾಲಾ-ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟದ ವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಅಧಿಕಾರಿಗಳು ನಡೆಸಬೇಕು. ದತ್ತು ಪಡೆದವರು ಶಾಲೆಯಲ್ಲಿ ಮೂಲ ಸೌಕರ್ಯಗಳು ಸರಿಯಾಗಿ ಬಳಕೆ ಆಗುತ್ತಿದೆಯಾ ಎಂದು ಪರಿಶೀಲಿಸಿ ಮುಖ್ಯ ಶಿಕ್ಷಕರಿಗೆ ಸಲಹೆ, ಸೂಚನೆಗಳನ್ನು ಕೊಡಬಹುದು.
ವಿದ್ಯಾರ್ಥಿಗಳ ಸಾಮಥ್ರ್ಯ ವೃದ್ಧಿ ಚಟುವಟಿಕೆಗಳಿಗೆ ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ನೀಡುವುದು. ಕಲಿಕಾ ಪೂರಕ ಚಟುವಟಿಕೆಗಳಿಗೆ ಅಗತ್ಯವಾದ ಸಲಹೆ, ಮಾರ್ಗದರ್ಶನ ನೀಡುವುದು. ಅಕ್ಷರ ದಾಸೋಹದ ಕಾರ್ಯಕ್ರಮವನ್ನ ಸಮರ್ಪಕವಾಗಿ ಅನುಷ್ಠಾನಕ್ಕೆ ಮುಖ್ಯ ಶಿಕ್ಷಕರಿಗೆ ಸಲಹೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು, ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು, ಅಪರ ಆಯುಕ್ತರು, ಧಾರವಾಡ, ಅಪರ ಆಯುಕ್ತರು, ಕಲಬುರಗಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಕ್ತ ಸಮನ್ವಯದಿಂದ ರಾಜ್ಯ ವಿಭಾಗ ಹಂತದ ಎಲ್ಲ ಕಛೇರಿಗಳ ಅಧಿಕಾರಿಗಳಿಗೆ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು, ಶೈಕ್ಷಣಿಕ ಕಮತ್ತು ಕಾರ್ಯಕ್ರಮಕ್ಕೆ ಹಂಚಿಕೆ ಮಾಡುವುದು.
ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಪನಿರ್ದೇಶಕರು, ಪದವಿ-ಪೂರ್ವ ಶಿಕ್ಷಣ ಇಲಾಖೆ ಅವರು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಇತರೆ ಇಲಾಖೆಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ, ಜಿಲ್ಲಾ ಹಂತದಲ್ಲಿ ಶೈಕ್ಷಣಿಕ ದತ್ತು ಯೋಜನೆಗೆ ಶಾಲೆಗಳ ಹಂಚಿಕೆಯ ಜವಾಬ್ದಾರಿ ಹೊಂದಿರುವ ನೋಡಲ್ ಅಧಿಕಾರಿಯಾಗಿರುತ್ತಾರೆ. ಇದನ್ನೂ ಓದಿ: ಎಸಿ ರೈಲಿನ ಒಳಗಡೆಯೇ ಛತ್ರಿ ಹಿಡಿದು ಕುಳಿತ ಪ್ರಯಾಣಿಕರು
ಸಾಂರ್ಭಿಕ ಚಿತ್ರ
ಈ ಕುರಿತಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಶಾಲೆಗಳ ಹಂಚಿಕೆ, ಅನುಪಾಲನೆ, ಮುಂತಾದ ಸೂಕ್ತ ಕ್ರಮ ಕೈಗೊಳ್ಳುವುದು. ಪದನಿಮಿತ್ತ ಉಪನಿರ್ದೇಶಕರು(ಅಭಿವೃದ್ಧಿ) ಶೈಕ್ಷಣಿಕ ಮತ್ತು ಕಾರ್ಯಕ್ರಮವು ಸಮರ್ಪಕವಾಗಿ ನಡೆಯುತ್ತಿರುವ ಕುರಿತು ಅವಲೋಕನ ನಡೆಸಿ, ಕಾರ್ಯಕ್ರಮದ ಫಲಶ್ರುತಿಯ ಬಗ್ಗೆ ತ್ರೈಮಾಸಿಕ, ವಾರ್ಷಿಕವಾಗಿ ಒಂದು ವರದಿಯನ್ನು ಸಿದ್ಧಪಡಿಸಿ, ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಇವರ ಮೂಲಕ ಸರ್ಕಾರಕ್ಕೆ ಕಳುಹಿಸುವುದು.
ದತ್ತು ನೀಡುವಲ್ಲಿ ಹೆಚ್ಚು ದಾಖಲಾತಿ ಹೊಂದಿರುವ ಮತ್ತು ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಆದ್ಯತೆ ನೀಡುವುದು. ಶಾಲೆಗಳು ಪುನರಾವರ್ತನೆಯಾಗದಂತೆ ಗಮನಿಸುವುದು ಅಧಿಕಾರಿಗಳ ಜವಾಬ್ದಾರಿ ಆಗಿರಲಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸರ್ಕಾರಿ ಶಾಲೆಗಳನ್ನ ಮತ್ತಷ್ಟು ಹೈಟೆಕ್ ಮಾಡಲು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ಖಾಸಗಿ ಶಾಲಾ ಮಕ್ಕಳಿಗೆ ಸರ್ಕಾರಿ ಶಾಲಾ ಮಕ್ಕಳು ಸ್ಪರ್ಧೆ ನೀಡುವಂತೆ ಮಾಡಲು ಸರ್ಕಾರಿ ಶಾಲೆಗಳಲ್ಲೆ ಸ್ಪೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭಕ್ಕೆ ನಿರ್ಧಾರ ಮಾಡಿದೆ.
ಈಗಾಗಲೇ ಸ್ಪೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಬಹುತೇಕ ಈ ವರ್ಷವೇ ಸ್ಪೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭ ಆಗಲಿವೆ. ಸರ್ಕಾರಿ ಶಾಲೆಯ ಶಿಕ್ಷಕರನ್ನೇ ಸೆಲೆಕ್ಟ್ ಮಾಡಿ ಮೈಸೂರಿನಲ್ಲಿ ಇರೋ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಬೇತಿ ಕೊಡುತ್ತಾರೆ. ಇದನ್ನೂ ಓದಿ: ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ನಾವು ಸಹಕಾರ ನೀಡಿಲ್ಲ ಎಂದ ಭಾರತ
ಒಂದು ವೇಳೆ ಶಿಕ್ಷಕರ ಕೊರತೆ ಬಂದರೆ ಔಟ್ ಸೋರ್ಸ್ ಅಥವಾ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಂಡು ಸ್ಪೋಕನ್ ಇಂಗ್ಲೀಷ್ ಕಲಿಸಲು ಸರ್ಕಾರ ಮುಂದಾಗಿದೆ. 1 ರಿಂದ 6 ಅಥವಾ 1-8 ನೇ ತರಗತಿವರೆಗೆ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡುವ ಪ್ಲ್ಯಾನ್ ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ವಾರದಲ್ಲಿ ಒಂದು ದಿನ ಶನಿವಾರ ಅಥವಾ ವಾರದಲ್ಲಿ ಎರಡು ದಿನ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸಲು ಸರ್ಕಾರ ವೇಳಾಪಟ್ಟಿ ರೆಡಿ ಮಾಡಿಕೊಂಡಿದೆ.
ಈಗಾಗಲೇ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕೂಡಾ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಕಲಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಸಿಎಂ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸರ್ಕಾರ ಸ್ಪೋಕನ್ ಇಂಗ್ಲೀಷ್ ಕಲಿಕೆ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
Live Tv
[brid partner=56869869 player=32851 video=960834 autoplay=true]
ಸರ್ಕಾರ ಈಗಾಗಲೇ ಸಮವಸ್ತ್ರ, ಶೂಗೆ ಅನುಮೋದನೆ ಕೊಟ್ಟಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ 130 ಕೋಟಿ ರೂ. ಮೀಸಲಿಟ್ಟಿದ್ದೇವೆ. ಎಲ್ಲ ಸರ್ಕಾರಿ ಶಾಲೆಗಳಿಗೂ ವಿತರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದರೊಂದಿಗೆ ಶಾಲಾ ಮಕ್ಕಳ ಬಟ್ಟೆ ಸಹ ತಯಾರಾಗುತ್ತಿದ್ದು, ಆದಷ್ಟು ಬೇಗ ವಿತರಣೆ ಮಾಡಲಿದ್ದೇವೆ. ಆದರೆ ಡಿ.ಕೆ ಶಿವಕುಮಾರ್ ಅವರು ಕೋವಿಡ್ ವೇಳೆ 100 ಕೋಟಿ ರೂ. ಭಿಕ್ಷೆ ಬೇಡಿ ಕೊಡ್ತೀವಿ ಅಂದಿದ್ರಲ್ಲ, ಆ ಹಣ ಎಲ್ಲಿ ಹೋಯ್ತು ಎಂದು ಕುಟುಕಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಾಲಕರ ವೇತನ, ಡೀಸೆಲ್ ಖರೀದಿಗೆ ಈ ಹಣ ಬಳಕೆಗೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ರಾಜ್ಯದಲ್ಲಿ ಒಟ್ಟು 48,285 ಶಾಲೆಗಳು ಹಾಗೂ 6,312 ಅನುದಾನಿತ ಶಾಲೆಗಳಿದ್ದು ಸುಮಾರು 65 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಶಿಮ್ಲಾ: ಬಿಜೆಪಿ ಶಾಸಕ ಮತ್ತು ಹಿಮಾಚಲ ವಿಧಾನಸಭೆಯ ಉಪಸಭಾಪತಿ ಹಂಸರಾಜ್ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚಂಬಾ ಜಿಲ್ಲೆಯ ಚುರಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವ ಹಂಸರಾಜ್ ಅವರು ದಿಢೀರ್ ತಪಾಸಣೆಗೆಂದು ಗುರುವಾರ ರೈಲಾ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಕೋವಿಡ್ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆ – ಸಿಲಿಕಾನ್ ಸಿಟಿಯಲ್ಲಿ ವಾತಾವರಣ ಕೂಲ್
ಹಂಸರಾಜ್ ಅವರು ಮಾತನಾಡುತ್ತಿದ್ದಾಗ, ವಿದ್ಯಾರ್ಥಿಯೊಬ್ಬನು ನಗುತ್ತಿದ್ದನು. ಇದರಿಂದ ಕೋಪಗೊಂಡ ಉಪಸಭಾಪತಿ ವಿದ್ಯಾರ್ಥಿಗೆ ಯಾಕೆ ನಗುತ್ತಿದ್ದೀಯಾ ಎಂದು ಪ್ರಶ್ನಿಸಿ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ವೀಡಿಯೋದಲ್ಲಿ ಸೆರೆಯಾಗಿದ್ದರೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಸದ್ಯ ಈ ವೀಡಿಯೋ ಸೋಶಿಯಕ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಸಭಾಧ್ಯಕ್ಷರು ಈ ರೀತಿ ವರ್ತಿಸಿದ್ದಕ್ಕೆ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ತಂದೆ, ನಾವು ಇಲ್ಲಿಯವರೆಗೂ ನಮ್ಮ ಮಗನನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಬೆಳೆಸಿದ್ದೇವೆ. ಆದರೆ ಎಂದಿಗೂ ಹೊಡೆದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು