Tag: government school

  • ಶಿಕ್ಷಣ ಸಚಿವರೇ ಗಮನಿಸಿ, ಉದುರಿ ಬೀಳ್ತಿದೆ ಮೇಲ್ಛಾವಣಿ – ಆತಂಕದಲ್ಲಿಯೇ ಹಾಜರಾಗುತ್ತಿದ್ದಾರೆ ವಿದ್ಯಾರ್ಥಿಗಳು

    ಶಿಕ್ಷಣ ಸಚಿವರೇ ಗಮನಿಸಿ, ಉದುರಿ ಬೀಳ್ತಿದೆ ಮೇಲ್ಛಾವಣಿ – ಆತಂಕದಲ್ಲಿಯೇ ಹಾಜರಾಗುತ್ತಿದ್ದಾರೆ ವಿದ್ಯಾರ್ಥಿಗಳು

    ಬಳ್ಳಾರಿ: ಮಳೆ ಬಂದ್ರೆ ಸೋರುತ್ತದೆ, ಮೇಲ್ಛಾವಣಿಯಿಂದ ಆಗಾಗ ಬೀಳುತ್ತಿದೆ ಸಿಮೆಂಟಿನ ಪದರು – ಸರ್ಕಾರಿ ಶಾಲೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ ಸಿರುಗುಪ್ಪ ತಾಲ್ಲೂಕಿನ ಗಜಗಿನಹಾಳು ಗ್ರಾಮದ ಸರ್ಕಾರಿ ಶಾಲೆ.

    ಹೌದು. ಕೊಠಡಿಯ ಮೇಲ್ಛಾವಣಿ ಉದುರಿ ಬೀಳುತ್ತಿದ್ದರೂ ಆತಂಕದಲ್ಲೇ ಪಾಠ ಕೇಳುವ ಅನಿವಾರ್ಯತೆ ಗಜಗಿನಹಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳದ್ದು.

    ಮಳೆ ಬಂದರೆ ಶಾಲೆಯ ಮೇಲ್ಚಾವಣಿಯಿಂದ ತಟ್ ತಟ್ ಅಂತಾ ನೀರು ಸೋರುತ್ತೆ. ಅಲ್ಲದೇ ಮೇಲ್ಛಾವಣಿಯ ಸಿಮೆಂಟ್ ಪದರು ಆಗಾಗ ಉದುರಿಯೂ ಬೀಳುತ್ತಿದೆ. ಇದನ್ನೂ ಓದಿ:ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ

    ಶಾಲೆಯ ಮೇಲ್ಛಾವಣಿ ಉದುರಿ ಬೀಳುತ್ತಿರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಹಿಂದೇಟು ಹಾಕುತ್ತಿದ್ದಾರೆ. ಕೊಠಡಿ ಸಮಸ್ಯೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ಜೀವಕ್ಕೆ ಅಪಾಯವಾದಾಗಲೇ ಎಚ್ಚೆತ್ತುಕೊಳ್ತಾರಾ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿದ್ಯಾರ್ಥಿಗಳು ಸಹಿತ ಕೊಠಡಿಯಲ್ಲಿ ಕುಳಿತುಕೊಳ್ಳುವ ಭಯ ಆಗುತ್ತಿದೆ. ನಮಗೆ ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

     

  • ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು

    ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು

    ಮಂಡ್ಯ: ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ಆದರೆ ಮೊಟ್ಟೆ (Egg) ವಿತರಣೆಯೇ ಮಂಡ್ಯದ ಗ್ರಾಮವೊಂದರಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಮೊಟ್ಟೆ ಕೊಡುವುದೇ ಆದರೆ ನಮ್ಮ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದು ಪೋಷಕರು ಹೇಳ್ತಿದ್ದಾರೆ.

    ಮಂಡ್ಯದ (Madya) ಆಲಕೆರೆ (Alakere) ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ 120 ವಿದ್ಯಾರ್ಥಿಗಳ ಪೈಕಿ 80 ಮಕ್ಕಳು ಮೊಟ್ಟೆ ಬೇಡ ಅಂತಿದ್ದಾರೆ. ಪೋಷಕರು ಕೂಡ ಮೊಟ್ಟೆ ವಿತರಣೆಗೆ ವಿರೋಧಿಸಿದ್ದು, ಮೊಟ್ಟೆ ಕೊಟ್ರೆ ನಮ್ಮ ಮಕ್ಕಳಿಗೆ ಟಿಸಿ ಕೊಡಿ ಬೇರೆ ಶಾಲೆಗೆ ಸೇರಿಸ್ತೀವಿ ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

    ಅಂದಹಾಗೇ ಇವರು ಹೀಗೆ ಹೇಳಲು ಕಾರಣ ಕೂಡ ಇದೆ. ಶಾಲೆ ಸಮೀಪದಲ್ಲೇ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನವಿದೆ. ಹಿಂದಿನಿಂದಲೂ ದೇವಾಲಯ ಸುತ್ತಮುತ್ತ ಮಾಂಸಾಹಾರ ನಿಷೇಧಿಸಲಾಗಿದೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ನಡೆದು ಬಂದಿದ್ದು, ಶಾಲೆಯಲ್ಲಿ ಮೊಟ್ಟೆ ನೀಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಬೇಡಿ ಎಂದು ಪೋಷಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು

    ಇದೇ ಕಾರಣದಿಂದ ಕಳೆದ 3 ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಸರ್ಕಾರ ಮೊಟ್ಟೆ ವಿತರಿಸಲು ನಿರ್ಧರಿಸಿದಾಗಲೂ ಈ ಶಾಲೆಯಲ್ಲಿ ಮೊಟ್ಟೆ ಬದಲಿಗೆ ಬಾಳೆಹಣ್ಣು, ಚಿಕ್ಕಿ ನೀಡಲು ಶಾಲೆಯ ಎಸ್‌ಡಿಎಂಸಿ ನಿರ್ಧರಿಸಿದೆ. ಅಂದಿನಿಂದ ಇಲ್ಲಿಯವರೆಗೂ ಈ ನಿಯಮವನ್ನೇ ಪಾಲಿಸಿಕೊಂಡು ಬರಲಾಗ್ತಿದೆ. ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ಆದರೆ ಈಗ ಗ್ರಾಮದ ಕೆಲವರು ಮಕ್ಕಳಿಗೆ ಪೌಷ್ಟಿಕಾಹಾರ ಪೂರೈಕೆ ದೃಷ್ಟಿಯಿಂದ ಮೊಟ್ಟೆ ವಿತರಿಸಲು ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆ ಕೂಡ ಸರ್ಕಾರದ ನಿಯಮದಂತೆ ಮೊಟ್ಟೆ ಕೊಡಲು ಮುಂದಾಗಿದ್ದು, ಅಧಿಕಾರಿಗಳ ನಿರ್ಧಾರ ಗ್ರಾಮಸ್ಥರನ್ನ ಕೆರಳಿಸಿದೆ. ಮೊಟ್ಟೆ ತಿನ್ನುವ ಮಕ್ಕಳಿಗೆ ಅವರ ಮನೆಗೆ ಮೊಟ್ಟೆ ತಲುಪಿಸಿ. ಆದರೆ ಶಾಲೆಯಲ್ಲಿ ಮೊಟ್ಟೆ ವಿತರಿಸಿ ಜನರ ಭಾವನೆಗೆ ನೋವುಂಟು ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ ಆಲಕೆರೆ ಗ್ರಾಮದ ಮೊಟ್ಟೆ ವಿವಾದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ. ಮೊಟ್ಟೆ ಕೊಟ್ಟರೇ 80 ವಿದ್ಯಾರ್ಥಿಗಳು ಶಾಲೆ ಬಿಡುವ ಆತಂಕ ಒಂದೆಡೆಯಾದರೆ, ಮೊಟ್ಟೆ ಕೊಡದಿದ್ರೆ ಸರ್ಕಾರದ ಪೌಷ್ಟಿಕಾಹಾರ ಪೂರೈಕೆ ನಿಯಮ ಉಲ್ಲಂಘನೆಯಾಗುವ ಭಯ ಅಧಿಕಾರಿಗಳನ್ನು ಕಾಡುತ್ತಿದೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ (School Children) ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ.

    ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (Karnataka Public School) LKG ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಕನ್ನಡತಿ

    ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ, ಗುಣಮಟ್ಟ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್‌ ವ್ಯವಸ್ಥೆಯನ್ನ ಸರ್ಕಾರ ನೀಡಲಿದೆ ಎಂದಿದ್ದಾರೆ. ಇದನ್ನೂ ಓದಿ: 3ನೇ ಆಷಾಢ ಸಂಭ್ರಮ; ಗಜ ಲಕ್ಷ್ಮಿ, ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡಿ ತಾಯಿ

    ಎಲ್‌ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸರ್ಕಾರ ತೀರ್ಮಾನಿಸಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲ ನೀಡಲು ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆಯೂ ಇದಾಗಿದೆ ಎಂದು ಎಕ್ಸ್‌ಪೋಸ್ಟ್‌ನಲ್ಲಿ ಕಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಡೋದಾಗಿ ಮೌಲ್ವಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ – ಕೇಸ್‌ ದಾಖಲು

  • PUBLiC TV Impact | ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಗೆ `ಪಬ್ಲಿಕ್’ ಪ್ರೋತ್ಸಾಹ – ಸರ್ಕಾರಿ ಶಾಲೆಗೆ ಹೆಚ್ಚಾಯ್ತು ಡಿಮ್ಯಾಂಡ್

    PUBLiC TV Impact | ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಗೆ `ಪಬ್ಲಿಕ್’ ಪ್ರೋತ್ಸಾಹ – ಸರ್ಕಾರಿ ಶಾಲೆಗೆ ಹೆಚ್ಚಾಯ್ತು ಡಿಮ್ಯಾಂಡ್

    ಮಡಿಕೇರಿ: ಸರ್ಕಾರಿ ಶಾಲೆ (Government School) ಅಂದರೆ ಅಲ್ಲಿ ಶಿಕ್ಷಕರ ಸಮಸ್ಯೆ, ಕಂಪ್ಯೂಟರ್ ಇದ್ರೂ ಅದಕ್ಕೆ ಕೊಠಡಿ ಇರೋಲ್ಲ, ಶಿಕ್ಷಕರು ಇರೋಲ್ಲ, ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಯಾರು ಕಳಿಸುತ್ತಾರೆ? ಸ್ವಲ್ಪ ಕಷ್ಟವಾದ್ರೂ ಪರವಾಗಿಲ್ಲ ಇಂದಿನ ಪೈಪೋಟಿ ಯುಗದಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದೇ ಮುಖ್ಯ ಎಂದು ಅಂದುಕೊಳ್ಳುತ್ತಿದ್ದ ಪೋಷಕರು, ಇದೀಗಾ ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕು ಅಂತ ಮುಗಿಬೀಳುತ್ತಿದ್ದಾರೆ. ಈ ಸನ್ನಿವೇಶ ನಿರ್ಮಾಣ ಆಗಿರೋದು ಕೊಡಗು (Kodagu) ಜಿಲ್ಲೆಯ ಕುಶಾಲನಗರದ (Kushalnagar) ಸರ್ಕಾರಿ ಶಾಲೆಯಲ್ಲಿ.

     

    ಹೌದು. ಇಂಗ್ಲಿಷ್‌ ಮೇಲಿನ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಪರಿಪಾಠವಾಗುತ್ತಿದೆ. ಹೀಗಾಗಿ ಹಲವಾರು ಕನ್ನಡ ಶಾಲೆಗಳು ಮುಂಚುವ ಹಂತಕ್ಕೆ ತಲುಪಿದೆ. ಈ ನಡುವೆ ಸರ್ಕಾರಿ ಶಾಲೆಯ ಪರಿಸ್ಥಿತಿಯನ್ನು ಅರಿತ ನಿಮ್ಮ ʻಪಬ್ಲಿಕ್ ಟಿವಿʼಯಿಂದ 2 ವರ್ಷಗಳ ಹಿಂದೆ ಆ ಊರಿನ ಶಾಲೆಗೆ ಕಂಪ್ಯೂಟರ್ ಕೊಠಡಿ ಕಟ್ಟಿಸಿಕೊಡಲಾಗಿತ್ತು. ಅಳಿವಿನಂಚಿನಲ್ಲಿರುವ ಶಾಲೆಗೆ ಈ ಕೊಡುಗೆ ನೀಡಿದ ಬೆನ್ನಲ್ಲೇ, ಇದೀಗ ಆ ಸರ್ಕಾರಿ ಶಾಲೆಗೆ ಮಕ್ಕಳ ಹಾಜರಾತಿ ಸಂಖ್ಯೆ ಮತ್ತಷ್ಟು ಏರಿಕೆ ಆಗಿದೆ. ಇದನ್ನೂ ಓದಿ: ಕೊಡಗಿನಲ್ಲಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌‌ ಒಡೆಯರ್‌ ಮನವಿ

    2 ವರ್ಷಗಳ ಹಿಂದೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ 284 ಇತ್ತು. ಅಲ್ಲದೇ ಹಲವಾರು ಕಟ್ಟಡಗಳು ದುಸ್ಥಿತಿಯಿಂದ ಕಂಪ್ಯೂಟರ್ ಕೊಠಡಿಯು ಬೀಳುವ ಹಂತಕ್ಕೆ ತಲುಪಿತ್ತು. ಈ ಶಾಲೆಯ ಪರಿಸ್ಥಿತಿ ಕಂಡ ನಿಮ್ಮ ʻಪಬ್ಲಿಕ್ ಟಿವಿʼ ಬೆಳಕು ಕಾರ್ಯಕ್ರಮದ ಮೂಲಕ ಶಾಲೆಗೆ ಸುಸಜ್ಜಿತವಾದ ಕಂಪ್ಯೂಟರ್ ಕೊಠಡಿ ಕೊಡುಗೆಯಾಗಿ ನೀಡಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಚುವಲ್ ಆಗಿ ಉದ್ಘಾಟನೆ ಮಾಡಿ ಸರ್ಕಾರಿ ಶಾಲೆಗೆ ಮಕ್ಕಳ ಹಾಜರಾತಿ ಸಂಖ್ಯೆ ಏರಿಕೆ ಅಗಬೇಕು ಎಂದು ತಿಳಿಸಿದ್ರು. ʻಪಬ್ಲಿಕ್ ಟಿವಿʼ ಹಾಗೂ ಶಾಲೆಯ ಶಿಕ್ಷಕರ ಪ್ರಯತ್ನದ ಫಲವಾಗಿ ಇದೀಗ ಈ ಸರ್ಕಾರಿ ಶಾಲೆಗೆ ಕಳೆದ 2 ವರ್ಷಗಳಲ್ಲಿ ಬರೋಬ್ಬರಿ 392 ಮಕ್ಕಳು ಶಾಲೆಗೆ ದಾಖಲು ಆಗಿದ್ದಾರೆ. ಅಲ್ಲದೇ ಕುಶಾಲನಗರ ಸುತ್ತಮುತ್ತಲಿನ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಮುಗಿ ಬೀಳುತ್ತಿದ್ದಾರೆ. ಇದನ್ನೂ ಓದಿ: ಅನುದಾನ ಕೊರತೆ ಹೇಳಿಕೆ ಕೊಟ್ಟವರಿಗೆ ತಲೆ ಕೆಟ್ಟಿರಬೇಕು: ಬೇಳೂರು ಗೋಪಾಲಕೃಷ್ಣ

    ಇನ್ನೂ ಸರ್ಕಾರಿ ಶಾಲೆಗೆ ಆಂಗ್ಲ ಮಾಧ್ಯಮ ಶಾಲೆಗಳು ವರ್ಷದಿಂದ ವರ್ಷಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿವೆ. ನಿಗದಿತ ಸೀಟ್‌ಗಳಿಗಿಂತ ಮೂರು ಪಟ್ಟು ಅಧಿಕ ಅರ್ಜಿಗಳು ಬರುತ್ತಿದ್ದು, ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವುದೇ ಎಸ್‌ಡಿಎಂಸಿಗಳಿಗೆ ತಲೆನೋವಾಗಿದೆ. ಇದನ್ನೂ ಓದಿ: NASA Axiom-4 Mission; ಆಕ್ಸಿಯಂ-4 ಉಡಾವಣೆ ಯಶಸ್ವಿ – ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಅಂತರಿಕ್ಷ ಪ್ರಯಾಣ

    ಕುಶಾಲನಗರ ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಕುಶಾಲನಗರ ಪುರಸಭೆ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚುವರಿ ಸೀಟ್‌ಗಳ ಅವಕಾಶ ಕಲ್ಪಿಸಿಕೊಡಬೇಕು ಎಂದು ಮೊದಲಿನಿಂದಲೂ ಬೇಡಿಕೆ ಇಡಲಾಗುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿ ಈ ವರ್ಷ ಎಲ್‌ಕೆಜಿ ಪ್ರವೇಶಕ್ಕೆ 80ಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಇರುವ 30 ಸೀಟ್‌ಗಳನ್ನು ಯಾವ ಮಾನದಂಡ ಮೇಲೆ 80 ಅರ್ಜಿಗಳಲ್ಲಿ ಆಯ್ಕೆ ಮಾಡುವುದು ಎನ್ನುವುದರ ಬಗ್ಗೆ ಎಸ್‌ಡಿಎಂಸಿ ತಲೆ ಕೆಡಿಸಿಕೊಂಡಿದೆ. ಇದನ್ನೂ ಓದಿ: Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್‌ 26ರ ವರೆಗೂ ಭಾರೀ ಮಳೆ

  • `ಪಬ್ಲಿಕ್ ಟಿವಿ’ಯ ಒಂದು ಕರೆಯಿಂದ ಸರ್ಕಾರಿ ಶಾಲೆಗೆ ಮರುಜೀವ ನೀಡಿದ ಪ್ರಣವ್ ಫೌಂಡೇಶನ್..!

    `ಪಬ್ಲಿಕ್ ಟಿವಿ’ಯ ಒಂದು ಕರೆಯಿಂದ ಸರ್ಕಾರಿ ಶಾಲೆಗೆ ಮರುಜೀವ ನೀಡಿದ ಪ್ರಣವ್ ಫೌಂಡೇಶನ್..!

    – ಮೂರು ತಿಂಗಳಲ್ಲಿ 100ಕ್ಕೂ ಅಧಿಕ ಮಕ್ಕಳು ಶಾಲೆಗೆ ಸೇರ್ಪಡೆ

    ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಪೆರೆಜೆ ಗ್ರಾಮದ (Peraje Village) ಸರ್ಕಾರಿ ಶಾಲೆಯೊಂದು ಮಕ್ಕಳ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಿತ್ತು. ಪೆರೆಜೆ ಗ್ರಾಮದ ಸೇರಿ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಆ ಶಾಲೆಯೇ ಆಸರೆಯಾಗಿತ್ತು. ಒಂದು ಕಾಲದಲ್ಲಿ ಸಾವಿರಾರು ಮಕ್ಕಳಿಂದ ತುಂಬಿ ತುಳುತ್ತಿದ್ದ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಮಕ್ಕಳನ್ನು ಆ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದರು. ಖಾಸಗಿ ಶಾಲೆಗಳನ್ನ (Private School) ಪೋಷಕರು ಮುಖ ಮಾಡಿದ್ರು. ಕ್ರಮೇಣ ದಾಖಲಾತಿ ಕೊರತೆಯಿಂದ ಆ ಶಾಲೆಯೇ ಮುಚ್ಚುವ ಹಂತಕ್ಕೆ ತಲುಪಿತ್ತು. ಇಂತಹ ಪರಿಸ್ಥಿತಿಯಲ್ಲಿ ʻನಿಮ್ಮ ಪಬ್ಲಿಕ್‌ ಟಿವಿʼಯ (Public TV) ಒಂದೇ ಒಂದು ಕರೆಯಿಂದ ಶಾಲೆಗೆ ಮರುಜೀವ ಸಿಕ್ಕಿದೆ. ಹೌದು ʻಪಬ್ಲಿಕ್ ಟಿವಿʼಯು ಗಡಿಭಾಗದ ಸರ್ಕಾರಿ ಶಾಲೆಯನ್ನು ಉಳಿಸಬೇಕೆಂದು ಪ್ರಣವ್ ಫೌಂಡೇಶನ್‌ ಸದಸ್ಯರ ಬಳಿ ಕೇಳಿಕೊಂಡಿತ್ತು. ಇಂದು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಪೆರಜೆ ಸರ್ಕಾರಿ ಶಾಲೆ ಬೆಳೆದು ನಿಂತಿದೆ.

    ಹೌದು. ಪೆರಜೆ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಮಕ್ಕಳಿಗೆ 1982 ರಿಂದ 2000 ಇಸವಿ ವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಈ ಶಾಲೆ ಜ್ಞಾನಾರ್ಜನೆ ನೀಡಿತ್ತು. ಕಾಲಕ್ರಮೇಣ ಈ ಶಾಲೆಯ ಹಿರಿಯ ಶಿಕ್ಷಕರು ನಿವೃತ್ತಿ ಹೊಂದಿದರು. ಇದರಿಂದ ಹೊಸ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಮೂಲ ಸೌಕರ್ಯಗಳಿಲ್ಲ ಎನ್ನುವ ಕಾರಣಕ್ಕಾಗಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾದರು. ಇದರಿಂದ ಇಡೀ ಶಾಲೆಯೇ ವಿದ್ಯಾರ್ಥಿಗಳಿಲ್ಲದೇ ಬಣಗುಡುತ್ತಿತ್ತು. ಶಿಕ್ಷಣ ಇಲಾಖೆ ಕೂಡ ಶಾಲೆಯನ್ನು ಮುಚ್ಚುವಂತೆ ಆದೇಶ ನೀಡಿತ್ತು. ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ – ವಾಡಿಕೆಗೂ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶ

    ಇದಾದ ಬಳಿಕ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ನಮ್ಮ ಮಡಿಕೇರಿಯ ʻಪಬ್ಲಿಕ್ ಟಿವಿʼ ಜಿಲ್ಲಾ ವರದಿಗಾರ ಮಲ್ಲಿಕಾರ್ಜುನ್ ಅವರಿಗೆ ಕರೆ ಮಾಡಿ ಶಾಲೆಯನ್ನ ಉಳಿಸಿಕೊಂಡುವಂತೆ ಮನವಿ ಮಾಡಿದ್ರು. ಬಳಿಕ ʻಪಬ್ಲಿಕ್‌ ಟಿವಿʼ ಪ್ರಣವ್ ಫೌಂಡೇಶನ್‌ಗೆ ಸಸ್ಯರಿಗೆ ಕರೆ ಮಾಡಿ ಪರಿಸ್ಥಿತಿಯನ್ನ ಮನವರಿಕೆ ಮಾಡಿಕೊಟ್ಟಿತ್ತು. ನಂತರ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಪ್ರಣವ್ ಫೌಂಡೇಶನ್‌ನ ಸದಸ್ಯರು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮೂರೇ ತಿಂಗಳ ಅವಧಿಯಲ್ಲಿ ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಶಾಲೆಯ ವಾತಾವರಣವನ್ನ ಬದಲಾಯಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ – ಟಾಪರ್‌ಗಳು ಯಾರು?

    5 ದಶಕಗಳನ್ನು ಪೂರೈಸಿದ ಪೆರೆಜೆ ಗ್ರಾಮದ ಜ್ಯೋತಿ ಪ್ರೌಢಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಸುಣ್ಣ-ಬಣ್ಣ ಕಾಣದೇ ಅದೆಷ್ಟೋ ವರ್ಷಗಳಾಗಿತ್ತು. ಈ ಶಾಲೆಯನ್ನ ಮೇಲ್ದರ್ಜೆಗೆ ತೆಗೆದುಕೊಂಡು ಹೋಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಶಾಲೆಯನ್ನು ದತ್ತು ಪಡೆದ ಪ್ರಣವ್ ಫೌಂಡೇಶನ್‌ನ ಸದಸ್ಯರು ಆಧುನಿಕ ಸ್ಪರ್ಶ ನೀಡಿದ್ದಾರೆ‌. ಈ‌ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಶೈಕ್ಷಣಿಕ ಪ್ರವಾಸ, ಉಚಿತ ಕಲಿಕಾ ಸಾಮಗ್ರಿ, ಕಂಪ್ಯೂಟರ್ ಡಿಜಿಟಲ್ ಶಿಕ್ಷಣ, ಡಿಜಿಟಲ್ ಗ್ರಂಥಾಲಯ, ಸ್ಪೋಕನ್‌ ಕ್ಲಾಸ್, ಪೌಷ್ಠಿಕ ಆಹಾರ ಸೌಲಭ್ಯ ಕಲ್ಪಿಸಿರುವುದಲ್ಲದೇ, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸ್ಕೂಲ್ ಬಸ್ ಸೌಲಭ್ಯ ಸಹ ಕಲ್ಪಿಸಿದ್ದಾರೆ. ಇದನ್ನೂ ಓದಿ: ನಿರಂತರ ಮಳೆ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಜೀವಕಳೆ – ರೈತರ ಮೊಗದಲ್ಲಿ ಮಂದಹಾಸ

    ಇನ್ನೂ ಈ ಶಾಲೆಗೆ ಶಿಕ್ಷಕರು ಇಲ್ಲದೇ ಶಾಲೆಗಳಿಗೆ ಮಕ್ಕಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ‌ ಎಂದು ಅರಿತ ಸದಸ್ಯರು ಶಾಲೆಗೆ ಸುತ್ತಮುತ್ತಲಿನಲ್ಲಿ‌ ಇರುವಂತಹ ಅತೀ ಹೆಚ್ಚು ಓದಿರುವ ಯುವತಿಯರನ್ನೇ ಅತಿಥಿ ಶಿಕ್ಷಕನಾಗಿ ನೇಮಕ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಇಲ್ಲಿರುವ ಸುಮಾರು 5-6 ಶಿಕ್ಷಕರಿಗೆ ಪ್ರಣವ್ ಫೌಂಡೇಶನ್‌ನ ಸದಸ್ಯರೇ ದಾನಿಗಳ ನೆರವಿನಿಂದ ಪ್ರತಿ ತಿಂಗಳು ತಲಾ ಒಬ್ಬ ಶಿಕ್ಷಕರಿಗೆ 12,000 ರಿಂದ 60,0000 ರೂ.ವರೆಗೆ ವೇತನ ನೀಡುತ್ತಿದ್ದಾರೆ. ಇಂತಹ ಕೆಲಸ ಮಾಡುವುದಕ್ಕೆ ʻಪಬ್ಲಿಕ್ ಟಿವಿʼಯ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಸರ್ ಪ್ರೇರಣೆ ಎನ್ನುತ್ತಾರೆ ಪ್ರಣವ್ ಫೌಂಡೇಶನ್‌ನ ಸದಸ್ಯರು‌.

  • Tumkur | `ಬೆಳಕು’ ಪ್ರಸಾರವಾದ 26 ದಿನದಲ್ಲೇ ಇಂಪ್ಯಾಕ್ಟ್ – ಸರ್ಕಾರಿ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ!

    Tumkur | `ಬೆಳಕು’ ಪ್ರಸಾರವಾದ 26 ದಿನದಲ್ಲೇ ಇಂಪ್ಯಾಕ್ಟ್ – ಸರ್ಕಾರಿ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ!

    – ಸಚಿವ ಕೆ.ಎನ್ ರಾಜಣ್ಣರಿಂದ ಗುದ್ದಲಿ ಪೂಜೆ, `ಪಬ್ಲಿಕ್ ಟಿವಿ’ಗೆ ಶ್ಲಾಘನೆ
    – ಡಿಸೆಂಬರ್ 7 ರಂದು ಪ್ರಸಾರವಾಗಿದ್ದ ಬೆಳಕು ಕಾರ್ಯಕ್ರಮ

    ತುಮಕೂರು: ನೊಂದವರಿಗೆ ನೆರವಾಗುವ, ಸಮಸ್ಯೆಗೆ ಪರಿಹಾರ ಆಗುವ ನಿಮ್ಮ `ಪಬ್ಲಿಕ್ ಟಿವಿ’ಯ ಬೆಳಕು ಕಾರ್ಯಕ್ರಮದಿಂದ (Belaku Program) ಬಹುದೊಡ್ಡ ಇಂಪ್ಯಾಕ್ಟ್ ಆಗಿದೆ. ವರದಿ ಪ್ರಸಾರವಾದ ಕೇವಲ 26 ದಿನದಲ್ಲೇ ಸರ್ಕಾರಿ ಶಾಲೆಯ ಕೊಠಡಿಗೆ ಶಂಕುಸ್ಥಾಪನೆ ನೆರವೇರಿದೆ. ಈ ಮೂಲಕ ಆ ಊರ ವಿದ್ಯಾರ್ಥಿಗಳ ನೆರವಿಗೆ `ಪಬ್ಲಿಕ್ ಟಿವಿ’ (Public TV) ಧಾವಿಸಿದೆ.

    ಹೌದು. ತುಮಕೂರು (Tumkur) ಜಿಲ್ಲೆ ಮಧುಗಿರಿ ತಾಲೂಕು ಕಡಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾಕಾರ‍್ಲಹಳ್ಳಿ ಶಾಲೆಯ ದುಸ್ಥಿತಿ ಯಾರಿಗೂ ಬೇಡವಾಗಿತ್ತು. ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಇಲ್ಲಿ ಪಾಠ ನಡೆಯುತ್ತದೆ. ಸದ್ಯ 81 ವಿದ್ಯಾರ್ಥಿಗಳು (School Students) ಇದ್ದಾರೆ. ಇಡೀ ತಾಲೂಕಿಗೆ ಈ ಶಾಲೆ ಹೆಸರು ವಾಸಿ. ಅಷ್ಟರಮಟ್ಟಿಗೆ ಒಳ್ಳೆ ವಿದ್ಯಾಭ್ಯಾಸ ಇಲ್ಲಿಸಿಗುತ್ತದೆ. ಆದರೆ ಕೊಠಡಿಗಳ ಕೊರತೆಯೆ ಇಲ್ಲಿಯ ಪ್ರಮುಖ ಸಮಸ್ಯೆಯಾಗಿತ್ತು.

    ಕಳೆದ ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಗೆ ಎರಡು ಕೊಠಡಿಯ ಛಾವಣಿ ಸಂಪೂರ್ಣ ಕುಸಿದಿತ್ತು. ಪರಿಣಾಮ ಅಕ್ಕಪಕ್ಕದ ಇನ್ನೆರಡೂ ಕೊಠಡಿಗೂ ಹಾನಿಯಾಗಿತ್ತು. ಇಂಥಹ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿಡಿದು ವಿದ್ಯಾರ್ಥಿಗಳು ಪಾಠ ಕೇಳುತಿದ್ದರು. ವಿದ್ಯಾರ್ಥಿಗಳ ಸಂಕಷ್ಟ ಅರಿತ `ಪಬ್ಲಿಕ್ ಟಿವಿ’ ಅವರ ನೆರವಿಗೆ ಧಾವಿಸಿತ್ತು.

    `ಬೆಳಕು’ ಕಾರ್ಯಕ್ರಮದಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಿತ್ತು. ನೂತನ ಕೊಠಡಿ ನಿರ್ಮಾಣ ಮಾಡಿಕೊಡುವಂತೆ ಮಧುಗಿರಿ ಶಾಸಕ ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣರಿಗೆ ಪಬ್ಲಿಕ್ ಟಿವಿ ದುಂಬಾಲು ಬಿದ್ದಿತ್ತು. ಸಚಿವ ರಾಜಣ್ಣರ ನಿರ್ದೇಶನದಂತೆ ಮಧುಗಿರಿ ಡಿಡಿಪಿಐ ಗಿರಿಜಾ ನಾಲ್ಕೈದು ತಿಂಗಳಲ್ಲಿ ಕೊಠಡಿ ನಿರ್ಮಾಣ ಮಾಡಿಸೋ ಭರವಸೆ ನೀಡಿದ್ರು. ಡಿಸೆಂಬರ್ 7 ರಂದು ವರದಿ ಪ್ರಸಾರ ಆಗಿತ್ತು. ಕೇವಲ 26 ದಿನದಲ್ಲಿ ಇಂದು ಸಚಿವ ರಾಜಣ್ಣ ನೂತನ ಎರಡು ಕೊಠಡಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿ ಕೊಟ್ಟ ಭರವಸೆ ಈಡೇರಿಸಿದ್ದಾರೆ.

    ಕೊಠಡಿ ನಿರ್ಮಾಣಕ್ಕೆ ಯಾವುದೇ ಯೋಜಿತ ಗ್ರ‍್ಯಾಂಟ್ ಇರಲಿಲ್ಲ. ಇದು ಡಿಡಿಪಿಐ ಗಿರಿಜಾ ಹಾಗೂ ಕೆ.ಎನ್ ರಾಜಣ್ಣರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಮಧ್ಯೆ ಸಲಹೆ ನೀಡಿದ ಜಿಪಂ ಸಿಇಒ ಜಿ.ಪ್ರಭು ಬೇರೊಂದು ಗ್ರ‍್ಯಾಂಟ್ ಸುಳಿವು ಕೊಟ್ಟಿದ್ರು. ಅದರ ತರುವಾಯ ಎರಡು ಕೊಠಡಿಗೆ ಒಟ್ಟು 28 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹಾಗಾಗಿ ಇಂದು ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಜನರು ಅತ್ಯಂತ ಸಂಭ್ರಮದಿಂದ ಮಾಡಿದ್ದಾರೆ. ಅಲ್ಲದೇ ಸಚಿವ ಕೆ.ಎನ್ ರಾಜಣ್ಣ `ಪಬ್ಲಿಕ್ ಟಿವಿ’ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಚಿತ್ರದುರ್ಗ | ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರಿಗೆ ವಿಮಾನಯಾನ ಭಾಗ್ಯ

    ಚಿತ್ರದುರ್ಗ | ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರಿಗೆ ವಿಮಾನಯಾನ ಭಾಗ್ಯ

    ಚಿತ್ರದುರ್ಗ: ಸರ್ಕಾರಿ ಶಾಲೆಯ ಶಿಕ್ಷಕರ ಇಚ್ಛಾಶಕ್ತಿಯ ಫಲವಾಗಿ ದಾನಿಗಳ ನೆರವಿನಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾನ ಭಾಗ್ಯ ದೊರೆತಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರಿಗೆ ಇದು ನಿಜಕ್ಕೂ ಅಚ್ಚರಿ ಸಂಗತಿ.

    ಹೌದು. ಚಿತ್ರದುರ್ಗ (Chitradurga) ಜಿಲ್ಲೆಯ ಮಾರಬಘಟ್ಟ (Marabaghatta) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 2 ದಿನಗಳ ಅಧ್ಯಯನ ಪ್ರವಾಸಕ್ಕಾಗಿ ವಿಮಾನಯಾನ ಮಾಡುತ್ತಿದ್ದಾರೆ. ಗುರುವಾರ ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga Airport) ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru International Airport) ಪ್ರಯಾಣ ಬೆಳೆಸಿದ್ದಾರೆ.ಇದನ್ನೂ ಓದಿ: ಕದಂಬ ಕನ್ನಡ ಜಿಲ್ಲೆ, ಬನವಾಸಿ ತಾಲೂಕು ರಚನೆಗೆ ಒತ್ತಾಯಿಸಿ ಪ್ರತಿಭಟನೆ

    ಸದ್ಗುರು ಆರ್ಯುವೇದ ಕಂಪನಿ ಮಾಲೀಕ ಡಿ.ಎಸ್.ಪ್ರದೀಪ್ ಶೆಟ್ಟಿ, ಮಾರಬಘಟ್ಟದ ಚನ್ನಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಸೇರಿದಂತೆ ಮತ್ತಿತರ ದಾನಿಗಳ ಆರ್ಥಿಕ ನೆರವಿನಿಂದ ಶಾಲೆಯ ಶಿಕ್ಷಕ ಯೋಗರಾಜ್ ಪ್ರವಾಸವನ್ನು ಆಯೋಜಿಸಿದ್ದಾರೆ. ಸ್ಕೌಟ್ ಅಂಡ್ ಗೈಡ್ಸ್ ಸೇರಿರುವ ಶಾಲೆಯ 5 ರಿಂದ 7ನೇ ತರಗತಿವರಗೆ ವ್ಯಾಸಂಗ ಮಾಡುತ್ತಿರುವ 19 ಮಕ್ಕಳು, ಮೂವರು ಶಿಕ್ಷಕರು ಹಾಗೂ ಇಸಿಒ ವಿಮಾನದಲ್ಲಿ ಪ್ರಯಾಣಿಸಿದರು.

    ಯೋಗರಾಜ್ ಅವರು ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಕರೆದೊಯ್ಯುವ ಕುರಿತು ಯೋಚಿಸಿ ಇತರ ಶಿಕ್ಷಕರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಶಿಕ್ಷಕರ ಚಿಂತನೆಗೆ ದಾನಿಗಳಿಂದ ಉತ್ತಮ ಸ್ಪಂದನೆ ದೊರೆತು ಮಕ್ಕಳು ವಿಮಾನದಲ್ಲಿ ಹಾರಾಟ ನಟಡಸಲು ಅನುಕೂಲವಾಯಿತು.

    ಎರಡು ದಿನಗಳ ಕಾಲ ಬೆಂಗಳೂರಿನ ವಿಧಾನಸೌಧ, ಹೈಕೋರ್ಟ್, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರೂ ತಾರಾಲಯ, ಬನ್ನೇರುಘಟ್ಟದ ಜೈವಿಕ ಉದ್ಯಾನವನ ಸೇರಿದಂತೆ ಅಧ್ಯಯನ ಪ್ರವಾಸ ನಡೆಸಲಿರುವ ಮಕ್ಕಳು ಶನಿವಾರ ರಾತ್ರಿ ಹಿಂತಿರುಗಲಿದ್ದಾರೆ. ಮಾರಬಘಟ್ಟದ ಉದ್ಯಮಿ ಪ್ರಭಾಕರ್ ಮಕ್ಕಳಿಗೆ ಎರಡು ದಿನದ ಊಟ, ವಸತಿಯ ಸೌಲಭ್ಯ ಕಲ್ಪಿಸಿದ್ದಾರೆ.

    ಸುಮಾರು ಇಪ್ಪತ್ತು ವರ್ಷಗಳಿಂದಲೂ ತಾಲೂಕಿನಲ್ಲಿ ಸ್ಕೌಟ್ ಮತ್ತು ಗೈಡ್ಸ್ ನೇತೃತ್ವ ವಹಿಸಿರುವ ಶಿಕ್ಷಕ ಯೋಗರಾಜ್ ಪ್ರತಿ ಶಾಲೆಗೂ ಸ್ಕೌಟ್ ಮತ್ತು ಗೈಡ್ಸ್ ಪರಿಚಯಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕವಾಗಿಯೂ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ನಿರ್ವಹಣೆ ಮಾಡುತ್ತಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಇಂದೂ ಸಿಗಲಿಲ್ಲ ಬೇಲ್‌ – ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

  • ಬೆಂಚ್ ಇಲ್ಲದ ಶಾಲೆಗೆ ಸೌಲಭ್ಯ ಕಲ್ಪಿಸಿದ ಪಬ್ಲಿಕ್ `ಬೆಳಕು’

    ಬೆಂಚ್ ಇಲ್ಲದ ಶಾಲೆಗೆ ಸೌಲಭ್ಯ ಕಲ್ಪಿಸಿದ ಪಬ್ಲಿಕ್ `ಬೆಳಕು’

    ವಿಜಯಪುರ: ಸರ್ಕಾರಿ ಶಾಲೆ ಎಂದ ಮೇಲೆ ಮೂಲ ಸೌಕರ್ಯಗಳ ಕೊರತೆ ಇದ್ದೇ ಇರುತ್ತದೆ. ಹಾಗೆಯೇ ಈ ಶಾಲೆಯ ವಿದ್ಯಾರ್ಥಿಗಳು ಬೆಂಚ್ ಕೊರತೆಯಿಂದಾಗಿ ನೆಲದ ಮೇಲೆ ಕುಳಿತು ಅಭ್ಯಾಸ ಮಾಡಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಆ ಶಾಲೆಯ ಶಿಕ್ಷಕರು `ಪಬ್ಲಿಕ್ ಟಿವಿ ಬೆಳಕು’ (PUBLiC TV Belaku Impact) ಕಾರ್ಯಕ್ರಮದ ಮೊರೆ ಹೋಗಿದ್ದರು. ಇದೀಗ ಶಾಲಾ ಮಕ್ಕಳಿಕೆ ಬೆಂಚ್ ಸೌಲಭ್ಯ ಒದಗಿ ಬಂದಿದೆ.ಇದನ್ನೂ ಓದಿ: 7.99 ಲಕ್ಷಕ್ಕೆ ಅತ್ಯಾಕರ್ಷಕ ಹೊಸ ಅಮೇಜ್ ಕಾರು ಬಿಡುಗಡೆ

    ವಿಜಯಪುರ (Vijayapura) ನಗರದ ಟಕ್ಕೆ ಬಡವಾಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.49. ಉತ್ತಮ ಶಿಕ್ಷಕರ ವೃಂದ, ಕೊಠಡಿ, ಮೈದಾನ ಹೊಂದಿದ್ದ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಒಟ್ಟು 321 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿದ್ದು, 9 ದೈನಂದಿನ ಶಿಕ್ಷಕರು ಹಾಗೂ 3 ಜನ ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ 3, 4, 5, 6, 7, 8ನೇ ತರಗತಿಯ ವಿದ್ಯಾರ್ಥಿಗಳಿಗೆ 125 ಡೆಸ್ಕ್ಗಳ ಅವಶ್ಯಕತೆ ಇತ್ತು. ಈ ಸಮಸ್ಯೆಯ ಮೇಲೆ `ಪಬ್ಲಿಕ್ ಟಿವಿ’ `ಬೆಳಕು’ ಚೆಲ್ಲಿತ್ತು, ನ.16 ರಂದು ಕಾರ್ಯಕ್ರಮವೊಂದನ್ನ ಬಿತ್ತರಿಸಿತ್ತು.

    ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಬೆಂಚ್ ಇಲ್ಲದೇ ಬಡ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ ಅಳಲು ತೋಡಿಕೊಂಡಿದ್ದರು. ಆಗ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರು ಬೆಂಚ್ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದರು. ದಾನಿಗಳಾದ ವಿಜಯಪುರ ನಿವಾಸಿ ವಿಶ್ವನಾಥ ಅವರನ್ನು ಸಂಪರ್ಕಿಸಿ ಶಾಲೆಯ ಸಮಸ್ಯೆ ಬಗ್ಗೆ ವಿವರಿಸಿದರು. ವಿಶ್ವನಾಥ ಅವರು ಮುಂಬೈನ ಶ್ರೀ ತಪದಿದಾಸ ತುಳಸಿದಾಸ ವ್ರಜದಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೆಂಚ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಲೆಗೆ 125 ಡೆಸ್ಕ್ಗಳನ್ನು ಒದಗಿಸಿದ್ದಾರೆ.

    ಸದ್ಯ `ಬೆಳಕು’ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಯ ಬಹುದಿನಗಳ ಸಮಸ್ಯೆ ಬಗೆಹರಿದಿದೆ. ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದು, `ಪಬ್ಲಿಕ್ ಟಿವಿ’ಗೆ ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಇಡಿ ಎಂಟ್ರಿಯೇ ದುರುದ್ದೇಶ – ಸುಧಾಕರ್

  • PUBLiC TV Impact –  ಅನಾಥ ಬಾಲಕನಿಗೆ ಸಿಕ್ತು ಶಾಲೆಯ ಪ್ರವೇಶಾತಿ

    PUBLiC TV Impact – ಅನಾಥ ಬಾಲಕನಿಗೆ ಸಿಕ್ತು ಶಾಲೆಯ ಪ್ರವೇಶಾತಿ

    ದಾವಣಗೆರೆ: ತಂದೆ ತಾಯಿಯಲ್ಲದೇ ದೊಡ್ಡಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದ ಅನಾಥ ಬಾಲಕನಿಗೆ ಶಿಕ್ಷಣ ಸಿಗದೇ ಪರದಾಡುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ (PUBLiC TV Report) ಮಾಡಿತ್ತು. ವರದಿ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಧಿಕಾರಿಗಳು (Education Department) ಎಚ್ಚೆತ್ತಿದ್ದಾರೆ. ಸದ್ಯ ಅನಾಥ ಬಾಲಕನಿಗೆ ಶಿಕ್ಷಣ ಭಾಗ್ಯ ದೊರೆತಿದೆ.

    ಆ ಬಾಲಕ ಆರು ತಿಂಗಳು ಇರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದ. ಹೆಂಡತಿಯನ್ನು ಕೊಂದು ಆ ಬಾಲಕನ ತಂದೆ ಜೈಲು ಸೇರಿದ್ದ. ಅನಾಥವಾಗಿದ್ದ ಬಾಲಕನು ದೊಡ್ಡಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಶಾಲೆಗೆ ಸೇರಿಸಲು ಹೋದಾಗ ಶಾಲಾ ಮುಖ್ಯ ಶಿಕ್ಷಕಿ ಆತನನ್ನು ಶಾಲೆಗೆ ಸೇರಿಸಿಕೊಳ್ಳದೇ ಸತಾಯಿಸುತ್ತಿದ್ದರು. ಈ ಸಮಯದಲ್ಲಿ ಈ ಕುರಿತು ಪಬ್ಲಿಕ್ ಟಿವಿ ವರದಿಯೊಂದನ್ನು ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಅನಾಥ ಬಾಲಕನಿಗೆ ಶಾಲೆಯ ಪ್ರವೇಶಾತಿ ಸಿಗುವುದರ ಜೊತೆಗೆ ವಿದ್ಯಾಭ್ಯಾಸ ಕೂಡ ಸಿಕ್ಕಿದೆ.ಇದನ್ನೂ ಓದಿ: 5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ

    ದಾವಣಗೆರೆಯ (Davanagere) ಶಾಮನೂರು ಹೊಸ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸನ್ನಿವೇಶ ಕಂಡು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಶಾಲೆಗೆ ಸೇರಿಸಿಕೊಳ್ಳದೇ ಇದ್ದಿದ್ದಕ್ಕೆ ಶಾಲೆಯ ಹೊರಗೆ ಕೂತಿದ್ದ ಬಾಲಕ ಇಂದು ಶಾಲೆಯಲ್ಲಿ ಕೂತು ಪಾಠ ಕೇಳುತ್ತಿದ್ದಾನೆ. ಇದಕ್ಕೆ ಪಬ್ಲಿಕ್ ಟಿವಿಯ ವರದಿಯೇ ಕಾರಣ. ಅಕ್ಷಯ್ ಎನ್ನುವ ಬಾಲಕನಿಗೆ ಶಾಲೆಗೆ ಸೇರಿಸಿಕೊಳ್ಳದೇ ಶಾಲಾ ಮುಖ್ಯ ಶಿಕ್ಷಕರು ಸತಾಯಿಸುತ್ತಿದ್ದರು. ಇದಕ್ಕೆ ಕಾರಣ ಅಕ್ಷಯ್ ತಾಯಿಯನ್ನು ಆತನ ತಂದೆ ಕೊಲೆ ಮಾಡಿ ಜೈಲು ಸೇರಿದ್ದ.

    ಅನಾಥವಾಗಿದ್ದ ಆ ಬಾಲಕನನ್ನು ದೊಡ್ಡಮ್ಮ ರೂಪ ತನ್ನ ಮಕ್ಕಳಂತೆ ಸಾಕುತ್ತಿದ್ದಳು. ಶಾಲೆಗೆ ಸೇರಿಸಲು ಹೋದಾಗ ತಂದೆ ತಾಯಿಯ ಆಧಾರ್ ಕಾರ್ಡ್ ಬೇಕು ಇಲ್ಲವಾದ್ರೆ ಸೇರಿಸಿಕೊಳ್ಳೋದಿಲ್ಲ ಎಂದು ಸತಾಯಿಸಿದ್ದರು. ಇದರಿಂದ ದಿಕ್ಕು ತೋಚದ ಸ್ಥಿತಿಯಲ್ಲಿ ಕುಟುಂಬವಿದ್ದು, ಆ ಕುಟುಂಬದ ನೆರವಿಗೆ ಪಬ್ಲಿಕ್ ಟಿವಿ ನಿಂತಿದೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇ ತಡ ಆ ಬಾಲಕನನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.

    ಇನ್ನು ಯಾವಾಗ ಬಾಲಕನ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರವಾಯ್ತೋ ಕೂಡಲೇ ಎಚ್ಚೆತ್ತ ಅಧಿಕಾರಿಗಳು, ಅದರಲ್ಲೂ ದಕ್ಷಿಣ ಕ್ಷೇತ್ರ ವಲಯದ ಬಿಇಒ ಪುಷ್ಪಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕನನ್ನು ಶಾಲೆಗೆ ಸೇರಿಸಿಕೊಂಡಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆಯ ವರದಿಯಲ್ಲಿ ಕೂಡ ಪಬ್ಲಿಕ್ ಟಿವಿ ಬಿತ್ತರಿಸಿದ ಸುದ್ದಿಯ ಬಗ್ಗೆ ಕೂಡ ಉಲ್ಲೇಖವಾಗಿದೆ. ಇದರಿಂದ ಬಿಇಒ ಪುಷ್ಪಲತ ಆ ಬಾಲಕನಿಗೆ ಧೈರ್ಯ ಹೇಳುವ ಮೂಲಕ ಶಾಲೆಗೆ ಸೇರಿಸಿಕೊಂಡಿದ್ದಾರೆ. ಈಗ ಬಾಲಕ ತರಗತಿಯಲ್ಲಿ ಕೂತು ಮಕ್ಕಳ ಜೊತೆ ವಿದ್ಯಾಭ್ಯಾಸ ಕಲಿಯುವಂತಾಗಿದೆ. ಇನ್ನು ಇದಕ್ಕೆ ಸಹಕಾರಿಯಾದ ಪಬ್ಲಿಕ್ ಟಿವಿಗೆ ಬಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಯಾದಗಿರಿಯಲ್ಲಿ ಗುಡುಗು ಸಹಿತ ಬಾರಿ ಮಳೆ : ಸಿಡಿಲು ಬಡಿದು ನಾಲ್ವರು ಸಾವು

  • ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್‌ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ

    ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್‌ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ

    – ಸರ್ಕಾರದ ಅನುದಾನವಿಲ್ಲದೇ ಉಚಿತ ಆಂಗ್ಲ ಮಾಧ್ಯಮ ಶಾಲೆ ಶುರು
    – ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆ ಶಿಕ್ಷಕರು ಸಡ್ಡು

    ಚಿಕ್ಕೋಡಿ: ಗಡಿಭಾಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ (Government School) ದಾಖಲಾತಿ ಕುಸಿಯುತ್ತಿರುವ ಕಾರಣ ಸರ್ಕಾರದ ಅನುದಾನವಿಲ್ಲದೇ ಎಲ್‌ಕೆಜಿ-ಯುಕೆಜಿ (LKG-UKG) ಆರಂಭಿಸುವ ಮೂಲಕ ಶಿಕ್ಷಕರು ಮಾದರಿಯಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಗಡಿಭಾಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದ್ದು, ಇದರಿಂದಾಗಿ ಸರ್ಕಾರಕ್ಕೆ ದಾಖಲಾತಿ ಕಡಿಮೆಯಾಗುತ್ತಿರುವ ಟೆನ್ಶನ್ ಹೆಚ್ಚಾಗುತ್ತಿದೆ. ಇದರ ನಡುವೆಯೂ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವಲ್ಲಿ ಶಿಕ್ಷಕರು (Teachers) ನಿರತರಾಗಿದ್ದು, ಸರಕಾರದ ಅನುದಾನವಿಲ್ಲದೆ ಎಲ್‌ಕೆಜಿ-ಯುಕೆಜಿ ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ.ಇದನ್ನೂ ಓದಿ: ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

    ಮಹಾರಾಷ್ಟ್ರ (Maharashtra) ಗಡಿಭಾಗದ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಗೋಟೂರ (Gotur) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಜರಾತಿ ಕೊರತೆ ಇತ್ತು. ಹೀಗಾಗಿ ಸರ್ಕಾರದ ಅನುದಾನವಿಲ್ಲದೇ ಇದ್ದರೂ ಶಾಲಾ ಸುಧಾರಣಾ ಸಮಿತಿ ಹಾಗೂ ಶಾಲೆಯ ಶಿಕ್ಷಕರು ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ (English Medium) ಯುಕೆಜಿ – ಎಲ್‌ಕೆಜಿ ತರಗತಿ ಪ್ರಾರಂಭಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿಯೇ ಶಿಕ್ಷಣ ನೀಡಲು ರೂಪುರೇಷೆ ಹಾಕಿಕೊಂಡಿದ್ದಾರೆ. ಈ ಶಾಲಾ ಮಕ್ಕಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ನಿರ್ವಹಣೆ ವೆಚ್ಚ ಭರಿಸಲು ಮುಂದಾಗಿದ್ದಾರೆ. ಜೊತೆಗೆ ಶಾಲೆಗೆ ಮಕ್ಕಳನ್ನು ಕರೆತರಲು, ಬಟ್ಟೆ, ಪುಸ್ತಕವನ್ನು ಶಿಕ್ಷಕರು ತಮ್ಮ ಸಂಬಳದಿಂದಲೇ ಭರಿಸುತ್ತಿದ್ದಾರೆ.

    ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದ್ದು, ಸಾಕಷ್ಟು ಅಭಿಯಾನ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಇದೀಗ ತಾವು ಕಲಿಸುವ ಶಾಲೆಯ ಬೆಳವಣಿಗೆ ಬಯಸಿರುವ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿಯೊಂದಿಗೆ ಸ್ವಂತ ಖರ್ಚಿನಲ್ಲಿಯೇ ಎಲ್‌ಕೆಜಿ -ಯುಕೆಜಿ ತರಗತಿ ಆರಂಭಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

    ಇತ್ತೀಚಿಗೆ ಅಂಗನವಾಡಿಯಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಈ ನಡುವೆಯೇ ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ. ಖಾಸಗಿ ಶಾಲೆಯ ಮಾದರಿಯಲ್ಲಿಯೇ ಶಿಕ್ಷಣ ಪದ್ದತಿ ಅನುಸರಿಸಿದ್ದು, ಗ್ರಾಮೀಣ ಭಾಗದ ಪೋಷಕರ ಉತ್ಸಾಹಕ್ಕೆ ಕಾರಣವಾಗಿದೆ. ಎಲ್‌ಕೆಜಿ-ಯುಕೆಜಿ ಆರಂಭಿಸುತ್ತಿದ್ದಂತೆ ಇದೇ ವರ್ಷ 40 ಮಕ್ಕಳು ದಾಖಲಾಗಿದ್ದು, ಈ ಸಂಖ್ಯೆ ಮುಂದಿನ ಬಾರಿ ಹೆಚ್ಚಾಗುವ ವಿಶ್ವಾಸವಿದೆ ಎಂದಿದ್ದಾರೆ.ಇದನ್ನೂ ಓದಿ: ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ 18 ಸಾವಿರಕ್ಕೂ ಹೆಚ್ಚು ಕೇಸ್‌

    ಸರ್ಕಾರದ ಸಂಬಳ ಸಿಕ್ಕರೆ ಸಾಕು ನಾವು, ನಮ್ಮ ಕುಟುಂಬ ನೆಮ್ಮದಿಯಿಂದ ಇರಬಹುದು ಎನ್ನುವ ಜನರಿಗೆ ಗೋಟೂರ ಸರ್ಕಾರಿ ಶಾಲೆಯ ಶಿಕ್ಷಕರು ತಾವು ಕಲಿಸುತ್ತಿರುವ ಶಾಲೆಯ ಅಭಿವೃದ್ಧಿ ಬಯಸಿರುವುದು, ಇತರರಿಗೆ ಮಾದರಿಯಾಗಿದೆ.