Tag: Government office

  • ಯುಗಾದಿ ಹಬ್ಬದ ದಿನವೇ ಸರ್ಕಾರಿ ಕಚೇರಿಗೆ ಬೆಂಕಿ – ಮಹತ್ವದ ದಾಖಲೆಗಳು ಸುಟ್ಟು ಬೂದಿ

    ಯುಗಾದಿ ಹಬ್ಬದ ದಿನವೇ ಸರ್ಕಾರಿ ಕಚೇರಿಗೆ ಬೆಂಕಿ – ಮಹತ್ವದ ದಾಖಲೆಗಳು ಸುಟ್ಟು ಬೂದಿ

    ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ದಿನವೇ ಸರ್ಕಾರಿ ಕಚೇರಿಯಲ್ಲಿ ಬೆಂಕಿ (Fire accident) ಹೊತ್ತಿಕೊಂಡು ಮಹತ್ವದ ದಾಖಲೆಗಳು ಸುಟ್ಟು ಬೂದಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ನಗರದಲ್ಲಿ ನಡೆದಿದೆ.

    ನಗರದ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಆವರಣದಲ್ಲಿರುವ ಸಹಾಯಕ‌ ನಿರ್ದೇಶಕರ ಕಚೇರಿಗೆ ಬೆಂಕಿ ಬಿದ್ದಿದೆ. ದಾಖಲೆಗಳನ್ನ (Documents) ಸಂಗ್ರಹ ಮಾಡಿದ್ದ ಕೊಠಡಿಯಲ್ಲೇ ಬೆಂಕಿ ತಗುಲಿದ್ದು ದಾಖಲೆಗಳೆಲ್ಲವೂ ಸುಟ್ಟು ಬೂದಿಯಾಗಿವೆ. ರಾತ್ರಿಯೇ ಬೆಂಕಿ ಹೊತ್ತಿಕೊಂಡು ಕಚೇರಿ ಧಗ ಧಗ ಹೊತ್ತಿ ಉರಿದಿದೆ. ಇದನ್ನೂ ಓದಿ: L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ

    ಬೆಳಗ್ಗೆ ಸಿಬ್ಬಂದಿ ನೋಡಿದಾಗ ಬೆಂಕಿ ಅವಘಡ ಪ್ರಕರಣ ಬೆಳಕಿಗೆ ಬಂದಿದೆ. ಆಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಅಳಿದುಳಿದು ಇನ್ನೂ ಉರಿಯುತ್ತಿದ್ದ ದಾಖಲೆಗಳನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಯುಗಾದಿ ಪುಣ್ಯ ಸ್ನಾನಕ್ಕೆ ತೆರಳಿದ್ದ ಬಾಲಕ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು

    ಇಡೀ ಕಚೇರಿಯೇ ಹೊತ್ತಿ ಉರಿದಿದ್ದು… ಬೇಕಂತಲೇ ಯಾರಾದ್ರೂ ಬೆಂಕಿ ಇಟ್ರಾ ಎಂಬ ಅನುಮಾನವೂ ಮೂಡಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಹೆಂಡ್ತಿ ಕೊಂದು ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿಸಿದ್ದ ಟೆಕ್ಕಿ – ಹಂತಕನನ್ನ ಪುಣೆಯಿಂದ ಕರೆತಂದ ಪೊಲೀಸರು

  • ಸೂರ್ಯಗ್ರಹಣದ ಎಫೆಕ್ಟ್ – ಬಸ್‍ಗಳು, ಹೋಟೆಲ್‍ಗಳು ಖಾಲಿ, ಖಾಲಿ

    ಸೂರ್ಯಗ್ರಹಣದ ಎಫೆಕ್ಟ್ – ಬಸ್‍ಗಳು, ಹೋಟೆಲ್‍ಗಳು ಖಾಲಿ, ಖಾಲಿ

    ಬೆಂಗಳೂರು: ಕೇತುಗ್ರಸ್ಥ ಸೂರ್ಯಗ್ರಹಣದ (Solar eclipse) ಎಫೆಕ್ಟ್ ಕೇವಲ ರಾಶಿಗಳ ಮೇಲೆ ಮಾತ್ರ ಅಲ್ಲ, ಇತ್ತ ಹಲವು ವಲಯಗಳ ಮೇಲೂ ಕೂಡ ಪರಿಣಾಮ ಬೀರಿದೆ. ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಜಾಗಗಳು ಗ್ರಹಣದ ಎಫೆಕ್ಟ್‌ನಿಂದ ಬಿಕೋ ಅಂತಿವೆ.

    ಹೌದು ಕೇತುಗ್ರಸ್ಥ ಸೂರ್ಯಗ್ರಹಣ ಎಫೆಕ್ಟ್ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರವು ಬಗ್ಗೆ ಹಲವು ಶಾಸ್ತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ ಗ್ರಹಣದ ಎಫೆಕ್ಟ್ ಕೇವಲ ರಾಶಿಗಳಿಗಷ್ಟೇ ಸೀಮಿತವಾಗದೇ, ಬದಲಾಗಿ ಪ್ರತಿನಿತ್ಯ ಚಟುವಟಿಕೆಯಿಂದ ಕೂಡಿರುತ್ತಿದ್ದ ಅನೇಕ ಕಡೆಗೂ ತಟ್ಟಿದೆ. ಗ್ರಹಣದ ಹಿನ್ನೆಲೆ ನಗರದಲ್ಲಿ ಜನರ ಓಡಾಟ ಹಲವೆಡೆ ವಿರಳವಾಗಿದ್ದ ಕಾರಣ ಬಹುತೇಕ ಜನನಿಬಿಡ ಪ್ರದೇಶಗಳು ನಿಶ್ಯಬ್ದವಾಗಿದೆ ಇದನ್ನೂ ಓದಿ: ಅಪಾರ್ಟ್‍ಮೆಂಟ್ ಕಿಟಕಿಗಳಿಗೆ ರಾಕೆಟ್ ಬಿಟ್ಟ ಕಿಡಿಗೇಡಿ – ವೀಡಿಯೋ ವೈರಲ್

    ಬೆಂಗಳೂರಿನ ಸಂಚಾರ ನಾಡಿಗೂ ಗ್ರಹಣದ ಎಫೆಕ್ಟ್ ಜೋರಾಗಿಯೇ ತಟ್ಟಿದೆ. ಪ್ರತಿನಿತ್ಯ ಲಕ್ಷಾಂತರ ಜನ ಬಳಸುವ ಬಿಎಂಟಿಸಿ ಇಂದು ಖಾಲಿ, ಖಾಲಿ ಓಡಾಡುತ್ತಿದ್ದ ದೃಶ್ಯಗಳಂತು ಸಾಮಾನ್ಯವಾಗಿತ್ತು. ಹೋಟೆಲ್‍ಗಳ ಕಥೆಯು ಇದಕ್ಕೇನು ಹೊರತಾಗಿಲ್ಲ. ಗ್ರಹಣದ ನಡುವೆಯೂ ಹಲವರು ಬೆಳಗ್ಗೆಯೇ ಹೋಟೆಲ್‍ಗಳನ್ನ ತೆರೆದಿದ್ದರೂ, ಜನ ಮಾತ್ರ ಹೊಟೇಲ್ ನತ್ತ ಮುಖ ಮಾಡಿಲ್ಲ. ಗ್ರಹಣದ ಎಫೆಕ್ಟ್ ಬಗ್ಗೆ ಮುಂಚೆಯೇ ಯೋಚಿಸಿದ್ದ ಕೆಲ ಹೊಟೇಲ್‍ನವರು ಇತರೆ ದಿನಕ್ಕಿಂತ ಕಡಿಮೆ ಆಹಾರ ಸಿದ್ದತೆ ಮಾಡಿಸಿದರು. ವ್ಯಾಪಾರವಾಗದ ಕಾರಣ ಹೊಟೇಲ್ ಅನ್ನು ಬಂದ್ ಮಾಡಿ ಮನೆಗೆ ಹೋಗುವಂತಾಯಿತು.

    ಈ ಗ್ರಹಣದ ಎಫೆಕ್ಟ್ ಈ ಹೋಟೆಲ್, ಬಸ್ ಸೇರಿದಂತೆ ಕೇವಲ ವ್ಯಾಪಾರ ಸ್ಥಳಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ಬದಲಾಗಿ, ಸರ್ಕಾರಿ ಕಚೇರಿಗಳಿಗೂ ತಟ್ಟಿತ್ತು. ನೌಕರರಿಂದ ತುಂಬಿ ತುಳುಕುತ್ತಿದ್ದ ವಿಧಾನಸೌಧ ಕೂಡು ಇಂದು ಖಾಲಿ, ಖಾಲಿ. ಸಾಲು, ಸಾಲು ರಜೆ ಹಿನ್ನೆಲೆ ಇಂದು ಕೂಡ ನೌಕರರು ರಜೆ ಹಾಕಿಕೊಂಡಿದ್ದ ಕಾರಣ ವಿಧಾನಸೌಧ ಬಿಕೋ ಎನ್ನುತ್ತಿದೆ.

    ಒಟ್ಟಾರೆ ಸರ್ಕಾರಿ ಕಚೇರಿಯಿಂದ ಬಿಎಂಟಿಸಿ ಸವಾರರವರೆಗೂ ಗ್ರಹಣದ ಬಿಸಿ ಜೋರಾಗಿಯೇ ಇತ್ತು. ಹಬ್ಬದ ಸಂಭ್ರಮದ ನಡುವೆ ಗ್ರಹಣ ಭೀತಿಯು ಜನರನ್ನು ಸೈಲೆಂಟ್ ಆಗಿಸಿದ್ದು ಸುಳ್ಳಲ್ಲ. ಇದನ್ನೂ ಓದಿ: ಸ್ವತಃ ಬಿಜೆಪಿಯವರೇ ಹಲಾಲ್‌ ಕಟ್‌ ಮಾಡಿ ಕಮಿಷನ್‌ ಹೊಡೆಯುತ್ತಿದ್ದಾರೆ – ಓವೈಸಿ ಆರೋಪ

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡ್ಬೇಡಿ ಬೋರ್ಡ್‍ಗೆ ಆದೇಶ

    ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡ್ಬೇಡಿ ಬೋರ್ಡ್‍ಗೆ ಆದೇಶ

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು, ಗುತ್ತಿಗೆದಾರರ ಸಂಘಗಳು ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಸಂದರ್ಭದಲ್ಲಿಯೇ, ನನಗೆ ಯಾರು ಲಂಚ (Bribe) ಕೊಡಬೇಡಿ. ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ನಾಮಫಲಕವನ್ನು ಸರ್ಕಾರಿ ಕಚೇರಿ (Government Office) ಗಳಲ್ಲಿ ಅಳವಡಿಸುವಂತೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.

    ಸಿಟಿಜನ್ ಎನ್‍ಕ್ವೈರಿ ಕೌನ್ಸಿಲ್ ಎಂಬ ಸಂಸ್ಥೆ ನಡೆಸಿರುವ ಭ್ರಷ್ಟಾಚಾರ (Corruption) ನಿರ್ಮೂಲನಾ ಅಭಿಯಾನದ ಅಂಗವಾಗಿ ಬೋರ್ಡ್ ಅಳವಡಿಸಿಕೊಳ್ಳಿ ಎಂದು ಆದೇಶ ನೀಡಿದ್ದಾರೆ. ಅಕ್ಟೋಬರ್ 2ರಿಂದ 20ರವರೆಗೆ ಈ ಕ್ಯಾಂಪೇನ್ ನಡೆಯಲಿದೆ. ಈ ಬಗ್ಗೆ ಕಾಂಗ್ರೆಸ್ (Congress) ಕಿಡಿಕಾರಿದೆ. ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಡೈವರ್ಟ್ ಮಾಡಲು ಖಾಸಗಿ ಸಂಸ್ಥೆ ನಡೆಸಿರುವ ಅಭಿಯಾನವನ್ನು ಸರ್ಕಾರ ಒಪ್ಪಿಕೊಂಡಿದೆ. ಇದು ಎಷ್ಟು ದಿನ ನಡೆಯುತ್ತೋ ನೋಡ್ಬೇಕು ಎಂದು ಕೈ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಹೋದ ಕಡೆಯಲ್ಲಿ ಬಿಜೆಪಿ ಸೋತಿದೆ: ಸಿದ್ದರಾಮಯ್ಯ

    ಸಿದ್ದರಾಮಯ್ಯ (Siddaramaiah) ಟ್ವೀಟ್ ಮಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಮೊದಲು ನಿಮ್ಮ ಮತ್ತು ಸಚಿವರ ಕಚೇರಿಗಳು, ಹಾಗೂ ಮನೆ ಮುಂದೆ ಈ ಬೋರ್ಡ್ ಹಾಕಿಸಿ. ಸರ್ಕಾರಿ ಗುತ್ತಿಗೆದಾರರು ಲಂಚದ ಆರೋಪ ಮಾಡಿರುವುದು ಸಚಿವರ ಮೇಲೆ, ಅಧಿಕಾರಿಗಳ ಮೇಲೆ ಅಲ್ಲ. ಅಧಿಕಾರಿಗಳನ್ನು ತೋರಿಸಿ ಕಮಿಷನ್ ಆರೋಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಲಂಚಾವತಾರ ನಾಟಕದಲ್ಲಿ ಅಧಿಕಾರಿಗಳದ್ದು ಪೋಷಕ ಪಾತ್ರ, ಬಿಜೆಪಿ ಸರ್ಕಾರದ ಇಲಾಖಾ ಸಚಿವರದ್ದೇ ಮುಖ್ಯ ಪಾತ್ರ. ಈ ಬೋರ್ಡ್ ಬರೆಸಿ ಹಾಕುವ ನಾಟಕಗಳನ್ನೆಲ್ಲ ನಿಲ್ಲಿಸಿ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯಗೊಳಿಸಿ – ಹಣಬರ ಯಾದವ ಸಮಾಜದಿಂದ ಬೈಕ್ ರ‍್ಯಾಲಿ

    ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯಗೊಳಿಸಿ – ಹಣಬರ ಯಾದವ ಸಮಾಜದಿಂದ ಬೈಕ್ ರ‍್ಯಾಲಿ

    ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಅಮಟೂರು ಬಾಳಪ್ಪನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಣಬರ ಯಾದವ ಸಂಘದ ನೇತೃತ್ವದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.

    75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಜಾದಿ ಕ ಅಮೃತ್ ಮಹೋತ್ಸವ್ ಆಚರಿಸಲಾಗುತ್ತಿದೆ. ಆದರೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಮಟೂರು ಬಾಳಪ್ಪರ ಇತಿಹಾಸವನ್ನ ಮರೆತಿದ್ದಾರೆ. ಹೀಗಾಗಿ ಸರ್ಕಾರದಿಂದ ಅಮಟೂರು ಬಾಳಪ್ಪನ ಜಯಂತಿ ಆಚರಣೆ ಮಾಡಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯವಾಗಿ ಅಳವಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಾದವ ಸಂಘದ ನೇತೃತ್ವದಲ್ಲಿ ಅಮಟೂರಿನಿಂದ ಬೆಳಗಾವಿಯವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಇದನ್ನೂ ಓದಿ: 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    ರ‍್ಯಾಲಿಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಬೈಕ್ ಸವಾರರು ಪಾಲ್ಗೊಂಡಿದ್ದರು. ನಂತರ ಬಸವನ ಕುಡಚಿಯ ಸಭಾ ಭವನದಲ್ಲಿ ಸಮಾವೇಶ ನಡೆಸಿದರು. ಇದೇ ವೇಳೆ ನಾಗರಾಜ್ ಹಣಬರ ಅಂತೂರು ಬಾಳಪ್ಪ ಅವರ ಬಗ್ಗೆ ರಚಿಸಿದ ಆಲ್ಬಮ್ ಸಾಂಗ್ ಸಮಾಜದ ಮುಖಂಡರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.  ಇದನ್ನೂ ಓದಿ: 18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    ನಾಗರಾಜ ಹಣಬರ, ಪ್ರಶಾಂತ ಕೌಲಗಿ, ಸಂತೋಷ್ ಕೌತ್, ನಾಗಪ್ಪ ಕಳಸನ್ನವರ್, ಬಸವರಾಜ್ ಸಂತ್ರೆ ಸೇರಿದಂತೆ ಸಮಾಜದದ ಅನೇಕ ಮುಖಂಡರು ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ವೀಡಿಯೋ ಬಂದ್ ವಿಚಾರ – ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ: ಸಿಎಂ

    ವೀಡಿಯೋ ಬಂದ್ ವಿಚಾರ – ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ: ಸಿಎಂ

    ಬೆಂಗಳೂರು: ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ಕೊಟ್ಟರು.

    ಸರ್ಕಾರದ ಯೋಜನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಇಡೀ ದಿನ ಪ್ರಮುಖರ ಜೊತೆ ಚಿಂತನಾ ಸಭೆ ಮಾಡಿದ್ದೇವೆ. ಬರುವ ದಿನಗಳಲ್ಲಿ ಸರ್ಕಾರ ಹಾಗೂ ಪಕ್ಷ ಯಾವ ರೀತಿ ಸಮನ್ವಯತೆಯಿಂದ ಹೋಗಬೇಕು ಎಂದು ಚರ್ಚೆಯಾಗಿದೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ಬಗ್ಗೆ ಚರ್ಚೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಖಶೋಗಿ ಹತ್ಯೆಗೆ ಸೌದಿ ಕ್ರೌನ್ ಪ್ರಿನ್ಸ್ ಹೊಣೆಗಾರಿಕೆ: ಬೈಡನ್ 

    ಸರ್ಕಾರಿ ಕಚೇರಿಯಲ್ಲಿ ವೀಡಿಯೋ ಬಂದ್ ವಿಚಾರವಾಗಿ ಮಾತನಾಡಿದ ಅವರು, ಅದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೆಲವು ನೌಕರರ ಮನವಿ ಇತ್ತು. ಹೆಣ್ಣು ಮಕ್ಕಳ ಫೆÇೀಟೋ, ವೀಡಿಯೋ ಎಲ್ಲ ಮಾಡ್ತಾರೆ ಅಂತಿತ್ತು. ಅವರ ಮನವಿ ಒಂದು ಅರ್ಥದಲ್ಲಿ ಸರಿ ಇತ್ತು. ಯಾರು ಏನೇ ಹೇಳಲಿ. ಮೊದಲು ಯಾವ ರೀತಿ ಇತ್ತೋ ಅದೇ ರೀತಿ ನಿಯಮ ಇರಬೇಕು. ಅದಕ್ಕೆ ತಾತ್ವಿಕ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಬ್ಯಾನ್ ನಿಷೇಧ ವಾಪಸ್- ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ

    ಒಂದು ವರ್ಷ ಪೂರೈಸಿದ್ದಕ್ಕೆ ದೊಡ್ಡಬಳ್ಳಾಪುರದಲ್ಲಿ ದೊಡ್ಡ ರ‍್ಯಾಲಿ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರವಾಸ ಮಾಡ್ತೀನಿ ಎಂದು ಭರವಸೆ ಕೊಟ್ಟರು.

    ಸಭೆ ನಡುವೆ ನಿನ್ನೆ ಪ್ರವಾಹ ಪೀಡಿತ ಡಿಸಿಗಳ ಜೊತೆ ಮಾತಾಡಿದ್ದೇನೆ. ಅಲ್ಲಿನ ಸ್ಥಳೀಯ ನದಿಗಳ ಪ್ರವಾಹದ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ನದಿ ಪಾತ್ರದ ಪಕ್ಕದಲ್ಲಿ ಇರೋರ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ಕೊಡಲಾಗಿದೆ. ಆಶ್ರಯ ಕೇಂದ್ರಗಳನ್ನು ಕೂಡಲೇ ತೆರೆಯಲು ಸೂಚನೆ ನೀಡಿದ್ದೇನೆ. ಮನೆಗಳು ಬಿದ್ದವರಿಗೆ ಕೂಡಲೇ ಪರಿಹಾರ ಕೊಡುತ್ತೇವೆ. ಇದಕ್ಕೆಲ್ಲ ಹಣವನ್ನು ಒದಗಿಸಿದ್ದೇನೆ. ಮೂಲಭೂತ ಸೌಕರ್ಯಕ್ಕಾಗಿ 500 ಕೋಟಿ ಒದಗಿಸಿದ್ದೇನೆ ಎಂದು ವಿವರಿಸಿದರು.

    ಮನೆಗಳನ್ನು ಕಟ್ಟಲು 3, 5 ಲಕ್ಷ ಮಾಡಿ ಹೆಚ್ಚಿಗೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಬೆಳೆ ಪರಿಹಾರಕ್ಕಿಂತ ಹೆಚ್ಚು ಮಾಡಿದ್ದೇವೆ. ಪ್ರವಾಹದ ಸಂದರ್ಭದಲ್ಲಿ ಯಾರು ತೊಂದರೆ ಗೀಡಾಗಿದ್ದಾರೆ, ಅವರ ನೆರವಿಗೆ ಸರ್ಕಾರ ಕೂಡಲೇ ಧಾವಿಸಲಿದೆ. ಆಮೇಲೆ ಸೂಕ್ತವಾದ ಪರಿಹಾರವನ್ನು ಕೂಡ ನಮ್ಮ ಸರ್ಕಾರ ಕೊಡಲಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಬ್ಯಾನ್ ನಿಷೇಧ ವಾಪಸ್- ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ

    ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಬ್ಯಾನ್ ನಿಷೇಧ ವಾಪಸ್- ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ

    ಬೆಂಗಳೂರು: ಸರ್ಕಾರಿ ಕಚೇರಿಯಲ್ಲಿ ಮೊಬೈಲ್ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಿ ಜಾರಿ ಮಾಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

    ರಾಜ್ಯ ಸರ್ಕಾರಕ್ಕೆ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಶುಕ್ರವಾರ ಮಧ್ಯಾಹ್ನ ಜಾರಿ ಮಾಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ತಡರಾತ್ರಿ ವಾಪಸ್ ಪಡೆದಿದೆ. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ವೀಡಿಯೋ ನಿರ್ಬಂಧಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರದ ನಡೆಗೆ ಪ್ರತಿಪಕ್ಷಗಳಿಂದ ಹಿಡಿದು ಸಾರ್ವಜನಿಕರು ಟೀಕಿಸಿದ್ದರು. ಈ ಟೀಕೆಯ ಬೆನ್ನಲ್ಲೇ ಸರ್ಕಾರ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಇದನ್ನೂ ಓದಿ: ನನ್ನ ಪತಿ ಹಂತಕರ ತಲೆ ಕಡಿದವ್ರಿಗೆ 10 ಕೋಟಿ- ನಾಜೀಮಾ ಖಾನ್ ಘೋಷಣೆ

    ಆದೇಶ ಪ್ರತಿಯಲ್ಲಿ ಏನಿತ್ತು..?
    ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರವರ ಕೆಲಸ ಕಾರ್ಯಗಳ ನಿಮಿತ್ತ ಅಲ್ಲಿಗೆ ಆಗಮಿಸುವುದು ಸರ್ವೇ ಸಾಮಾನ್ಯ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.

    ಇದರಿಂದ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ಹಾಗೂ ವೀಡಿಯೋ ತೆಗೆಯುವುದನ್ನು ನಿಷೇಧಿಸುವಂತೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ

    ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ

    ಬೆಂಗಳೂರು: ಇನ್ನುಮುಂದೆ ಸರ್ಕಾರಿ ಕಚೇರಿಗಳಲ್ಲಿ ಅನುಮತಿಯಿಲ್ಲದೇ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    ಈ ಕುರಿತು ರಾಜ್ಯ ಸರ್ಕಾರದ ಪರವಾಗಿ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 44 ಕಿಮೀ ಸುತ್ತಾಡಿ ಕಾರಿನಲ್ಲಿಯೇ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್

    ಆದೇಶ ಪ್ರತಿಯಲ್ಲಿ ಏನಿದೆ?
    ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರವರ ಕೆಲಸ ಕಾರ್ಯಗಳ ನಿಮಿತ್ತ ಅಲ್ಲಿಗೆ ಆಗಮಿಸುವುದು ಸರ್ವೇ ಸಾಮಾನ್ಯ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಇದರಿಂದ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ಹಾಗೂ ವೀಡಿಯೋ ತೆಗೆಯುವುದನ್ನು ನಿಷೇಧಿಸುವಂತೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಲಿಬಿಯಾದಲ್ಲಿ ಸಂಸತ್ ಭವನಕ್ಕೆ ಬೆಂಕಿ

    ಲಿಬಿಯಾದಲ್ಲಿ ಸಂಸತ್ ಭವನಕ್ಕೆ ಬೆಂಕಿ

    ಟ್ರಿಪೋಲಿ: ಲಿಬಿಯಾದಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿದೆ. ಸರ್ಕಾರದ ವಿರುದ್ಧ ಬಂಡೆದ್ದ ಪ್ರತಿಭಟನಾಕಾರರು ಸಂಸತ್ ಭವನಕ್ಕೆ ಬೆಂಕಿ ಹಚ್ಚಿದ್ದಾರೆ.

    ಸರ್ಕಾರವನ್ನು ಈ ಕೂಡಲೇ ವಿಸರ್ಜಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸಂಸತ್ ಭವನದ ಕಡೆಗೆ ಮೆರವಣಿಗೆ ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರನು ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇದನ್ನೂ ಓದಿ: ಸುದೀಪ್‌ಗೆ ಅವಹೇಳನ ಮಾಡಿದವನಿಗೆ ನಂದಕಿಶೋರ್ ತರಾಟೆ – ನೀನು ಗಂಡಸಾಗಿದ್ರೆ ಸಾಕ್ಷಿ ಸಮೇತ ಪ್ರೂವ್ ಮಾಡು ಎಂದ ನಿರ್ದೇಶಕ

    ಟ್ರಿಪೋಲಿ, ಟೋಬ್ರೂಕ್‍ನ ಸೇರಿದಂತೆ ಲಿಬಿಯಾದ ಅನೇಕ ನಗರಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಸಂಸತ್ತಿನ ಕಟ್ಟಡದ ಮೇಲೆ ನಡೆಸಿರುವ ಈ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಜನರ ಹಕ್ಕನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು. ಆದರೆ ಗಲಭೆ ಮತ್ತು ವಿಧ್ವಂಸಕ ಕೃತ್ಯಗಳನಲ್ಲ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದನ್ನೂ ಓದಿ:  ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ

    Live Tv
    [brid partner=56869869 player=32851 video=960834 autoplay=true]

  • ಹಾಡಹಗಲಲ್ಲೇ ಸರ್ಕಾರಿ ಕಚೇರಿಗೆ ನುಗ್ಗಿ ಮೂವರು ಮಹಿಳೆಯರಿಗೆ ಕತ್ತಿಯಿಂದ ಕಡಿದ ದುಷ್ಕರ್ಮಿ

    ಹಾಡಹಗಲಲ್ಲೇ ಸರ್ಕಾರಿ ಕಚೇರಿಗೆ ನುಗ್ಗಿ ಮೂವರು ಮಹಿಳೆಯರಿಗೆ ಕತ್ತಿಯಿಂದ ಕಡಿದ ದುಷ್ಕರ್ಮಿ

    – ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

    ಮಂಗಳೂರು: ನಗರದ ಕರಂಗಲಪಾಡಿಯಲ್ಲಿನ ಡಯಟ್ ಸಂಸ್ಥೆಯಲ್ಲಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಶಿಕ್ಷಕಿಗೆ ಗಿಫ್ಟ್ ಕೊಡುವ ನೆಪದಲ್ಲಿ ಬಂದಿದ್ದ ದುಷ್ಕರ್ಮಿ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ತಲವಾರು ಅಟ್ಯಾಕ್ ಮಾಡಿದ್ದಾನೆ.

    ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಲವಾರು ದಾಳಿ ನಡೆಸಿದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕುಂದಾಪುರ ಮೂಲದ 31 ವರ್ಷದ ನವೀನ್ ಎಂದು ಗುರುತಿಸಲಾಗಿದೆ. ನವೀನ್‍ನನ್ನು ಪೊಲೀಸರು ಬಂಧಿಸಿದ್ದು, ಈತ ಇಲ್ಲಿನ ಹಳೆ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

    ಶಿಕ್ಷಕಿಯೊಬ್ಬರ ಮೇಲೆ ದ್ವೇಷ ಸಾಧನೆಗಾಗಿ ಈ ಕೃತ್ಯ ಎಸಗಿರುವ ಮಾಹಿತಿಯಿದೆ. ಘಟನೆಯಲ್ಲಿ ಇಲ್ಲಿನ ಸಿಬ್ಬಂದಿ ನಿರ್ಮಲಾ, ರೀನಾ ರಾಯ್, ಗುಣವತಿ ಎಂಬವರಿಗೆ ಗಾಯವಾಗಿದ್ದು, ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದೆ. ಗಾಯಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಪ್ರಾರಂಭದಲ್ಲಿ ಸಂಸ್ಥೆಯ ಒಳಗೆ ಬಂದಿದ್ದ ಈ ನವೀನ್ ಶಿಕ್ಷಕರೊಬ್ಬರನ್ನು ಕೇಳಿದ್ದಾನೆ. ಅವರಿಗೆ ಗಿಫ್ಟ್ ಒಂದನ್ನು ನೀಡೊದಕ್ಕೆ ಬಂದಿರೋದಾಗಿ ಹೇಳಿದ್ದಾನೆ. ಆದರೆ ಆ ಸಂದರ್ಭ ಆತ ಕೇಳಿಕೊಂಡು ಬಂದ ಶಿಕ್ಷಕ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ತಕ್ಷಣ ತನ್ನ ಬ್ಯಾಗ್ ಒಳಗಿಂದ ತಲವಾರು ತೆಗೆದು ಅಲ್ಲಿಂದ ಇತರ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾನೆ.

    ಘಟನೆ ಸಂದರ್ಭ ಇಬ್ಬರು ಸಿಬ್ಬಂದಿ ಓಡಿ ಬಂದು ಪಕ್ಕದಲ್ಲೇ ಇದ್ದ ಜೈಲು ಸಿಬ್ಬಂದಿ ಬಳಿ ವಿಷಯ ಹೇಳಿದ್ದಾರೆ. ತಕ್ಷಣ ಸ್ಥಳೀಯರು ಮತ್ತು ಜೈಲು ಸಿಬ್ಬಂದಿ ಆತನನ್ನು ಹಿಡಿದು ಬರ್ಕೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರಿಗೆ ತಲೆ, ಮತ್ತಿಬ್ಬರ ಕೈಗೆ ಗಾಯವಾಗಿದೆ. ಪೆÇಲೀಸರು ಬಂಧಿತ ನವೀನ್‍ನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೊತೆ ರಾಜನಾಥ್ ಮಾತುಕತೆ

    ನವೀನ್ ಕುಂದಾಪುರದಲ್ಲಿ ಜವಾನ ಕೆಲಸ ಮಾಡ್ತಿದ್ದ ಎಂದು ತಿಳಿದುಬಂದಿದೆ. ಆದ್ರೆ ಈತನಿಗೆ ಶಿಕ್ಷಕಿಯೊಬ್ಬರ ಮೇಲೆ ಇದ್ದ ದ್ವೇಷ ಏನು ಎಂಬ ಬಗ್ಗೆಯು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ಘಟನೆಯಿಂದ ಸಂಸ್ಥೆಯಲ್ಲಿದ್ದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದು, ಒಂದು ಕ್ಷಣದಲ್ಲಿ ಏನಾಯ್ತು ಎಂಬುದೇ ತಿಳಿಯದಂತಾಗಿದ್ದಾರೆ. ಒಟ್ಟಿನಲ್ಲಿ ತಲವಾರು ದಾಳಿ ನಡೆಸಿದ ಆಗಂತುಕ ಇದೀಗ ಬಂಧಿಸಿದ್ದು, ಹೆಚ್ಚಿನ ತನಿಖೆ ಇನ್ನಷ್ಟು ನಡೆಯಲಿದೆ. ಇದನ್ನೂ ಓದಿ: ಹುಣಸೋಡು ಸ್ಫೋಟ ಪ್ರಕರಣ – ಆರನೇ ವ್ಯಕ್ತಿ ಮೃತದೇಹ ಡಿಎನ್‍ಎ ವರದಿಯಿಂದ ಪತ್ತೆ

  • ಬೇಸಿಗೆ ಬೇಗೆ- ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

    ಬೇಸಿಗೆ ಬೇಗೆ- ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

    – ಬೆಳಗ್ಗೆ 8 ರಿಂದ 1.30ರ ವರೆಗೆ ಕೆಲಸದ ಅವಧಿ ನಿಗದಿ

    ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬೇಗೆ ಹೆಚ್ಚಾಗುತ್ತಿದ್ದು, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಶಾಖ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರಿ ಕಚೇರಿಗಳ ಸಮಯವನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ, ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿಗೆ ಅನ್ವಯ ಆಗುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ವರೆಗೆ ಸರ್ಕಾರಿ ಕಚೇರಿ ಕೆಲಸದ ಅವಧಿಯನ್ನು ಬದಲಾವಣೆ ಮಾಡಲಾಗಿದೆ. ನಾಳೆಯಿಂದಲೇ ಹೊಸ ಆದೇಶ ಜಾರಿಯಾಗಲಿದ್ದು, ಅಧಿಕಾರಿಗಳು ಸಹ ಇದೇ ಸಮಯಕ್ಕೆ ಕೆಲಸಕ್ಕೆ ಹಾಜರಾಗಲಿದ್ದಾರೆ.

    ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಬಾಗಲಕೋಟೆಯಲ್ಲಿ ಗರಿಷ್ಠ 37, ಕಲಬುರಗಿ 36, ಯಾದಗಿರಿ 37 ಹಾಗೂ ವಿಜಯಪುರದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ತಾಖಲಾಗುತ್ತಿದೆ. ಹೀಗಾಗಿ ಕಚೇರಿ ಸಮಯವನ್ನು ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ.