Tag: Government of India

  • ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸಿ – ಗಿರಿರಾಜ್ ಸಿಂಗ್

    ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸಿ – ಗಿರಿರಾಜ್ ಸಿಂಗ್

    ನವದೆಹಲಿ: ಜನಸಂಖ್ಯಾ ನಿಯಂತ್ರಣ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ (BJP) ನಾಯಕರ ಹೇಳಿಕೆಗಳು ಆಗಾಗ ಮುನ್ನೆಲೆಗೆ ಬರುತ್ತಿವೆ. ಕೇಂದ್ರ ಸಚಿವರೂ ಆಗಿರವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ (Giriraj Singh) ಕೂಡ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ (Population) ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ಲಿಂಗ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯಾ ನಿಯಂತ್ರಣ ಮಸೂದೆ (Population Control Bill) ಬಗ್ಗೆ ಅವರು ಮತ್ತೊಮ್ಮೆ ದನಿ ಎತ್ತಿದ್ದು, ಭಾರತದಲ್ಲಿ ಸೀಮಿತ ಸಂಪನ್ಮೂಲ ಇರುವುದರಿಂದ ಜನಸಂಖ್ಯಾ ನಿಯಂತ್ರಣ ಮಸೂದೆ ನಿರ್ಣಾಯಕವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ನಮ್ಮಲ್ಲಿ ಸೀಮಿತ ಸಂಪನ್ಮೂಲ ಇರುವುದರಿಂದ ಜನಸಂಖ್ಯೆ ನಿಯಂತ್ರಿಸುವುದು ಅವಶ್ಯಕವಾಗಿದೆ. ಭಾರತವು ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ, ಈ ಬಗ್ಗೆ ಕಾನೂನು ರೂಪಿಸಬೇಕು ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ 75 ಸಾವಿರ ಭಗವದ್ಗೀತೆ ಪುಸ್ತಕ ವಿತರಣೆ – 132 ಜೋಡಿಗೆ ಮದುವೆ ಭಾಗ್ಯ

    ಚೀನಾ (China) ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ `ಒನ್ ಚೈಲ್ಡ್ ಪಾಲಿಸಿ’ (ಒಂದು ಮಗುವನ್ನು ಹೊಂದುವ ನೀತಿ) ಜಾರಿಗೆ ತಂದಿತು. ಈ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಿ ಅಭಿವೃದ್ಧಿ ಸಾಧಿಸಿತು. ಇಂದು ಚೀನಾದಲ್ಲಿ ನಿಮಿಷಕ್ಕೆ 10 ಮಕ್ಕಳು ಜನಿಸುತ್ತಿದ್ದರೆ, ಭಾರತದಲ್ಲಿ 30 ಮಕ್ಕಳು ಜನಿಸುತ್ತಿದ್ದಾರೆ. ಹೀಗಿರುವಾಗ ನಾವು ಚೀನಾದೊಂದಿಗೆ ಸ್ಪರ್ಧಿಸೋದು ಹೇಗೆ? ಆದ್ದರಿಂದ ಮಸೂದೆಯನ್ನು ಧರ್ಮ ಅಥವಾ ಪಂಗಡವನ್ನು ಲೆಕ್ಕಿಸದೇ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಅನುಸರಿಸದವರ ಮತದಾನದ ಹಕ್ಕನ್ನೂ ಕಸಿದುಕೊಳ್ಳಬೇಕು ಎಂದು ಕೇಂದ್ರ ಸಚಿವ ಸಲಹೆ ನೀಡಿದ್ದಾರೆ.

    ಸರ್ಕಾರ ಮಹಿಳೆಯರ ಮೇಲಿನ ಯಾವುದೇ ದೌರ್ಜನ್ಯವನ್ನು ಧರ್ಮದ ಚೌಕಟ್ಟಿನಲ್ಲಿ ನೋಡಬಾರದು. ಅಂತಹ ಘಟನೆಗಳನ್ನು ಪೂರ್ವಾಗ್ರಹ ರಹಿತವಾಗಿ ಎಲ್ಲರೂ ಖಂಡಿಸಬೇಕು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ

    ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ

    ನವದೆಹಲಿ: ಕೇಂದ್ರ ಸರ್ಕಾರ (Government Of India) ಜಾರಿಗೆ ತರಲು ಮುಂದಾಗಿರುವ ಉದ್ದೇಶಿತ ಡೇಟಾ ಸಂರಕ್ಷಣಾ ಕಾನೂನಿನಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಕೇಂದ್ರ ತಂತ್ರಜ್ಞಾನ ಮತ್ತು ಐಟಿ (IT) ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಸ್ಪಷ್ಟಪಡಿಸಿದ್ದಾರೆ.

    ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2022ರ ಕರಡನ್ನು (Data Protection Draft) ಬಿಡುಗಡೆಗೊಳಿಸಿರುವ ಕುರಿತಾಗಿ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರಮೋದಿ (Narendra Modi) ಸರ್ಕಾರದಿಂದ ನಾಗರಿಕರ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ. ಆದರೆ ರಾಷ್ಟ್ರೀಯ ಭದ್ರತೆ, ಸಾಂಕ್ರಾಮಿಕ ಮತ್ತು ನೈಸರ್ಗಿಕ ವಿಕೋಪಗಳಂತಹ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ವೈಯಕ್ತಿಕ ಡೇಟಾಗಳನ್ನು (Personal Data) ಪರಿಶೀಲಿಸುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ. 

    ಸರ್ಕಾರವು ರಾಷ್ಟ್ರೀಯ ಭದ್ರತೆ, ಸಾಂಕ್ರಾಮಿಕ ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಮಾತ್ರ ವೈಯಕ್ತಿಕ ಡೇಟಾವನ್ನು ಪರಿಶೀಲಿಸುತ್ತದೆ. ಇದು ಅಪರಾಧವಲ್ಲ. ವಾಕ್ ಸ್ವಾತಂತ್ರ‍್ಯವೆಂಬುದು ಸಂಪೂರ್ಣವಲ್ಲ ಅದು ಸಹ ಕೆಲ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಹಾಗೆಯೇ ಡೇಟಾ ರಕ್ಷಣೆಯ ಹಕ್ಕು ಕೂಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ಡೇಟಾ ಸಂರಕ್ಷಣೆ – ನಿಯಮ ಉಲ್ಲಂಘಿಸಿದ್ರೆ 500 ಕೋಟಿವರೆಗೂ ಬೀಳುತ್ತೆ ದಂಡ 

    ಇದೇ ತಿಂಗಳ ನವೆಂಬರ್ 18ರಂದು ಕೇಂದ್ರ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು, ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ -2022ರ ಕರಡನ್ನು ಬಿಡುಗಡೆಗೊಳಿಸಿದ್ದಾರೆ. ಡಿಸೆಂಬರ್ 17ರ ವರೆಗೆ ಸಾರ್ವಜನಿಕರು ಅಭಿಪ್ರಾಯ ನೀಡಬಹುದಾಗಿದೆ. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಅಂಶಗಳೇನಿದೆ?
    ದೂರಸಂಪರ್ಕ ಮಸೂದೆ-2022 ಮತ್ತು 2000ರ ಪರಿಷ್ಕೃತ ಐಟಿ ಕಾಯ್ದೆಯು (IT Act) ಈ ವೈಯಕ್ತಿಕ ಡೇಟಾ ಸಂರಕ್ಷಣೆಗೆ ಕಾನೂನು ಅಡಿಪಾಯ ಹಾಕಿಕೊಡುತ್ತದೆ. ಪ್ರತಿಯೊಬ್ಬರ ವೈಯಕ್ತಿಕ ಡೇಟಾಗಳನ್ನು ಸಂರಕ್ಷಿಸಲು, ವ್ಯಕ್ತಿಯ ಹಕ್ಕು ಹಾಗೂ ಕಾನೂನು ಬದ್ಧ ಉದ್ದೇಶಗಳನ್ನು ಈಡೇರಿಸಲು ಇದು ಶಾಸನ ಬದ್ಧ ಕ್ರಮವಾಗಿದ್ದು, ಅದಕ್ಕಾಗಿ ಭಾರತೀಯ ಡೇಟಾ ಸಂರಕ್ಷಣಾ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಲಾಗುತ್ತದೆ.

    ಡೇಟಾಗಳಿಗೆ ಭದ್ರತಾ ಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾದ್ರೆ ಅಥವಾ ಲೋಪಗಳು ಕಂಡುಬAದಲ್ಲಿ ಅಂತಹ ಸಂಸ್ಥೆಗಳಿಗೆ 25 ಲಕ್ಷ ರೂ.ವರೆಗೆ ದಂಡ ವಿಧಿಸುವ ಅಂಶವನ್ನು ಸೇರಿಸಲಾಗಿದೆ. ಈ ಹಿಂದೆ 500 ಕೋಟಿ ವರೆಗೆ ದಂಡ ವಿಧಿಸಬಹುದಾಗಿದೆ ಎನ್ನುವ ಅಂಶವನ್ನು ಉಲ್ಲೇಖಿಸಲಾಗಿತ್ತು.

    ಈ ಹಿಂದೆ 2018ರಲ್ಲಿ ಸಂಸತ್ತಿನಲ್ಲಿ ಡೇಟಾ ಸಂರಕ್ಷಣಾ ಮಸೂದೆ ಮಂಡನೆಯಾಗಿತ್ತು. ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು. ಇದೀಗ ಹೊಸ ಕರಡನ್ನು ಬಿಡುಗಡೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 2025ರಲ್ಲಿ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ – ಸಮಾವೇಶದಲ್ಲಿ ಹೂಡಿಕೆದಾರರ ಗಮನ ಸೆಳೆದ ಜೋಶಿ

    2025ರಲ್ಲಿ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ – ಸಮಾವೇಶದಲ್ಲಿ ಹೂಡಿಕೆದಾರರ ಗಮನ ಸೆಳೆದ ಜೋಶಿ

    ಬೆಂಗಳೂರು: ಬಂಡವಾಳ ಹೂಡಿಕೆಗೆ ಕಲ್ಲಿದ್ದಲು (Coal)  ಕ್ಷೇತ್ರದಲ್ಲಿ ಉತ್ತಮ ಅವಕಾಶ ಕಲ್ಪಿಸಲಾಗಿದ್ದು, 2025ರ ಸಾಲಿನಲ್ಲಿ 1 ಬಿಲಿಯನ್‌ ಟನ್‌ (ಶತಕೋಟಿ) ನಷ್ಟು ಕಲ್ಲಿದ್ದಲು ಉತ್ಪಾದಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಬುಧವಾರ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಡೊಮೆಸ್ಟಿಕ್ ಕೋಲ್ ಪ್ರೊಡಕ್ಷನ್ (Domestic Coal Production) 900 ದಶಲಕ್ಷ ಟನ್ ತಲುಪಿದೆ. 2025ರ ಸಾಲಿನಲ್ಲಿ ಕೋಲ್ ಇಂಡಿಯಾ (Coal India) 1 ಬಿಲಿಯನ್‌ ಟನ್‌ ನಷ್ಟು ಕಲ್ಲಿದ್ದಲು ಉತ್ಪಾದಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ ದೃಶ್ಯ ನೋಡಿ ಪ್ರಚೋದನೆ – ಅಪ್ರಾಪ್ತನಿಂದ ಬಾಲಕಿಯ ಮೇಲೆ ರೇಪ್‌, ಕೊಲೆ

    ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶಗಳಿವೆ. ಅದಕ್ಕಾಗಿ ಉದ್ಯಮಸ್ನೇಹಿ ವಾತಾವರಣ ಕಲ್ಪಿಸಲಾಗಿದೆ. ಕಲ್ಲಿದ್ದಲು ಕ್ಷೇತ್ರದಿಂದ ದೇಶದ ಜಿಡಿಪಿಗೆ (GDP) ಶೇ 2.5 ರಷ್ಟು ಕೊಡುಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿರ್ದೇಶನ ನೀಡಿದ್ದಾರೆ. ಈ ಗುರಿ ಮುಟ್ಟುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಗುರುವಾರ (ನವೆಂಬರ್‌ 3) 124 ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ನಡೆಯಲಿದೆ. ಯಾರು ಬೇಕಾದರು ಪಾಲ್ಗೊಳ್ಳಬಹುದು. ಗಣಿಗಾರಿಕೆಗೆ (Mining) ಬೇಕಾದ 21 ಕ್ಲಿಯರೆನ್ಸ್ ಗಳನ್ನ ಸುಲಲಿತವಾಗಿ ವರ್ಗಾಯಿಸುವ ನಿಯಮಗಳನ್ನೂ ಜಾರಿಗೆ ತರಲಾಗಿದೆ. ಇದರ ಪರಿಣಾಮವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾಗುತ್ತಿದೆ. ಉತ್ಪಾದನೆ ಕೂಡ ಹೆಚ್ಚಿದೆ ಹೆಚ್ಚಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜಕೀಯ ದಾಹಕ್ಕೆ ಇನ್ನೆಷ್ಟು ಹೆಣ ಬೀಳಬೇಕು?: ಸುಂದರೇಶ್

    ಪ್ರಧಾನಿ ಮೋದಿ ಅವರ 5 ಲಕ್ಷಕೋಟಿ ಡಾಲರ್ ಆರ್ಥಿಕತೆಯ ಗುರಿ ತಲುಪುವಲ್ಲಿ ಕರ್ನಾಟಕ ಕೂಡ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಭಾವಿಸಿದ್ದಾರೆ. ಪ್ರಗತಿ ಹೊಂದಿರುವ ರಾಜ್ಯ ಕರ್ನಾಟಕದಲ್ಲೂ ಹೆಚ್ಚಿನ ಹೂಡಿಕೆಗೆ ಹೂಡಿಕೆದಾರರು ಮುಂದೆ ಬರಬೇಕು ಎಂದು ಹೇಳಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ನೇಮಕ

    ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ನೇಮಕ

    ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ (Supreme Court) ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ.ವೈ ಚಂದ್ರಚೂಡ್ (DY Chandrachud) ಅವರನ್ನು ನೇಮಿಸಿ ಕೇಂದ್ರ ಸರ್ಕಾರ (Government Of India) ಅಧಿಸೂಚನೆ ಹೊರಡಿಸಿದೆ.

    ನವೆಂಬರ್ 8ರಂದು ಹಾಲಿ ಸಿಜೆಐ ಉದಯ್ ಉಮೇಶ್ ಲಲಿತ್ (UU Lalit) ಅವರು ನಿವೃತ್ತಿ ಹೊಂದಲಿದ್ದು, ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ (CJI) ಅವರು 2 ವರ್ಷ ಅಧಿಕಾರದಲ್ಲಿ ಇರಲಿದ್ದು, 2024ರ ನವೆಂಬರ್ 10ರಂದು ಚಂದ್ರಚೂಡ್ ನಿವೃತ್ತಿ ಹೊಂದಲಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ಸಂವಿಧಾನದ 124ನೇ (Constitution of India) ವಿಧಿಯ ಕಲಂ (2)ರ ಅಡಿ ಅಧಿಕಾರ ಚಲಾಯಿಸಿ ನ್ಯಾಯಮೂರ್ತಿ ಡಾ. ಧನಂಜಯ ಯಶವಂತ್ ಚಂದ್ರಚೂಡ್ ಅವರನ್ನು ಸಿಜೆಐ ಆಗಿ 2022ರ ನವೆಂಬರ್ 9ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ (President Of Inida) ಅವರು ಆದೇಶ ಮಾಡಿದ್ದಾರೆ ಎಂದು ಕಾನೂನು ಇಲಾಖೆ (Law) ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

    ಅಕ್ಟೋಬರ್ 11ರಂದೇ ಹಾಲಿ ಸಿಜೆಐ ಲಲಿತ್ (UU Lalit) ಅವರು ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಇದನ್ನೂ ಓದಿ: 200 ವರ್ಷಗಳಿಂದ ವಕ್ಪ್ ಆಸ್ತಿ , ಎರಡು ಬಾರಿ ನಮಾಜ್‌ಗೆ ಮಾತ್ರ ಅವಕಾಶ – ಸುಪ್ರೀಂ ಕೋರ್ಟ್‌ನಲ್ಲಿ ವಾದ ಹೇಗಿತ್ತು?

    ಚಂದ್ರಚೂಡ್ ಹಿನ್ನೆಲೆ ಏನು?
    ಎಲ್‌ಎಲ್‌ಎಂ (LLM) ಪೂರ್ಣಗೊಳಿಸಿದ ನ್ಯಾ. ಚಂದ್ರಚೂಡ್ ಅವರು ಡಾಕ್ಟರ್ ಇನ್ ಜುಡಿಷಿಯಲ್ ಸೈನ್ಸಸ್ ಪದವಿಯನ್ನು ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯಿಂದ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದರು. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದ ನ್ಯಾ. ಚಂದ್ರಚೂಡ್ ಅವರನ್ನು ಬಾಂಬೆ ಹೈಕೋರ್ಟ್ 1998ರ ಜೂನ್‌ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು.

    2000ದಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ (Allahabad High Court) ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಇಂಧನ ಸೋರಿಕೆ – ಆರ್ಟೆಮಿಸ್ ಮೂನ್ ಮಿಷನ್ ರಾಕೆಟ್ ಲಾಂಚಿಂಗ್ ಮತ್ತೆ ಸ್ಥಗಿತ

    ಇಂಧನ ಸೋರಿಕೆ – ಆರ್ಟೆಮಿಸ್ ಮೂನ್ ಮಿಷನ್ ರಾಕೆಟ್ ಲಾಂಚಿಂಗ್ ಮತ್ತೆ ಸ್ಥಗಿತ

    ವಾಷಿಂಗ್ಟನ್: ಆರ್ಟೆಮಿಸ್-1 ಮೂನ್ ಮಿಷನ್ ನಲ್ಲಿ ಇಂಧನ ಸೋರಿಕೆ ಸಮಸ್ಯೆಯನ್ನು ಇಂಜಿನಿಯರ್‌ಗಳ ತಂಡವು ಸ್ಥಿತಿಗೊಳಿಸುವಲ್ಲಿ ವಿಫಲವಾಗಿದ್ದು ನಾಸಾ ಮತ್ತೆ ರಾಕೆಟ್ ಉಡಾವಣೆಯನ್ನು ಮುಂದೂಡಿದೆ.

    322 ಅಡಿ ಎತ್ತರದ ರಾಕೆಟ್ ಅನ್ನು ನಾಸಾ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಜಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಉಡಾವಣೆಯಾಗಬೇಕಿದ್ದ ಆರ್ಟಿಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದ್ದು, 2ನೇ ಬಾರಿಗೆ ಮುಂದೂಡಲ್ಪಟ್ಟಿದೆ.

    ಇಂಜಿನ್ ಬ್ಲೀಡ್ ಸಮಸ್ಯೆಯಿಂದಾಗಿ ಆರ್ಟೆಮಿಸ್-1ನ ಉಡಾವಣೆಯು ನಡೆಯುತ್ತಿಲ್ಲ. ಆಗಸ್ಟ್ 29 ರಂದೇ ರಾಕೆಟ್ ಉಡಾವಣೆಯಾಗಬೇಕಿತ್ತು. ಆದರೆ ಆರ್‌ಎಸ್-25 ಇಂಜಿನ್-3ರಲ್ಲಿ ಸಮಸ್ಯೆ ಕಾಣಿಸಿಕೊಂಡು, ಇಂಧನ ಸೋರಿಕೆಯಾಗಿದ್ದರಿಂದಾಗಿ ಸೆಪ್ಟಂಬರ್ 3ಕ್ಕೆ ಮುಂದೂಡಲಾಗಿತ್ತು. ಆದರೆ ರಾಕೆಟ್‌ಗೆ ಇಂಧನ ವರ್ಗಾಯಿಸುವ ಯಂತ್ರಾಂಶದಲ್ಲಿನ ಸೋರಿಕೆಗೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸಲು ಇಂಜಿನಿಯರ್ ತಂಡವು ವಿಫಲವಾಗಿದ್ದರಿಂದಾಗಿ ಮತ್ತೆ ರಾಕೆಟ್ ಉಡಾವಣೆ ಮುಂದೂಡಲಾಗಿದೆ ಎಂದು ನಾಸಾ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೇ ಮುಂದಿನ ಉಡಾವಣಾ ಸಮಯವನ್ನು ಶೀಘ್ರವೇ ತಿಳಿಸುವುದಾಗಿ ಹೇಳಿದೆ.

    ನಾಸಾವು 2024ರಲ್ಲಿ 4 ಗಗನ ಯಾತ್ರಿಗಳನ್ನು ಚಂದ್ರನ ಸುತ್ತ ಕಳುಹಿಸಲು ಹಾಗೂ 2025ರ ಹೊತ್ತಿಗೆ ಚಂದ್ರಲೋಕದಲ್ಲಿ ಮಾನವರನ್ನು ಕಳುಹಿಸುವ ಉದ್ದೇಶ ಹೊಂದಿದೆ.

    ಲಾಂಚ್ ಕಂಟ್ರೋಲರ್‌ಗಳು ಇಂಜಿನ್‌ಗಳಿಗೆ ಕೆಲವು ಕ್ರಯೋಜನಿಕ್ ಪ್ರೊಪೆಲ್ಲಂಟ್‌ಗಳನ್ನು ಸೋರಿಕೆ ಮಾಡಲು ಕೋರ್ ಸ್ಟೇಜ್ ಟ್ಯಾಂಕ್‌ಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆ ಮೂಲಕ ಅವುಗಳನ್ನು ಪ್ರಾರಂಭಿಸಲು ಸರಿಯಾದ ತಾಪಮಾನ ಶ್ರೇಣಿಗೆ ಪಡೆಯಲು ಇಂಜಿನ್‌ಗಳನ್ನು ಸ್ಥಿತಿಗೊಳಿಸುತ್ತವೆ. ಸದ್ಯ ಈ ಹಂತದಲ್ಲಿ ಸಮಸ್ಯೆಗಳು ಎದುರಾಗಿದ್ದು, ಪರಿಹರಿಸುವ ಕೆಲಸಗಳನ್ನು ಇಂಜಿನಿಯರ್‌ಗಳು ಮಾಡುತ್ತಿದ್ದಾರೆ ಎಂದು ನಾಸಾ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಇಂಧನ ಸೋರಿಕೆ – ಆರ್ಟೆಮಿಸ್-1 ರಾಕೆಟ್ ಲಾಂಚಿಂಗ್ ಸ್ಥಗಿತ

    ಇಂಧನ ಸೋರಿಕೆ – ಆರ್ಟೆಮಿಸ್-1 ರಾಕೆಟ್ ಲಾಂಚಿಂಗ್ ಸ್ಥಗಿತ

    ವಾಷಿಂಗ್ಟನ್: ಆರ್ಟೆಮಿಸ್-1 ಮೂನ್ ಮಿಷನ್ ನಲ್ಲಿ ಇಂಧನ ಸೋರಿಕೆ ಸಮಸ್ಯೆಯಿಂದಾಗಿ ನಾಸಾ ರಾಕೆಟ್ ಉಡಾವಣೆಯನ್ನು ಸ್ಥಗಿತಗೊಳಿಸಿದೆ.

    322 ಅಡಿ ಎತ್ತರದ ರಾಕೆಟ್ ಅನ್ನು ಇಂದು ನಾಸಾ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಜಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಉಡಾವಣೆಯಾಗಬೇಕಿದ್ದ ಆರ್ಟಿಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದೆ. ಇದನ್ನೂ ಓದಿ: ಗಗನಕ್ಕೆ ಏರಿದ ತರಕಾರಿ ಬೆಲೆ- 1ಕೆ.ಜಿ ಟೊಮೆಟೊಗೆ 500ರೂ, ನಿಂಬೆಹಣ್ಣಿಗೆ ಕೆ.ಜಿಗೆ 400 ರೂ.

    ಇಂಜಿನ್ ಬ್ಲೀಡ್ ಸಮಸ್ಯೆಯಿಂದಾಗಿ ಇಂದು ಆರ್ಟೆಮಿಸ್-1ನ ಉಡಾವಣೆಯು ನಡೆಯುತ್ತಿಲ್ಲ. ಆರ್‌ಎಸ್-25 ಇಂಜಿನ್-3ರಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಇಂಜಿನಿಯರ್‌ಗಳು ಅದನ್ನು ಪತ್ತೆಹಚ್ಚಿದ್ದಾರೆ. ತಂಡಗಳು ಡೇಟಾ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದು, ಮುಂದಿನ ಉಡಾವಣಾ ಸಮಯವನ್ನು ಶೀಘ್ರವೇ ತಿಳಿಸುತ್ತೇವೆ ಎಂಬುದಾಗಿ ಟ್ವೀಟ್ ಮೂಲಕ ತಿಳಿಸಿದೆ. ಇದನ್ನೂ ಓದಿ: ಪುತ್ರನ ಭೇಟಿಗೆಂದು ಹೋಗಿದ್ದಾಗ ಗ್ಯಾರೇಜ್‌ನಲ್ಲಿ ಮಲಗಿದ್ರಂತೆ ವಿಶ್ವದ ಶ್ರೀಮಂತನ ತಾಯಿ!

    ನಾಸಾವು 2024ರಲ್ಲಿ 4 ಗಗನ ಯಾತ್ರಿಗಳನ್ನು ಚಂದ್ರನ ಸುತ್ತ ಕಳುಹಿಸಲು ಹಾಗೂ 2025ರ ಹೊತ್ತಿಗೆ ಚಂದ್ರಲೋಕದಲ್ಲಿ ಮಾನವರನ್ನು ಕಳುಹಿಸುವ ಉದ್ದೇಶ ಹೊಂದಿದೆ.

    ಲಾಂಚ್ ಕಂಟ್ರೋಲರ್‌ಗಳು ಇಂಜಿನ್‌ಗಳಿಗೆ ಕೆಲವು ಕ್ರಯೋಜನಿಕ್ ಪ್ರೊಪೆಲ್ಲಂಟ್‌ಗಳನ್ನು ಸೋರಿಕೆ ಮಾಡಲು ಕೋರ್ ಸ್ಟೇಜ್ ಟ್ಯಾಂಕ್‌ಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆ ಮೂಲಕ ಅವುಗಳನ್ನು ಪ್ರಾರಂಭಿಸಲು ಸರಿಯಾದ ತಾಪಮಾನ ಶ್ರೇಣಿಗೆ ಪಡೆಯಲು ಇಂಜಿನ್‌ಗಳನ್ನು ಸ್ಥಿತಿಗೊಳಿಸುತ್ತವೆ. ಸದ್ಯ ಈ ಹಂತದಲ್ಲಿ ಸಮಸ್ಯೆಗಳು ಎದುರಾಗಿದ್ದು, ಪರಿಹರಿಸುವ ಕೆಲಸಗಳನ್ನು ಇಂಜಿನಿಯರ್‌ಗಳು ಮಾಡುತ್ತಿದ್ದಾರೆ ಎಂದು ನಾಸಾ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    ನವದೆಹಲಿ: ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸರಾಸರಿ ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಸಮೀಕ್ಷಾ ವರದಿ ಹೇಳಿದೆ.

    ತಮ್ಮ ಸಂಗಾತಿ ಅಲ್ಲದ ಹಾಗೂ ತಮ್ಮೊಂದಿಗೆ ವಾಸಿಸದ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯರ ಪ್ರಮಾಣ ಶೇ.4 ರಷ್ಟಿದೆ. ಇದೇ ರೀತಿಯ ಪುರುಷರ ಪ್ರಮಾಣ ಕೇವಲ ಶೇ 0.5 ಮಾತ್ರ ಇದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.

    1.1 ಲಕ್ಷ ಮಹಿಳೆಯರು ಹಾಗೂ 1 ಲಕ್ಷ ಪುರುಷರನ್ನೊಳಗೊಂಡು ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯ ಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಹಿಳೆಯರ ಲೈಂಗಿಕ ಪಾಲುದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ – ಎರಡು ವಾರಗಳಲ್ಲಿ 2ನೇ ಬಾರಿಗೆ ಕೃತ್ಯ

    ರಾಜಸ್ಥಾನದಲ್ಲಿ ಮಹಿಳೆಯರು ಹೊಂದಿರುವ ಲೈಂಗಿಕ ಪಾಲುದಾರರ ಪ್ರಮಾಣ ಶೇ.3.1 ರಷ್ಟಿದೆ. ಇದು ಪುರುಷರಲ್ಲಿ ಶೇ.1.8 ಆಗಿದೆ. ಆದರೆ ಕಳೆದ 1 ವರ್ಷದ ಅವಧಿಯಲ್ಲಿ ತಮ್ಮ ಸಂಗಾತಿಗಳಲ್ಲದವರು ಅಥವಾ ಲಿವ್ ಇನ್ ರಿಲೇಶನ್‌ನಲ್ಲಿ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರ ಪ್ರಮಾಣ ಶೇ.4 ರಷ್ಟಿದ್ದರೆ. ಇದು ಮಹಿಳೆಯರಲ್ಲಿ ಶೇ0.5ರಷ್ಟಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್

    2019-21ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ದೇಶದ 707 ಜಿಲ್ಲೆಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ರಾಷ್ಟ್ರೀಯ ವರದಿಯು ಸಾಮಾಜಿಕ-ಆರ್ಥಿಕ ಮತ್ತು ಇತರ ಹಿನ್ನೆಲೆಗೆ ಸಂಬಂಧಿಸಿದ ಡೇಟಾವನ್ನು ಸಹ ಒದಗಿಸುತ್ತದೆ. ಇದು ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಕ್ಕೆ ಉಪಯುಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸುದ್ದಿಗಳಿಗೆ ಗೂಗಲ್, ಫೇಸ್‌ಬುಕ್ ಪಾವತಿಸಬೇಕು – ಹೊಸ ಕಾನೂನಿಗೆ ಸರ್ಕಾರ ಯೋಜನೆ

    ಸುದ್ದಿಗಳಿಗೆ ಗೂಗಲ್, ಫೇಸ್‌ಬುಕ್ ಪಾವತಿಸಬೇಕು – ಹೊಸ ಕಾನೂನಿಗೆ ಸರ್ಕಾರ ಯೋಜನೆ

    ನವದೆಹಲಿ: ಭಾರತ ಸರ್ಕಾರ ಗೂಗಲ್, ಫೇಸ್‌ಬುಕ್‌ಗಳಲ್ಲಿ ಪ್ರಕಟವಾಗುವ ಡಿಜಿಟಲ್ ಸುದ್ದಿಗಳಿಗೆ ಹೊಸದಾದ ಕಾನೂನನ್ನು ರಚಿಸಲು ಮುಂದಾಗಿದೆ. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಬಳಿಕ ಇದೀಗ ಭಾರತವೂ ಗೂಗಲ್ ಹಾಗೂ ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಪಾವತಿಸುವ ಕಾನೂನನ್ನು ತರಲು ಯೋಜಿಸಿದೆ.

    ಸರ್ಕಾರದ ಯೋಜನೆಯ ಪ್ರಕಾರ ಜಾಗತಿಕ ದೈತ್ಯ ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಆಲ್ಫಾಬೆಟ್ (ಗೂಗಲ್, ಯೂಟ್ಯೂಬ್), ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಪ್), ಟ್ವಿಟ್ಟರ್ ಹಾಗೂ ಅಮೆಜಾನ್ ಮಾಲೀಕರು ಭಾರತೀಯ ಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ತಮ್ಮ ಆದಾಯದ ಪಾಲನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಸುದ್ದಿ ವಾಹಿನಿಗಳು ತಯಾರಿಸಿದ ವಿಷಯಗಳನ್ನು ಬಳಸಿಕೊಂಡು ಈ ಪ್ಲಾಟ್‌ಫಾರ್ಮ್‌ಗಳು ಹಣ ಗಳಿಸುತ್ತವೆ. ಇದನ್ನೂ ಓದಿ: ಈ ದೇಶಗಳಿಗೂ ಬರಲಿದೆ ಶ್ರೀಲಂಕಾ ಪರಿಸ್ಥಿತಿ – ಆರ್ಥಿಕ ಸಂಕಷ್ಟದ ಹೊಸ್ತಿಲಲ್ಲಿ 12 ರಾಷ್ಟ್ರಗಳು

    ಈ ಪ್ಲಾಟ್‌ಫಾರ್ಮ್‌ಗಳು ಸುದ್ದಿ ಸಂಸ್ಥೆಗಳಿಂದ ವಿಷಯಗಳನ್ನು ಹಾಕಿ ಆದಾಯ ಗಳಿಸಿದರೆ, ಅದರ ಪಾಲನ್ನು ನ್ಯಾಯುತವಾಗಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಈ ಕಾನೂನಿನ ಅಗತ್ಯತೆ ಇದೀಗ ಉದ್ಭವವಾಗುತ್ತಿದೆ. ಡಿಜಿಟಲ್ ಮಧ್ಯವರ್ತಿಗಳು ಸುದ್ದಿ ಸಂಸ್ಥೆಗಳೊಂದಿಗೆ ತಮ್ಮ ಆದಾಯದ ಮಾಹಿತಿಗಳನ್ನು ಗೌಪ್ಯವಾಗಿಡುತ್ತವೆ ಎಂಬ ಕಾರಣಕ್ಕೆ ಇದೀಗ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ನೊಂದಿಗೆ ನೆಟ್‌ಫ್ಲಿಕ್ಸ್ ಪಾರ್ಟ್ನರ್‌ಶಿಪ್ – ಅಗ್ಗದ ಯೋಜನೆಗೆ ತಯಾರಿ

    ಇದೀಗ ದೊಡ್ಡ ಟೆಕ್ ಕಂಪನಿಗಳು ತಮ್ಮ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ವಿಶ್ವದಾದ್ಯಂತ ಸುದ್ದಿ ಸಂಸ್ಥೆಗಳು ಹೋರಾಟ ಪ್ರಾರಂಭಿಸಿವೆ. ಈಗಾಗಲೇ ಕೆಲವು ದೇಶಗಳು ಟೆಕ್ ಕಂಪನಿಗಳ ಮೇಲೆ ಕಾನೂನು ಅಸ್ತ್ರ ಹಾಗೂ ದಂಡಗಳನ್ನು ವಿಧಿಸುವ ಮೂಲಕ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಗ್ರಹಿಸಲು ಮುಂದಾಗುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತಾ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

    ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತಾ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

    ಮಡಿಕೇರಿ: ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಭೀಕರವಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಪರಿಣಾಮದಿಂದ ಅಲ್ಲಿನ ಜನರು ತತ್ತರಿಸಿ ಹೋಗುತ್ತಿದ್ದಾರೆ. ಅಲ್ಲದೆ ನಮ್ಮ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಕ್ಕಿಕೊಂಡು ನಲಗುತ್ತಿದ್ದು, ಆಹಾರವಿಲ್ಲದೆ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ ಎಂಬ ಮನಮಿಡಿಯುವ ವೀಡಿಯೋ ಮಾಡಿ ಕಳುಹಿಸಿದ್ದಾರೆ.

    ಉಕ್ರೇನ್ ನಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗಿರುವ ಕನ್ನಡಿಗರು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಯುದ್ಧದಿಂದ ನಿರ್ಮಾಣವಾಗಿದೆ. ಖಾರ್ಕಿವ್ ನಗರದಲ್ಲಿರುವ ಕೊಡಗಿನ ಕುಶಾಲನಗರದ ಚಂದನ್ ಗೌಡ ಸೇರಿದಂತೆ ರಾಜ್ಯದ ಬೇರೆ-ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕಟ್ಟಡ ತಳಭಾಗದಲ್ಲಿ ಇದ್ದಾರೆ. ಅವರೆಲ್ಲ ಅಲ್ಲಿನ ಪರಿಸ್ಥಿತಿ ಹಾಗೂ ಅವರಿಗೆ ಆಗುತ್ತಿರುವ ಅನುಭವದ ಬಗ್ಗೆ ವಿವರವಾಗಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!

    ತಮ್ಮ ಪರಿಸ್ಥಿತಿ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ಕಟ್ಟಡದ ನೆಲ ಮಹಡಿಯಲ್ಲಿರುವ ನಮಗೆ ಸರಿಯಾದ ವಿದ್ಯುತ್, ಆಹಾರ ಇಲ್ಲ. ಇದರಿಂದ ನಮ್ಮ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಇಷ್ಟು ದಿನ ಇದ್ದ ಆಹಾರಗಳನ್ನು ಬಳಸಿಕೊಂಡು ಇದ್ದೆವು. ಆದರೆ ಇದೀಗಾ ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ. ಎಷ್ಟು ದಿನ ಚಾಕೊಲೇಟ್ ತಿನ್ನಲು ಸಾಧ್ಯ. ಗ್ಯಾಸ್ ಸಿಲಿಂಡರ್ ಇರುವ ಕಟ್ಟಡ ಕೆಳಭಾಗದಲ್ಲಿ ನಾವು ಇದ್ದೇವೆ. ಕಟ್ಟಡ ಶೇಕ್ ಅಗುವುದರಿಂದ ಜೀವ ಭಯ ಕಾಡುತ್ತಿದೆ. ಅದಷ್ಟು ಬೇಗಾ ಭಾರತ ಸರ್ಕಾರ ನಮ್ಮನ್ನು ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

  • ವಿಶ್ವಕಪ್ ಕ್ರಿಕೆಟ್: ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಇಂಡೋ-ಪಾಕ್ ಮ್ಯಾಚ್!

    ವಿಶ್ವಕಪ್ ಕ್ರಿಕೆಟ್: ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಇಂಡೋ-ಪಾಕ್ ಮ್ಯಾಚ್!

    ಮುಂಬೈ: ಒಂದು ವೇಳೆ ಪಾಕ್ ವಿರುದ್ಧ ಪಂದ್ಯ ಆಡಕೂಡದು ಎಂದು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡರೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಬಿಸಿಸಿಐ ಹಿರಿಯ ವಕ್ತಾರರು ಬುಧವಾರ ಮಾಹಿತಿ ನೀಡಿದ್ದಾರೆ.

    ಒಂದೊಮ್ಮೆ ಪಾಕ್ ವಿರುದ್ಧ ಆಡದಿದ್ದರೆ ಸರಣಿಯ ನಿಯಮಗಳ ಅನ್ವಯ ಪಾಕ್ ತಂಡಕ್ಕೆ ಪೂರ್ಣ ಅಂಕ ಸಿಗುತ್ತದೆ. ಆದರೆ ಇದುವರೆಗೂ ನಾವು ಪಂದ್ಯದ ನಿಷೇಧದ ಬಗ್ಗೆ ಐಸಿಸಿಗೆ ಯಾವುದೇ ಮಾಹಿತಿ ತಿಳಿಸಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

    ವಿಶ್ವಕಪ್ ಆರಂಭಕ್ಕೂ ಮುನ್ನವೇ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದ್ದು, ಒಂದೊಮ್ಮೆ ಪಂದ್ಯದಲ್ಲಿ ಭಾರತ ಆಡದಿದ್ದರೆ ಪಾಕ್ ಅಂಕಗಳನ್ನು ಪಡೆದುಕೊಳ್ಳಲಿದೆ. ಆದರೆ ಫೈನಲ್ ಪಂದ್ಯದಲ್ಲಿ ನಾವು ಆಡದಿದ್ದರೆ ನಿಯಮದಂತೆ ಪಾಕಿಸ್ತಾನ ಕಪ್ ಪಡೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಫೆ.27 ರಂದು ಐಸಿಸಿ ಸಭೆ ನಿಗದಿಯಾಗಿದ್ದು, ಈ ವೇಳೆ ಇಂಡೋ ಪಾಕ್ ಪಂದ್ಯದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋಹ್ರಿ, ಕಾರ್ಯದರ್ಶಿ ಅಮಿತಾಬ್ ಚೌಧರಿ ಭಾಗವಹಿಸಲಿದ್ದಾರೆ.

    ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಜೂನ್ 16 ರಂದು ಪಂದ್ಯ ನಡೆಯಲಿದೆ. ಆದರ ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 44 ಸೈನಿಕರು ಸಾವನ್ನಪ್ಪಿರುವುದು ಎರಡು ದೇಶಗಳ ನಡುವೆ ಪರಿಸ್ಥಿತಿಯನ್ನ ಮತ್ತಷ್ಟು ಹದಗೆಡುವಂತೆ ಮಾಡಿದೆ. ದಾಳಿಯನ್ನು ಜೈಶ್ ಇ ಮಹಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಪಾಕ್ ವಿರುದ್ಧ ವಿಶ್ವಕಪ್ ಪಂದ್ಯ ಆಡುವುದಕ್ಕೆ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಒಂದು ವೇಳೆ ಫೈನಲ್ ಗೆ ಬಂದರೂ ಭಾರತ ಪಾಕ್ ವಿರುದ್ಧ ಪಂದ್ಯ ಆಡಬಾರದು. ಈ ಮೂಲಕ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಮುಜುಗರವನ್ನು ಉಂಟುಮಾಡಬೇಕು. ಕ್ರೀಡೆಗೆ ಗಡಿ ಇಲ್ಲದೇ ಇದ್ದರೂ ಉಗ್ರರನ್ನು ಛೂ ಬಿಟ್ಟು ಪದೇ ಪದೇ ಭಾರತಕ್ಕೆ ಕಿರಿಕ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಈ ಮೂಲಕ ಟೀ ಇಂಡಿಯಾ ತಂಡ ವಿಶ್ವಕಪ್ ನಲ್ಲಿ ಪಾಠ ಕಲಿಸಬೇಕು ಎನ್ನುವ ಅಭಿಪ್ರಾಯವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಪಾಕಿಸ್ತಾನ ವಿರುದ್ಧ ಅಜೇಯ ಗೆಲುವಿನ ದಾಖಲೆಯನ್ನು ಹೊಂದಿದೆ. ಒಂದೊಮ್ಮೆ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧದ ಆಡದಿದ್ದರೆ ಈ ದಾಖಲೆಯೂ ಕೂಡ ಅಳಿಯಲಿದೆ.

    ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧ ಪಂದ್ಯವಾಡಬೇಕೇ? ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv